Author - Guest Author

ಅಂಕಣ

ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳು –...

ಹಾಸ್ಟೆಲ್ ವಿದ್ಯಾಭ್ಯಾಸ ನಿಜವಾಗಿಯೂ ವಿದ್ಯಾರ್ಥಿನಿಯರಿಗೆ ಕಷ್ಟವಾಗುತ್ತಿದೆಯೇ ಅಥವಾ ಪ್ರಸ್ತುತ ಶೈಕ್ಷಣಿಕ ಮಾನದಂಡಗಳು ವಿದ್ಯಾರ್ಥಿನಿಯರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದೆಯೇ ಎಂಬ ಮೂಲಭೂತ ಪ್ರಶ್ನೆ ಎದುರಾಗುವಂತೆ ಮಾಡುತ್ತಿದೆ ಆಗಾಗ್ಗೆ ವರದಿಯಾಗುತ್ತಿರುವ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳು. ವಿದ್ಯಾರ್ಥಿಗಳು ಪರೀಕ್ಷಾ ಭಯದಿಂದ ಮತ್ತು ತಾವು...

ಅಂಕಣ

ಈಶಾನ್ಯದ ಬೆಟ್ಟಗಳೆಡೆಗೆ

ಯಾರೋ ಕರೆದಂತಾಯಿತು. ಕನಸೋ ನನಸೋ ಗೊತ್ತಾಗಲಿಲ್ಲ. ಸ್ವಪ್ನಾವಸ್ಥೆಯಿಂದ ಜಾಗ್ರದಾವಸ್ಥೆಗೆ ಬರುವುದು ಸುಲಭವೇನೂ ಅಲ್ಲವಲ್ಲ! ಕಷ್ಟಬಿಟ್ಟು ಕಣ್ಣುಬಿಟ್ಟೆ. ಇವತ್ತು ಚಿರಾಪುಂಜಿಗೆ ಹೊರಡಬೇಕೆಂಬುದು ನೆನಪಾಗಿ ಸಟಸಟನೆ ಎದ್ದೆ. “ಆರಾಮ್ ಸೇ ಉಠೋ. ಲೇಟ್ ನಹೀ ಹುವಾ ಹೈ. ಪಹಲೇ ಮೈ ನಹಾಕೆ ಆವೂಂಗಾ” ಎನ್ನುತ್ತಾ ಸುಜಿತ್ ಸ್ನಾನಕ್ಕೆ ಹೊರಟ. ನಾನು ಸಾವರಿಸಿಕೊಂಡು...

ಕಥೆ

ವಾಸನೆ

ಬಸ್ ಸ್ಟಾಪಿನಿಂದ ನನ್ನನ್ನು ಕರೆದೊಯ್ಯಲು ಬಂದ ಅಪ್ಪ ಕಾರಿನೊಳಗೆ ನನ್ನ ದೊಡ್ಡ ಬ್ಯಾಗನ್ನು ತಳ್ಳುತ್ತ ಹೇಳಿದ, “ಪುಟ್ಟಿ, ನಮಗೆ ಜಾತ್ರೆ ಇಲ್ಲ ಈ ಸಲ. ಹೊನ್ನಾವರದಲ್ಲಿ ನಮ್ಮ ಕುಟುಂಬದವನೊಬ್ಬ ಹಾವು ಕಚ್ಚಿ ಸತ್ತು ಹೋದ, ಅದೇ ಮಂಜ ಭಟ್ಟ. ಮೂರು ದಿನದ ಸೂತಕ“. ನಾನು ಎಂದೂ ಭೇಟಿಯಾಗದವನ ಬಗೆಗೂ ಅಯ್ಯೋ ಪಾಪ ಎನ್ನಿಸಿತು. ನಾನು ಬೆಂಗಳೂರಿನಲ್ಲೊಬ್ಬ ಟೆಕ್ಕಿ...

ಕವಿತೆ

ನಗೆಯ ತುಣುಕುಗಳು

ತುಕ್ಕು ಹಿಡಿದ ನಗುವನ್ನೂ ಬಚ್ಚಿಟ್ಟಿರುವೆನು ಉಜ್ಜಿ ಹೊಸದಾಗಿಸಲಾಗದು ಇರುವುದನ್ನಾದರೂ ಉಳಿಸಿಕೊಳ್ಳಬೇಕಿದೆ; ಬಿತ್ತಿ ಬೆಳೆಸಲಾಗುವುದಿಲ್ಲ ಇರುವುದನ್ನೇ ಜೋಪಾನಮಾಡಿಕೊಳ್ಳಬೇಕಿದೆ.   ಒಳಗೊಳಗೇ ನಕ್ಕು ಖುಷಿಯಾಗಿದ್ದರೂ ಸಹಿಸುವುದಿಲ್ಲ ಈ ಜನ, ತಿರುಗಿ ಕೊಡುವುದಂತೂ ಇಲ್ಲ ಕಂಡರೆ ಕದಿಯಲು ಹಾತೊರೆಯುತ್ತಾರೆ.   ತಲೆಯೆತ್ತಿ ನೋಡಲೂ ಸಮಯವಿಲ್ಲ ಈ ಜನರಿಗೆ...

ಅಂಕಣ

ಇರಲಿ ವಸಡುಗಳು ಜೋಪಾನ, ಉತ್ತಮ ಆರೋಗ್ಯಕ್ಕೆ ಅದುವೇ ಸೋಪಾನ!

ಸ್ಕೇಲಿಂಗ್ ಎಂದರೇನು? ಮಾಡಿಸಲೇಬೇಕೇ? ದಂತವೈದ್ಯರು ಸ್ಕೇಲಿಂಗ್ ಮಾಡಿಸಬೇಕು ಎಂದಾಗ ಮೂಡುವ ಸಹಜ ಪ್ರಶ್ನೆಗಳು ಇವು. ಹಲ್ಲು, ಬಾಯಿಯ ವಾತಾವರಣದಲ್ಲಿ ಇರುವುದಕ್ಕೆ ಕಾರಣ ಅದರ ಅಡಿಪಾಯವಾದ ವಸಡುಗಳು. ಗಮ್ ಅಥವಾ ಜಿಂಜೈವ ಎಂದು ಅದನ್ನು ಕರೆಯಲಾಗುತ್ತದೆ. ಇದು ಹಲ್ಲಿನ ಸುತ್ತ ಮುತ್ತಿಕೊಂಡು ಹಲ್ಲಿನ ಬೇರುಗಳನ್ನು ರಕ್ಷಣೆ ಮಾತ್ರವಲ್ಲದೆ ದವಡೆಗಳ ಹೊದಿಕೆಯಂತೆ ಇರುತ್ತದೆ...

Featured ಕವಿತೆ

ಅಟಲ್ ಜೀ, ಅಮರರಾಗಿರಿ..

ಸತ್ತಾಗ ಅತ್ತರೇನು? ನೆನೆನೆನೆದು ಬಿಕ್ಕಿದರೇನು? ವ್ಯಕ್ತಿ ಮರಳಿ ಬರುವನೇನು? ಬಂದು ದುಖಃ ನೀಗುವನೇನು? ಅಳುವರಯ್ಯಾ ಇವರು ಸತ್ತಾಗ ಅಳುವರು! ಇದ್ದಾಗ ಬಾ ಎನಲಿಲ್ಲ ಬಂದರೆ ನಾಲ್ಕು ದಿನವಿರು ಎಂದೆನ್ನಲಿಲ್ಲ ಎರಡೇ ದಿನಕ್ಕೆ ಮುಖ ತಿರುವಿಬಿಟ್ಟಿರಲ್ಲ! ಅಳುವರಯ್ಯಾ ಇವರು ಸತ್ತಾಗ ಅಳುವರು ಮತ್ತೆ ನಾಳೆ ಬೆಳಕು ಹರಿವುದೆಂದರು ನಗುತಾ ಮುನ್ನಡೆಯೋಣವೆಂದರು ಶಾಂತಿಯ ಜೀವನದ ಹೊಸ...

Featured ಸಿನಿಮಾ - ಕ್ರೀಡೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ

ನಿಮಗೆ ನೆನಪಿದೆಯಾ? ಬೆನ್ನಿಗೊಂದು ಬ್ಯಾಗು ನೇತುಹಾಕಿಕೊಂಡು ನಡಕೊಂಡೋ, ಬಸ್ಸಲ್ಲೋ ಶಾಲೆಗೆ ಹೋದದ್ದು; ಹೋಮ್’ವರ್ಕು ಮಾಡದೆ ಟೀಚರ ಕೈಲಿ ಪೆಟ್ಟು ತಿಂದದ್ದು, ಶಾಲೆಯ ಹೊರಗೆ ಮಾರುತ್ತಿದ್ದ ರೂಪಾಯಿಯ ಐಸ್ ಕ್ಯಾಂಡಿಗಾಗಿ ಬಸ್ಸಲಿ ಹೋಗದೆ ಉಳಿಸಿಟ್ಟ ಹಣ ಕೊಟ್ಟು ಮೈಯೆಲ್ಲ ಬಾಯಾದದ್ದು. ಮರೆತೋಗಿದೆಯಾ? ಚಿಂತಿಸಬೇಡಿ, ನಿರ್ದೇಶಕ ರಿಷಭ್ ಶೆಟ್ಟಿ ಮತ್ತೆ ನಿಮ್ಮನ್ನ ಕರಕೊಂಡು...

ಅಂಕಣ

‘ನೆರೆ’ಯ ನೆನೆಯುತ

ಕಳೆದ ಕೆಲವು ದಿನಗಳಿಂದ ದೇವರ ನಾಡು ಕೇರಳ ಅಕ್ಷರಶಃ ನರಕಸದೃಶವಾಗಿದೆ. ಪ್ರಕೃತಿ ಆರಾಧಕರ ಊರಾದ ಕೊಡಗು ಪ್ರಕೃತಿಮಾತೆಯ ಮುನಿಸಿಗೆ ಸಿಕ್ಕಿ ನಲುಗಿ ಹೋಗಿದೆ. ಕರ್ನಾಟಕದ ಕರಾವಳಿ ಭಾಗಗಳೂ ಕೊಂಚಮಟ್ಟಿಗೆ ಹಾನಿಗೀಡಾಗಿವೆ. ಕೇರಳ ಸರ್ಕಾರ ಆಗಸ್ಟ್ ೧೮ರಂದು ನೀಡಿರುವ ಮಾಹಿತಿಯ ಪ್ರಕಾರ ಈಗಾಗಲೇ ಅಲ್ಲಿ ೨೧೭ ಜನ ಮಳೆಯ ಕಾರಣದಿಂದಾಗಿ ಮೃತಪಟ್ಟಿದ್ದಾರೆ. ಸುಮಾರು 1,೪೩,೨೨೦...

ಅಂಕಣ

ಹಲ್ಲೆಂದರೇಕೆ ಅಂತಹ ತಾತ್ಸಾರ?

ರುಚಿಯಾದ, ಇಷ್ಟಕರವಾದ ತಿಂಡಿ-ತಿನಿಸುಗಳನ್ನು ಸೇವಿಸಲು ಬಾಯಿಯಲ್ಲಿ ಆರೋಗ್ಯಕರವಾದ ಹಲ್ಲುಗಳು ಮುಖ್ಯ. ‘ಬೊಚ್ಚು ಬಾಯಿ ಬಿಟ್ಟು ಅಜ್ಜಿ ನಕ್ಕರೆ ಚಂದ’ ಎಂಬ ಹಾಡು ಕೇಳಲು ಇಂಪಾದರೂ, ಹಲ್ಲುಗಳು ನಗುವಿನ ಸೌಂದರ್ಯವನ್ನು ವೃದ್ಧಿಸುತ್ತವೆ. ಹೀಗೆ ಹಲವು ವಿಚಾರಗಳಲ್ಲಿ ಹಲ್ಲಿನ ಅಗತ್ಯವಿದ್ದರೂ, ಹಲ್ಲಿನ ಆರೋಗ್ಯದ ಬಗ್ಗೆ ಅದೇಕೋ ಜನರಲ್ಲಿ ಕಾಳಜಿ ಕಡಿಮೆ. ಹಲ್ಲಿಗೂ ರಿಪೋರ್ಟ್...

Featured ಅಂಕಣ

ಕೊಳವೆಬಾವಿಗಳಿಗೆ ಪುನರ್ಜನ್ಮ ನೀಡುತ್ತಿರುವ – ರೆಬೆಲ್ಲೊ

ನೀರು ನಮ್ಮ ಮೂಲಭೂತ ಅಗತ್ಯ. ಇದು ಪ್ರಕೃತಿಯಿಂದ ಉಚಿತವಾಗಿ ಸಿಗುವ ಸಂಪನ್ಮೂಲ. ಆದರೆ ನೀರನ್ನು ಉಳಿಸುವ ಬಗ್ಗೆ ಎಂದಾದರೂ ಯೋಚನೆ ಮಾಡಿದ್ದೀರಾ? ಇತ್ತೀಚಿನ ದಿನಗಳಲ್ಲಂತೂ ಮಾರ್ಚ್-ಏಪ್ರಿಲ್ ಬಂದರೆ ಸಾಕು ಕುಡಿಯಲು ನೀರಿಲ್ಲ ಎಂಬ ಕೂಗು. “ಕೆರೆಯ ನೀರನು ಕೆರೆಗೆ ಚೆಲ್ಲಿ” ಎಂಬಂತೆ ಮಳೆ ನೀರನ್ನು ಪುನಃ ಭೂಮಿಗೆ ಇಂಗಿಸಿದರೆ ಹೇಗೆ? ಇದರಿಂದ ಅಂತರ್ಜಲ ಮಟ್ಟವೂ...