ಅಂಕಣ

ಹಲ್ಲೆಂದರೇಕೆ ಅಂತಹ ತಾತ್ಸಾರ?

ರುಚಿಯಾದ, ಇಷ್ಟಕರವಾದ ತಿಂಡಿ-ತಿನಿಸುಗಳನ್ನು ಸೇವಿಸಲು ಬಾಯಿಯಲ್ಲಿ ಆರೋಗ್ಯಕರವಾದ ಹಲ್ಲುಗಳು ಮುಖ್ಯ. ಬೊಚ್ಚು ಬಾಯಿ ಬಿಟ್ಟು ಅಜ್ಜಿ ನಕ್ಕರೆ ಚಂದ ಎಂಬ ಹಾಡು ಕೇಳಲು ಇಂಪಾದರೂ, ಹಲ್ಲುಗಳು ನಗುವಿನ ಸೌಂದರ್ಯವನ್ನು ವೃದ್ಧಿಸುತ್ತವೆ. ಹೀಗೆ ಹಲವು ವಿಚಾರಗಳಲ್ಲಿ ಹಲ್ಲಿನ ಅಗತ್ಯವಿದ್ದರೂ, ಹಲ್ಲಿನ ಆರೋಗ್ಯದ ಬಗ್ಗೆ ಅದೇಕೋ ಜನರಲ್ಲಿ ಕಾಳಜಿ ಕಡಿಮೆ.

ಹಲ್ಲಿಗೂ ರಿಪೋರ್ಟ್ ಬೇಕೇ?

ಹಲ್ಲು ಕೀಳಿಸಲೆಂದು ಬರುವ ರೋಗಿಗಳಲ್ಲಿ ಮಧುಮೇಹ, ರಕ್ತದೊತ್ತಡ, ಥೈರೋಯಿಡ್ ತೊಂದರೆಗಳು, ಆಸ್ತಮಾ, ಅನುವಂಶಿಕ ರೋಗಗಳು ಹೀಗೆ ಕೆಲವು ಅನಾರೋಗ್ಯಗಳ ಬಗ್ಗೆ ವಿಚಾರಿಸಲಾಗುತ್ತದೆ. ಅದಕ್ಕೆ ಬಲವಾದ ಕಾರಣವೂ ಇದೆ. ಆದರೆ ಹಲವು ಬಾರಿ ರೋಗಿಗಳು ಮುಂತಾದ ಪ್ರಶ್ನೆಗಳನ್ನು ಕೇಳಿದಾಗ ತಮ್ಮ ಸಹನೆ ಕಳೆದುಕೊಳ್ಳುತ್ತಾರೆ. ಡೆಂಟಿಸ್ಟ್ ಬಳಿ ಹೋದರೆ, ಹೀಗೆ ಸತಾಯಿಸುತ್ತಾರೆ ಎಂಬ ಭಾವನೆಯೂ ಹಲವರಲ್ಲಿದೆ. ಅದೊಂದು ಬಾರಿ ಹಲ್ಲು ಕೀಳಿಸಿ ಎಂದು ಬಂದರೋಗಿಯೊಬ್ಬ, ಹೃದ್ರೋಗದಿಂದ ಬಳಲುತ್ತಿದ್ದ. ಅವನ ಬಳಿ ತನ್ನ ವೈದ್ಯಕೀಯ ರಿಪೋರ್ಟ್‍ಗಳನ್ನೆಲ್ಲಾ ನೋಡಿದ ಬಳಿಕ ಹಲ್ಲು ಕೀಳುತ್ತೇವೆ ಎಂದಿದ್ದಕ್ಕೆ, ನೀವೆಂತಾ ಡಾಕ್ಟರ್ ರೀ, ಹಲ್ಲು ಕೀಳುವುದಕ್ಕೂ ರಿಪೋರ್ಟ್ ಕೇಳ್ತೀರಲ್ಲಾ ಎಂದು ರೇಗಾಡಿ, ನೀವಲ್ಲದಿದ್ದರೆ ಮತ್ತೊಬ್ಬರ ಬಳಿ ಹೋಗುತ್ತೇನೆಂದು ಹೋದ.

ದೇಹಾರೋಗ್ಯಕ್ಕೂ ಹಲ್ಲಿಗೂ ನಿಕಟ ಸಂಬಂಧವಿದೆ. ರಕ್ತದೊತ್ತಡ ನಿಯಂತ್ರಣದಲ್ಲಿ ಇಲ್ಲದಿದ್ದಾಗ ಹಲ್ಲುಕಿತ್ತರೆ, ರಕ್ತಸ್ರಾವ ಹೆಚ್ಚಾಗಿ ಜೀವಕ್ಕೆ ಅಪಾಯವಾಗಬಹುದು. ಹಿಮೋಫೀಲಿಯಾ/ ಕುಸುಮರೋಗ ಎಂಬ ಅನುವಂಶಿಕ ರಕ್ತಸ್ರಾವ ಸಂಬಂಧಿತ ರೋಗವಿರುವವರಲ್ಲಿ ರಕ್ತ ಹೆಪ್ಪುಗಟ್ಟದೆ, ಅಧಿಕ ರಕ್ತಸ್ರಾವವಾಗುವ ಅಪಾಯ ಇದೆ. ಹೃದ್ರೋಗಿಗಳಲ್ಲೂ ಅಷ್ಟೆ, ಹೆಚ್ಚಿನ ರಕ್ತಸ್ರಾವ, ಚಿಕಿತ್ಸೆಯ ಒತ್ತಡದಿಂದ ಹೃದಯಾಘಾತವಾಗುವ ಸಂಭವ ಹೀಗೆ ಹಲವು ತುರ್ತು ಸಂರ್ಭದ ಸಾಧ್ಯತೆಯಿದೆ. ಹಲ್ಲು ಕೀಳಲು ನೀಡುವ ಅರಿವಳಿಕೆ ಮದ್ದಿನಲ್ಲೂ ಬದಲಾವಣೆ ಮಾಡಬೇಕಾಗುತ್ತದೆ. ಆಸ್ತಮಾ, ಥೈರಾಯಿಡ್ ತೊಂದರೆಗಳಿರುವವರಿಗೂ ಚಿಕಿತ್ಸಾ ರೀತಿ ಹಾಗೂ ಮದ್ದುಗಳಲ್ಲಿ ಕೆಲ ಬದಲಾವಣೆಯ ಅಗತ್ಯವಿರುತ್ತದೆ.

ಮಧುಮೇಹಿಗಳಲ್ಲಿ ಗಾಯಗಳು ವಾಸಿಯಾಲು ಹೆಚ್ಚಿನ ಸಮಯ ಬೇಕಾಗುತ್ತದೆ. ಬಾಯಿಯ ವಿಚಾರದಲ್ಲೂ ಅಷ್ಟೆ, ಮಧುಮೇಹ ನಿಯಂತ್ರಣದಲ್ಲಿರದ್ದಿದ್ದಾಗ, ಚುಚ್ಚುಮದ್ದಿನ ಸೂಜಿಯ ಗಾಯವೂ ಉಲ್ಬಣಗೊಂಡು ತೀವ್ರ ತೊಂದರೆಯಾಗಬಹುದು. ಅಲ್ಲದೇ ಹಲ್ಲುಕಿತ್ತರೆ, ಅದರ ಗಾಯವೂ ವಾಸಿಯಾಗದೆ ಬಹಳ ತೊಂದರೆಯಾಗುವ ಸಾಧ್ಯತೆ ಇದೆ. ಅಲ್ಲದೇ ಹಲ್ಲಿನ ಒಳಪದರಕ್ಕೆ ತಗುಲಿದ ಸೋಂಕು, ರಕ್ತದ ಮೂಲಕ ಹೃದಯದ ಕೆಲ ಭಾಗಗಳಿಗೆ ತಗುಲಿ ತೀವ್ರ ಸ್ವರೂಪದ ತೊಂದರೆಯನ್ನುಂಟು ಮಾಡಬಹುದು.

ಹಲ್ಲು ಕೀಳುವುದು ಏನು ಮಹಾ ಎಂಬ ಭಾವನೆ ಹಲವರಲ್ಲಿದೆ. ಆದರೆ ದಂತವೈದ್ಯರು ಕೆಲವೊಮ್ಮೆ ವೈದ್ಯಕೀಯ ರಿಪೋರ್ಟ್‍ಗಳ ಆಧಾರದ ಮೇಲಷ್ಟೆ ತಮ್ಮ ಕಾರ್ಯನಿರ್ವಹಿಸಬೇಕಾಗಿದೆ. ಇದು ಕಾನೂನಾತ್ಮಕ ನಡೆಯೂ ಹೌದು. ದಂತವೈದ್ಯರು ವಿನಾಕಾರಣ ರಿಪೋರ್ಟ್‍ಗಳನ್ನು ಕೇಳಿ ಸತಾಯಿಸುತ್ತಾರೆಂದು ಶಪಿಸದಿರಿ. ನಿಮ್ಮಆರೋಗ್ಯವೇ, ನಮ್ಮಆದ್ಯತೆ.

 

  • ಡಾ. ಅಶ್ವಿನ್ ಪರಕ್ಕಜೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!