ಪ್ರಚಲಿತ

ಭಗವಾನ್’ಗೆ ಪ್ರಶಸ್ತಿ, ಅಕಾಡೆಮಿಗೆ ಬೇಕಿದೆ ದುರಸ್ತಿ

“ರಾಮ ಕೃಷ್ಣರು ಅಪ್ಪನಿಗೆ ಹುಟ್ಟಿದವರಲ್ಲ, ರಾಮ ಕೃಷ್ಣರ ದೇವಸ್ಥಾನಗಳಿಗೆ ಹೋಗಬೇಡಿ. ಕುಂತಿ ಒಬ್ಬಳು ವ್ಯಭಿಚಾರಿಣಿ. ಮಹಾಭಾರತದಿಂದ ಮಕ್ಕಳ ಮೇಲಿನ ಅತ್ಯಾಚಾರ ಹೆಚ್ಚಾಗುತ್ತಿದೆ.”  ಹೀಗೆ ಹೇಳಿದ್ದು ನಾಡು ಕಂಡ ಅಪರೂಪದ ಹಿರಿಯ ದಾರ್ಶನಿಕ(ನೈಜ ದಾರ್ಶನಿಕರ ಕ್ಷಮೆ ಕೋರುತ್ತಾ) ವ್ಯಕ್ತಿ ಕೆ.ಎಸ್.ಭಗವಾನ್. ಯಾವಗಲೋ ಅಲ್ಲ. ಜಸ್ಟ್ ನಿನ್ನೆ ಹೇಳಿದ್ದು. ಕಾಕತಾಳೀತವೇನೆಂದರೆ ಅವರ ಇಂತಹ ಸಮಾಜೋದ್ದಾರದ ಹೇಳಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಅದೇ ದಿನ ನಮ್ಮ ಘನ ಕರ್ನಾಟಕ ಸರಕಾರ ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ ಘೋಷಿಸಿದೆ.

ಎಲ್ಲಾ ಪ್ರಶಸ್ತಿಗಳು ಬರುವಾಗ ಸಂಚಲನವುಂಟು ಮಾಡುತ್ತದೆ. ಹಾಗೇನೆ ಭಗವಾನ್’ಗೆ ಬಂದಿದ್ದೂ ಕೂಡಾ ಸಂಚಲನವುಂಟು ಮಾಡಿದೆ ಆದರೆ ಋಣಾತ್ಮಕವಾಗಿ. ಅಲ್ಲಾ, ಭಗವದ್ಗೀತೆಯನ್ನೇ ಸುಟ್ಟುಬಿಡುತ್ತೇನೆ ಎಂದ ಭಗವಾನ್ ಬರೆದ ಪುಸ್ತಕ ಯಾವುದು? ಸ್ವಲ್ಪ ಹೇಳಿ, ಮೊದಲು ಅದನ್ನು ಸುಟ್ಟು ಬಿಡಬೇಕು.

ಹೇಳಿ, ಮತ್ತಿನ್ಯಾವ ಘನಾಂಧಾರಿ ಕೆಲಸಕ್ಕೆ ಅನರ್ಹ, ಅಯೋಗ್ಯ ಭಗವಾನ್’ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ? ರಾಮಕೃಷ್ಣರನ್ನು ಅಪ್ಪನಿಗೆ ಹುಟ್ಟಿದವರಲ್ಲ ಎಂದಿದ್ದಕ್ಕೋ? ಮಹಾಭಾರತದಿಂದ ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿದೆ ಎಂದು ಸಂಶೋಧನೆ ಮಾಡಿದ್ದಕ್ಕೋ? ಆ ಮೂಲಕ  ವರ್ಷಗಳಿಂದ ಬಹುಸಂಖ್ಯಾತ  ಹಿಂದೂಗಳ ಭಾವನೆಗಳನ್ನು ಕೆರಳಿಸುತ್ತಿರುವುದಕ್ಕೋ?  ಇಲ್ಲ ಇಲ್ಲ.. ತಪ್ಪು ತಿಳಿಯಬೇಡಿ.  ನಿಜವಾಗಿಯೂ ಪ್ರಶಸ್ತಿ ಸಿಕ್ಕಿರುವುದು, ಚರ್ಚೆಗೆ ಸಿದ್ಧ ಎಂದು ಬಹಿರಂಗ ಹೇಳಿಕೆ ನೀಡಿ ಕಡೆಗೆ ವಿಷ್ಣುದಾಸರನ್ನು ಎದುರಿಸಲಾಗದೆ ಬಹಿರಂಗವಾಗಿಯೇ ಪಲಾಯನ ಮಾಡಿ ಪುರುಷತ್ವ ಪ್ರದರ್ಶಿಸಿದ್ದಕ್ಕಾಗಿ.

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವವರ ಪಟ್ಟಿಯಲ್ಲಿ ಕುವೆಂಪು, ಬೇಂದ್ರೆ, ಮಾಸ್ತಿ ಅಯ್ಯಂಗಾರ್, ಕಾರಂತರೊಂದಿಗೆ ಈ ಭಗವಾನನನ್ನು ಊಹಿಸಲೂ ಸಾಧ್ಯವೇ?  ಯೋಗ್ಯ, ಅಯೋಗ್ಯರಾರೆಂದೇ ತಿಳಿಯದಾಯಿತೇ ನಮ್ಮ ಅಕಾಡೆಮಿಗೆ? ಇಂತಹಾ ಮೂರುಕಾಸಿನ ಪ್ರಯೋಜನವಿಲ್ಲದ ಸ್ವಘೋಷಿತ ಸಾಹಿತಿಗೆಲ್ಲಾ ಪ್ರಶಸ್ತಿ ಕೊಟ್ಟರೆ ಆ ಪ್ರಶಸ್ತಿಯ ಮೌಲ್ಯವಾದರೂ ಉಳಿದೀತೆ? ಅಕಾಡೆಮಿಯಿರುವುದು ಅರ್ಹ ಕೃತಿಗಳನ್ನು ಆಯ್ಕೆ ಮಾಡಿ ಅವುಗಳನ್ನು ಪ್ರೋತ್ಸಾಹಿಸುವುದಕ್ಕಾಗಿ. ಅಸಮರ್ಥರನ್ನು ಪ್ರೋತ್ಸಾಹಿಸುದಕ್ಕಾಗಿ ಅಲ್ಲ. ಸಮರ್ಥರನ್ನು ಆರಿಸಲಾಗದ ಸಾಹಿತ್ಯ ಅಕಾಡೆಮಿಗೆ ಶೀಘ್ರ ದುರಸ್ತಿಯ ಅವಷ್ಯಕತೆಯಿದೆ.

ಈಗ್ಗೇ ಕೆಲ ವರ್ಷಗಳ ಹಿಂದೆ ಈ ಪ್ರಶಸ್ತಿಗಳನ್ನು ಪಡೆದುಕೊಳ್ಳುವುದು ಬಹು ದುಃಸ್ತರ ಕೆಲಸವಾಗಿತ್ತು. ಮೊದಲಾಗಿ ಹಿಂದೂಗಳ ವಿರುದ್ಧವಾಗಿ ಸುಳ್ಳು ಸಂಶೋಧನೆಗಳನ್ನು ಮಾಡಿ ಅದರ ಬಗ್ಗೆ ಪುಸ್ತಕ ಬರೆಯಬೇಕು, ಅದರಲ್ಲಿ ಹಿಂದೂಗಳ ಭಾವನೆ ಕೆರಳಿಸುವಂತೆ ವಾಚಾಮಗೋಚರ ಬೈಯ್ಯಬೇಕು. ಪುಸ್ತಕ ಬಿಡುಗಡೆಯಾದ ಮೇಲೆ ಸರ್ಕಾರಕ್ಕೆ ಅರ್ಜಿ ಗುಜರಾಯಿಸಬೇಕು. ಅಮೇಲೆ ಎಂಪಿ ಎಮ್ಮೇಲ್ಲೆಗಳ ಮೂಲಕ ಶಿಫಾರಸ್ಸು ಮಾಡಿಸಬೇಕು, ಒತ್ತಡ ಹೇರಬೇಕು. ಅದರಲ್ಲಿ ಯಾರು ಯಶಸ್ವಿಯಾಗಿ ಹಿಂದೂಗಳನ್ನು ಕೆರಳಿಸಿದ್ದಾರೋ ಅವರಿಗೆ ಪ್ರಶಸ್ತಿ ಸಿಗುತ್ತಿತ್ತು. ಈಗ ಪ್ರಶಸ್ತಿ ಪಡೆದುಕೊಳ್ಳುವುದು ಅಷ್ಟೆಲ್ಲಾ ಕಷ್ಟವಿಲ್ಲ. ಇನ್’ಫ್ಯಾಕ್ಟ್ ವೆರಿ ಸಿಂಪಲ್. ಸಭೆ ಸಮಾರಂಭ ಯಾವುದೇ ಇರಲಿ. ಮೈಕ್ ಮತ್ತು ಮೀಡಿಯಾ ಎರಡು ಎದುರಿಗಿರಲಿ. ಬಾಯಿಂದ ಹಿಂದೂಗಳನ್ನು ಬೈಯ್ಯುವ ಸಹಸ್ರನಾಮ ಬರಲಿ. ಪ್ರಶಸ್ತಿ ಗ್ಯಾರಂಟೀ ಅನ್ನುವಂತಾಗಿದೆ ಅವಸ್ಥೆ.

ಸಿದ್ಧರಾಮಯ್ಯ ಸರಕಾರವನ್ನು ಕೆಲ ಪ್ರಶ್ನೆಗಳನ್ನು ಕೇಳಲೇ ಬೇಕಾಗಿದೆ. ಮೊದಲನೇಯದು, ಭುವಿತ್ ಶೆಟ್ಟಿಯ ಸ್ಟೇಟಸ್ ಕೊಲೆಗೆ ಪ್ರಚೋದನೆ ನೀಡುತ್ತದೆಯೆಂದಾದರೆ ಭಗವಾನ್ ಅಸಂಬದ್ಧ ಹೇಳಿಕೆಗಳು ಹಿಂಸೆಗೆ ಪ್ರಚೋದನೆ ನೀಡುವುದಿಲ್ಲವೇ? ಅವರ ಹೇಳಿಕೆಗಳನ್ನು ಬಂದ್ ಮಾಡಲು ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ? ಎರಡನೇಯದು, ನಮ್ಮ ಧರ್ಮದ ಮೇಲೆ ಅತ್ಯಾಚಾರವೆಸಗುತ್ತಿರುವವರನ್ನು ನಾವು ಖಂಡಿಸಿದರೆ ಅದು ವೈಚಾರಿಕತೆಯ ಕೊಲೆ,  ಧರ್ಮವನ್ನು ಹಿಗ್ಗಾಮುಗ್ಗ ಟೀಕಿಸಿದರೆ ಅದು ವಾಕ್ಸ್ವಾತಂತ್ರವಾ? ಮೂರನೇಯದು,ಭಗವಾನ್’ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಡಲು ಅನುಸರಿಸಿದ ಮಾನದಂಡವೇನು? ಬಹುಸಂಖ್ಯಾತರನ್ನು ಸಾಧ್ಯವಾದಷ್ಟು ಮೆಟ್ಟಬೇಕು ಎನ್ನುವ ಕಾಂಗ್ರೆಸ್ಸ್’ನ ತತ್ವ ಸಿಧ್ಧಾಂತಗಳ ಮುಖವಾಣಿಯಾಗಿ ಭಗವಾನ್ ಕೆಲಸ ಮಾಡುತ್ತಿದ್ದಾರೆಂಬ ಮಾನದಂಡವಾ?  ಯಾವುದೇ ಸಂಭಾವನೆಯಿಲ್ಲದೇ ಈ ಕೆಲಸ ಮಾಡುತ್ತಿರುವದರಿಂದ ಕನಿಷ್ಟ ಪಕ್ಷ ಪ್ರಶಸ್ತಿ ಕೊಟ್ಟಾದರೂ ಪ್ರೋತ್ಸಾಹಿಸೋಣ ಎಂಬುದು ಸರ್ಕಾರದ ಉದ್ದೇಶವಾ? ಆ ಮೂಲಕ ಭಗವಾನರ ಸಮಾಜ ಸೇವೆ ನಿರಂತರವಾಗಿ ಮುಂದುವರಿಯಲಿ ಎಂಬುದು ಸರಕಾರದ ಇಚ್ಚೆಯಾ? ನಾಲ್ಕನೇಯದು, ಕಲ್ಬುರ್ಗಿ ಹತ್ಯೆ ವೈಚಾರಿಕತೆಯ ಹತ್ಯೆ ಎಂದಾದರೆ ಜೀವನ ಮೌಲ್ಯಗಳನ್ನು ಭೋಧಿಸುವ ಸತ್ವಪೂರ್ಣ ಗ್ರಂಥಗಳನ್ನು ತೆಗಳುವ ಭಗವಾನನಂತವರಿಗೆ ಪ್ರಶಸ್ತಿ ಕೊಡುವುದೂ ಸಹ ವೈಚಾರಿಕತೆಯ ಹತ್ಯೆಯಲ್ಲವೇ? ಮತ್ತು ಕೊನೇಯ ಪ್ರಶ್ನೆ, ಕಲ್ಬುರ್ಗಿ ಅವರು ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಿದ್ದೇ ಅವರ ಕೊಲೆಗೆ ಕಾರಣ, ಅದರಲ್ಲಿ ಹಿಂದೂ ಸಂಘಟನೆಗಳ ಕೈವಾಡವಿದೆಯೆನ್ನುವ ಒಂದು ಪಂಥದ ವಾದ ನಿಜವೇ ಆದರೆ,   ಭುವಿತ್ ಶೆಟ್ಟಿ ಸ್ಟೆಟಸ್ ಕೊಲೆಗೆ ಪ್ರಚೋದನೆ ನೀಡುತ್ತದೆ ಎಂಬುದು ನಿಜವೇ ಆದರೆ, ಭಗವಾನರಂತಹ ತಿಳಿಗೇಡಿಗಳಿಗೆ ಪ್ರಶಸ್ತಿ ಕೊಟ್ಟು ಪ್ರೋತ್ಸಾಹಿಸುವುದೂ ಕೂಡಾ ಪರೋಕ್ಷವಾಗಿ ಮತ್ತೊಂದು ಕೊಲೆಗೆ ಪ್ರೋತ್ಸಾಹಿಸಿದಂತೆ ಅಲ್ಲವೇ??

ಇಲ್ಲಿನ ಸ್ಥಿತಿ ಹೇಗಾಗಿಯೆಂದರೆ, ಹಿಂದೂಗಳ ವಿರುದ್ಧ ಏನು ಬೇಕಾದರೂ ಮಾತಾಡಿ, ಅಶ್ಲೀಲವಾಗಿ  ಅವಹೇಳನ ಮಾಡಿ, ಪ್ರಶಸ್ತಿ ಕೊಟ್ಟು ಪ್ರೋತ್ಸಾಹಿಸುತ್ತಾರೆ. ಅದೇ ಅವಹೇಳನ ಮಾಡುವವರನ್ನು ನಿಮ್ಮದೇ ವಾಕ್ಸ್ವಾತಂತ್ರ ಬಳಸಿ ತೆಗಳಿ. ಜೈಲಿಗೆ ತಳ್ಳಿ ಬಾಯಿಮುಚ್ಚಿಸುತ್ತಾರೆ. ಒಂದರ್ಥದಲ್ಲಿ ಸಿದ್ಧರಾಮಯ್ಯನವರಿಂದ ಆಳಿಸಿಕೊಳ್ಳುತ್ತಿರುವ ನಾವೆಲ್ಲಾ ಧನ್ಯರು.  ಅಲ್ವಾ?

ಇಲ್ಲಾ, ಇಷ್ಟು ದಿನ ಹೇಳಿಕೆಗಳನ್ನು ಸಹಿಸಿಕೊಂಡಿದ್ದಾಯ್ತು. ಇನ್ನು ಸುಮ್ಮನೆ ಕೂರುವುದು ತರವಲ್ಲ..  ನಮ್ಮೆಲ್ಲರ ತೆರಿಗೆ ಹಣದಿಂದ  ಪ್ರಶಸ್ತಿ ಕೊಡುವಾಗಲೂ ನಾವು ಸುಮ್ಮನಿದ್ದರೆ ನಮ್ಮಷ್ಟು ಹೇಡಿಗಳು ಮತ್ತೊಬ್ಬರಿರುವುದಿಲ್ಲ. ಅಂತರ್ಜಾಲದಲ್ಲಿ ಈಗಾಗಲೇ ಸಾತ್ವಿಕ ಹೋರಾಟ ಶುರುವಾಗಿದೆ. ಪ್ರಶಸ್ತಿ ಹಿಂಪಡೆಯುವರೆಗೂ ವಿರಮಿಸದಿರೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!