“ದೇವತೆಗಳ ನಾಡು” ಎನ್ನುವ ಅನ್ವರ್ಥನಾಮ ಪಡೆದಿರುವ ಈ ರಾಜ್ಯವನ್ನು ವರ್ಣಿಸಲು ಪದಗಳೇ ಸಾಲದು. ಅದೆಷ್ಟು ಸುಂದರ, ಎಲ್ಲಿ ನೋಡಿದರಲ್ಲಿ ಸಸ್ಯ ಶಾಮಲೆಯಿಂದ ಕಂಗೊಳಿಸಿ, ಹಸಿರುಡಿಗೆ ಉಟ್ಟ ಭೂರಮಣಿ, ನೋಡಲು ಕಣ್ಣುಗಳೆರಡು ಸಾಲದು. ದ್ವೀಪವನ್ನು ಸೃಷ್ಟಿಸಿದಂತಿರುವ ಸಮುದ್ರ ಕಿನಾರೆಗಳು, ಸ್ವರ್ಗವೇ ಧರೆಗೆ ಇಳಿದು ಬಂದಂತಿರುವ ಅಂದದ ಪ್ರಾಚೀನ ದೇಗುಲಗಳ...
ಅಂಕಣ
ರಾಷ್ಟ್ರವಿರೋಧಿ ಚಿಂತನೆಗೆ ಹಲವು ಮುಖ…
ಇಷ್ಟು ದಿನ ಎಲ್ಲಿದ್ದರು ಇವರೆಲ್ಲ ? ಇವರೆಲ್ಲ ಯಾರು? ಭಾರತದ ಸಾರ್ವಭೌಮತೆಗೆ ಸದಾ ಧಕ್ಕೆ ತರುವವರು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶದ ಮಾನವನ್ನು ಹರಾಜಾಕುವವರು, ದೇಶಕ್ಕಾಗಿ ಪ್ರಾಣ ಕೊಡುವ ಸಾವಿರಾರು ಸೈನಿಕರ ಆತ್ಮಸ್ಥೈರ್ಯವ ಕುಗ್ಗಿಸುವವರು, ದೇಶದ ಪ್ರಧಾನಿಯನ್ನು ಮನಬಂದಂತೆ ಹೀಯಾಳಿಸುತ್ತಿರುವವರು, ಜ್ಞಾನಾರ್ಜನೆಯ ಕೇಂದ್ರವಾದ ವಿಶ್ವ ವಿದ್ಯಾಲಯಗಳಲ್ಲಿ...
ವರಶರಾವತೀ ತೀರದಲಿ ಮಿಂಚಿ ಮರೆಯಾದ ನಕ್ಷತ್ರ -ಕಣ್ಣೀಮನೆ.
ಸರಿಸುಮಾರು ಹತ್ತೋ ಹನ್ನೆರಡು ವರ್ಷದ ಹಿಂದಿನ ನೆನಪಿನ ಬುತ್ತಿಯನ್ನು ಬಿಚ್ಚಿಡಹೊರಟಿದ್ದೇನೆ ಇಂತಿ ನಿಮ್ಮ ಪ್ರೀತಿಯ ಗೆಳೆಯ ಪ್ರಮೋದ. ಬನ್ನಿ ಬುತ್ತಿಯನ್ನು ಹಂಚಿತಿನ್ನೋಣವಂತೆ! ವರ್ಷ 2005 ಇರಬೇಕು. ಅದೊಂದು ದಿನ ಸರಿಯಾಗಿ ಘಂಟೆ 4:30 ಕ್ಕೆ ನಮ್ಮ ಕನ್ನಡ ಶಾಲೆಯ ದಿನಚರಿ ಮುಗಿದಿತ್ತು. ನಾನು ಮತ್ತು ನನ್ನ ಜೀವದ ಗೆಳೆಯ ಊರ ಸುತ್ತಮುತ್ತಲಿನ ಗುಡ್ಡ ಬೆಟ್ಟ ಅಲೆದಾಡಿ...
ಬದಲಾಗಲೀ ದೃಷ್ಠಿಕೋನ, ಮಹಿಳೆಯರನ್ನು ಗೌರವಿಸೋಣ…
ನೋ……! ನೋ ಎಂದರೆ ಕೇವಲ ಒಂದು ಶಬ್ದವಲ್ಲ, ಅದು ಒಂದು ವಾಕ್ಯವೂ ಆಗುತ್ತದೆ. ನೋ ಎಂದರೆ, ನನಗೆ ಬೇಡ, ಇಷ್ಟವಿಲ್ಲ ಎಂಬ ಅರ್ಥ ನೀಡುತ್ತದೆ. ಅವಳು ಒಂದು ಹುಡುಗಿಯಾಗಿರಬಹುದು, ಲೈಂಗಿಕ ಕಾರ್ಯಕರ್ತೆಯಾಗಿರಬಹುದು, ನಿಮ್ಮ ಗರ್ಲ್’ಫ್ರೆಂಡ್ ಆಗಿರಬಹುದು ಅಥವಾ ನಿಮ್ಮ ಹೆಂಡತಿಯೇ ಆಗಿರಬಹುದು, ನೋ ಎಂದರೆ ಬೇಡ, ನನಗೆ ಇಷ್ಟವಿಲ್ಲ ಎಂದರ್ಥ. ಮೇಲಿನ ಈ ವಾಕ್ಯ...
ಜೀವನ ಕಟ್ಟಿದ ಸಮಾಜಕ್ಕಿಂದು ನೀಡಬೇಕಿದೆ ನಿನ್ನ ಕೊಡುಗೆಯೊಂದು…
ಅದು 1988 ರ ಮಳೆಗಾಲ. ಮುಂಬೈ ನ ಮೆಡಿಕಲ್ ಶಾಪೊಂದರ ಗೋಡೆಯ ಮೇಲೆ ಟಿವಿ ಸೀರಿಯಲ್ ಒಂದರ ಪೋಸ್ಟರ್ ಚಿಟ-ಪಟ ಮಳೆಗೆ ನೆನೆದು ಕರಗುತ್ತಿರುತ್ತದೆ. ‘FAUJI’ ಎಂಬ ಶೀರ್ಷಿಕೆಯ ಆ ಪೋಸ್ಟರ್ನಲ್ಲಿ ಎಣ್ಣೆ ಮೆತ್ತಿದ್ದ ಮುಖ, ಗೇರಣ್ಣಿನ ಆಕೃತಿಯ ಮೂಗು, ಹಾಗು ಹುಬ್ಬಿದ ತುಟಿಗಳೊಟ್ಟಿಗೆ ಮಿಲಿಟರಿ ಸಮವಸ್ತ್ರ ಧರಿಸಿ ನಿಂತಿದ್ದ ನಾಯಕನನ್ನು ಕಂಡು ಅಲ್ಲಿ ನೆರೆದಿದ್ದ ಜನ...
ಹಳ್ಳಿಗಳನ್ನು ಬೆಸೆಯುತ್ತಿರುವ ಕರ್ಮಯೋಗಿಗೆ ಪದ್ಮಪ್ರಶಸ್ತಿಯ ತುರಾಯಿ
ಕರ್ನಾಟಕದ ಕರಾವಳಿ ಭಾಗದಲ್ಲಿರುವ ಸುಳ್ಯ, ಅಲ್ಲಿನ ಮುಳ್ಳೇರಿಯ ಎಂಬ ಹೋಬಳಿಯಲ್ಲಿ ಮವಾರು ಎಂಬ ಗ್ರಾಮದ ಒಲೆಕ್ಕೆಳ ಮನೆತನದ ಮಾಣಿ, ಮಂಡ್ಯದ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಗಿದೆ. ಇನ್ನೇನು ಪದವಿಪತ್ರ ಹಿಡಿದು ಬೆಂಗಳೂರು ಸೇರುತ್ತೇನೆ, ಕಂಪೆನಿಯಲ್ಲಿ ಕೈ ತುಂಬಾ ಸಂಬಳ ಗಳಿಸುವ...
ಮನಸ್ಸೆಂಬ ಮದ್ದು!!
ಈ ಮನಸ್ಸು ಅನ್ನುವುದು ಎಷ್ಟು ವಿಚಿತ್ರವಾದದ್ದೋ ಅಷ್ಟೇ ವಿಶೇಷವಾದದ್ದು ಕೂಡ ಹೌದು. ’ನೀವೇನು ಯೋಚಿಸುತ್ತೀರೋ ಅದೇ ಆಗುವಿರಿ’ ಎನ್ನುವಂತಹ ಮಾತುಗಳು, ನೆಪೊಲಿಯನ್ ಹಿಲ್’ನ “ನಮ್ಮ ಮನಸ್ಸು ಏನೇನೆಲ್ಲಾ ಗ್ರಹಿಸಬಲ್ಲದೋ, ನಂಬಬಲ್ಲದೋ ಅದನ್ನೆಲ್ಲ ಸಾಧಿಸಬಹುದು” ಎಂಬ ಮಾತುಗಳು ಅಚ್ಚರಿಯನ್ನುಂಟುಮಾಡುತ್ತದೆ. ಕೆಲವೊಮ್ಮೆ ಇದೆಲ್ಲಾ ಎಲ್ಲಿ ಸಾಧ್ಯ ಎಂಬಂತಹ ಯೋಚನೆಗಳು ಕೂಡ...
ಪ್ರೇಮಪತ್ರ
ಓ ಪ್ರಿಯಾ, ಹೇಗಿದ್ದೀಯಾ? ಅದೆಷ್ಟು ವರ್ಷ ಆಗೋಯ್ತೊ ನಿನ್ನ ನೋಡದೆ! ಯಾಕೊ ನಿನ್ನ ಮುನಿಸಿನ್ನೂ ಹೋಗಿಲ್ವೇನೊ? ಅಲ್ಲ ಅಲ್ಲ ಅದು ಮುನಿಸಲ್ಲ. ಮತ್ತೆ ನಾನೆ ನಿನ್ನ ಮಾತಾಡಿಸಬೇಕು ಅಂತ ಇಷ್ಟು ವರ್ಷ ಕಾದೆಯೇನೊ? ಕೊಬ್ಬು ಕಣೊ ನಿನಗೆ. ಅಲ್ಲಾ ಆ ದಿನ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿರುವಾಗ ಅಕಸ್ಮಾತ್ ನೀ ಸಿಕ್ಕಾಗ ಆದ ಸಂತೋಷದಲ್ಲಿ ಮಾತೆ ಹೊರಡಲಿಲ್ಲ. ನೀನೂ...
ಮಹಾರಾಷ್ಟ್ರದ ಮೋದಿಯಾಗುವತ್ತ ಫಡ್ನಾವೀಸ್ ಚಿತ್ತ!
೨೦೧೪ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಭಾರತೀಯ ಜನತಾ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಹುಡುಕಾಟ ಶುರುವಾಗಿತ್ತು. ದಿವಂಗತ ಪ್ರಮೋದ್ ಮಹಾಜನ್, ದಿವಂಗತ ಗೋಪಿನಾಥ್ ಮುಂಡೆ ಬಳಿಕ ಮಹಾರಾಷ್ಟ್ರ ಬಿಜೆಪಿಯಲ್ಲಿ ಪ್ರಾಬಲ್ಯ ಸಾಧಿಸಿದ್ದ ನಿತಿನ್ ಗಡ್ಕರಿ ಕೇಂದ್ರ ಸಚಿವ ಸ್ಥಾನದಲ್ಲೇ ಮುಂದುವರಿಯುವ ಇಂಗಿತ...
ಉಲಿದದ್ದು ಮತ್ತು ಮನದಲ್ಲೇ ಉಳಿದದ್ದು
ಇತ್ತೀಚೆಗೆ, ಹೆಚ್ಚಿನವರ ತಲೆಯಲ್ಲಿ, ಹೇಗಾದರೂ ಸರಿ, “ಮಾತನಾಡಿದವನೇ ಮಹಾಶೂರ” ಎಂಬ ಭ್ರಮೆ ಪದರಗಟ್ಟಿದೆ. ಹಾಗಾಗಿ ಪದಗಳ ಮೇಲೆ ನಿಯಂತ್ರಣವೇ ಇಲ್ಲದಾಗಿದೆ. ಬೇಕಾಬಿಟ್ಟಿ ಹೇಳಿಕೆಗಳ ಹಳಹಳಿಕೆಯ ಗೀಳು ಇಂದು ರಾಜಕಾರಣಿಗಳಿಗಷ್ಟೇ ಸೀಮಿತವಾಗಿಲ್ಲ ಎನ್ನುವುದೇ ದೊಡ್ಡ ಗೋಳು. ಈಗೀಗ ಕೆಲವು ಸಾಹಿತಿ, ಚಿಂತಕ, ಹೋರಾಟಗಾರರೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಆದರೆ...