ಕವಿತೆ

ಕವಿತೆ

ಬೆಳಕು ಮಾರಾಟಕ್ಕಿದೆ…

ಮೊನ್ನೆಯಷ್ಟೇ, ಮನೆಯ ಛಾವಣಿಯಲ್ಲಿ ಸೋರುತ್ತಿದ್ದ ಬೆಳಕ ಬೊಗಸೆಯಲಿ ಹಿಡಿದು ಗೋದಾಮಿನಲಿ ತುಂಬಿಟ್ಟಿದ್ದೇನೆ.. ತಪ್ಪಿಸಿಕೊಳ್ಳಬಾರದೆಂದು ಕಿಟಕಿ ಬಾಗಿಲುಗಳ ಮುಚ್ಚಿ ಅಗಳಿ ಓಡಾಡದಂತೆ ಒಂದೆರಡು ಬೀಗ ಜಡಿದಿದ್ದೇನೆ; ಕಾಣೆಯಾಗಿದೆ ಬೀಗದ ಕೈ… ಭೂಮಿ ಬಾನು ದಿಗಂತದಲಿ ಸೇರುತ್ತವೆ ಅಂದುಕೊಂಡ ತಪ್ತ ಸೂರ್ಯನ ಮೈಯಿಂದೊಸರಿದ ಬೆವರ ಹನಿಗಳನ್ನ ಶೀಷೆಯಲಿ ಶೇಖರಿಸಿ ಮುಚ್ಚಳ...

ಕವಿತೆ

ಪದಗಳೆ ಹೊರಡುತ್ತಿಲ್ಲ ಮಾತನಾಡಲು!

ಪದಗಳೆ ಹೊರಡುತ್ತಿಲ್ಲ ಮಾತನಾಡಲು! ಮರೆತೇನೆ ನಾ ಬರೆಯುವದನು ? ಅಗೋ ಈ ಜನ ಆ ಆಸೆ ತಣ್ಣೀರು, ಕನಸು . ಯಾವುದೋ ಗುರಿಯು ತಿಳಿಯದಾದೆನಾ ! ಕನಸುಗಳ ಬಿಟ್ಟು ಆಸೆಗಳ ಬೆನ್ನಟ್ಟಿ ದ್ರೋಹಿಯಾದೆನಾ? ದರ್ಮಕ್ಕೆ! ದೇಶಕ್ಕೆ! ನೋಟುಗಳು ಹರೆದಿಹುದು ನೋಟಗಳು ದಾರಿ ತಪ್ಪುತ್ತಿರುವುದು, ಸ್ಪಷ್ಟವಾಗಿ ತಿಳಿಯದಾದೆನ ! ಏನು ಬೇಕು ಈ ದೇಶಕ್ಕೆ ! ದೇಹಕ್ಕೆ ! ಓ ಅಜಾತಶತ್ರುವೆ ಕೇಳು ನನ್ನ...

ಕವಿತೆ

ಬಾ ಮಳೆಯೇ ಬಾ…

ಬಸಿರೆಲೆ ಸಿಡಿದು ಹಳದಿಯಾದ ಅಡಿಕೆ ಮರ , ಹೂ ಬಿಟ್ಟು ತಾಯಿಯಾಗದ ಮಾವಿನ ಮರ, ಏದುಸಿರು ಚೆಲ್ಲಿ ತೇಲುವ ತೋಡಿನ ಸರು ಮೀನು, ಪೊರೆ ಕಳಚಿ ನಗ್ನವಾದರೂ ಸೆಕೆ ತಾಳದ ನಾಗರಹಾವು, ಬೆವರಿ ಬೆಂಡಾದ ಪಾರಿವಾಳದ ಟೊಳ್ಳು ರೆಕ್ಕೆಗಳು, ಜೊತೆಗೆ ಸಿರಿ-ಮುಡಿ ಕಳಚಿ, ಬೆಂಡೋಲೆ ಕಿವಿಯ ಹರಿಸಿಕೊಂಡು  ಭೂಮಿಕಾ, ಮತ್ತೆ ಮತ್ತೆ ಕಾಯುತ್ತಿದ್ದಾಳೆ, ಕಾದು ಕಾದು ಅವಿಯಾಗುತ್ತಿದ್ದಾಳೆ, ಯಾವಾಗ...

ಕವಿತೆ

ನಮ್ಮಿಬ್ಬರ ಜಗಳ ಕಂಡು

ನಮ್ಮಿಬ್ಬರ ಜಗಳ ಕಂಡು ತಲೆದಿಂಬುಗಳಲ್ಲಿ ತುಂಬಿದೆ ದುಃಖ ಬರಪೂರ.. ಕಾರಣ ಇಂದು ರಾತ್ರಿ ಒಂದಕ್ಕೊಂದು ಅಗಲಿ ಮಲಗಬೇಕಾಗಿದೆ ಬಲುದೂರ ದೂರ…! *** ದೊಡ್ಡ ವೇದಿಕೆಯಲ್ಲಿ ದೊಡ್ಡವರ ಸಣ್ಣತನದ ವಿಚಾರಕ್ಕೆ ಸಿಂಗರಿಸಿದ ವೇದಿಕೆ ಹೇಳಿತು “ಬೇಗ ಕಳಚೀ ನನ್ನೀ ಅಲಂಕಾರ”..! *** ಲತೆಯಿಂದ ಬೇರಾದ ಹೂ ಹೆಣ್ಣ ಮುಡಿ ಏರಿದರೇನು ದೇವರ ಅಡಿ ಸೇರಿದರೇನು.. ಇಬ್ಬರೂ ಕೊಡರು...

ಕವಿತೆ

ನಾನು…

ಕೊರಳಲ್ಲಿ ನೀ ಕಟ್ಟಿದ ತಾಳಿಯಿಲ್ಲ ಕಾಲಲ್ಲಿ ನೀನಿಟ್ಟ ಕಾಲುಂಗುರವಿಲ್ಲ ನೀನಿದ್ದೂ ವಿಧವೆ ನಾನು….. ತಪ್ಪು  ತಿಳಿಯಬೇಡ, ನನ್ನ ಹೃದಯದಲ್ಲೆಂದೂ ಸಾಯುವುದಿಲ್ಲ ನೀನು ಯಾವಾಗಲೂ ಕಾಡುತ್ತದೆ ಪ್ರಶ್ನೆ ಮರೆಯಬಲ್ಲೆನೆ ನಿನ್ನ ನಾನು? ಅವನು ನಿನ್ನವನಲ್ಲವೆಂದು ಹೃದಯಕ್ಕೆ ಬಾರಿ ಬಾರಿ ಹೇಳಿದ್ದೇನೆ ನಾನು ಆದರೂ ಹುಚ್ಚು  ಹೃದಯ ನೀನೇ ಬೇಕೆನ್ನುತ್ತದೆ ಏನು ಮಾಡಲಿ ನಾನು...

ಕವಿತೆ

ಹೆಣ್ಣಿನ ಕೂಗು

ಹೆಣ್ಣು ಹುಟ್ಟುವ ಮೊದಲೇ ಚಟ್ಟ ಕಟ್ಟುವರ ಹುಟ್ಟಿದರೂ ಹೆಣ್ಣು ಮಗು ಬೇಡಾಗಿತ್ತು ಅನ್ನುವರ ಜನ್ಮ ಪಡೆದ ಹೆಣ್ಣು ಮಗುವ ಕಸದ ತೊಟ್ಟಿಗೆಸೆಯುವರ ನಡುವೆ ಯಾರಿಗಾಗಿ ಹುಟ್ಟಲಿ ??? ಹೆಣ್ಣು ಮಕ್ಕಳನ್ನು ಶೋಷಿಸುತ್ತಿರುವ ಸಮಾಜದ ನಡುವೆ ಏನನ್ನು ಅರಿಯದ ಅಪ್ರಾಪ್ತ ಬಾಲಕಿಯರ ಮೇಲೆ ನಿರ್ದಾಕ್ಷಿಣ್ಯವಾಗಿ ಅತ್ಯಾಚಾರ ಮಾಡುವರ ನಡುವೆ ಹೇಗೆ ಬದುಕಲಿ ??? ಅಶ್ಲೀಲ ಮಾತುಗಳಿಗೆ...

ಕವಿತೆ

ನೆನಪು

ಮಳೆ ಬಂದು ನಿಂತಾಗ ನನ್ನೆದೆಯು ತೊಯ್ದಾಗ ತಂಗಾಳಿ ಬೀಸಿ ಬಂತು ಮುಚ್ಚಿ ಮಲಗಿದ್ದ ಭಾವನೆ ಗರಿಗೆದರಿ ನಿಂತು ನಿನ್ನಯ ನೆನಪನು ಹೊತ್ತು ತಂತು! ಮೈ ನಡುಕವಿದ್ದರೂ ಮನ ಮಾತ್ರ ಬೆಚ್ಚಗಿತ್ತು ಅದರುತಿದ್ದರು ಅಧರ ತಿಳಿನಗೆಯ ಬೀರಿತ್ತು! ಮೊದಲ ಸ್ಪರ್ಶದ ಆ ನೆನಪು ಮನದಲಿ ಪುಳಕ ತಂತು ರಂಗೇರಿದ ಸಂಜೆಯಲಿ ಕಣ್ಣಿಗೆ ಮಂಜು ಕವಿದಿತ್ತು ಮೈತನ್ನ ಇರುವನ್ನೆ ಮರೆತಿತ್ತು ಕಿವಿಯಲಿ...

ಕವಿತೆ

ಕೊಳಲನೂದುತ ಬಂದ

ಕೊಳಲನೂದುತ ಬಂದ ನಂದಗೋಪನ ಕಂದ ಅವನ ಮೊಗದರವಿಂದ ನೋಡುವರಿಗಾನಂದ|| ತೋರಿದನು ಜಗವನ್ನು ತೆರೆದ ಬಾಯೊಳಗೆ ನಗುನಗುತ ಬೆರೆತಿಹನು ನಮ್ಮ ನಿಮ್ಮೊಳಗೆ|| ಮಾಡುವನು ಮೋಡಿಯನು ಕೊಳಲನೂದುತ್ತ ಸೆಳೆಯುವನು ಎಲ್ಲರನು ಬಿಡದೆ ತನ್ನತ್ತ.. ಇಹುವಂತೆ ಇವನ ಲೀಲೆಗಳು ನೂರಾರು ನೀ ಹೇಳೆ ಗೋಪಮ್ಮ ನಿಜಕು ಇವನಾರು?|| ಕೊಳಲ ನಾದಕೆ ನಲಿವ ಗೋಪಿಯರ ದಂಡು.. ತಲೆಯದೂಗುತ ನಿಂದ ಗೋವುಗಳ ಹಿಂಡು...

ಕವಿತೆ

ಹೆಣ್ಣು

ಸುಂದರ..ಸುಮಧುರ ಮನಸಿನ ಹೆಣ್ಣಿಗೆ.. ತಗಲಿದೆ  ಯಾರದೋ ಕಣ್ಣು   ಮಮತೆಯ ಆಗರ..ದಯಾಮಯಿ ಎಲ್ಲವನೂ ಮೀರಿ ನಿಲ್ಲುವಳು.. ಮನಸಿಲ್ಲದೆ ಮನ ಬಿಚ್ಚದೇ ಏನನೂ ಮುಟ್ಟಳಿವಳು.. ಇಂದು ಎಳೆ ಹಸುಳೆ ಎನದೇ ಕಾಮದ ತೃಷೆಗೆ ಬಲಿಯಾಗಿಹಳು!   ಹೆತ್ತವರ ಒಡಲ ಕುಡಿ ಮುದುರುವುದು ಕಾಮುಕನ ಕಾಲ್ತುಳಿತದಲಿ.. ಮನ ಚಿದ್ರಗೊಂಡು ಮಾಸದೇ ಉಳಿಯುವುದು ಅಂತರಾಳದಲಿ!   ಎರಡು ನಿಮಿಷದ ಸುಖ ಗಂಡು ಎಂಬ...

ಕವಿತೆ

ಕಲೆಯ ಮುನ್ನುಡಿ

ನಡುತಿಮಿರ ಪರದೆಯೆಳೆ ಸುಡುರಂಗ ನಿಗಿನಿಗಿಸೆ ಹಿಡಿಜೀವವೊಂದಿಲ್ಲಿ ಕುಣಿಯಲೆದ್ದು | ಜಡ ಮುರಿದು ಬಯಲಲ್ಲಿ ಅಡಿ ಮೇಲೆ ಹಾರಿರಲು ಬಡಿದಂತೆ ಮಾರ್ದನಿಸಲದುವೆ ಸದ್ದು || ಬಣ್ಣಗಳ ಲೇಪದಲಿ ಕಣ್ಣುಗಳೆ ದನಿಯಾಗೆ ತಣ್ಣನೆಯ ಛಳಿಯೆಲ್ಲ ಧೂಳಿಪಟವೆ | ಬಣ್ಣನೆಗೆ ದಂಡವದು ಹುಣ್ಣಿಮೆಯೆ ಕಂದಿರಲು ನುಣ್ಣನೆಯ ಹಾಳೆಯಲಿ ಚಿತ್ರಪಟವೆ || ಬಿಳಲುಗಳನಡಗಿಸಿದ ಪುಳಕಿತವು ಭರಪೂರ ಗಳಿಸಿರಲು...