ಅಂಕಣ

ಅಂಕಣ

ಟೈಮ್ ಟ್ರಾವೆಲ್…! ಭೂತ ಭವಿಷ್ಯಗಳ ಸುತ್ತ..!

ಮನುಷ್ಯನಿಗೆ ಎಂತಹಾ ಸುಖವಿದ್ದರೂ ನೆಮ್ಮದಿಯಿಂದ ಬದುಕುವ ಕಲೆಯೇ ತಿಳಿದಿಲ್ಲ. ಒಂದಿದ್ದರೆ ಇನ್ನೊಂದು ಬೇಕು ಎಂಬ ಅತಿಯಾಸೆ. ಅಯ್ಯೋ ನನ್ನ ಜೀವನವೇ ಇಷ್ಟು ಏನೂ ಸುಖವಿಲ್ಲ ಬರೀ ಕಷ್ಟಗಳೇ ಅಂತಾ ಪ್ರತೀ ದಿನ ಕೊರಗುವ ಮನಗಳಿಗೇನೂ ಕಮ್ಮಿ ಇಲ್ಲ. ಇನ್ನು ಕೆಲವರಿಗೆ ಅಯ್ಯೋ ನನ್ನ ಜೀವನದ ಎಷ್ಟೋ ದಿನಗಳು ಸುಮ್ಮನೆ ಕಳೆದು ಹೋದವು ಏನೂ ಸಾಧಿಸಲಿಲ್ಲ ಎಂಬ ಕೊರಗು. ಮತ್ತೊಂದಷ್ಟು...

ಅಂಕಣ

ಬಣ್ಣ ಬಣ್ಣದ ಲೋಕ.. ಬಣ್ಣಿಸಲಾಗದ ಬಾಳು..

“ಬಣ್ಣ ನನ್ನ ಒಲವಿನ ಬಣ್ಣ… ನನ್ನ ಬದುಕಿನ ಬಣ್ಣ..” ಈ ಹಾಡು ಹಳೆಯದಾದರೂ ಪ್ರತಿ ಬಾರಿ ಕೇಳುವಾಗಲೂ ಭಾವಗಳು ಉಕ್ಕಿ ಬರುತ್ತದೆ. ಆ ಹಾಡಿನ ಒಳಾರ್ಥ ಬೇರೆ ಇರಬಹುದು ಆದರೆ ಬಣ್ಣಗಳ ಜೊತೆಗಿನ ಸಂಬಂಧವನ್ನು ಹಾಡು ಚೆನ್ನಾಗಿ ವಿವರಿಸುತ್ತದೆ. ಬದುಕು, ಭಾವ ಹಾಗೂ ಬಣ್ಣದ ನಡುವಿನ ಸಂಬಂಧ ಅಂತಹದು. ಬದುಕಿನ ಜಂಜಾಟಗಳ ನಡುವೆ ಮನಸ್ಸಿಗೆ ಕಷ್ಟವೆನಿಸಿದಾಗ...

Featured ಅಂಕಣ

ತಡರಾತ್ರಿ ಐ.ಎ.ಎಸ್ ಅಧಿಕಾರಿಯೊಬ್ಬರಿಗೆ ಮೋದಿ ಕರೆ ಮಾಡಿದಾಗ…

ಚರ್ಚೆಯ ವಿಷಯಗಳಿದ್ದಾಗ ನಾನು ಸುಮ್ಮನೆ ಕೂರುವವನಲ್ಲ. ಇನ್ನು ಸಾಮಾನ್ಯವಾಗಿ ಎಲ್ಲ ಚರ್ಚೆಗಳು ಕೊನೆಗೊಳ್ಳುವುದು ರಾಜಕೀಯದಲ್ಲಿಯೇ ಆಗಿರುತ್ತದೆ. ಇಷ್ಟು ವರ್ಷಗಳವರೆಗೆ ಎಲ್ಲ ಚರ್ಚೆಗಳಲ್ಲಿ, ಮಾತುಕತೆಗಳಲ್ಲಿ ನಾನು ಕೇಳುತ್ತಾ ಬಂದಿದ್ದು, “ಇದು ಭಾರತ. ಈ ದೇಶ ಎಂದಿಗೂ ಬದಲಾಗೋದಿಲ್ಲ. ಇಲ್ಲಿಯ ರಾಜಕಾರಣಿಗಳು ಭ್ರಷ್ಟರು, ಅಧಿಕಾರಿಗಳು ಭ್ರಷ್ಟರು, ಒಟ್ಟಾರೆ ವ್ಯವಸ್ಥೆಯೇ...

Featured ಅಂಕಣ

ಆಕೆಯ ನೃತ್ಯ ಕ್ಯಾನ್ಸರ್’ನ್ನೂ ಮೀರಿಸಿತ್ತು…

             “ಕಲೆಯ ಬಗೆಗಿರುವ ಪ್ರೀತಿ ಮತ್ತು ಅನುರಾಗ ಬದುಕುವ ಭರವಸೆಯನ್ನು ನೀಡುತ್ತದೆ. ಪ್ರತಿಯೊಬ್ಬರಲ್ಲೂ ತಮ್ಮ ಕನಸಿನ ಬಗ್ಗೆ ತುಡಿತವಿರಬೇಕು, ಅದೇ ಭರವಸೆಯನ್ನ ನೀಡುತ್ತದೆ, ಅದೇ ಬದುಕಿಗಾಗಿ ಹೋರಾಡಲು ಸ್ಪೂರ್ತಿ ನೀಡುತ್ತದೆ” ಖ್ಯಾತ ಒಡಿಸ್ಸಿ ನೃತ್ಯಗಾರ್ತಿ ಹಾಗೂ ಕ್ಯಾನ್ಸರ್ ಸರ್ವವೈರ್ ಆಗಿರುವ ಶುಭಾ ವರದ್ಕರ್ ಹೇಳಿರುವ ಮಾತುಗಳಿವು. ಅವರು ಕ್ಯಾನ್ಸರ್’ನ್ನು...

Featured ಅಂಕಣ

ಹರ್ಷನ ಈ ಹರುಷದ ಹಿಂದೆ ವರುಷಗಳ ಸಂಕಟವಿದೆ…

ನನಗದು ಹೇಗೆ, ಯಾವಾಗ ಮತ್ತು ಯಾಕೆ ಆ ಆಸೆ ಹುಟ್ಟಿಕೊಂಡಿತೋ ನೆನಪಿಲ್ಲ. ಸಣ್ಣವನಿರುವಾಗಲೇ ಕ್ರಿಕೆಟ್ ಕಾಮೆಂಟೇಟರ್ ಆಗಬೇಕೆನ್ನುವ ಆಸೆ. ಬಹುಶಃ ಕ್ರಿಕೆಟ್ ನೋಡುತ್ತಾ, ಆಡುತ್ತಾ ಬೆಳೆದುದರ ಇಂಪ್ಯಾಕ್ಟ್ ಆಗಿರಲೂಬಹುದು. ನನಗೆ ಗೊತ್ತಿರುವ ಅರೆಬರೆ  ಇಂಗ್ಲೀಷಿನಲ್ಲೇ ಬಾಯಿಗೆ ಬಂದಿದ್ದನ್ನು ಒದರುವುದು ಈಗಲೂ ನನ್ನ ಗೀಳಾಗಿ ಬಿಟ್ಟಿದೆ. ಅವಾಗೆಲ್ಲ “ಬೌಂಡ್ರೀ ಕೇ ಬಾಹರ್...

Featured ಅಂಕಣ

ಏರ ಬಯಸುವ ನಾವೂ ಕೆಳ ಜಗ್ಗುವ ಹಾವೂ

ಆಟಗಳಲ್ಲಿ ಮೂರು ವಿಧ. ಒಂದು – ಯಾವ ಪ್ರತಿಸ್ಪರ್ಧಿಯ ರಣತಂತ್ರಕ್ಕೂ ಸಂಬಂಧ ಪಡದ ಆಟಗಳು, ಎರಡು-ಸ್ಪರ್ಧಿ ಪ್ರತಿಸ್ಪರ್ಧಿಗಳು ಪರಸ್ಪರ ರಣತಂತ್ರಗಳನ್ನು ಹೆಣೆಯುತ್ತ ಮುಂದುವರಿಸಿಕೊಂಡು ಹೋಗುವ ಆಟಗಳು, ಮೂರು – ಆಟಗಾರನ ಶ್ರಮ/ಸಾಮರ್ಥ್ಯ/ಬುದ್ಧಿವಂತಿಕೆಗಳನ್ನು ಬೇಡದ ಆಟಗಳು. ಮೊದಲನೆಯ ವರ್ಗಕ್ಕೆ ಓಟ, ಹೈಜಂಪ್, ಶಾಟ್ಪುಟ್, ಬಿಲ್ಲುಗಾರಿಕೆ, ಈಜು ಇತ್ಯಾದಿ...

ಅಂಕಣ

‘ಶ್ರೀ ಕೃಷ್ಣ’ ಎಂಬ ಆತ್ಮೀಯ ಬಂಧು

‘ಶ್ರೀ ಕೃಷ್ಣ’. ಆಹಾ!!! ಆ ಪದವೇ ಹಾಗೆ. ಆ ವ್ಯಕ್ತಿತ್ವವೇ ಅಂತಹುದು. ಆಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರೂ ಇಷ್ಟಪಡುವ, ಪ್ರೀತಿಸುವ ಹೆಸರು’ಶ್ರೀ ಕೃಷ್ಣ’. “ನೀನ್ಯಾಕೋ? ನಿನ್ನ ಹಂಗ್ಯಾಕೋ? ನಿನ್ನ ನಾಮದ ಬಲವೊಂದಿದ್ದರೆ ಸಾಕೋ..” ಎಂಬ ದಾಸರ ಪದದ ಸಾಲುಗಳಂತೆ ಆ ಹೆಸರಿನಲ್ಲೇ ಒಂದು ಶಕ್ತಿ ಇದೆ, ಒಂದು ದೈವತ್ವ ಇದೆ‌, ಒಂದು...

ಅಂಕಣ

ಆತ್ಮಹತ್ಯೆಗೆ ಶರಣಾದ ಮಾತ್ರಕ್ಕೆ ದಕ್ಷ ಅಧಿಕಾರಿಗಳೂ ಹೇಡಿಗಳೆನಿಸಿಕೊಳ್ಳುತ್ತಾರೆಯೇ?!

ಅದೇಕೆ ನಮ್ಮ ಕೆಲವು ರಾಜಕಾರಣಿಗಳಿಗೆ, ಪ್ರೀತಿ ಪಾತ್ರರನ್ನು ಕಳೆದುಕೊಂಡವರ ನೋವಿನ ಒಡಲಾಗ್ನಿಯ ಕಾವಿನ ತೀವೃತೆ ಅರಿವಾಗುವುದಿಲ್ಲಾ?ಕಿತ್ತು ತಿನ್ನುವ ಬಡತನ, ಹೆಜ್ಜೆ ಹೆಜ್ಜೆಗೂ ಅಡ್ಡಿಪಡಿಸುವ ಸಂಕಷ್ಟಗಳ ನಡುವೆಯೂ ಸಾಕಿ ಸಲಹಿ ಎದೆಯೆತ್ತರಕ್ಕೆ ಬೆಳೆಸಿದ ತಮ್ಮ ಮಕ್ಕಳನ್ನು ಸಮಾಜಕ್ಕೆ ಮಹತ್ತರ ಕೊಡುಗೆ ನೀಡಬಲ್ಲ ಮಾನವ ಸಂಪನ್ಮೂಲವನ್ನಾಗಿ ಪರಿವರ್ತಿಸಿ ಇನ್ನೇನು ನೆಮ್ಮದಿಯ...

ಅಂಕಣ

ಮನೆ ಅಡವಿಟ್ಟು ಅಕಾಡೆಮಿ ಸ್ಥಾಪಿಸಿದ್ದು ಸಾರ್ಥಕವಾಯ್ತು

ಇಂದು ಭಾರತ ಸಿಂಧೂವಿನ ಸಾಧನೆಯ ಗುಣ ಗಾನ ಮಾಡುತ್ತಿದೆ. ಸಿಂಧೂ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಜಗತ್ತಿನ ನಂಬರ್‌ ಒನ್ ಆಟಗಾರ್ತಿ ಮರಿನ್‌ಗೆ ಸಿಂಧೂ ಒಡ್ಡಿದ ಸವಾಲು ಅಂತಿಂಥದ್ದಲ್ಲ. ಇಡೀ ಒಲಿಂಪಿಕ್ ಗೇಮ್ಸನಲ್ಲಿ ನೇರ ಸೆಟ್ಟಿನಿಂದ ಗೆದ್ದಿದ್ದ ಮರಿನ್, ಮೊದಲ ಸೆಟ್ ಸೋತಿದ್ದು ಸಿಂಧೂವಿಗೆ. ರಿಯೋ ಒಲಿಂಪಿಕ್ಸ್...

ಅಂಕಣ

ಯಾಕೋ ಇತ್ತಿತ್ಲಾಗೇ ಪ್ಯಾಪರ್ರು ಸಿಮ್ಮಗಳೇ ಜಾಸ್ತಿ ಆಗ್ಬುಟ್ಟಾವೆ ಕಣ್ಲಾ..!!

ಕಟ್ಟಿಂಗ್ ಮಾಡ್ಸಾಕೆ ಅಂತ ಕಲ್ಲೇಶೀ ಸೆಲೂನ್ ಗೆ ಗೋಪಾಲಣ್ಣ ಎಂಟ್ರಿ ಕೊಡ್ತು. ಇರೋ ಎಲ್ಡುಕೂದ್ಲನ್ನ ಬಾಚ್ಕೋತಾ ಅಲ್ಲೇ ಕೂತಿತ್ತು ಮುರ್ಗೇಶೀ ಅಲಿಯಾಸ್ ಕೋಳೀ ಮುರುಗನ್. ಅಲೆಲೆಲೆಲೆಲೆ ಗ್ವಾಪಾಲಣ್ಣೀ!! ಯಾಕ್ಲಾ ಬಂದೀಯಾ ಇಲ್ಲಿಗೆ ಅಂತ ಮಾತು ಆರಂಭಿಸ್ತು ಮುರುಗನ್. ಬಿಕ್ನಾಸೀ ನನ್ ಮಗನೇ… ನಿನಿಗ್ ಕರಿ ನಾಗ್ರಾವ್ ಕಡ್ಯಾ..  ಕಟ್ಟಿಂಗ್ ಸಾಪ್ಗೆ ಎರ್ಕೋಳೋಕೆ ಅಲ್ದೆ...