`ಕಾಸರಗೋಡು’ ಎಂದಾಗ ಸಮಗ್ರ ಕನ್ನಡಿಗರಿಗೆ ನೆನಪಾಗುವ ಒಂದು ಅಕ್ಷರ `ಪೈ’; ಪೈ ಎಂದರೆ ಮಂಜೇಶ್ವರ ಗೋವಿಂದ ಪೈ ಎಂದು ಅರ್ಥ. ಅದೇ ಸಾಲಿನಲ್ಲಿ ಮತ್ತೆ ನಮಗೆ ನೆನಪಾಗುವ ಇನ್ನೊಂದು ಅಕ್ಷರ `ರೈ’. ರೈ ಎಂದರೆ ಸಂಸ್ಕೃತದಲ್ಲಿ `ಸಂಪತ್ತು’ ಎಂದರ್ಥ. ಅದು ವೇದಕಾಲದ ಅರ್ಥ. ಆ ಅರ್ಥ ಈಗ ನಮ್ಮ ಜನರಿಗೆ ಮರೆತುಹೋಗಿದೆ. ಈಗ ನಮಗೆ ನೆನಪಾಗುವ ಅರ್ಥ `ರೈ ಎಂದರೆ ಕಿಞ್ಞಣ್ಣ ರೈ’...
Author - Guest Author
ನಾವು ದ್ವೇಶಿಸುವುದು ದೇಶದ್ರೋಹಿಗಳನ್ನು ಮಾತ್ರ!
ಆಗಸ್ಟ್ 30 2015 , ಭಾರತದ ಇತಿಹಾಸದಲ್ಲೇ ಅದೊಂದು ಮಿಶ್ರತೆಯ ದಿನ. ಒಂದೆಡೆ ಈ ದೇಶ ಕಂಡ ಅದ್ಬುತ ರಾಜಕೀಯೇತರ ನಾಯಕ , ಜನರ ಹೃದಯ ಗೆದ್ದ ಅತ್ಯಂತ ಸರಳ ವ್ಯಕ್ತಿ, ಜಾತಿ ಧರ್ಮಗಳ ಎಲ್ಲೆ ಮೀರಿ ಭಾರತೀಯತೆಯನ್ನೇ ತನ್ನ ಉಸಿರಾಗಿಸಿಕ್ಕೊಂಡು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಬಿಟ್ಟುಹೋದ ಆವುಲ್ ಫಕೀರ್ ಜೈನೂಲಬ್ದೀನ್ ಅಬ್ದುಲ್ ಕಲಾ ಪಂಚಭೂತಗಳಲ್ಲಿ...
ಚೆಲುವಿನ ರೂಪರಾಶಿ… ರೂಪ್ ಕು೦ಡ
ದೂರದರ್ಶನದಲ್ಲಿಯೊ, ಪತ್ರಿಕೆಗಳಲ್ಲಿಯೊ ಹಿಮಾಲಯದ ಅ೦ದವನ್ನು ನೋಡಿದ ಯಾರಾದರೂ ಹಿಮಾಲಯದ ಅದ್ಭುತ ಪರ್ವತಶ್ರೇಣಿಯನ್ನು ಏರುವ ಹಾಗು ಹಿಮದ ಮೇಲೆ ಆಟವಾಡುವ ಕನಸನ್ನು ಕಾಣದೇ ಇರುವುದಿಲ್ಲ. ಹೌದು, ನಾವೂ ಕೂಡ ಅ೦ತಹ ಒ೦ದು ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಆಯ್ಕೆ ಮಾಡಿಕೊ೦ಡದ್ದು ಉತ್ತರಕಾ೦ಡ ರಾಜ್ಯದ ಹಿಮಾಲಯ ಪರ್ವತ ಶ್ರೇಣಿ ಯಲ್ಲಿರುವ ‘ರೂಪ್ ಕು೦ಡ್’ ಎ೦ಬ...
ಅವರು ನೆತ್ತರು ಹರಿಸಿದ್ದರಿಂದಲೇ ನಾವಿಂದು ಸುಖವಾಗಿರೋದು!!
ಇಂದು ಜಗತ್ತು ಬರಿ ಸ್ವಾರ್ಥಮಯವಾಗಿಬಿಟ್ಟಿದೆ. ತಾನೂ ನನ್ನ ಕುಟುಂಬ ಚೆನ್ನಾಗಿದ್ದರೆ ಸಾಕು ಬೇರೆಯವರ ಉಸಾಬರಿ ನಮಗ್ಯಾಕೆ? ಎನ್ನುವ ಭಾವನೆ ಜನರಲ್ಲಿ ತುಂಬಿಹೋಗಿದೆ. ನಾನು ಮತ್ತು ನನ್ನ ಕುಟುಂಬ ಕ್ಷೇಮವಾಗಿದೆ ನಾನ್ಯಾಕೆ ಬೇರೆ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕು? ಅದರಿಂದ ನನಗೇನು ಲಾಭ? ಹೀಗೆ ಲಾಭ- ನಷ್ಟಗಳ ಲೆಕ್ಕಾಚಾರ ಮಾಡುತ್ತದೆ ಮನುಷ್ಯನ ಮನಸ್ಸು. ನಮ್ಮ ಈ...
ಕಾಲವನ್ನು ತಡೆಯೋರು ಯಾರೂ ಇಲ್ಲ.. ಆದರೆ..
ಸಾಮಾನ್ಯವಾಗಿ ನನ್ನ ಒಂದು ಬರವಣಿಗೆ ಕೆಲವೇ ಕೆಲವು ಘಂಟೆಗಳನ್ನು ತೆಗೆದುಕೊಳ್ಳುತ್ತೆ, ಯಾಕೆಂದರೆ ನಾನು ಮಾತನ್ನು ಬರೆಯೊನು, ಈ ಲೇಖನವನ್ನು ಬರೆಯೋದಕ್ಕೆ ನಾನು ವಾರಗಟ್ಟಲೇ ಸಮಯ ತೆಗೆದುಕೊಂಡೆ, ಬೇಸರ, ಕೋಪ ಒಂದಷ್ಟು ದುಃಖ ಎಲ್ಲವನ್ನೂ ಅದುಮಿಟ್ಟುಕೊಂಡು ಅಕ್ಷರವನ್ನು ಜೋಡಿಸೋದು ಎಷ್ಟು ಕಷ್ಟ ಎಂಬುದು ಮೊದಲಬಾರಿಗೆ ಅನುಭವ ಆದಂತಾಯ್ತು. ಬರೆಯೋಕೆ ಕೂತಾಗಲೆಲ್ಲ ಒಂದು...
ಸಿಂಹದ ಪಕ್ಕದಲ್ಲೊಂದು ನಾಯಿ
ಮೆಜೆಸ್ಟಿಕ್ಕಿಂದ ಹೊರಟ್ರೆ ಒಂದು ಕಿಲೋಮೀಟರ್ ದೂರದಲ್ಲಿರುವ ಸಂಪಿಗೆ ರಸ್ತೆಯಲ್ಲಿ ನಮ್ಮ ಮೆಟ್ರೋ ಕೆಲಸ ನಡೆಯುತ್ತಿತ್ತು. ಎತ್ತರದ ಕಂಬದ ಮೇಲೆ ವ್ಯಕ್ತಿಯೊಬ್ಬ ತನ್ನ ಸೊಂಟಕ್ಕೊಂದು ಬೆಲ್ಟ್ ಕಟ್ಟಿಕೊಂಡು ಆ ಬೆಲ್ಟನ್ನು ಅದೇ ಕಂಬದ ಒಂದು ಕೊಕ್ಕೆಗೆ ಸಿಕ್ಕಿಸಿ ನೇತಾಡಿಕೊಂಡು ಕೆಲಸ ಮಾಡುತ್ತಿದ್ದ. ನಾನು ಅದನ್ನು ಫೋಟೋ ತೆಗಿತಾ ಇದ್ದೆ. ಅಷ್ಟರಲ್ಲೆ ಕೇಳಿದ್ದು?…...
ನೆಲ್ಲಿತೀರ್ಥ…ಎಂಬ ದೇವಸ್ಥಾನ
ಭಯಂಕರ ನಿದ್ದೆಯಲಿ ಕನಸು ಕಾಣುತ್ತಿದ್ದೆ .. ಒಮ್ಮಿಂದೊಮ್ಮೆಲೆ ಅಮ್ಮನ ಕರೆ..”ಏಳು ..ಈಗಲೇ ತಡವಾಗಿದೆ..”.. ಅಪ್ಪನ ಬಹು ದಿನದ ಯೋಜನೆಗೆ ಇಂದು(ಆದಿತ್ಯವಾರ) ತೆರೆ ಬೀಳುವ ಕ್ಷಣ.. “ನೆಲ್ಲಿ ತೀರ್ಥ ” ಎಂಬ ನೈಸರ್ಗಿಕವಾಗಿ ಬೆಳೆದ ಒಬ್ಬರ ಪರಿಶ್ರಮದ ತಾಣ(ದೇವಸ್ಥಾನ ).. ಪ್ರಯಾಣ ಶುರು ಮಾಡಲು ಸಜ್ಜಾದೆವು..ಅಪ್ಪ ಅಮ್ಮ , ಪಕ್ಕದ ಮನೆ ಆಂಟಿ...
ಸುಂದರ ಕವನ: ಮಳೆ
ಬಾನಿನ ತುಂಬೆಲ್ಲಾ ಮೋಡಗಳ ಚಿತ್ತಾರ ಬರಿದಾದ ಭುವಿಯಲಿ ಗಾಳಿಯಾ ಸಂಚಾರ! ತಂಗಾಳಿ ಸ್ಪರ್ಶಕೆ ಕಾರ್ಮುಗಿಲು ಕರಗಿತು ಮುತ್ತಿನ ರೂಪದಲಿ ಹನಿ ಭುವಿಯ ಚುಂಬಿಸಿತು!! ಕೆಂಪಾದ ಭುವಿಯಿಂದು ತಂಪಾಯಿತೀಗ ಭೋರ್ಗರೆದು ಬರುತಿರಲು ಮೊದಲ ವೃಷ್ಟಿ! ಮನಸಾರೆ ಮಿಂದು ಮನಸೂರೆಗೊಂಡು ಜೀವಕಳೆ ಪಡೆಯಿತು ಸಕಲ ಸೃಷ್ಟಿ!! ನೊಂದಂತ ಮನಕೆ ಸಾಂತ್ವಾನದ ರೀತಿ ಬೆಂದಂತ ಭುವಿಗೆ ಈ ಮಳೆಯ ಬರುವು...
ಹರೆಯದ ನೆರೆ ಮತ್ತು ಕಾಲದ ಜೊತೆಗೆ : ಎರಡು ಕವನಗಳು
ಹರೆಯದ ನೆರೆ ಹರೆಯದ ನೆರೆ ಬಂದಿದೆ ಆಸೆಯ ಹೊರೆ ಹೆಚ್ಚಿದೆ ಚಿಗುರು ಮೀಸೆ ಮೇಲೆ ಕಯ್ಯಿ ತೀಡಿ ತೀಡಿ ತಿರುವಿದೆ ಜಗದ ಬಗೆಯ ಸುಖವನೆಲ್ಲ ತನ್ನದೆಂದೆ ತಿಳಿಯುತ ಬೀಗಿ ಬೀಗಿ ನಡೆಯುತಿರುವ ಎಲ್ಲ ಗಮನ ಸೆಳೆಯುತ ಕೆಂಪು ಅಂಗಿ ಹಸಿರು ಲುಂಗಿ ಕ್ಷಣ ಕ್ಷಣಕು ವಿವಿಧ ಭಂಗಿ ಮೇಲೆ ಕೋಟು ತೊಟ್ಟು ಎಂದುಕೊಂಡ ತಾನೆ ಕೆಂಪು ಪರಂಗಿ ಪೈಸೆ ಕೆಲಸ ಮಾಡಲೊಲ್ಲ ಗೆಳೆಯ...
ಕಥೆ: ಋಣ ಮುಕ್ತ
“ನಿಮ್ಮಲ್ಲೊಂದು ಬಹು ಪ್ರಾಮುಖ್ಯವಾದ ವಿಷಯ ಹೇಳಕ್ಕಿದೆ. ದಯವಿಟ್ಟು ನಾಡಿದ್ದು ಭಾನುವಾರ ಸಿಗ್ತೀರಾ?” ಎಂದು ಯಾರೋ ಅಪರಿಚಿತರು ಫೋನ್ ಮಾಡಿ ಮನವಿ ಮಾಡಿದ್ದರಿಂದ ಅಂದು ರಾಜೇಶ ಹೊರಗೆಲ್ಲೂ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದ. ‘ತಾವ್ಯಾರು? ಏನು ವಿಷಯ?’ ಎಂದು ರಾಜೇಶ ಬಹಳ ಆಶ್ಚರ್ಯದಿಂದಲೇ ಪ್ರಶ್ನಿಸಿದರೆ, ‘ಅದನ್ನೆಲ್ಲ ವಿವರವಾಗಿ ನುಮಗೆ ಮುಖತಃ ಹೇಳ್ತೀನಿ…...