ಸೌರಮಂಡಲ, ಗ್ರಹಗಳ ಚಲನೆ, ಅವುಗಳ ನಡುವಿನ ಅಂತರ, ಚಂದಿರನ ಕಾಂತಿ, ಬೆಳಕಿನ ವೇಗ, ಭೂಮಿಯ ಸುತ್ತಳತೆ, ಗುರುತ್ವಾಕರ್ಷಣೆ ಮುಂತಾದವುಗಳ ಸಂಶೋಧಕರನ್ನು ಹೆಸರಿಸುತ್ತಾ ಹೋದಂತೆ ಕಲಿಯುಗದ ವಿಜ್ಞಾನದ ಪುಸ್ತಕಗಳನ್ನಷ್ಟೇ ಓದುತ್ತಾ, ಕಲಿಯುತ್ತಾ ಬೆಳೆದ ನಮಗೆ ಬೆಳ್ಳನೆಯ ಕೂದಲಿನ ಬಿಳಿಯ ವಿಜ್ಞಾನಿಗಳೇ ಕಣ್ಣ ಮುಂದೆ ಬರುತ್ತಾರೆಯೇ ವಿನಃ ಆ ಬೆಳ್ಳನೆಯ ಕೂದಲಿನ ಆಯಸ್ಸಿನ ಸಹಸ್ರಾರು...
Author - Sujith Kumar
ಗೆಲುವಿನ ಸೌಧಕ್ಕೆ ಅಡಿಗಲ್ಲಾದ ನಾಯಕರು…
ನಾಯಕ, ಪದವೊಂದಕ್ಕೆ ಹಲವಾರು ವ್ಯಾಖ್ಯಾನಗಳಿವೆ. ಮುಂದಾಳು, ಗಟ್ಟಿಗ, ನಿಪುಣ, ಚಿಂತಕ, ಧೀರ ಎಂಬ ಕೆಲವು ಅಥವಾ ಇನ್ನೂ ಹಲವು ಸಮರೂಪಿ ಸಂದೇಶ ಸಾರುವ ಪದಗಳ ಸಮ್ಮಿಶ್ರಣದ ವ್ಯಕ್ತಿತ್ವ ನಾಯಕನೆನಿಸಿಕೊಳ್ಳುತ್ತದೆ. ಇಂತಹ ಹಲವಾರು ವ್ಯಕ್ತಿತ್ವಗಳನ್ನು ನಾವು ದಿನಜೀವನದಲ್ಲಿ ಕಾಣುತ್ತೇವೆ, ಕೇಳುತ್ತೇವೆ. ಕೆಲವು ನೋಡಲು ಚೆಂದವೆನಿಸಿದರೆ ಇನ್ನೂ ಕೆಲವು ಕೇಳಲಷ್ಟೇ...
ಬದಲಾವಣೆಯ ಓಟದಲ್ಲಿ…
ಇದು ಸ್ಥಿತ್ಯಂತರದ ಕಾಲ. ಪ್ರಸ್ತುತ ಕಾಲಘಟ್ಟದ ಮಾನವನೊಬ್ಬನೇ ಈ ಬಹುಮುಖ್ಯವಾದ ಘಳಿಗೆಗೆ ಇತಿಹಾಸದಲ್ಲಿ ಉಳಿಯುವ ಏಕಮಾತ್ರ ಸಾಕ್ಷಿಯ ಪ್ರತೀಕ. ಈತ ಪೋಸ್ಟ್ ಆಫೀಸಿನಿಂದ ಬರುವ ಪೋಸ್ಟ್ ಕಾರ್ಡಿಗೋಸ್ಕರ ತಿಂಗಳುಗಟ್ಟಲೆ ಕಾದಿರುವುದೂ ಉಂಟು, ಆಕಾಶದಿಂದ ಡ್ರೋನ್ ಮೂಲಕ ವಸ್ತುಗಳನ್ನು ನಿಮಿಷ ಮಾತ್ರದಲ್ಲಿ ಕ್ಯಾಚ್ ಹಿಡಿದಿರುವುದೂ ಉಂಟು! ತನ್ನದೇ ಪ್ರತಿಬಿಂಬವನ್ನು ಕಾಣಲು...
ಗಳಿಸಬೇಕು ಒಂದು ದಿನ, ಗಳಿಸಿದ್ದನ್ನು ಕೊಡಲೂಬೇಕು ಎಮ್ಮ ಮನ!
ಆತ ಪ್ರಪಂಚದ ಅತಿರಥ ಶ್ರೀಮಂತ. ಆಸ್ತಿಯ ಮೊತ್ತ ಸುಮಾರು ಐದುಕಾಲು ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು! ಕಾಲೇಜಿನಿಂದ ಹೊರ ಬಿದ್ದು ಮುಂದೆ ಇನ್ನೇನೂ ಸಾಧ್ಯವಿಲ್ಲ ಎಂಬಂತಿದ್ದ ಹುಡುಗನೊಬ್ಬನಿಂದ ಈ ಮಟ್ಟಿನ ಬೆಳವಣಿಗೆ ಸಾಧ್ಯವೆ ಎಂಬುದು ಇಂದಿಗೂ ಹಲವರಲ್ಲಿ ಕಾಡುತ್ತಿರುವ ಜಟಿಲ ಪ್ರಶ್ನೆ. ಇವನೊಟ್ಟಿಗೆ ಮತ್ತೊಬ್ಬನಿದ್ದಾನೆ. ಇಂದಿಗೂ ಕೀಲಿಮಣೆಯ ದಶಕದಷ್ಟು ಹಳೆಯ...
ಒಂಟಿಬೆಟ್ಟದ ಸ್ಮಶಾನ!
ಸಿಟಿಯ ಬಿಸಿಲಲ್ಲೇ ಹುಟ್ಟಿ ಬೆಳೆದಿದ್ದ ರಾಹುಲ್’ಗೆ ಹಾರರ್ ಮೂವಿಗಳೆಂದರೆ ಪಂಚಪ್ರಾಣ. ಪ್ರೀತಿ, ಪ್ರೇಮ, ಪ್ರಣಯ ಎಂಬ ಅಳಿಯ ಅಲ್ಲ ಮಗಳ ಗಂಡನೆನಿಸಿಕೊಳ್ಳುವ ಚಿತ್ರಗಳೆಂದರೆ ಆತ ಉರಿದುಬೀಳುತ್ತಿದ್ದ. ಬಿಟ್ಟಿಯಾಗಿ ಅಂತಹ ಚಿತ್ರದ ಟಿಕೆಟ್ ದೊರೆತರೂ ಹೋಗದೆ ಇರುವಂತಹ ಆಸಾಮಿ. ಆದರೆ ಸಿಟಿಯಲ್ಲಿ ಯಾವುದೇ ಇಂಗ್ಲಿಷ್ ಹಾರರ್ ಚಿತ್ರಗಳೂ ಬಂದರೂ ಬೆಂಬಿಡದೆ ನೋಡುವ ಖಯಾಲಿ...
ಕೋಟಿ ಜನರ ಕಷ್ಟದಲ್ಲಿ ಕೋಟಿ-ಕೋಟಿಯನ್ನೆಣಿಸುವ ಮುನ್ನ..!!
ಕೆಳಗಿನ ಕೆಲ ಪ್ರಶ್ನೆಗಳಿಗೆ ಸಾಧ್ಯವಾದರೆ ನಿಮ್ಮ ಎದೆಯ ಮೇಲೆ ಕೈಯಿರಿಸಿ ಉತ್ತರಿಸಿ. ಕಳೆದ ವಾರ ರಾಜ್ಯದಾದ್ಯಂತ ನಡೆದ ವೈದ್ಯರ ಮುಷ್ಕರವನ್ನು ನಿಜವಾಗಿಯೂ ನೀವು ಬೆಂಬಲಿಸುತ್ತೀರಾ? ಇಂದು ಕೆಲಸ ಮಾಡಿದರಷ್ಟೇ ನಾಳಿನ ಕೂಳನ್ನು ಕಾಣುವ ಕೋಟ್ಯಂತರ ಹೊಟ್ಟೆಗಳ ಮೇಲೆ ಲಕ್ಷ ಲಕ್ಷ ಹೊರೆಯನ್ನು ಹೊರಿಸುವ ಖಾಸಗಿ ಆಸ್ಪತ್ರೆಗಳ ದಬ್ಬಾಳಿಕೆಗೆ ಕಾನೂನಿನ ಚೌಕಟ್ಟಿನಲ್ಲಿ ಕಡಿವಾಣ...
ಮದುಮಗನ ಮದುವೆ..
ಹುಡುಗ ಈ ಬಾರಿ ಮದುವೆ ಆಗುತ್ತಿದ್ದಾನಂತೆ. ಮೊದಲ ವರ್ಷ ಮನೆ, ಕಳೆದ ವರ್ಷ ಕಾರು ತೆಗೆದುಕೊಂಡ ಆತನಿಗೆ ಪ್ರಸ್ತುತ ವರ್ಷ ಮಾಡಲು ಬೇರೇನೂ ಕ್ಯಾಮೆ ಇಲ್ಲದ ಕಾರಣ ಅವರ ಪೋಷಕಪೂಜ್ಯರು ಈ ಬಾರಿ ಮದುವೆ ಮಾಡಿಕೊಳ್ಳುವ ಆರ್ಡರ್ ಅನ್ನು ಜಾರಿಗೆ ತಂದಿದ್ದಾರಂತೆ. ದೇಶದ ರಾಜಧಾನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ವರ್ಷಕ್ಕೊಮ್ಮೆ ಅಥವಾ ಎರಡು ಸಾರಿ (ಆದೂ ದೀಪಾವಳಿ ಹಬ್ಬದ...
ಪರಮಾಣುಬಾಂಬುಗಳಿಗಿಂತಲೂ ಅಪಾಯಕಾರಿಯಾಗಬಹುದೇ ಈ ಟೆಕ್ನಾಲಜಿ!!
ಮಾನವನ ಅಳಿವು ಉಳಿವಿನ ಬಗೆಗಿನ ವಾದ-ಸಂವಾದಗಳು ಇಂದು ನೆನ್ನೆಯದಲ್ಲ. ಪ್ರತಿಯೊಂದು ಹೊಸ ಆವಿಷ್ಕಾರಗಳ ಸಾಧಕಗಳನ್ನು ಹೊರತುಪಡಿಸಿ ಅವುಗಳ ಬಾಧಕಗಳನಷ್ಟೇ ನೋಡಿದಾಗ ಭಾಗಶಃ ಹೆಚ್ಚಿನ ಅವಿಷ್ಕಾರಗಳು ಆತನ ಉಳಿವಿಗೇ ಕುತ್ತು ತರವಂತಿರುತ್ತವೆ ಎಂಬುದು ಜಗಜ್ಜನಿತ ವಿಚಾರ. ಅದು ನ್ಯೂಕ್ಲಿಯರ್ ಬಾಂಬಿನಿಂದ ಹಿಡಿದು ಇಂದಿನ ಮೊಬೈಲ್ ಫೋನುಗಳವರೆಗೂ ಪ್ರಸ್ತುತ. ನೈಸರ್ಗಿಕವಾಗಿ...
ಯಾವೂರು,ಯಾರ ಮನೆ, ಹೋಗಲಿ ಕೊನೆ ಪಕ್ಷ ನಿನ್ನ ಹೆಸರೇನಯ್ಯ ಅಂತಾನೂ ಕೇಳಲಿಲ್ಲ...
ಅಲ್ಲಾ, ಜಿಗ್ರಿ ಒಬ್ಬ ಡ್ರಾಪ್ ಕೊಡ್ತೀನಿ ಬಾರೋ ಅಂತ ಅಷ್ಟ್ ಕರೆದ. ಆಪರೂಪಕೊಮ್ಮೆ ಬರೋ ಬೇಸಿಗೆ ಮಳೆ ತರ ಯಾವಾಗ್ಲಾದ್ರೂ ಒಮ್ಮೆ ಕರುಣೆ ಬಂದು ಆಫೀಸಿನ ಯಾರಾದರೊಬ್ಬ ಪುಣ್ಯಾತ್ಮ ಡ್ರಾಪ್ ಕೇಳ್ದ ಚಾನ್ಸ್ ಮಿಸ್ ಮಾಡ್ಕೊಂಡು, ಮೊಬೈಲು, ಪರ್ಸು, ಲ್ಯಾಪ್ಟಾಪ್ ಅಂತಷ್ಟೇ ಅಲ್ಲದೆ ಇನ್ನು ಯಾವ್ಯಾವ ಜಾಗದ ಮೇಲೋ ಏಕಾಗ್ರತೆ, ರಕ್ಷಣೆ ಎರಡನ್ನು ಮಾಡಿಕೊಳ್ಳುತ್ತಾ ಬಿಎಂಟಿಸಿಯ...
ಎಚ್ಚರ! ನಿಮ್ಮ ಸುತ್ತಲೂ ಇರುವರಿವರು..
ಆ ವಯಸ್ಸೇ ಹಾಗೆ. ಅರೆ ಬರೆ ಬೆಂದ ಬಿಸಿನೆಸ್ ಪ್ಲಾನ್ ಗಳನ್ನೇ ಕನಸಿನ ಕೋಟೆಯನ್ನಾಗಿಸಿಕೊಂಡು ಅನುಷ್ಠಾನಗೊಳಿಸಲು ಸದ್ಯಕ್ಕಂತೂ ಸಾಧ್ಯವಿಲ್ಲದಿದ್ದರೂ ಮಾಡೇ ತೀರುತ್ತೇನೆಂಬ ಹೆಬ್ಬಯಕೆ. ತಿಂಗಳಿಗೆ ಒಂತಿಷ್ಟು ಪಾಕೆಟ್ ಮನಿ, ತಲೆಯ ತುಂಬೆಲ್ಲಾ ಬ್ರಾಂಡೆಡ್, ಹೈಗ್ರೇಡ್ ವಸ್ತುಗಳ ಕಾರುಬಾರು, ಊರು ಸುತ್ತಲು ಗೆಳೆಯನ ಸೆಕೆಂಡ್ ಹ್ಯಾಂಡ್ ಬೈಕು ಹಾಗು ಕ್ಲಾಸಿಗೆ ಬಂಕು...