Archive - May 2017

Featured ಅಂಕಣ

ಶರಾವತಿ ಕಣಿವೆಯ ಅದ್ಭುತ ಜಲಪಾತ  –  ದಬ್ಬೆ

ನಿಟ್ಟೂರಿನ ಮಂಜಣ್ಣನವರ ನಿಸರ್ಗಧಾಮದಲ್ಲಿ ಕಡುಬು ತಿಂದಲ್ಲಿಯವರೆಗೆ ಕಳೆದ ಸಂಚಿಕೆಯಲ್ಲಿ  ಓದಿರುವಿರಿ. ತಿಂದ ಹುರುಪಿನಲ್ಲಿ ನಾವು ಎರಡನೇ ದಿನದ ಚಾರಣಕ್ಕೆ ಸಿದ್ಧರಾದೆವು. ಮೂರು ಗಂಟೆಗಳ ಬಸ್ ಪ್ರಯಾಣ; ಫೋಟೋ ತೆಗೆಯುವ ಆಸಕ್ತಿ ನನಗೆ ತೀವ್ರವಿರುವುದರಿಂದ ಚಾಲಕನ ಪಕ್ಕದಲ್ಲಿರುವ ಗೇರ್’ಬಾಕ್ಸ್‍ನಲ್ಲೇ ಕುಳಿತೆ. ಬಸ್ ಪ್ರಯಾಣದಲ್ಲೂ ಹಕ್ಕಿಗಳನ್ನು ನೋಡುವುದನ್ನು...

ಅಂಕಣ

ನಾವಲ್ಲ – ಪುಸ್ತಕ ಪರಿಚಯ

ಸೇತುರಾಮ್ ಗೊತ್ತಾ ನಿಮಗೆ? ಸೀತಾರಾಮ್ ಧಾರಾವಾಹಿಗಳಲ್ಲಿ ಮೊದಲು ನಟಿಸುತ್ತಿದ್ದರು. ಅವರ ಸಂಭಾಷಣೆಯ ಧಾಟಿ ತುಂಬಾ ವಿಶಿಷ್ಟ ಮರೆಯಲು ಸಾಧ್ಯವೇ ಇಲ್ಲ. ಆಮೇಲೆ ‘ಮಂಥನ’ ಮುಂತಾದ ಧಾರವಾಹಿಗಳನ್ನು ನಿರ್ದೇಶಿಸಿದರು ಕೂಡ. ಇವರ ಒಂದು ಪುಸ್ತಕ  ‘ನಾವಲ್ಲ’. ಅವರ ಸಂಭಾಷಣೆಯಂತೆ ಇದೂ ಇರುತ್ತದೆ ಅಂದುಕೊಂಡು ಮೊದಲು ಓದಿರಲಿಲ್ಲ. ಆದರೆ ಯಾವಾಗ ಫೇಸ್...

ಅಂಕಣ

ಹೆಚ್ಚಾಗುತ್ತಿದೆ ರಾನ್ಸಮ್ವೇರ್ ಎಂಬ ದರೋಡೆಕೋರನ ಅಟ್ಟಹಾಸ

21ನೇ ಶತಮಾನ ಮಾಹಿತಿ ತಂತ್ರಜ್ಞಾನಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಣೆ ಮಾಡಿಕೊಂಡಿದೆ. ಇಂದು ನಾವು ತಂತ್ರಜ್ಞಾನವೆಂಬ ಮಣೆಯ ಮೇಲೆ ಕೂತು ಬೆರಳ ತುದಿಯಿಂದ ಪ್ರಪಂಚವನ್ನೇ ಆಡಿಸುತ್ತಿದ್ದೇವೆ. ಈಗೇನಿದ್ದರೂ ಅಂಗೈಯಲ್ಲೇ ಅಂತರ್ಜಾಲ. ಹೀಗಿರುವಾಗ ಮಾನವ ತಾನೇ ತನ್ನ ಬುದ್ಧಿಶಕ್ತಿಯಿಂದ ಬೆಳೆಸಿದ ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಂಡು ಹೋಗುವುದೆ...

ಅಂಕಣ

ಸೋಮವಾರದ ಒಪ್ಪತ್ತು : ಅಂದು ಭಾರತಮಾತೆಯ ರಕ್ಷಣೆಗೆ – ಇಂದು ಗೋಮಾತೆಯ ಸಂರಕ್ಷಣೆಗೆ

ಅಂದು 1965ರಲ್ಲಿ ಭೀಕರ ಬರಗಾಲಕ್ಕೆ ದೇಶತತ್ತರಿಸಿ ಹೋಗಿತ್ತು, ಗಡಿನಿಯಂತ್ರಣ ರೇಖೆಯನ್ನು ದಾಟಿ ದೇಶದಮೇಲೆ ದಾಳಿಮಾಡಿದ್ದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯನ್ನು ಮಾಡಲು ಶಾಸ್ತ್ರೀಜಿಯವರು ಯುದ್ಧವನ್ನು ಘೋಷಿಸಿದರು, ತತ್ಪರಿಣಾಮವಾಗಿ ಅಮೇರಿಕಾದಿಂದ ಆಮದಾಗುತ್ತಿದ್ದ ಗೋಧಿ ನಿಂತುಹೋಯಿತು. ಬರ – ಯುದ್ಧ – ಆಹಾರದ ಕೊರತೆ.. ದೇಶದ ಹೊಣೆಹೊತ್ತ ಲಾಲ್ ಬಹದ್ಧೂರ್...

ಅಂಕಣ

ಧ್ವನಿ ಲೋಕದ  ನಭೋಮಂಡಲದಲ್ಲೊಂದು ಧ್ರುವತಾರೆ – ಶಮ್ಮಿ ನಾರಂಗ್

ಉತ್ತರ ಕರ್ನಾಟದ ಹಳ್ಳಿಗಳ ಆಡು ನುಡಿಯಂತೆ “ನಿದ್ದಿ, ಬುದ್ಧಿ,ಲದ್ದಿ” ನೆಟ್ಟಗಿದ್ದರೆ ಅದು ಮನುಷ್ಯ ಆರೋಗ್ಯವಾಗಿದ್ದಾನೆಂದರ್ಥ. ನನ್ನ ಪ್ರಕಾರ ಮನುಷ್ಯನ ಬುದ್ಧಿ ಚುರುಕಾಗಿರಬೇಕಾದರೆ  “ನಿದ್ದಿ, ಬುದ್ಧಿ,ಲದ್ದಿ”-ಯೊಂದಿಗೆ ಸುದ್ದಿಯು ಅತ್ಯವಶ್ಯ,  ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೊತೆಗೆ ಜಗತ್ತಿನ ಆಗು ಹೋಗುಗಳ ಕುರಿತಾದ ನಿಖರ ಮಾಹಿತಿ ತಿಳಿದುಕೊಳ್ಳುವುದೂ ಅಷ್ಟೇ...

ಅಂಕಣ

ದೈವದದ್ಭುತದರಿವು, ಮನುಜ ಮಹನೀಯತೆಯಲಿದೆ ಸುಳಿವು !

ಮಂಕುತಿಮ್ಮನ ಕಗ್ಗ ೫೯ ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ | ಮನಗಾಣಿಸಲು ನಿನಗೆ ದೈವದದ್ಬುತವ ? || ಮನುಜರೊಳಗಾಗಾಗ ತೋರ್ಪ ಮಹನೀಯ ಗುಣ | ವನುವಾದ ಬೊಮ್ಮನದು – ಮಂಕುತಿಮ್ಮ || ೫೯ || ಇದಂತು ದೇವರ ಮಹಿಮೆಯನ್ನು ನಿರ್ಯೋಚನೆಯಿಂದ ಒಪ್ಪಿಕೊಂಡ ಮನಸೊಂದು ಆಡಿದ ಮಾತಿನಂತಿದೆ. ದೈವದ ಅದ್ಭುತ ಶಕ್ತಿಯ ನಿರೂಪಣೆಗೆ, ನಂಬಿಕೆ ಬರುವುದಕ್ಕೆ, ಮನಗಾಣಿಸುವುದಕ್ಕೆ...

ಕಥೆ

‘ಅರ್ಥ’ ಕಳೆದುಕೊಂಡವರು – 2

‘ಅರ್ಥ’ ಕಳೆದುಕೊಂಡವರು – 1         ಗಂಗಪ್ಪನಿಗೆ ಸಮಾರಂಭದಲ್ಲಿ ಮಾಡಿದ ಭೋಜನದ ಪರಿಮಳ ಮೂಗಿನವರೆಗೆ ತಾಕಿತ್ತು. ಹೇಗಿತ್ತು ಈ ಜಾಗ, ಈಗ ಹೇಗಾಗಿದೆ. ಇದರ ಹಿಂದೆ ತಮ್ಮೆಲ್ಲರ ಪರಿಶ್ರಮವಿದೆ. ಅದಕ್ಕೆ ದುಡ್ಡು ಕಾಸು ಸಿಕ್ಕಿದ್ದನ್ನು ಅಲ್ಲಗಳೆಯುವಂತಿಲ್ಲ. ಆದರೆ ಹಿಂದೆ ತಾನು ಎಷ್ಟೇ ಮನೆ ಗಾರೆ ಕೆಲಸ ಮಾಡಿದ್ದರೂ ಇಲ್ಲಾದ ಅನುಭವ ಬೇರೆಯದೇ ಇತ್ತು. ದಿನಾಲೂ...

ಅಂಕಣ

ಫಲಿತಾಂಶದ ಲೆಕ್ಕಾಚಾರಗಳು

ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಫಲಿತಾಂಶ ಹೊರಬಿದ್ದಿದೆ. ನಿರೀಕ್ಷೆಯಂತೆ ಈ ಬಾರಿಯೂ ‘ಫೀಮೆಲ್’ಗೈ’ ಸಾಧಿಸಿದ್ದಾರೆ. ಪ್ರತೀ ಬಾರಿಯೂ ಹುಡುಗಿಯರೇ ಮೇಲುಗೈ ಸಾಧಿಸುತ್ತಿರುವುದು ಹುಡುಗರ ಪಾಲಿಗೆ ನುಂಗಲಾರದ ತುತ್ತು. ಫಲಿತಾಂಶದ ಜೊತೆ ಜೊತೆಗೇ ಪ್ರಾದೇಶಿಕ ಹಣಾಹಣಿಯ ವಾದ ವಿವಾದಗಳೂ ಈ ಸಂದರ್ಭದಲ್ಲಿ ತೆರೆದುಕೊಳ್ಳುವುದೂ ಸಹಜ. ಕೆಲವು...

ಅಂಕಣ

ಐಟಿಯೆಂದರೆ ಮಾತನಾಡಿದಷ್ಟು ಸುಲಭವಲ್ಲ!

ಭಾರತದಲ್ಲಿ ಐಟಿ (ಮಾಹಿತಿ ತಂತ್ರಜ್ಞಾನ) ಕಾಲಿಟ್ಟು ಮೂರು ದಶಕಗಳೇ ಕಳೆದಿವೆ. ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಚ್.ಸಿ.ಎಲ್. ಅಲ್ಲದೇ ಇನ್ನೂ ಹಲವು ಭಾರತೀಯ ಮೂಲದ ಕಂಪನಿಗಳು ಭಾರತದ ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡಿದೆ. ಗೂಗಲ್, ಮೈಕ್ರೋಸಾಫ್ಟ್, ಅಕ್ಸೆಂಚರ್, ಐಬಿಎಮ್, ಕಾಗ್ನಿಜೆಂಟ್ ಮುಂತಾದ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ತಮ್ಮ ಕಚೇರಿಗಳನ್ನು...

ಕಥೆ

‘ಅರ್ಥ’ ಕಳೆದುಕೊಂಡವರು – 1        

“ಅಪ್ಪಾ ನಾಳೆಯೇ ನನ್ನ ಫೀಸ್ ಕಟ್ಟೊದಕ್ಕೆ ಕೊನೇ ದಿನ. ಇಪ್ಪತ್ತೈದು ಸಾವಿರ ತುಂಬದಿದ್ದರೆ ಈ ವರುಷ ಪೂರ್ತಿ ಮನೆಯಲ್ಲೆ ಇರಬೇಕಪ್ಪ.” ಮಗ ಹೇಳಿ ಫೋನ್ ಕೆಳಗಿಟ್ಟರೂ ಗಂಗಪ್ಪ ಮಾತ್ರ ಕೈಯಲ್ಲಿದ್ದ ಫೋನ್ ಹಾಗೇ ಹಿಡಿದಿದ್ದ. ಅಪ್ಪನ ಆಸ್ಪತ್ರೆ ಖರ್ಚಿಗೆಂದು ಮೊನ್ನೆ ತಾನೇ ಎಲ್ಲ ಪಗಾರವನ್ನೂ ಕಳಿಸಿ ಕೈಯೆಲ್ಲ ಖಾಲಿ ಆಗಿಹೋಯ್ತಲ್ಲ. ಏನು ಮಾಡಲಿ? ಮಗನ ಭವಿಷ್ಯದ ಪ್ರಶ್ನೆ...