ಸಿನಿಮಾ - ಕ್ರೀಡೆ

Kannada Rapper ಚಂದನ್ ಶೆಟ್ಟಿ ಜೊತೆ EXCLUSIVE ಸಂದರ್ಶನ

Chandan Shetty interview with Readoo India

ಕನ್ನಡ Rap ಸಂಸ್ಕೃತಿಯಲ್ಲಿ ಹೊಸ ಅಲೆ ಎದ್ದಿದೆ. ಆ ಅಲೆಯ ಹೆಸರು “ಹಾಳಾಗೋದೆ”. ಯೂಟ್ಯೂಬ್’ನಲ್ಲಿ ರಿಲೀಸ್ ಆದ ಐದೇ ದಿನಕ್ಕೆ ಬರೊಬ್ಬರಿ 80000 views ಪಡೆದುಕೊಂಡಿದೆ ಎಂದರೆ…just imagine! ತಮಾಷೆ ಅಂದ್ರೆ… “ಹಾಳಾಗೋದೆ… ಹಾಳಾಗೋದೆ…” ಅಂತ ಹಾಡ್ಕೊಂಡೇ ಹಿಟ್ ಆದ್ರು “ಚಂದನ್ ಶೆಟ್ಟಿ”.

ನೋಡಿ: ಚಂದನ್ ಶೆಟ್ಟಿಯವರ ಸೂಪರ್ ಹಿಟ್ “ಹಾಳಗೋದೆ” ಗೀತೆ

ಬಹುಮುಖ ಪ್ರತಿಭೆ ಈ “ಚಂದನ್ ಶೆಟ್ಟಿ”. ಕನ್ನಡ ಚಿತ್ರರಂಗದ ಯುವ ಗಾಯಕ, ಸಂಗೀತ ನಿರ್ದೇಶಕ, ಗೀತ ರಚನೆಕಾರ ಮತ್ತು ಎಲ್ಲಕ್ಕೂ ಮುಖ್ಯವಾಗಿ ಹುಟ್ಟು Rapper. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ Viral Rap Song “ಹಾಳಾಗೋದೆ”, ಚಂದನ್ ಅವರ ಲೇಟೆಸ್ಟ್ ವಿಡಿಯೋ. Readoo Kannada ಚಂದನ್ ಶೆಟ್ಟಿ ಜೊತೆ ನಡೆಸಿದ EXCLUSIVE ಸಂದರ್ಶನ ಇಲ್ಲಿದೆ.

ಹಾಯ್ ಚಂದನ್, Congratulations… ಹೇಗನಿಸ್ತಾ ಇದೆ?”

Thank You! ತುಂಬಾನೇ ಖುಶಿ ಆಗ್ತಾ ಇದೆ. ನಮ್ಮ ಒಂದು different attempt ಏನಿದೆ ಅದನ್ನ ಜನ ಹೊಗಳ್ತಾ ಇದಾರೆ. Youthಗೆ ಇಷ್ಟ ಆಗೋ ಅಂತಹ ಸಿಂಪಲ್ subject ಆಗಿರೋದ್ರಿಂದ ಎಲ್ರಿಗೂ reach ಆಗಿದೆ.

ಹಾಗಾದ್ರೆ ಇದು ನಿಮ್ಮ ಮೊದಲ ಪ್ರಯತ್ನಾನ? ನಿಮ್ಮ Musical Career ಶುರು ಆಗಿದ್ದು ಹೇಗೆ

ಅಲ್ಲ… ಇದಕ್ಕೂ ಮೊದಲು 2010ರಲ್ಲಿ “ನನ್ನ ಪ್ರೀತಿ ಸುಳ್ಳಲ್ಲ…” ಅಂತ ಒಂದು ಆಲ್ಬಮ್ ಸಾಂಗ್ ಮಾಡಿದ್ದೆ. ಆವತ್ತಿನ ಪರಿಸ್ಥಿತಿಯಲ್ಲಿ ಅದನ್ನ ಪಬ್ಲಿಸಿಟಿ ಮಾಡೋಕೆ ಈಗಿನ ತರಹ Social Networks ಇರಲಿಲ್ಲ, ನಮ್ಮ ಹತ್ರ ದುಡ್ಡೂ ಇರಲಿಲ್ಲ. ಹಾಗಾಗಿ ಅದು Sound ಮಾಡ್ಲಿಲ್ಲ. ಈವಾಗ್ಲೂ ಅದು ಯೂಟ್ಯೂಬ್’ನಲ್ಲಿ ಇದೆ. ಅದಾದ ನಂತರ ನಾನು ಮೈಸೂರಲ್ಲಿ ಒಂದು ಕಾಲ್ ಸೆಂಟರ್’ನಲ್ಲಿ ಕೆಲಸಕ್ಕೆ ಸೇರ್ಕೊಂಡೆ. ಆದ್ರೂ ಮನಸ್ಸು ಮಾತ್ರ Music ಕಡೇನೆ ಇತ್ತು. ಇದು ನನ್ನ Field ಅಲ್ಲ, ಏನಾದ್ರೂ Achieve ಮಾಡ್ಬೇಕು ಅಂತ ಅನ್ನಿಸ್ತಾ ಇತ್ತು. ಹಾಗಾಗಿ ಕಾಲ್ ಸೆಂಟರ್ ಕೆಲಸಕ್ಕೆ Good Bye ಹೇಳಿ ಬೆಂಗಳೂರಿಗೆ ಬಂದೆ.

Magical Composer ಅಂತಾನೇ Famous ಆಗಿರೋ ಅರ್ಜುನ್ ಜನ್ಯ ಅವರ ಜೊತೆ ನೀವು ಕೆಲಸ ಮಾಡಿದ್ದೀರಿ. ಇದು ಹೇಗೆ ಸಾಧ್ಯ ಆಯ್ತು?”

ಹೌದು.  ಬೆಂಗಳೂರಲ್ಲಿ ಕೆಲಸ ಮಾಡ್ಕೊಂಡು ನನ್ನ passionಗೆ ಸರಿಯಾದ ಅವಕಾಶ ಹುಡುಕೋಣ ಅಂತ ಇದ್ದೆ. ನನಗೆ ಚಿರಂಜೀವಿ ಸರ್ಜಾ ಅವರು ಮೊದಲಿಂದಲೂ ಪರಿಚಯವಿದ್ದರು. ಅವರ ಜೊತೆ ಮೊದಲೇ ಒಂದು Album Song ಮಾಡಿದ್ದೆ. ಅವರು ಸಂಗೀತ ನಿರ್ದೇಶಕ “ಅರ್ಜುನ್ ಜನ್ಯ” ಅವರನ್ನ ನನಗೆ introduce ಮಾಡ್ಸಿದ್ರು, “ನಮ್ ಹುಡ್ಗ… Talented ಇದಾನೆ. ನಿಮ್ ಜೊತೆ ಸೇರಿಸ್ಕೊಳ್ಳಿ” ಅಂತ. ಹಾಗೆ ಅವರಿಗೆ ಎಸಿಸ್ಟಂಟ್ ಆಗಿ “ಲಕ್ಕಿ” ಚಿತ್ರದಿಂದ ಹಿಡಿದು “ಭಜರಂಗಿ”ವರೆಗೂ 25 ಚಿತ್ರಗಳಲ್ಲಿ ಕೆಲಸ ಮಾಡಿದೆ.

ಹಾಗಾದ್ರೆ ಅರ್ಜುನ್ ಜನ್ಯರ ಜೊತೆ ಕೆಲಸ ಮಾಡಿದ್ದು ಯಾವ ರೀತಿ ನಿಮಗೆ help ಆಯ್ತು?”

ಅರ್ಜುನ್ ಜನ್ಯ ಅವರು ನನ್ನ Mentor. ನನಗೆ Confidence ತುಂಬಿದ್ದು, Break ಕೊಡಿಸಿದ್ದು, Patience ಕಲಿಸಿದ್ದು ಎಲ್ಲಾ ಅವರೇ. ಅವರ ಜೊತೆ ಕೆಲಸ ಮಾಡಿದ್ದು ತುಂಬಾನೇ Help ಆಯ್ತು. ನನ್ನ Voiceಲ್ಲಿ ಇಷ್ಟೊಂದು Depth ಇರಲ್ಲಿಲ್ಲ. Voice Culture develop ಮಾಡಿಕೊಂಡಿದ್ದು ಅರ್ಜುನ್ Sir ಹತ್ರಾನೇ. ಒಂದು ಮಡಕೆ ಮಾಡೋಕೆ ಮಣ್ಣನ್ನ ಯಾವ ರೀತಿ ಹದ ಮಾಡ್ತಾರೋ, ಅದೇ ಥರಾ ಈಗ Voiceನ ಮಾಡಿದೀನಿ. ಈವಾಗ ಯಾವ ತರಹದ ಹಾಡು ಹಾಡೋಕೂ ನಾನು ಸೈ. ಈ ನಡುವೆ ನಾನು ಸಿನೆಮಾ ಹಾಡುಗಳನ್ನ ಮಾಡಿ ಮಾಡಿ Rap Styleನಿಂದ Cinema Styleಗೆ Convert ಆಗಿದ್ದೆ. ಅದೇ ಸಮಯಕ್ಕೆ “ಧಮ್ ಪವರೇ…” ಹಾಡು ತುಂಬಾನೇ ಹಿಟ್ ಆಗಿತ್ತು. ಜನ ನನ್ನಿಂದ ಹೆಚ್ಚು Expect ಮಾಡ್ತಾ ಇದ್ರು. ಹಾಗೇನೇ ನನ್ನೊಳಗಿನ Rapper ಹೊರಗೆ ಬರೋ ಸಮಯ ಆಗಿತ್ತು ಅನ್ಸತ್ತೆ. ಎಲ್ಲಾ ಕೂಡಿ ಬಂದು “ಹಾಳಾಗೋದೆ” ಆಗೋಯ್ತು.

 

 Chandan Shetty

 

ನಿಮ್ಮ Background ಏನು? ನಿಮ್ಮ ಬಾಲ್ಯ, ಊರಿನ ಬಗ್ಗೆ?”

ಸಕಲೇಶಪುರ ನನ್ನ ಹುಟ್ಟೂರು. 10ನೇ ತರಗತಿ ತನಕ ಅಲ್ಲೇ ಓದಿದೆ. ತಂದೆ ಸ್ಟೇಶನರಿ ಅಂಗಡಿ ನಡೆಸ್ತಾ ಇದ್ರು. ನಂತರ ಪಿ.ಯು.ಸಿ ಮಾಡಿದ್ದು ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ. ಅಲ್ಲೇ ನಾನು First Time ಹಾಡಿದ್ದು ಮತ್ತು ನಾನು Singer ಅಂತ ಗೊತ್ತಾಗಿದ್ದು. ಹಾಗಾಗಿ ಪುತ್ತೂರಿನ ಜನಕ್ಕೆ, ಫಿಲೋಮಿನಾ ಕಾಲೇಜಿಗೆ ನಾನು ಯಾವತ್ತೂ ಚಿರಋಣಿ.

ಹಾಳಾಗೋದೆಹೇಗೆ Start ಆಯ್ತು?”

ಇದು Start ಮಾಡಿದ್ದಲ್ಲ. ನಾವೇನು Friends ಜೊತೆ ಮಾತಾಡ್ತೀವೋ ಅದನ್ನೇ Rap ಮಾಡಿದ್ದು ಅಷ್ಟೇ! ಅದು ಜನಕ್ಕೆ ಇಷ್ಟ ಆಯ್ತು. ನಾವು ಹಿಂಗೇ Friends ಜೊತೆ, “ಏಯ್… ಏನೋ ನೀನು… ಹಲ್ಲುಜ್ಜಲ್ಲ, ಸ್ನಾನ ಮಾಡಲ್ಲ?” ಅಂತೆಲ್ಲಾ ಮಾತಾಡ್ತೀವಲ್ಲ, ಅದೇ ಥರಾ ನಾವೇನ್ ಮಾತಾಡ್ತೀವೋ ಅದನ್ನೇ ಇಟ್ಕೊಂಡು ಮಾಡಿರೋ ಒಂದು Song ಇದು. ಒಂದು Catchy, Youthful ವಿಷಯದ ಮೇಲೆ ಮಾಡಿರೋದ್ರಿಂದ, ಇಷ್ಟೊಂದು reach ಆಗೋದಕ್ಕೆ ಸಾಧ್ಯ ಆಯ್ತು ಅನ್ಸುತ್ತೆ.

ಮುಂದಿನ ಯೋಜನೆಗಳು?”

Rap ಮಾಡ್ದೆ ಅಂತ ಸಿನೆಮಾ ಬಿಟ್ಟಿಲ್ಲ. ಇಲ್ಲಿ ತನಕ ಹೇಗೆ Writer, Singer, Composer ಆಗಿದ್ನೋ ಅದನ್ನ ಇನ್ನಷ್ಟು ಮೇಲಕ್ಕೆ ತಗೊಂಡು ಹೊಗ್ಬೇಕಿದೆ. ಈಗ ಒಂದಷ್ಟು ಚಿತ್ರಗಳು ಕೈಯಲ್ಲಿ ಇವೆ. “ಜುದಾ ಸ್ಯಾಂಡಿ” ಸಂಗೀತ ನಿರ್ದೇಶನದಲ್ಲಿ ಬರ್ತಾ ಇರೋ ಬಹುನಿರೀಕ್ಷೆಯ “ಬದ್ಮಾಶ್” ಚಿತ್ರದ Intro Song ಕೂಡಾ ನಾನೇ ಹಾಡಿದ್ದು. ತುಂಬಾನೇ energetic and lively ಆಗಿದೆ ಹಾಡು. ಇತ್ತೀಚೆಗೆ ಬಿಡುಗಡೆ ಆದ “ಚಾರ್ಲಿ” ಚಿತ್ರದಲ್ಲಿ ಒಂದು ಹಾಡು ಹಾಡಿದ್ದೆ. “ಸೀಜ಼ರ್” ಚಿತ್ರದ ಸಂಗೀತ ನಿರ್ದೇಶನ ಮಾಡ್ತಾ ಇದೀನಿ. ಹಾಗೇನೆ ನಂದೇ Music Albums ಮಾಡೋ Ideas ಇದೆ. ಈಗ ಮಾಡಿದ್ದಕ್ಕಿಂತ ಹೆಚ್ಚು ಚೆನ್ನಾಗಿ ಮುಂದಿನ Projects ಮೂಡಿ ಬರುತ್ತೆ ಅಂತ Assure ಮಾಡ್ತೀನಿ.

 “ಸರಿ ಚಂದನ್… “ಹಾಳಾಗೋದೆ…” ಇನ್ನಷ್ಟು ಜನರನ್ನ ತಲುಪಲಿ, ಮೂಲಕ ಕನ್ನಡಕ್ಕೆ ಇನ್ನಷ್ಟು Rap Songs ಬರಲಿ. ಹಾಗೇನೆ ನಿಮ್ಮ ಎಲ್ಲಾ Future Projectsಗೆ  Readoo India ಬಳಗದಿಂದ ಶುಭಹಾರೈಕೆಗಳು!”

Facebook ಕಾಮೆಂಟ್ಸ್

ಲೇಖಕರ ಕುರಿತು

Raveesh Kemmai

ವೃತ್ತಿಯಿಂದ ಸಿವಿಲ್ ಇಂಜಿನಿಯರ್. ಪ್ರವೃತ್ತಿಯಿಂದ ಸಿನಿಮಾ ಪ್ರೇಮಿ. ಸಿನಿಮಾ ವಿಮರ್ಶೆ, ವ್ಯಂಗ್ಯಚಿತ್ರ ರಚನೆ ಬಿಡುವಿನ ಸಮಯದ ಹವ್ಯಾಸ. ಉತ್ತಮ ಚಿತ್ರಗಳಿಗೆ ಪ್ರೋತ್ಸಾಹ ಸಿಗಬೇಕು ಎನ್ನುವುದೇ ಬರಹದ ಉದ್ದೇಶ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!