ಬಹಳಷ್ಟು ಬರೆದೆ ನಾ ನನ್ನ ಕಾವ್ಯ ಕನ್ನಿಕೆಯ ಕುರಿತು ಶಬ್ದಗಳ ಸರ ಹೆಣೆದು ಸುಸ್ತಾದೆ, ಅವಳ ಅಂದ ವರ್ಣಿಸಲು. ಕೇಳುವ ಮನಸ್ಸಾಯಿತು ಅವಳ ನನ್ನ ವರ್ಣನೆಗಳಲ್ಲಿ ಅವಳ ಮೆಚ್ಚು ಯಾವುದೆಂದು. ಆದರೆ ಕೇಳಲಿ ಹೇಗೆ? ಅವಳನ್ನು ಕರೆಯಲೊಂದು ಹೆಸರು ಬೇಕಲ್ಲವೇ? ಏನೆಂದು ಹೆಸರಿಡಲಿ? ಕಣ್ಣು ಮುಚ್ಚಿ ಅಕ್ಷರಗಳ ಪೋಣಿಸಿದೆ, ಸಿಗಲಿಲ್ಲ ತೃಪ್ತಿ ನೀಡುವ ಹೆಸರು. ಕಣ್ತೆರೆದೊಮ್ಮೆ ಸುತ್ತ...
ಕವಿತೆ
ಕವಿತೆ
೧.ಫಜೀತಿ…. ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ತಂದಿಟ್ಟಿದ್ದಂತೂ ನಿಜ ಫಜೀತಿಯ… ೨.ಅಭಯ…. ಕದ್ದು ಮುಚ್ಚಿ ಮುಖಕ್ಕೆ ಮುಸುಕು ಕಟ್ಟಿ ಹುಡುಗನ ಹಿಂದೆ ಕೂರುವ ಹುಡುಗಿಗಿಲ್ಲ ಭಯ ಹೆಲ್ಮೆಟ್ ನೀಡುತಿದೆ ನಾನಿರುವೆನೆಂಬ ಅಭಯ.. ೩.ಅಳಲು… ಹೆಲ್ಮೆಟ್ ನಿಂದಾಗಿ ಹೆಂಡತಿಯರೇ ಅದಲು-ಬದಲು ಕೇಳುತ್ತಿಲ್ಲ ಸರಕಾರ ಪತಿದೇವರುಗಳ ಅಳಲು.. ೪...
“ಸಂಜೆ”…
ಸಂಜೆ ಆರೇಳರ ಸಮಯ.. ತಳ್ಳುಗಾಡಿಯವನ ಚಕ್ರದ ತುಂಬೆಲ್ಲಾ ಚಿತ್ರಿಸಿದ ಬಳ್ಳಿಗಳಿಗೆ ಅರಳುತ್ತವಂತೆ ಹೂಗಳು; ಅವನ ಕಾಲ್ಗಳ ಸದ್ದಿಗೆ.. ನೆರಳು ಕರಗುವ ಕ್ಷಣದಿ ಗರಿ ಬಿಚ್ಚಲೆಂದೇ ಕಾದಿರುವ ಕನಸುಗಳ ಸರದಿ… ತೇಲಿ ಬಿಟ್ಟ ಹಿಟ್ಟಿನುಂಡೆ ಮೈಬಿಚ್ಚಿಕೊಳ್ಳುತ್ತದೆ ಉಷ್ಣತೆಗೆ ಎಣ್ಣೆಯ ಕಮಟು ವಾಸನೆಯ ಅಭ್ಯಂಜನಕೆ ನಾಸಿಕದ ರೋಮಗಳ ತಳಮಳ.. ಗಾಳಿಗೀಗ ತುಂಬು...
ಸಾವು
ಜನ ಹೇಳುತ್ತಿದ್ದಾರೆ ನಿನ್ನ ಕೊರಗಲೇ ನಾನು ಸತ್ತೆ! ಎಂದು ಇವರಿಗೇಕೆ ಅರ್ಥವಾಗುವುದಿಲ್ಲ ನಾನು ಇನ್ನೂ ನಿನಗಾಗಿ ಕಾಯುವೆ ಎಂದು. ಎಂದಿಲ್ಲದ ಇವತ್ತು ನನಗೆ ಸ್ನಾನ ಹೊಸ ಉಡುಗೆ, ಶೃಂಗಾರ ಹೂಮಾಲೆಗಳ ರಾಶಿ ಬೇರೆ! ಎಲ್ಲರೂ ಸೇರಿದ್ದಾರೆ ಇಲ್ಲೇ ಪೊರೆದವರು, ಹಳಿದವರು. ಇನ್ನುಮುಂದೆ ಇದೇ ನನ್ನ ಜಾಗ ಮೂರಡಿ, ಆರಡಿ, ಊರಹೊರಗೆ ಇದೇಸರಿ! ಇಲ್ಲಿ ಯಾರದೂ ಕಾಟವಿಲ್ಲ ನಾನು ಮತ್ತು...
ಶವದ ಕಂಪು
ದಿಗಂತವಾ ತಾ ಕಾಣ ಹೊರಟಿದೆ ಮನ ಮರುಳೋ, ಜೀವಕೆ ಉರುಳೋ; ಕೊರಳು ಬರಿದಾಗಿ, ನೆರಳೂ ಮರೆಯಾಗಿ ಬಾಳು ಪಾಳಾಗಿ, ಭಾವ ನರಳಿದೆ… ಆತ್ಮ ಶೋಣಿತ ಕುದ್ದು ನಿರುತ ಆವಿಯಾಗಿದೆ, ತನು ಶೂನ್ಯವಾಗಿದೆ; ಚಿತ್ತದಾ ಗೇಹ ಬೆಂದು ಸತತ ಶವದಾ ಕಂಪು, ತಾ ಸುಖವಾಗಿದೆ… ಅಂದು ಹಸಿರ ಹೊನ್ನು ನನ್ನಾ ಮನ ಇಂದಿಲ್ಲಿ ನನದೇನು? ಬರಿ ಹಿಡಿ ಬೂದಿ; ಅಗಿನಿಯ ಕುರುಹಿಲ್ಲ, ಗಾಳಿಯ...
ಹನಿಗವನಗಳು
೧.ಅವನು…. ಅವನು.. ನಾ ನೆಟ್ಟ ಬಳ್ಳಿಯಲಿ ಹೂವಾಗಿ ಅರಳಿದನು.. ನಾ ಮುಡಿಯುವ ಮುನ್ನ ಇನ್ಯಾರದೋ ಮುಡಿಗೇರಿದನು … ೨.ಮಲ್ಲಿಗೆ ನಲ್ಲೆ ಕೇಳಿದಳು “ನಲ್ಲ ನನ್ನ ಜಡೆಗೆ ಮುಡಿಸುವೆಯಾ ಮಲ್ಲಿಗೆ?” ನಲ್ಲ ನುಡಿದನು “ನಲ್ಲೆ ನಿನಗೇಕೆ ಮಲ್ಲಿಗೆ? ನಿನ್ನ ಜಡೆಯೇ ಇದೆ ಮಲ್ಲಿಗೆಯಂತೆ ಬೆಳ್ಳಗೆ….” ೩.ನೀನು.. ನಾವಿಬ್ಬರೂ ಓಡಾಡಿದ...
ಜನರ ಸಂತೆಯ ನಡುವೆ
ಜನರ ಸಂತೆಯ ನಡುವೆ ಮೌನಿಯಾಗಿದ್ದೇನೆ ನಾನು ಕವನವೊಂದ ಗೀಚುತ್ತಿದ್ದೇನೆ ನಾನು… ಭ್ರಷ್ಟಾಚಾರಗಳ, ಅತ್ಯಾಚಾರಗಳ ಕೊಲೆ-ಸುಲಿಗೆ, ದರೋಡೆಗಳ ದೇಶದ್ರೋಹಗಳ… ವಿರೋಧಗಳು ತುಂಬಿವೆ ಕವನದೊಡಲನು…. ನನ್ನ ಕವನದೊಡಲ ಸೀಳುವಂತೆ ಗೋಚರಿಸುತ್ತಿವೆ ಭೀಕರ ದೃಶಗಳು.. ತರಕಾರಿಗಳಂತಾಗಿವೆ ಮನುಷ್ಯ ದೇಹಗಳು.. ತುಂಡರಿಸುತ್ತಿವೆ ಚಾಕು, ಚೂರಿ, ಕತ್ತಿಗಳು ಮರೆಯಾಗಿವೆ...
ಯಾರಿವಳು?
ಚಿಂದಿ ಆಯುವವಗೆ ಕನಸುಗಳ ಮಾರಿ, ಚಿಲ್ಲರೆಯ ತಂದಿಹೆನು, ಬಾಲವಿಲ್ಲದ ಪಲ್ಲಿ ಪಲ್ಲಂಗ ಹಾಸಿ; ನೆತ್ತರದಿ ಚಿತ್ತರವ ನುಡಿಸಿಹುದು, ನೆನಪು ದೋಚಿದ ಪದ್ಯ ಉಪ್ಪರಿಗೆಯೇರಿ ಮತ್ತೆ ಪ್ರೇಯಸಿ ಟಂಕಿಸಿದೆ, ಕನ್ನಿಕೆಯೆ ಅವಳು? ಮನದನ್ನೆಯಂತೆ, ನೆತ್ತಿ ಬಿಸಿಯೇರಿ ನುಂಗುವವಳು. -2- ಶೀರ್ಶಿಕೆಯಿರದ ಪದಗಳಡಿ ಮೆರೆವ ನಾಚಿಕೆಗೆ ಕನಸ ಆಯುವ ತವಕ ಕಿಂಚಿತ್ತು ಕಮ್ಮಿ, ಕೆಂಪು ಕೆನ್ನೆಯ...
ಹನಿಗವನಗಳು
೧.ಅವನಿಲ್ಲ……. ಅವನೇ ಎಲ್ಲ ಅಂದವಳ ಹೃದಯದಲ್ಲೀಗ ಅವನೇ ಇಲ್ಲ ಅವಳ ಪ್ರೀತಿ ಸತ್ತಿಲ್ಲ ಅವನಿಗದರ ಅರ್ಥ ತಿಳಿದಿಲ್ಲ ೨.ನೀನು…. ನೀನು ನನ್ನೊಳಗಿನ ಸುಂದರ ಕವಿತೆ ಎಷ್ಟು ಬರೆದರೂ ಮುಗಿಯುತ್ತಿಲ್ಲ ಅದೂ ನಿನ್ನಂತೆ ೩.ಲವ್-ದೋಖಾ ಖಾಲಿಯಾಗಿರುವ ಮನಸುಗಳು ಅಚ್ಚೊತ್ತಿರುವ ಲವ್-ದೋಖಾ ಪದಗಳು ೪.ಶೀತಲ ಸಮರ ಮನಸುಗಳ ನಡುವೆ ಶೀತಲ ಸಮರ ಆದಷ್ಟು ಬೇಗ ಅಂತ್ಯ...
ಯುಗಾದಿ ಹಾಯ್ಕುಗಳು
(೦೧) ಬಂತು ಯುಗಾದಿ ಬೇವು ಬೆಲ್ಲ ತಗಾದೆ – ಸಿಕ್ಕದ ಲೆಕ್ಕ ! (೦೨) ಬೇವಿನ ಹೂವ್ವ ವಾರ್ಷಿಕ ಸಂಭ್ರಮಕೆ – ಬೆಲ್ಲದ ನಗು ..! (೦೩) ಹಬ್ಬದುಡುಗೆ ಹಬ್ಬದಡಿಗೆ ಭರ್ಜರಿ.. – ಕೊಂಡೆಲ್ಲ ತಂದು ! (೦೪) ಯಾರಿಗೆ ಬೇಕು ಯುಗಾದಿ ಆಶೀರ್ವಾದ ? – ಬಿಡುವೆ ಇಲ್ಲ.. (೦೫) ಶುಭ ಕೋರಿಕೆ ಉಳಿತಾಯ ಖರ್ಚಲಿ – ‘ಇ’ವಿನಿಮಯ ! (೦೬)...