ಕಾವೇರಿ ನೀರಿಗಾಗಿ ಯುದ್ಧವೊಂದು ಬಾಕಿಯಿದೆ ನೋಡಿ, ಅದನ್ನು ಬಿಟ್ಟರೆ ಕಾವೇರಿಯನ್ನು ಹಿಡಿದೆಳೆದು ಎಷ್ಟೆಲ್ಲಾ ಬೇಳೆ ಬೇಯಿಸಿಕೊಳ್ಳಬಹುದೋ ಅದನ್ನೆಲ್ಲಾ ಎರಡೂ ರಾಜ್ಯಗಳೂ ಈಗಾಗಲೇ ಮಾಡಿಬಿಟ್ಟಿವೆ. ಅದರಲ್ಲೂ ನಮ್ಮ ಕರ್ನಾಟಕದ್ದು ಸಿಂಹಪಾಲು. ರೈತರ ಪರವಾಗಿ ನಿಲ್ಲಬೇಕಿದ್ದ ಸೋ ಕಾಲ್ಡ್ ಪ್ರಜಾಪ್ರತಿನಿಧಿಗಳು ಅದ್ಯಾವಾಗ ತಮ್ಮ ಪ್ರಾತಿನಿಧ್ಯವನ್ನು ಗಟ್ಟಿಮಾಡಿಕೊಳ್ಳ ಹೊರಟರೋ...
ಪ್ರಚಲಿತ
ಕೇರಳಕ್ಕಿಂದು ತುರ್ತಾಗಿ ಬೇಕಿರುವುದು ಕಮ್ಯೂನಿಷ್ಟರಿಂದ ಮುಕ್ತಿ..
ಘಟನೆ ಒಂದು: ಅಂದು ಶ್ರೀಕೃಷ್ಣ ಜನ್ಮಾಷ್ಟಮಿ. ಅಲ್ಲಿ ರಾಧಾಕೃಷ್ಣ, ಯಶೋದೆಯರ ವೇಷ ಧರಿಸಿದ ಮಕ್ಕಳ ಮೆರವಣಿಗೆ ಸಾಗುತ್ತಿತ್ತು. ಜೊತೆಗೆ ಮಾತೆಯರ ಸಂಖ್ಯೆಯೂ ಸಾಕಷ್ಟಿತ್ತು. ಹಿನ್ನಲೆಯಲ್ಲಿ ಭಕ್ತಿಗೀತೆಗಳು ಮೆಲುದನಿಯಲ್ಲಿ ಕೇಳಿ ಬರುತ್ತಿತ್ತು. ಎಲ್ಲದಕ್ಕೂ ಪೋಲಿಸರ ಅನುಮತಿಯಂತು ಉತ್ಸವ ಸಮತಿ ತೆಗೆದುಕೊಂಡಿತ್ತು. ಮಕ್ಕಳೂ, ಹೆಂಗಸರೇ ಜಾಸ್ತಿ ಇದ್ದ...
ಬಂದ್ ಹೆಸರಲ್ಲಿ ಹಿಂಸೆ ನಡೆಸಿ ಸಾಧಿಸಿದ್ದೇನು?
ದಿನಾಂಕ 12-09-2016 ನೇ ಸೋಮವಾರ ರಾಜ್ಯದ ಸುದ್ದಿ ವಾಹಿನಿಗಳಲ್ಲಿ `ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ,ಕನ್ನಡದವರ ಮನೆ,ಅಂಗಡಿಗಳ ಮೇಲೆ ದಾಳಿ’ ಎಂಬ ಸುದ್ದಿ ಬಿತ್ತರವಾಗಲು ಶುರುವಾದ ಕೂಡಲೇ ಕಳೆದ ಶುಕ್ರವಾರ ಅಂದರೆ 8-9-2016ರಂದು ರಾಜ್ಯವ್ಯಾಪಿ ಬಂದ್ ಆಚರಿಸಿ ನಂತರ ತಕ್ಕಮಟ್ಟಿಗೆ ಶಾಂತವಾಗಿದ್ದ ರಾಜ್ಯ ರಾಜಧಾನಿ ಮತ್ತು ಮಂಡ್ಯ ಹೊತ್ತಿ ಉರಿಯತೊಡಗಿದವು...
ಬಂದ್ ಮಾಡಿ ಕಲ್ಲೆಸೆಯುವ ಮುನ್ನ….
“ಈ ಕರ್ನಾಟಕ ಬಂದ್ ಯಾಕೆ ಮಾಡಿದ್ದಾರೋ ಗೊತ್ತಿಲ್ಲ! ಕರ್ನಾಟಕ ಬಂದ್ ಮಾಡಿದರೆ ತಮಿಳುನಾಡಿಗೆ ಹೇಗೆ ನಷ್ಟ ಆಗುತ್ತೆ? ಕನ್ನಡಿಗರಿಗೆ ತಾನೇ ನಷ್ಟ ಆಗೋದು!? ತಮಿಳುನಾಡಿಗೆ ತೊಂದರೆ ಆಗಬೇಕಾದರೆ ನೀರಿನ ಸಮಸ್ಯೆ ಬಗೆಹರಿಯುವರೆಗೆ ಕರ್ನಾಟಕದಲ್ಲಿ ತಮಿಳುನಾಡಿಗೆ ಲಾಭ ಕೊಡುವುದನ್ನ ನಿಷೇಧ ಮಾಡಬೇಕು. ಉದಾಹರಣೆಗೆ ತಮಿಳು ಚಿತ್ರಗಳ ಬಿಡುಗಡೆಗೆ ನಿಷೇಧ, ತಮಿಳು ಚಾನಲ್‍ಗಳ...
ಬಡವರ ಅಡುಗೆ ಮನೆಯಲ್ಲಿ ನೀಲಿ ಹೂವು ಅರಳಿಸಿದವನದು ತಿರಪೆ ಸರ್ಕಾರವೇ?
ಅದು 1964 ನೇ ಇಸವಿ ಭಾರತದ ಪ್ರಥಮ ಪ್ರಧಾನಿ ಮರಣ ಹೊಂದಿದ್ದರು. ಪಟೇಲರನ್ನು ಹಿಂದೆ ತಳ್ಳಿ ಭರ್ತಿ ೧೭ ವರ್ಷ ಆಡಳಿತ ನಡೆಸಿ ಹೊರಟಿದ್ದರು. ಅವರ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಚೀನಾ ಯುದ್ಧದ ಸಂದರ್ಭದಲ್ಲಿ ಅವರು ಸ್ಪಂದಿಸಿದ್ದು ಉಲ್ಲೇಖನೀಯವೇ ಸರಿ. ಅದಕ್ಕೆ ಸಾಕ್ಷಿಯಾಗಿ ಭಾರತದ ಕೆಲವು ಪ್ರದೇಶಗಳು ಚೀನಾ ಭೂಪಟಕ್ಕೆ ಸೇರಿ ಹೋದವು. ಈಗ ಇರುವ ವಿಷಯ ಅದಲ್ಲ. ಒಮ್ಮೆ...
ದಾಯಾದಿ ಕಲಹಕ್ಕೆ ದೇಶಾಂತರ ತಿರುಗಿದರೆ ಪ್ರಯೋಜನವೇನು?
1996ರ ಮೇ ಹದಿನಾರನೆಯ ಗುರುವಾರ ದೆಹಲಿಯ ಪಾಲಿಗೆ ಸುಮ್ಮನೆ ಒಲಿದು ಬರಲಿಲ್ಲ ಎಂದು ಇಡೀ ದೇಶಕ್ಕೇ ಗೊತ್ತಿತ್ತು. ದಶಕಗಳ ಕಾಲ ಹುದುಗಿಟ್ಟ ಸಂತಸ ಕಾರ್ಯಕರ್ತರಲ್ಲಿ ಆ ದಿನ ಗಂಗೋತ್ರಿಯಂತೆ ಭೋರ್ಗರೆಯುತ್ತಿತ್ತು. ಅಂದು ಬರೇ ಅಟಲ್ ಬಿಹಾರಿ ವಾಜಪೇಯಿ ಭಾರತದ ಪ್ರಧಾನಿ ಪಟ್ಟವನ್ನೇರಲಿಲ್ಲ. ಬದಲಾಗಿ ಅನೇಕ ವರ್ಷಗಳಿಂದ ಕಾದು ಕುಳಿತು, ರಾತ್ರಿ ಹಗಲನ್ನು ಒಂದು ಮಾಡಿ...
ಆಪ್, ಸೆಕ್ಸ್ ಆ್ಯಂಡ್ ಧೋಕಾ
ಇನ್ನೂ ನೆನಪಿದೆ, ನನ್ನ ಕೆಲವು ಗೆಳೆಯರು ಒಳ್ಳೊಳ್ಳೆ ಕೆಲಸ ಬಿಟ್ಟು ಆಂದೋಲನ ಸೇರಿದ್ದರು. ಅವರ ತ್ಯಾಗ, ಪರಿಶ್ರಮದ ಫಲ ಆ ಯಶಸ್ಸು. ಆದರೆ ಅದರ ಲಾಭ ಪಡೆದುಕೊಂಡವರು ಕೆಲವು ನಾಟಕೀಯ ಖಾಸ್ ಆದಮಿಗಳು. ಮೊದಲು ನರಿಗಳ ಬುದ್ಧಿ ಗೊತ್ತಾಗಲಿಲ್ಲ, ಹೀಗಾಗಿ ಆಪ್ ಪಕ್ಷ ಹುಟ್ಟುಕೊಂಡಾಗ,ಅವರು ದೆಹಲಿಯಲ್ಲಿ ಆಡಳಿತಕ್ಕೆ ಬಂದಾಗ ಅವರ ಮೇಲೆ ಜನರಿಗೆ ಮೋದಿಜಿಯವರಿಗಿಂತ ಹೆಚ್ಚು ನಂಬಿಕೆ...
ಈ ಪ್ರಕರಣವನ್ನು ಮೋದಿಗೆ ಹೇಗೆ ಕನೆಕ್ಟ್ ಮಾಡೋದು?
ಅರವಿಂದ್ ಕೇಜ್ರಿವಾಲ್ ಅವರು ‘ಒಂದು ಪಕ್ಷಕ್ಕೆ ಯಾರ್ಯಾರನ್ನ ಆಯ್ಕೆ ಮಾಡಬಾರದು’ ಎಂಬ ವಿಷಯದ ಮೇಲೆ ಪುಸ್ತಕವನ್ನೇ ಬರೆಯಬಹುದು. ಅವರ ಒಬ್ಬ ಎಮ್.ಎಲ್.ಎ ಪವಿತ್ರ ಖುರಾನ್’ ಅನ್ನು ಅಗೌರವಿಸಿದರು, ಒಬ್ಬರು ತಮ್ಮ ಹೆಂಡತಿಯ ಮೇಲೆ ಕೈಮಾಡಿದರು, ಇನ್ನೊಬ್ಬರು ನಕಲಿ ಪದವಿಯಿಂದಾಗಿ ಸಸ್ಪೆಂಡ್ ಆಗಿದ್ದಾರೆ. ಪವರ್’ಕಟ್ ಬಗ್ಗೆ ಕೇಳಿದ್ದಕ್ಕೆ ಮಹಿಳೆಯೊಬ್ಬರ ಮೇಲೆ ಯುವಕನಿಂದ...
ಸಿದ್ದರಾಮಯ್ಯನವರು ಅದೇಕೆ ಈ ಇದ್ದಿಲನ್ನು ಇನ್ನೂ ಸೆರಗಿನಲ್ಲಿ ಕಟ್ಟಿಕೊಂಡಿದ್ದಾರೆ?
ಮೊದಲಿಗೆ ಈ ಕಥಾನಕವನ್ನು ವಡ್ಡರ್ಸೆ ರಘುರಾಮ ಶೆಟ್ಟರಿಂದ ಶುರು ಮಾಡೋಣ. 1984ರ ಸೆಪ್ಟೆಂಬರ್ 9ರಂದು ಮಂಗಳೂರಲ್ಲಿ “ಚಿಂತನೆಯ ಮಳೆ ಸುರಿಸಿ ಜನಶಕ್ತಿಯ ಬೆಳೆ ತೆಗೆವ ಮುಂಗಾರು” ಎಂಬ ಧ್ಯೇಯ ವಾಕ್ಯದೊಡನೆ ವಡ್ಡರ್ಸೆಯವರ ನಾಯಕತ್ವ, ಸಂಪಾದಕತ್ವದಲ್ಲಿ ಮುಂಗಾರು ದಿನಪತ್ರಿಕೆ ಶುರುವಾಯಿತು. ಅದರ ಉದ್ಘಾಟನೆ ಮಾಡಿದವರು ಆ ಕಾಲದ ಬುದ್ಧಿಜೀವಿ, ಸಾಕ್ಷಿಪ್ರಜ್ಞೆ...
¨ಭಯೋತ್ಪಾದನೆಗೆ ಧರ್ಮ ಇಲ್ಲ. ಹಾಗಾದರೆ ಭಯೋತ್ಪಾದಕರ ಧರ್ಮ ಯಾವುದು!?
ಇದು ಯಾರನ್ನು ನಂಬಿಸುವ ಪ್ರಯತ್ನವೋ ಗೊತ್ತಿಲ್ಲ. ಆದರೆ ಪ್ರತೀ ಬಾರಿ ಭಯೋತ್ಪಾದಕರ ಅಟ್ಟಹಾಸ ನಡೆದಾಗ, ಒಂದಷ್ಟು ಅಮಾಯಕರನ್ನು ನಿರ್ಧಯವಾಗಿ ಕೊಂದು ಬಿಸಾಕಿದಾಗ ‘ಭಯೋತ್ಪದಾಕರಿಗೆ ಧರ್ಮವಿಲ್ಲ. ಅವರನ್ನು ಮುಸಲ್ಮಾನೆರೆಂದು ಕರೆಯಬೇಡಿ’ ಎಂಬ ತಿಪ್ಪೆ ಸಾರುವ ಕೆಲಸ ನಡೆಯುತ್ತಲೇ ಬರುತ್ತಿದೆ! ಸದ್ಯದ ಮಟ್ಟಿಗಂತೂ ಇದನ್ನು ಯಾರೂ ನಂಬುವ ಸ್ಥಿತಿಯಲ್ಲಿಲ್ಲ! ಇದೊಂಥರಾ...