Author - Sujith Kumar

ಅಂಕಣ ಎವರ್'ಗ್ರೀನ್

ಶಿಸ್ತಿನ ನಟನೆಯ ಚಿಗುರಿನ ಚೇತನ – ದಿಲೀಪ್ ಕುಮಾರ್

ಈತ ದೇಶೀ ಚಿತ್ರರಂಗದ ಅತಿ ಹಿರಿಯ ನವತರುಣ! ಸ್ವಾತಂತ್ರ್ಯಪೂರ್ವದಿಂದ ಹಿಡಿದು ಇಂದಿನವರೆಗೂ ಅದೇ ಮಂದಹಾಸದ ನಗೆ, ಅದೇ ಶಾಂತ ನಿರ್ಮಲ ಚಹರೆ ಹಾಗು ಅಷ್ಟೇ ಗಾಢವಾದ ಕಪ್ಪುಗೂದಲು ಈತನ ಹೈಲೈಟ್ಸ್. ವಯಸ್ಸಿನ ಗಡಿಯಾರ 95 ವರ್ಷಗಳನ್ನು ದಾಟಿದೆ ಹಾಗು ತಿರುಗಾಡಲು ಒಂದು ವೀಲ್ ಚೇರ್ ನ ಅವಶ್ಯಕತೆಯಿದೆ ಎಂಬುದನ್ನು ಬಿಟ್ಟರೆ ಬೇರೆಲ್ಲ ಬಗೆಯಿಂದಲೂ ಈತ ನವತರುಣನೇ. ಒಂಚೂರು ಬಣ್ಣ...

Featured ಅಂಕಣ

ಕೇವಲ ಲಕ್ಷದಷ್ಟು ಇಂಗ್ಲಿಷ್ ಸೈನಿಕರು ಇಡೀ ಭರತಖಂಡವನ್ನು ಬುಗುರಿಯಂತೆ...

ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟಿಷ್’ರಾಜ್’ವರೆಗಿನ ನಡೆ ಬಾಲ ಬಿಚ್ಚಿ ಕುಣಿದಾಡುತ್ತಿದ್ದ ದೇಶಗಳೆಲ್ಲವನ್ನು ಜುಟ್ಟು ಹಿಡಿದು ಟೊಂಕ ಮುರಿದು ಬಡಿದು ಹಾಕಿದ  ದೇಶವದು. ಅಮೇರಿಕ ಆಸ್ಟ್ರೇಲಿಯಾದಂತ  ಬಲಿಷ್ಠ ದೇಶಗಳೇ ಗಪ್–ಚುಪ್ ಎನ್ನುತ ಅವರ ಅಧಿಕಾರವನ್ನು ತಮ್ಮ ಮೇಲೆ ಹರಿಯಬಿಟ್ಟುಕೊಂಡಿದ್ದವು. ಪ್ರಸ್ತುತ ಜಗತ್ತಿನ  ಕೇವಲ ಇಪ್ಪತ್ತರಿಂದ ಇಪ್ಪತ್ತೆರಡು...

ಅಂಕಣ

ಐನ್ಸ್ಟೀನ್’ನ ಈ ಮಾತುಗಳು ನಿಜವಾಗುವ ಸನಿಹದಲ್ಲಿ..!

ನ್ಯೂಕ್ಲಿಯರ್ ವಾರ್. ಇತ್ತೀಚಿನ ದಿನಗಳಲ್ಲಿ ಈ ಪದಗುಚ್ಛ ಅದೆಷ್ಟು ಪ್ರಸಿದ್ದಿ ಹೊಂದಿದೆ ಎಂದರೆ ಚಡ್ಡಿ ಹಾಕದ ಮಕ್ಕಳೂ ಸಹ ಇತರರನ್ನು ಹೆದರಿಸಲೆತ್ನಿಸಿದಾಗ ಇಂತಹ ಪದವೊಂದನ್ನು ಬಳಸುವುದುಂಟು. ಈ ವಿಚಾರದ ಬಗೆಗಿನ ದೃಶ್ಯ ಮಾಧ್ಯಮಗಳ ವಿಪರೀತ ಪ್ರಚಾರ ಹಾಗು ಏಕಮುಖೇನ ಚರ್ಚೆಗಳು ಪರಮಾಣು ಬಾಂಬ್ ಗಳೆಂದರೆ ಇಂದು ದೀಪಾವಳಿ ಹಬ್ಬದಲ್ಲಿ ಸಿಡಿಸುವ ಲಕ್ಷ್ಮಿ ಪಟಾಕಿಯೋ...

ಅಂಕಣ

ಗತವೈಭವದ  ದಿನಗಳ ಇತಿಹಾಸದ ಪುಟಗಳು..

  ಭಾಗಶಃ ದಕ್ಷಿಣ ಭಾರತವಲ್ಲದೆ ಇಂದಿನ ಶ್ರೀಲಂಕಾ, ಬಾಂಗ್ಲಾದೇಶ, ಮಯನ್ಮಾರ್, ಥೈಲ್ಯಾಂಡ್, ಮಲೇಷ್ಯಾ, ಮಾಲ್ಡೀವ್ಸ್ ಅಲ್ಲದೆ ದೂರದ ಸಿಂಗಾಪುರದವರೆಗೂ ತನ್ನ ಅಧಿಪತ್ಯವನ್ನು ಸ್ಥಾಪಿಸಿದ್ದ ಸಾಮ್ರಾಜ್ಯವೊಂದಿತ್ತು. ಸುಮಾರು ಹದಿನೈದು ಶತಮಾನಗಳಿಗೂ ಹೆಚ್ಚಿನ ಕಾಲಘಟ್ಟದಲ್ಲಿ ವಿಸ್ತರಿಸಿದ್ದ ಈ ಬಲಿಷ್ಟ ಸಾಮ್ರಾಜ್ಯ ಇಂದಿಗೆ  ಸಾವಿರ ವರ್ಷಗಳ ಹಿಂದೆಯೇ ದಂಡೆತ್ತಿ ಹೋಗಲು...

ಅಂಕಣ

ಮತ್ತೊಮ್ಮೆ ಮಾಡಲಾದೀತೇ ಇಂಥದೊಂದು ಮೂವಿ…?

ವರ್ಷ 1997. ಮುಂಬೈ ನಗರದ ಬಾಡಿಗೆ ಮನೆಯೊಂದರ ಕೋಣೆಯಲ್ಲಿ ಚಿತ್ರಕಥೆಯೊಂದಕ್ಕೆ ಅಂತಿಮ ಸ್ಪರ್ಶ ದೊರೆತಿತ್ತು. ಆ ಕಥೆಯ ಜನಕ ಒಬ್ಬ ನಿರ್ದೇಶಕನೂ ಹೌದು. ನಿರ್ದೇಶಕನಾಗಿ ತಾನು ಮಾಡಿದ ಎರಡು ಚಿತ್ರಗಳ ಫಲಿತಾಂಶಕ್ಕೆ ಆತನ ಬಾಡಿಗೆ ಮನೆಯೇ ಸಾಕ್ಷಿ. ಆದರೆ ಅಂದು ಬರೆದು ಮುಗಿಸಿದ ಚಿತ್ರಕಥೆಯ ಮೇಲೆ ಎಲ್ಲಿಲ್ಲದ ವಿಶ್ವಾಸ ಆತನಿಗೆ. ಕಥೆ ಅಂದಿಗೆ ಸುಮಾರು ನೂರು ವರ್ಷಗಳ ಹಿಂದಿನ...

ಅಂಕಣ

ಸಾಲ ಮನ್ನಾ ಮಾಡುವ ಮುನ್ನ…

ವಿಷಯ ಅದಲ್ಲ. ಸಾಲ ಮನ್ನಾ ಅಂದಾಕ್ಷಣ ಹೇಗೆ, ಎಷ್ಟು, ಎಲ್ಲಿ ಎಂಬ ಪ್ರಶ್ನೆಗಳೇ ಹೆಚ್ಚಾಗಿ ನಮ್ಮಲ್ಲಿ ಮೂಡುತ್ತವೆ ಅಲ್ಲವೇ? ರೈತರಾದರೆ ಆಫ್–ಕೋರ್ಸ್ ಯಸ್. ರೈತನ ಕನಸು ಮನಸಲ್ಲೂ ಸದ್ಯಕ್ಕೆ ಹರಿದಾಡುತ್ತಿರುವ ಏಕೈಕ ಪದವೆಂದರೆ ಅದು ‘ಸಾಲಮನ್ನಾ‘. ಆದರೆ ಈ  ಪ್ರಶ್ನೆಗಳು ಒಂದು ವಿಧದಲ್ಲಿ ಪ್ರಶ್ನೆಗಳೇ ಅನಿಸಿಕೊಳ್ಳುವುದಿಲ್ಲ ಅಂದರೆ!? ಇನ್ ಫ್ಯಾಕ್ಟ್...

ಅಂಕಣ

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು

ಇವು ಚಿತ್ರಕಥೆಯೂ, ಕಟ್ಟುಕಥೆಯೋ, ನಿಜವೋ ಅಥವ ಶುದ್ಧ ಸುಳ್ಳೋ ಸದ್ಯಕ್ಕೆ ಮಾತ್ರ ಎಲ್ಲವೂ ಗೋಜಲು. ಆತ ತಮಿಳಿನ ಸುಪ್ರಸಿದ್ದ ನಟ. ಹೆಸರು ಧನುಷ್. ಗಡ್ಡವನ್ನು ತೆಳುವಾಗಿ ಬಿಟ್ಟು, ಕಪ್ಪಗೆ ತೆಳ್ಳಗೆ ಇರುವ ಈತ ಒಮ್ಮೆಲೇ ಹೀರೋ ಮೆಟೀರಿಯಲ್ ಎಂದರೆ ಯಾರಾದರೂ ಮೇಲೆ ಕೆಳಗೆ ನೋಡಿಯಾರು. ಆಗ ಈತ ಒಬ್ಬ ಅದ್ಬುತ ನಟ, ನಿರ್ದೇಶಕ, ಹಾಡುಗಾರ ಅಲ್ಲದೆ ಒಬ್ಬ ನಿರ್ಮಾಪಕನೂ ಹೌದು ಎಂದರೆ...

ಅಂಕಣ

 ರಾತ್ರಿ ಕಂಡ ಬಾವಿಗೆ ಹಗಲು ಬಿದ್ದವರ್ಯಾರು?!

ಡೊನೊಲ್ಡ್ ಟ್ರಂಪ್. ಇತ್ತೀಚಿನ ದಿನಗಳಲ್ಲಿ ಈ ಹೆಸರನ್ನು ಯಾರು ತಾನೇ ಕೇಳಿರಲಿಕ್ಕಿಲ್ಲ. ಒಂದು ಪಕ್ಷ ನಮ್ಮ ದೇಶದ ರಾಷ್ಟ್ರಪತಿಯ ಹೆಸರೇ ತಿಳಿಯದಿದ್ದರೂ ಸಾಗರಗಳಾಚೆಗಿರುವ ಈ ಟ್ರಂಪ್ ಯಾರು, ಆತನ ಸುಂದರ ಮಗಳ ಹೆಸರೇನು, ಅವನ ಆಸ್ತಿಯ ಒಟ್ಟು ಮೊತ್ತವೆಷ್ಟು ಎಂಬೆಲ್ಲ ವಿಚಾರಗಳು ಸಾರಸಗಟಾಗಿ ಹೇಳಬಲ್ಲ ಬುದ್ದಿವಂತರಿದ್ದಾರೆ ನಮ್ಮಲ್ಲಿ. ಎಲ್ಲೋ ಒಂದೆಡೆ ಇದು...

ಅಂಕಣ

ಬಿಸಿಸಿಐ’  ಬೆಳಕ ಹೊತ್ತಿಸದ ಶಶಾಂಕ!

ಕೆಲವಾರಗಳ ಹಿಂದಷ್ಟೆಯೇ ಬಿಸಿಸಿಐ (ಭಾರತೀಯ ಕ್ರಿಕೆಟ್ ಕೌನ್ಸಿಲ್) ಕ್ರಿಕೆಟ್ ಅಭಿಮಾನಿಗಳ ನಿದ್ದೆಗೆಡಿಸುವ ಸುದ್ದಿಯೊಂದನ್ನು ಹೊರ ಹಾಕಿತ್ತು. ‘ಈ ಬಾರಿ ಟೀಮ್ ಇಂಡಿಯ ಚಾಂಪಿಯನ್ಸ್ ಟ್ರೋಪಿಯಲ್ಲಿ ಆಡುವುದು ಅನುಮಾನ’ ಎಂಬ ಹೇಳಿಕೆ ಕೇಳಿಬರತೊಡಗಿತು. ಸುದ್ದಿಯನ್ನು ಕೇಳಿ ಅಭಿಮಾನಿ ಕೆಂಡಮಂಡಲವಾಗತೊಡಗಿದ್ದ. ಮಾಧ್ಯಮಗಳು  ಬಿಸಿಸಿಐಯ ನಿರ್ಧಾರವನ್ನು ತರಾಟೆಗೆ...

ಅಂಕಣ

ಆಸ್ಕರ್ ನಾಮಾಂಕಿತ ಇವನ ಚಿತ್ರಗಳನ್ನು ವಿದೇಶಗಳಲ್ಲಿ ತೋರಿಸಿ ನಮ್ಮ ಮಾನ...

ಇಂದಿಗೆ ಸುಮಾರು 65 ವರ್ಷಗಳ ಹಿಂದೆ ಮೂವತ್ತು ವರ್ಷದ ಯುವಕನೊಬ್ಬ ಬಂಗಾಳಿ ಬರಹಗಾರರಾದ ಭೀಹುತಿ ಭೂಷಣ್ ಬಂಡೋಪಾಧ್ಯಾಯ್ ಅವರ ಕಾದಂಬರಿಯನ್ನು ಆಧರಿಸಿ ಚಿತ್ರವೊಂದನ್ನು ನಿರ್ದೇಶಿಸುವ ಕನಸನ್ನು ಕಟ್ಟಿಕೊಳ್ಳತೊಡಗುತ್ತಾನೆ. ಚಿತ್ರನಿರ್ದೇಶನ, ಚಿತ್ರಕಥೆ ಬರೆಯುವುದು ಎಲ್ಲವೂ ಅವನ ಬಹುಕಾಲದ ಕನಸು. ಕನಸೇನೋ ಸರಿ, ಸಾಧಿಸುವುದೂ ಬಲು ದಿಟ, ಆದರೆ ತನ್ನ ಮೊದಲ ಆರಂಭಕ್ಕೆ...