ಸಿನಿಮಾ - ಕ್ರೀಡೆ

ಈ ಸಲದ ವರ್ಲ್ಡ್ ಕಪ್ ನಲ್ಲಿ ನಾವು ಮಿಸ್ಸ್ ಮಾಡಿಕೊಳ್ಳುತ್ತಿರುವ ಮತ್ತೊಬ್ಬ ವ್ಯಕ್ತಿ ಇದಾರೆ..!

ಮತ್ತೊಂದು ವರ್ಲ್ಡ್ ಕಪ್ ಬಂದೇ ಬಿಟ್ಟಿದೆ. ಭಾರತದ ಬದ್ಧ ವೈರಿ ಪಾಕಿಸ್ತಾನವನ್ನು ಹೆಡೆಮುರಿ ಕಟ್ಟಿದ್ದೂ ಆಯ್ತು, ಬಲಿಷ್ಟ ದಕ್ಷಿಣ  ಆಫ್ರಿಕಾವನ್ನು ಮಕಾಡೆ ಮಲಗಿಸಿದ್ದೂ ಆಯ್ತು. ಸತತ ಗೆಲುವಿನ ಮೂಲಕ ಕ್ವಾರ್ಟರ್ ಫ಼ೈನಲ್ ವರೆಗೆ ಮುನ್ನಡೆದಿದ್ದೇವೆ. ಹಲವು ಏಳು ಬೀಳಿನ ನಡುವೆ ವಿಶ್ವಕಪ್ ತಲುಪಿರುವ ಭಾರತದ ಜಯಘೋಷ ಆಸ್ಟ್ರೇಲಿಯಾದಲ್ಲಿ ಮತ್ತೆ ಮೇಳೈಸಿದೆ. ಆದರೆ, ಈ ಭಾರಿಯ ವರ್ಲ್ಡ್ ಕಪ್ ನಲ್ಲಿ, ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ನಿವೃತ್ತಿಯಾಗಿದ್ದರಿಂದ ಈ ಭಾರಿ ತೆಂಡುಲ್ಕರ್ ಸ್ಟ್ರೈಟ್ ಡ್ರೈವ್ ಮಿಸ್ಸಿಂಗ್. ಡ್ಯಾಶಿಂಗ್ ಓಪನರ್ ವೀರೆಂದ್ರ ಸೆಹ್ವಾಗ್ ಸ್ಥಾನ ಪಡೆಯಲು ವಿಫಲರಾಗಿರುವದರಿಂದ ಅವರ ಊಪರ್ ಕಟ್ ಮಿಸ್ಸಿಂಗ್. ಅಷ್ಟೂ ಸಾಲದೆಂಬಂತೆ ಸ್ಲಾಗ್ ಓವರ್ ಗಳಲ್ಲಿ ಯುವಿಯ ಸಿ‌ಕ್ಸರ್ ಗಳು ಮಿಸ್ಸಿಂಗ್. ಹರ್ಭಜನ್ ದೂಸ್ರಾ, ಜಹೀರ್ ಖಾನ್ ಯಾರ್ಕರ್ ಕೂಡಾ ಮಿಸ್ಸಿಂಗ್. ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿ ಎಲ್ಲವೂ ಮಿಸ್ಸಿಂಗ್ ಮಿಸ್ಸಿಂಗ್ ಮಿಸ್ಸಿಂಗ್… ಆದರೆ ಈ ಎಲ್ಲಾ ಮಿಸ್ಸಿಂಗ್ ಗಳ ನಡುವೆ  ಮತ್ತೊಂದು ಮಿಸ್ಸಿಂಗ್ ಇದೆ. ಕ್ರಿಕೆಟ್ ಆಟವನ್ನು ಮನಸಾ ಆಸ್ವಾದಿಸುವ ಪ್ರತಿಯೊಬ್ಬರೂ ಮಿಸ್ಸ್ ಮಾಡಿಕೊಳ್ಳುವಂತಹ ವ್ಯಕ್ತಿಯೊಬ್ಬರಿದ್ದಾರೆ…

“ Last ball of the over, and he has put it away, has he? Yes!! Into the crowd.. Six sixes in a over..!!” ಗೊತ್ತಾಯ್ತಾ ಅವರು ಯಾರೂಂತ? ಇಲ್ಲಾಂದ್ರೆ ಮತ್ತೊಂದು ಕೇಳಿ. “Gets it.. First ,man in the planet to reach two hundred and it’s a super man from India. Sachin tendulkar.. take a bow master..! ಈಗ ಗೊತಾಗಿರ್ಬೇಕಲ್ವಾ? ಇಲ್ಲಾಂದ್ರೆ ಬಿಡಿ, ಈಗಂತೂ ಗೊತ್ತಾಗೇ ಗೊತ್ತಾಗತ್ತೆ. “ Absolutely magnificent, Dhhhooniii.. finishes off in style. A magnificent strike into the crowd, India lifts the world cup after twenty eight years, The party starts in the dressing room..” Yes!!  ನಾವು ಈ ಬಾರಿಯ ವರ್ಲ್ಡ್ ಕಪ್ ನಲ್ಲಿ ಅತಿ ಹೆಚ್ಚು ಮಿಸ್ಸ್ ಮಾಡಿಕೊಳ್ಳುತ್ತಿರುವುದು ಇದೇ ರವಿಶಾಸ್ತ್ರಿಯನ್ನು!!

2011 ರ ನಂತರದ ಧೋನಿಯ ವೈಫಲ್ಯ, ಪರಿಣಾಮಕಾರಿಯಲ್ಲದ ಫ್ಲೆಚರ್ ತರಭೇತಿ, ನಿಯಂತ್ರಣದಲ್ಲಿಲ್ಲದ ಆಟಗಾರರು ಮತ್ತು ವಿದೇಶದಲ್ಲಿನ ಸತತ ಸೋಲುಗಳು.. ಇದೆಲ್ಲದರ ಪರಿಣಾಮವಾಗಿ ಭಾರತ ತಂಡಕ್ಕೆ ಒಳಗಿಂದ ಒಬ್ಬ ಸೂಕ್ತ ಸಾರಥಿಯ ಅಗತ್ಯವಿತ್ತು. ಆದರೆ ಫ್ಲೆಚರ್ ಗುತ್ತಿಗೆ 2015ರ ವಿಶಕಪ್ ವರೆಗೆ ಇದ್ದಿದುದರಿಂದ ಬಿಸಿಸಿಐ ಗೆ ಬೇರೆ ಆಪ್ಷನ್ ಇರಲಿಲ್ಲ. ಹೀಗಾಗಿ ತಂಡವನ್ನು ನಿಯಂತ್ರಣದಲ್ಲಿಟ್ಟು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ ಉದ್ದೇಶದಿಂದ ಬಿಸಿಸಿಐ ರವಿ ಶಾಸ್ತ್ರಿಗೆ ಡೈರೆಕ್ಟರ್ ಪಟ್ಟ ಕಟ್ಟಿತು. ತಂಡ ಸೇರಿಕೊಂಡ ಹೊಸ ಡೈರೆಕ್ಟರ್ ನಿಂದ ಟೀಮ್ ಇಂಡಿಯ ಎಷ್ಟು ಸುಧಾರಿಸುವುತು ಅನ್ನೋದು ಸೆಕೆಂಡರಿ. ಆದ್ರೆ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ನ ಕಾಮೆಂಟರಿ ತಂಡದ ಡೈರೆಕ್ಟರ್ ಅಂತು ನಾಪತ್ತೆಯಾಗಿದ್ದಾರೆ. ಶಾಸ್ತ್ರಿಯಿಲ್ಲದೆ ಈ ಬಾರಿಯ ಕಾಮೆಂಟರಿ ಬಾಕ್ಸ್ ಬಡವಾಗಿದೆ.  ಡೈಹಾರ್ಡ್ ಕ್ರಿಕೆಟ್ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ.

ಹೌದು.. ರವಿಶಾಸ್ತ್ರಿ ಅಂದ್ರೆ ಹಾಗೆಯೇ… ಆರಂಭದ ಟಾಸ್ ಟೈಮ್ ನ “ನಮಸ್ಕಾರ್ ಮುಂಬೈ, ಆರ್ ಯೂ ರೆಡಿ ಟು ರಾಕ್ ಆನ್ ಫೈನಲ್ ಟೈಮ್??” ಅನ್ನೋವಲ್ಲಿಂದ ಹಿಡಿದು ಕೊನೇಯ “ ದಾಟ್ಸ್ ಇಟ್ ಫ಼್ರಾಮ್ ದ ಪ್ರೆಸೆಂಟೇಷನ್ ಏರಿಯಾ” ಅನ್ನೋವರೆಗೂ ಶಾಸ್ತ್ರಿ ಇದ್ದರೇನೇ ಚೆನ್ನ. ಉಳಿದವರು ಇಲ್ಲವೆಂದಲ್ಲ. ಟೋನಿ ಗ್ರೇಕ್, ಇಯಾನ್ ಬಿಷಪ್, ಇಯಾನ್ ಚಾಪೆಲ್, ರಿಚಿ ಬೆನಾಡ್, ಡ್ಯಾನಿ ಮೊರಿಸನ್, ರಮೀಜ್ ರಾಜಾ, ಸಂಜಯ್ ಮಾಂಜ್ರೇಕರ್, ಹರ್ಷ ಭೋಗ್ಲೆ, ಸಿದ್ದುನಂತಹ ಎಂತೆಂತಹಾ ಘಟಾನುಘಟಿ ಕಾಮೆಂಟೇಟರುಗಳನ್ನು ಕ್ರಿಕೆಟ್ ಜಗತ್ತು ಕಂಡಿದೆ.  ಅದರಲ್ಲೂ ಹರ್ಷ ಭೋಗ್ಲೆ ತನ್ನ ಅತ್ಯುತ್ತಮ ಟೆಕ್ನಿಕಲ್ ಅನಾಲಿಸಿಸ್ ಗಾಗಿ, ಸಿದ್ದು ಎಲ್ಲರನ್ನೂ ನಗಿಸುವ ಹಾಸ್ಯ ಪ್ರಜ್ಞೆಗಾಗಿ, ಡ್ಯಾನಿ ಮೊರಿಸನ್ ತನ್ನ ವಿಶಿಷ್ಟ ಶೈಲಿಗಾಗಿ ಪ್ರಖ್ಯಾತರಾದವರು. ಒಬ್ಬಬ್ಬರೂ ಟ್ರೆಂಡ್ ಸೆಟ್ಟರ್ ಗಳೇ ಮತ್ತು ತನ್ನದೇ ಆದ ಅಭಿಮಾನಿ ವಲಯವನ್ನು ಪಡಕೊಂಡವರು. ಆದರೂ ತೀರ್ಥ ಶಂಖದಿಂದಲೇ ಬರಬೇಕು ಅನ್ನೋ ಹಾಗೆ ಕಾಮೇಂಟರಿ ಶಾಸ್ತ್ರಿ ಬಾಯಿಂದಲೇ ಬರಬೇಕು. ಶಾಸ್ತ್ರಿ ಕಾಮೆಂಟರಿ ಇಲ್ಲದ ಮ್ಯಾಚುಗಳು ನಿಜಕ್ಕೂ ಬೋರು. ಅದೊಂಥರಾ ಊಟಕ್ಕಿಲ್ಲದ ಉಪ್ಪಿನಕಾಯಿ. ಶಾಸ್ತ್ರಿ ಕಾಮೆಂಟರಿ ಕೇಳೋದು, ಅದನ್ನು ಅನುಕರಿಸುವುದು ಅಂದರೆ ಒಂಥರಾ ಕ್ರೇಜ್. ಕ್ರಿಕೆಟಿಗರ ಬ್ಯಾಟಿಂಗ್ ಶೈಲಿಯನ್ನು ಅನುಕರಿಸುವುದು ಕೆಲವರಿಗೆ ಹುಚ್ಚಾದರೆ, ಕೆಲವರಿಗೆ ರವಿ ಶಾಸ್ತ್ರಿ ಕಾಮೆಂಟರಿಯನ್ನು ಅನುಕರಿಸುವುದೇ ಹುಚ್ಚು! ಅಷ್ಟರ ಮಟ್ಟಿಗೆ ಫ಼ೇಮಸ್ ನಮ್ಮ ಶಾಸ್ತ್ರಿ.

ಸುಮ್ಮನೆ ಅಲ್ಲಾ, ಅವರೊಬ್ಬ ಮಾಂತ್ರಿಕ ಮಾತುಗಾರ, ಮಾತಿನ ಮೋಡಿಗಾರ, Highly Talented ಅಂತಾರಲ್ಲ, ಅದೇ. ಆವತ್ತು ಲಾರ್ಡ್ಸ್ ನಲ್ಲಿ ಭಾರತ ಇಂಗ್ಲೆಂಡನ್ನು ಮಣಿಸಿ ನಾಟ್ ವೆಸ್ಟ್ ತ್ರೋಫಿ ಎತ್ತಿದಾಗ, ಯುವರಾಜ್ ಸಿಂಗ್ ಆರಕ್ಕೆ ಆರು ಸಿಕ್ಸರ್ ಎತ್ತಿದಾಗ, 2011 ರಲ್ಲಿ ನಾವು ವಿಶ್ವಕಪ್ ಎತ್ತಿದಾಗ ಮತ್ತು ಕ್ರಿಕೆಟ್ ಜಗತ್ತಿನ ಇಂತಹಾ ಅಮೋಘ ಕ್ಷಣಗಳನ್ನು ವೀರೋಚಿತವಾಗಿ ವರ್ಣಿಸಿದ್ದು, ನಮ್ಮೆಲ್ಲರ ಮೈ ನವಿರೇಳಿಸಿದ್ದು, ದೇಶ ಪ್ರೇಮ ಉಕ್ಕಿಸಿದ್ದು ಇದೇ ರವಿಶಾಸ್ತ್ರಿ. ಬಹುಶಃ ಶಾಸ್ತ್ರಿ ಒಬ್ಬ ಆಟಗಾರನಾಗಿ ಆಗಿ ಮೈದಾನದಲ್ಲಿ ಸಾಧಿಸಿದ್ದಕ್ಕಿಂತ ಕಾಮೆಂಟರಿ ಬಾಕ್ಸ್ ನಲ್ಲಿ ಸಾಧಿಸಿದ್ದೇ ಹೆಚ್ಚು ಅಂದರೂ ತಪ್ಪಿಲ್ಲ.  ಟೆಸ್ಟ್ ಹಾಗು ಒಂಡೇ ಯಲ್ಲಿ ಒಬ್ಬ ಪರಿಪೂರ್ಣ

ಆಲ್ ರೌಂಡರ್ ರವಿಶಾಸ್ತ್ರಿಗಿಂತ ಕಾಮೆಂಟೇಟರ್ ಶಾಸ್ತ್ರಿನೇ ನಮಗೆಲ್ಲಾ ಅಚ್ಚುಮೆಚ್ಚು!!

ಆದರೆ ನಾವೇನು ಮಾಡೋದು ಹೇಳಿ. ಡೈರೆಕ್ಟರ್ ಹುದ್ದೆ ನೀಡಿ ಬಿಸಿಸಿಐ ಶಾಸ್ತ್ರಿ ಬಾಯಿಗೆ ಬಟ್ಟೆ ತುರುಕಿ ಬಿಟ್ಟಿದೆ.  ಸದಾ ಟಿವಿ ಸ್ಕ್ರೀನ್ ಮೇಲೆ ಮಿಂಚುತಿದ್ದ ಶಾಸ್ತ್ರಿಯನ್ನು ಬಿಸಿಸಿಐ ಮೂಲೆಗುಂಪು ಮಾಡಿದೆ ಅಂತ ತಮಾಷೆಗಂದರೂ ತಪ್ಪಿಲ್ಲ. ಮ್ಯಾಚ್ ನಡೆಯುವಾಗ ಅವರ ಕಾಮೆಂಟರಿ, ಸಹ ವೀಕ್ಷಕ ವಿವರಣೆಕಾರರೊಂದಿಗಿನ ಹರಟೆಗಳನ್ನೆಲ್ಲಾ ಕೇಳಿಸಿಕೊಂಡು ಪಂದ್ಯ ಆಸ್ವಾದಿಸುತ್ತಿದ್ದ ನಮಗೆ ಈ ಭಾರಿಯ ವಿಶ್ವಕಪ್ ಸ್ವಲ್ಪ ಮಟ್ಟಿಗೆ ಸಪ್ಪೆಯಾಗುವುದಂತೂ ಖಂಡಿತ. ಆ ಮನುಷ್ಯ ಮಾತ್ರ ಡ್ರೆಸ್ಸಿಂಗ್ ರೂಮ್ ಲ್ಲಿ ಕೈಕಟ್ಟಿ ಕುಳಿತು ಪಂದ್ಯ ನೋಡುತ್ತಾರಾದರೂ ಮನಸ್ಸು ಮಾತ್ರ ಮೈಕ್ ಹಿಡಿಯದೇ, ಮಾತನಾಡಲಾಗದೆ ವಿಲವಿಲ ಒದ್ದಾಡುತ್ತಿರಬಹುದು. ಪಾಪ!

ಈಗರ್ಲಿ ವೈಟಿಂಗ್ ಟು ಹಿಯರ್ ಯೂ ಮಾನ್, ವೀ ಮಿಸ್ಸ್ ಯೂ ಶಾಸ್ತ್ರಿ!!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!