ಪ್ರಚಲಿತ

ಸೇವೆಯೆಂಬ ಯಜ್ಞದಲ್ಲಿ

ಕೆಲವೊಬ್ಬರು ನಮ್ಮನ್ನು ವಿಪರೀತವಾಗಿ ಪ್ರೇರಣೆ ಮಾಡಿಬಿಡುತ್ತಾರೆ.ಅದೂ ದೇಶ ಸೇವೆಯ ವಿಷಯ ಬಂದಾಗ ಕೆಲವರ ಸೇವೆ ಅಸಾಮಾನ್ಯವಾದುದು.ಹಿಂದುಸ್ಥಾನದ ಈ ಮಣ್ಣಿನ ಕಣ ಕಣದಲ್ಲೂ ಏನೋ ಒಂದು ಶಕ್ತಿಯಿದೆ ಅದು ಮಾತ್ರ ನೂರಕ್ಕೆ ನೂರರಷ್ಟು ಸತ್ಯ ಅಲ್ಲವೇ? ಸ್ವಾತಂತ್ರ್ಯ ಪೂರ್ವದಲ್ಲಿ ದೇಶಕ್ಕಾಗಿ ಮಡಿದ ಮಹಾನ್ ದೇಶ ಭಕ್ತರು ಅದೆಷ್ಟೋ.ಆದರೆ ಇದು ಕೇವಲ ಅಲ್ಲಿಗೇ ನಿಲ್ಲಲಿಲ್ಲ ಸ್ವಾತಂತ್ರ್ಯ ದೊರಕಿದ ನಂತರವೂ ದೇಶ ಅನುಭವಿಸಿದ ಅದೆಷ್ಟೋ ಆಂತರಿಕ ಸಂಘರ್ಷದಲ್ಲಿ ನೂರಾರು,ಸಾವಿರಾರು ಜನ ದೇಶ ಭಕ್ತರು ಮೃತರಾದರು.ಭಾರತ ಮಾತೆಯನ್ನ ಪರಿ ಪರಿಯಾಗಿ ರಕ್ಷಿಸುವ ಕಾರ್ಯ ನಡೆಯುತ್ತಲೇ ಇದೆ. ಪ್ರಾಣದ ಹಂಗು ತೊರೆದು ದೇಶ ಕಾಯುವ ವೀರ ಸೈನಿಕರೊಂದೆಡೆಯಾದರೆ ಇನ್ನೊಂದೆಡೆ ಪ್ರಾಣವನ್ನೇ ಒತ್ತೆ ಇಟ್ಟು ಬೇಹುಗಾರಿಕೆಯಲ್ಲಿ ತೊಡಕಿಕೊಂಡಿರುವ ಅದೆಷ್ಟೋ IB ಅಧಿಕಾರಿಗಳು.ಒಂದು ಕ್ಷಣ ಯೋಚಿಸಿ ಅವರಿಗೂ ನಮ್ಮ ಹಾಗೇ ಮನೆಯಿದೆ,ಸಂಸಾರವಿದೆ ಆದರೆ ಅದೆಲ್ಲವನ್ನೂ ಮೀರಿ ನಮಗಾಗಿ ಮತ್ತು ಭಾರತಕ್ಕಾಗಿ ಜೀವಿಸುತ್ತಿದ್ದಾರಲ್ಲ ಅವರು ನಿಜವಾಗಲು ಯಾವುದೇ celebrity ಗಳಿಗೂ ಕಮ್ಮಿ ಇಲ್ಲ ಅಂದುಕೊಂಡಿದ್ದೇನೆ.ವಿಶ್ವಕ್ಕೇ ಸಂಸ್ಕೃತಿಯ ಪಾಠ ಹೇಳಿದ ಹಿಂದುಸ್ಥಾನದ ಸಂಸ್ಕೃತಿಯ ಮೇಲೆ ಹಂತ ಹಂತವಾಗಿ ದಾಳಿಯಾಗುತ್ತಿದೆ.ಅದು ಇಸ್ಲಾಮಿಕ್ ಬಯೋತ್ಪಾದನೆ ಆಗಿರಬಹುದು ಅಥವಾ ಕ್ರಿಶ್ಚಿಯನ್ ಮಶಿನರಿಗಳ ವ್ಯವಸ್ಥಿತ ಸಂಚಿನ ದಾಳಿಯಿರಬಹುದು. ನಮಗೆ ಸಲ್ಮಾನ್ ಖಾನ್ ಆಭಿನಯದ ‘ಏಕ್ ತಾ ಟೈಗರ್’ ತುಂಬಾ ಇಷ್ಟ ಆಗತ್ತೆ, ಹಾಲಿವುಡ್ ನ ಜೇಮ್ಸ ಬಾಂಡ್ ಸಿನಿಮಾಗಳು ಬಿಡದೇ ಕಾಡುತ್ತೆ,ಸದ್ಯವೇ ಬಂದ ಅಕ್ಷಯ್ ಕುಮಾರ್ ಅಭಿನಯದ ಬೇಬಿ ಚಿತ್ರ ತುಂಬಾ ಆವರಿಸಿಕೊಳ್ಳತ್ತೆ ಯಾಕಂದರೆ ಈ ಎಲ್ಲ ಚಲನಚಿತ್ರಗಳ ಹೂರಣವೇ ಬೇಹುಗಾರಿಕೆ ಮತ್ತು ರೋಮಾಂಚಕ ಪತ್ತೇದಾರಿ ಕಥೆಗಳು ಅಲ್ಲವೇ? ಇದು ನಿಜವಾಗಿಯೂ ನಡೆಯುತ್ತದೆಯೇ? ಹೌದು ನಡೆಯುತ್ತೆ.. ಆದರೆ ದೇಶಕ್ಕಾಗಿ ನಡೆಯುತ್ತೆ,ರಕ್ಷಣೆಗಾಗಿ ನಡೆಯುತ್ತೆ. ತಮ್ಮ ಜೀವನದ ಬಹುಪಾಲನ್ನು ದೇಶಕ್ಕಾಗಿ ಮೀಸಲಿಟ್ಟ ಒಬ್ಬ ಅಧಿಕಾರಿ,ಭಾರತದ ರಿಯಲ್ ಜೇಮ್ಸ ಬಾಂಡ್ ನ ಜೀವನಗಾಥೆ ತೆರೆದಿಡುವ ಪ್ರಯತ್ನ ಮಾಡುತ್ತೇನೆ.ನಮ್ಮ ದೇಶ ಇವತ್ತು ಒಂದಾದ ಮೇಲೊಂದು ಅದೆಷ್ಟೋ ಆಂತರಿಕ ಮತ್ತು  ಬಾಹ್ಯ ಭದ್ರತಾ ಸಮಸ್ಯೆಗಳನ್ನ ಎದುರಿಸುತ್ತಿದೆ ಆದರೆ ಮುಖ್ಯವಾಗಿ ಕಳೆದೊಂದು ವರ್ಷದಿಂದ ಭಾರತ ಅದೆಲ್ಲವನ್ನ ಮೆಟ್ಟಿ ನಿಲ್ಲಲೂ ಶಕ್ತವಾಗುತ್ತಿದೆ ಅಂದರೆ ಅದರ ಹಿಂದೊಂದು ವ್ಯಕ್ತಿಯಿದ್ದಾರೆ. ಅವರೇ ‘ಅಜಿತ್ ಡೋವಲ್’. ಗೊತ್ತಾ ನಿಮಗೆ ಇವರ ಬಗ್ಗೆ?ದೇಶದ ಮತ್ತು ನರೇಂದ್ರ ಮೋದಿಯವರ ನಡೆಯನ್ನ ಹಂತ ಹಂತವಾಗಿ ಗಮನಿಸಿದವರಿಗೆ ಅಜಿತ್ ಡೋವಲ್ ಗೊತ್ತಿರುತ್ತಾರೆ. ಮೋದಿ ಪ್ರಧಾನಿಯಾಗಿ ಸರಿಯಾಗಿ ನಾಲ್ಕೇ ದಿನದಲ್ಲಿ ಅಂದರೆ ಮೇ ೩೦,೨೦೧೪ ರಂದು ದೇಶದ ಮಹತ್ವದ ಆಯಕಟ್ಟಿನ ಜಾಗವಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ( NSA(National Security Advisor) ) ಹುದ್ದೆಗೆ ಒಬ್ಬ ವ್ಯಕ್ತಿ ನೇಮಕ ಗೊಳ್ಳುತ್ತಾರೆ ಅವರೇ ಈ “ಅಜಿತ್ ಡೋವಲ್“. ಹೊರಳೋಣ ‘ಅಜಿತ್’ರ ರೋಚಕ ಬದುಕಿನ ಕಹಾನಿಗೆ.

Ajit-Doval

ಹಾಗಾದರೆ ಮೋದಿ ಸುಖಾಸುಮ್ಮನೇ ಅಜಿತ್ ರನ್ನ ರಾಷ್ಟ್ರೀಯ ಭದ್ರತಾ ಸಲಹಾಗಾರರನ್ನಾಗಿ ನೇಮಕ ಮಾಡಿದರೇ ಖಂಡಿತ ಅಲ್ಲ,ನೀವು ಅಜಿತ್ ಡೋವಲ್ ಎಂಬ ಅಸಾಮಾನ್ಯ IPS ಅಧಿಕಾರಿಯ ಬದುಕಿಗೆ ಒಂದು ಕ್ಷಣ ಹೊರಳಿದರೆ ಅವರು ಈ ಹುದ್ದೆಗೆ ತುಂಬಾ ಅರ್ಹರು ಅಂತನಿಸುತ್ತದೆ.೧೯೯೮ರಲ್ಲಿ ಮೊದಲಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೇಗಾರರ ನೇಮಕವಾಯಿತು. ನಿಮಗೆಲ್ಲ ತಿಳಿದಿರಬಹುದು ಅಂದು ಅಟಲ್ ಜಿ ಅವರ ಸರಕಾರದಲ್ಲಿ ಅಟಲ್ ಜಿ ಮತ್ತು ಬ್ರಿಜೇಶ್ ಮಿಶ್ರಾರ ನಡುವಿನ ಆ ಸಂಬಂಧ ಇಡೀ ದೇಶ ತಲೆ ಎತ್ತಿ ನಿಲ್ಲುವಂತಹ ಕೆಲಸವನ್ನ ಮಾಡಿತ್ತು. ಈಗ ನಮ್ಮ ನರೇಂದ್ರ ಮತ್ತು ಅಜಿತ್ ಡೋವಲ್ ರ ನಡುವಿನ ಸಂಬಂಧ ದೇಶಕ್ಕೆ ಗೊತ್ತಿಲ್ಲದೇ ಅದೆಷ್ಟೋ ಕೊಡುಗೆಗಳನ್ನ ನೀಡುತ್ತಿದೆ. ಬಡಾಯಿ ಹೊಡೆಯುವ ಮಾದ್ಯಮಗಳಿಗೆ ಮೋದಿಯವರ ಜೊತೆ ಅದಾನಿ ಹೋದರೆ ಮಾತ್ರ ಸುದ್ದಿ ಆದರೆ ಅಜಿತ್ ಡೋವಲ್ ಎಂಬ ಅಧಿಕಾರಿ External Affairs ನೀತಿಗಳನ್ನ ರಚಿಸುವಲ್ಲಿ ಮೋದಿ ಹೋದಲ್ಲೆಲ್ಲ ಇದ್ದಾರಲ್ಲ ಅದು ಸುದ್ದಿಯೇ ಅಲ್ಲ.ಹಿರಿಯ ಮಾಜಿ IB ಅಧಿಕಾರಿಯೊಬ್ಬರು ಮೋದಿ ಅಜಿತ್ ರನ್ನು ನೇಮಿಸಿದಾಗ ಇದು ಮೋದಿಯವರ Near Perfect choice ಅಂದಿದ್ದರು.ನಾಯಕ ಎನ್ನುವವನು ಎಲ್ಲರಿಗಿಂತ ಮುಂದೆ ನಿಂತು ಎಲ್ಲರನ್ನೂ ಮುನ್ನಡೆಸಬೇಕು ಹೊರತು ಎಲ್ಲರೊಳಗೊಬ್ಬನಾಗಬಾರದು.ಈ ವಿಷಯದಲ್ಲಿ ಅಜಿತ್ ಡೋವಲ್ ನಿಜವಾಗಲೂ Real Leader ಅನ್ನಬಹುದು.

ಅಜಿತ್ ಕುಮಾರ್ ಡೋವಲ್ ಭಾರತದ ಮತ್ತು ಪ್ರಮುಖವಾಗಿ ವಿಶ್ವದ ಪ್ರಖ್ಯಾತ ಬೇಹುಗಾರಿಕಾ ಅಧಿಕಾರಿಯಾಗಿದ್ದಾರೆ.ಬೇಹುಗಾರಿಕೆಯಲ್ಲಿ ತಮ್ಮನ್ನ ತಾವು ಭಾರತಕ್ಕೆ ಅರ್ಪಿಸಿಕೊಂಡಿರುವ ಚೇತನ ಅಜಿತ್ ಡೋವಲ್. ರಾಷ್ಟ್ರೀಯ ಭದ್ರತಾ ಸಲಹಾಗಾರರಾಗುವ ಮುಂಚೆ ಅಂದರೆ ೨೦೦೪ ರಿಂದ ೨೦೦೫ ರವರೆಗೆ ಅಜಿತ್ ಡೋವಲ್ ಭಾರತದ ಆಂತರಿಕ ಬೇಹುಗಾರಿಕಾ ಸಂಸ್ಥೆಯಾದ ಗುಪ್ತದಳದ (ಐ.ಬಿ) ಇಂಟೆಲಿಜೆನ್ಸ ಬ್ಯೂರೊ ನಿರ್ದೇಶಕರಾಗಿದ್ದರು.ಅದಕ್ಕೂ ಮುಂಚೆ ಇಂಟೆಲಿಜೆನ್ಸ ಬ್ಯೂರೊದಲ್ಲಿ ಹಲವು ದಶಕಗಳ ಕಾಲ ಬೇಹುಗಾರಿಕಾ ಅಧಿಕಾರಿಯಾಗಿ ಕಾರ್ಯ ನಿರ್ವವಹಿಸಿದ್ದಾರೆ ಅಜಿತ್.

ಅಜಿತ್ ರ ಬಾಲ್ಯ:
ಅಜಿತ್ ಕುಮಾರ್ ಡೋವಲ್ ಜನವರಿ ೨೦, ೧೯೪೫ ರಂದು ಉತ್ತರಖಂಡ ರಾಜ್ಯದ ಪೌರಿ ಘರ್ವಾಲ್ ಜಿಲ್ಲೆಯ ಘಿರಿ ಬನೆಲ್ಸನ್ ಎಂಬ ಹಳ್ಳಿಯಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ವಂದೇ ಮಾತರಂ ಘೋಷವನ್ನ ಕೂಗುತ್ತ ದೇಶಕ್ಕೇನಾದರೂ ಮಾಡಬೇಕೆಂಬ ಹಂಬಲದೊಂದಿಗೆ ಜೀವಿಸುತ್ತಿದ್ದರು ಅಜಿತ್.ಇವರ ತಂದೆ ಒಬ್ಬ ಮಿಲಿಟರಿ ಅಧಿಕಾರಿಯಾಗಿದ್ದರು.ಡೋವಲ್ ತಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಅಜ್ಮೀರ್‌ನ ಜಾರ್ಜ್ ರಾಯಲ್ ಮಿಲಿಟರಿ ಸ್ಕೂಲ್ (ಈಗಿನ ರಾಷ್ಟ್ರೀಯ ಮಿಲಿಟರಿ ಸ್ಕೂಲ್) ನಲ್ಲಿ ಪೂರೈಸಿದರು. ೧೯೬೭ರಲ್ಲಿ ಆಗ್ರಾ ವಿಶ್ವವಿದ್ಯಾನಿಲಯದಿಂದ ಪ್ರಥಮ ದರ್ಜೆಯೊಂದಿಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು ಹಾಗೂ ಅದೇ ವರ್ಷ ಭಾರತೀಯ ಪೋಲೀಸ್ ಸೇವೆ (ಐ.ಪಿ.ಸ್)ಯಲ್ಲಿ ಕೇರಳಾ ಕೇಡರ್ ಅಧಿಕಾರಿಯಾಗಿ ಆಯ್ಕೆಗೊಂಡರು.ವಿದ್ಯಾಭ್ಯಾಸದಲ್ಲಿ ಅಜಿತ್ ಯಾವತ್ತೂ ಹಿಂದೆ ಬೀಳಲಿಲ್ಲ.ಅಪ್ಪ ಮಿಲಿಟರಿ ಅಧಿಕಾರಿಯಾಗಿದ್ದರಿಂದಲೋ ಏನೋ ದೇಶ ಸೇವೆಗಾಗಿ ಮನ ತುಡಿಯುತ್ತಲೇ ಇತ್ತು.ಅದರ ಪರಿಣಾಮವೇ ಅಜಿತ್ IPS ಅಧಿಕಾರಿಯಾಗಿ ಹೊರಹೊಮ್ಮಿದರು.

ಪೋಲೀಸರಾಗಿ ಮತ್ತು ಬೇಹುಗಾರಿಕಾ ಅಧಿಕಾರಿಯಾಗಿ ಅವರು ಮಾಡಿರುವ  ಕಾರ್ಯಚರಣೆಗಳು ಹಾಗು ಸಾಧನೆಗಳನ್ನ ಬೇರಾವ ಅಧಿಕಾರಿಯೂ ಮಾಡಿಲ್ಲ ಎನ್ನಬಹುದು.ಡೋವಲ್‍ರಷ್ಟು ಅಗಾಧ ಅನುಭವ ಹಾಗೂ ಅಷ್ಟೇ ಚಾಕಚಕ್ಯಯ ಬೇಹುಗಾರಿಕಾ ಅಧಿಕಾರಿ ಭಾರತದಲ್ಲಿ ಮತ್ತೊಬ್ಬರಿಲ್ಲ ಎಂಬುದು ಹಲವು ಪರಿಣಿತರ ವಾದ, ಅಭಿಪ್ರಾಯ.ಯೋಚಿಸಿ ಒಬ್ಬ ಅಧಿಕಾರಿ ಅದೆಷ್ಟು ತಮ್ಮನ್ನ ಈ ದೇಶಕ್ಕೆ ಅರ್ಪಿಸಿಕೊಂಡಿದ್ದಾರೆ ಎಂಬುದನ್ನು.

ಪಂಜಾಬ್, ಮಿಜೋರಂ, ಜಮ್ಮು-ಕಾಶ್ಮೀರಗಳಲ್ಲಿ ನಡೆದ ಆಂತರಿಕ ದಂಗೆಗಳನ್ನು ಶಮನ ಮಾಡುವಲ್ಲಿ ಡೋವಲ್ ಪ್ರಮುಖ ಪಾತ್ರವಹಿಸಿದ್ದಾರೆ.ಒಂದೊಂದು ಕಾರ್ಯಾಚರಣೆಯೂ ರೋಮಾಂಚಕ ಮತ್ತು ಅದು ಕೇವಲ ಡೋವಲ್ ರಿಂದ ಮಾತ್ರ ಸಾದ್ಯವಾಗುವಂತದ್ದಾಗಿತ್ತು. ೧೯೮೪ ರಲ್ಲಿ Mizo National Front (M.N.F) ಮಿಜೋರಂನಲ್ಲಿ ಭಾರತದ ವಿರುಧ್ದ ದಂಗೆಕೋರರ ದಂಡನ್ನು ಎತ್ತಿ ಕಟ್ಟಿತ್ತು.ನಿಮಗೆ ತಿಳಿದಿರಬಹುದು ಈ ಎಮ್.ಎನ್.ಎಫ್ ಒಂದು ರಾಷ್ಟ್ರ ವಿರೋಧಿ ಗುಂಪು. ಅದರ ಪ್ರಮುಖ ಪು ಲಾಲ್ ಡೆಂಗಾ ಎಂಬ ಒಬ್ಬ ದಂಗೆಕೋರ.ಅವನು ಏಳು ಜನ ಕಮಾಂಡರ್ ಗಳನ್ನ ಸೇರಿಸಿಕೊಂಡು ಭಾರತದದಿಂದ ಮಿಜೋರಾಂ ಅನ್ನು ಬೇರ್ಪಡಿಸಲು ಯತ್ನಿಸಿದ್ದ.ಮಿಜೋರಾಂ ಭಾರತದಿಂದ ಪ್ರತ್ಯೇಕ ಮಾಡುವ ಹೋರಾಟದ ಮೂಲ ಬೀಜವೇ ಈ ಡೆಂಗಾ.ಆಗ ಅಲ್ಲಿ ಸಮಸ್ಯೆಯ ಪರಿಹಾರಕ್ಕೆ ಧುಮುಕಿದ್ದು ಅಜಿತ್ ಡೋವಲ್.೧೯೮೫ ರ ಹೊತ್ತಿಗೆ ಪು ಲಾಲ್ ಡೆಂಗಾನ ಏಳು ಕಮಾಂಡರ್‌ಗಳ ಪೈಕಿ ಆರು ಕಮಾಂಡರ್‌ಗಳನ್ನು ಚಾಣಕ್ಷಮತಿಯಿಂದ ತಮ್ಮ ಪರವಾಗಿಸಿಕೊಂಡು ಬಿಟ್ಟರು.ಅಬ್ಬಾ!ಅದೇನು ಬುದ್ಧಿಮತ್ತೆ.ಯಾವ ಕಮಾಂಡರ್ಗಳು ಭಾರತ ಬೇಡ ಅನ್ನುತ್ತಿದ್ದರೋ ಅವರೊಳಗೊಬ್ಬರಾಗಿ ಅವರು ಭಾರತವನ್ನು ವಿಪರೀತವಾಗಿ ಪ್ರೀತಿಸುವಂತೆ ಮಾಡಿಬಿಟ್ಟರು ಅಜಿತ್ ಡೋವಲ್.ಅಲ್ಲಿಗೆ ಡೆಂಗಾನ ಶಕ್ತಿ ಕುಂದಿತ್ತು.೧೯೮೬ ರ ಹೊತ್ತಿಗೆ ಎಮ್.ಎ.ಎಫ್ ನ ಶಕ್ತಿ ಕುಂದುತ್ತಾ ಬಂತು. ಅದೇ ಹೊತ್ತಿಗೆ ಎಮ್.ಎ.ಎಫ್ ನ ನಾಯಕ ಪು ಲಾಲ್ ಡೆಂಗಾನನ್ನು ಭಾರತದೊಂದಿಗೆ ಶಾಂತಿ ಒಪ್ಪಂದಕ್ಕೆ ಬರಲೇ ಬೇಕಾದ ಅನಿವಾರ್ಯ ಸ್ಥಿತಿಯನ್ನ ಅಜಿತ್ ಡೋವಲ್ ನಿರ್ಮಾಣ ಮಾಡಿಬಿಟ್ಟರು. ೧೯೮೬ ಜನವರಿ ೩೦ ರಂದು ಭಾರತ ಸರಕಾರದೊಡನೆ ಎಮ್.ಎ.ಎಫ್ ಶಾಂತಿ ಸಂಧಾನ ಮಾಡಿಕೊಂಡಿತು. ಮಿಜೋರಂನಲ್ಲಿ ಶಾಂತಿ ನೆಲೆಸಿತು.ಅಂದಿನ ಗ್ರಹ ಸಚಿವ ವಿನೋದ್ ದುಗ್ಗಲ್  ಅಜಿತ್ ರ ಚಾಕಚಕ್ಯತೆಯನ್ನ ನೋಡಿ ಆಶ್ಚರ್ಯಪಡುತ್ತ ಹೇಳುತ್ತಾರೆ ‘ಬೇರೆ ಯಾರೇ ಈ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದರೆ ಅದು ಯಶಸ್ವಿಯಾಗುತ್ತಿರಲಿಲ್ಲ’ಎಂದು.

Ajit-doval-Modi

೧೯೮೯ರ ಹೊತ್ತಿಗೆ ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳ ಅಟ್ಟಹಾಸ , ಕೂಗು ಮುಗಿಲು ಮುಟ್ಟಿತ್ತು.ಕಾಶ್ಮೀರ ಙಾರತದ ಕೈ ತಪ್ಪಿ ಹೋಗುವ ಸಂಭವವೇ ಜಾಸ್ತಿ ಇದ್ದ ಸೂಕ್ಷ್ಮ ಸಮಯವದಾಗಿತ್ತು.ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್‌ನ ದಂಗೆ ಕೋರರು ಪ್ರತ್ಯೇಕ ರಾಷ್ಟ್ರಕ್ಕಾಗಿ ಹಿಂಸೆಗಿಳಿದಿದ್ದರು.ಕಂಡಕಂಡಲ್ಲಿ ಹಿಂಸಾಚಾರ ನಡೆಯುತ್ತಿತ್ತು,ಹಿಂದೂ ಪಂಡಿತರ ಮಾರಣಹೋಮ ನಡೆಯುತ್ತಿತ್ತು. ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಬೇಕೆಂಬ ಐ.ಸ್.ಐ ನ ಯೋಜನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರವಾಗಿ ಮಾಡಬೇಕೆಂಬ ಈ ಎರಡು ದುರುದ್ದೇಶ ಭಾರತಕ್ಕೆ ಮಾರಕವಾಗಿ ಪರಿಣಮಿಸಿತು. ಭಾರತದಿಂದ ಕಾಶ್ಮೀರ ಕೈ ತಪ್ಪಿ ಹೋಗುವ ಸಮಯ ಬಂದತ್ತಿತ್ತು. ಕಣಿವೆ ರಾಜ್ಯದಲ್ಲಿ ರಕ್ತದೋಕುಳಿಯೇ ಹರಿಯತೊಡಗಿತು. ಆ ಮತಾಂಧರ ಭಯಕ್ಕೆ , ಆಮಿಷಗಳಿಗೆ ಕಣಿವೆಯ ಯುವಕರ ಗುಂಪು ಪ್ರತ್ಯೇಕವಾದಿಗಳೊಂದಿಗೆ ಗುರುತಿಸಿಕೊಳ್ಳ ತೊಡಗಿದರು. ಭಾರತವನ್ನ ಪ್ರೀತಿಸುತ್ತಿದ್ದ ಅದೆಷ್ಟೋ ಕಾಶ್ಮೀರೀ ಜನರುಗಳನ್ನ ಒತ್ತಾಯಪೂರಕವಾಗಿ,ಆಮಿಷಗಳಿಂದ ಭಾರತದ ವಿರುದ್ಧವಾಗಿಯೇ ಕೆಲಸ ಮಾಡಲು ಪ್ರೇರಪಿಸಲಾಯಿತು. ಈ ಗುಂಪಿನಲ್ಲಿ ಕಾಶ್ಮೀರದ ಖ್ಯಾತ ಗಜಲ್ , ಸೊಫಿ ಗಾಯಕ ಕುಕಾ ಪಾರೆ ಕೂಡ ಒಬ್ಬ. ಕುಕಾ ಪಾರೆ ಪ್ರತ್ಯೇಕವಾದಿಗಳ ಜೊತೆಗೆ ಗುರುತಿಸಿಕೊಂಡಿದ್ದ. ಕೂಕಾ ಪಾರೆ ಭಾರತವನ್ನ ಪಾಕಿಸ್ತಾನಕ್ಕೆ ಸೇರಿಸಲು ಹವಣಿಸುತ್ತಿದ್ದ.ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಲೇಬೇಕೆಂಬ ಜಿದ್ದಿನಿಂದ ಎಂ.ನ್.ಎಫ್ ಹಿಜ್ಬುಲ್ ಮುಜಾಹಿದ್ದಿನ್ ಅನ್ನು ಬೆಳೆಸಿತು. ಅದೆಷ್ಟೋ ಬಡ ಯುವಕರು ಜೆ.ಕೆ.ಎಲ್.ಎಫ್ ಸೇರುತ್ತಿದ್ದಂತೆ ಹಿಜ್ಬುಲ್ ವ್ಯಗ್ರಗೊಂಡು ಇನ್ನಷ್ಟು ಕ್ರೌರ್ಯವಾಯಿತು. ಒಟ್ಟಿನಲ್ಲಿ ಭಾರತದ ಶಿರ ಉರುಳುವ ಸಮಯ ಸನ್ನಿಹಿತವಾದಂತಿತ್ತು.ಆಗ ಸರಕಾರಕ್ಕೆ ನೆನಪಾಗಿದ್ದು ಗುಪ್ತದಳದ ಮುಖ್ಯಸ್ಥರಾಗಿದ್ದ  ಅಜಿತ್ ಡೋವಲ್.ಮತ್ತೆ Real Hero ನ ತಲೆ ಕೆಲಸ ಮಾಡಲು ಶುರು ಮಾಡಿತು.ಯಾವ ಯುವಕರು ದೇಶದ ಹಿತಾಸಕ್ತಿಗೆ ದಕ್ಕೆ ತರಲು ಹೊರಟಿದ್ದರು ಅವರನ್ನ ದೇಶ ಪ್ರೀತಿಸುವಂತೆ ಮಾಡಿದರು ಅಜಿತ್. ಅನೇಕ ಯುವಕರ ಗುಂಪನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಡೋವಲ್ ಯಶಸ್ವಿಯಾದರು. ಹಂತ ಹಂತವಾಗಿ ಹಿಜ್ಬುಲ್ ಹಾಗು ಜೆ.ಕೆ.ಎಲ್.ಎಫ್ ಕಾಶ್ಮೀರದಲ್ಲಿನ ಕ್ರೌರ್ಯಕ್ಕೆ, ರಕ್ತದೋಕುಳಿಗೆ ಕಾರಣವೆಂದು ಆ ಯುವಕರಿಗೆ ಮನದಟ್ಟು ಮಾಡಿದರು.ಎಲ್ಲಕ್ಕಿಂತ ವಿಚಿತ್ರವಾಗಿ ಕುಕಾ ಪಾರೆಯನ್ನೇ ತನ್ನತ್ತ ಸೆಳೆದುಕೊಂಡ ಡೋವಲ್ ಅವನನ್ನೇ ಸೇನೆಗೆ ಗೂಢಾಚಾರಿಕೆ ಮಾಡುವಂತೆ ಮಾಡಿಬಿಟ್ಟರು.ಯೋಚಿಸಿ ಒಂದು ವೇಳೆ ಈ ಕೆಲಸ ನಡೆಯದೇ ಇದ್ದಿದ್ದರೆ ಭಾರತ ಕಾಶ್ಮೀರವನ್ನ ಹಮಂತ ಹಂತವಾಗಿ ಕಳೆದುಕೊಳ್ಳುತ್ತಿತ್ತು.ಸ್ವತ: ಕುಕಾಪಾರೆ ಹಾಗೂ ಅನೇಕ ಯುವಕರು ಭಾರತದ ಪರವಾಗಿ ನಿಂತು ಸೇನೆಗೆ ಗುಪ್ತ ಮಾಹಿತಿಯನ್ನು ಒದಗಿಸಿ ಉಗ್ರರ ಶಕ್ತಿ ಗುಂದಿಸಿದರು.ಅಲ್ಲಿಗೆ ಹಿಜ್ಬುಲ್ ಮತ್ತು ಜೆ.ಕೆ.ಎಲ್.ಎಪ್ ನ Master Plan ಗೆ Counter ಕೊಟ್ಟಿದ್ದರು ಅಜಿತ್ ಡೋವಲ್. ಇದು ಅಜಿತ್  ಡೋವಲ್ ಚಾಕಚಕ್ಯತೆಯಿಂದ ಸಾದ್ಯವಾಯಿತು.ಕಾಶ್ಮೀರ ಭಾರತದ ಶಿರವಾಗಿಯೇ ಉಳಿಯಿತು.

ನಿಮಗೆ ಇದೆಲ್ಲದ್ದಕ್ಕಿಂತಲೂ ಪ್ರೇರಣೆ ಮಾಡುವ ಇನ್ನೊಂದು ಘಟನೆ ಹೇಳುತ್ತೇನೆ.ಅಜಿತ್ ಡೋವಲ್ ಆರು ವರ್ಷಗಳ ಕಾಲ ಪಾಕಿಸ್ತಾನದಲ್ಲಿದ್ದರು,ಹೌದು ಆದರೆ ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಇರಲಿಲ್ಲ .ಅವರು ಅಲ್ಲಿ ವೇಷ ಮರೆಸಿಕೊಂಡಿದ್ದರು,ಡೋವಲ್ ಪಾಕಿಸ್ತಾನದಲ್ಲಿ ಮುಸ್ಲಿಂ ವ್ಯಕ್ತಿಯಾಗಿ ಜೀವಿಸಿದರು. ಭಾರತಕ್ಕಾಗಿ ಪ್ರಾಣವನ್ನೇ ಒತ್ತೆಯಿಟ್ಟು ಗೂಢಚಾರಿಕೆಯನ್ನ ಮಾಡುತ್ತಿದ್ದರು.ಅದೂ ಬರೊಬ್ಬರಿ ೬ ವರ್ಷಗಳ ಕಾಲ.ಭಾರತ ವಿರೋಧಿ ಉಗ್ರರ ಜೊತೆಗಿದ್ದು ಸೇನೆಗೆ ಪ್ರಮುಖ ಗುಪ್ತ ಮಾಹಿತಿಗಳನ್ನು ಒದಗಿಸಿದ್ದರು. ಮನೆ,ಸಂಸಾರವನ್ನೆಲ್ಲ ತೊರೆದು ಭಾರತಕ್ಕಾಗಿ ಜೀವಿಸಿದ ಈ ಐಪಿಎಸ್ ಅಧಿಕಾರಿಯ ಕಾರ್ಯ ವೈಖರಿ ನೋಡಿದರೆ ಮೈ ಮೇಲಿನ ರೋಮವೆಲ್ಲ ನೆಟ್ಟಗಾಗುತ್ತದೆ.ಪಾಕಿಸ್ತಾನದಿಂದ ಪ್ರಮುಖವಾಗಿ ಅಲ್ಲಿಯ ಕಹುತಾ ಪರಮಾಣು ಘಟಕದ ಮಾಹಿತಿಯನ್ನು ಭಾರತದಕ್ಕೆ ಒದಗಿಸುತ್ತಿದ್ದರು ಅಜಿತ್ ಡೋವಲ್..

1೯೮೪ ರಲ್ಲಿ ನೆಡೆದ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಚರಣೆಯ ವೇಳೆಯೂ ಡೋವಲ್ ಸ್ವರ್ಣ ಮಂದಿರದೊಳಗೇ ಹೋದರು ಆ ಪ್ರತ್ಯೇಕವಾದಿಗಳ ನಡುವೆ ಒಬ್ಬರಾದರು. ಪ್ರತ್ಯೇಕವಾದಿಗಳೊಂದಿಗೆ ಪ್ರತ್ಯೇಕವಾದಿಯಂತೆ ಇದ್ದು ಸೇನೆಗೆ ಮಾಹಿತಿ ರವಾನಿಸಿದ್ದರು.ಆಪರೇಷನ್ ಬ್ಲೂ ಸ್ಟಾರ್ ಯಶ್ವಿಯಾಯಿತು. ಪ್ರತ್ಯೇಕವಾದಿಗಳೊಂದಿಗೆ ಉಗ್ರರೊಂದಿಗೆ ಅವರದೇ ಸೋಗಿನಲ್ಲಿ ಹೋಗಿ ಅವರಿಗೇ ಮಣ್ಣು ಮುಕ್ಕಿಸುವುದು ಡೋವಲ್ ಚಾಣಾಕ್ಷತೆ.ಕೇಳಿದರೆ ಯಾವುದೋ ಸಿನಿಮಾ ಕಥೆ ಕೆಳಿದಂತನ್ನಿಸುತ್ತದೆ ಅಲ್ಲವೇ ಆದರೆ ಇದ್ಯಾವುದೂ ಕಥೆಯಲ್ಲ ಭಾರತಕ್ಕಾಗಿ ನದುಕುತ್ತಿರುವ ವ್ಯಕ್ತಿಯೊಬ್ಬನ ಜೀವನಗಾಥೆ.೧೯೭೫ ರಲ್ಲಿ ಸಿಕ್ಕಿಂ ಭೂ ಭಾಗವನ್ನು ಭಾರತದ ಭಾಗವನ್ನಾಗಿ ಸೇರಿಸಿಕೊಳ್ಳುವಲ್ಲಿ ಡೋವಲ್ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲಿ ಈ ವಿಚಾರವಾಗಿ ಜನಮತ ಸಂಗ್ರಹಣೆಯಲ್ಲಿ ಜನರು ಭಾರತದ ಪರ ನಿಲ್ಲಲು ಅವರದ್ದೇ ಮುಖ್ಯ ಪಾತ್ರ.ಪ್ರಮುಖವಾದ ನಿರ್ಧಾರ,ನಿರ್ಣಯಗಳ ಹಿಂದೆ ಅಜಿತ್ ಡೋವಲ್ ಯಾವಾಗಲೂ ಕೆಲಸ ಮಾಡಿದರು.

ಅದು ೧೯೮೮ ರ ಸಮಯ ಆ ಹೊತ್ತಲ್ಲಿ ಸ್ವರ್ಣ ಮಂದಿರದಲ್ಲಿ ಅಳಿದುಳಿದ ಖಲೀಸ್ಥಾನ್ ಪ್ರತ್ಯೇಕವಾದಿಗಳು ಇದ್ದರು.ಪ್ರತ್ಯೇಕತಾವಾದಿಗಳು ಪಂಜಾಬನ್ನು ಒಡೆದು ಖಲಿಸ್ತಾನ್ ಮಾಡುತ್ತೇವೆ ಎಂದು ಹಾರಾಡುತ್ತಿದ್ದ ಸಮಯ ಅದು.ಅದೇ ಸಮಯದಲ್ಲಿ ಸ್ವರ್ಣ ಮಂದಿರದ ಬಳಿ ಒಬ್ಬ ರಿಕ್ಷಾ ಎಳೆಯುವವನು ಕಾಣಿಸಿಕೊಂಡ. ಖಲೀಸ್ಥಾನ ಪ್ರತ್ಯೇಕವಾದಿಗಳು ಅವನನ್ನು ಒಳಗೆ ಪ್ರವೇಶಿಸುವ ಮೊದಲೇ ರಿಕ್ಷಾವಾಲಾನನ್ನು ತಡೆದರು.ರಿಕ್ಷಾವಾಲೆಯನ್ನ ವಿಚಾರಿಸಿದಾಗ ಆತ ತಾನು ಐ.ಸ್.ಐ ಕಾರ್ಯಕರ್ತ ಹಾಗೂ ಐ.ಸ್.ಐ ನನ್ನನ್ನು ನಿಮ್ಮ ಸಹಾಯಕ್ಕೆ ಕಳಿಸಿದೆ ಎಂದು ಅವರಲ್ಲಿ ಹೇಳಿಕೊಂಡ. ಭಾರತ ಸರಕಾರ Operation Black Thunder ಮಾಡಲು ಎರಡು ದಿನದ ಮುಂಚೆ ಈತ ಹರ್ ಮಂದಿರ್ ಸಾಹಿಬ್ ಬಳಿಗೆ ಹೋಗಿ ಪ್ರತ್ಯೇಕವಾದಿಗಳ ಇಂಚಿಂಚು ಮಾಹಿತಿಯನ್ನು ಕಲೆ ಹಾಕಿ ಸೇನೆಗೆ ರವಾನಿಸಿದನು. ಅಬ್ಬಾ! ಆ ರಿಕ್ಷಾವಲಾ ಗೆ ಅದೆಷ್ಟು ಧೈರ್ಯ.ನಂತರ ಆತನ ಬೇಹುಗಾರಿಕೆಯಿಂದ ಆಪರೇಷನ್ ಬ್ಲಾಕ್ ಥಂಡರ್ ಯಶಸ್ವಿಯಾಯಿತು. ಅಳಿದುಳಿದ ಪ್ರತ್ಯೇಕವಾದಿಗಳನ್ನು ಕೊಲ್ಲಲಾಯಿತು. ಇದರ ಹಿಂದಿದ್ದ ತಲೆ ಅಲ್ಲಿಗೆ ಹೋಗಿದ್ದ ರಿಕ್ಷಾ ಎಳೆಯುವವನದ್ದು.ಅವತ್ತು ರಿಕ್ಷಾವಾಲ ನಾಗಿ ಅಲ್ಲಿಗೆ ಹೋಗಿದ್ದು ಇದೇ ಅಜಿತ್ ಡೋವಲ್. ಮೈನವಿರೇಳಿಸುವ ಸಾಹಸಗಾರನಿಗೆ ಒಂದು ಸಲಾಂ ಮಾಡಲೇಬೇಕು. ಖಲೀಸ್ಥಾನ್ ದಂಗೆಕೋರರ ಶಮನದ ನಂತರ ೧೯೯೨ರಲ್ಲಿ ಪಂಜಾಬ್ ನಲ್ಲಿ ನೆಡೆದ ಚುಣಾವಣೆಯನ್ನು ಶಾಂತಿಯುತವಾಗಿ ಅಯೋಜಿಸಿದ ಹೆಗ್ಗಳಿಕೆ ಡೋವಲ್ ರದ್ದು.ಅಟಲ್ ಜಿ ಸರಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿದ್ದ ೧೯೯೬ ರ ಕಂದಹಾರ್ ವಿಮಾನ ಅಪಹರಣ ಘಟನೆಯಲ್ಲಿ ಮುಖ್ಯ ಸಂಧಾನಕಾರರಾಗಿದ್ದವರು ಅಜಿತ್ ಡೋವಲ್. ವಿಶೇಷವೆಂಬಂತೆ , ಆಶ್ಚರ್ಯಕರವಾಗಿ ೧೯೭೧ ರಿಂದ ೧೯೯೬ ರವರೆಗೆ ಭಾರತದ ಸುಮಾರು ೧೬ ವಿಮಾನಗಳನ್ನು ಉಗ್ರರು ಹಾಗು ಇತರರು ಅಪಹರಿಸಿದ್ದರು. ಆ ಎಲ್ಲಾ ೧೬ ವಿಮಾನಗಳನ್ನು ಸುರಕ್ಷಿತವಾಗಿ ವಾಪಸ್ಸು ತರಲು ಮಾಡಿದ ಸಂಧಾನಗಳೆಲ್ಲಾ ಡೋವಲ್ ಪಾತ್ರವಹಿಸಿದ್ದರು. ಇದು ಅವರ ಶ್ರೀಮಂತ ಅನುಭವಕ್ಕೆ ಸಾಕ್ಷಿ.(ಪ್ರಮುಖವಾಗಿ ೧೯೭೧, ೧೯೮೧,೧೯೮೨,೧೯೮೪,೧೯೮೪,೧೯೯೪ ಹಾಗು ೧೯೯೯ ರಲ್ಲಿ ನಡೆದ ಪ್ರಮುಖ ವಿಮಾನ ಆಪಹರಣಗಳು).ನಂತರ ಅಜಿತ್ ಡೋವಲ್೧೯೯೬ ರಲ್ಲಿ ಯು.ಕೆ (ಯು.ಕೆ) ಯ ಭಾರತೀಯ ದೂತವಾಸ ಕಛೇರಿಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ಗುಪ್ತಾಚರ ದಳದ (ಐ.ಬಿ)ಯ ಮುಖ್ಯಸ್ಥರಾಗಿ ೨೦೦೫ ರಲ್ಲಿ ನಿವೃತ್ತರಾದರು.ನಿಮಗೆ ೨೦೧೪ರಲ್ಲಿ ಇರಾಕ್‌ನಲ್ಲಿ ಇಸಿಸ್ ದಂಗೆಯ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ೪೬ ಭಾರತೀಯ ನರ್ಸ್‌ಗಳು ಸಿಕ್ಕಿ ಹಾಕಿಕೊಂಡದ್ದ ಘಟನೆ ನೆನಪಿರಬಹುದು ಆ ಕರಾಳ ಘಟನೆಗೆ ಮಂಗಳ ಹಾಡಿ ಶುಭವಿದಾಯ ಹಾಡಿದವರು ಅಜಿತ್ ಡೋವಲ್. ಅವರೆಲ್ಲರನ್ನು ಸುರಕ್ಷಿತರಾಗಿ ಭಾರತಾಂಬೆಯ ಮಡಿಲು ಸೇರುವಂತೆ ಮಾಡಿದ್ದು ನಮ್ಮ National Security Asvisor.ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅವರು ಮಾಡಿದ ಪ್ರಥಮ ಆಪರೇಷನ್ ಅದಾಗಿತ್ತು.ಜೀವನದಲ್ಲಿ ಭಾರಕ್ಕಾಗಿ ಏನಾದರೂ ಮಾಡಬೇಕೆಂಬ ಹಂಬಲವೇ ಅವರನ್ನ ಅಸಾಮಾನ್ಯ ಚಾಣಾಕ್ಷನನ್ನಾಗಿ ಮಾಡಿರಬಹುದು.

ಜನವರಿ ೩೧, ೨೦೦೫ ರಲ್ಲಿ ಗುಪ್ತಾದಳದ ಮುಖ್ಯಸ್ಥರಾಗಿ ನಿವೃತರಾದ ಬಳಿಕ ಡೋವಲ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳತೊಡಗಿದರು. ಭದ್ರತೆ, ರಾಷ್ಟ್ರೀಯತೆ, ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ವಿದ್ಯಾಮಾನಗಳಲ್ಲಿ ಇವರು ಘನ ಪಾಂಡಿತ್ಯ ಹೊಂದಿದ್ದ ಅವರು ಅನೇಕ ಅಂತರರಾಷ್ಟ್ರೀಯ ಮತ್ತ ರಾಷ್ಟ್ರೀಯ  ವಿಶ್ವವಿದ್ಯಾನಿಲಯಗಳಿಗೆ ತೆರಳಿ ಅನುಭವವನ್ನ ದಾರೆ ಎರೆದರು. ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಸಮ್ಮೇಳನ, ವೇದಿಕೆಗಳಲ್ಲಿ ಹತ್ತಾರು ಬಾರಿ ಗಂಭೀರ ವಿಷಯಗಳನ್ನೆತ್ತಿ ಭಾಷಣ ಮಾಡಿದ್ದಾರೆ.ಅವರ ಅನುಭವಗಳ ಪುಸ್ತಕ ತೆರೆದುಕೊಂಡರೆ ರೋಮಾಂಚನವಾಗುತ್ತದೆ.

ಭಾರತದ ಆರ್ಥಿಕತೆ, ಸಮಾಜ , ಭದ್ರತೆ, ವಿಜ್ಞಾನ, ಇತಿಹಾಸಾದಿಗಳ ಬಗ್ಗೆ ಅಧ್ಯಯನ, ಸಂಶೋಧನೆ ನೆಡೆಸುವ, ಎಲ್ಲಾ ಕ್ಷೇತ್ರಗಳ ಮೇಧಾವಿಗಳನ್ನು ಒಳಗೊಂಡಿರುವ “ವಿವೇಕಾನಂದ ಇಂಟರ್ ನ್ಯಾಷನಲ್ ಪೌಂಡೇಷನ್” ಎಂಬ ಸಂಸ್ಥೆಯ ಸ್ಥಾಪನೆ ಮಾಡಿ ಅದರ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು ಅಜಿತ್. ಈ Foundation ರಾಷ್ಟ್ರೀಯ ಸ್ವಯಂ ಸೇವಕ ಸಂಘದ Think Tank ಅನ್ನಬಹುದು.ಧರ್ಮ,ಜಾತಿಗಳನ್ನ ಮೀರಿ ಈ ಸಂಸ್ಥೆಯು ಕೆಲಸಮಾಡುತ್ತಿತ್ತು. ಇತ್ತೀಚಿನ ಸುದ್ದಿಯ ಪ್ರಕಾರ ಇವರು ಭೂಗತ ಪತಾಕಿ ದಾವೂದ್ ಇಬ್ರಾಹಿಂನನ್ನು ಬೆನ್ನು ಹತ್ತಿದ್ದಾಗಿ ಮಾಹಿತಿ ಇದೆ. ಹಲವರ ಪ್ರಕಾರ ಅವನನ್ನು ಬಹುಷಃ ಹಿಡಿದಿಧ್ದರು. ಆದರೆ ಕೊನೆಗಳಿಗೆಯಲ್ಲಿ ಆತ ತಪ್ಪಿಸಿಕೊಂಡು ಬಿಟ್ಟ ಎನ್ನಲಾಗಿದೆ. ಹಾಗಾಗಿ ಅನೇಕ ಭೂಗತ ಪಾತಾಕಿಗಳ ಸದ್ದಡಿಗಿ ಹೋಗಿದೆ ಎನ್ನಲಾಗಿದೆ.ಅಬ್ಬಾ ಅದೇನು ಸಾಹಸಮಯ ಬದುಕು ಅಜಿತ್ ಎಂಬ ಸಾಧಕನದು.ಇಂದಿರ ಗಾಂಧಿ, ಪಿ.ವಿ.ನರಸಿಂಹ ರಾವ್, ವಾಜಪೇಯಿ ಸರಕಾರಗಳಲ್ಲಿ ಪ್ರಧಾನಿಗಳಿಗೆ ಆತ್ಮೀಯರಾಗಿದ್ದರು. ಈಗ ಮೋದಿಯ ಬಲಗೈ ಬಂಟ ಇವರೇ.ಮೋದಿ ಯಾವಾದಾದರೂ ಅಧಿಕಾರಿಯನ್ನ ವಿಪರೀತ ನಂಬಿದ್ದಾರೆ ಎಂದರೆ ಅದು ಕೇವಲ ಅಜಿತ್ ಮಾತ್ರ.ಡೋವಲ್ ಪೋಲಿಸ್ ಮೆಡಲ್ ಗೆದ್ದಿರುವ ಅತಿ ಕಿರಿಯ ಅಧಿಕಾರಿಯಾಗಿದ್ದರು.ಹದಿನೇಳಕ್ಕೂ ಹೆಚ್ಚು ವರ್ಷಗಳ ಕಠಿಣ, ಖಡಕ್ ಸೇವೆಗೆ ಕೊಡುವ ಈ ಪ್ರಶಸ್ತಿಯನ್ನು ಇವರು ಕೇವಲ ಆರೇ ವರ್ಷಕ್ಕೆ ಗಳಿಸಿದರು,ಇದು ಅವರ ತಾಕತ್ತು. ನೂರಾರು ಹಿರಿಯ ಅಧಿಕಾರಿಗಳು ಹತ್ತಾರು ವರ್ಷಗಳ ಕಾಲ ಮಾಡಲಾಗದನ್ನು ಡೋವಲ್ ಕೆಲವೇ ತಿಂಗಳಿನಲ್ಲಿ ಮಾಡಿ ಮುಗಿಸಿದ ಉದಾಹರಣೆಯೂ ಇದೆ.ಇವರಿಗೆ ರಾಷ್ಟ್ರಪತಿ ಪದಕವೂ ಸಂದಿದೆ. ೧೯೮೮ ರಲ್ಲಿ ಇವರಿಗೆ ಭಾರತ ಸರಕಾರ ಕೀರ್ತಿ ಚಕ್ರ ಕೊಟ್ಟು ಗೌರವಿಸಿತು. ಕೀರ್ತಿ ಚಕ್ರ ಪಡೆದ ಮೊದಲ ಹಾಗೂ ಏಕೈಕ ಪೋಲಿಸ್ ಅಧಿಕಾರಿ ಅಜಿತ್ ಡೋವಲ್.

ಗೆಳೆಯರೇ,ಈ ಚಿಕ್ಕ ಲೇಖನ ಓದಿ ಮುಗಿಸುವ ಸಮಯದಲ್ಲಿ ನಿಮಗೇನನ್ನಿಸಿತು??ಆದರೆ ಬರೆಯುತ್ತ ಬರೆಯುತ್ತ ನನ್ನ ಮನಸ್ಸು ಈ ದೇಶ ಸೇವಕನಿಗೆ ಪ್ರತೀ ನಿಮಿಷವೂ ಸಲಾಂ ಅನ್ನುತ್ತಿತ್ತು,ಮನಸ್ಸು ತುಂಬಿ ಬಂದಿತ್ತು..ಅಸಾಮಾನ್ಯ ಸಾಧಕನಿಗೆ ನನ್ನ ಅಕ್ಷರವೇ ಉಡುಗೊರೆ..

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!