ಬೀದರ್ ಜಿಲ್ಲೆಯ ಮಾಣಿಕ್ ನಗರದ ಸಂಸ್ಥಾನದಲ್ಲಿ ನಾನು ಐದು ವರ್ಷ ಅಧ್ಯಾಪಕ ಆಗಿ ಕೆಲಸ ಮಾಡಿದ್ದೆ. ಅಲ್ಲಿ ಹೆಚ್ಚು ಮಹಾರಾಷ್ಟ್ರದಿಂದ ಬಂದ ವಿದ್ಯಾರ್ಥಿಗಳೇ ಇದ್ದರು. ಮಹಾರಾಷ್ಟ್ರದಲ್ಲಿ ಅಧ್ಯಾಪಕರನ್ನು ಗುರೂಜಿ ಅನ್ನೋದು ಸಾಮಾನ್ಯ. ಸ್ಕೂಲ್ ಮಾಸ್ಟರ್’ಗಳನ್ನೂ ಅಲ್ಲಿ ಹಾಗೆಯೇ ಕರೆಯುತ್ತಾರೆ. ಅಲ್ಲಿ ನನ್ನ ಕೈಯಲ್ಲಿ ಏಟು ತಿಂದು ಪಾಠ ಕಲಿತ ಹುಡುಗರು ಸುಮಾರು ಜನ...
Author - Dattaraj D
ಬ್ರಾಹ್ಮಣ ಅಂದರೆ ಪೂಜೆ ಪುನಸ್ಕಾರ ಮಾಡಿಕೊಂಡು ಇರುತ್ತಿದ್ದ ಪಾಪದ ಜೀವಿ...
ಪೌರೋಹಿತ್ಯ ಮಾಡೋದು ಮತ್ತು ದೇವಸ್ಥಾನ ಪೂಜೆ ಮಾಡೋದು ವೇದ ಶಾಸ್ತ್ರ ಓದಿಕೊಂಡ ಬ್ರಾಹ್ಮಣರ ಪ್ರಧಾನ ವೃತ್ತಿಯಾಗಿತ್ತು. ಆ ವೃತ್ತಿಗಳ ಕಾರಣದಿಂದ ಅವರು ಸಮಾಜವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಶೋಷಿಸಿದರು ಅನ್ನೋದು ಯುರೋಪಿಯನ್ ಇತಿಹಾಸಕಾರರು ಹುಟ್ಟು ಹಾಕಿದ ದೊಡ್ಡ ಸುಳ್ಳು. ಈ ಸುಳ್ಳಿನ ಆಧಾರದ ಮೇಲೆ ಮುಂದಿನ ಥಿಯರಿಗಳು ನಿಂತಿವೆ. ಇದು ಹೇಗೆ ಸುಳ್ಳು...
ಶಬರಿಮಲೈ ಮತ್ತು ಮಹಿಳಾ ಸಮಾನತೆ-3
ಸ್ರೀ ಪುರುಷ ಭೇದ: ಅಗ್ನಿ ಮತ್ತು ಸೋಮ ತತ್ವಗಳೆರಡರ ಸಮ್ಮಿಲದಿಂದ ಸೃಷ್ಟಿ ನಿರ್ಮಾಣವಾಗ್ತದೆ. ಸೃಷ್ಟಿಯ ಧಾರಣೆ ಮತ್ತು ಪೋಷಣೆಗೂ ಈ ಎರಡು ತತ್ವಗಳ ನಿರಂತರ ಸಾಮಂಜಸ್ಯ ಅಗತ್ಯವಾದದ್ದು. ಸೂರ್ಯನು “ಅಗ್ನಿ”ಯಾದರೆ ಚಂದ್ರನು “ಸೋಮ”. “ಅಗ್ನೀಷೋಮಾತ್ಮಕಮಿದಂ ಜಗತ್”. “ಅಗ್ನಿ ಮತ್ತು ಸೋಮರ ಸಮ್ಮಿಲನವೇ ಜಗತ್ತು” ಎಂದು ವೇದ ಹೇಳುತ್ತದೆ. ವೇದದಲ್ಲಿ ಅಗ್ನಿ ಮತ್ತು ಸೋಮದ...
ಶಬರಿಮಲೈ ಮತ್ತು ಮಹಿಳಾ ಸಮಾನತೆ- 2
ಶನಿ ಶಿಂಗನಾಪುರ, ಉಜ್ಜಯಿನಿಯ ಭೈರವನ ದೇವಸ್ಥಾನ, ಕಾಮಾಕ್ಯ ಮುಂತಾದವುಗಳು ವಾಮ ಮಾರ್ಗ, ಕೌಲ ಮಾರ್ಗ ಮುಂತಾದ ತಾಮಸಿಕ ತಂತ್ರಗಳ ಮೂಲಕ ವಾಮಾಚಾರ ನಡೆಯುವ ಜಾಗಗಳು. ಆ ಕಾರಣಕ್ಕಾಗಿ ಅಲ್ಲಿ ಪಶುಬಲಿ, ವಿಗ್ರಹದ ಮೇಲೆ ಎಣ್ಣೆ ಸುರಿಯುವುದು, ಮದ್ಯ ಮಾಂಸ ನೈವೇದ್ಯ ಮುಂತಾದ ಆಚರಣೆಗಳು ಇರುತ್ತವೆ. ಶನಿ ಶಿಂಗನಾಪುರದಲ್ಲಿ ಯಾವುದೇ ಆಗಮ ಪ್ರಕಾರ ನಿರ್ಮಿಸಿದ ದೇವಸ್ಥಾನ ಇಲ್ಲ...
ಶಬರಿಮಲೈ ಮತ್ತು ಮಹಿಳಾ ಸಮಾನತೆ- 1
ಶನಿ ಶಿಂಗಣಾಪುರದಲ್ಲಿ ಸ್ತ್ರೀಯರ ಪ್ರವೇಶಕ್ಕಾಗಿ ಹೋರಾಡಿದವರು ಶನಿಯ ಭಕ್ತರಲ್ಲದಿದ್ದರೂ ಕೋರ್ಟಿನಲ್ಲಿ ಅವರ ಪರವಾಗಿ ತೀರ್ಪು ಬಂದಿದೆ. ಕೋರ್ಟಿನ ತೀರ್ಪಿಗೆ ಸ್ಥಳೀಯವಾಗಿ ಕೆಲ ಗ್ರಾಮಸ್ಥರ ವಿರೋಧದ ಹೊರತಾಗಿ ಅಲ್ಲಿ ದೊಡ್ಡಮಟ್ಟದಲ್ಲಿ ವಿರೋಧ ಎದುರಾಗಲಿಲ್ಲ. ಸ್ವಲ್ಪಮಟ್ಟಿಗಿನ ವಿರೋಧ ತೋರಿದ ಗ್ರಾಮಸ್ಥರನ್ನು ಹಾಗೂ ಭಕ್ತರನ್ನು ಆರ್ಟ್ ಆಫ್ ಲಿವಿಂಗ್ ಮತ್ತು ಆರ್ ಎಸ್...
ಸಿದ್ಧಾಂತ ಮತ್ತು ಅನುಷ್ಠಾನ
ಧರ್ಮ ಅಥವಾ ಆಧ್ಯಾತ್ಮಿಕ ವಿಜ್ಞಾನ ಎಂಬುದು ಸೈದ್ಧಾಂತಿಕವಲ್ಲ. ಸಿದ್ಧಾಂತಗಳ ಚಿಂತನೆಯಿಂದ ಯಾವುದೇ ಆಧ್ಯಾತ್ಮಿಕ ಪ್ರಯೋಜನವಾಗುವುದಿಲ್ಲ. ಆದ್ದರಿಂದಲೇ ಭಾರತೀಯ ಆಧ್ಯಾತ್ಮವಿದ್ಯೆಗೆ ಸಿದ್ಧಾಂತ ಮತ್ತು ಅನುಷ್ಠಾನ ಎಂಬ ಎರಡು ಮುಖಗಳಿವೆ. ಭಾರತದ ಪ್ರಾಚೀನರು ಧಾರ್ಮಿಕ ಅನುಷ್ಠಾನಗಳನ್ನು ಆಚರಣೆಗೆ ತರಲಿಕ್ಕೆ ಸಿದ್ಧಾಂತಗಳ ಪ್ರತಿಪಾದನೆಯ ಮೂಲಕ ವಿವರಣೆ ನೀಡಿದ್ದಾರೆ...
ಭಾರತೀಯರ ಕಾಲದ ಲೆಕ್ಕಾಚಾರ ಮತ್ತು ಜಗತ್ತಿನ ಸೃಷ್ಟಿ ಮರುಸೃಷ್ಟಿಗಳ ವಿಜ್ಞಾನ.
ಮಂಗಳವಾರ ನಮ್ಮ office’ಗೆ ರಜಾ ಇರುತ್ತೆ. ಅದರೂ ಇವತ್ತೂ ಕೂಡ ಅಭ್ಯಾಸಕ್ಕೆ ಅನುಗುಣವಾಗಿ ಹತ್ತು ಗಂಟೆಗೆ ಮನೆಯಿಂದ ಹೊರಟು SLV’ಯಲ್ಲಿ ಒಂದು ಇಡ್ಲಿ ತಿಂದು ಅಫೀಸಿಗೆ ಬಂದೆ. ಇವತ್ತೇನು ಕೆಲಸ ಅಂತ ನೆನಪು ಮಾಡಿಕೊಂಡರೆ ಏನೂ ಇಲ್ಲ. ಬಾಸ್ ಊರಲ್ಲಿಲ್ಲ. ಸ್ಟಾಫ್’ನವರು, ಡ್ರೈವರ್’ಗಳು ಬಂದಿಲ್ಲ. ನಾನೇ ನನ್ನ ಬಳಿ ಇರುವ ಕೀಲಿ ಕೈಯಿಂದ ಬಾಗಿಲು ತೆಗೆದು ಕಸಗುಡಿಸಿ ದೇವರ...
ಶಾಸ್ತ್ರ ಎಂದರೆ…
ಯಾವುದೇ ಒಂದು ವಿಷಯದ ಬಗ್ಗೆ ಬೀಜರೂಪದ ಮಾಹಿತಿಯನ್ನು ನೀಡಿ.. ಅದಕ್ಕೆ ವಿರೋಧಗಳು/ಪ್ರತಿವಾದಗಳು ಅಥವಾ ಸಂದೇಹಗಳು ಎದುರಾದಲ್ಲಿ ಆ ಎಲ್ಲ ರೀತಿಯ ವಿರೋಧಗಳಿಗೂ, ಸಂದೇಹಗಳಿಗೂ ತರ್ಕಬದ್ಧವಾದ ಆಧಾರ ಸಹಿತ ಸಮಾಧಾನವನ್ನು ನೀಡಿ ತಾನು ಮೊದಲು ಮಂಡಿಸಿದ ಬೀಜರೂಪ ವಿಷಯನ್ನು ಸಂಪೂರ್ಣವಾಗಿ ಸಾಬೀತು ಮಾಡಿ ಸಿದ್ಧಾಂತವನ್ನು ಮಂಡಿಸುವ (ವಾದ-ಪ್ರತಿವಾದಗಳನ್ನೊಳಗೊಂಡ) ಸಂಪೂರ್ಣ...
ಎಲ್ಲ ಧರ್ಮಗಳೂ ಸಮಾನವಲ್ಲ, ಎಲ್ಲ ಧರ್ಮಗಳ ಗುರಿಯೂ ಒಂದೇ ಅಲ್ಲ.
ನಮ್ಮ ದೇಶದಲ್ಲಿ ಹಿಂದೂ, ಮುಸಲ್ಮಾನ, ಕ್ರೈಸ್ತ, ಪಾರಸೀ, ಬೌದ್ಧ, ಜೈನ, ಸಿಖ್ ಮುಂತಾದ ಮತಗಳನ್ನು ಗುರುತಿಸುತ್ತೇವೆ. ಆದರೆ ಕಾಲಾಂತರದಲ್ಲಿ ಈ ಮತಗಳು ಅಥವಾ religion ಗಳಿಗೆ ಪರ್ಯಾಯವಾಗಿ ”ಧರ್ಮ” ಎಂಬ ಶಬ್ದದ ಬಳಕೆಗೆ ತಪ್ಪಾಗಿ ಚಾಲ್ತಿಗೆ ಬಂದಿದೆ. ಇವುಗಳಲ್ಲಿ ”ಹಿಂದೂ” ಎಂಬುದು ಉಳಿದ religion ಗಳಂತೆ ಒಂದು ಮತವೇ ಅಲ್ಲ. ಈ...
ಯಜ್ಞ ಸ್ವರೂಪಗಳು
ಗೃಹಸ್ಥಾಶ್ರಮದಲ್ಲಿರುವರಿಗೆ ನಮ್ಮ ನಮ್ಮ ಭಾರತೀಯ ಪರಂಪರೆಯಲ್ಲಿ ಐದು ಯಜ್ಞಗಳನ್ನು ವಿಧಿಸಲಾಗಿದ. 1.ದೇವಯಜ್ಞ, 2. ಪಿತೃಯಜ್ಞ, 3. ಮನುಷ್ಯ ಯಜ್ಞ, 4. ಭೂತ ಯಜ್ಞ 5. ಸ್ವಾಧ್ಯಾಯ ಯಜ್ಞ ಅಥವಾ ಬ್ರಹ್ಮಯಜ್ಞ. ಈ ಐದೂ ಯಜ್ಞಗಳು ಎಲ್ಲ ಗೃಹಸ್ಥರಿಗೂ ಅನ್ವಯಿಸುತ್ತವೆ. ದೇವತೆಗಳಿಗೆ ಆಹುತಿಯನ್ನು ನೀಡುವುದು, ಪೂಜೆ, ಅರ್ಚನೆ, ಪ್ರಾರ್ಥನೆ ಮುಂತಾದವುಗಳು ದೇವ ಯಜ್ಞ ಹಾಗೂ...