ಇರುಳ ಗುರುತಿಸುತ್ತೇವೆ ಕೇವಲ ಅದು ಹೊತ್ತು ತರುವ ತಾರೆಗಳಿಂದ.. ಇರಬಾರದೇನು ಅದಕೂ ಗಮನದ ಗುಂಗು? ಜೀವವಿಲ್ಲದಿದ್ದರೂ ಗರ್ವವಿದೆ, ಬಿಟ್ಟ ಬಿರುಕುಗಳಿಗೆಲ್ಲ ದೃಷ್ಟಿ ಬೀಳಬೇಕಿದೆ, ವರ್ತಮಾನವೂ ಬೇಡುತ್ತದೆ ಕುತೂಹಲ.. ಹೆಣವೀಗ ಬಯಸುತಿದೆ ರಂಗಿನ ಶಾಲು, ಭಾರವೇರಿದ್ದಕ್ಕೆ ಒಳಗೊಳಗೆ ಅದು ಮರುಗುತ್ತದೆ..| ಯಾರಿಗೂ ಕೈಸೇರದ ಕಾಸಿನ ಸರಕ್ಕೆ ಗುರಿಯಿಟ್ಟು ಎಸೆದ ರಿಂಗು...
ಕವಿತೆ
ಮೆರವಣಿಗೆ
ಚಂದದ ಊರಲಿ ಸುಂದರ ತೇರಲಿ, ನಡೆಯಿತು ಒಂದು ಮೆರವಣಿಗೆ | ದೊರೆಗಳು ಕುಳಿತರು ಉಪ್ಪರಿಗೆಯಲ್ಲಿ ಜೈಕಾರ, ಹೂಗಳ ಮಳೆಸುರಿಯಿತಲ್ಲಿ || ಎಲ್ಲೆಲ್ಲೂ ಹರ್ಷದ ಉದ್ಘಾರ ! ಬಂದವರೆಲ್ಲ ಸಂಭ್ರಮಿಸಿದರು ಭೂಮಿಗಿಳಿದ ನಾಖವೆಂಬ ಉತ್ಪ್ರೇಕ್ಷೆಯಲ್ಲಿ | ಆ ನಾಖದೊಳೊಂದು ನರಕವೂ ಇತ್ತು ? ಅದು ಬಾಸವಾಯಿತು ಹೊಟ್ಟೆ ಬೆನ್ನಿಗಂಟಿದ ಮನುಜರಲಿ | ದೊರೆಗಳ ಗೊಣಗು ದಣಿಗಾಳ ಗುಡುಗು ನೊಂದರು...
ಜಲಪಾತ
ಧೋ! ಧುಮ್ಮಿಕ್ಕುವ ಜಲಪಾತ ಧರೆಯ ಎದೆಯೊಳಗೆ ನವರಸಗಳ ಅಖಂಡ ಜಾತ! ಬಂಡೆ ಎದೆ ಹರವಿಗೆ ಬೆಣ್ಣೆ ತಿಕ್ಕಿ ಬಿಗಿದಪ್ಪುವ ಬಯಕೆ ಬಿಸುಪಿಗೆ ಕರಗಿ ಜಾರುವ ಹುಸಿ ನಾಚಿಕೆ ಮಾಟ| ತೆರೆದ ಹೊಕ್ಕುಳಿಗೆ ಕಚಗುಳಿಯಿಡುವ ಹನಿಗಳ ಕೂಟ ಸೃಜಿಪ ಮನ್ಮಥ ಚಾಪ ಉರಿಗಣ್ಣ ತಣಿಪ ಶೃಂಗಾರನೋಟ || ೧ || ಶತಮಾನಗಳ ಕಂಡಜ್ಜಿಗೆ ಮುಡಿ ಹರಡಿ ಸಿಕ್ಕು ಬಿಡೀಸುವ ತವಕ ನಿತ್ಯ ಕಳೆದು...
ಅನುಗಾಲವೂ ಅನುರಾಗಿ ನಾ…
ಕಾಣದೆ ಹೋದರೆ ಅರೆಘಳಿಗೆ, ಅರಸಿದೆ ನಯನವು ನಿನ್ನ… ನಿನ್ನನು ಕಂಡ ಮರುಘಳಿಗೆ; ಭಾವದ ಧಾಟಿಯೇ ಭಿನ್ನ! ಎಲ್ಲರಂತೆ ನಾನಲ್ಲ, ಬಲ್ಲೆಯೇನು ನೀ? ಅನುಗಾಲವೂ ಅನುರಾಗಿ ನಾ, ನಂಬೆನ್ನನು!!! ಸೋತಿದೆ ಪ್ರೀತಿಸು ಎಂದು ಹೇಳುವ ಧೈರ್ಯವು, ಸನಿಹವೇ ಕೂತಿರು ಎಲ್ಲವ ಹೇಳಲಿ ಮೌನವು…! ಸುಳಿವೆ ಇಲ್ಲದೇ ಬಳಿಗೆ ಬಂದಿದೆ ಒಂದು ಕವಿತೆ ಸಾಲು… ಮೆಲ್ಲ ಬಂದು ನಡೆಸೀಗ ಸಲ್ಲಾಪವ, ಬರಿ ನೋಟಕೂ...
ನಾಳೆಯ ನಿರೀಕ್ಷೆಯಲ್ಲಿ
ವರುಷ ವರುಷಗಳೇ ಕಳೆದುಹೋಯಿತು , ಒಳ್ಳೆಯ ದಿನಗಳ ಕಾಯುವಿಕೆಯಲ್ಲಿ ಕನಸುಗಳಿಗೂ ಜೀವ ಬರುತ್ತದೆ ಎಂಬ ಆಸೆಯಲ್ಲಿ ಬರೀ ನಿರೀಕ್ಷೆಯಲ್ಲಿ.. ನಿನ್ನೆಯ ದಿನಗಳಲ್ಲಿ ಖುಷಿಯಿರಲ್ಲಿಲ್ಲ ಇಂದಿನ ದಿನಗಳಲ್ಲೂ ಖುಷಿಯಿಲ್ಲ ಬರುವ ನಾಳೆಯಲ್ಲಾದರೂ ಖುಷಿಯಿರಬಹುದೆಂಬ ಆಸೆ.. ಕಣ್ಣೀರನ್ನು ಕಾಣದಂತೆ ಅಡಗಿಸಿಟ್ಟು ನಿತ್ಯ ನಗುವಿನ ಮುಖವಾಡ ಹೊತ್ತು ಬರೀ ನಟನೆಯನ್ನೇ ಜೀವಾಳವಾಗಿಸಿದ ಬದುಕು...
ಕೆಂಪು ಕವಿಯ ಅಳಲು
ಒಗ್ಗದವನು ಆಳಿದರೆ ಸಹಿಸುವುದೆ ಬೇಗೆ ಹಳೆ ತೆವಲುಗಳಿಗೆ ತೆರೆ ಎಳೆಯುವುದು ಹೇಗೆ! ಮೊನ್ನೆವರೆಗೂ ಜನರ ಅಮಾಯಕರೆಂದೆ ಬಗೆದೆ ನಿರಾಸೆ ದಾರಿಗುಂಟ ಕೈಹಿಡಿದು ನಡಿಸಿದೆ ಯಾವ ದೇಶದ ಚರಿತ್ರೆ ಹೆಮ್ಮೆಯದಿತ್ತೊ ಅಲ್ಲಿ ಕಪ್ಪು ಚುಕ್ಕೆಗಳ ಎಣಿಸಿ ತೋರಿಸಿದ್ದೆ ಹಳ್ಳಗಳ ತೋಡಿ ವಿಭಜನೆಯ ತೃಪ್ತ ಹಂಬಲದಲ್ಲಿ ದೊಂಬಿದಾಸರ ಅವರೊಳಗೆ ಇರಿಸಿಯೇ ಇದ್ದೆ! ಸತ್ಯ ಚರಿತ್ರೆಯ ಪುಟಗಳಿಗೆ ಮಸಿ...
ಹೋಗುವುದೆಂದರೆ ಊರಿಗೆ
ಹೋಗುವುದೆಂದರೆ ಊರಿಗೆ ಸ್ವರ್ಗವನ್ನೇ ಇಣುಕಿ ಬಂದಂತೆ. ಗಡಿಬಿಡಿಯಲಿ ಬಟ್ಟೆ ಬರಿಯನು ತುರುಕಿ ಬ್ಯಾಗಿನ ಹೊಟ್ಟೆ ಒಡೆಯುವಂತೆ. ಐದಾರು ಗಂಟೆ ಪಯಣ ಸಾಗುವುದು ಅರಿವಿಲ್ಲದೆ. ಪ್ರತಿಗೇಟು ಕಂಬದ ಸದ್ದಿಗೆ ನನ್ನ ಬರುವಿಕೆ ನೋಡುವ ನನ್ನ ನಾಯಿ “ಬಂದ್ನಾ” ಎಂದು ರಸ್ತೆಯಿಂದ ಕೇಳುವ ಬಾಲ್ಯದ ಚಡ್ಡಿಗಳು ಯಾವ ಬಸ್ಸಿಗೆ ಬರಬಹುದು ಎಂದು ಲೆಕ್ಕ ಹಾಕುವ...
ಮೆ(ಮ)ರೆಯದಿರು!
ಊರಿನಲ್ಲಿರುವ ಕಲ್ಲು ದೇವರಿಗೆಲ್ಲ ವಿಧವಿಧ ಸೀರೆ ಉಡಿಸುತ್ತಾ ಮಾಡುವೆ ನೀ ನಮನ! ನಿನ್ನ ಮನೆಯಲ್ಲಿರುವ ನಿಜವಾದ ದೇವತೆಯ ಕಡೆ ನೀ ಹರಿಸಲಾರೆ ಕೊಂಚ ಗಮನ ! ಬೇಕಾದಷ್ಟು ಖರ್ಚು ಮಾಡಿ ದೇಗುಲದ ನಿರ್ಮಾಣಕ್ಕೆ ಮಿತಿಯಿಲ್ಲದೆ ಕೊಡುವೆ ಕೊಡುಗೆ! ದೇವರಂಥ ತಂದೆತಾಯಿಗಳ ಮನೆಯೆನ್ನುವ ದೇವಾಲಯದಿಂದ ವೃದ್ಧಾಶ್ರಮಕ್ಕೆ ಅಟ್ಟಿ ಆಚರಿಸುವೆ ನೀ ಬೀಳ್ಕೂಡುಗೆ! ...
ರಾಣಿ ??
ನಾನಿಲ್ಲಿ ರಾಣಿ, ನನ್ನಂತೆ ನಡೆವರು ಎಲ್ಲ, ನನಗಾವ ನಿಯಮವಿಲ್ಲ! ಮುಂಜಾನೆ ಮಂಜಲ್ಲಿ ಹಸಿರೆಲೆ ಮೇಲೆ ವಿಶ್ರಮಿಸುವ ಇಬ್ಬನಿ ನಾ, ಸ್ವಚ್ಚಂದ ಆಕಾಶದಲ್ಲಿ ಊರಗಲದ ರೆಕ್ಕೆ ಕಟ್ಟಿ ಹಾರುವ ಹಕ್ಕಿ ನಾ, ಕಡಲಿನೊಡಲಿನಲ್ಲಿ ಬೆಚ್ಚನೆ ಚಿಪ್ಪಲ್ಲಿ ಕಣ್ಮುಚ್ಚಿರುವ ಮುತ್ತು ನಾ.. ನವಿಲಂತೆ ನರ್ತಿಸಿದೆ, ಕೋಗಿಲೆಯಂತೆ ಹಾಡಿದೆ, ಮಿಂಚಂತೆ ಮಿನುಗಿದೆ, ಮೀನಂತೆ ಈಜಿದೆ...
‘ಸಾರಿಗೆ’..
ರಾಗ ಹಿಂಜುತಿದೆ ಸುಣ್ಣದುಂಡೆಯ ಹೆಣಕೆ ವಾಯುವಿಹಾರದ ಸಮಯ.. ಅಷ್ಟಷ್ಟೇ ಪೋಷಕಾಂಶ ತೇಗಿದ್ದಷ್ಟೇ, ಕಡಲಿನಲ್ಲಿ ಉಪ್ಪು ಹುಟ್ಟಿದ್ದು ತಿಳಿಯಲಿಲ್ಲ… ಬತ್ತಿಸಿಕೊಳ್ಳುವ ಗುಣವೂ ಇದೆ ಗಾಳಿಗೆ, ಯಾರೂ ಅರುಹಲಿಲ್ಲ.. ದೊಡ್ಡ ನೀಲಿ ಚಾದರದಲ್ಲಿ ಗುದ್ದಲಿಗಳ ಅತಿಕ್ರಮಣ ನಿಯತ ಆಕಾರಕ್ಕೆ ತೊಳೆದಿಟ್ಟ ಹಲ್ಲುಗಳ ಬಣ್ಣ.. ತೇಪೆಗಳ ತುದಿಯಲ್ಲಿ ರಕ್ತ ಇಣುಕುವುದಿಲ್ಲ...