ಪರೀಕ್ಷೆಗೆಂದು ಓದಲು ಕುಳಿತಾಗ ಇಲ್ಲಸಲ್ಲದ್ದು ನೆನಪಾಗುವುದು ಹೆಚ್ಚು. ಚಿಂತನೆ ವಿಷಯದ ಆಳಕ್ಕಿಳಿಯುವ ಬದಲು ಮನಸ್ಸಿನ ಆಳಕ್ಕೆ ಇಳಿಯುತ್ತದೆ. ಎಲ್ಲೋ ಹುದುಗಿದ್ದ ನೆನಪನ್ನು,ಭವಿಷ್ಯದ ಕನಸನ್ನು ಹೆಕ್ಕಲು ಶುರುಮಾಡುತ್ತದೆ ಆಲಸಿ ಮನಸ್ಸು. ಹಾಗೆ ನೆನಪುಗಳ ಸರಮಾಲೆಯಿಂದ ಮೂಡಿ ಬಂದ ಮುತ್ತಿನಂತ ನೆನಪು ಆಲೆಮನೆ. ಈಗ ಮಲೆನಾಡಿನಲ್ಲಿ ಆಲೆಮನೆಯ ಸೀಸನ್ನು.ಸಿಹಿಕಬ್ಬಿನ ಹಾಲು...
ಅಂಕಣ
ಕೃಷ್ಣಾಷ್ಠಮಿ ಬರುವದರೊಳಗೆ ಕನ್ಹಯ್ಯನನ್ನು ಜನ ಮರೆತುಬಿಡುತ್ತಾರೆನೋ? – ರಾಜಕೀಯದ ಕ್ಯಾಂಪಸ್ ಸೆಲೆಕ್ಷನ್.
ಐಐಟಿಯಲ್ಲಿ ಕ್ಯಾಂಪಸ್ಸಿಗೆ ಬರುವ MNC ಗಳು ( Google, Microsoft or Facebook) ವಿದ್ಯಾರ್ಥಿಗಳು ಕಲಿಯುತ್ತಿರುವಾಗಲೇ ಕ್ಯಾಂಪಸ್ ಸೆಲೆಕ್ಷನ್ ಮಾಡಿ ಲಕ್ಷಗಟ್ಟಲೆ ಸಂಬಳ ಕೊಡುತ್ತವೆ ಎಂಬುದನ್ನು ಕೇಳಿದ್ದೇವೆ. ಐಐಎಮ್ ನಲ್ಲಿ ಓದುತ್ತಿರುವ ಹುಡುಗನೊಬ್ಬನಿಗೆ ಬ್ಯಾಂಕ್ ಆಫ್ ಅಮೇರಿಕಾ, ಅಥವಾ HSBC ಅಥವಾ ಸಿಟಿ ಬ್ಯಾಂಕ್, ಮ್ಯಾನೇಜಮೆಂಟ್ ಪದವಿಸಿಗುವ ಮೊದಲೇ ವೈಸ್...
ಎಲ್ಲ ಧರ್ಮಗಳೂ ಸಮಾನವಲ್ಲ, ಎಲ್ಲ ಧರ್ಮಗಳ ಗುರಿಯೂ ಒಂದೇ ಅಲ್ಲ.
ನಮ್ಮ ದೇಶದಲ್ಲಿ ಹಿಂದೂ, ಮುಸಲ್ಮಾನ, ಕ್ರೈಸ್ತ, ಪಾರಸೀ, ಬೌದ್ಧ, ಜೈನ, ಸಿಖ್ ಮುಂತಾದ ಮತಗಳನ್ನು ಗುರುತಿಸುತ್ತೇವೆ. ಆದರೆ ಕಾಲಾಂತರದಲ್ಲಿ ಈ ಮತಗಳು ಅಥವಾ religion ಗಳಿಗೆ ಪರ್ಯಾಯವಾಗಿ ”ಧರ್ಮ” ಎಂಬ ಶಬ್ದದ ಬಳಕೆಗೆ ತಪ್ಪಾಗಿ ಚಾಲ್ತಿಗೆ ಬಂದಿದೆ. ಇವುಗಳಲ್ಲಿ ”ಹಿಂದೂ” ಎಂಬುದು ಉಳಿದ religion ಗಳಂತೆ ಒಂದು ಮತವೇ ಅಲ್ಲ. ಈ...
ಜ್ಯೋತಿಷಿಯ ಒಂದು ದಿನ
ಕರಾರುವಕ್ಕಾಗಿ ಮಟ-ಮಟ ಮಧ್ಯಾಹ್ನದ ಸಮಯದಲ್ಲಿ ತನ್ನ ಹೆಗಲ ಮೇಲಿನ ಚೀಲವನ್ನು ತೆರೆದು ಒಂದು ಡಜನ್ ಕವಡೆಗಳು, ಅಸ್ಪಷ್ಟ ಅತೀಂದ್ರಿಯ ಪಟ್ಟಿ ಇರುವ ಚೌಕಾಕಾರದ ಬಟ್ಟೆ ತು೦ಡು, ನೋಟ್ ಬುಕ್ ಮತ್ತು ತಾಳೆಬರಹದ ಕಟ್ಟನ್ನೊಳಗೊಂಡ ತನ್ನೆಲ್ಲಾ ವೃತ್ತಿಪರ ಉಪಕರಣಗಳನ್ನು ಹರಡಿದ. ಹಣೆಯ ಮೇಲೆ ಪವಿತ್ರ ವಿಭೂತಿ ಮತ್ತು ಕುಂಕುಮದಿಂದ ಶೋಭಿತನಾದ,ತೀಕ್ಷ್ಣವಾಗಿ ಅಸಹಜವಾಗಿ...
ಸಾವರ್ಕರ್ ಎಂಬ ಸಾಹಸಿಗನ ಎದುರು ಹೇಡಿಯೆಂಬ ಶಬ್ದ ಹತ್ತಿರವೂ ಸುಳಿದಿರಲಿಲ್ಲ!
ಕಳೆದ ಭಾನುವಾರ ಭಾರತೀಯ ನ್ಯಾಷನಲ್ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಫೇಸ್ಬುಕ್ ಪೇಜಿನಲ್ಲಿ ಒಂದು ಪೋಸ್ಟ್ ಪ್ರಕಟಿಸಿತ್ತು. ಆ ಪೋಸ್ಟ್’ನಲ್ಲಿ ಈ ರೀತಿ ಬರೆಯಲಾಗಿತ್ತು. “ When Chandra Shekhar Azad was fighting against the British for our freedom, BJP ideologue Savarkar was begging for mercy from the British.” ಅಂದರೆ...
ವಾಸ್ತವ ಕನಸಿಗಿಂತ ಭಿನ್ನವೇ..?!
ಪೌಲೋನ ‘ಇಲೆವನ್ ಮಿನಟ್ಸ್’ ಪುಸ್ತಕ ಹಿಡಿದು ಕೂತವಳಿಗೆ ಡೆಡಿಕೇಷನ್ ನೋಡಿ ಆಶ್ಚರ್ಯ ಆಗಿತ್ತು. ಇಷ್ಟುದ್ದದ ಡೆಡಿಕೇಷನ್ ಯಾರಿಗಪ್ಪಾ ಅ೦ತ ಯೋಚಿಸುತ್ತಲೇ ಓದತೊಡಗಿದ್ದೆ. ಪೌಲೋನ ಈ ಪುಸ್ತಕ ಮುಗಿಯುವ ಹಂತದಲ್ಲಿದ್ದಾಗ ಫ಼್ರಾನ್ಸ್’ಗೆ ಭೇಟಿ ನೀಡಿದ್ದರು. ಅಲ್ಲಿ ಸುಮಾರು ೭೦ವರ್ಷದ ವೃದ್ಧರೊಬ್ಬರು ಇವರನ್ನು ಕಂಡು ಮಾತನಾಡಿಸಿ, “ನಿಮ್ಮ ಪುಸ್ತಕಗಳು ನನಗೆ ಕನಸು ಕಾಣುವಂತೆ...
ಮಾನ್ಯ ಮುಖ್ಯಮಂತ್ರಿಗಳೇ, ಇಲ್ಲಿವೆ ಸಪ್ತಸೂತ್ರಗಳು
ಮುಖ್ಯಮಂತ್ರಿಗಳು ಸುದ್ದಿಯಲ್ಲಿದ್ದಾರೆ. ಸಣ್ಣದಾಗಿ ಶುರುವಾದ ಕೈಗಡಿಯಾರದ ಟಿಕ್ಟಿಕ್ ಸದ್ದು ದೊಡ್ಡದಾಗುತ್ತಾ ಬಂದು ಟೈಂಬಾಂಬ್’ನ ಸದ್ದಿನಂತಾಗಿ ಇನ್ನೇನು ತನ್ನನ್ನು ಕುರ್ಚಿಯಿಂದ ಎತ್ತಿ ಒಗೆದೇ ಬಿಡುತ್ತದೆ ಎಂಬುದು ಖಾತರಿಯಾದ ಮೇಲೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದನ್ನು ಸಂತನಂತೆ ಕಳಚಿ ಸರಕಾರದ ಖಜಾನೆಯ ಹುಂಡಿಗೆ ಹಾಕಿದ್ದಾರೆ. ಈಗ ಅವರು ಅದೇನೇ ಸ್ಪಷ್ಟೀಕರಣ...
ಐನೂರು ರೂಪಾಯಿಗಳಲ್ಲಿ ನಾವು ಒಂದು ಕಿರುಚಿತ್ರವನ್ನು ಮಾಡಿದ್ದು ಹೇಗೆ?
2006. ಆಗ ಐನೂರು ರೂಪಾಯಿ ಎಂದರೆ ಕಡಿಮೆ ದುಡ್ಡೇನಲ್ಲ. ಆಗ ಪೆಟ್ರೋಲ್ ಬೆಲೆ ಐವತ್ತಕ್ಕಿಂತ ಕಡಿಮೆ ಇತ್ತು. ಆಗ ತಾನೆ ಇಂಜಿನಿಯರಿಂಗ್ ಮುಗಿಸಿದ್ದೆ. ಸಿನಿಮಾ ರಂಗದಲ್ಲಿ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದೆ. ಹೀಗೆಯೇ ಒಂದು ಸಂಜೆ ಗೆಳೆಯರೊಡನೆ ನಮ್ಮ ಟೀ ಅಂಗಡಿಯಲ್ಲಿ ಕೂತು ಟೀ ಕುಡಿಯುತ್ತಿದ್ದಾಗ ನನ್ನ ಗೆಳೆಯ ಕಾರ್ತಿಕ್ ಪ್ರಶಾಂತ್ ಒಂದು ಐಡಿಯಾ...
ಸ್ವಚ್ಚ ಕ್ರಾಂತಿ ಎಟ್ ಅಂಡಮಾನ್
ಮೊಟ್ಟ ಮೊದಲೆಯ ಸಾರಿ ಭಾರತ ನಕ್ಷೆಯನ್ನು ನೋಡಿದಾಗಿಂದ ಇವತ್ತಿನವರೆಗೂ ತಲೆಯಂತಿರುವ ಕಾಶ್ಮೀರದಿಂದ ಪಾದದ ಕನ್ಯಾಕುಮಾರಿವರೆಗೂ ಎಲ್ಲವನ್ನೂ ನೆನೆಪಿಟ್ಟುಕೊಂಡು ನಕಾಶೆ ಬಿಡಿಸುವ ನಾವು ಶಾಲೆಯಿಂದಲೇ ರೂಡಿ ಮಾಡಿಕೊಂಡಿದ್ದೇವೆ .ಕೆಳಗೆ ದಕ್ಷಿಣಕ್ಕೆ ಇರುವ ಮಾವಿನ ಕಾಯಿ ಗಾತ್ರದ ದೇಶವಾದ ಶ್ರೀಲಂಕಾವನ್ನು ನಾವು ಗುರುತಿಸುತ್ತೇವೆ,ಆದರೆ ನಮ್ಮದೇ ಆದ ಅಂಡಮಾನ್ ಮತ್ತು...
ಗ್ರಹಣಕ್ಕೊ೦ದು ಪುರಾಣ
ಖಗೋಳ ಪ್ರಿಯರಿಗೆ ಸಂತೋಷ ತರುವ ಸುದ್ದಿಯೊಂದಿದೆ. 2016ನೇ ವರ್ಷದಲ್ಲಿ ನಭದಲ್ಲಿ ಅಪರೂಪದ ವಿದ್ಯಮಾನ ಸಂಭವಿಸಲಿದೆ. ಈ ವರ್ಷ ಬರೋಬ್ಬರಿ ಐದು ಗ್ರಹಣಗಳು ಸಂಭವಿಸಲಿವೆ. ಭಾರತದಲ್ಲಿ ಗೋಚರಿಸುವುದು ಮಾತ್ರ ಎರಡೇ ಗ್ರಹಣಗಳು.. ಮಾರ್ಚ್ 9ರಂದು ಘಟಿಸಲಿರುವ ಸಂಪೂರ್ಣ ಸೂರ್ಯಗ್ರಹಣದೊಂದಿಗೆ ಈ ಗ್ರಹಣಗಳ ಸರಣಿ ಆರಂಭವಾಗಲಿದೆ. ಆದರೆ, ಈ ಸೂರ್ಯ ಗ್ರಹಣ ಗೋಚರಿಸುವುದು ಈಶಾನ್ಯ...