ಕಥೆ

ಶುದ್ಧಿ ಭಾಗ -೧

ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರೋ ಉಪಹಾರದರ್ಶಿನಿಯಲ್ಲಿ ಕೆಂಪು ಚಟ್ನಿ ಹೆಚ್ಚು ಮೆತ್ತಿಸಿಕೊಂಡು ತಿಂದಮಸಾಲೆ ದೋಸೆಯ ಸ್ವಾದ ಸವಿಯುತ್ತಾ ಅಲ್ಲೇಎದುರಿಗಿದ್ದ ಬೋಂಡ-ಬಜ್ಜಿ ಅಂಗಡಿಯಲ್ಲಿ ಮನೆಗೆಬಾಳೇಕಾಯಿಬೋಂಡ,ದಪ್ಪಮೆಣಸಿನಕಾಯಿ ಮಸಾಲೆಕಟ್ಟಿಸಿಕೊಂಡು ಹುಟ್ಟೇಶ ಉಡುಪಿ ಶ್ರೀ ಕೃಷ್ಣ ಭವನದಮುಂದೆ ನಿಲ್ಲಿಸಿದ್ದ ಗಾಡಿಯ ಕಡೆಗೆ ನಡೆದು ಹೊರೆಟ. ತಿಂಡಿತಿನಿಸು ಎಂದರೆ ಹುಟ್ಟೇಶನಿಗೆ ಬಲು ಪ್ರೀತಿ. ತನ್ನ ಮಗಳುಶಾಂತಿಗು ಅದೇ ಹುಚ್ಚು ಹಿಡಿಸಿದ್ದನು. ಪಕ್ಕದಲ್ಲಿ ಜೋಳಸುಡುತ್ತಿದ್ದನ್ನು ಕಂಡು ಹೆಂಡತಿ ಕೌಸಲ್ಯ ಮತ್ತು ಮಗುಇದ್ದಿದ್ದರೆ ಇದನ್ನು ಕೊಡೆಸಬಹುದಿತ್ತು,ಮನೆಗೆ ಕೊಂಡುಹೋದರೆ ಕೆಡುತ್ತದೆ ಎಂದು ಯೋಚಿಸಿ ಮುನ್ನಡೆದ. ಶಾಂತಿಹುಟ್ಟುವ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಇದ್ದಮೌನದಿಂದ ಆಕೆಗೆ ಶಾಂತಿ ಎಂದು ಹೆಸರಿಡಲುನಿರ್ಧರಿಸಿದ್ದ. ತುಂಬಾ ಗಲಾಟೆ ಆಗ್ತಿದ್ದಿದ್ರೆ ಇನ್ನೇನುಹೆಸರಿಡುತ್ತಿದ್ದೆನೋ ಎಂದು ಯೋಚಿಸಿ,ತನ್ನ ಪೆದ್ದು ತನಕ್ಕೆತಾನೆ ನಸುನಕ್ಕ. ಹೆಂಡತಿ ಕೌಸಲ್ಯಾಳ ಒಳ್ಳೆಯ ಸ್ವಭಾವಕ್ಕೆಅಭಾವ ಇಲ್ಲ. ಆಗಾಗ ರೇಗುವುದು, ಮುನಿಸಿಕೊಳ್ಳುವುದುಸರ್ವೇ ಸಾಮಾನ್ಯ. ಅದನ್ನ ತಡೆಯಲಾರದ ಗಂಡ ಎಂಥಾಗಂಡನಾದನು? ಈ ಡಿವಿಜಿ ರಸ್ತೆಯೇ ಒಂದು ರೀತಿಯಮಜ. ಸದಾ ಮಿಣ ಮಿಣ ಹೊಳೆಯುತ್ತಿರುತ್ತದೆ.ಮದುವೆಗು ಮುನ್ನ ತಾನು ತನ್ನ ಗೆಳೆಯರು ಅಪ್ಪಟ ಕನ್ನಡದಹುಡುಗಿಯರನ್ನು ನೋಡಲು ಬರುತ್ತಿದ್ದ ನೆನಪು. ಈಗಎಲ್ಲಿಯ ಕನ್ನಡಿಗರು. ಜೀನ್ಸ್ ಸಿಗಿಸಿ, ಟಿಶರ್ಟ್ ಧರಿಸಿಬರೋ ನಾರ್ತ್ ಹುಡುಗಿಯರೇ ಹೆಚ್ಚು. ಈಗ ಇವನ್ನೆಲ್ಲಾನೋಡೋ ಆಸೆಯೆ ಕಮ್ಮಿ ಆಗಿದೆ. ಹಾಗಂತ ರಸಿಕತನಕಮ್ಮಿ ಆಗಿದೆ ಅಂತಲ್ಲ. ಅದಕ್ಕೆ ಅಲ್ವೆ,ಮನೆಗೆ ಬಜ್ಜಿಬೋಂಡ?

ಎರಡು ಬೆಡ್ ರೂಮಿನ ಮನೆ. ಬಾಡಿಗೆ ಆರುವರೆ ಸಾವಿರ.ಹೆಚ್ಚು ಅಂತ ಹೇಳೋಕಾಗಲ್ಲ. ಕಡಿಮೆ ಅಂತಾನುಹೇಳೋದು ಕಷ್ಟ. ಮನೆ ಮಾಲೀಕರು ಒಳ್ಳೆಯವರು.ತಕರಾರಿಲ್ಲ. ಬದುಕು ಬಣ್ಣ ಬಣ್ಣವಾಗಿಲ್ಲದಿದ್ದರು,ಬರುಡಾಗಂತು ಇಲ್ಲ. ಆದರೆ ಹುಟ್ಟೇಶನಿಗೆ ಒಂದೇ ಒಂದುಚಿಂತೆ. ಕಷ್ಟ ಪಡುತ್ತಿರುವುದು ತಾನು. ಆದರೆ ತನ್ನ ಕಷ್ಟವನ್ನುಹೆಂಡತಿಯ ಮುಂದಿಟ್ಟರೆ ಗೌರವ ಕಮ್ಮಿಯಾಗೋದುಖಚಿತ. ಈ ಚಿಂತೆ ಎಷ್ಟೋ ದಿನಗಳಿಂದ ಹುಟ್ಟೇಶನ್ನತಿನ್ನುತ್ತಿತ್ತು.

ಹುಟ್ಟೇಶನದ್ದು ಬಡ ಕುಟುಂಬ. ವಾಸವಿದ್ದದ್ದು ಕುಣಿಗಲ್ಲು.ತನ್ನ ತಂದೆ ಬೂಟ್ ಹೊಲಿದು ಸಂಸಾರ ನಡೆಸುತ್ತಿದ್ದರು.ಅಮ್ಮನಿಗೆ ಅಪ್ಪನ ಕೆಲಸದ ಕಂಡರೆ ಏನೋ ಅಸಡ್ಡೆ. ಪಕ್ಕದಮನೆಯಲ್ಲಿ ಸತ್ಯನಾರಾಯಣ ಪೂಜೆಗೆ ಹೋದಾಗ,ಮಾವನ ಮನೆಗೆ ಬೇಸಿಗೆ ರಜಕ್ಕೆ ಹೋದಾಗ ತನ್ನಪರಿಸ್ಥಿತಿಯನ್ನ ಕೆದಕುತ್ತಾರೆ ಅನ್ನೋ ಮುಜುಗರ ಕೂಡ. “ನೋಡೋ ಹುಟ್ಟೇಶ,ನಾನು ಬೆಳಗ್ಗೆ ಬ್ರಾಹ್ಮಣ,ಒಂಭತ್ತರಿಂದ ಆರು ಕೆಲಸಕ್ಕೆ ಕೂತ್ರೆ ಶೂದ್ರ, ಬದ್ಕಿನ ಜೊತೆಹೋರಾಟ ಮಾಡ್ತಿರೋ ಕ್ಷತ್ರಿಯ, ತಿಂಗ್ಳ್ ಕೊನೇಲಿಬ್ಯಾಂಕಲ್ಲಿ ದುಡ್ಡು ಹಾಕಿದಾಗ ವೈಶ್ಯ. ದುಡ್ಮೆಗೆ ಅವ್ಮಾನಇರಬಾರದು ಮರಿ. ಹೊಟ್ಟೆಪಾಡಿಗೆ ಎಂಥಾ ಜಾತಿಆದ್ರೇನು?” ಎಂದು ಅಪ್ಪ ಪಂಚೆ ಕಟ್ಟುತ್ತಿದ್ದರು. ಅಮ್ಮನಿಗೆಈ ಮಾತು ಕೇಳಿ ಕೋಪ ಉಕ್ಕೇರುತ್ತಿತ್ತು. ’ಬ್ರಾಹ್ಮಣನಾಗಿಹುಟ್ಟಿ ಯಪ್ರಾ-ತೊಪ್ರಾ ಮಾತಾಡ್ತಾನೆ ನಿಮ್ಮಪ್ಪ’ ಅಂತಸಿಡಿಮಿಡಿಗೊಳ್ತಿದ್ರು. ಹುಟ್ಟೇಶನಿಗೆ ಮನಸಿನ ಆಳದಲಿನೋವಾಗೋದು. ತಂದೆಯ ಕಂಡರೆ ಅವನಿಗೆ ಒಂದುರೀತಿಯ ಗೌರವವಿತ್ತು.

ಕೆಲ ಕಾಲದ ಹಿಂದೆ ದೊಡ್ಡಪ್ಪ, ಅತ್ತೆ ಎಲ್ಲರೂ ಆಸ್ತಿವಿಚಾರವಾಗಿ ಮೋಸ ಮಾಡಿದ ಮೇಲೆ ಅಪ್ಪನಿಗೆ ಲೆದರ್ಕಾರ್ಖಾನೆಯಲ್ಲಿ ಕೆಲಸ ಹೋಗಿ ಮನೆಯಲ್ಲಿ ಮೂರುತಿಂಗಳು ಸುಮ್ಮನೆ ಕೂತಿದ್ದರು. ಮೂರು ಹೊತ್ತಿನ ಊಟಕ್ಕುಕಷ್ಟವಾಗಿತ್ತು. ’ಜಪ ತಪ ಕಲ್ತಿದ್ರೆ ಗುಡೀಲಿ ಪೂಜಾರಿಕೆಲ್ಸಾನಾದ್ರು ಮಾಡ್ಬಹುದಿತ್ತು. ಮೂದೇವಿ ತಂದು.ಅಣ್ಣಅಕ್ಕ ಸೇರಿ ಮನೇ ದೋಚ್ಕೊಂಡ್ ಹೋಗಬೇಕಾದ್ರೆ ಗರಬಡಿದವನ ಹಂಗ್ ಕೂತಿದ್ದ.ಈಗ ಏನ್ ಮಾಡ್ತಾನಂತೆಕೇಳೋ ನಿಮ್ಮಪ್ಪನ್ನ ಹುಟ್ಟೇಶ?’ ಎಂದು ಅಮ್ಮ ಸೆರಗಿನಲ್ಲಿಕಣ್ಣೀರು ಒರೆಸಿಕೊಂಡಿದ್ದಳು.ಅಮ್ಮ ಒಳ್ಳೆಯವಳೇ. ಆದರೆಸಮಾಜದಲ್ಲಿ ಸ್ಥಾನ ಮಾನಕ್ಕೆ ಹೋರಾಡೋಮನೋಭಾವದವಳು. ಹೋರಾಟ ಬೀದಿಯಲ್ಲಿರಲಿಲ್ಲ,ಮನೆಗಷ್ಟೇ ಸೀಮಿತವಾಗಿತ್ತು, ಮನದಲ್ಲಷ್ಟೇಸೀಮಿತವಾಗಿತ್ತು. ಅಂದೇ ಅಪ್ಪ ಕೆಲಸ ಹುಡುಕಿಕೊಂಡುಹೊರಟಿದ್ದರು.ಎರಡು ದಿನದ ನಂತರ ಮೂರು ಚಿಕ್ಕಿ ತಂದುತಿನ್ನಿಸಿದರು. ’ಯಾವ್ ಖುಷೀಗೋ?’ ಎನ್ನುತ್ತಾ ಅಮ್ಮ ಕೈಒಡ್ಡಿದ್ದಳು.

‘ನನಗೆ ಕೆಲಸ ಸಿಕ್ಕಿದೆ ಕಣೇ ಸುಕನ್ಯ.’

‘ಎಲ್ರೀ?’ ಎಂದು ರಾಗ ತೆಗೆದಳು. ಕೆಲಸಕ್ಕೆ ಮರ್ಯಾದೆಹುಟ್ಟಿ ಅಮ್ಮನ ಮುಖ ಅರಳಿತು.

‘ಚಮನ್ ರಾಜ್ ಫ಼ುಟ್ ವರ್ಕ್ಸ್. ಚಪ್ಪಲಿ ಅಂಗ್ಡೀಲಿ ಚಪ್ಪಲಿಹೊಲಿಯೋ ಕೆಲ್ಸ’ ಅಪ್ಪ ಎಂದರು.

ಅಮ್ಮ ಅಪ್ಪನನ್ನು ಬಹುವಚನದಲ್ಲಿ ಕರೆದದ್ದು ಅಂದೇಕೊನೆ. ನಂತರ ಸುಮಾರು ಹದಿನೆಂಟು ವರ್ಷಏಕವಚನದಲ್ಲೇ ವಾದ-ಸಂವಾದಗಳು ನಡೆಯುತ್ತಿತ್ತು. ಅಪ್ಪಸತ್ತು ನಾಲ್ಕು ವರ್ಷವಾಗಿದೆ. ಗಾಳಿಪಟದ ಹಿಂದೆಬಾಲಂಗೋಚಿಯಂತೆ ಅಮ್ಮನೂ ಕೆಲ ದಿನಗಳ ನಂತರಹೋದಳು. ಎಷ್ಟೇ ಕೋಪವಿದ್ದರೂ ಆತ್ಮಗಳುಜೋಡಿಯಾಗೆ ಹೋದವು ಅನ್ನೋ ತಾತ್ವಿಕ ಯೋಚನೆಹುಟ್ಟೇಶನಿಗೆ ಅಂದು ಬಂದಿತ್ತು. ಆದರೆ ಮನುಷ್ಯನಮರ್ಯಾದೆ ಅವನ ಕಾರ್ಯ ರೂಪಿಸತ್ತೆ ಅನ್ನೋದಂತುಅವನ ಮನದಾಳದಲ್ಲಿ ಅಚ್ಚಾಗಿಹೋಗಿತ್ತು.

ಮನೆಯ ಮುಂದೆ ನಿಂತ. ಚಿಂತೆ ಆವರಿಸಿಕೊಂಡರೆಮನೆಯಲ್ಲಿ ನೂರಾರು ಪ್ರಶ್ನೆಗಳಿಗೆ ಉತ್ತರಕೊಡಬೇಕಾಗಬಹುದು. ನಿಟ್ಟುಸಿರುಬಿಟ್ಟ. ಒಮ್ಮೆ ಬಜ್ಜಿತುಂಬಿದ ಪೊಟ್ಟಣವನ್ನು ಮೂಗಿನ ಬಳಿ ತಂದು ಮೂಸಿನೋಡಿದ. ಘಮ್ಮೆನಿಸಿತು. ಮೂಡಿಗೆ ಬಂದು ಒಳನಡೆದ.

ಕೌಸಲ್ಯ ಮೃದು ಸ್ವಭಾವದ ಹುಡುಗಿ. ಹುಟ್ಟೇಶನ ಅಪ್ಪಸಾಯುವ ಮುನ್ನ ಹುಟ್ಟೇಶನ ಮದುವೆ ನೋಡಬೇಕುಅನ್ನೋ ಆಸೆ ವ್ಯಕ್ತ ಪಡಿಸಿದರು.ಊರಿನ ಕಡೆ ನೆಂಟರುತೋರಿಸಿದ ಹುಡುಗಿ ಕೌಸಲ್ಯ. ಊರು ತಿಪಟೂರು.ಅಪ್ಪದತ್ತಾತ್ರೇಯ ತಿಪಟೂರಿನಲ್ಲೇ ದಿನಸಿ ಅಂಗಡಿನಡೆಸುತ್ತಿದ್ದಾರೆ. ಮನೆ ನಿಭಾಯಿಸುವ ಕೆಲಸ ಅಮ್ಮನದು.ತಂಗಿ ಕುಮುದ ಟಿಪಟೂರಿನ ಸರ್ಕಾರಿ ಫ಼ಸ್ಟ್ ಗ್ರೇಡ್ಕಾಲೇಜಿನಲ್ಲಿ ಬಿಎ ಓದುತ್ತಿದ್ದಾಳೆ. ಕೌಸಲ್ಯ ಪಿಯುಸಿ ಪಾಸ್ಆಗದೆ ಅಪ್ಪನಿಗೆ ಅಮ್ಮನಿಗೆ ಸಹಾಯ ಮಾಡಿಕೊಂಡುಇದ್ದುಬಿಟ್ಟಳು. ಚಿಕ್ಕ ವಯಸ್ಸಿನಿಂದಲೂ ಚುರುಕುಹುಡುಗಿಯಾಗಿದ್ದರೂ ಓದು ಅವಳಿಗೆ ಒಲಿಯಲಿಲ್ಲ.ಫಲಿತಾಂಶ ಬಂದಾಗ ಬಿಕ್ಕಿ ಬಿಕ್ಕಿ ಅತ್ತಿದ್ದಳು. ‘ಫ಼ೇಲಾದ್ರೆಏನಂತೆ? ಹುಡ್ಗೀರು ಪಾಸ್ ಆಗಿ ದೇಶ ಆಳ್ಬೇಕ? ಅಳಬ್ಯಾಡಬಿಡಮ್ಮ.’ ಎಂದು ಅಪ್ಪ ಸಮಾಧಾನ ಹೇಳಿದ್ದರು.

ಅಮ್ಮನಿಗೆ ಇದ್ದ ಏಕೈಕ ಚಿಂತೆ ಅಂದರೆ ಕೌಸಲ್ಯನ ಮದುವೆ.ಆಫೀಸರಿಗೆ ಕೊಟ್ಟು ಮದುವೆ ಮಾಡೋಣ ಅಂತ ಇದ್ದ ಆಸೆಕೌಸಲ್ಯ ಫ಼ೇಲ್ ಆದ ಮೇಲೆ ಹುಸಿಯಾಯಿತು. ಹಾಗಾಗಿಸಾಧಾರಣ ಕ್ಲರ್ಕೋ, ಅಟೆಂಡೆಂಟಿಗೋ ಮದುವೆ ಮಾಡೋಯೋಚನೆ ಹತ್ತಿತ್ತು. ಫ಼ೇಲಾಗಿ ಎರಡು ವರ್ಷಗಳ ನಂತರ ಈಚಿಂತೆಯನ್ನು ಯಜಮಾನರ ಮುಂದೆ ವ್ಯಕ್ತ ಪಡಿಸಿದರು.

‘ಇಷ್ಟ್ ಬೇಗ ಮದ್ವೆ ಮಾಡೋದ್ ಬ್ಯಾಡ. ಸುಮ್ನೆ ತಲೆಹರಟಬ್ಯಾಡ ನೀನು. ಅರ್ಥ ಆಯ್ತ?’ ಎಂದುಯಜಮಾನರು ಗದರಿದ್ದಕ್ಕೆ ಕೌಸಲ್ಯನ ತಾಯಿ,’ಇನ್ನೇನುಮನೇಲೆ ಇಟ್ಕೊಂಡು ಸಾಕೋಕಾಗತ್ತೇನ್ರಿ? ಫ಼ೇಲ್ ಬೇರೆಆಗಿದಾಳೆ. ಊರೋರೆಲ್ಲಾ ಕೇಳಿದ್ರೆ ಏನ್ ಹೇಳೋದು?ಈಗಾಗ್ಲೆ ಪ್ರಶ್ನೆ ಮಾಡ್ತಿದಾರೆ.’ ಎಂದು ಪೇಚಾಡಿದರು.

‘ಮೊದ್ಲು  ನಿಮ್ ತಿಗಾ ವರ್ಸ್ಕಳ್ಳಿ, ಆಮೇಲ್ ನಮ್ ಕಣ್ಣೀರ್ವರೆಸೀವ್ರಂತೆ ಅಂತ ಉಗ್ದು ಕಳ್ಸು’ ಎಂದುದತ್ತಾತ್ರೇಯನವರು ದರ್ಪ ತೋರಿದ್ದರು. ಇದರ ಹಿಂದಿನಸೂಕ್ಷ್ಮ ಕೌಸಲ್ಯನಿಗೂ ತಿಳಿದಿತ್ತು. ಅಪ್ಪನಿಗೆ ಇಬ್ಬರೂ ಹೆಣ್ಣುಮಕ್ಕಳ ಮೇಲೆ ಅಪೂರ್ವ ಪ್ರೀತಿ.ಮದುವೆ ಮಾಡಿ ಕಳಿಸಿಕೊಟ್ಟರೆ ಮಗಳು ಕಣ್ಣಮುಂದಿರೋದಿಲ್ಲ ಅನ್ನೋ ನೋವುಈ ರೀತಿಯ ಕೋಪವಾಗಿ ಹೊರಹೊಮ್ಮುತ್ತಿತ್ತು ಎಂದುಅವಳು ಅರಿತಳು. ಆದರೆ ತಾನು ಇನ್ನು ಹೆಚ್ಚು ದಿನಮನೆಯಲ್ಲೇ ಉಳಿದರೆ ಸುತ್ತಮುತ್ತಲೂ ಮಾತಿಗೆ ಬೀಳ್ತೀನಿ.ಅಪ್ಪ ಅಮ್ಮನಿಗೂ ಹೊರೆಯಾಗ್ತೀನಿ. ಡಿಗ್ರೀ ಮಾಡಿದ್ದಿದ್ರುಇನ್ನೊಂದು ವರ್ಷದ ನಂತರ ಮದುವೆ ಆಗಲೇಬೇಕಿತ್ತು.ಈಗ ಹುಡುಕೋಕೆ ಶುರು ಮಾಡಿದರೆ ಇನ್ನೊಂದುವರ್ಷದಲ್ಲಿ ನನ್ನ ಮದುವೆ ನಿಶ್ಚಯ ಆಗಬಹುದು. ಅಪ್ಪನಿಗೆಇದನ್ನು ಸೂಕ್ಷ್ಮವಾಗಿ ಬಿಡಿಸಿ ಹೇಳಬೇಕು ಎಂದು ನಿಶ್ಚಯಿಸಿಒಂದು ರಾತ್ರಿ ಊಟವಾದ ಮೇಲೆ ಅಪ್ಪ ಟಿವಿನೋಡುತ್ತಿದ್ದಾಗ ಪಕ್ಕದಲ್ಲಿ ಹೋಗಿ ಕುಳಿತಳು.

‘ಅಪ್ಪ, ಎಷ್ಟ್ ದಿನ ಅಂತ ನನ್ನ ಸಾಕ್ತ್ಯ? ಅಮ್ಮ ಹೇಳೋದುಸರಿ. ನಾನೇನು ಮತ್ತೆ ಬರದೇ ಇರ್ತೀನ? ನನ್ನ ಮದುವೆಗೆಗಂಡು ಹುಡುಕು. ನಾನು ತಯಾರಿದ್ದೀನಿ. ನೀನು ತಲೆಕೆಡೆಸ್ಕೋಬ್ಯಾಡ.’ ಎಂದು ಮೆಲುಧ್ವನಿಯಲ್ಲಿ ಹೇಳಿದಳು.

‘ಯೋಚನೆ ಮಾಡಿ ಹೇಳ್ತಿದ್ಯೇನೆ ತಾಯಿ?’

‘ಯೋಚನೆ ಮಾಡೆ ಹೇಳ್ತಿದ್ದೀನಿ.’

‘ನಿನ್ನ ಬಿಟ್ಟು ಹ್ಯಾಗೆ ಇರಲಿ ಅಮ್ಮ?’ ಎಂದು ಅಪ್ಪಕಣ್ತುಂಬಿಕೊಂಡರು. ಕೌಸಲ್ಯ ಅಪ್ಪನನ್ನು ಅಪ್ಪಿಕೊಂಡುಕಣ್ಣೀರಿಟ್ಟಳು. ಇದಾದ ಎಂಟು ತಿಂಗಳಿಗೆ ಕೌಸಲ್ಯ ಮತ್ತುಹುಟ್ಟೇಶನ ಲಗ್ನವಾಯಿತು. ಕೊಡೋದು ತೊಗೊಳ್ಳೋದುಎಲ್ಲವೂ ಸರಾಗವಾಗಿ ನೆರವೇರಿತು.

‘ಹುಡುಗನ ಅಪ್ಪ ಪರ್ವಾಗಿಲ್ಲ. ಅಮ್ಮ ಸ್ವಲ್ಪ ಜೋರು.ಗಂಡಂಗೆ ಏಕವಚನದಲ್ಲಿ ಬೈತಾರೆ. ಸಂಭಾಳಿಸ್ಕೊಂಡುಹೋಗು ಮಗು’ ಎನ್ನುತ್ತಾ ಮಗಳನ್ನು ತಂದೆ ತಾಯಿಕಳಿಸಿಕೊಟ್ಟಿದ್ದರು. ’ಹುಡುಗ ಆಫೀಸರ್ ಅಂತೆ” ಎಂದುಕೆಲವರು ಮಾತಾಡಿಕೊಂಡರೆ ಇನ್ನು ಕೆಲವರು ‘ಇಲ್ಲಾರೀ,ಆಫೀಸಲ್ಲಿ ಗುಮಾಸ್ತನ ಕೆಲಸ ಮಾಡ್ತಿರಬೇಕು’ಎಂದುಮೂಗು ಮುರಿದಿದ್ದರು. ಸೊಸೆಯನ್ನು ಕಂಡು ಅವಳಿಂದಸೇವೆ ಪಡೆದು ಕೊನೆಗೆ ಮೊಮ್ಮಗಳನ್ನೂ ಆಡಿಸಿಯೇಹುಟ್ಟೇಶನ ತೀರ್ಥರೂಪರು ಕೊನೆ ಉಸಿರೆಳೆದಿದ್ದರು.

ಈಗ ಸಂಸಾರ ಹದದಲ್ಲಿದೆ. ಏರುಪೇರುಗಳು ಸಾಮಾನ್ಯ.ಗಂಡ ಕೆಲಸದಲ್ಲಿದ್ದಾನೆ. ಇತ್ತೀಚೆಗೆ ಆಫೀಸಿನಲ್ಲೇ ಕಾರ್ಕೊಟ್ಟಿದ್ದಾರೆ. ಮನೆಗೆ ತರುವ ಭಾಗ್ಯವಿಲ್ಲವಷ್ಟೆ. ಶಾಂತಿಚುರುಕು ಬುದ್ಧಿಯ ಮಗು. ಭಗವಂತ ಇಟ್ಟಹಾಗೆ ಅಂತಇರುವುದರಲ್ಲಿ ನೆಮ್ಮದಿ ಕಾಣುತ್ತಿದ್ದಾಳೆ ಕೌಸಲ್ಯ.

ಕದ ತಟ್ಟಿ ಕೈಲಿ ಚೀಲ ಹಿಡಿದು ಒಳಗೆ ಬಂದವನೆ ಹುಟ್ಟೇಶನೇರ ಅಡುಗೆಮನೆಗೆ ನಡೆದು ಹೋದ. ತಟ್ಟೆ ತೆಗೆದುಅದರೊಳಗೆ ತಿನಿಸುಗಳನ್ನು ತುಂಬಿ ಓದುತ್ತಾ ಕುಳಿತಿದ್ದಮಗುವಿನ ಎದುರು ಇಟ್ಟ.ಶಾಂತಿಗೆ ಆನಂದ. ‘ಎಷ್ಟೋಂದ್ತಂದಿದ್ದೀಯಲ್ಲ ಅಪ್ಪ? ಎಲ್ಲಿ ಹೋಗಿದ್ದೆ ಇವತ್ತು?’ ಎಂದುಆಲೂಗಡ್ಡೆ ಬೋಂಡ ಒಂದನ್ನು ಕೈಗೆತ್ತಿಕೊಂಡಳು.

‘ಬರ್ತಾ ಗಾಂಧಿ ಬಜ಼ಾರ್ ಮೇಲೆ ಬಂದೆ ಮರಿ. ಹಾಗೆನಿನಗಿಷ್ಟ ಅಂತ ಇವೆಲ್ಲಾ ತಂದೆ. ಇದನ್ನ ತಂದಿದ್ದಕ್ಕೆ ನೀನುಒಂದ್ ಪ್ರಾಮಿಸ್ ಮಾಡಬೇಕು.’

‘ಏನಪ್ಪ?’

‘ಚೆನ್ನಾಗಿ ಓದಿ ಐಪಿಎಸ್ ಆಫೀಸರ್ ಆಗ್ತೀನಿ ಅಂತಪ್ರಮಾಣ ಮಾಡ್ಬೇಕು.’

ಇದನ್ನು ಕೇಳಿದ ಕೌಸಲ್ಯನಿಗೆ ಗಂಡನ ಆಸೆಯ ಹಿಂದಿರೋತಿಳಿ ಮನಸ್ಸಿನ ಅರಿವಾಯಿತು. ’ಈಗಿನ್ನು ಓಟ ಶುರುಮಾಡಿರೋ ಕೂಸದು. ಆಗ್ಲೆ ಗುರಿ ತೋರಿಸಿ ಹೆದರಿಸ್ತೀರಲ್ರಿ’ಎಂದಳು.

‘ಗುರಿ ಗೊತ್ತಿಲ್ಲದೆ ಕುರಿ ಕಾಯೋದು ಕಷ್ಟ ಅಂತದೊಡ್ಡೋರ್ ಹೇಳ್ತಾರೆ. ಈಗ್ಲಿಂದ ತಯಾರಿ ಮಾಡಬೇಕು.’

ಅಪ್ಪ ಮಗಳು ಕೂತು ಇರುವ ಬಜ್ಜಿ ಬೋಂಡಮುಗಿಸಿದರು. ಅಮ್ಮನಿಗೆ ದಪ್ಪಮೆಣಸಿನಕಾಯಿ ಮಸಾಲಇಷ್ಟವೆಂದು ಮಗಳೇ ಒತ್ತಾಯ ಮಾಡಿ ಪೂರ್ತಿತಿನಿಸಿದಳು.ಎಣ್ಣೆ ತಿಂದರೆ ಖಾಯಿಲೆ ಮಲಗಬೇಕಾದೀತುಎಂದು ಅಮ್ಮ ಎಚ್ಚರ ಹೇಳಿದರೂ ಶಾಂತಿ ಕೇಳಲಿಲ್ಲ. ’ಅಪ್ಪ,ಇವತ್ತು ಕಾರ್ ಮನೆಗೆ ತರಲೇ ಇಲ್ಲವಲ್ಲಪ್ಪಾ’ ಎನ್ನುತ್ತಾಕೈಗೆ ಅಂಟಿದ್ದ ಉಪ್ಪು ಖಾರವನ್ನು ಹೀರಿಕೊಂಡಳು. ಇದನ್ನುಕೇಳಿದ ಹುಟ್ಟೇಶನಿಗೆ ಎದೆ ಝಗ್ ಎಂದಿತು. ಒಂದು ಕ್ಷಣಮೌನವಾಗಿದ್ದು ’ಆಫೀಸಿನಲ್ಲಿ ಪರ್ಮೀಶನ್ ತಗೋಬೇಕುಮರಿ. ಅವೆಲ್ಲಾ ತಲೆ ನೋವು ಯಾಕೆ ಅಂತ ತರೋದಿಲ್ಲ’ಎಂದು ಗಡಿಬಿಡಿಯಲ್ಲಿ ಉತ್ತರ ಕೊಟ್ಟ.

‘ರೀ, ಮಗಳು ಅಷ್ಟ್ ಕೇಳ್ತಾಳೆ. ಒಂದ್ ದಿನ ತರೋದುಕಷ್ಟಾನೇನ್ರಿ? ನಾಳೆ ಹ್ಯಾಗಿದ್ರು ಶನಿವಾರ. ನಿಮ್ ಬಾಸ್ಹತ್ರ ಮಾತಾಡಿ ತಗೊಂಡ್ ಬನ್ನಿ. ಸೋಮವಾರತೊಗೊಂಡ್ ಹೋಗಿ ಇಟ್ರಾಯ್ತು. ಹೆಂಡ್ತಿ ಮಕ್ಳಿಗಿಲ್ಲದ ಸುಖಯಾವ ಸುಖಾ ರೀ?’ ಎಂದು ಮಗಳ ಪರ ಕೌಸಲ್ಯಮಾತಾಡಿದಳು.

ಇಕ್ಕಟ್ಟಿಗೆ ಸಿಕ್ಕಿ ಬಿದ್ದವನಂತೆ ಹುಟ್ಟೇಶನ ಮನಸ್ಸು ವಿಲ ವಿಲಎನ್ನಲು ಶುರುವಾಯ್ತು. ಚಿಂತೆ ಮತ್ತೆ ಮನಸ್ಸಿಗಂಟಿತು.ಇದೆಂಥಾ ಪರಿಸ್ಥಿತಿ? ಶಾಂತಿ ತನ್ನನ್ನು ಕೇಳುತ್ತಿರುವುದು ಇದುಮೊದಲಲ್ಲ. ಅವಳಿಗೆ ಕಾರಿನಲ್ಲಿ ಓಡಾಡೋ ಆಸೆ.ಎಲ್ಲರಂತೆ ಸ್ಕೂಲಿಗೆ ಕಾರಿನಲ್ಲಿ ಬಿಡಿಸಿಕೊಳ್ಳುವ ಆಸೆ. ಪುಟ್ಟುಹುಡುಗಿ,ಆಸೆ ಇರದೇ ಇರುತ್ತದೆಯೆ? ಅದರಂತೆಯೇಕೌಸಲ್ಯಳಿಗೂ ಗಂಡನ ಕಾರಿನಲ್ಲಿ ಕೂತು ಮಾಲ್ಗಳಿಗೆಹೋಗುವ ಆಸೆ ಇದೆ. ಅಲ್ಲಿ ಖರೀದಿ ಏನುಇಲ್ಲದಿದ್ದರೂ,ಕಾರಿನಲ್ಲಿ ತಿರುಗಾಡುವ ಮಟ್ಟಿಗೆ ನಾವುಬೆಳೆದೆವು ಎನ್ನುವ ಹೆಮ್ಮೆ ಅನುಭವಿಸುವ ಆಸೆ ಆಕೆಗಿದೆ.ಆದರೆ ಹೇಗೆ ಕಾರ್ ತರೋದು? ಇಷ್ಟೆಲ್ಲಾ ದುಡಿಯುವುದುಇವರಿಬ್ಬರ ಸಂತೋಷಕ್ಕಲ್ಲವೇ? ಅದೊಂದು ಕಾರ್ ಮನೆಗೆತಂದು ಇವರಿಬ್ಬರನ್ನು ಒಂದು ದಿನವಿಡೀ ತಿರುಗಾಡಿಸಿದರೆಏನು ತಪ್ಪು? ಆದರೆ ತರೋದು ಹೇಗೆ? ಎಂದು ಯೋಚನಾಲಹರಿಯಲ್ಲಿ ತೇಲುತಿದ್ದ ಹುಟ್ಟೇಶನನ್ನು ಶಾಂತಿಅಲುಗಾಡಿಸಿದಳು.

‘ಒಂದೇ ಒಂದ್ ರೌಂಡ್ ಅಪ್ಪ. ಆಮೇಲೆ ಮತ್ತೆ ಕೇಳಲ್ಲ.ಪ್ರಾಮಿಸ್’

‘ಈಗ ಓದ್ಕೋ. ನಾನು ಯೋಚಿಸಿ ಹೇಳ್ತೀನಿ’ ಎನ್ನುತ್ತಾಅಲ್ಲಿಂದ ಎದ್ದು ಹುಟ್ಟೇಶ ರೂಮಿನೊಳಗೆ ನಡೆದ.

ನಡುರಾತ್ರಿಯ ಮೌನದಲ್ಲಿ ಮಗುವನ್ನು ಮಧ್ಯದಲ್ಲಿಮಲಗಿಸಿಕೊಂಡು ಕೌಸಲ್ಯ ಮತ್ತು ಹುಟ್ಟೇಶ ಮಲಗಿದ್ದರು.ಹುಟ್ಟೇಶನಿಗೆ ಇನ್ನು ನಿದ್ರೆ ಹತ್ತಿರಲಿಲ್ಲ. ಕೌಸಲ್ಯ ಕೂಡಅತ್ತಿಂದಿತ್ತ ಹೊರಳಾಡಿ ನಿದ್ದೆ ಮಾಡಲುಪ್ರಯತ್ನಿಸುತ್ತಿದ್ದಳು.’ಇನ್ನು ನಿದ್ದೆ ಬರಲಿಲ್ವ ಕೌಸಲ್ಯ?’ಎನ್ನುತ್ತಾ ಹುಟ್ಟೇಶ ಕೌಸಲ್ಯನ ಕಡೆಗೆ ತಿರುಗಿದ.

ಒಂದು ಕ್ಷಣ ಸುಮ್ಮನಿದ್ದು ಕೌಸಲ್ಯ ’ಒಂದೇ ಒಂದು ದಿನಕಾರಿನಲ್ಲಿ ಓಡಾಡೋ ಆಸೆ ಪಡತ್ತೆ ಮಗು. ಈ ಭಾನುವಾರಹ್ಯಾಗಿದ್ರು ರಜ ಇರತ್ತೆ. ತಗೊಂಡ್ ಬನ್ರಿ.’

ಹುಟ್ಟೇಶ ಅವಳನ್ನೇ ನೋಡುತ್ತಾ ಮಲಗಿದ್ದ. ಸ್ವಲ್ಪಹೊತ್ತಿನಲ್ಲಿ ಕೌಸಲ್ಯನಿಗೆ ನಿದ್ರೆ ಬಂದಿತ್ತು ಎಂದು ಅವಳಉಸಿರಿನ ಏರಿಳಿತದಿಂದ ತಿಳಿಯಿತು. ಹುಟ್ಟೇಶನ ಮನಸ್ಸುತನಗೇ ತಿಳಿಯದ ಆಳಕ್ಕೆ ಕುಸಿದಂತಾಗಿತ್ತು. ಕಾರ್  ತನ್ನದುಎಂದು ಹೇಳಿಕೊಳ್ಳುವ ಧೈರ್ಯ ಹೇಗೆ ಬಂದಿತ್ತುಎನ್ನುವುದರ ಬಗ್ಗೆ ಯೋಚಿಸಿದ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohit Padaki

ಕನ್ನಡದ ಯುವ ಲೇಖಕರಲ್ಲಿ ಒಬ್ಬರು. ದೃಶ್ಯ ಮಾಧ್ಯಮದಲ್ಲಿ ಸಾಕಷ್ಟು ಕಾರ್ಯ ನಿರ್ವಹಿಸಿ ಬಿಗ್ ಬಾಸ್, ವೀಕೆಂಡ್ ವಿತ್ ರಮೇಶ್ ಎಂಬ ಶೋಗಳಿಗೆ ಇವರ ಬರವಣಿಗೆಯಿದೆ. ಇತ್ತೀಚೆಗೆ ಬಿಡುಗಡೆಯಾದ ಆಟಗಾರ ಚಿತ್ರಕ್ಕೆ ಸಂಭಾಷಣೆ ಸಾಹಿತ್ಯ ಇವರದೇ ಆಗಿತ್ತು. ಮೊನಚಾದ ಪದಗಳಿಗೆ ಹೆಸರುವಾಸಿಯಾಗಿರುವ ಇವರ ಬರಹ ಪ್ರಭಾವಶಾಲಿ, ಹಾಗು ಹೊಸತನ ತುಂಬಿರುತ್ತದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!