ಆಗೊಂದಷ್ಟು ದಿನ ಕನ್ನಡ ಚಲನಚಿತ್ರಗಳಲ್ಲಿನ ಹಾಡುಗಳು ಏಕೋ ಅಷ್ಟಾಗಿ ಮನಸ್ಸು ತಟ್ಟುತ್ತಿರಲಿಲ್ಲ. ಹಾಡುಗಳನ್ನು ಎಲ್ಲೊ ಒಮ್ಮೊಮ್ಮೆ ಗುನುಗುನಿಸಬೇಕೆನಿಸಿದರೂ ಅದರ ಸಾಹಿತ್ಯ ನೆನಪಿರುತ್ತಿರಲಿಲ್ಲ. ಅವುಗಳಲ್ಲೊಂದಿಷ್ಟು ಬೇರೆ ಬೇರೆ ಭಾಷೆಯ ಪದಗಳು. ಕನ್ನಡದ ಶಬ್ಧಕೋಶದಲ್ಲಿ ಕೋಟಿಗಟ್ಟಲೆ ಪದಗಳಿದ್ದರೂ ಯಾವುದೋ ಭಾಷೆಯ ಪದಗಳ ಬಳಕೆಯೇ ಹೆಚ್ಚಿರುತ್ತದೆಯಲ್ಲ ಎಂಬ ಸಣ್ಣ ನೋವು...
Author - Anoop Gunaga
ವಿಟ್ಲಪಿಂಡಿ – ಪೊಡವಿಗೊಡೆಯನ ನಾಡಿಗೊಂದು ಹಗಲುವೇಷ
‘ವಿಟ್ಲಪಿಂಡಿ’, ಉಡುಪಿಯ ಹಾಗೂ ಅದರ ಆಸುಪಾಸಿನ ಜಿಲ್ಲೆಯ ಬಹುತೇಕ ಜನರಿಗೆ ಪರಿಚಿತ ಶಬ್ದ. ಶ್ರೀಕೃಷ್ಣ ಜನ್ಮಾಷ್ಠಮಿಯ ಮರುದಿನ ಉಡುಪಿಯ ಅಷ್ಠಮಠಗಳನ್ನೊಳಗೊಂಡ ರಥಬೀದಿಯಲ್ಲಿ ಆಚರಣೆಯಾಗುವ ಶ್ರೀಕೃಷ್ಣ ಲೀಲೋತ್ಸವ. ಈ ವರ್ಷದ ವಿಟ್ಲಪಿಂಡಿಗೆ ಸಾಕ್ಷಿಯಾಗಲು ಮಧ್ಯಾಹ್ನದ ಸಮಯ ಉಡುಪಿಯ ಕಡೆ ಬಸ್ ಏರಿದೆ. ಸ್ವಲ್ಪ ಹೊತ್ತಿನಲ್ಲೇ ವಿಟ್ಲಪಿಂಡಿಯ ಮೊದಲನೇ ಲೀಲೆಯ...
‘ಶ್ರೀ ಕೃಷ್ಣ’ ಎಂಬ ಆತ್ಮೀಯ ಬಂಧು
‘ಶ್ರೀ ಕೃಷ್ಣ’. ಆಹಾ!!! ಆ ಪದವೇ ಹಾಗೆ. ಆ ವ್ಯಕ್ತಿತ್ವವೇ ಅಂತಹುದು. ಆಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರೂ ಇಷ್ಟಪಡುವ, ಪ್ರೀತಿಸುವ ಹೆಸರು’ಶ್ರೀ ಕೃಷ್ಣ’. “ನೀನ್ಯಾಕೋ? ನಿನ್ನ ಹಂಗ್ಯಾಕೋ? ನಿನ್ನ ನಾಮದ ಬಲವೊಂದಿದ್ದರೆ ಸಾಕೋ..” ಎಂಬ ದಾಸರ ಪದದ ಸಾಲುಗಳಂತೆ ಆ ಹೆಸರಿನಲ್ಲೇ ಒಂದು ಶಕ್ತಿ ಇದೆ, ಒಂದು ದೈವತ್ವ ಇದೆ, ಒಂದು...
ಹನಿಗಳ ಮೆರವಣಿಗೆ…
ಬೇಸಗೆಯ ಧಗೆಯಲ್ಲಿ ಬೆಂದ ಧರಣಿಗೆ ತಂಪೆರೆಯಲು ಭೂಮಿಗಿಳಿಯುವ ನೀರಿನ ಹನಿಗಳ ಮೆರವಣಿಗೆ ಈ ಮಳೆ. ಸೂರ್ಯನ ಕಿರಣಗಳ ಧಗೆಯಿಂದ ಭೂಮಿಯನ್ನು ಕಾಪಾಡಲು ಸೂರ್ಯನಿಗೆ ಅಡ್ಡವಾಗಿ ನಿಲ್ಲುವ ಮೋಡಗಳು ಅದೂ ಸಾಲದೇ ಹೋದಾಗ ಮಳೆಯಾಗಿ ಇಳೆಗಿಳಿದು ತಂಪೆರೆಯುವ ಕಾಲ ಅದು. ‘ಮಳೆ’ ಕೇವಲ ನೀರಿನ ಹನಿಗಳಲ್ಲ; ಅವು ಹೊಸತನದ ರಾಯಭಾರಿಗಳು. ಭೂಮಿಗೆ ಹಸಿರನ್ನು ಜೀವಿಗಳಿಗೆ...
ಕನಸಿನ ಚೂರುಗಳು…
ಇಂದಿನ ‘The so called busy’ ಬದುಕಿನಲ್ಲಿ ಆಗಸದ ನಕ್ಷತ್ರಗಳನ್ನು ನೋಡುವುದಕ್ಕೂ ಸಮಯವಿರುವುದಿಲ್ಲ. ದಿನವೂ ಕೆಲಸ ಮುಗಿಸಿ ಬರುವಾಗ ರಾತ್ರಿಯೇ ಆಗಿರುತ್ತದೆ, ಹೆಚ್ಚಿನ ದಿನ ನಕ್ಷತ್ರಗಳೂ ಇರುತ್ತವೆ, ಆದರೆ ತಲೆಯೆತ್ತಿ ನೋಡಲು ಸಹ ಮನಸಿಲ್ಲದ ಮನಸ್ಥಿತಿಗೆ ಇಂದಿನ ಜೀವನ ಶೈಲಿ ನಮ್ಮನ್ನು ತಂದು ನಿಲ್ಲಿಸಿದೆ. ಇತ್ತೀಚೆಗೆ ಒಂದು ದಿನ ಅದೇಕೋ ಆ...
ಹಾಳೆಗಿಂತ ಒಳ್ಳೆ ಕಾವ್ಯ ಇಲ್ರಿ…
“ಖಾಲಿ ಹಾಳೆಗಿಂತ ಒಳ್ಳೆ ಕಾವ್ಯ ಇಲ್ರಿ…” ಎಂಬ ಯೋಗರಾಜ್ ಭಟ್ಟರ ಸಾಲುಗಳು ಇಂದೇಕೋ ಪದೇ ಪದೇ ನೆನಪಾಯಿತು. ಕಾರಣ ಇಷ್ಟೇ; ಅದೇನೋ ಬರೆಯ ಬೇಕೆಂದುಕೊಂಡು ಪುಸ್ತಕ ಹಾಗೂ ಪೆನ್ನು ಹಿಡಿದು ಕುಳಿತಿದ್ದೆ. ಇದ್ದಕ್ಕಿದ್ದಂತೆ ಯಾವುದೋ ಬೇರೆ ಆಲೋಚನೆ ಒಂದಷ್ಟು ಹೊತ್ತು ಮನಸ್ಸನ್ನಾವರಿಸಿತು. ಆ ಯೋಚನಾ ಲಹರಿಯಿಂದ ಹೊರ ಬಂದಾಗ ಬರೆಯ ಬೇಕೆಂದುಕೊಂಡ ಹಲವು...
ಕಲ್ಪನೆ ಮಳೆ
ಒಂದು ಅಗೋಚರಶಕ್ತಿ ಜಗತ್ತಿನ ಫೋಟೋ ಕ್ಲಿಕ್ಕಿಸುತ್ತಿದೆ. ಅದನ್ನು ಕಂಡ ಮಾಮರವೊಂದು ಸೊಂಟದ ಮೇಲೆ ಕೈ ಇಟ್ಟು ಪೋಸ್ ನೀಡಿದೆ. ಯಾವುದೋ ಹೊಸ ರಿಯಾಲಿಟಿಶೋನಲ್ಲಿ ಭಾಗವಹಿಸಲೋ ಎಂಬಂತೆ ನವಿಲು ನಾಟ್ಯಾಭ್ಯಾಸ ನಡೆಸಿದೆ. ನೆಂಟಸ್ತಿಕೆಗೆ ಬಂದ ಗಂಡಿನ ಅಮ್ಮನೋ ಅಜ್ಜಿಯೋ “ಒಂದು ಹಾಡು ಹೇಳು ಮಗಾ…” ಅಂದಿರಬೇಕು. ಅದಕ್ಕೆ ಕೋಗಿಲೆ ಮನೆಯಿಂದ ಇಂಪಾದ ಸಂಗೀತ ಕೇಳಿ...
ನಮ್ಮೊಳಗಿನ ಹೋರಾಟ
ಈ ಲೇಖನ, ನನ್ನ ಗೆಳೆಯನೊಬ್ಬನ ದಿನಚರಿಯಲ್ಲಾದ ಒಂದು ಚಿಕ್ಕ ಘಟನೆಯಿಂದ ಪ್ರಭಾವಿತವಾಗಿ ಬರೆದಿರುವುದು. ಕೆಲವೊಮ್ಮೆ ನಮ್ಮೊಡನೆ ಮೂರೋ ನಾಲ್ಕೋ ನಿಮಿಷ ಭೇಟಿಯಾಗಿ ಹೋಗುವ ಕೆಲವು ವ್ಯಕ್ತಿಗಳು ಮನದ ಕಡಲಿನಲ್ಲಿ ಎಂತಹ ಗೊಂದಲಗಳ ಅಲೆ ಎಬ್ಬಿಸುತ್ತಾರೆಂದರೆ, ಅದಕ್ಕೆ ಉತ್ತರ ಇಲ್ಲವೇ ತಕ್ಕ ಮಟ್ಟಿನ ಸಮಾಧಾನ ತಂದುಕೊಳ್ಳುವವರೆಗೆ ಮನಸ್ಸು ಅವಿಶ್ರಾಂತವಾಗುತ್ತದೆ. ಅಂತದೇ...
ಕಾವ್ಯಕನ್ನಿಕೆಗೊಂದು ಹೆಸರು
ಬಹಳಷ್ಟು ಬರೆದೆ ನಾ ನನ್ನ ಕಾವ್ಯ ಕನ್ನಿಕೆಯ ಕುರಿತು ಶಬ್ದಗಳ ಸರ ಹೆಣೆದು ಸುಸ್ತಾದೆ, ಅವಳ ಅಂದ ವರ್ಣಿಸಲು. ಕೇಳುವ ಮನಸ್ಸಾಯಿತು ಅವಳ ನನ್ನ ವರ್ಣನೆಗಳಲ್ಲಿ ಅವಳ ಮೆಚ್ಚು ಯಾವುದೆಂದು. ಆದರೆ ಕೇಳಲಿ ಹೇಗೆ? ಅವಳನ್ನು ಕರೆಯಲೊಂದು ಹೆಸರು ಬೇಕಲ್ಲವೇ? ಏನೆಂದು ಹೆಸರಿಡಲಿ? ಕಣ್ಣು ಮುಚ್ಚಿ ಅಕ್ಷರಗಳ ಪೋಣಿಸಿದೆ, ಸಿಗಲಿಲ್ಲ ತೃಪ್ತಿ ನೀಡುವ ಹೆಸರು. ಕಣ್ತೆರೆದೊಮ್ಮೆ ಸುತ್ತ...
ನಂಬಿಕೆಗಳು ಮೂಢವಾದಾಗ
ನನ್ನ ಈ ಬರವಣಿಗೆ ಜ್ಯೋತಿಷ್ಯ, ಅದರ ಮೇಲಿನ ನಂಬಿಕೆ ಮತ್ತು ಆ ನಂಬಿಕೆಯ ಅತಿರೇಕಗಳ ಕುರಿತ ನನ್ನ ವಿಚಾರಸರಣಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿನ ವಿಚಾರಗಳು ಯಾರದೇ ವ್ಯಕ್ತಿಗತ ನಂಬಿಕೆಗಳಿಗೆ ಅಥವಾ ನಂಬುವ ಮನಸ್ಸುಗಳಿಗೆ ನೋವುಂಟುಮಾಡುವಂತಿದ್ದರೆ ಮುಂಚಿತವಾಗಿಯೇ “ಕ್ಷಮೆಯಿರಲಿ” ಎನ್ನುತ್ತೇನೆ. ನನ್ನನ್ನ ಈ ಜ್ಯೋತಿಷ್ಯ, ನಂಬಿಕೆ-ಮೂಢನಂಬಿಕೆಗಳ ಕುರಿತು...