ಯಾವುದೇ ಕ್ಷೇತ್ರವಾಗಿರಲಿ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಬದಲಾವಣೆಯನ್ನು ಕಾಣುತ್ತಿರುತ್ತದೆ, ವೃದ್ಧಿಯಾಗಿತ್ತಿರುತ್ತದೆ. ಅದು ಅವಶ್ಯಕವೂ ಹೌದು! ವೈದ್ಯಕೀಯ ಕ್ಷೇತ್ರವೂ ಇದಕ್ಕೇನು ಹೊರತಲ್ಲ. ಅದರಲ್ಲೂ ಕ್ಯಾನ್ಸರ್’ನಂತಹ ಖಾಯಿಲೆಗಳ ವಿಚಾರ ಬಂದಾಗ ಬದಲಾವಣೆ, ಬೆಳವಣಿಗೆ ಅತ್ಯವಶ್ಯಕ. ದಿನೇ ದಿನೇ ಹೆಚ್ಚುತ್ತಿರುವ ಇಂತಹ ಖಾಯಿಲೆಗಳಿಗೆ ಹೊಸ ಚಿಕಿತ್ಸೆಯ ಬಗ್ಗೆ...
Featured
ತಪೋವನದೆಡೆಗಿನ ತಪಸ್ಸಿನ ತಪೋಭಂಗ- 3
ಹಿಂದಿನ ಭಾಗ ಗುಡ್ಡದ ಮೇಲೆ ಸಾಲಾಗಿ ನಿಂತ ಬಸ್ಸು ಜೀಪುಗಳು ನಾವು ನಿಂತಿದ್ದ ಗುಡ್ಡದ ತಗ್ಗಿನಿಂದ ಕಾಣುತ್ತಿದ್ದವು. ಒಂದು ಗಂಟೆಯಾದರೂ ನಾವು ನಿಂತಲ್ಲಿಂದ ಒಂದಿಂಚೂ ಮುಂದೆ ಹೋಗಿರಲಿಲ್ಲ. ಮಳೆ ಕೂಡ ಕಡಿಮೆಯಾಗಿರಲಿಲ್ಲ. ಮಳೆಗಾಲ ಮತ್ತು ಚಳಿಗಾಲದಲ್ಲಿ ಉತ್ತರಾಖಂಡದಂಥ ಪ್ರದೇಶಗಳಲ್ಲಿ 5-5.30 ಕ್ಕೆಲ್ಲ ಕತ್ತಲಾಗಿ ಬಿಡುತ್ತದೆ. ಬೆಳಗಿನಿಂದ ಮೋಡ ಮುಸುಕಿಕೊಂಡಿದ್ದ ಬಾನು...
ಇತಿಹಾಸದೊಂದು ಸಣ್ಣ ತುಣುಕು: ಕರ್ನಲ್ ಹಿಲ್
ಹೊನ್ನಾವರದಿಂದ ಕುಮಟಾಕ್ಕೆ ಹೋಗುವ ದಾರಿಯಲ್ಲಿ ನಿಮಗೊಂದು ತಿರುವು ಸಿಗುತ್ತದೆ. ಅಲ್ಲಿ ಬಲಭಾಗದಲ್ಲಿ ಒಂದು ಸಣ್ಣ ದಿಬ್ಬವಿದೆ. ಹಿಂದೆ ಐದಾರು ಎಕರೆ ಹರಡಿಕೊಂಡಿದ್ದ ಆ ಜಾಗ ಈಗ ಹಲವು ಅಗೆತ-ಬಗೆತಗಳಿಗೆ ಪಕ್ಕಾಗಿ ಒಂದೂವರೆ ಎಕರೆಗೆ ಇಳಿದಿದೆ. ಆ ದಿಬ್ಬದ ಬಹುಭಾಗವನ್ನು ಜೆಸಿಬಿಯ ಲೋಹದ ಹಲ್ಲುಗಳು, ರಸ್ತೆ ಅಗಲಿಸಲೆಂದು, ಕೆರೆದು ಪುಡಿಗುಟ್ಟಿವೆ. ಹಾಗೆ ಕಾಮಗಾರಿ...
ಭಾರತಕ್ಕೆ ಮೂಡುತ್ತಿವೆ ಅಗ್ನಿಯ ರೆಕ್ಕೆಗಳು
ಡಿಸೆಂಬರ್ 26ರಂದು ಭಾರತ ತನ್ನ ಅಗ್ನಿ-5 ಎಂಬ ಹೆಸರಿನ ಕ್ಷಿಪಣಿಯ ನಾಲ್ಕನೆಯ ಪರೀಕ್ಷಾರ್ಥ ಹಾರಾಟ ನಡೆಸಿತು. ಈ ಹಿಂದೆ ಮೂರು ಬಾರಿ, 2012, 2013 ಮತ್ತು 2015ರಲ್ಲಿ ಅದೇ ಕ್ಷಿಪಣಿಯನ್ನು ಅಂತರಿಕ್ಷಕ್ಕೆ ಹಾರಿಸಿ ತಂತ್ರಜ್ಞರು ಕ್ಷಮತೆಯ ಬಗೆಗಿನ ವಿವಿಧ ಪ್ರಯೋಗಗಳನ್ನು ನಡೆಸಿದ್ದರು. ಇದೀಗ ನಾಲ್ಕನೇ ಮತ್ತು ಅಂತಿಮ ಪರೀಕ್ಷೆ ನಡೆಸಿ ಎಲ್ಲವೂ ಸರಿಯಾಗಿದೆ ಎಂದು...
ಕೆಸರಲ್ಲಿ ಅರಳಬೇಕಾಗಿದ್ದ ಕರ್ನಾಟಕ ಬಿಜೆಪಿ ಕೊಳೆತು ಹೋಗುತ್ತಿದೆಯಲ್ಲ?
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ನಾನೇ, ೧೫೦ ಸೀಟುಗಳನ್ನು ಗೆಲ್ಲುವುದೇ ನಮ್ಮ ಮುಂದಿನ ಗುರಿ ಅಂತ ಆನೆ ನಡೆದಿದ್ದೇ ದಾರಿ ಆನ್ನೋ ರೀತಿಯಲ್ಲಿ ಮುನ್ನುಗ್ಗುತ್ತಿರುವ ಯಡಿಯೂರಪ್ಪನವರದ್ದು ಒಂದು ಕಥೆಯಾದರೆ, ಯಡಿಯೂರಪ್ಪ ನಮ್ಮ ನಾಯಕ, ಆದರೆ ರಾಯಣ್ಣ ಬ್ರಿಗೇಡ್ ಮಾಡಿರುವುದು ಯಡಿಯೂರಪ್ಪನವರನ್ನು ಸಿಎಂ ಮಾಡಲಲ್ಲ, ಹಾಗೇ ಹೀಗೇ ಅಂತ ಕ್ಷಣಕ್ಕೊಂದು ಹೇಳಿಕೆ ನೀಡಿ ಯಡಿಯೂರಪ್ಪಗೆ...
ಜಲ್ಲಿಕಟ್ಟಿಗೆ ಪಟ್ಟು ಹಿಡಿದ ತಮಿಳರನ್ನು ನೋಡಿಯಾದರೂ ತುಳುವರು ಫೇಸ್ಬುಕ್’ನಿಂದ ಆಚೆ ಬರಬೇಕಲ್ಲವೇ?
ತಮಿಳುನಾಡಿನಲ್ಲಿ ಕಾವೇರಿಗಾಗಿ ಜನ ಬೀದಿಗಿಳಿದಿದ್ದನ್ನು ನಾವು ನೋಡಿದ್ದೇವೆ. ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವುಂಟಾದಾಗಲೂ ಅಲ್ಲಿ ಜನ ರೊಚ್ಚಿಗೇಳುತ್ತಾರೆ. ಅಮ್ಮ ಸತ್ತಾಗಲೂ ಲಕ್ಷಾಂತರ ಅಭಿಮಾನಿಗಳು ಎದೆ ಬಡಿದುಕೊಂಡಿದ್ದರು. ಹೀಗಾಗಿ ಜನರು ರೊಚ್ಚಿಗೇಳುವುದು, ಬೀದಿಗಿಳಿಯುವುದು, ಬಂದ್ ಮಾಡುವುದೆಲ್ಲವೂ ಒಂದು ಲೆಕ್ಕದಲ್ಲಿ ಅವರಿಗೆ ಸಾಮಾನ್ಯವಾದ ಸಂಗತಿ. ಇಂತದ್ದೆಲ್ಲಾ...
ಜಲ್ಲಿಕಟ್ಟು- ಸೆಕ್ಯುಲರ್ ಗಳಿಗೆ ನುಂಗಲಾರದ ತುತ್ತು.
ಜಲ್ಲಿಕಟ್ಟಿನ ಪೊಲಿಟಿಕಲ್ ಹೈ ಡ್ರಾಮಾದಲ್ಲಿ ಎಡಪಂಥೀಯರು, ಬುದ್ಧಿಜೀವಿಗಳು(ಇತ್ಯಾದಿ ಸೆಕ್ಯುಲರ್ ಬಳಗಗಳು) ತೊಡಕಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದರೆ, ಇವರ ಮುಖವಾಣಿಗಳಾದ ಮಾಧ್ಯಮಗಳು ಜಲ್ಲಿಕಟ್ಟಿನ ವಿರುದ್ಧ ಮುಗಿಬೀಳಲು ಇನ್ನಿಲ್ಲದಷ್ಟು ಸಾಹಸ ಪಡುತ್ತಿವೆ. ಜಲ್ಲಿಕಟ್ಟಿನ ವಿವಾದದ ಶುರುವಿನಿಂದ ಇಲ್ಲಿಯತನಕ ನಡೆದ ಘಟನಾವಳಿಗಳನ್ನು ಬುದ್ಧಿಜೀವಿಗಳ ಹೇಳಿಕೆಗಳನ್ನು...
‘ದಂಡ’ ನಾಯಕರ ಈ ಮೌನ ಸಹ್ಯವೇ..?
ರಾಜ್ಯದಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಮೇಲೆ ನಿರಂತರವಾದ ದಾಳಿಗಳು ನಡೆಯುತ್ತಲೇ ಇವೆ. ಕೇವಲ ದಾಳಿಯಲ್ಲ, ಹಾಡು ಹಗಲೇ ಬರ್ಬರವಾಗಿ ಕೊಂದು ಹಾಕಲಾಗುತ್ತಿದೆ. ಅಮಾಯಕರನ್ನು ರಕ್ಷಿಸಿ, ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಾದ ಪೋಲಿಸರು, ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಯೇ ಹಿಂದೂ ಸಂಘಟನೆಗಳ ವಿರುದ್ಧ ಹೋರಾಡಿಯೆಂದು ಅಭಯ...
ಗಾಂಧೀಜಿ ಕನಸು ನನಸು ಮಾಡುತ್ತಿರುವ ಮೋದಿ ಸರ್ಕಾರ
ಬಹುಷಃ ನೂರಿಪ್ಪತ್ತೈದು ಕೋಟಿ ಜನಸಂಖ್ಯೆಯಿರುವ ಈ ದೇಶದಲ್ಲಿ ನೂರರಲ್ಲಿ ಒಬ್ಬರಿಗೆ ಕೂಡಾ ಖಾದಿ ಗ್ರಾಮೋದ್ಯೋಗ ಮಂಡಳಿ ಎನ್ನುವುದೊಂದಿದೆ ಮತ್ತು ಅದು ವರ್ಷಕ್ಕೊಮ್ಮೆ ಗಾಂಧೀಜಿಯ ಚಿತ್ರವಿರುವ ಕ್ಯಾಲೆಂಡರ್ ಬಿಡುಗಡೆ ಮಾಡುತ್ತದೆ ಎನ್ನುವ ವಿಷಯ ಗೊತ್ತಿದ್ದಿರಲಾರದು.ಆದರೆ ಯಾವಾಗ ಮಾಧ್ಯಮಗಳಲ್ಲಿ ಖಾದಿ ಗ್ರಾಮೋದ್ಯೋಗ ಮಂಡಳಿಯ ಕ್ಯಾಲೆಂಡರ್ ನಲ್ಲಿ ಗಾಂಧಿಯವರ ಜಾಗದಲ್ಲಿ ಮೋದಿ...
ದೇಶೀ ಅಖಾಡದಲ್ಲಿ ಬೆಳೆದು ವಿದೇಶಗಳಿಗೆ ರಫ್ತಾಗುತ್ತಿರುವ ವಿಜೇಂಧರರು..!!
ಕೆಲದಿನಗಳ ಹಿಂದಷ್ಟೇ ಬಾಕ್ಸರ್ ವಿಜೇಂದರ್ ಸಿಂಗ್ ಟಾಂಜೇನಿಯಾದ ಫ್ರಾನ್ಸಿಸ್ ಚೆಕಾ ಅವರನ್ನು ಎಡೆಮುರಿ ಕಟ್ಟಿ ಸೋಲಿಸಿ ಎಂಟನೇ ಬಾರಿಗೆ ಪ್ರೊ-ಬಾಕ್ಸಿಂಗ್ನ ಪಂದ್ಯವನ್ನು ಗೆದ್ದ ಘಳಿಗೆಯನ್ನು ಅಂದು ನಡೆಯುತ್ತಿದ್ದ ಇಂಡಿಯಾ ಹಾಗು ಇಂಗ್ಲೆಂಡ್ ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕಿಂತ ಹೆಚ್ಚಾಗಿ ಚರ್ಚಿಸಲಾಯಿತು. ಬಹುಷಃ ವರ್ಷ ಪೂರ್ತಿ ಕ್ರಿಕೆಟ್ನ ಜ್ವರದಲ್ಲೇ ಮುಳುಗುವ...