Author - Guest Author

ಅಂಕಣ

ಉತ್ತರ ಭಾರತೀಯರಿಗೆ ಬೆಂಗಳೂರು ಆಕ್ಷಯ ಪಾತ್ರೆಯಂತೆ

ಎಲ್ಲರಿಗೂ ನಮಸ್ಕಾರ, ನಾನು ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ವ್ಯಾಸ೦ಗ ಮಾಡುತ್ತಿದ್ದೇನೆ. ನನ್ನ ಸ್ವಂತ ಊರು ದಾವಣಗೆರೆ ಆದರೆ ಬೆಂಗಳೂರಿಗೆ ಬಂದು ಒಂದುವರ್ಷದ ಮೇಲಾಯ್ತು. ನಿನ್ನೆ ಬೆಳೆಗ್ಗೆ ಕ್ಷೌರಕ್ಕೆಂದು ಸಲೂನ್ ಗೆ ಹೋದಾಗ ನನಗೊಂದು ಅಚ್ಚರಿ ಕಾದಿತ್ತು. ಅದೇನೆಂದರೆ ಆ ಅಂಗಡಿ ನಮ್ಮ ಕಾಲೇಜ್ ರಸ್ತೆಯಲ್ಲಿ ಕೆಲವು ದಿನಗಳ ಹಿಂದಷ್ಟೇ...

ಅಂಕಣ ಭಾವತರಂಗ

ಪ್ರೀತಿಗೆ ಕಣ್ಣಿಲ್ಲ?

ಸುನಿಲ್ ಮತ್ತು ನಾನು ಇಬ್ರೂ ಫ್ರೆಂಡ್ಸ್, ಬೆಸ್ಟ್ ಅಲ್ಲ, ಜಸ್ಟ್ ಕ್ಲೋಸ್ ಫ್ರೆಂಡ್ಸ್. ಎಂಟನೇ ತರಗತಿಯಿಂದ ಒಟ್ಟಿಗೆ ಓದಿದ್ದು ನಾವು. ನಮ್ಮಿಬ್ಬರಲ್ಲಿ ಮುಚ್ಚಿಡುವಂತಾದ್ದು ಏನೂ ಇರಲಿಲ್ಲ. ಅವನ ಕಷ್ಟ ನನ್ನತ್ರ ಹೇಳ್ತಿದ್ದ, ನನ್ನ ಕಷ್ಟ ಅವನಲ್ಲಿ. ಅವನು ಅತ್ಯಂತ ಚುರುಕಾದ ಸ್ವಭಾವದವನು. ಕಲಿಕೆಯಲ್ಲಿ ಯಾವಾಗಲೂ ನಮಗಿಬ್ಬರಿಗೆಯೇ ಫೈಟ್ ಮತ್ತು ನಮಗೆ ಫೈಟ್ ಕೊಡೋರು ಬೇರೆ...

ಕವಿತೆ

ಸುಬ್ಬಂಣನ ತ್ರಿಪದಿಗಳು

೧. ದಕ್ಕದಿರೆ ಮಂತ್ರಿಪದ | ಪಕ್ಷವನು ತೊರೆಯುವರು ಉಕ್ಕಿ ಹರಿಯುವ ದೇಶಭಕ್ತಿಗಿದು ಬಲುದೊಡ್ಡ ಸಾಕ್ಷ್ಯ ನೋಡೆಂದ ಸುಬ್ಬಂಣ || ೨.ಬೆಕ್ಕಿಂಗೆ ಹಾಲೆರೆಯೆ |ನೆಕ್ಕದಿರ್ಪುದೆ ಇರುವೆ ಸಕ್ಕರೆಯ ಕಂಡು ತಾ ಮೆಲದಿಹದೆ ಕೊಡೆ ಲಂಚ ಮುಕ್ಕದವರಾರು ಸುಬ್ಬಂಣ || ೩.ಕಂಬವೇ ಕೈಯೊಡ್ಡಿ | ತಿಂಬ ಕಾಲವು ಬಂತು ತುಂಬಿ ಭ್ರಷ್ಟಾಚಾರ ದೇಶದಲಿ ಸುಜನರಿಗೆ ಕಂಬನಿಯದಾಯ್ತು ಸುಬ್ಬಂಣ || ೪...

ಕವಿತೆ

ಪ್ರಕೃತಿ ಸ್ಪಂದನ

ಹೇರಿ ಹನಿಯ ಮಣಿಯ ಮಾಲೆ ಸೀರೆ ಹಸುರ ಸೆರಗು ಭಾರ ಸೂರೆಗೈವ ತೆನೆಯ ತೊನೆತ ನದಿಯ ಹಾಡಿಗೆ ನೇರ ನಕ್ಕ ಸೂರ್ಯಕಾಂತಿ ಬೀರಿ ನೋಟ ಸೃಷ್ಟಿಯರಳೆ ಸಾರೆ ಶುಭವ ಬಾನಿನುದಯವಾಯ್ತು ಮೆಲ್ಲಗೆ || ಖಾರವಾಗಿ ನೋಟವೆಸಗೆ ನೀರು ಹೆದರಿ ಮೇಲಕೇರಿ ಸೇರಿ ಮುಗಿಲ ನಾಡಿನಲ್ಲಿ ಸಂಘ ಕಟ್ಟಿರೆ ತಾರೆ ವರ್ಷಋತುವಿನಲ್ಲಿ ಹೇರಿ ಬಂದ ಮುತ್ತ ಮಾಲೆ ಧಾರೆಯುದುರೆ ಸುಪ್ರಭಾತ ಮರಳಿ ಧರಣಿಗೆ || ಕದ್ದು...

ಪ್ರವಾಸ ಕಥನ

ಕದಿಂಚೆ ಭೂತಾನ್- ಭಾಗ-೧

“ಬರೀ ಗುಡ್ದಗಾಡು ಜನರ ದೇಶವಂತೆ, ಅಡಗಿಕೊಂಡು ವಿಷ ಬಾಣಗಳನ್ನು ಬಿಡುತ್ತಾರಂತೆ, ಹುಷಾರು ಮಾರಾಯ್ತೀ..” ಎಂದು ತುಂಬಾ ಜನ ಭೂತಾನಿಗೆ ಹೊಗಬೇಕೆಂದಿದ್ದೇನೆ ಎಂದು ನಾನು ಅಧಿಕೃತವಾಗಿ ಪ್ರಕಟಿಸಿದಾಗ ಬುದ್ದಿವಾದ ಹೇಳಿದ್ದರು. ಭೂತಾನಿನ ಇತಿಹಾಸದಲ್ಲಿ, ಹಿಂದೊಮ್ಮೆ ಪರರ ಧಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರು ಇಂಥಹಾ ಯುದ್ಧ ತಂತ್ರಗಳನ್ನು...

ಕಥೆ

ಮನಸೆಲ್ಲಾ ನಿನ್ನಲ್ಲೇ ನೆಲೆಯಾಗಿದೆ….

ಹುಡುಗೀ, “ಎಲ್ಲಿಯೋ ಮಧು ಬಟ್ಟಲು ಒಡೆದ ಸದ್ದು! ಯಾರ ಹೃದಯ ಚೂರಾಯಿತೋ?”ಎಂದು ಕೇಳಿದವನು ಗಾಲಿಬ್……… ಮನಸೆಲ್ಲಾ ನಿನ್ನಲ್ಲೇ ನೆಲೆಯಾಗಿದೆ…. ಈ ಬದುಕಿನಲ್ಲಿ ಪ್ರೀತಿಯನ್ನು ಅನುಭವಿಸಿದಷ್ಟೇ ತೀವ್ರವಾಗಿ ವಿಷಾಧವನ್ನೂ ಅನುಭವಿಸಿದವರಿಗೆ ಮಾತ್ರ ಆ ಸದ್ದು ಕೇಳುತ್ತದೆ. ಅಂತಹ ಪ್ರತಿ ಸದ್ದಿನ ಹಿಂದೆ ಒಂದು ವಂಚನೆ ಇರಬಹುದು ಅಥವಾ...

ಅಂಕಣ

ಭಾಗ್ಯಗಳು ನಮ್ಮ ದೌರ್ಬಲ್ಯಗಳಾಗದಿರಲಿ ಅಷ್ಟೇ!

ಆಶ್ವಾಸನೆ ಹಾಗೂ ಆಮಿಷ ಇವೆರಡೂ ಇಲ್ಲದ ರಾಜಕೀಯ ಬಹುಶಃ ಎಲ್ಲೂ ಇರಲಿಕ್ಕಿಲ್ಲ! ಇವೆರಡೂ ರಾಜಕಾರಣಿಗಳ ಅಧಿಕಾರದ ದಾಹಕ್ಕೆ ಇರುವ ಅಡಿಗಲ್ಲುಗಳು. ಚುನಾವಣೆ ಸಮೀಪಿಸುತ್ತಿರುವಾಗ ಇಲ್ಲವೇ ಜನರ ಬಳಿ ತೆರಳುವಾಗ ಜನರ ಕಿವಿಗಳ ಬಳಿ ಒಂದಷ್ಟು ಬಣ್ಣದ ಮಾತುಗಳನ್ನಾಡುತ್ತಾ ಅವರನ್ನು ಮರಳುಗೊಳಿಸಿ ತಮ್ಮತ್ತ ಸೆಳೆಯುವುದು ಅಧಿಕಾರದ ಮೆಟ್ಟಿಲೇರಲುಇರುವ ಒಂದು ನಡೆಯಾದರೆ, ಇನ್ನು...

ಕವಿತೆ

ಕಂದಪದ್ಯ 4

ಪ್ರೀತಿಯ-ಜ್ವಾಲೆ ಅತಿಯಾಗಿದೆ ಅತಿಯಾಗಿದೆ ಈ ಹೃದಯದಲಿ ಬಡಿತ ಮಿತಿಮೀರಿದೆ ಮಿತಿಮೀರಿದೆ ಈ ಮನದೊಳಗಿನ ತುಡಿತ ಮರೆಯಲಾರೆ ನಾ ನಿನ್ನ ರೂಪ ತಾಳಲಾರೆ ನಾ ಈ ವಿಲಾಪ ಕೊಡುವೆಯಾ ನನಗೆ ಪ್ರೀತಿಯ ವರವ ಎಂದೆಂದೂ ಬಿಡೆನು ನಾ ನಿನ್ನಾ ಕರವ ಮೊದಲಾ ನೋಟಕೆ ಏನೋ ರೋಮಾಂಚನ ಮಳೆ ಹನಿ ರೀತಿಯ ಪ್ರೀತಿ ಸಿಂಚನ ಬಡಿದೆಬ್ಬಿಸಿಹೆ ನನ್ನಾ ಮಲಗಿದ್ದ ಹೃದಯವ ಮೌನವಾಗಿಸಿಹೆ ನನ್ನೀ ಚಂಚಲ ಮನವ...

ಕಥೆ

‘ಪ್ರೇಮ್’ ಕಥೆ

ಅಧ್ಯಾಯ – ೧ ಪ್ರೇಮ್ ಈ ಹೆಸರು ಸುಳಿದೊಡನೆ ನನಗೆ ಯಾವಾಗಲೂ ಸುಮಾರು ಎಂಟು ವರ್ಷದ ಹಿಂದಿನ ಅನುಭವವೊಂದು ನೆನಪಾಗುತ್ತದೆ. ಈಗಷ್ಟೇ ಆಫೀಸಿನಲ್ಲಿ ಯಾರೋ “ಹಾಯ್ , ಐ ಆಮ್ ಪ್ರೇಮ್ “ಎಂದು ಪರಿಚಯಿಸಿಕೊಂಡರು. ಅಲ್ಲಿಂದಲೇ ನಾನು ಕಾಲದಲ್ಲಿ ಹಿಂದಕ್ಕೆ ಚಲಿಸಿದ್ದು. ಆವತ್ತು ಸೋಮವಾರ ಬೆಳಗಿನ 5 ಗಂಟೆ. ಅಪ್ಪ ಸ್ನಾನ ಮಾಡೆಂದು ಕರೆಯುತ್ತಿದ್ದರು. ನನಗೆ...

ಕಥೆ

ಬೆಳಕೊಂದೇ ನಿನ್ನಲ್ಲಿ ನಾ ಬಯಸಿದೆ..!

“ನೀನಿಲ್ಲದೇ….. ನನಗೇನಿದೆ….” ಭಾವ ತುಂಬಿ ಹಾಡುತ್ತಿದ್ದ ಆ ಗೀತೆ ಬೆಳಿಗ್ಗೆ ಪೇಪರ್ ಓದುತ್ತಿದ್ದ ನನಗೆ ಅದೆಂತದೋ ಉಲ್ಲಾಸ ನೀಡಿತ್ತು..!! ಆದರೆ ಆ ಉಲ್ಲಾಸ ಹೆಚ್ಚು ಹೊತ್ತು ಉಳಿಯಲಿಲ್ಲ. ಪೇಪರ್ ನಲ್ಲಿ ಪ್ರಕಟವಾಗಿದ್ದ ಅವಳ “ಆಘಾತಕಾರಿ” ಸುದ್ದಿ ನೋಡಿ ಬೆಳ್ಳಂ ಬೆಳಗ್ಗೆಯೇ ನನ್ನ ಹೃದಯಕ್ಕೆ “ಶಾಕ್”...