ಹೇ ಭಾರತ ಜನನಿ, ಲೋಕೋತ್ತರರಾದ ಪುತ್ರರನ್ನು ಇತ್ತಮಾತೆ, ವ್ಯಾಸ, ಕೃಷ್ಣ, ಯುಧಿಷ್ಠರರಂತಹ ಪುತ್ರರಿಗೆ ಜನ್ಮವಿತ್ತ ಮಹಾಮಾತೆ. ಈಗ ನನ್ನ ಮಕ್ಕಳೆಲ್ಲ ನಿರ್ಬಲರಾದರೇಕೆ ? ನಾವು ಕ್ಷತ್ರಿಯರನ್ನೆಲ್ಲಾ ಒಗ್ಗೂಡಿಸಬೇಕು. ಇಂದು ಇದ್ದು ನಾಳೆ ಹೋಗುವ ಈ ದೇಹದ ಪೋಷಣೆಗಾಗಿ, ವಿಷಯ ರಾಗ ಭೋಗಳಲ್ಲಿ ಮಗ್ನರಾಗಿ ವಿಷಯ ಲೋಲಪತೆಯಿಂದ ಪಶು ಪ್ರಾಣಿಗಳಿಗೂ ಕೀಳಾಗಿ ಬಾಳುತ್ತಿರುವ...
ಅಂಕಣ
ಸ್ವಲ್ಪ ಲೆಕ್ಕಾಚಾರ ಮಾಡಿಕೊಳ್ಳೋಣ ಎಂದು ಬಂದ ಕ್ಯಾನ್ಸರ್!!
ಅವರ ಆ ಅಯಾಸಗೊಂಡ ದೇಹ, ನೋವನ್ನು ಸಾರಿ ಹೇಳುತ್ತಿದ್ದ ಮುಖ, ಮೂಗಿನ ಮೂಲಕ ಹೋಗಿದ್ದ ಕೃತಕ ಆಹಾರನಳಿಕೆ, ಇದನ್ನೆಲ್ಲಾ ದೂರದಲ್ಲಿ ನಿಂತು ನೋಡುತ್ತಿದ್ದವಳು ಅಳು ತಡೆಯಲಾಗದೇ ರೂಮಿಗೆ ಓಡಿದೆ. ಅಮ್ಮ ಊಟಕ್ಕೆ ಕರೆಯಲು ಬಂದಾಗ ರೂಮಿನ ಮೂಲೆಯಲ್ಲಿ ಕುಳಿತು, ಮಂಡಿಯೊಳಗೆ ಮುಖ ಹುದುಗಿಸಿ ಬಿಕ್ಕುತ್ತಿದ್ದೆ. “ಯಾಕೆ ಅಳ್ತಾ ಇದೀಯಾ?” ಎಂದರು ಅಮ್ಮ ಹತ್ತಿರ ಬಂದು. “ಅಜ್ಜನಿಗೆ...
ಸಂಬಂಧವೊಂದರ ದುರಂತ ಕಥೆ – ೨
ಸಂಬಂಧವೊಂದರ ದುರಂತ ಕಥೆ – ೧ ಶುಭೋನ ಕಥೆ: ರವಿಶಂಕರ್ ಹಾಗೂ ಅನ್ನಪೂರ್ಣ ದೇವಿಯವರ ನವದಾಂಪತ್ಯದಲ್ಲಿ ಶುಭೇಂದ್ರ ಶಂಕರ್ ಜನಿಸಿದ್ದು ಮಾರ್ಚ್ 30,1942 ರಂದು. ಜನಿಸಿದ ಎಂಟು ವಾರದೊಳಗಾಗಿ ಮಗು ಒಂದು ವಿರಳ ಹಾಗೂ ನೋವಿನಿಂದ ಕೂಡಿದ ಕರುಳಿನ ರೋಗಕ್ಕೆ ತುತ್ತಾಗಿರುವುದು ಪತ್ತೆ ಹಚ್ಚಲ್ಪಟ್ಟಿತು. ತಿಂಗಳೊಳಗೆ ಗುಣವಾದರೂ ಕೂಡಾ ರಾತ್ರಿಯಿಡೀ ಮಗು ಅಳುವುದನ್ನು...
ನರಮಾನವನಾಗಿ ರಾಮನ ಜನುಮ – 2
ಆಯಿತು – ಯಾವುದಾವುದೊ ನೆಪವೊ, ಜಗನ್ನಾಟಕದ ಸೊಗವೊ ಕಾಡಿಗಂತೂ ಹೊರಟಿದ್ದಾಯಿತು. ಹೇಳಿ ಕೇಳಿ ಪತಿಯೆ ಪ್ರತ್ಯಕ್ಷ ದೈವವೆನ್ನುವ ಕಾಲಮಾನ. ಪತಿಯ ಬೆನ್ನಿಡಿದು ಬಾಳುವುದೆ ಪತಿವ್ರತಾಸತಿಯ ಪರಮ ಧರ್ಮವೆನ್ನುವ ಕಾಲ. ವನವಾಸಕ್ಕೆ ಹೊರಟವನ ಹಿಂದೆ ಸೀತಾ ಮಾತೆಯೂ ಹೊರಟಾಗ ಬೇಡವೆನ್ನಲಾದೀತೆ? ಅದೆ ಲಾಘವದಲ್ಲಿ ನಲ್ಮೆಯ ಸೋದರ ಲಕ್ಷ್ಮಣನೂ ನಾರುಮಡಿಯುಟ್ಟು ಬಿಲ್ಲು ಬಾಣ ಹಿಡಿದು...
ನರಮಾನವನಾಗಿ ರಾಮನ ಜನುಮ – 1
ಪ್ರತಿ ಬಾರಿಯಂತೆ ಈ ಬಾರಿಯೂ ಉರಿಬಿಸಿಲಿನ ನಡುವೆ ಕಾಲಿಡುತ್ತಿದೆ ಶ್ರೀ ರಾಮನವಮಿ. ಈಚಿನ ಕೆಲವಾರು ದಿನಗಳಲ್ಲಿ ಸೀತೆ, ಊರ್ಮಿಳೆ, ಮಂಡೋದರಿ, ಶೂರ್ಪನಖಿ, ಭಾನುಮತಿಯಂತಹ ಕೆಲವು ಸ್ತ್ರೀ ಪಾತ್ರಗಳನ್ನು ಕುರಿತು ಬರೆಯುತ್ತಿದ್ದಾಗೆಲ್ಲ ನಮ್ಮ ರಾಮಾಯಣ ಮಹಾಭಾರತಗಳ ಪ್ರಮುಖ ಪುರುಷ ಪಾತ್ರಗಳನ್ನು ಕುರಿತೂ ಅಷ್ಟಿಷ್ಟು ಜಾಲಾಡಿಸಬೇಕೆಂಬ ಅನಿಸಿಕೆ ಮೂಡಿ ಬರುತ್ತಿತ್ತು. ಅದರಲ್ಲೂ...
ಸಂಬಂಧವೊಂದರ ದುರಂತ ಕಥೆ
ಅನ್ನಪೂರ್ಣ ದೇವಿ, ಹಿಂದೂಸ್ಥಾನಿ ಸಂಗೀತ ವಲಯದಲ್ಲಿ ಬಹು ದೊಡ್ಡ ಹೆಸರು. ಬೆಳೆಯುತ್ತಿರುವ ದಂತಕಥೆ. ಪ್ರಖ್ಯಾತ ಸಂಗೀತ ಗುರು ಉಸ್ತಾದ್ ಅಲ್ಲಾವುದ್ದೀನ್ ಖಾನ್’ರವರ ಮಗಳು, ಸರೋದ್ ಮಾಂತ್ರಿಕ ಉಸ್ತಾದ್ ಅಲಿ ಅಕ್ಬರ್ ಖಾನ್’ರ ತಂಗಿ. ಭಾರತ ರತ್ನ,ಪಂಡಿತ್ ರವಿಶಂಕರ್’ರವರ ವಿಚ್ಛೇದಿತ ಪತ್ನಿ. ಇಷ್ಟೇ ಇವರ ಗುರುತಲ್ಲ. ಭಾರತೀಯ ಸಂಗೀತ ಜಗತ್ತು ಕಂಡ,ಅದರಲ್ಲೂ ಸಿತಾರ್ ಹಾಗೂ...
ಗೊನೆ ಮಾಗಿ ಬಾಳೇ ಜೀವನ್ಮುಕ್ತ
“ಎಲೆ ಹಳದಿ ತಿರುಗಿದೀ ಹಲಸು ನಿಂತಿದೆ ಹೆಳವ; ಹದ ಬಿಸಿಲು ಸಾರಾಯಿ ನೆತ್ತಿಗೇರಿ; ಗೊನೆ ಮಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ ಹಿಂಡುಹಿಳ್ಳುಗಳಲ್ಲಿ ಪ್ರಾಣವೂರಿ” ಶ್ರೀಮಾನ್‍ಜಿ ತನ್ನ ಫೇವರಿಟ್ ಕವನದ ಸಾಲುಗಳನ್ನು ಓದಿದಾಗ ಘಾ ಸಾಹೇಬರಿಗೆ ಸುಮ್ಮನಿರಲಾಗಲಿಲ್ಲ. “ಆಹಾ ಎಂಥಾ ಪದ್ಯ! ಒಂದು ಗೊನೆ ಹಾಕಿ ಜೀವಕಳಕೊಳ್ಳುವ ಈ ಬಾಳೆಗಿಡ ತನ್ನ ಸಂತತಿಯನ್ನು ಹಿಂಡುಹಿಳ್ಳುಗಳಲ್ಲಿ...
ಸಂಜೆ ಮಲ್ಲಿಗೆ
ಮಧ್ಯಾಹ್ನದ ಉರಿಬಿಸಿಲು ಇಳಿದು ಸುಂದರ ಸಂಜೆಯ ತಂಪುಗಾಳಿ ಮನಸ್ಸಿಗೆ ಮುದ ನೀಡುವ ಹೊತ್ತಿನಲ್ಲಿ ಅರಳಿ ವಿವಿಧ ಬಣ್ಣಗಳಿಂದ ಗಿಡ ತುಂಬ ಬಿರಿಯುವ ಹೂ ಸಂಜೆ ಮಲ್ಲಿಗೆ. ಕರಾವಳಿಗರು ಅಸ್ಥಾನ ಹೂವು, ಬಯ್ಯಮಲ್ಲಿಗೆ ಎಂದೂ ಕರೆಯುತ್ತಾರೆ. ಹದವಾದ ಕಂಪು,ರಂಗು ರಂಗಾಗಿ ಕಣ್ಮನ ಸೆಳೆಯುವ ಇವುಗಳು ರಾತ್ರಿ ದೇವರ ಪೂಜೆಗೆ ಅತ್ಯಂತ ಪ್ರಶಸ್ತವಾದುವುಗಳೆಂದು ನಂಬಿಕೆ. ಇದು ಸಂಜೆ ಸುಮಾರು...
ಪ್ರಾಮಾಣಿಕತೆ ಎಂಬುದು ಸತ್ತೇ ಹೋಗಿರುವಾಗ, ಸರ್ಕಾರವೊಂದೇ ಸರಿಯಿದ್ದರೆ ಸಾಕಾಗುವುದಿಲ್ಲ…!
ಮೊನ್ನೆ ಮ್ಯೆಕ್ಯಾನಿಕಲ್ ಸರ್ ಬಂದಿರಲಿಲ್ಲ. ಅಪರೂಪಕ್ಕೊಮ್ಮೆ ಅಂತ ನಮ್ಮ ಕ್ಲಾಸಿನವರಿಗೆಲ್ಲ ಕೊನೆಯ ಅವಧಿ ಬಿಡುವು ಸಿಕ್ಕಿತ್ತು. ಗೆಳೆಯರೆಲ್ಲ ಕೊನೆಯ ಬೆಂಚುಗಳಲ್ಲಿ ಹಾಯಾಗಿ ಕುಳಿತು ಹರಟುತ್ತಿದ್ದೆವು. ಅಲ್ಲಿ ಕುಳಿತವರಲ್ಲಿ ಅದ್ಯಾವ ಪುಣ್ಯಾತ್ಮ ಯಾವಾಗ ಏನು ಪುಣ್ಯ ಮಾಡಿದ್ದನೋ ಗೊತ್ತಿಲ್ಲ, ತೀರಾ ಅಪರೂಪಕ್ಕೆಂಬಂತೆ leisure ಪೀರಿಯಡ್ ಪಟ್ಟಂಗ...
ಜಾತ್ರೆಯೆಂಬುದು ಎಂದಿಗೂ ಬಿಡಲಾಗದ ಕಮಿಟ್’ಮೆಂಟು..
ಜಾತ್ರೆಗಳೆಂದರೆಯೇ ಹಾಗೆ.. ಇನ್ನಿಲ್ಲದ ಸಂಭ್ರಮ, ಇನ್ನಿಲ್ಲದ ಸಡಗರ.. ಈ ಹಬ್ಬ ಹರಿದಿನಗಳೆಂದರೆ ಮಾಮೂಲಿಯಾಗಿ ಪೂಜೆ ಪುನಸ್ಕಾರಗಳಿರುತ್ತವೆ. ಜೊತೆಗೆ ಪಾಯಸದೂಟ. ಅದು ಬಿಟ್ಟರೆ ಹೆಚ್ಚೇನೂ ಸಂಭ್ರಮವಿರುವುದಿಲ್ಲ. ಒಂದೆರಡು ದಿನಕ್ಕೆ ಅದು ಮುಗಿದು ಹೋಗುತ್ತದೆ. ಜಾತ್ರೆಯಷ್ಟು ಅಬ್ಬರ ಹಬ್ಬಗಳಲ್ಲಿರುವುದಿಲ್ಲ. ಜಾತ್ರೆಗಳೆಂದರೆ ಹಬ್ಬ ಹರಿದಿನಗಳಿಗಿಂತ ಒಂದು ತೂಕ ಹೆಚ್ಚೇ...
