ಸಿನಿಮಾ - ಕ್ರೀಡೆ

ಇಂಜಿನಿಯರಿಂಗ್’ನಿಂದ ನಟನಾಗೋವರೆಗೆ ಅಶ್ವಿನ್ ಹಾಸನ್ ಪಯಣ

ಅಶ್ವಿನ್ ಹಾಸನ್, ಇಂಜಿನೀಯರಿಂಗ್ ಪದವಿ ಇದ್ದೂ ಸಾಫ್ಟ್ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿ , ತಮ್ಮ ನಟನಾ ಸಾಮರ್ಥ್ಯವನ್ನು ಕಿರುತೆರೆ ,ಬೆಳ್ಳಿತೆರೆ ಮತ್ತು ನಾಟಕಗಳಲ್ಲಿ ಸಾದರಪಡಿಸುತ್ತ ಜೀವನದಲ್ಲಿ ಸಂತೃಪ್ತಿಯನ್ನು ಕಂಡುಕೊಳ್ಳುತ್ತಿರುವ ವ್ಯಕ್ತಿ. ನಟನೆ ಮೇಲಿನ ಮೋಹ ಜೀವನದಲ್ಲಿ ಯಾವುದೆಲ್ಲಾ ತಿರುವುಗಳನ್ನು ತಂದೊಡ್ಡಿದೆ  ಎನ್ನುವುದನ್ನು ಅವರ ಮಾತಿನಲ್ಲೇ ಕೇಳೋಣ

Ashwin Hassan interview

ನೀವು ನಟನಾ ಕ್ಷೇತ್ರವನ್ನು ಆಯ್ಕೆ ಮಾಡಿದ್ದು ಯಾಕೆ?

ನಾನು ಸಣ್ಣವನಿದ್ದಾಗ ಅಂದರೆ ಎರಡನೇ ತರಗತಿಯಲ್ಲಿ ಓದುತ್ತಿರಬೇಕಾದರೆ ನಮ್ಮ ಹಳ್ಳಿ ಹಬ್ಬಕ್ಕೆ  ‘ಆನಂದ್’ ಸಿನಿಮಾದ ‘ಟುವಿ ಟುವಿ‘ ಹಾಡಿಗೆ ಎರ್ರಾಬಿರ್ರಿ ಹೆಜ್ಜೆ ಹಾಕುವ ಅವಕಾಶ ಒದಗಿ ಬಂದಿತ್ತು. ಮತ್ತೆ 7 ನೇ ತರಗತಿಯಲ್ಲಿ ಶಾಲಾ ನಾಟಕದಲ್ಲಿ ವೀರ ಮದಕರಿಯ ಪ್ರಧಾನ ಪಾತ್ರ ಮಾಡಿದ್ದೆ, ಆಗ, ಆ ನಾಟಕ ನೋಡಲು ಬಂದಿದ್ದವರು ನನ್ನ ನಟನೆ ಖುಷಿಯಾಗಿ 100 ರೂ ಕೊಟ್ಟಿದ್ದರು. ಮತ್ತೆ 8 ನೇ ತರಗತಿಯಲ್ಲಿರುವಾಗ ಸಂಗೊಳ್ಳಿ ರಾಯಣ್ಣ ನಾಟಕ ಮಾಡಿದ್ದೆವು,  ಅದಕ್ಕೆ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಬಂದಿತ್ತು, ಮತ್ತೆ ಡಿಪ್ಲೊಮಾ ಮಾಡುತ್ತಿರುವಾಗ ಹಾಡುವ ಗೀಳು ಹಚ್ಚಿಸಿಕೊಂಡಿದ್ದೆ, ಇದೆಲ್ಲಾ ಸಂದರ್ಭದಲ್ಲಿ ನಾನು ಯಾವುದೇ ಸ್ಟೇಜ್ ಫಿಯರ್ ಇಲ್ಲದೆ ತುಂಬಾ ಮಾಮೂಲಾಗೇ ಹೆಚ್ಚು ಆತ್ಮವಿಶ್ವಾಸದಿಂದ ಮಾಡುತ್ತ ಬಂದೆ. ಆಮೇಲೆ ಇಂಜಿನಿಯರಿಂಗ್ ಸೇರಿಕೊಂಡೆ, ಅಲ್ಲಿಯೂ ಮ್ಯಾಡ್ ಆಡ್ಸ್, ನಾಟಕ, ಮೈಮ್ ಅಂತ ವಿವಿಧ ಇವೆಂಟ್’ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಿಟ್ಟಿಸಿದ್ದೆ. ಕಾಲೇಜ್’ನ ‘ಇಂಟರ್-ಬ್ರ್ಯಾಂಚ್’ ಕಾಂಪಿಟೇಶನ್’ನಲ್ಲಿ ನಮ್ಮ ಮೆಕ್ಯಾನಿಕಲ್ ಬ್ರ್ಯಾಂಚ್ಗೆ ಫರ್ಸ್ಟ್ ಪ್ಲೇಸ್ ಬಂದಿತ್ತು. ನಮ್ಮ ಬ್ರಾಂಚ್’ನ ಎಚ್.ಓ.ಡಿ ರಾಜಶೇಖರಯ್ಯ ನನ್ನ ಭಾಗವಹಿಸುವಿಕೆಯ ಬಗ್ಗೆ ತಿಳಿದು ನನ್ನಲ್ಲಿ ಅವರು ನಿನಗೆ ಇಂಜಿನಿಯರಿಂಗ್ ಯಾಕೆ ? ಆಕ್ಟಿಂಗ್ ಆಯ್ಕೆ ಮಾಡಬಹುದಿತ್ತಲ್ಲ ಎಂದು ಹೇಳಿದರು. ಅದೇ ಮೊದಲನೇ ಸಲ ನನಗೆ ನಟನಾ ಕ್ಷೇತ್ರದ ಆಯ್ಕೆ ಬಗ್ಗೆ ಆಲೋಚನೆ ಮೂಡಿದ್ದು. ನಮ್ಮ ಏಚ್ಓಡಿ ರಾಜಶೇಖರಯ್ಯ ಹಾಗೆ ಸುಮ್ಮನೆ ಏನೇನೋ ಹೇಳುವವರು ಅಲ್ಲ, ಆದ್ದರಿಂದ ಆ ಮಾತು ಮನಸ್ಸಲ್ಲಿ ಹಾಗೆ ಕುಳಿತಿತ್ತು. ಮುಂದೆ ಬೆಂಗಳೂರಲ್ಲಿ ಕೆಲಸಕ್ಕೆ ಸೇರಿದೆ,ಮನಸ್ಸಿನಲ್ಲಿ ನಟನಾಗುವ ಆಸೆ ಇತ್ತು.ಅದಕ್ಕೆ ಸಿನಿಮೀಯ ರೀತಿಯಲ್ಲಿ ಘಟನೆಗಳು ನೆಡದು ಇವತ್ತಿನ ಹಂತ ತಲುಪಿದ್ದೀನಿ.

ನಿಮಗೆ ಈ ಕ್ಷೇತ್ರದಲ್ಲಿ ಮೊದಲ ಬ್ರೇಕ್ ಕೊಟ್ಟದ್ದು ಯಾರು?

ಮೊದಲಿಗೆ ‘ಸಿಲ್ಲಿ ಲಲ್ಲಿ’ ಸೀರಿಯಲ್‌ನಲ್ಲಿ ಸಣ್ಣ ಪಾತ್ರವನ್ನು ಮಾಡಿದೆ, ಆಮೇಲೆ ‘ಮುಕ್ತ’ ಧಾರಾವಾಹಿಯಲ್ಲಿ ಸಣ್ಣ ಪಾತ್ರ ಮಾಡಿದೆ. ಅಲ್ಲಿಗೆ ಈ ಕ್ಷೇತ್ರದ ಒಳಗೆ-ಹೊರಗೆ ಪರಿಚಯವಾಯಿತು. ಆದರೆ ನಿಜವಾದ ಬ್ರೇಕ್ ಸಿಕ್ಕಿದ್ದು, ನಾನು ಗಾಂಧಿನಗರದಲ್ಲಿ ಒಂದು ಆಡಿಶನ್’ಗೆ ಹೋಗಿದ್ದೆ, ರಮೇಶ್‌ಕೃಷ್ಣ ಡೈರೆಕ್ಟರ್ ಒಂದೇ ದಿನದಲ್ಲಿ “ಮನೆಯೊಂದು ಮೂರು ಬಾಗಿಲು’ ಮತ್ತು ‘ಪ್ರೀತಿ ಇಲ್ಲದ ಮೇಲೆ’ ಎಂಬ ಎರಡು ಧಾರಾವಾಹಿಗೆ ನನ್ನನ್ನು ಆಯ್ಕೆ ಮಾಡಿದರು. ಆದರೆ ಡೈರೆಕ್ಟರ್ ರಮೇಶ್‌ಕೃಷ್ಣ ಅವರು ಕಾರಣಾಂತರಗಳಿಂದ ಮುಂದುವರಿಯಲಿಲ್ಲಾ. ಆನಂತರ ಬಂದ ವಿನು ಬಳಂಜ ಅವರು ನನ್ನಲ್ಲಿ ಥಿಯೇಟರ್’ಗೆ ಸೇರಿ ನಟನೆ ಕಲಿತುಕೊ ಅಂತ ಹೇಳಿ ಸೀರಿಯಲ್’ನಿಂದ ತೆಗೆದು ಹಾಕಿದರು.  ಅವರು ‘ಕಲಾಗಂಗೋತ್ರಿ’ ಡಾ ಬಿ ವಿ ರಾಜಾರಾಂ ಮತ್ತೆ ಶ್ರೀನಿವಾಸ್ ಮೇಸ್ಟ್ರು ಅವರ ಸಂಸ್ಥೆಯ ನಂಬರ್ ಕೊಟ್ರು. ಆವತ್ತಿನಿಂದ ಈ ದಿನದವರೆಗೂ ಆ ಸಂಸ್ಥೆಯಲ್ಲಿ ಭಾಗವಹಿಸುತ್ತಾ ಇದ್ದೇನೆ. ಉತ್ತಮ ಕಲಾವಿದರ ಸಂಪರ್ಕ ಸಾಧಿಸಿ ಅವರಿಂದ ಸಾಕಷ್ಟು ಕಲಿತಿದ್ದೇನೆ. ಅಲ್ಲಿಂದಲೇ ನನ್ನ ನಟನೆ ನೋಡಿ ಮತ್ತೆ ನನಗೆ ಅವಕಾಶಗಳು ಒದಗಿ ಬಂತು.ಹಾಗಾಗಿ ನಾನು ವಿನು ಬಳಂಜ ಅವರನ್ನು ನಟನಾ ಕ್ಷೇತ್ರದ ಮೊದಲ ಗುರು ಎಂದು ಭಾವಿಸಿದ್ದೇನೆ..

ಆಮೇಲೆ…?

ಕಲಾಗಂಗೋತ್ರಿ’ಯಲ್ಲಿ ಇರಬೇಕಾದರೆ ‘ಅಪ್ಪ’ ಎನ್ನುವ ಸೀರಿಯಲ್’ನಲ್ಲಿ ಅವಕಾಶ ಸಿಕ್ಕಿತ್ತು. ಎಂ. ಕೆ ಮಠ ಅವರು ನಿರ್ದೇಶಕರು, ನನಗೆ ತುಂಬಾ ಸಹಾಯ ಮಾಡಿದರು. ಆ ಸಮಯದಲ್ಲಿ ಬೆಳಗ್ಗೆ ಶೂಟಿಂಗ್ ಮುಗಿಸಿಕೂಂಡು ಮಧ್ಯಾಹ್ನ ಕೆಲಸಕ್ಕೆ ಹೋಗ್ತಾ ಇದ್ದೆ. ಆಮೇಲೆ “ಮಳೆಬಿಲ್ಲು’ ಸೀರಿಯಲ್’ನಲ್ಲಿ ಅವಕಾಶ ಸಿಕ್ಕಿತು. “ಮಳೆಬಿಲ್ಲು’ ನಂತರ ಎರಡು ಸಿನೆಮಾದಲ್ಲಿ ಅವಕಾಶ ಸಿಕ್ಕಿತು. “ಆಪರೇಶನ್ ಅಂಕುಶ’ದಲ್ಲಿ ನಾಯಕ ನಟನಾಗಿ ಅಭಿನಯಿಸಿದೆ. ಮತ್ತೆ “ಮಂದಾಕಿನಿ’ ಸಿನೆಮಾದಲ್ಲಿ ದುನಿಯಾ ರಶ್ಮಿಯವರ ಜೊತ ಎರಡನೇ ನಾಯಕ ನಟನಾಗಿ ಅಭಿನಯಿಸಿದೆ. ಅದು ಮುಗಿದ ಮೇಲೆ ನನಗೆ ಹಣಕಾಸಿನ ತೊಂದರೆ ಎದುರಾಯಿತು. ಅದಕ್ಕೋಸ್ಕರ ಟಿ.ಸಿ.ಎಸ್ ಸಂಸ್ಥೆಯಲ್ಲಿ ನನ್ನ ಇಂಜಿನಿಯರಿಂಗ್ ಪದವಿಯ ಅನುಗುಣವಾದ ಕೆಲಸಕ್ಕೆ ಸೇರಿಕೊಂಡು, ಇನ್ನೂ ನಟನೆ ಮಾಡುವುದಿಲ್ಲ ಅಂತ ನಿರ್ಧರಿಸಿದ್ದೆ. ಕೆಲಸದ ಮೇಲೆ ಒಂದು ವರ್ಷ ವಿದೇಶಕ್ಕೆ ಹೋಗಿದ್ದೆ.ಪ್ರಾನ್ಸ್’ನ ತುಲುಸ್ ಎಂಬ ಅದ್ಭುತವಾದ ಜಾಗ.ಆದರೆ ನನಗೆ ಅಲ್ಲೇ ಅರಿವಾಗಿದ್ದು ನನ್ನ ನಿಜವಾಗಿಲು ಏನಾಗಲು ಹವಣಿಸುತ್ತಿದೆ ಎಂದು.ನನಗೆ ಅಲ್ಲಿ ಹಣ ಚೆನ್ನಾಗಿ ದೊರೆಯುತ್ತಿತು…ಆದರೆ ನಟನಾಗುವ ಕನಸು ನನಸಾಗುತ್ತಿರಲಿಲ್ಲಾ..ನಾನು ಓಂದು ರೀತಿಯ ಖಿನ್ನತೆಗೆ ಒಳಗಾಗಿದ್ದೆ..ತಕ್ಷಣ ನಿರ್ಧಾರ ಮಾಡಿ.ನಾಲ್ಕು ವರ್ಷಕ್ಕೆ ಹೋಗಿದ್ದಾ ನಾನು ಒಂದೇ ವರ್ಷದಲ್ಲಿ ಅಲ್ಲಿಂದ ವಾಪಸ್ ಆದೇ..ನಟನಾಗುವ ನಿರ್ಧಾರ ಮಾಡಿದೆ..

ನೀವು ಸೀರಿಯಲ್’ನಲ್ಲಿ ಮನೆ ಮಾತಾಗಿದ್ದು  ಹೇಗೆ ?

ಫ್ರಾನ್ಸ್’ನಲ್ಲಿ ಉದ್ಯೋಗ ಮಾಡಿಕೊಂಡಿದ್ದವನಿಗೆ ರಂಗ ತಾಲೀಮಿನಿಂದ , ನಟನೆ ಮಾಡದೇ ದೂರ ಉಳಿಯೋದಿಕ್ಕೆ ಕಷ್ಟ ಆಯಿತು .ಒಂದುವರೆ ವರ್ಷ ಮುಗಿಸಿ ಬೆಂಗಳೂರು ವಾಪಾಸ್ ಬಂದವನೇ ,ಈ ಸಮಯದಲ್ಲಿ ನಾನು ಸಿನಿಮಾ/ ಸೀರಿಯಲ್ ನಿಲ್ಲಿಸಿದ್ದರೂ ಸಹ ನಾಟಕದಲ್ಲಿ ಅಭಿನಯಿಸುತ್ತಾ ಇದ್ದೆ. ಈ ನಡುವೆ ನನಗೆ ಮದುವೆನೂ ಆಯ್ತು. ಆ ಹೊತ್ತಿನಲ್ಲಿ ನನಗೆ ದೊಡ್ಡ ಬ್ರೇಕ್ ಸಿಕ್ಕಿದ್ದು ಕಿರುತೆರೆಯ ಖ್ಯಾತ ನಿರ್ದೇಶಕ ಮಧುಸೂದನ್ ಅವರು ನನಗೆ  “ಪಲ್ಲವಿ-ಅನುಪಲ್ಲವಿ’ ಸೀರಿಯಲ್’ನಲ್ಲಿ ಕೊಟ್ಟ ಅವಕಾಶದ ಮೂಲಕ. ಹಗಲು ಶೂಟಿಂಗ್ ಮಾಡಿ ನೈಟ್ ಶಿಫ್ಟ್’ನಲ್ಲಿ ಕೆಲಸಾನೂ ಮಾಡಿಕೊಂಡು ¨ಮಾಡಿದ ಆ ಸೀರಿಯಲ್ ಮನೆ ಮಾತಾಗಿತ್ತು.  2013 ರಲ್ಲಿ “ಉತ್ತಮ ಖಳನಾಯಕ  “ಸುವರ್ಣ ಪರಿವಾರ” ಅವಾರ್ಡ್ ಸಿಕ್ಕಿತು. ಅವಾರ್ಡ್ ಸಿಕ್ಕಿದ ಅದೇ ದಿನ ವಿನು ಬಳಂಜ ಅವರು ನನ್ನನ್ನ ಕರೆದು “ಚಿಟ್ಟೆ ಹೆಜ್ಜೆ’ ಸೀರಿಯಲ್’ನಲ್ಲಿ  ಕೆಲಸ ಕೊಟ್ಟರು.ನನಗೆ ನಟನೆಯಲ್ಲಿ ಆರಾಧ್ಯಧೈವ ಆನಂತ್ ನಾಗ್ ಅವರ ಜೊತೆಯಲ್ಲಿ.

ನಿಮಗೆ ಈ ಕ್ಷೇತ್ರದಲ್ಲಿ ಸ್ಪೂರ್ತಿ ಯಾರು?

ವಿನು ಬಳಂಜ ಅವರ “ಚಿಟ್ಟೆ ಹೆಜ್ಜೆ’ ಸೀರಿಯಲ್’ನಲ್ಲಿ  ನನಗೆ ಅನಂತ್ ನಾಗ್ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅವರೇ ನನಗೆ ಸ್ಪೂರ್ತಿ. ಡಾ ರಾಜಕುಮಾರ್(ಅಣ್ಣಾವ್ರು), ವಿಷ್ಣುವರ್ಧನ್ (ದಾದ) ಅವರುಗಳು ಕೂಡ ಪ್ರೇರಿಪಿಸಿದವರು..ಉಳಿದಂತೆ ಪ್ರಕಾಶ್ ರೈ, ನವಾಜುದ್ದೀನ್ ಸಿದ್ದಿಕಿ, ಕಮಲ್ ಹಾಸನ್,)ಇವರಗಳ ನಟನ ಕೌಶಲ್ಯವನ್ನು ಇಷ್ಟ ಪಡುತ್ತೇನೆ.

ನಿಮ್ಮ ಮನೆಯವರ ಪ್ರೋತ್ಸಾಹ ಹೇಗಿದೆ?                                                                                                       

ಮನೆಯವರು ತುಂಬಾನೇ ಸಪೋರ್ಟ್ ಮಾಡಿದ್ದಾರೆ. ಅಮ್ಮನಿಗೆ ನನ್ನ ಪೂರ್ಣ ಪ್ರಮಾಣ ಸಿನಿಮಾ ಪಯಣ ಇಷ್ಟವಿಲ್ಲದಿದ್ದರೂ ನನ್ನ ಎಲ್ಲ ಪ್ರಯತ್ನಕ್ಕೂ ಅವಳ ಅರ್ಶೀವಾದ ಇದ್ದೆ ಇದೆ  . ಮದುವೆಯಾದ ಮೇಲೆ ಹೆಂಡತಿಯ ಸಪೋರ್ಟ್ ತುಂಬಾ ಇದೆ.ನಾನು ನಟನಾಗುವ ನಿರ್ಧಾರ ನನ್ನದು. ಆದರೆ ಅದಕ್ಕೆ ಒತ್ತು ಕೊಟ್ಟು ಬೆಂಬಲಸಿದವಳು ನನ್ನ ಪತ್ನಿ.ಉಳಿದಂತೆ ನನ್ನ ತಂದೆ – ತಂಗಿ ಹಾಗೂ ಹಲವಾರು ಗೆಳೆಯರು ಸದಾ ನನ್ನ ಬೆನ್ನೆಲುಬಾಗಿದ್ದಾರೆ.ಅವರಲ್ಲರಿಗೊ ನಿಮ್ಮ ಮೂಲಕ ನನ್ನ ಸಾಷ್ಟಂಗ ಪ್ರಣಾಮಾಗಳು.

ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಸಿನೆಮಾದಲ್ಲಿ ಆಕ್ಟ್ ಮಾಡಿದ್ದೀರಿ ಅಂತ ಕೇಳಿದೆವು. ಸ್ವಲ್ಪ ಅದರ ಬಗ್ಗೆ ಹೇಳಿ.

ನಾನು ಪೂರ್ಣ ಪ್ರಮಾಣದಲ್ಲಿ ನಟನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ ಮೇಲೆ ನನ್ನ ಗುರುಗಳಾದ ವಿನು ಬಳಂಜ ಅವರಲ್ಲಿ ನಟನಾಗಿ ಕೆಲಸ ಕೆಳುವುದಕ್ಕೆ ಹೋದೆ. ಆಗ ಅವರು ಜೀ ಕನ್ನಡದಲ್ಲಿ “ಲವ್ ಲವಿಕೆ ‘ ಸೀರಿಯಲ್’ನಲ್ಲಿ ವೀರೇಂದ್ರ ಬಾಬು ಎನ್ನುವ ವಿಭಿನ್ನ ಪೋಲೀಸ್ ಅಧಿಕಾರಿ ಪಾತ್ರ ಕೊಟ್ಟರು. ಅದು ನನ್ನ ನಟನಾ ವೃತ್ತಿ  ಜೀವನದಲ್ಲೆ ಇಲ್ಲಿಯವರಗೆ ಅತ್ಯಂತ ಹೆಚ್ಚು ಚಾಲೆಂಜ್ ಎನಿಸಿದ ಪಾತ್ರ,ಆ ಸೀರಿಯಲ್ ನೋಡಿ ದರ್ಶನ ಸರ್ ಅವರ ಮ್ಯಾನೇಜರ್ ಮಲ್ಲಿಕಾರ್ಜುನ  ಗದಗ್ ಅವರು  ನನ್ನನು ಕರಿಸಿ ‘ಜಗ್ಗುದಾದಾ’ ಸಿನೆಮಾದಲ್ಲಿ ದರ್ಶನ್‌ ಸರ್ ಅವರ ಗೆಳೆಯನ ಪಾತ್ರ ಕೊಡಿಸಿದರು. 80 ದಿನ ಮುಂಬೈ, ಗೋವಾ, ಬೆಂಗಳೂರಿನಲ್ಲಿ ಅವರ ಜೊತೆ ಶೂಟಿಂಗ್‌ನಲ್ಲಿ ಭಾಗವಹಿಸಿದ ಅಪೂರ್ವ ಅನುಭವ ನನ್ನದಾಗಿದೆ.

ದರ್ಶನ್, ಗಣೇಶ್, ಪ್ರೇಮ್, ಅರ್ಜುನ್ ಸರ್ಜಾ, ಅನಂತ್ ನಾಗ್ ಇವರಂತ ಸ್ಟಾರ್’ಗಳ ಜೊತೆ ಕೆಲಸ ಮಾಡಿ ನೀವು ಏನನ್ನು ಕಲಿತ್ತಿದ್ದೀರಿ?

ನಾನು ಯಾವ ಯಾವ ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ್ದೇನೆ, ಎಲ್ಲರಿಂದಲೂ ಬಹಳಷ್ಟು ಕಲಿತ್ತಿದ್ದೇನೆ. ದರ್ಶನ್ ಸರ್ ಅವರಿಂದ ಫಿಟ್‌ನೆಸ್, ಮೆಮೋರೀ ಪವರ್, ಟೆಕ್ನಿಕಲ್ ಸಿಬ್ಬಂದಿಗಳಿಗೆ ಗೌರವ ಕೊಡುವುದು, ಗಣೇಶ್ ಅವರಿಂದ ಹಾಸ್ಯದ ಟೈಮಿಂಗ್, ಅನಂತ್ ನಾಗ್ ಅವರಿಂದ ಸಹಜ ಅಭಿನಯ, ಡೈಲಾಗ್ ಡೆಲಿವರೀ, ರವಿಶಂಕರ್ ಅವರಿಂದ ಆವೇಶದ ಮಾತುಗಳು, ಹಾವಭಾವಗಳು,  ಸಿನೆಮಾ ಮಾತ್ರವಲ್ಲದೆ, ನಾಟಕ ರಂಗದಲ್ಲಿನ ಅನೇಕ ಮೇರು ಕಲಾವಿದರಿಂದ ಬಹಳಷ್ಟು ಕಲಿತ್ತಿದ್ದೇನೆ, ಕಲಿಯುತ್ತಿದ್ದೇನೆ, ಕಲಿಯುತ್ತ ಇರುತ್ತೇನೆ.

ನೀವು ಸೀರಿಯಲ್’ನಲ್ಲಿ ಸ್ಟಾರ್ ಈಗ. ಎಲ್ಲೋ ನಿಮಗೆ ಸಿನೆಮಾದಲ್ಲಿ ನಿಮ್ಮನ್ನು ಕಡೆಗಣಿಸಿದ್ದಾರೆ ಎಂದು ಅನ್ನಿಸುವುದಿಲ್ವ?

ನಾನು ಮೊದಲನೆಯದಾಗಿ ಒಬ್ಬ ನಟ.ಸ್ಟಾರ್ ಪದವೆಲ್ಲಾ ದೊಡ್ಡ ಮಾತು. ನನ್ನಂತಹ ಬೆಳೆಯುತ್ತೀರುವ ,ಭರವಸೆಯ ನಟನಿಗೆ ಬಳಸಿದರೆ ಅದರ ಗೌರವ ಕಮ್ಮಿ ಆಗುತ್ತದೆ. ದಯವಿಟ್ಟು ಬೇಡ. ಹೌದು, ನಾನು ಸೀರಿಯಲ್’ನಲ್ಲಿ ಗೆದ್ಡಷ್ಟು ಸಿನೆಮಾದಲ್ಲಿ ಗೆದ್ದಿಲ್ಲ. ಬಹುಶಃ ನನ್ನ ಸಾಮರ್ಥ್ಯಕ್ಕೆ ತಕ್ಕಂತಹ ಪಾತ್ರ ಸಿನೆಮಾದಲ್ಲಿ ಇನ್ನು ಸಿಕ್ಕಿಲ್ಲಾ..ಸಮಸ್ಯೆಯಿಲ್ಲಾ..ಮುಂದಿನ ದಿನ ನನ್ನ ದಿನವೆಂದು ಇಂದಿನ ದಿನ ಅಚ್ಚುಕಟ್ಟಾಗಿ ಕೆಲಸ ಮಾಡುವುದು ನನ್ನ ಸ್ಟೈಲ್..ಸೊ..ನಾಳೆ ನನ್ನದೆ ಎಂಬಾ ಭರವಸೆ ಇದೆ ನೋಡುವ..

ಸಿನಿಮಾ/ ಸೀರಿಯಲ್ ಕ್ಷೇತ್ರಕ್ಕೆ ಬರಬೇಕು ಎನ್ನುವವರಿಗೆ ನೀವು ಏನು ಹೇಳಲು ಇಚ್ಚಿಸುತ್ತೀರಿ?

ಈ ಕ್ಷೇತ್ರ ಟಿವಿ/ ಪತ್ರಿಕೆಗಳಲ್ಲಿ ಬಿಂಬಿಸುವಂತೆ ಸುಲಭ ಇಲ್ಲ, ಕಷ್ಟ ಪಡಬೇಕಾಗುತ್ತದೆ. ಇಲ್ಲಿ ಗೌರವ ಗಳಿಸಲು ನಾಯಕ/ ನಾಯಕಿ ಆಗಬೇಕೆಂದೇನು ಇಲ್ಲ, ಉತ್ತಮ/ ಪಳಗಿದ ನಟನಾದರೆ ಬಹಳ ಮರ್ಯಾದೆ ಕೊಡುತ್ತಾರೆ. ಆದರೆ ಹೊಸಬರು ತುಂಬಾ ಸ್ಟ್ರಗಲ್ ಮಾಡಬೇಕಾಗುತ್ತದೆ.ಅವಮಾನ ಕಟ್ಟಿಟ್ಟ ಬುತ್ತಿ ಆದರೆ ಸನ್ಮಾನ ಅವರವರ ಪರಿಶ್ರಮದ ಮೇಲೆ ನಿರ್ಧಾರವಾಗುತ್ತದೆ.

ನೀವೇ ಸಿನಿಮಾ ನಿರ್ಮಿಸಿ, ನಾಯಕನಾಗಬೇಕು ಅಂತ ಅನ್ನಿಸಿದಿದೆಯಾ?

ಸಿನಿಮಾ ನಿರ್ಮಾಪಕ ಆಗಬೇಕೆಂದು ಕನಸು-ಮನಸ್ಸಿನ್ನಲ್ಲಿಯೂ ಬಂದಿಲ್ಲ. ಉತ್ತಮ ನಟನಾಗಬೇಕೆಂದು ಮಾತ್ರ ಬಯಸುತ್ತೇನೆ. ಹೀರೊ ಅಂತ ಏನು ಇಲ್ಲಾ, ಪ್ರಮುಖ ಪಾತ್ರಧಾರಿಯಾಗಬೇಕೆಂದು ಬಯಸುತ್ತೇನೆ. ಉತ್ತಮ ಕೆಲಸ ಮಾಡಿದರೆ ಸ್ಟಾರ್’ಗಿರಿ  ತಾನಾಗಿಯೇ ಬರುತ್ತದೆ.ನನ್ನ ಪ್ರಮುಖ ಆದ್ಯತೆ ನಟನಾಗುವುದು…ಸ್ಟಾರ್ ಆಗುವುದು ಜನರಿಂದ..ನನ್ನಲ್ಲಿ ಆ ಯೋಗ-ಯೋಗ್ಯತೆ ಇದ್ದರೆ ನಾನು ಕೂಡ ಸ್ಟಾರ್ ಆಗಬಹುದು..ಅದಕ್ಕೆ ಕಾಲವೇ ಉತ್ತರ.   

ನಿಮ್ಮ ಮುಂದಿರುವ ಪ್ರಾಜೆಕ್ಟ್’ಗಳ ಬಗ್ಗೆ ಹೇಳುತ್ತೀರಾ?

ಜಗ್ಗು ದಾದಾ ರಿಲೀಸ್ ಆಗಿ ಗೆದ್ದಿದೆ. ಐವತ್ತು ದಿನ ಮುಗಿಸಿದೆ.

ಹೆಬ್ಬುಲಿ – ಸುದೀಪ್ ಅವರ ಸಿನಿಮಾ .

ರಾಜಕುಮಾರ – ಪುನೀತ್ ರಾಜಕುಮಾರ್ ಅವರ ಜೊತೆ .

ಹೆಸರಿಡದ ತಮಿಳು ಸಿನೆಮಾದಲ್ಲಿ ಅಭಿನಯಿಸುತ್ತಿದ್ದೇನೆ.

ದಯವಿಟ್ಟು ಗಮನಿಸಿ – ಹೂಸ ರೀತಿಯ ಸಿನಿಮಾ – ನಿರ್ದೇಶಕರು ರೋಹಿತ್ ಪದಕಿ.

ಶಿವಣ್ಣ ಮತ್ತು ಶ್ರಿ ಮರುಳಿಯವರ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದೆನೆ. ನರ್ತನ್ ಅವರು ನಿರ್ದೇಶಕರು.

ಹೆಬ್ಬುಲಿ ಚಲನಚಿತ್ರ ನನ್ನ ವೃತ್ತಿ ಜೀವನದ ಅತಿ ದೊಡ್ಡ ಗೆಲುವು ಎನ್ನಬಹುದು. ಇದು ಸಿಗಲಿಕ್ಕೆ ಕಿರುತೆರೆ ನಿರ್ಮಾಪಕ ದೇವು (ಮುಂಗಾರು ಮಳೆ ಖ್ಯಾತಿಯ ಕ್ಯಾಮೆರ ಮ್ಯಾನ್ ಕೃಷ್ಣ  ಅವ್ರ ತಮ್ಮ) ಅವರು ಕಾರಣ.

ಸುವರ್ಣ ವಾಹಿನಿಗೆ ” ಜಸ್ಟ್ ಮಾತ್ ಮಾತಲ್ಲಿ ” ಎಂಬಾ ಧಾರವಾಹಿಯಲ್ಲಿ ಅಭಿನಯಿಸುತ್ತೀದ್ದೆನೆ.

ಉದಯ ವಾಹಿನಿಗೆ ಈಗಾಗಲೆ ಪ್ರಸಾರದಲ್ಲಿರುವ “ಸುಂದರಿ” ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದೇನೆ.

ಮುಂದಿನ ದಿನಗಳಲ್ಲಿ ಯಶಸ್ಸುನಿಮ್ಮದಾಗಲಿ, ಆಲ್ದಿಬೆಸ್ಟ್

ಚಿತ್ರ ಕೃಪೆ: Maiyaphotography

Facebook ಕಾಮೆಂಟ್ಸ್

ಲೇಖಕರ ಕುರಿತು

Readoo Staff

Tailored news content, just for you.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!