ಅಂಕಣ

ಅಂಕಣ

ಹಿಂದೂ ಅಧ್ಯಾತ್ಮ ಮತ್ತು ಸೇವಾ ಸಮ್ಮೇಳನ

Hindu Spiritual and Service Fair (HSSF) ಅಥವ ಹಿಂದೂ ಅಧ್ಯಾತ್ಮ ಮತ್ತು ಸೇವಾ ಸಮ್ಮೇಳನವೂ ಸತತ ಐದು ದಿನಗಳವರೆಗೂ 9th – 13th ಅಂದರೆ ಇದೇ ಮಾಸದಲ್ಲಿ ಬುಧವಾರದಿಂದ ಭಾನುವಾರದವರೆಗೆ ನಡೆಯಿತು. ಇದು ಬೆಂಗಳೂರಿನ ನಾಷನಲ್ ಕಾಲೇಜು ಮೈದಾನದಲ್ಲಿ ನಡೆದದ್ದು. ಭಾರಿ ಮಾತ್ರದಲ್ಲಿ ಜೋರಾಗಿಯೇ ಈ ಸಮ್ಮೇಳನ ನೆರೆವೇರಿತು, ಇದು ಕೇಲವ ಸಮ್ಮೇಳನವಾಗಿರಲಿಲ್ಲ. ದೇಶೀಯ...

ಅಂಕಣ

ಹತ್ತಿರವಿದ್ದರೂ ದೂರ ದೂರ….

ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮಿನ ಕೋಟೆಯಲಿ…. ಕೆಲವು ಹಾಡುಗಳೇ ಹಾಗೆ, ಇದ್ದಕ್ಕಿದ್ದ ಹಾಗೆ ನೆನಪಾಗಿ ಕಾಡುತ್ತವೆ. ಯಾವುದೋ ಘಳಿಗೆಯಲ್ಲಿ ಮನಸ್ಸು ಗುನಗತೊಡುಗುತ್ತದೆ ಕಾರಣಗಳ ಕಾಲದ ಪರಿವೆಯಿಲ್ಲದೆ, ಎಳೆ ಹಿಡಿದು ಹೊರಟರೆ ಪ್ರತಿಸಲವೂ ಹೊಸ ಅರ್ಥ ಹೊಸ ಭಾವ, ಎಂದಿಗೂ ಹಳೆಯದೆನಿಸದೆ ಬೇಜಾರೂ ಬಾರದೆ ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತದೆ. ಬಾಯಿ...

ಅಂಕಣ ಭಾವತರಂಗ

ಹ್ಯಾಪಿ ಟು ಬ್ಲೀಡ್? ರಿಯಲೀ??

ಈ ಹ್ಯಾಶ್ ಟ್ಯಾಗ್’ಗಳ ಭರಾಟೆ ಇಂದು ಸೋಷಿಯಲ್ ಮೀಡಿಯಾದಲ್ಲಿ ಮೂಲಭೂತ ಕರ್ತವ್ಯದಂತಾಗಿದೆ. ಅದೆಷ್ಟು ಟ್ಯಾಗ್’ಗಳು, ದಿನಕ್ಕೆ ಒಂದು ಹೊಸ ಟ್ಯಾಗ್ ಹುಟ್ಟದಿದ್ದರೆ ಮತ್ತೆ ಕೇಳಿ. ಒಂದು ಗುಂಪು ಏನೋ ಹಾಕುತ್ತದೆ ಅದಕ್ಕೆ ಪ್ರತಿವಾದ ಇದ್ದೇ ಇರುತ್ತದೆ, ಅಂತೂ ಟ್ಯಾಗ್ ಮುಂದುವರಿಯುತ್ತಲೇ ಇರುತ್ತದೆ. ಇದೆಲ್ಲಾ ಈಗ ಹೀಗನಿಸಲು ಕಾರಣವೂ ಇದೆ, ಹತ್ತಿರ ಹತ್ತಿರ ತಿಂಗಳಾಗುತ್ತಾ...

ಅಂಕಣ

ಬಣ್ಣ ಮಾಸದ ಕೆಂಪಡಿಕೆ..

ಅಂಗಳದಿ ಅಮ್ಮ ಹಾಕಿದ್ದ ರಂಗೋಲಿಯ ಮೇಲೆ ಇಬ್ಬನಿಯ ಸಿಂಚನವಾಗುತ್ತಿತ್ತು. ತಣ್ಣನೆಯ ಗಾಳಿ ಮನೆಯ ಜಗುಲಿಯನ್ನು ಅದ್ಯಾವುದೋ ಸಂದಿಯಿಂದ ಒಳ ಸೇರಿತ್ತು. ಕನಸುಗಳು ಕ್ಲೈಮಾಕ್ಸ್’ಗೆ ಬಂದಾಗ ನನ್ನ ನೆಚ್ಚಿನ ನಾಯಿ ಪ್ರಸ್ತುತದಲಿ ನನ್ನನ್ನು ಎಬ್ಬಿಸಿತ್ತು. ನಿನ್ನೆ ಬರಿಯ ನೆನಪಲ್ಲ ಅದು ಕನಸಾಗಿಯೂ ಆವರಿಸಿತ್ತು. ಅಮ್ಮ ಬಾಗಿಲ ಒರೆಸುತ್ತ ಹಾಡುತ್ತಿದ್ದ ಹಾಡು ಆ ಬೆಳಗಿಗೆ...

ಅಂಕಣ

ಗುದ್ದೋಡು ಪ್ರಕರಣದಲ್ಲಿ ಬಲಿಯಾಯಿತು ನೋಡಿ ನಮ್ಮ ನ್ಯಾಯ!

ಅದು 2002ರ ಹಿಟ್ ಆ್ಯಂಡ್ ರನ್ ಪ್ರಕರಣ! ಆರೋಪಿ ಸಲ್ಮಾನ್’ಖಾನ್ ವಿರುದ್ಧ ಸಾಕ್ಷಿ ಹೇಳಲು ಕಟಕಟೆಗೆ ನಾಲ್ಕು ಸಾಕ್ಷಿದಾರರನ್ನು ಕರೆತರಲಾಗಿತ್ತು. ಮತ್ತು ಅವರೆಲ್ಲರೂ ಅಂದಿನ ದುರ್ಘಟನೆಯಲ್ಲಿ ಗಾಯಗೊಂಡು ಬದುಕುಳಿದವರು. ಅಂದರೆ ಪ್ರತ್ಯಕ್ಷ ಸಾಕ್ಷಿಗಳು. ಅವರಲ್ಲಿ ಒಬ್ಬ ಸಾಕ್ಷೀದಾರನ ಪ್ರಕಾರ ಘಟನೆ ನಡೆದಾಗ ಆರೋಪಿಯು ಅಂದರೆ ಸಲ್ಮಾನ್ ಕಾರಿನ ಬಲಗಡೆಯಿಂದೆದ್ದು ಬಂದಿದ್ದ...

ಅಂಕಣ

ರಿ೦ಗೋ ಹೊಸದೊ೦ದು ವಿರೋಧ..

ಭಾರತದಲ್ಲಿ ೧೯ನೇ ಶತಮಾನದಲ್ಲಿ ಅ೦ಚೆ ಸೇವೆ ಹೆಚ್ಚು ಚಾಲ್ತಿಯಲ್ಲಿದ್ದಿತು. ವಿಕಿಪೀಡಿಯಾದ ಪ್ರಕಾರ ೧೮೬೧ರ ಸಮಯದಲ್ಲಿ ಸುಮಾರು ಭಾರತದಲ್ಲಿ ೮೮೯ ಅ೦ಚೆ ಕಛೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಸುಮಾರು ೪೩೦ ಲಕ್ಷ ಪತ್ರಗಳು ೪೫ ದಿನಪತ್ರಿಕೆಗಳು ವಾರ್ಷಿಕವಾಗಿ ಅ೦ಚೆ ಮೂಲಕ ಸಾಗುತ್ತಿತ್ತು. ಕಾಲಕ್ರಮೇಣ ದೂರವಾಣಿ ಚಾಲ್ತಿಗೆ ಬ೦ದ ಮೇಲೆ ಅ೦ಚೆ ಬಳಕೆ ಸ್ವಲ್ಪ ಮಟ್ಟಿಗೆ...

ಅಂಕಣ

ಆ ಸಿಹಿಸುದ್ದಿಯನ್ನು ಕೇಳಲು ಅವರಿಗೆ ಸಾಧ್ಯವಿರುತ್ತಿದ್ದರೆ…?

೨೦೦೦ ನೇ ಇಸವಿ.. ದೇಶ ಕಾರ್ಗಿಲ್ ಯುದ್ಧದಲ್ಲಿ ಮಿಂದೆದ್ದಿತ್ತಷ್ಟೇ… ಮಡಿದ ಸೈನಿಕರ ಕುಟುಂಬಗಳಿಗೆ ಪರಿಹಾರ ನೀಡುವುದು, ಶೌರ್ಯ ಇತ್ಯಾದಿ ಪ್ರಶಸ್ತಿಗಳನ್ನು ಪ್ರಧಾನಿಸುವುದು, ಗಾಯಗೊಂಡವರ ಚಿಕಿತ್ಸೆ ಇತ್ಯಾದಿಗಳು ಭರದಿಂದ ಸಾಗಿತ್ತು. ಅದರ ಜೊತೆಗೆ ಯುದ್ಧ ಭೂಮಿಯ ಪುನಶ್ಚೇತನ. ಇದೆಲ್ಲ ಮುಗಿಯುವ ಮೊದಲೇ ಭಾರೀ ವಿವಾದವೊಂದು ಭುಗಿಲೆದ್ದಿತು. ಯುದ್ಧದಲ್ಲಿ ಮಡಿದ ಸೈನಿಕರ...

ಅಂಕಣ

ಕೆಲವರಿಗೇಕೆ ಮಡೆಸ್ನಾನದ ಮಂಡೆಬಿಸಿ ..?!

ತಂಬಾಕು ಸೇವನೆ ಆರೋಗ್ಯ ಹಾನಿಕರ…ಹಾಗಂತ ಸಿಗರೇಟು ಪ್ಯಾಕಿನ ಮೇಲೆ ದಪ್ಪ ಅಕ್ಷರದಲ್ಲಿ ಬರೆದಿರುತ್ತದೆ. ಸಿಗರೇಟು ಸೇದುವ ಎಲ್ಲರೂ ಕೂಡ ಅದನ್ನು ಓದಿರುತ್ತಾರೆ. ಆದಾಗ್ಯೂ ಧೂಮಪಾನ ಬಿಡುವುದಿಲ್ಲ. ಇದಕ್ಕೂ ಮಜ ಎಂದರೆ, ಕ್ಯಾನ್ಸರ್‌ಗೆ ಔಷಧ ನೀಡುವ ವೈದ್ಯನಿಗೂ ಸಿಗರೇಟಿನ ಚಟವಿರುವುದು! ಅಯ್ಯೊ, ನೀವು ತಿನ್ನುವ ದ್ರಾಕ್ಷಿಯಲ್ಲಿ ರಾಸಾಯನಿಕ ಇರುವುದಿಲ್ಲವಾ? ಈಗಿನ ಆಹಾರಗಳು...

ಅಂಕಣ

‘ಕಿಸ್ ಆಫ್ ಲವ್’: ಇದೀಗ ಮೂಲ ಬೇರೇ ಅಲುಗಾಡುತ್ತಿದೆ!

ರಾಹುಲ್ ಪಶುಪಾಲನ್, ರಶ್ಮಿ ನಾಯರ್! ಕಳೆದ ಒಂದು ವರ್ಷದ ಕೆಳಗೆ ಏಕಾಏಕಿ ರಾರಾಜಿಸಿ ಹೀರೋಗಳಾದ ಜೋಡಿ ಹೆಸರುಗಳಿವು. ಮಾಡಿದ್ದ ಘನಂದಾರಿ ಕೆಲಸವೇನೆಂದರೆ ಅಂದು ಸಾರ್ವಜನಿಕವಾಗಿ ‘ಕಿಸ್’ ಕೊಡುವ ಕಾರ್ಯಕ್ರಮವನ್ನು ಆಯೋಜಿಸಿ ‘ಕಿಸ್ಆಫ್ ಲವ್’ ಎಂಬ ವಿಭಿನ್ನ ಪ್ರತಿಭಟನೆಯನ್ನು ಆಯೋಜಿಸಿದ್ದರು! ಅಂದಹಾಗೆ ಇವರಿಬ್ಬರು ದಂಪತಿಗಳು ಬೇರೆ. ಹಿಂದೂ...

ಅಂಕಣ

ಹಿಂದೂ ಎನ್ನಲು ಹಿಂಜರಿಕೆಯೇಕೆ?

ನಾವು ಈಗಲಾದರೂ ಈ ದೇಶದಲ್ಲಿ ಭಾರತೀಯ ಅಂದರೆ ಯಾರು ಎಂಬುದರ ಬಗ್ಗೆ ಒಂದು ಸ್ಪಷ್ಟವಾದ ವ್ಯಾಖ್ಯೆ ಬರೆಯಬೇಕಾದ ಅಗತ್ಯವಿದೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನನಗೊಬ್ಬ ಸೌದಿ ಅರೇಬಿಯದಿಂದ ಬಂದ ವಿದ್ಯಾರ್ಥಿಯಿದ್ದ. ಆತನೊಮ್ಮೆ ನನ್ನ ಬಳಿ ಬಂದು “ನಿಮ್ಮಲ್ಲಿ ಕೇಳಬೇಕೆಂದು ಈ ಪ್ರಶ್ನೆಯನ್ನು ಒಬ್ಬರು ಕೊಟ್ಟಿದ್ದಾರೆ. ಇಸ್ಲಾಮ್ ಹೇಗೆ ಬೇರೆ ದೇಶಗಳಿಗೆ...