ಅವರಲ್ಲಿ ಮೌನ ಆವರಿಸಿದಂತೆಯೇ ಇಬ್ಬರೂ ರೂಮಿನ ಕಡೆ ಹೆಜ್ಜೆಯನ್ನಿಟ್ಟರು…ಪುನಾಃ ಅವರಿಬ್ಬರಲ್ಲಿ ಮಾತುಕತೆ ನಡೆಯೋದು ದೂರದಿಂದ ಕೇಳುತ್ತಿತ್ತು ಶ್ಯಾಮಲೆ ಮತ್ತು ಪ್ರಮೀಳ ಆಗಲೇ ಬಾಗಿಲು ತೆರೆದು ಒಳಗೆ ಹೋಗಿ ಆಗಿದೆ..
“ಬಾ ಅಮ್ಮಾ,ಪ್ರಮೀಳಾ ನೀನೇನಾ!?ಏನಿದೆಲ್ಲಾ ಮಾಡಿ ಇಟ್ಟಿದ್ದೀರ ಇಬ್ಬರೂ ಸೇರಿ!?ಸೆರಗಲ್ಲಿ ಬಾಯಿ ಮುಚ್ಚುತ್ತಾ ರೇಣುಕಾದೇವಿ ಕೇಳಿದಳು..
ವ್ಯಾನಿಟಿ ಬ್ಯಾಗ್ ಕೆಳಗೆ ಇಡುತ್ತಲೇ “ಆಂಟಿ,ನೋಡಿ,ಎಲ್ಲಾ ನಮ್ಮ ಅರಿವಿಗೆ ಬರುವ ಮುಂಚೆ ನಡೆದು ಹೋಗಿದೆ,ಶ್ಯಾಮ್ ಎಲ್ಲಾ ಹೇಳಿರಬೇಕು,ಅವಳಿಗೆ ಸಹಾಯ ಮಾಡಲು ಹೋಗಿ ನಾ ಇಕ್ಕಟ್ಟಿಗೆ ಸಿಲುಕಿದ್ದು,ದಯವಿಟ್ಟು ಕ್ಷಮಿಸಿ,,” ಒಂದೇ ಉಸಿರಿಗೆ ಹೇಳಿ ಬಿಟ್ಟಳು ಪ್ರಮೀಳಾ..
“ಸರಿಯಮ್ಮಾ,ನಮಗೆಲ್ಲಾ ಅರ್ಥ ಆಗುತ್ತೆ,ಈವಾಗ ಏನ್ ಮಾಡೋದು ಅದು ಆಲೋಚಿಸಿ,!!”ನಟರಾಜ್ ಕಳವಳ ವ್ಯಕ್ತಪಡಿಸಿದ..
ತನ್ನ ಮೇಲೇ ಯಾವುದೇ ಬೇಜಾರು ಇಲ್ಲದಿರುವುದ ಕಂಡು ತುಸು ಧೈರ್ಯ ಬಂದವಳಂತೆ “ಹೌದು,ಅಂಕಲ್,ಎಲ್ಲಾ ಸೇರಿ,ಒಂದೊಳ್ಳೆ ನಿರ್ಧಾರ ತೆಗೆಯೋಣ!”ಉಸುರಿದಳು ಪ್ರಮೀಳಾ
“ಏನೂ ನಿರ್ಧಾರವಿಲ್ಲ,ಅವನ ಕೊನೆ ಇವತ್ತೇ ಅಗಬೇಕು,ಅದಕ್ಕೆ ಬೇಕಾದ ಪ್ಲಾನ್ ಮಾಡು ಪ್ರಮೀಳಾ ಮತ್ತೇನು ಇಲ್ಲ!”ಕೆಂಪಗಾದ ಮುಖದಿಂದ ಗುಡುಗುತ್ತಿದ್ದಳು ಶ್ಯಾಮಲೆ.
“ವ್ಹಾಟ್,ಏನ್ಹೇಳ್ತಿದ್ದಿಯಾ!?ಅವನ ಕೊನೆ ?ಅಂದ್ರೆ ಕೊಲೆ ಮಾಡುವ ಪ್ಲಾನಾ!?ಆತಂಕ ವ್ಯಕ್ತಪಡಿಸಿದಳು ಪ್ರಮೀಳಾ.
“ಹೌದು,ಅದೇ,,ಈ ಭೂಮಿ ಮೇಲೆ ನನಗೆ ಇರುವ ಎರಡೇ ಆಯ್ಕೆ,ಒಂದಾ ನಾನು ಜೀವಂತವಾಗಿರಬೇಕು ಇಲ್ಲ ಅವನು ಅಷ್ಟೇ.!!!,,
ಸ್ವಲ್ಪ ಹೊತ್ತು ಬದಲಿ ಬದಲಿ ಚರ್ಚೆಗಳಾದವು ಎಲ್ಲರೂ ಅದೇ ತೀರ್ಮಾನಕ್ಕೆ ಬಂದಾದ ಮೇಲೆ ಪ್ರಮೀಳಾಳು ಒಪ್ಪಿಕೊಂಡಳು..!!
ಅಷ್ಟರಲ್ಲಿ ಢಂ!!!!! ಬಂದೂಕು ಸಿಡಿದ ಶಬ್ಧ ಹೊರಗಿನಿಂದ ಗಾಳಿಯೊಂದಿಗೆ ಐಕ್ಯವಾಗಿ ನರ್ತಿಸಿದ್ದು ಇವರೆಲ್ಲರನ್ನು ಕ್ಷಣಾರ್ಧಕ್ಕೆ ಬೆಚ್ಚಿಬೀಳಿಸಿತ್ತು…
ಎಲ್ಲರೂ ಒಬ್ಬರೊಬ್ಬರ ಮುಖ ನೋಡುತ್ತಾ ದಂಗಾಗಿದ್ದರು,ನಟರಾಜ್ ತಟಕ್ಕನೇ ಎದ್ದು ಮುಚ್ಚದ ಬಾಗಿಲನ್ನು ದೂಡಿ ಕಾರಿಡಾರ್’ಗೆ ಬಂದ.. ಅಷ್ಟರಲ್ಲಿ ಇವರ ಪ್ಲಾಟಿನ ಒಂದು ಪ್ಲಾಟ್ ಬಿಟ್ಟು ಇನ್ನೊಂದರ ಬಾಗಿಲ ಸದ್ದು ದಡ್ಡ್!!.ಎಂದೆ ಮುಚ್ಚಲ್ಪಟ್ಟಿತು…
“ಯಾರದು!??ಯಾರದು..!?…ನಟರಾಜನಿಗೆ ನಿರ್ಜನ ಕಾಡಿನಲ್ಲಿರುವಂತಹ ಭಾಸ!!ಹಿಂದೆಯೇ ಶ್ಯಾಮಲೆ,ಪ್ರಮೀಳಾ,ರೇಣುಕಾದೇವಿ ಎಲ್ಲರೂ ದೌಡಾಯಿಸಿದರು,ಯಾರು ಏನಾಯ್ತು!?..
ಎಲ್ಲರಲ್ಲೂ ಗೊಂದಲ ಅಷ್ಟು ಜೋರು ಶಬ್ಧ ಕೇಳಿಯೂ ಉಳಿದ ಮನೆಯವರು ಹೊರಗೆ ಬಂದಿಲ್ಲ,ಸಂಜೆಯಾದ ಕಾರಣ ಕೆಲಸ ಮುಗಿಸಿ ಯಾರೂ ಮನೆಗೆ ಬಂದಿಲ್ಲ ಅಂತ ಕಾಣುತ್ತೆ(ಅಥವಾ ಭಯವಿರಬೇಕು ಯಾರಿಗೆ ಗೊತ್ತು)
ಮೆಟ್ಟಿಲ್ಲಲ್ಲಿ ಬೂಟಿನ ಸದ್ಧು ಕೇಳುತ್ತಿದೆ,ಹೆಚ್ಚಾಗುತಿದೆ..ಹೌದು ಸೆಕ್ಯೂರಿಟಿ ಕಂಟ್ರೋಲರ್ ನಜೀಬ್ ಓಡಿ ಬರುತ್ತಿದ್ದಾನೆ(ಲಿಪ್ಟ್ ಕೆಟ್ಟಿರಬೇಕು,ಇವತ್ತು ಎಲ್ಲರೂ ಮೆಟ್ಟಿಲಲ್ಲೇ ಬರುತ್ತಿದ್ದಾರೆ.)ಇವರನ್ನು ಕಾಣುತ್ತಲೇ ನಜೀಬ್ ಕೈ ಸನ್ನೆ ದೂರದಿಂದಾನೇ ಮಾಡುತ್ತಿದ್ದಾನೆ ಹೋಗಿ,ಒಳಗೆ ಹೋಗಿ ಅನ್ನುತಾ.!!!!……
ಎಲ್ಲರಲ್ಲೂ ಮತ್ತೊಮ್ಮೆ ಗೊಂದಲ ಸೆಕ್ಯೂರಿಟಿ ಯಾಕೀತರ ಮಾಡ್ತಿದಾನೆ ಅಂತ..!!
ಅವನ ಸನ್ನೆಯಂತೆ ಎಲ್ಲರೂ ಮನೆಯೊಳಗೆ ನಡೆಯುತ್ತಿದ್ದಂತೆಯೇ ನಜೀಬ್ ಅವರ ಹಿಂದೆಯೇ ಹೆಜ್ಜೆ ಹಾಕಿದ..!
*ಮನುಷ್ಯನ ಮೆದುಳಿಗೆ ತರ್ಕಕ್ಕೆ ನಿಲುಕದ ವಿಷಯಗಳು ಸಿಕ್ಕ ಕೂಡಲೇ ನಾನಾ ರೀತಿಯ ಆಲೋಚನೆ,ನಿರ್ದಿಷ್ಟವಲ್ಲದ ಗೊಂದಲಕ್ಕೆ ಸಿಲುಕಿ ಬಿಡುತ್ತದೆ,ಸ್ವಲ್ಪ ಸಮಯ ಸುತ್ತಮುತ್ತಲಿನ ವಾತಾವರಣಕ್ಕೆ ಅನುಗುಣವಾಗಿ ಶಾಂತವಾಗದೇ ಏನಾದರೂ ಪ್ರಕ್ರಿಯೆ ಶುರು ಮಾಡಿದರೆ,ವಿಪರೀತಕ್ಕೆ ತಿರುಗುವ ಸಂದಿಗ್ಧತೆ ಎದುರಾಗಬಹುದು..!!*
ಎಲ್ಲರೂ ಗೊಂದಲದಲ್ಲಿಯೇ ಕುಳಿತಿದ್ದಾರೆ,ಪ್ರಮೀಳ ಎರಡೆರಡು ವಿಷಯವನ್ನು ಒಟ್ಟಿಗೆ ಓರೆಗೆ ಹಚ್ಚಿದ್ದಾಳೆ,ಕಾರಣ ಸಮಯದ ಅಭಾವ ತುಂಬಾನೇ ಇದೆ, ಗಂಟೆ ಆರು ಮೂವತ್ತು ಕಳೆದುಹೋಗಿತ್ತು..!!
ನಜೀಬ್ ಒಳ ಬರುತ್ತಿದ್ದಂತೆಯೇ ಬಾಗಿಲು ಹಾಕಿದನ್ನು ಭದ್ರಪಡಿಸಿಕೊಂಡ.
“ನಿಮ್ಮ ಅನುಮತಿ ಇಲ್ಲದೇ ಮನೆಯೊಳಗೆ ಬಂದೆ ಕ್ಷಮಿಸಿ, ಏನೂ ಆಗಿಲ್ಲ,ಯಾರೂ ಆತಂಕ ಪಡಬೇಡಿ,ನಾನೇಳುವುದನ್ನು ಸಾವಧಾನದಿಂದ ಕೇಳಿ”
ಈ ದಿನದ ಸಂಜೆಯಷ್ಟು ಕ್ರೂರ ಯಾತನೆಯ ದಿನ ನಟರಾಜ್ ಎಂದೂ ಅನುಭವಿಸಿಲ್ಲ,ಎಲ್ಲಾ ಬಗೆಹರಿಯದ ಕೇವಲ ಪ್ರಶ್ನೆಗಳೇ ಅವನ ತಲೆಯೊಳಗೆ..
“ಏನಪ್ಪಾ ಏನಿದು!!ಆ ಶಬ್ಧವೇನು!?ನಟರಾಜ್ ತೊದಲಿದ
“ಅಯ್ಯೋ ಸಾರ್,ನಿಮಗೆ ವಿಷಯ ಗೊತ್ತಿಲ್ಲ,ನಮ್ಮ ಪ್ಲಾಟಿಗೆ ಭಯೋತ್ಪಾದಕರು ಬಂದು ಸೇರಿದ್ದಾರೆ,ಅವರೊಳಗಿನ ಜಗಳ ಪರಸ್ಪರ ಗುಂಡು ಹಾರಿಸಿರಬೇಕು!!?!
ಇವನ ಮಾತು ಅದೆಷ್ಟು ತೀಕ್ಷ್ಣವಾಗಿ ನಾಟಿತ್ತೆಂದರೆ ಈವರೆಗಿನ ಸಮಾಚಾರಕ್ಕಿಂತ ದಿಗಿಲು ಹುಟ್ಟಿಸುವ ವಿಷಯ.!!
“ಟೆರರಿಸ್ಟ್!!!!……!?
“ಯೆಸ್,ಟೆರರಿಸ್ಟ್,ಐದು ದಿನ ಮುಂಚೆ,ತೀರ್ಥಯಾತ್ರೆಗೆಂದು ಹೋದ ಗೋಪಾಲ್ ಅವರ ಮನೆಗೆ ಅವರ ಒಪ್ಪಿಗೆ ಮೇರೆಗೆ ಬಂದು ಸೇರಿದವರೇ ಈ ನಾಲ್ಕು ದಾಡಿವಾಲಗಳು,!!..
ಅವರೇನೋ ಸಂಬಂಧಿಕರೋ,ಏನೋ ಒಂದು ಹೇಳಿ,ಇವರಿಗೆ ತಂಗಲು ಅನುವು ಮಾಡಿ ಕೊಟ್ಟಿದ್ದಾರೆ,ಇವರ ನೋಟ,ಮಾತಿನ ಶೈಲಿ ನನಗೇನೋ ಅನುಮಾನ ಬಂದು,ಗೆಳೆಯನ ಸಹಾಯದಿಂದ ಟ್ರಾನ್ಸ್’ಮೀಟರ್’ನ್ನು ಅವರ ರೂಮಿನ ಒಳಗೆ ಫಿಕ್ಸ್ ಮಾಡಿದ್ದೇ ಮೊನ್ನೆ,ಕಂಟ್ರೋಲ್ ರೂಮಿನಲ್ಲಿ,ಇವರ ಸಂಭಾಷಣೆ ಕೇಳ್ತಿದ್ದ ನನಗೆ ಗೊತ್ತಾಯಿತು ಇದೊಂದು ಆತಂಕವಾದಿಗಳ ಗುಂಪೆಂದು ಏನೋ ಅನಾಹುತ ಮಾಡಲು ಬಂದಿದ್ದಾರೆಂದು..!!!!
ನಜೀಬ್ ಏನೋ ಕಥೆ ಹೇಳುತ್ತಿದ್ದ ಎಲ್ಲರೂ ಮೂಕವಿಸ್ಮಯರಾಗಿ ಕೇಳುತ್ತಿದ್ದರು..!
“ನೀನ್ಯಾಕೆ,ಪೋಲೀಸ್ ಕಂಪ್ಲೇಂಟ್ ಕೊಟ್ಟಿಲ್ಲ,ಅವರು ಉಗ್ರಗಾಮಿಗಳಂತ ಗೊತ್ತಾದ ಮೇಲೆ.!!???..
ಪ್ರಮೀಳ ಶಬ್ಧವೆತ್ತಿದಳು..
“ಅಯ್ಯೋ ಮೇಡಂ,ಆವಾಗ ಒಂದು ಸ್ಕೋಡ ಕಾರು ಬಂತಲ್ವ ಅವರು ಏ.ಸಿ,ಅವರೇ ಇವರನ್ನು ಡ್ರಾಪ್ ಪಿಕಪ್ ಮಾಡೋದು,ಇವತ್ಯಾಕೋ ಬೇಗ ಬಂದಿದ್ದಾರೆ ಇಲ್ಲಾಂದ್ರೆ ಲೇಟ್ ಆಗ್ತಿತ್ತು..!!
ಈ ಬಾರಿ ಎಲ್ಲರಿಗೂ ಭಯ ಹುಟ್ಟಿತ್ತು,ಪೋಲೀಸ್,ಉಗ್ರಗಾಮಿ ಏನು ಸಂಬಂಧ!!!???
ಇದನ್ನೆಲ್ಲಾ ತುಂಬಾ ಗಾಢವಾಗಿ ಕೇಳುತ್ತಿದ್ದ ಶ್ಯಾಮಲೆ ತಟಕ್ಕನೆ ಎದ್ದು ನಿಂತು.
“ನಿಲ್ಸಿ,ಅವರ್ಯಾರಾದರೆ ನಮಗೇನು,ನಮ್ಮ ಈಗಿನ ಕಷ್ಟ ಪರಿಹಾರವಾಗಬೇಕು,ನನಗೊಂದು ಉಪಾಯ ಹೊಳಿತಿದೆ,ಅದಕ್ಕೆ ಈ ನಜೀಬ್’ನ ಸಹಾಯ ಬೇಕು ಸಮಯ ತೀರಾ ಕಡಿಮೆ ಮಟ್ಟದಲ್ಲಿದೆ..!!” ಅರ್ಧಗೆಲುವಿನ ಮುಖದಲ್ಲಿ ಶ್ಯಾಮಲೆ ಒಂದೇ ಉಸಿರಿಗೆ ಹೇಳಿಬಿಟ್ಟಳು..
ಈಗ ಗಲಿಬಿಲಿಗೊಂಡವನು ನಜೀಬ್
“ಮೇಡಂ!?ನನ್ನ ಸಹಾಯ!?ಯಾಕೆ!?ಹೇಗೆ!?ಖಂಡಿತಾ ನನ್ನ ಕೈಯಲ್ಲಾದದ್ದು ಮಾಡುವೆ!!!..
“ನೋಡು ನಜೀಬ್,ನಾವೊಂದು ದೊಡ್ಡ ಗಂಡಾಂತರದಲ್ಲಿ ಸಿಕ್ಕಿ ಬಿದ್ದಿದ್ದೀವಿ,ನಿನ್ನ ಸಹಾಯವಿದ್ದರೆ ಪಾರಾಗುವ ನಂಬಿಕೆ ನನಗೆ ಈಗೀಗ ಬರುತ್ತಿದೆ,ಅಲ್ಲದೇ ಹೊರಗೆಲ್ಲೂ ಇದರ ಬಗ್ಗೆ ಬಾಯಿ ತೆರೆಯಲಾರೆಂಬ ನಂಬಿಕೆಯಿಂದ ಹೇಳ್ತೀನಿ,.!
“ಖಂಡಿತಾ ಮೇಡಂ,ನನ್ನ ನಂಬಬಹುದು.!!
“ಏನ್ ಶ್ಯಾಮ್ ಏನು ಪ್ಲಾನ್.!!? ಪ್ರಮೀಳಾಳಿಗೂ ಖುಷಿಯಾದಂತಿತ್ತು ಮೊಗ.!!!
ನೋಡು,”ಅವರು ಟೆರರಿಸ್ಟ್,ಅದಲ್ಲದೇ ಆಧಾರವಾಗಿ ಟ್ರಾನ್ಸ್ ಮೀಟರ್ ರೆಕಾರ್ಡ್ ಇವನ ಕೈಯಲ್ಲಿದೆ,ಹೇಗೂ ಅವರು ಈಗ ಒಬ್ಬನೊಬ್ಬರು ಶೂಟ್ ಮಾಡಿ ತುಂಬಾ ಡಿಫ್ರೆಸ್ ಆಗಿದಾರೆ,ನಾವಾಗ ಬರುವಾಗಲೇ ಏನೋ ಜಗಳ ನಡೆಯುತ್ತಿತ್ತು ಅವರ ಮಧ್ಯೆ,ನಾವೀಗ ರಾಕೇಶನ ಕರೆದು ಆ ಮನೆಗೆ ಡೈವರ್ಟ್ ಮಾಡೋಣ,ಅಲ್ಲಿ ಹೋದ ಒಂದಾ ಬಾಗಿಲು ತೆರೆಯುವಾಗಲೆ ಅವರು ಕೊಂದುಬಿಡುತ್ತಾರೆ,ಆಗೂ ಕೊಲ್ಲದಿದ್ದರೇ, ನಾವೇ ಕೊಲ್ಲುವ ಅವನನ್ನು ಮತ್ತು ಆ ಮನೆಯೊಳಗಿರುವ ಎಲ್ಲಾ ಉಗ್ರಗಾಮಿಗಳನ್ನು..!!
“ಇದೇನಿದು ಇಷ್ಟು ಸುಲಭವಾಗಿ ಅವರನ್ನು ಕೊಲ್ಲುವ ಇವರನ್ನು ಕೊಲ್ಲುವ ಅಂತಿದೀಯಾ, ಅಷ್ಟು ಸುಲಭದ ಮಾತಾ ಇದು!!.ನಟರಾಜ್ ಸಂಪೂರ್ಣ ಹೆದರಿದ್ದ.!.
“ಆಗುತ್ತೆ, ಸರಿಯಾಗಿ ಪ್ಲಾನ್ ಮಾಡಿದ್ರೆ ಆಗುತ್ತೆ,ನನ್ನ ಮಾತು ಕೇಳಿ,ನಮಗೆ ನಜೀಬ್’ನ ಸಂಪೂರ್ಣ ಸಹಾಯ ಮಾಡಿದರೆ ಖಂಡಿತಾ ಸಾಧ್ಯವಿದೆ..”
“ಅಯ್ಯೋ ಮೇಡಂ,ಇದೇನಿದು ಸಹಾಯ ಅಂತೀರ ಕೊಲೆ ಅಂತೀರಾ ನಮಗ್ಯಾಕೆ ಊರ ಉಸಾಬರಿ!?ನನಗೆ ಎರಡು ಅಕ್ಕಂದಿರು ಇದ್ದಾರೆ ಅವರ ದಡ ಸೇರಿಸುವ ದೊಡ್ಡ ಜವಾಬ್ದಾರಿ ನನ್ನ ಹೆಗಲ ಮೇಲಿದೆ,ನಿಮ್ಮ ಜೊತೆ ಸೇರಿ ಜೈಲಿಗೆ ಸೇರಬೇಕಾಗುತ್ತೆ.!” ಮನೆಯ ಕಷ್ಟ ಮತ್ತು ಜವಾಬ್ದಾರಿ ಅವನ ಕಣ್ಣಿನಲಿ ಸ್ಪಷ್ಟವಾಗಿತ್ತು..
ಪ್ರಮೀಳ,ಶ್ಯಾಮಲೆ ನಡೆದ ವಿಷಯವನ್ನು ಸಂಪೂರ್ಣವಾಗಿ ಹೇಳಿ ಮನದಟ್ಟು ಮಾಡಿಕೊಟ್ಟರು,ನನ್ನನ್ನೂ ಅಕ್ಕ ಅಂದುಕೋ,ಸಹಾಯ ಮಾಡೆಂದು ಅಂಗಲಾಚಿದಳು ಶ್ಯಾಮಲೆ..
ಪರಿಸ್ಥಿತಿಯ ಗೌರವವನ್ನು ಮನಗಂಡ ನಜೀಬ್ ಎಲ್ಲದಕ್ಕು ಸರಿಯೆಂದ ತನ್ನಿಂದ ಆಗುವ ಎಲ್ಲಾ ಸಹಾಯ ಮಾಡುವೆಯೆಂದ..
(ಮುಂದುವರೆಯುವುದು…)