ಅಂಕಣ

ಅಂಕಣ

ಮುಖ್ಯಮಂತ್ರಿಗಳಿಗೊಂದು ಪತ್ರ

ಮಾನ್ಯ ಮುಖ್ಯಮಂತ್ರಿಗಳೇ, ತಾವು ಇತ್ತೀಚಿನ ವಿದ್ಯಮಾನಗಳ ಬಗ್ಗೆ ಪರಿಚಿತರಾಗಿದ್ದೀರಿ ಎಂದು ಭಾವಿಸಿದ್ದೇನೆ. ದುರದೃಷ್ಟವಶಾತ್ ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಬೆಳವಣಿಗೆಗಳಾವೂದು ಆಗಿಲ್ಲ. ಇಂತಹ ಸಮಯದಲ್ಲಿ ಗಾಯದ ಮೇಲೆ ಬರೆ ಎಳೆಯುವಂತೆ ಕರ್ನಾಟಕ ಸರಕಾರದ ಮಾಧ್ಯಮದ ಸಲಹೆಗಾರರು ತಮ್ಮ ಹುದ್ದೆಯನ್ನು ಬಳಸಿಕೊಂಡು ಯುವಜನರ ದಿಕ್ಕನ್ನು ತಪ್ಪಿಸುವ ಕೆಲಸ...

ಅಂಕಣ

ಅಭಿಗೆ ಅಭಿನಂದನೆಗಳು

ಕ್ಯಾಮೆರಾ ಇದ್ದವರೆಲ್ಲಾ ಫೋಟೋಗ್ರಾಫರ್’ಗಳಾಗಲು ಸಾಧ್ಯವಿಲ್ಲ ಎಂದಂತೆ, ಪಕ್ಷಿಯ ಫೋಟೋ ತೆಗೆಯುವವರೆಲ್ಲಾ ಪಕ್ಷಿಗರಾಗಲು ಸಾಧ್ಯವಿಲ್ಲ. ಪಕ್ಷಿಗಳ ಮೇಲೆ ಪ್ರೀತಿಯಿದ್ದರಷ್ಟೇ ನಿಜವಾದ ಬರ್ಡರ್ ಒಬ್ಬ ಉದಯಿಸಲು ಸಾಧ್ಯ. ಆತನ ಬಳಿ ಇರುವುದು ಸಾಮಾನ್ಯ ಡಿಜಿಟಲ್ ಕ್ಯಾಮೆರಾವೇ ಆಗಿರಬಹುದು ಅಥವ ಅತ್ಯಾಧುನಿಕ ಎಸ್’ಎಲ್’ಆರ್ ಕ್ಯಾಮೆರಾವೇ ಆಗಿರಬಹುದು ಪರಿಸರ ಪ್ರೀತಿ –...

ಅಂಕಣ

ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ನೀನಾದೆ..

ಮತ್ತೆ ಅಟಲ್ ಬಿಹಾರಿ… ಬಗೆದಷ್ಟೂ ಬರಿದಾಗದ ಗಣಿ ಅದು. ಬರೀ ಗಣಿ ಅಲ್ಲ, ಚಿನ್ನದ ಗಣಿ. ಹೌದು, ಅವರು ತಮ್ಮ ಜೀವನದಲ್ಲಿ ನಡೆದುಕೊಂಡ ಮೌಲ್ಯಗಳು, ನಮಗಾಗಿ ಕೊಟ್ಟ ಆದರ್ಶಗಳು ಒಂದು ಲೇಖನದಲ್ಲಿ ಬರೆದು ಮುಗಿಸುವಂತದ್ದಲ್ಲ. ಒಂದು ಆತ್ಮಕಥೆಯೊಳಗೆ  ಪೋಣಿಸಿ ಬಿಡುವಂತದ್ದಲ್ಲ ಅದು. ಯಾಕಂದ್ರೆ ವಾಜಪೇಯಿಯವರ ವಿಶೇಷತೆಯೇ ಅದು. ತಮ್ಮ ಜೀವನದ ಹೆಜ್ಜೆ ಹೆಜ್ಜೆಯಲ್ಲೂ ಇತಿಹಾಸ...

ಅಂಕಣ

ಜಗತ್ತು ನಿಬ್ಬೆರಗಾಗುವಂತೆ ಮಾಡಿದ ರಾಜಕೀಯದ ‘ಸನ್ಯಾಸಿ’

ಇಲ್ಲಿಯವರೆಗೆ ಎಲ್ಲರೂ ಕೇಳಲ್ಪಟ್ಟದ್ದು … ಕೇವಲ ಕಾವಿ ತೊಟ್ಟವರು ಮಾತ್ರ ಸನ್ಯಾಸಿಗಳೆಂದು… ಆದರೆ ನಮಗೆ ಅರಿವೆ ಇಲ್ಲದೇ ಒಬ್ಬ ವ್ಯಕ್ತಿ ಖಾದಿಯನ್ನೇ ತೊಟ್ಟ ಸನ್ಯಾಸಿಯೊಬ್ಬರಿದ್ದಾರೆ. ಅವರೊಬ್ಬ ತಮ್ಮ ಜೀವನವನ್ನೇ ದೇಶಕ್ಕಾಗಿ ಮುಡುಪಾಗಿಟ್ಟ ಮಹಾನುಭಾವ.. ದೇಶದ ಸ್ವಾತಂತ್ಯ ಹೋರಾಟದಲ್ಲೂ ಭಾಗಿಯಾಗಿದ್ದವರು. ರಾಜಕೀಯದಲ್ಲಿ ಸ್ನಾತಕೋತ್ತರ ಪದವೀಧರ...

ಅಂಕಣ

ಪ್ರಸಿದ್ಧ ಅರೆ ಪಂಡಿತರಿಂದಾಗುವ ಅಪಾಯ

ಸಾಮಾನ್ಯ ನಾಗರೀಕರಿಗೆ ಟಿವಿಗಳಲ್ಲಿ ಕಾಣಿಸಿಕೊಳ್ಳುವವರು, ಪತ್ರಿಕೆಗಳಲ್ಲಿ ಅಂಕಣ ಬರೆಯುವವರು ಹಾಗೂ ಪ್ರಸಿದ್ಧರಾದ ವ್ಯಕ್ತಿಗಳು ಆಯಾ ವಿಷಯಗಳಲ್ಲಿ ಬಹಳ ದೊಡ್ಡ ವಿದ್ವಾಂಸರಾಗಿರ್ತಾರೆ ಎನ್ನುವ ತಪ್ಪು ಕಲ್ಪನೆ ಇರುತ್ತದೆ. ಈ ಮಾತು ಧಾರ್ಮಿಕ ವಿಷಯಕ್ಕೂ ಅನ್ವಯಿಸುತ್ತದೆ. ಪುರಾಣ ಪ್ರವಚನಕಾರರು, ವೇದ ವಿದ್ವಾಂಸರು, ಆಗಮಿಕರು, ತಂತ್ರಶಾಸ್ತ್ರಿಗಳು, ಅರ್ಚಕರು, ಪುರೋಹಿತರು...

ಅಂಕಣ

ಭರವಸೆಯ ಶಕ್ತಿಯ ಜಗತ್ತಿಗೆ ತೋರಿದಾತ-ಶಾನ್ ಸ್ವಾರ್ನರ್

ಸ್ಪೂರ್ತಿ ಎ೦ದಾಕ್ಷಣ ನನಗೆ ಮೊದಲು ನೆನಪಾಗುವವನು ಆತ. ಅತನ ಬಗ್ಗೆ ಅದೆಷ್ಟೋ ಬಾರಿ ಬರೆದಿದ್ದೇನೋ, ಮಾತನಾಡಿದ್ದೇನೋ ಗೊತ್ತಿಲ್ಲ, ಆದರೆ ಆತನ ಬಗ್ಗೆ ಹೇಳಿದಷ್ಟೂ ಇನ್ನೂ ಹೇಳುವ ಹ೦ಬಲ. ಇವತ್ತು ನಾನು ನಾನಾಗಿರಲು ಕಾರಣ ಆತ. ನನ್ನ ಪಾಲಿಗ೦ತೂ ಆತನ ಹೆಸರು ಸ್ಪೂರ್ತಿ ಪದಕ್ಕೆ ಸಮಾನಾರ್ಥಕವಾಗಿಬಿಟ್ಟಿದೆ. ಭರವಸೆ ಕಳೆದುಕೊ೦ಡಾಗ, ತಾಳ್ಮೆ ಕಳೆದುಕೊ೦ಡಾಗ, ಸೋತು...

ಅಂಕಣ

ದಾವೂದ್ ಹಸ್ತಾಂತರಕ್ಕೆ ತೊಡಕೇನು?

ರಾಜೇಂದ್ರ ಸದಾಶಿವ ನಿಖಾಲ್ಜೆ ಅಲಿಯಾಸ್ ಛೋಟಾ ರಾಜನ್‘ನನ್ನು ವಿದೇಶದಿಂದ ಬಂದಿಸಿ ಭಾರತಕ್ಕೆ ತಂದಿದ್ದು ಅಪರಾಧಿಕ ಜಗತ್ತಿಗೆ ಸಿಡಿಲೆರಗಿದಂತಾಗಿದೆ. ಅಪರಾಧಿಗಳು, ಅಪರಾಧ ಮಾಡಿದ ದೇಶವನ್ನು ತೊರೆದು ವಿದೇಶದಲ್ಲಿ ಹಾಯಾಗಿ ತಲೆಮರೆಸಿಕೊಂಡಿದ್ದರೆ ಅಂಥವರನ್ನು ಹಿಡಿದು ಕಾನೂನಿನ ಪ್ರಕಾರ ಶಿಕ್ಷೆ ಕೊಡುವುದಾದರೂ ಹೇಗೆ? ಛೋಟಾ ರಾಜನ್‘ನ ನಂತರ ಆತನ ಮಾಜಿ ಬಾಸ್ ದಾವೂದ್...

ಅಂಕಣ

ಅಂಗವೈಕಲ್ಯತೆ ಕೇವಲ ಬಾಹ್ಯ ದೇಹಕ್ಕೆ ಮಾತ್ರ ಮನಸ್ಸಿಗಲ್ಲ.

ಚಪ್ಪಲಿ ಹರಿದು ಹೋಗಿತ್ತು. ಮಂಗಳೂರಿನ ಪೇಟೆಗೆ ಹೋಗುವಾಗ ಚಪ್ಪಲಿಯನ್ನು ಹೊಲಿಸಲು ತೆಗೆದುಕೊಂಡು ಹೋಗಿದ್ದೆ. ಹಾಗೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಗೆ ಹೋಗುವ ಹಾದಿಯಲ್ಲಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡು ಇರುವವನು ಚಪ್ಪಲಿ ಹೊಲಿಯುವ ಅಂಗಡಿ ಇಟ್ಟುಕೊಂಡಿರುವದನ್ನು ನೋಡಿದೆ. ಅವನ ಜೀವನೋಪಾಯಕ್ಕೆ ನನ್ನ ಚಿಕ್ಕ ಸಹಾಯ ಆಗಬಹುದು ಎಂದೆನಿಸಿ ಅವನ ಹತ್ತಿರವೇ ಚಪ್ಪಲಿ...

ಅಂಕಣ

ಮತ್ತೆ ಮತ್ತೆ ಹೆಮ್ಮಿಂಗ್ವೆ…

ಹತ್ತಾರು ಎತ್ತಿನಬಂಡಿಗಳು,ಲಾರಿಗಳು ಓಡಾಡುತ್ತಿದ್ದ ಸೇತುವೆಯ ತುದಿಯಲ್ಲಿ ಆ ವೃದ್ಧ ಕುಳಿತಿದ್ದ. ತೀರ ಕೊಳಕಾದ ಉಡುಪುಗಳನ್ನು ತೊಟ್ಟಿದ್ದ ಆತ ಸಾಧಾರಣ ಗುಣಮಟ್ಟದ ಚಾಳೀಸೊಂದನ್ನು ಧರಿಸಿದ್ದ. ಸೇತುವೆಯ ಒಂದು ತುದಿಯಲ್ಲಿ ಮಣಭಾರದ ಮೂಟೆಗಳನ್ನು ಹೊತ್ತು ನಡೆಯಲಾಗದೇ ನಿಂತಿದ್ದ ಹೇಸರಗತ್ತೆಗಳನ್ನು ಸೈನಿಕರು ಕಷ್ಟಪಟ್ಟು ಮುಂದೆ ತಳ್ಳುತ್ತಿದ್ದರು. ಹೆಂಗಸರು ತಮ್ಮ...

ಅಂಕಣ

ಅನಂತಮೂರ್ತಿ ಸಂದರ್ಶನ

ಅನಂತಮೂರ್ತಿ ಸಂದರ್ಶನ ಹುಟ್ಟಿದ್ದು: ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಮೇಳಿಗೆಯಲ್ಲಿ. 1932ರ ಡಿಸೆಂಬರ್ 21. ಅಪ್ಪ ಊರಿನ ಶಾನುಭೋಗ ರಾಜಗೋಪಾಲಾಚಾರ್ಯರು. ಜನಿವಾರವನ್ನೇ ಚಾದರವೆಂದು ಹೊದ್ದುಕೊಳ್ಳುತ್ತಿದ್ದ ಮಡಿವಂತ ಮಾಧ್ವ ಬ್ರಾಹ್ಮಣ ಮನೆತನ. ಮಾಣಿ ಅನಂತಮೂರ್ತಿಯ ವಿದ್ಯಾಭ್ಯಾಸ ಹತ್ತಿರದ ದೂರ್ವಾಸಪುರದಲ್ಲಿ. ತಲೆಯಲ್ಲಿ ಶಿಖೆ ಬಿಟ್ಟು ಸೊಂಟಕ್ಕೆ ಕಚ್ಚೆ ಕಟ್ಟಿ...