ಕೇಸ್ ೧: ದೆಹಲಿಯಲ್ಲಿ ರೇಪ್ ಎಂಬುದು ಎಷ್ಟು ಕಾಮನ್ ಆಗಿದೆಯೋ ಆ ರೇಪ್’ಗಳು ದೊಡ್ದ ಸುದ್ದಿ ಮಾಡುವುದೂ ಅಷ್ಟೇ ಕಾಮನ್. ಇತ್ತೀಚೆಗೆ UBER ಟ್ಯಾಕ್ಸಿ ಚಾಲಕನೊಬ್ಬ ತನ್ನನ್ನು ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿಯೊಬ್ಬಳು ದೂರು ನೀಡಿದ್ದಳು. ಪೋಲೀಸರು ಆ ಚಾಲಕನ ಅಹವಾಲನ್ನೂ ಕೇಳದೆ ಅವನನ್ನು ತಿಹಾರ್ ಜೈಲಿಗೆ ತಳ್ಳಿದ್ದರು. ಟಿವಿ ಚಾನಲ್’ಗಳು ಹಿಗ್ಗಾಮುಗ್ಗ ವರದಿ ಮಾಡಿದವು...
Author - Shivaprasad Bhat
ಪ್ರತಾಪ್ ಸಿಂಹರೇ, ನಿಮ್ಮ ಉದ್ದೇಶ ಶುದ್ಧಿಯ ಮೇಲೂ ಪ್ರಶ್ನೆಗಳೇಳಬಾರದಲ್ಲವೇ?
ವೇತನ ಹೆಚ್ಚಳ ಕುರಿತಾಗಿ ತಮ್ಮ ಮೇಲೆ ಬಂದಿದ್ದ ಟೀಕೆಗಳಿಗೆ ಮೈಸೂರಿನ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ಬೇಸರವೆಂದರೆ ಈ ಭಾರಿ ಇನ್ನೂ ಬಾಲಿಶವಾಗಿ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಜನರ ಪ್ರಶ್ನೆಗೆ ಉತ್ತರಿಸುವ ಭರದಲ್ಲಿ “ವೈಯಕ್ತಿಕ ಬದುಕನ್ನೇ ಕಳೆದುಕೊಂಡು ಜನಸೇವೆ ಮಾಡುತ್ತಿದ್ದೇನೆ” ಎಂಬರ್ಥದ ಮಾತುಗಳನ್ನಾಡಿದ್ದಾರೆ. ಸಂಸದರು ಮನುಷ್ಯರೇ...
ಜಗತ್ತು ಈಗ ಬೆತ್ತಲಾಗ್ತಾ ಇದೆ!
ಅವರ ಬರವಣಿಗೆಯನ್ನು ಇಷ್ಟ ಪಟ್ಟ ಸಾವಿರಾರು ಜನರಲ್ಲಿ ನಾನೂ ಒಬ್ಬ. ನಾನೂ ಅವರಂತೆ ಆಗಬೇಕು ಅಂತಂದುಕೊಂಡಿದ್ದ ಹಲವರಲ್ಲಿ ನಾನೂ ಒಬ್ಬ. ಏಳು ವರ್ಷಗಳ ಹಿಂದೆ ನನ್ನ ಕಾಲೇಜಿಗೆ ಅತಿಥಿಯಾಗಿ ಬಂದಿದ್ದಾಗ ಕ್ಯೂ ನಿಂತು ಆಟೋಗ್ರಾಫ್ ಪಡೆದುಕೊಂಡಿದ್ದೆ. ಪತ್ರಿಕೋದ್ಯಮಕ್ಕೆ ಸ್ಟಾರ್ ಗಿರಿ ತಂದುಕೊಟ್ಟಿದ್ದೇ ಅವರೆಂದರೆ ತಪ್ಪಾಗಲಾರದು. ಅವರು ಮೈಸೂರಿನಲ್ಲಿ ಚುನಾವಣೆಗೆ...
ಮೋದಿಂ ವಂದೇ ವಿಶ್ವಗುರುಂ
ಅದೇಕೋ ಗೊತ್ತಿಲ್ಲ. ಮೋದಿ ವಿದೇಶ ಪ್ರವಾಸ ಮಾಡಿದಾಗಲೆಲ್ಲ ಕೈ ತುರಿಸಲು ಶುರುವಾಗುತ್ತದೆ. ಭಾಷಣ ಕೇಳಿದಾಗಲೆಲ್ಲಾ ಪೆನ್ನು ಹಿಡಿಯಬೇಕೆಂದೆನಿಸುತ್ತದೆ. ಹೊಗಳಿದಷ್ಟೂ, ಹೆಮ್ಮೆ ಪಟ್ಟುಕೊಂಡಷ್ಟೂ ಅದು ಕಡಿಮೆಯೇ ಎಂದೆನಿಸುತ್ತದೆ.ಮೋದಿ ಮೋಡಿಯ ತಾಕತ್ತೇ ಅದು. ಇದು ಮೋದಿ ಮೇಲಿನ ಅಭಿಮಾನಕ್ಕೋ, ಕುರುಡು ಭಕ್ತಿಗೋ ಅಥವಾ ಬಿಜೆಪಿಯವರೆಂಬ ಕಾರಣಕ್ಕೋ ಬರುವ ಭಾವವಲ್ಲ. ಭಾರತ ಮಾತೆಯ...
ಇದಲ್ಲವೇ ಅರೆಬೆಂದ ಮನಸ್ಥಿತಿಯೆಂದರೆ?
ಕೆ.ಎಸ್ ಭಗವಾನ್ ’ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದ್ದನ್ನು ಖಂಡಿಸಿ ವಿದ್ಯಾವಂತ ಯುವ ಸಮೂಹ ಸಾಹಿತ್ಯ ಅಕಾಡೆಮಿ ವಿರುಧ್ಧ ತಿರುಗಿ ಬಿದ್ದಿದ್ದು ನಿಮಗೆಲ್ಲಾ ಗೊತ್ತೇ ಇರುವ ವಿಚಾರ. ಭಾನುವಾರ ಆರಂಭವಾದ ಈ ಪತ್ರ ಚಳುವಳಿ, ಸಹಿ ಸಂಗ್ರಹ ಅಭಿಯಾನವನ್ನು ಅಕಾಡೆಮಿ ಅಧ್ಯಕ್ಷರಾದ ಮಾಲತಿ ಪಟ್ಟಣ ಶೆಟ್ಟಿಯವರು ‘ಪ್ರಶಸ್ತಿಯನ್ನು ಅಕಾಡೆಮಿಯು ಸೂಕ್ತ ವ್ಯಕ್ತಿಗೇ ನೀಡಿದೆ, ಈ...
ಭಗವಾನ್’ಗೆ ಪ್ರಶಸ್ತಿ, ಅಕಾಡೆಮಿಗೆ ಬೇಕಿದೆ ದುರಸ್ತಿ
“ರಾಮ ಕೃಷ್ಣರು ಅಪ್ಪನಿಗೆ ಹುಟ್ಟಿದವರಲ್ಲ, ರಾಮ ಕೃಷ್ಣರ ದೇವಸ್ಥಾನಗಳಿಗೆ ಹೋಗಬೇಡಿ. ಕುಂತಿ ಒಬ್ಬಳು ವ್ಯಭಿಚಾರಿಣಿ. ಮಹಾಭಾರತದಿಂದ ಮಕ್ಕಳ ಮೇಲಿನ ಅತ್ಯಾಚಾರ ಹೆಚ್ಚಾಗುತ್ತಿದೆ.” ಹೀಗೆ ಹೇಳಿದ್ದು ನಾಡು ಕಂಡ ಅಪರೂಪದ ಹಿರಿಯ ದಾರ್ಶನಿಕ(ನೈಜ ದಾರ್ಶನಿಕರ ಕ್ಷಮೆ ಕೋರುತ್ತಾ) ವ್ಯಕ್ತಿ ಕೆ.ಎಸ್.ಭಗವಾನ್. ಯಾವಗಲೋ ಅಲ್ಲ. ಜಸ್ಟ್ ನಿನ್ನೆ ಹೇಳಿದ್ದು. ಕಾಕತಾಳೀತವೇನೆಂದರೆ...
ಜಗಕಂಡ ಅಪ್ರತಿಮ ಅಭಿಯಂತರ-ವಿಶ್ವೇಶ್ವರ
ಮೈಸೂರು ಸಂಸ್ಥಾನದ ಅಧೀನದಲ್ಲಿದ್ದ ಭದ್ರಾವತಿ ಸಕ್ಕರೆ ಕಾರ್ಖಾನೆ ಆವಾಗ ನಷ್ಟದಲ್ಲಿತ್ತು. ವಿಶ್ವೇಶ್ವರಯ್ಯ ನವರು ಸ್ಥಾಪಿಸಿದ ಕಾರ್ಖಾನೆ ಅದಾಗಿತ್ತು. ಕಾರ್ಖಾನೆಯನ್ನು ಮೇಲೆತ್ತಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ಯಶಸ್ವಿಯಾಗಲಿಲ್ಲ. ಕಡೆಗೆ ಮತ್ತೆ ವಿಶ್ವೇಶ್ವರಯ್ಯ ನವರೇ ಬರಬೇಕಾಯಿತು. ಅವರನ್ನು ಮತ್ತೆ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅವರು ಬಂದ ಮತ್ತೆ...
ಇದರಲ್ಲಡಗಿಹುದು ಅಡಕೆ ಬೆಳೆಗಾರರ ಭವಿಷ್ಯ
ನಾಲ್ಕೈದು ವರ್ಷಗಳ ಹಿಂದೆ ಗುಟ್ಕಾ ನಿಷೇಧವಾಗುತ್ತದೆ ಎನ್ನುವಾಗ ಕರಾವಳಿ ಕರ್ನಾಟಕ, ಮಲೆನಾಡಿನ ಶಿವಮೊಗ್ಗದ ಅಡಕೆ ಬೆಳೆಗಾರರಿಗೆ ಬರ ಸಿಡಿಲು ಬಡಿದಿತ್ತು. ಮತ್ತೆ ನಿರಂತರ ಕಾನೂನು ಹೋರಾಟಗಳನ್ನು ಮಾಡುತ್ತಾ ಮಾಡುತ್ತಾ ಅಡಕೆಯನ್ನು ಜೀವಂತವಾಗಿರಿಸಿಕೊಂಡರು. ಗುಟ್ಕಾ ಇವತ್ತು ನಿಷೇಧ ಆಗುತ್ತದೆ, ನಾಳೆ ನಿಷೇಧ ಆಗುತ್ತದೆ ಎನ್ನುವ ಮಾತುಗಳು ಈಗಲೂ ಕೇಳಿ ಬರುತ್ತಿದೆ...
ಭಾವನೆಗಳನ್ನು ಘಾಸಿ ಮಾಡಬಹುದು … ನಂಬಿಕೆಗಳನ್ನಲ್ಲ
ನನಗೀಗಲೂ ಆ ಧ್ವನಿ ಕೇಳಿಸುತ್ತಿದೆ. ಆಗಸ್ಟ್ ತಿಂಗಳಿನ ಆ ಭಯಂಕರ ಮಳೆಗೆ ಮಾಣಿ ಮಠದ ಶೀಟಿನ ಛಾವಣಿಯ ಮೇಲೆ ದೊಪ್ಪನೆ ನೀರು ಬೀಳುವಾಗ ಭರೋ.. ಎಂಬ ಶಬ್ದ. ಅಷ್ಟೊಂದು ಮಳೆ ಸುರಿಯುತ್ತಿದ್ದರೂ ಇಡೀಯ ಸಭಾಂಗಣ ತುಂಬಿ, ಹೊರಗೆಯೂ ಜನರು ನಿಂತುಕೊಂಡು ಎಲ್’ಸಿಡಿ ಟಿವಿಗಳತ್ತ ನೋಡುತ್ತಿದ್ದರು. ಸಣ್ಣ ಪುಟ್ಟ ಮಕ್ಕಳ ಚಿಲಿಪಿಲಿ ಸದ್ದು ಬಿಟ್ಟರೆ ಸಭಾಂಗಣದ ಒಳಗೆ ಸೂಜಿ ಬಿದ್ದರೂ...
ಇವರಿಗೆ ಪವರು ಕೊಟ್ಟ ತಪ್ಪಿಗೆ ನಮಗೆ ಪವರು ಕಟ್..!
ಹೌದು. ಈ ಭಾರಿ ಕಳೆದ ವರ್ಷಕ್ಕಿಂತ ಕಡಿಮೆ ಮಳೆಯಾಗಿದೆ. ಕಡಿಮೆ ಅಂದರೆ ಬಹಳ ಕಡಿಮೆ. ಉತ್ತರ ಕರ್ನಾಟಕದ ಗದಗ, ಹಾವೇರಿ, ಬೀದರ್, ರಾಯಚೂರನ್ನೆಲ್ಲಾ ಬಿಡಿ, ಪಕ್ಕಾ ಮಲೆನಾಡಾದ ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿಯೇ ನಿರೀಕ್ಷಿತ ಮಟ್ಟದ ಅರ್ಧದಷ್ಟೂ ಮಳೆಯಾಗಿಲ್ಲ ಎಂದರೆ ಅದು ಬರಗಾಲದ ಭೀಕರತೆಯನ್ನು ಸಾರುತ್ತದೆ. ಆಗಸ್ಟ್ ಮುಗಿಯುತ್ತಿದೆ...