Featured

Featured ಅಂಕಣ

ಭೂಪಟ ಬಿಡಿಸುವಾಗ ಒಮ್ಮೆ ಈ ಭೂಪನ ನೆನಪಿರಲಿ.

ದೇಶ ಜೋಡಿಸುವ ಕೆಲಸವನ್ನು ಸ್ವಇಚ್ಛೆಯಿಂದ ಹೆಗಲ ಮೇಲೆ ಹೊತ್ತುಕೊಂಡ ಪಟೇಲರು ನಮ್ಮ ದೇಶದ ಹೊರತು ಬೇರೆ ದೇಶಗಳಲ್ಲಿದ್ದರೆ ವಿಶ್ವಮಾನ್ಯರಾಗುತ್ತಿದ್ದರು. ನಮ್ಮ ದೇಶದ ದುರ್ದೈವವೆಂದರೆ ನಮ್ಮ ದೇಶದ ಮಕ್ಕಳಿಗೆ ಪಟೇಲರು ಚಿರಪರಿಚಿತರಾಗಲಿಲ್ಲ. ಮೋತಿಲಾಲ್ ನೆಹರುವಿನಿಂದ ಹಿಡಿದು ರಾಹುಲ್ ಗಾಂಧಿಯವರೆಗೆ ಎಲ್ಲರೂ ಪಠ್ಯದಲ್ಲಿ ಬಂದು ಹೋದರು. ಆದರೆ ಪಟೇಲರಂಥ ಧೀಮಂತ ವ್ಯಕ್ತಿಗೆ...

Featured ಅಂಕಣ

ಶರಾವತಿ ಕಣಿವೆಯ ಅದ್ಭುತ ಜಲಪಾತ  –  ದಬ್ಬೆ

ನಿಟ್ಟೂರಿನ ಮಂಜಣ್ಣನವರ ನಿಸರ್ಗಧಾಮದಲ್ಲಿ ಕಡುಬು ತಿಂದಲ್ಲಿಯವರೆಗೆ ಕಳೆದ ಸಂಚಿಕೆಯಲ್ಲಿ  ಓದಿರುವಿರಿ. ತಿಂದ ಹುರುಪಿನಲ್ಲಿ ನಾವು ಎರಡನೇ ದಿನದ ಚಾರಣಕ್ಕೆ ಸಿದ್ಧರಾದೆವು. ಮೂರು ಗಂಟೆಗಳ ಬಸ್ ಪ್ರಯಾಣ; ಫೋಟೋ ತೆಗೆಯುವ ಆಸಕ್ತಿ ನನಗೆ ತೀವ್ರವಿರುವುದರಿಂದ ಚಾಲಕನ ಪಕ್ಕದಲ್ಲಿರುವ ಗೇರ್’ಬಾಕ್ಸ್‍ನಲ್ಲೇ ಕುಳಿತೆ. ಬಸ್ ಪ್ರಯಾಣದಲ್ಲೂ ಹಕ್ಕಿಗಳನ್ನು ನೋಡುವುದನ್ನು...

Featured ಪರಿಸರದ ನಾಡಿ ಬಾನಾಡಿ

ಚಾರಣದಲ್ಲಿ ಕಂಡ ಬಾನಾಡಿಗಳು – 1

  ಕಳೆದ ನವೆಂಬರ್ ತಿಂಗಳಲ್ಲಿ (2016) ಯೂತ್ ಹಾಸ್ಟೇಲ್ ಗಂಗೋತ್ರಿ ಘಟಕ, ಮೈಸೂರು ವತಿಯಿಂದ ಶಿವಮೊಗ್ಗ ಜಿಲ್ಲೆಯ ಕೊಲ್ಲೂರು ಸಮೀಪದ ಹಿಡ್ಲುಮನೆ ಜಲಪಾತ ಮತ್ತು ಸಾಗರ ಸಮೀಪದ ದಬ್ಬೆ ಜಲಪಾತಗಳಿಗೆ ಚಾರಣವನ್ನೇರ್ಪಡಿಸಿದ್ದರು. ನಾನು ಸೇರಿ ಐವತ್ತು ಮಂದಿ ಆ ಚಾರಣಕ್ಕೆ ಅಂದು ಸಿದ್ದರಿದ್ದೆವು. ಯೂತ್ ಹಾಸ್ಟೇಲ್‍ನ ಚಾರಣದ ಮಜವೇ ಬೇರೆ. ಅವರುಗಳು ಆಯ್ದುಕೊಳ್ಳುವ ಜಾಗಗಳೇ...

Featured ಪ್ರವಾಸ ಕಥನ

ಇನ್ನೂ ಒಂದೆರಡು ದಿನ ದುಬೈಯಲ್ಲಿದ್ದು ಬಿಡೋಣ ಅಂತನಿಸಿದ್ದು ಮಾತ್ರ ಸುಳ್ಳಲ್ಲ

ದುಬೈ ಪ್ರವಾಸ ಶುರುವಾಗುವ ಮುನ್ನವೇ ಪ್ರವಾಸದ ಅನುಭವವನ್ನು ಬರೆಯಬೇಕು ಅಂತ ನಿರ್ಧರಿಸಿಬಿಟ್ಟಿದ್ದೆ. ಆದರೆ ಪ್ರವಾಸ ಮುಗಿಸಿ ಬರುವಷ್ಟರಲ್ಲಿ ಶುರುವಾದ ಕೆಲಸದ ಒತ್ತಡಗಳು ಅನುಭವವನ್ನು ಬರೆಯುವುದಕ್ಕೆ ಅನುಕೂಲ ಮಾಡಿಕೊಟ್ಟಿರಲಿಲ್ಲ. ಇವತ್ತು ಬರೆಯಬೇಕು ನಾಳೆ ಬರೆಯಬೇಕು ಎಂದುಕೊಳ್ಳುತ್ತಲೇ ಎರಡೂವರೆ ತಿಂಗಳು ಕಳೆದು ಹೋಗಿದ್ದೇ ಗೊತ್ತಾಗಲಿಲ್ಲ. ಇನ್ನು ಬರೆಯದಿದ್ದರೆ...

Featured ಅಂಕಣ

ಅರ್ನಬ್ ಗೋಸ್ವಾಮಿ ಹಾಗೂ ರಿಪಬ್ಲಿಕ್ ಟಿವಿ !

ನಿನ್ನೆ ಸೂಪರ್ ಶನಿವಾರ, ಯಾಕೆ ಅಂದರೆ ನ್ಯೂಸ್ ಎನ್ನುವುದು ಭಾರತದಲ್ಲಿ ಪುನಃಸ್ಥಾಪನೆಯಾಯಿತು. ಅಂದರೆ, ‘ಅರ್ನಬ್ ಗೋಸಾಮಿ ಇಸ್ ಬ್ಯಾಕ್’! ನಾನಂತೂ ನ್ಯೂಸ್ ನೋಡುವುದನ್ನು ಬಿಟ್ಟು ಆರು ತಿಂಗಳಾಗಿತ್ತು. ನನ್ನೊಬ್ಬನ ವಿಷಯವಲ್ಲ , ದೇಶದ ಜನರಿಗೆ ಕಳೆದ ಆರು ತಿಂಗಳಿಂದ  ಒಂಬತ್ತು ಗಂಟೆ ಆಗುತ್ತಿದ್ದಂತೆ ‘ಏನೋ ಮಿಸ್ಸಿಂಗ್’ ಅನಿಸ್ತುತ್ತಾ...

Featured ಸಿನಿಮಾ - ಕ್ರೀಡೆ

ಹೆಸರಲ್ಲಷ್ಟೇ ಅಲ್ಲ ಮೈದಾನದ ಒಳಗೆ ಮತ್ತು ಹೊರಗೂ “ಗಂಭೀರ”ನೀತ!

2009ರ ನ್ಯೂಜಿಲೆಂಡ್ ವಿರುದ್ಧದ ನೇಪಿಯರ್ ಟೆಸ್ಟ್. ದ್ರಾವಿಡ್, ಸಚಿನ್, ಲಕ್ಷ್ಮಣ್ ಉತ್ತಮ ಆಟದ ಹೊರತಾಗಿಯೂ ಭಾರತ ಫಾಲೋ ಆನ್ ಪಡೆದಿತ್ತು. ಇನ್ನೂ ಎರಡು ದಿವಸಗಳ ಆಟ ಬಾಕಿ ಉಳಿದಿದ್ದರಿಂದ ಮತ್ತು ನ್ಯೂಜಿಲೆಂಡ್ ಚಳಿಯಲ್ಲಿ ಆಡುವುದು ಬಹಳ ಕಷ್ಟವಾಗಿದ್ದರಿಂದ ಭಾರತೀಯರು ಪಂದ್ಯ ಉಳಿಸಿಕೊಳ್ಳುವುದು ಅಸಾಧ್ಯ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಊಹಿಸಲಸಾಧ್ಯವಾದ ರೀತಿಯಲ್ಲಿ...

Featured ಪ್ರಚಲಿತ

ಕುಂ.ವೀ.ಅವರಿಗೆ ಒಂದಷ್ಟು ಪ್ರಶ್ನೆಗಳು

ಕನ್ನಡದ ಶ್ರೇಷ್ಠ ಸಹಿಷ್ಣು ಸಾಹಿತಿಗಳಾದ ಕುಂ.ವೀರಭದ್ರಪ್ಪನವರಿಗೆ ನಮಸ್ಕಾರಗಳು. ಇತ್ತೀಚಿಗೆ ತಾವು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವೊಂದರಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡುತ್ತಾ “ರಾಮಚಂದ್ರಾಪುರ ಮಠದ ಸ್ವಾಮೀಜಿಗಳಿಗೆ ಸೆಗಣಿ ಅಂದರೆ ಗೊತ್ತಿಲ್ಲ,ಆದರೆ ಹಸುಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ,ಕನ್ನಡ ಗೋಪಾಲಕರಿಂದ ಉಳಿದಿದೆ”...

Featured ಅಂಕಣ

ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು?

ಅದೊಂದು ಶ್ರದ್ಧಾಂಜಲಿ ಸಭೆ. ಸಮಾಜದ ಗಣ್ಯವ್ಯಕ್ತಿಯೊಬ್ಬ ತೀರಿಕೊಂಡಿದ್ದಾನೆ. ಆತನನ್ನು ಹತ್ತಿರದಿಂದ ಬಲ್ಲ ಅನೇಕರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಒಡನಾಟದ ದಿನಗಳನ್ನು ಹಂಚಿಕೊಂಡಿದ್ದಾರೆ. ಎಲ್ಲರ ಮಾತುಗಳಾದ ಮೇಲೆ ಆಕೆ ಬಂದು ನಿಂತಿದ್ದಾಳೆ. “ಇಂವ, ಅಲ್ಲಿ ಗೋರಿಯಲ್ಲಿ ತಣ್ಣಗೆ ಮಲಗಿದಾನಲ್ಲ, ಹಾಗೆ ಅಲ್ಲಿ ಮಲಗಿರುವಾಗಲೂ ಸಶಬ್ದವಾಗಿ ಹೂಸು ಬಿಡುತ್ತಾನೆ...

Featured ಅಂಕಣ

ಮನುಷ್ಯರಲ್ಲಿ ಮಾತ್ರವಲ್ಲದೇ, ಪಕ್ಷಿಗಳಲ್ಲೂ ಆತ್ಮಹತ್ಯಾ ಪ್ರವೃತ್ತಿ ಇದೆಯೇ?

ಅದು ಆಸ್ಸಾಂ ರಾಜ್ಯದ “ಜತಿಂಗಾ” ಎಂಬ ಸಣ್ಣ ಹಳ್ಳಿ. ಅಲ್ಲಿನ ಜನಸಂಖ್ಯೆ ಸುಮಾರು 2500ರಷ್ಟಿರಬಹುದು. ಆಗಷ್ಟೆ ಮಾನ್ಸೂನ್ ಅವಧಿ ಮುಗಿದು ಚಳಿಗಾಲದ ಪ್ರಾರಂಭ. ಅಂದರೆ ಸಪ್ಟೆಂಬರ್ ದಿಂದ ನವೆಂಬರ್ ನಡುವಣದ ದಿನಗಳು. ಸಂಜೆ ಸುಮಾರು 7 ರಿಂದ ರಾತ್ರಿ 10 ಗಂಟೆಯ ನಡುವಿನ ಅವಧಿ. ಆಗ ಪ್ರಾರಂಭವಾಗುತ್ತದೆ, ಪಕ್ಷಿಗಳ ಸಾಮೂಹಿಕ ಆತ್ಮಹತ್ಯೆಯ ಮಾರಣಹೋಮ. ಆಶ್ಚರ್ಯವಾಗುತ್ತಿದೆಯೇ...

Featured ಅಂಕಣ

ದೆಹಲಿಯ ಜನರ ಉತ್ತರಕ್ಕೆ ಸ್ವಯಂಘೋಷಿತ ಆಮ್ ಆದ್ಮಿಗಳು ತತ್ತರ!!

ಇತ್ತೀಚಿಗೆ ನಡೆದ ಪಂಜಾಬ್ ಮತ್ತು ಗೋವಾ ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದೇ ಗೆಲ್ಲುತ್ತೇವೆಂದು ಅಬ್ಬರಿಸಿ ಬೊಬ್ಬಿರಿದಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲರು ಚುನಾವಣಾ ಫಲಿತಾಂಶದ ದಿನ ನಿಂತಲ್ಲಿಯೇ ಬೆವತಿದ್ದರು. ಪಂಜಾಬಿನಲ್ಲಿ ಆಮ್ ಆದ್ಮಿಗಳ ಮರ್ಯಾದೆ ಸ್ವಲ್ಪವಾದರೂ ಉಳಿದಿತ್ತಾದರೂ ಗೋವಾದಲ್ಲಿ ಒಂದೂ ಸ್ಥಾನವನ್ನು ಗಳಿಸಲಾಗದೇ ಆಮ್ ಆದ್ಮಿ ಪಕ್ಷ ಮಕಾಡೆ...