ಆಕಾಶ್ ಶ್ರೀವತ್ಸ.. ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಮೂಡಿಸುತ್ತಿರುವ ನಿರ್ದೇಶಕ. ಹಿರಿಯ ನಟ ರಮೇಶ್ ಅರವಿಂದ್ ಅವರ ಗರಡಿಯಲ್ಲಿ ಪಳಗಿರುವ ಆಕಾಶ್ “ಆಕ್ಸಿಡೆಂಟ್” ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ವೃತ್ತಿಯನ್ನಾರಂಭಿಸಿದ್ದರು. ಮೂಲತಃ ಇಂಜಿನಿಯರ್ ಆಗಿರುವ ಇವರು ಚಿತ್ರ ನಿರ್ಮಾಣವನ್ನು ಪ್ಯಾಷನ್ ಆಗಿ ತೆಗೆದುಕೊಂಡವರು. ಇವರ ಇತ್ತೀಚೆಗಿನ “ಸುಳ್ಳೇ ಸತ್ಯ- ದ ರಿಯಲ್ ಲೈ” ಕಿರುಚಿತ್ರವು ಪ್ರತಿಷ್ಟಿತ ‘Cannes film festival’ ನಲ್ಲಿ ಪ್ರದರ್ಷಿತವಾಗುವುದರೊಂದಿಗೆ ಈ ಹಿರಿಮೆಗೆ ಪಾತ್ರವಾದ ಮೊದಲ ಕನ್ನಡ ಕಿರುಚಿತ್ರವಾಗಿದೆ. ಜೊತೆಗೆ ಇನ್ನೂ ನಾಲ್ಕು film festival ನಲ್ಲಿ ಪ್ರದರ್ಷಿತಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸ್ವತಃ ಆಕಾಶ್ ಅವರು ಈ ಚಿತ್ರದ ‘ನನ್ನ ಒಲವಿನ’ ಹಾಡಿನ ಸಾಹಿತ್ಯಕ್ಕೆ ಮೊದಲ ಇಂಟರ್’ನ್ಯಾಷನಲ್ ಕನ್ನಡ ಮ್ಯೂಸಿಕ್ ಅವಾರ್ಡ್‘ನಲ್ಲಿ ಅತ್ಯುತ್ತಮ ಸಾಹಿತ್ಯಕಾರ ಪ್ರಶಸ್ತಿ ಪಡೆದುಕೊಂಡಿರುವುದು ಮತ್ತೊಂದು ಹೆಗ್ಗಳಿಕೆ.
ವಸಿಸ್ಟ ಪ್ರೊಡಕ್ಷನ್ ಹೌಸ್'(ಆಕ್ಸಿಡೆಂಟ್ ನಿರ್ಮಾಣ ಮಾಡಿದ ಸಂಸ್ಥೆ)ನಲ್ಲೂ ಕೆಲಸ ಮಾಡಿರುವ ಇವರು ಕ್ರಿಯೇಟಿವ್ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥನಾಗಿಯೂ ಅನುಭವ ಹೊಂದಿದ್ದಾರೆ.
ಇವರು ಕಿರುಚಿತ್ರ ಮತ್ತು ಡಾಕ್ಯುಮೆಂಟರಿಗಳನ್ನು ನಿರ್ಮಾಣ ಮಾಡುವ Scarlet Drop Media ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆಯ ನಿರ್ಮಾಣದಲ್ಲಿ ಕಾರ್ಪೋರೇಟ್ ಕಂಪೆನಿಗಳಾದ ಇಂಟೆಲ್, ಕೋಕೊ ಕೋಲಾ, ಸಾನ್’ಫ್ಯಾಬ್, ಗೋಪಾಲನ್ ಮಾಲ್, ಇಂಟರ್’ಫೇಸ್ ಫ್ಲೋರ್, ಕ್ಯಾಟ್’ಲಿಸ್ಟ್ ಲ್ಯಾಬ್, ಟಾಟಾ ಸಾಲ್ಟ್’ಗಳಿಗೆ ವಿಡಿಯೋ ನಿರ್ಮಿಸಿ ಕೊಟ್ಟಿದ್ದಾರೆ.
why like this katha? ಅಂತ ನೀವು ಕೇಳಿಯೇ ಇರ್ತಿರಾ.. Red 93.5Fm ನ ಅತ್ಯುತ್ತಮ ರ್ಯಾಮ್ ರೇಟಿಂಗ್ಸ್ ಗಳಿಸಿರುವ ಈ ಜನಪ್ರಿಯ ಕಾರ್ಯಕ್ರಮದ ಹಿಂದೆ ಇರುವವರೂ ಆಕಾಶ್. ಸ್ಕ್ರಿಪ್ಟ್’ನಿಂದ ಧ್ವನಿಯವರೆಗೂ ಆಕಾಶ್’ದೇ ಕೈಚಳಕ. ಈ ಉದಯೋನ್ಮುಖ ಪ್ರತಿಭೆ ಈಗಾಗಲೇ ಬಿರುಕು, Evolution, Timepass, Zoom, Rest In Peace ಮುಂತಾದ ಕಿರುಚಿತ್ರಗಳನ್ನು ಮಾಡಿದ್ದು ಅವೆಲ್ಲವೂ ಯೂಟ್ಯೂಬ್’ನಲ್ಲಿ ಉತ್ತಮ ಪ್ರತಿಕ್ರಿಯೆ ಗಳಿಸಿದೆ.
ಇದೀಗ ಟ್ರೇಲರ್ ನಿಂದ ಎಲ್ಲರಲ್ಲಿ ನಿರೀಕ್ಷೆ ಹುಟ್ಟಿಸಿರುವ ಬದ್ಮಾಷ್ ಚಲನಚಿತ್ರದ ನಿರ್ದೇಶಕರೂ ಆಗಿದ್ದಾರೆ. ಬದ್ಮಾಷ್ ಚಲನಚಿತ್ರದ ಟ್ರೇಲರ್ ಅನ್ನು ಇಲ್ಲಿ ವೀಕ್ಷಿಸಬಹುದು. ಆಕಾಶ್ ಶ್ರೀವತ್ಸರವರು ತಮ್ಮ ವೃತ್ತಿ ಬದುಕಿನ ಅನುಭವವನ್ನು www.readoo.in ಮತ್ತು kannada.readoo.in ನಲ್ಲಿ “Cut to the Climax” ಎಂಬ ಅಂಕಣದಲ್ಲಿ ಬರೆಯಲ್ಲಿದ್ದಾರೆ.