ಅರಸಿ ಹೊರಟ ಬದುಕಲಿ ‘ಅವಳು’ ಜೀವವಾದಾಗ, ಪ್ರೇಮಿಯೊಬ್ಬ ಒಂಟಿಯಾಗಿರುವಾಗ ಆತ ತನ್ನ ನಿವೇದನೆಯನ್ನು,ಪ್ರಸ್ತುತವನ್ನ ಮೀರಿ ಚಂದದ ಕನಸನ್ನು,ಒಂಟಿಯಿದ್ದರೂ ಮನದಲ್ಲಿ ಬಿಡದೆ ಒಸರುತ್ತಿರುವ ಅವಳ ಪ್ರೇಮದ ಭಾವದ ಒರತೆಯನ್ನ ಹಂಚಿಕೊಂಡ ಪರಿ ಇದು. ಒಂದು ತರ ಇದು ಪ್ರೇಮ ಪತ್ರವಿರಬಹುದು ಅಥವಾ ಚಂದದ ಭಾವನೆಗಳು ತುಂಬಿರುವ ಭಾವ ಪತ್ರವಿರಬಹುದು..ಹೊಗಳಿಕೆಯ...
Author - Prasanna Hegde
ನಲುವತ್ತೆರಡರಲ್ಲೂ ಬತ್ತದ ಉತ್ಸಾಹ
ಆ ಹುಡುಗ ತನ್ನ ಐದನೇ ವರ್ಷದಿಂದಲೇ ಟೆನ್ನಿಸ್ ಆಡಲು ಶುರುಮಾಡಿದ. ಅದೇ ಹುಡುಗ ಇಂದು ಭಾರತದ ಗೆಲುವಿನ ತಿರಂಗವನ್ನು ವಿಶ್ವದ ಮೂಲೆ ಮೂಲೆಯ ಟೆನ್ನಿಸ್ ಅಂಗಳದಲ್ಲಿ ಹಾರಿಸುತ್ತಿದ್ದಾನೆ. ಕನಸುಗಳನ್ನು ಟೆನ್ನಿಸ್ ಅಂಗಳದಲ್ಲಿಯೇ ಕಂಡ ಆ ಹುಡುಗ ಹಿಂದುಸ್ತಾನದ ಕೋಟಿ ಜನರ ಆಶೀರ್ವಾದದಿಂದ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿಯೂ ಮತ್ತೆ ಟೆನ್ನಿಸ್ ಅಂಗಳದಲ್ಲಿ ನಿಂತು ಹೇಳುತ್ತಾನೆ...
ಹೊಸತನದ “ ವಿಜಯ “
ಬದಲಾವಣೆಯ ಪರ್ವಕಾಲದಲ್ಲಿ ನಾವಿದ್ದೇವೆ.. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಈ ಕಾಲಮಾನದ ಜೊತೆ ಹೆಜ್ಜೆ ಹಾಕಲೇಬೇಕು. ಇಲ್ಲದಿದ್ದಲ್ಲಿ ನಿಂತ ನೀರಂತಾಗಿ ಬದುಕಬೇಕಾಗುತ್ತದೆ. ನಮ್ಮದೋ ಆಡಂಬರದ ಜೀವನ, ೨೩ ವರ್ಷಕ್ಕೆ ಎರಡು ಪದವಿ ಪಡೆದುಲೋಕಕ್ಕೆ ಐಡೆಂಟಿಟಿ ಕಾರ್ಡ ಮಾಡಿ ಹಂಚಿದರೆ ‘ಸಾಧನೆ’ ಎಂದುಕೊಂಡು ಬದುಕುತ್ತಿರುವ ನಾವುಗಳು ಬುದ್ಧಿವಂತರಾ ಅಥವಾ...
ತೆರಿಗೆ ಕಟ್ಟುವ ಸಮಯ
ಇದು ಆದಾಯ ತೆರಿಗೆ (Income Tax)ಸಲ್ಲಿಸುವ ಸಮಯ.ಪ್ರತೀ ವರ್ಷದಂತೆ ಈ ವರ್ಷವೂ ಆದಾಯ ತೆರಿಗೆ ಸಲ್ಲಿಸಲೇ ಬೇಕು.ಪ್ರತೀ ವರ್ಷ ಜುಲೈ ೩1 ಆದಾಯ ತೆರಿಗೆ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು ಆದರೆ ಈ ಬಾರಿ ವಿವರ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನ. ಈ ವರ್ಷ ಐಟಿಆರ್ ನಮೂನೆಗಳನ್ನು ಪರಿಷ್ಕರಿಸಿ, ಸರಳೀಕರಣ ಮಾಡಲಾಗಿದೆ.ತೆರಿಗೆ ಸಲಹೆಗಾರರ ಸಹಾಯ ಪಡೆಯುವುದೇ ದೊಡ್ಡ ತಲೆನೋವು...
ಕಲಾಂ,ಕನಸು ಹಾಗು ಫೋಖ್ರಾನ್-II
ಅದೊಂದು ದಿನ ಮೌನಿಯಾಗಿ ಕೂತಿದ್ದೆ,ಹೌದು ಕೇವಲ ಮೌನವೊಂದೇ ಮನಸ್ಸನ್ನ ಆವರಿಸಿತ್ತು..ಮೊದಲ ಬಾರಿ ನಾನು ಸೋತೆ ಎಂದು ಕುಗ್ಗಿದ್ದೆ..ನನ್ನದೇ ನಿರ್ಧಾರ ನನ್ನನ್ನ ಹಂತ ಹಂತವಾಗಿ ಕುಗ್ಗಿಸಿತ್ತು,ಇದು ಅಂದು ನಾನೇ ತೆಗೆದುಕೊಂಡ ನಿರ್ಧಾರವೇ? ನನಗೇ ನಂಬಲಾಗುತ್ತಿರಲಿಲ್ಲ..ಪ್ರತೀ ಕ್ಷಣವೂ ಸೋಲುತ್ತಿದ್ದ ಮನಸ್ಥಿತಿಯ ಎದುರು ನಾನು ಕುಬ್ಜನಾಗುತ್ತಾ ಸಾಗಿದ್ದೆ..ಕಾರಣ ಹುಡುಕುವ...
ಅಪ್ಪ ಮತ್ತು ಯಕ್ಷಗಾನ
ನೆನಪಿದೆ ಅಪ್ಪನ ಹೆಗಲ ಮೇಲೆ ಹತ್ತಿ ಕುಳಿತು ಯಕ್ಷಗಾನ ನೋಡಲು ಹೊರಟಿದ್ದು, ಅಪ್ಪ ಹಾಡುತಿದ್ದ ಯಕ್ಷಗಾನದ ಹಾಡುಗಳಿಗೆ ಗೊತ್ತಿಲ್ಲದೇ ದನಿಯಾಗುತ್ತಿದ್ದುದು,ಅರ್ಥವಾಗದಿದ್ದರೂ ಕಣ್ಮುಚ್ಚದೇ ನೋಡುತ್ತಿದ್ದ ಚಿಟ್ಟಾಣಿ ಅಜ್ಜನ ಪಾತ್ರ,ಕನಸಿನಲ್ಲೂ ಗುನುಗಬೇಕೆಂಬಂತೆ ಅನ್ನಿಸುತ್ತಿದ್ದ ನೆಬ್ಬೂರು ಭಾಗವತರ ಹಾಡು,ನಕ್ಕು ನಕ್ಕು ಸುಸ್ತಾಗುವಂತಿದ್ದ ರಮೇಶ್ ಭಂಡಾರಿಯವರ ಹಾಸ್ಯ...
ನೆನಪು,ಭಾವನೆ ಮತ್ತು ಪ್ರಸ್ತುತ
ಆ ಹನಿಯಲ್ಲೇನೋ ಭಾವವಿದೆ.ಮೈ ನೆನೆಯದಿದ್ದರೂ ಮನಸ್ಸು ಪ್ರತೀಕ್ಷಣವೂ ತೋಯ್ದಾಡುವಂತೆ ಮಾಡುವ ವಿಪರೀತ ಶಕ್ತಿಯಿದೆ.ಗೊತ್ತಿಲ್ಲ,ಅಂದೇಕೋ ಮಳೆಯನ್ನು ನೋಡುತ್ತಲೇ ಇದ್ದುಬಿಡೋಣ ಅನ್ನಿಸುತ್ತಿತ್ತು.ಬಿಡದೇ ಸುರಿಯುತ್ತಿರುವ ಈ ಜಢಿ ಮಳೆಯ ಹನಿಗಳಲ್ಲಿ ಆ ದೇವರು ಮನುಷ್ಯನ ಭಾವನೆಗಳನ್ನು,ಕನಸುಗಳನ್ನು,ನೆನಪುಗಳನ್ನು ತುಂಬಿ ಕಳುಹಿಸಿದ್ದಾನೆನೋ ಅನ್ನಿಸುತ್ತಿದೆ.ನಾ ಕಲಿತ...
“ವಿಕಲಚೇತನರ ಆಶಾಕಿರಣ ರಾಮಕೃಷ್ಣನ್”
ಪ್ರತಿಯೊಬ್ಬರ ಜೀವನವೂ ಹಾಗೆ ಅಲ್ಲಿ ಒಂದು ಅದ್ಭುತ ಎಂಬಂತ ಘಟನೆ ಹಾಗು ಇನ್ನೊಂದು ತೀರ ಅರಗಿಸಿಕೊಳ್ಳಲಾಗದ ಘಟನೆ ನಡೆದಿರುತ್ತದೆ. ಆದರೆ ಕೆಲವೇ ಕೆಲವರ ಬದುಕಿನಲ್ಲಿ ದುರಂತ ಎಂಬಂಥ ಘಟನೆ ನಡೆದು ಬಿಡುತ್ತದೆ. ಆ ದುರಂತ ಘಟನೆ ಬದುಕಿನ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ನಿರಂತರವಾದ ಬದುಕಿನ ಜಂಜಾಟದಲ್ಲಿ ಏನಾದರೊಂದು ಸಾಧಿಸಬೇಕೆಂಬ ಹಂಬಲದಿಂದ ಬದುಕುತ್ತಿರುವವರ...
ಸೇವೆಯೆಂಬ ಯಜ್ಞದಲ್ಲಿ
ಕೆಲವೊಬ್ಬರು ನಮ್ಮನ್ನು ವಿಪರೀತವಾಗಿ ಪ್ರೇರಣೆ ಮಾಡಿಬಿಡುತ್ತಾರೆ.ಅದೂ ದೇಶ ಸೇವೆಯ ವಿಷಯ ಬಂದಾಗ ಕೆಲವರ ಸೇವೆ ಅಸಾಮಾನ್ಯವಾದುದು.ಹಿಂದುಸ್ಥಾನದ ಈ ಮಣ್ಣಿನ ಕಣ ಕಣದಲ್ಲೂ ಏನೋ ಒಂದು ಶಕ್ತಿಯಿದೆ ಅದು ಮಾತ್ರ ನೂರಕ್ಕೆ ನೂರರಷ್ಟು ಸತ್ಯ ಅಲ್ಲವೇ? ಸ್ವಾತಂತ್ರ್ಯ ಪೂರ್ವದಲ್ಲಿ ದೇಶಕ್ಕಾಗಿ ಮಡಿದ ಮಹಾನ್ ದೇಶ ಭಕ್ತರು ಅದೆಷ್ಟೋ.ಆದರೆ ಇದು ಕೇವಲ ಅಲ್ಲಿಗೇ ನಿಲ್ಲಲಿಲ್ಲ...
ಅಡಿಕೆಗೆ ಹೋದ ಮಾನ
(ಸ್ನೇಹಿತರೇ ಇದು ಎಲ್ಲ ಇದ್ದೂ ಇಲ್ಲದಂತೆ ಬದುಕಬೇಕಾದ ಅನಿವಾರ್ಯತೆಯ ಕೂಪಕ್ಕೆ ಬಿದ್ದ ಮಲೆನಾಡಿನ ಮೂಲೆಯ ಒಂದು ಚಿಕ್ಕ ಕುಟುಂಬದ ಕಥೆ.ಆದರೆ ಈ ಕಥೆ ಆ ಮನೆಯ ಒಬ್ಬನೇ ಮಗ ಅಪ್ಪನಿಗೆ ಕೊಡಬೇಕೆಂದು ಬರೆದಿಟ್ಟುಕೊಂಡ ಪತ್ರದ ಮೂಲಕ ವ್ಯಕ್ತಗೊಂಡಿದೆ.ಇದು ಕಾಲ್ಪನಿಕವೋ ಅಥವಾ ವಾಸ್ತವವೋ ಎನ್ನುವುದನ್ನು ಅರಿಯುವ ಪ್ರಯತ್ನವನ್ನು ಓದುಗರಾದ ನಿಮಗೇ ಬಿಟ್ಟಿದ್ದೇನೆ.): ಪ್ರೀತಿಯ...