ಬಹಳಷ್ಟು ಬರೆದೆ ನಾ
ನನ್ನ ಕಾವ್ಯ ಕನ್ನಿಕೆಯ ಕುರಿತು
ಶಬ್ದಗಳ ಸರ ಹೆಣೆದು ಸುಸ್ತಾದೆ,
ಅವಳ ಅಂದ ವರ್ಣಿಸಲು.
ಕೇಳುವ ಮನಸ್ಸಾಯಿತು ಅವಳ
ನನ್ನ ವರ್ಣನೆಗಳಲ್ಲಿ
ಅವಳ ಮೆಚ್ಚು ಯಾವುದೆಂದು.
ಆದರೆ ಕೇಳಲಿ ಹೇಗೆ?
ಅವಳನ್ನು ಕರೆಯಲೊಂದು
ಹೆಸರು ಬೇಕಲ್ಲವೇ?
ಏನೆಂದು ಹೆಸರಿಡಲಿ?
ಕಣ್ಣು ಮುಚ್ಚಿ ಅಕ್ಷರಗಳ ಪೋಣಿಸಿದೆ,
ಸಿಗಲಿಲ್ಲ ತೃಪ್ತಿ ನೀಡುವ ಹೆಸರು.
ಕಣ್ತೆರೆದೊಮ್ಮೆ ಸುತ್ತ ದೃಶ್ಟಿಸಿದೆ
ನನ್ನ ವರ್ಣನೆಗಳನೆಲ್ಲ
ರೂಪ ತಳೆದು ನಿಂತಂತಿತ್ತು
ನನ್ನ ಕಲ್ಪನೆಯ ಕಾವ್ಯ ಕನ್ನಿಕೆ
ಇವಳೇ ಏನೋ ಅನಿಸಿತು.
ಕರೆದೆ ಆ ಕನ್ನಿಕೆಯ
‘ಪ್ರಕೃತಿ’ ಎಂದು.