ಕಥೆ

ವಿಧಿಯಾಟ…೬

ವಿಧಿಯಾಟ…5

    ಪರಿಚಯವಾದ ಸ್ವಲ್ಪ ದಿನಕ್ಕೆ  ಗಣೇಶನ ಹಬ್ಬದಂದುಅವರಿಬ್ಬರನ್ನು ಊಟಕ್ಕೆ  ಕರೆಯಲು ಹೋಗಿದ್ದಳುಜಾಹ್ನವಿ..ಆ ರೂಮಿನ ಗೋಡೆಯ ಮೇಲೆ ನೇತು ಹಾಕಿದ್ದಚಿತ್ರಪಟಗಳು ಅವಳ ಕಣ್ಮನ ಸೆಳೆದಿದ್ದವು. ಅವಳುಅವುಗಳನ್ನೇ ನೋಡುತ್ತ ನಿಂತಾಗ ಜನಾರ್ಧನ “ನಮ್ಮಸುಶಾಂತ್ ಸಾಹೇಬರು ಚಿತ್ರಕಲೆಯಲ್ಲಿ ನಿಪುಣರು… …ಇವು ಸುಶಾಂತ್ ಬರೆದಿರೋ ಚಿತ್ರಗಳು ..ಹೀಗೇನಿಂತುಕೊಂಡು ನಿನ್ನ ಚಿತ್ರ ಬರಿ ಎಂದರೆ ಬರೆದು ಬಿಡುತ್ತಾನೆ…”ಎಂದ.. ಅವಳಿಗೆ ಅವನು ಬರೆಯುತ್ತಿದ್ದ ಚಿತ್ರಗಳುಇಷ್ಟವಾಗಿದ್ದವು. ಅವರು ಗಣೇಶನ ಹಬ್ಬಕ್ಕೆ ಜಾಹ್ನವಿಯಮನೆಗೆ ಬಂದು ಹೋದಾಗಿನಿಂದ ಸುಶಾಂತ್ ಜಾಹ್ನವಿಯಸ್ನೇಹ ಗಾಢವಾಗುತ್ತಾ ಹೋಯಿತು. ಜನಾರ್ಧನನಿಗೆಇದ್ಯಾವುದೂ ಗೊತ್ತಾಗಲಿಲ್ಲ. ಅವನು ಜಾಹ್ನವಿಯನ್ನು ಪ್ರೀತಿಸಲಾರಂಭಿಸಿದ್ದ. ಮೂರು ವರ್ಷದ ಗಾಢವಾದಸುಶಾಂತ್ ಜಾಹ್ನವಿಯ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು.ಸುಶಾಂತ್ ಓದು ಮುಗಿದ ತಕ್ಷಣ ಅಪ್ಪನಿಗೆ ತಿಳಿಸಿಮದುವೆಯಾಗುವುದಾಗಿ ಹೇಳಿದ್ದ. ಯಾವುದೇ ಕಾರಣಕ್ಕೂಕೈಬಿಡುವುದಿಲ್ಲವೆಂದು ಆಶ್ವಾಸನೆ ನೀಡಿದ್ದ.

   ಜನಾರ್ಧನನ ನಡುವಳಿಕೆ ಏಕೋ ಜಾಹ್ನವಿಗೆ ಅವನುತನ್ನನ್ನು ಪ್ರೀತಿಸುತ್ತಿದ್ದಾನೆಂದು ಅನುಮಾನ ತರಿಸುತ್ತಿತ್ತು.ಅದನ್ನು ಸುಶಾಂತ್ ಮುಂದೆ ಜಾಹ್ನವಿ ವ್ಯಕ್ತಪಡಿಸಿದರೆಸುಶಾಂತ್ ” ಹಾಗೆಲ್ಲಾ ಮಾಡಲ್ಲ ಅವನು ….ಅವನಗುರಿಯ ಬಗ್ಗೆ ಛಲ ಇದೆ ಅವನಿಗೆ …ನನ್ನ ಹಾಗೇಪ್ರೀತಿಯಲ್ಲಿ ಬಿದ್ದರೆ ಗುರಿ ಮರೆತುಹೋಗುತ್ತದೆ ಅಂತ ಭಯಅವನಿಗೆ …”ಎಂದು ಅವಳತ್ತ ಕಣ್ಣು ಮಿಟುಕಿಸಿ. ಜಾಹ್ನವಿಕೋಪದಿಂದ “ಹಾಗಾದರೆ ನನ್ನನ್ನು ಪ್ರೀತಿಸಿದ್ದರಿಂದ ನಿಮ್ಮಗುರಿ ಮರೆತುಹೋಗಿದೆಯಾ…? ನಿಮ್ಮ ಗುರಿ ನೆನಪಿಸಿಕೊಳ್ಳಿ…ನಾನು ಹೊರಡುತ್ತೇನೆ..”ಎನ್ನತ್ತ ಎದ್ದು ನಿಂತುಹೊರಡಲನುವಾದಳು. ಸುಶಾಂತ್ ನಗುತ್ತಾ “ನೀನುಕೋಪದಲ್ಲೂ ಮುದ್ದಾಗಿ ಕಾಣುತ್ತೀಯಾ ಕಣೇ …ಸುಮ್ಮನೇನಿನ್ನನ್ನು ರೇಗಿಸಲು ಹಾಗೆಂದೆ..”ಎಂದ ಅವಳಮುಂಗುರುಳನ್ನು ತನ್ನ ಬೆರಳಲ್ಲಿ ಸುತ್ತುತ್ತ. ಹೀಗೆಮನೆಯಿಂದ ದೂರದ ಪಾರ್ಕ್’ನಲ್ಲಿ ಅವರಿಬ್ಬರೂಭೇಟಿಯಾಗುತ್ತಿದ್ದರು. ಜಾಹ್ನವಿಯ ಅಪ್ಪನಿಗೆ ಇಷ್ಟು ಬೇಗಅವರಿಬ್ಬರ ಪ್ರೀತಿಯ ವಿಷಯ ತಿಳಿಯಬಾರದೆಂದು.ಅವನು ಹಾಳೆಯೊಂದರಲ್ಲಿ ಅವಳ ಚಿತ್ರ ಬರೆಯುತ್ತಮೈಮರೆಯುತ್ತಿದ್ದ..ಯಾವಾಗಲೂ ಹೇಳುತ್ತಿದ್ದ..”ನಿನ್ನಕಣ್ಣುಗಳು ಏನೋ ವಿಶೇಷವಾಗಿವೆ ಜಾನೂ…ಒಮ್ಮೊಮ್ಮೆಹೀಗೇ ಅವುಗಳನ್ನ ನೋಡುತ್ತಾ ಕುಳಿತು ಬಿಡಲಾ ಅಂತಅನ್ನಿಸುತ್ತದೆ….”ಎಂದು. ಅವಳಿಗೂ ಗೊತ್ತಿತ್ತು ಅವಳಕಣ್ಣುಗಳು ಅವಳ ಸೌಂದರ್ಯದ ಪ್ಲಸ್ ಪಾಯಿಂಟ್ಎನ್ನುವುದು…..

   ಅದೊಂದು ದಿನ ಗೆಳತಿಯರೊಡನೆ ಪಿಕ್ನಿಕ್ ಹೋಗುತ್ತಿದ್ದೇನೆಂದೂ ..ಬರುವುದು ಸ್ವಲ್ಪತಡವಾಗುತ್ತದೆಂದು ಅಪ್ಪ ಅಮ್ಮನಿಗೆ ತಿಳಿಸಿ ಸುಶಾಂತ್ಜೊತೆ ಹೊರಟಳು ಜಾಹ್ನವಿ ..ಆ ದಿನ ಸುಶಾಂತ್’ನ ಹುಟ್ಟುಹಬ್ಬ. ಸುಶಾಂತ್ ಹಿಂದಿನ ದಿನವೇ ಅಪ್ಪನನ್ನು ಮಾತಾಡಿಸಿಆಶೀರ್ವಾದ ಪಡೆದು ಬರುವುದಾಗಿ ಜನಾರ್ಧನನಿಗೆ ತಿಳಿಸಿಊರಿಗೆ ಹೋಗಿದ್ದ. ಹೀಗಾಗಿ ಜನಾರ್ಧನ ಹಿಂದಿನ ದಿನವೇಶುಭಾಶಯ ತಿಳಿಸಿದ್ದ. ಸುಶಾಂತ್ ತಂದೆಯ ಆಶೀರ್ವಾದಪಡೆದು ಬೆಳಿಗ್ಗೆ ಅವರಿಬ್ಬರೂ ಮಾತಾಡಿಕೊಂಡಿದ್ದಂತೆಬೇಗನೇ ಹೊರಟ. ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಪಾಲ್ಸ್’ ಗೆಹೋಗಿ ಅವನ ಆ ವಿಶೇಷ ದಿನವನ್ನು ಅಲ್ಲಿಯೇ ಕಳೆದುಬರಲು ತೀರ್ಮಾನಿಸಿದ್ದರು. ಬೇಡ ಬೇಡವೆಂದರೂಸುಶಾಂತ್ ಅವಳನ್ನು ನೀರಿಗೆಳೆದ. ನೀರಿನಲ್ಲಿಮನಬಂದಂತೆ ಆಟವಾಡಿದರು…ಒಬ್ಬರ ಮೇಲೊಬ್ಬರುನೀರೆರೆಚಿದರು…ಖುಷಿ ಪಟ್ಟರು. ಆಮೇಲೆ ನೆನಪಾಗಿದ್ದುಇನ್ನೊಂದು ಜೊತೆ ಬಟ್ಟೆ ತಂದಿಲ್ಲ ಎಂದು. ಸುಶಾಂತ್”ನಾನು ಹೀಗೇ ಹೋದರೆ ಏನಾಗುವುದಿಲ್ಲ….ಆದರೆಜಾಹ್ನವಿಯನ್ನು ಹೇಗೆ ಒದ್ದೆ ಬಟ್ಟೆಯಲ್ಲಿ ಕರೆದುಕೊಂಡುಹೋಗುವುದು …?”ಎಂದು ಯೋಚಿಸಿ “ಹತ್ತು ನಿಮಿಷಇಲ್ಲೇ ಇರು ಬಂದೆ”ಎಂದು ಅವಳ ಉತ್ತರಕ್ಕೂ ಕಾಯದೇಹೊರಟ. ಹತ್ತಿರದಲ್ಲೇ ಬಟ್ಟೆ ಅಂಗಡಿಗಳಿದ್ದಿದ್ದರಿಂದತೊಂದರೆಯಾಗಲಿಲ್ಲ. ಅವಳಿಗೆ ತನಗೆ ಒಂದೊಂದು ಜೊತೆಬಟ್ಟೆ ತೆಗೆದುಕೊಂಡ. ಅವಳಿಗೆ ಬಟ್ಟೆ ಕೊಟ್ಟ. ಆದರೆಬದಲಾಯಿಸುವುದೆಲ್ಲಿ? ಎನ್ನುವ ಯೋಚನೆ ಮೂಡಿತು.ಅಲ್ಲಿಯೇ ಬಟ್ಟೆ ಬದಲಾಯಿಸಲು ರೂಮುಗಳಿದ್ದವಾದರೂಜನ ಕಿಕ್ಕಿರಿದು ತುಂಬಿದ್ದರಿಂದ ಅವಳನ್ನು ಕರೆದುಕೊಂಡುಹೋಟೆಲ್’ನತ್ತ ನಡೆದ. ಗಂಡ ಹೆಂಡತಿ ಎಂದು ಬರೆಸಿಒಂದು ರೂಮ್ ಪಡೆದ. ಇನ್ನೂ ತುಂಬಾ ಟೈಮ್ಇದ್ದಿದ್ದರಿಂದ ಕೇಕ್ ಕಟ್ ಮಾಡಿ ಸ್ವಲ್ಪ ಸಮಯಅವಳೊಂದಿಗೆ ಹರಟೆ ಹೊಡೆಯುವುದು ಅವನಯೋಚನೆಯಾಗಿತ್ತು. ಅವಳಿಗೆ ಮುಜುಗರವಾಯಿತು.ಆದರೆ ಬೇರೆ ದಾರಿಯಿಲ್ಲದೇ ಅವನ ಹಿಂದೆ ನಡೆದಳು.ಅವನ ಮೇಲೆ ಸಂಪೂರ್ಣ ನಂಬಿಕೆ ಅವಳಿಗಿತ್ತು.ಹೇಗಿದ್ದರೂ ತಾನು ಮದುವೆಯಾಗುವ ಹುಡುಗಅಲ್ಲವೇ…? ತೊಂದರೆಯಿಲ್ಲ ಎನಿಸಿತು…..

  ನೀರಲ್ಲಿ ನೆನೆದಿದ್ದ ಅವಳ ಮೈಮಾಟ ಎದ್ದು ಕಾಣುತ್ತಿತ್ತು.ಅದೇನೆನ್ನಿಸಿತೋ ಸುಶಾಂತ್’ಗೆ ಅವಳನ್ನು ಹಿಂದಿನಿಂದಬಂದು ತಬ್ಬಿಕೊಂಡ. ಅವನು ಇದೇ ಮೊದಲುತಬ್ಬಿಕೊಂಡಿದ್ದು. ಇಬ್ಬರೂ ಪಾರ್ಕ್’ನಲ್ಲಿಭೇಟಿಯಾಗುತ್ತಿದ್ದರಾದ್ದರಿಂದ ಆ ಅವಕಾಶ ಅವನಿಗೆಸಿಕ್ಕಿರಲಿಲ್ಲ. ಅವಳಿಗೆ ಕಸಿವಿಸಿಯಾಯಿತು ..”ಸುಶಾಂತ್ಇದೆಲ್ಲಾ ಮದುವೆಗೆ ಮೊದಲು ಬೇಡ ..ತೆಗಿ ಕೈ” ಎಂದಳು.ಸುಶಾಂತ್ “ನಾವಿಬ್ಬರೂ ಮದುವೆಯಾಗುವವರು ….ಹೀಗೆತಬ್ಬಿಕೊಂಡರೆ ತಪ್ಪಲ್ಲ ಜಾನೂ…ಈ ದಿನ ನನ್ನ ಹುಟ್ಟು ಹಬ್ಬನೀನು ನನಗೊಂದು ಮುತ್ತು ಕೊಡಲೇಬೇಕು “ಎಂದು ಹಟಹಿಡಿದ ಕೈ ಸಡಿಲಿಸದೇ. ಯೌವನದ ಹುಚ್ಚು ಕಾಮನೆಗಳುಅವಳ ದೇಹವನ್ನು ಕೆಣಕಿದ್ದವು. “ಇಲ್ಲ “ಎನ್ನಲು ಮನಸುಬರಲಿಲ್ಲ. ಅವನಾಗಲೇ ಮುಂದುವರೆದಿದ್ದ. ಅವಳೂಪ್ರತಿಭಟಿಸಲಿಲ್ಲ. ಅವನು ತನ್ನನ್ನು ಮದುವೆಯಾಗುವಹುಡುಗ ಎನ್ನುವುದಷ್ಟೇ ಅವಳ ತಲೆಯಲ್ಲಿತ್ತು. ಅವರುಮಾಡುತ್ತಿರುವುದು ತಪ್ಪು ಅನ್ನಿಸಲೇ ಇಲ್ಲ. ತಪ್ಪು ನಡೆದುಹೋಗಿತ್ತು. ಅವಳದಾಗಿದ್ದ ಸ್ವತ್ತನ್ನು ಸುಶಾಂತ್ದೋಚಿಬಿಟ್ಟಿದ್ದ. ಅವಳು ಅಳತೊಡಗಿದಳು.

“ಸುಶಾಂತ್ ನಾವು ಹೀಗೆ ದುಡುಕಬಾರದಿತ್ತು..ಇನ್ನೆರಡುತಿಂಗಳು ಓದು ಮುಗಿದ ತಕ್ಷಣಮದುವೆಯಾಗುತ್ತಿದ್ದೆವು..”ಎನ್ನುತ್ತ ಅಳು ಜೋರುಮಾಡಿದಳು. ಸುಶಾಂತ್ ತಲೆ ತಗ್ಗಿಸಿದ. ತಾನುಜೀವಕ್ಕಿಂತಲೂ ಹೆಚ್ಚು ಪ್ರೀತಿಸಿದ ಹುಡುಗಿಯನ್ನು ಒಂದುಕ್ಷಣದ ಆಕರ್ಷಣೆಗಾಗಿ ಕಾಮನೆಗಾಗಿ ಕಣ್ಣೀರುಹಾಕಿಸಿದೆನೆಲ್ಲಾ ಎಂದು…”ನಾನು ಮಾಡಿದ್ದು ತಪ್ಪು…ನಾನುಅವಳ. ಒಳ್ಳೆಯ ಮನಸ್ಸನ್ನು ಪ್ರೀತಿಸಿದ್ದೆ …ಅವಳ ದೇಹದಮೇಲೆ ಕಣ್ಣು ಹಾಕಿ ಅಂತ ಪ್ರೀತಿಯನ್ನು  ಹೊಲಸುಮಾಡಿಬಿಟ್ಟೆ..” ಎನಿಸಿತು..ಅಸಹ್ಯವಾದ ಭಾವನೆಯೊಂದುಮೂಡಿತು ಅವನ ಮನದಲ್ಲಿ..ಅಳುತ್ತ ಕುಳಿತ ಜಾಹ್ನವಿಯತಲೆ ಸವರಿ “ಕ್ಷಮಿಸು ಜಾನೂ …ಇನ್ನೆರಡು ತಿಂಗಳು ಇಬ್ಬರಓದು ಮುಗಿಯುತ್ತದೆ. ಅಪ್ಪನಿಗೆ ನಮ್ಮ ಪ್ರೀತಿಯನ್ನುತಿಳಿಸುತ್ತೇನೆ..ಮದುವೆಯಾಗುತ್ತೇನೆ …ಅಳಬೇಡಸುಮ್ಮನಿರು …ನಾನೀದೀನಿ..”ಎಂದು ಸಂತೈಸಿದ…

    ಮನೆಗೆ ಬಂದ ಮಗಳು ಮಂಕಾಗಿದ್ದಾಳೆ ಎನಿಸಿತುಸುಂದರಮ್ಮನಿಗೆ..ಆಚೆ ತಿರುಗಾಡಿ ಸುಸ್ತಾಗಿರಬೇಕೆಂದುಸುಮ್ಮನಾದರು. ಎರಡು ದಿನದ ನಂತರವೂ ಅವಳುಮಂಕಾಗಿರುವುದನ್ನು ಕಂಡು “ಏನಾಯ್ತು ಜಾನೂ….ಎರಡು ದಿನದಿಂದ ನೋಡ್ತಾ  ಇದೀನಿ ಮಂಕಾಗಿಕೂತಿರ್ತಿಯಾ…ಹುಷಾರಿದೀಯಾ ತಾನೇ ಎಂದು ಹಣೆಮೇಲೆ ಕೈಯಿಟ್ಟರು..”ಏನಿಲ್ಲಾ ಅಮ್ಮ….ಪರೀಕ್ಷೆ  ಹತ್ತಿರಬಂತಲ್ವಾ … ರಾತ್ರಿ ಸ್ವಲ್ಪ ಜಾಸ್ತಿ ಓದ್ತಿನಿ ಅಷ್ಟೇ …”ಅಂದಳುಜಾಹ್ನವಿ ಹಣೆಯ ಮೇಲಿನ ಅಮ್ಮ ಕೈತೆಗೆಯುತ್ತ.ಇರಬಹುದೇನೋ… ಎಂದು ಸುಂದರಮ್ಮ ಸುಮ್ಮನಾದರು.ಆ ಎರಡು ತಿಂಗಳು ಕಳೆದರೆ ಸಾಕಾಗಿತ್ತವಳಿಗೆ..ತಾನುತಿಂಗಳು ತಪ್ಪಿದಾಗ ಅವಳಿಗೆ ಅನುಮಾನ ಬಂದುಸುಶಾಂತ್ ಗೆ ಹೇಳಿದ್ದಳು…”ಇದೊಂದು ತಿಂಗಳು ಜಾನೂ..ಕಷ್ಟ ಆದರೂ ಸಹಿಸಿಕೊ….”ಎಂದಿದ್ದ ಸುಶಾಂತ್.ಇಂಜಿನಿಯರಿಂಗ್ ಕೊನೆಯ ಸೆಮಿಸ್ಟರ್’ನ ಪರೀಕ್ಷೆಗಳುಮುಗಿದಿದ್ದವು. ಜನಾರ್ಧನ,ಸುಶಾಂತ್ ಇಬ್ಬರಿಗೂ ಕ್ಯಾಂಪಸ್ ಇಂಟರ್’ವ್ಯೂನಲ್ಲಿ ಒಳ್ಳೆಯ ಕಂಪನಿಯಿಂದಉದ್ಯೋಗದ ಅವಕಾಶಗಳು ಬಂದಿದ್ದವು. ಜನಾರ್ಧನ ತನ್ನಪ್ರೀತಿಯನ್ನು ಜಾಹ್ನವಿಗೆ ಹೇಳಲು ಕಾದಿದ್ದ. ಇತ್ತಸುಶಾಂತ್’ಗೆ ತಾನು ಗರ್ಭಿಣಿ ಎನ್ನುವ ವಿಷಯ ಹೇಳಿದ್ದಳುಜಾಹ್ನವಿ..ಅಪ್ಪನಿಗೆ ತನ್ನ ಪ್ರೀತಿಯ ವಿಷಯ ತಿಳಿಸಲುಊರಿಗೆ ಹೊರಟ. ಜನಾರ್ಧನನಿಗೆ ಮರುದಿನಬರುವುದಾಗಿ ತಿಳಿಸಿದ. ಆ ದಿನ ಸಂಜೆ ಆಚೆಯಿಂದ ಮನೆಗೆಬಂದ ಜಾಹ್ನವಿ ತಲೆ ಸುತ್ತಿ ಬಿದ್ದಿದ್ದಳು..ಜೊತೆಗೆ ವಾಂತಿಬೇರೆ…ರಾಮಣ್ಣ. ಸುಂದರಮ್ಮ ಮಗಳಿಗೇನಾಯಿತೋ..ಎಂದುಕೊಂಡು ಬೀದಿಯ ಕೊನೆಯಲ್ಲಿದ್ದ ಕ್ಲಿನಿಕ್‌’ಗೆಕರೆದುಕೊಂಡು ಹೋದರು..ಜಾಹ್ನವಿ ಭಯದಿಂದ ಬೇಡಬೇಡವೆಂದರೂ ಬಲವಂತವಾಗಿ ಕರೆದುಕೊಂಡುಹೋಗಿದ್ದರು…ಸುದ್ದಿ ತಿಳಿದ ರಾಮಣ್ಣ ಸುಂದರಮ್ಮನಿಗೆಆಘಾತವಾಗಿತ್ತು. ಜಾಹ್ನವಿ ಮದುವೆಯಾಗದೆಗರ್ಭಿಣಿಯಾಗಿದ್ದಳು…..! ಮನೆಗೆ ಬಂದ ರಾಮಣ್ಣ ಅವಳಕೆನ್ನೆಗೆ ಬಾರಿಸುತ್ತಲೇ ಹಾರ್ಟ್’ಅಟ್ಯಾಕ್ ಆಗಿ ಕುಸಿದುಬಿದ್ದವರು ಮೇಲೇಳಲಿಲ್ಲ. ಅಳುತ್ತ ರೂಮಿನ ಬಾಗಿಲುಹಾಕಿ ಕೊಂಡ ಸುಂದರಮ್ಮ ಯಾರು ಬಡೆದರೂ ಬಾಗಿಲುತೆರೆಯಲಿಲ್ಲ. ಸುಂದರಮ್ಮ ನೇಣಿಗೆ ಶರಣಾಗಿದ್ದರು.

    ಜನಾರ್ಧನ ಅದೇ ಬೀದಿಯಲ್ಲಿದ್ದಿದ್ದರಿಂದ ವಿಷಯತಿಳಿದು ಅವಳ ಮನೆಗೆ ಓಡಿ ಬಂದ. ಮನೆ ತುಂಬಾಜನವಿದ್ದರು. ಜಾಹ್ನವಿ ಕಲ್ಲಿನಂತೆ ಕುಳಿತಿದ್ದಳು. ಅಲ್ಲಿದ್ದವರುಜಾಹ್ನವಿಯನ್ನು ಮನಸಿಗೆ ಬಂದಂತೆ ಬೈಯುತ್ತಿದ್ದರು.ಜನಾರ್ಧನನಿಗೆ ಅವಳು ಗರ್ಭಿಣಿ ಎಂದು ತಿಳಿದಾಗಮನಸು ಒಡೆದುಹೋಗಿತ್ತು. ಅವನು ಬಂದಿದ್ದನ್ನು ಅವಳುನೋಡಿದ್ದಳು..ಅವನ ಮುಖದಲ್ಲಿನ ಅಸಹ್ಯವನ್ನುಗಮನಿಸಿದ್ದಳು. ಅಷ್ಟರಲ್ಲಿ ಅವನ ಫೋನ್ ರಿಂಗಣಿಸಿತು.ಸುಶಾಂತ್’ಗೆ ಅಪಘಾತವಾಗಿದೆಯೆಂದೂ ಅವನನ್ನುಆಸ್ಪತ್ರೆಗೆ ಸೇರಿಸಿದ್ದಾಗಿಯೂ ಸುಶಾಂತ್’ನ ತಂದೆ ಕರೆಮಾಡಿದ್ದರು. ಅವನಿಗೆ ಎರಡೆರಡು ಆಘಾತ…! ಆಸ್ಪತ್ರೆಗೆಬಂದಾಗ ಆ ಕಹಿ ಸುದ್ದಿಯ ಜೊತೆಗೆ ಮತ್ತೊಂದುಆಘಾತ….! ಮಗ ಬದುಕುವ ಭರವಸೆ ಇಲ್ಲವೆಂದು ಡಾಕ್ಟರ್ಹೇಳಿದಾಗ ಮೂರನೇ ಬಾರಿಗೆ ಹಾರ್ಟ ಅಟ್ಯಾಕ್ ಆಗಿಸುಶಾಂತನ ತಂದೆ ಅಲ್ಲಿಯೇ ಇದ್ದ ಬೆಂಚ್’ನ ಮೇಲೆ ಮಲಗಿಇಹಲೋಕ ತ್ಯಜಿಸಿದ್ದರು. ಸುಶಾಂತನ ತಂದೆಅನಾಥಾಶ್ರಮದಿಂದಬಂದವರಾಗಿದ್ದರಿಂದ..ಸಂಬಂಧಿಕರಿರಲಿಲ್ಲ. ಅವರೂಕೂಡಾ ಅನಾಥೆಯಾಗಿದ್ದ ಅನಸೂಯಮ್ಮನವರನ್ನೇ ಕೈಹಿಡಿದಿದ್ದರು. ಅಲ್ಪ ಬಂಡವಾಳ ಹಾಕಿ ಚಿಕ್ಕದೊಂದುಉದ್ಯಮ ಪ್ರಾರಂಭಿಸಿದವರು ಅದರಲ್ಲಿ ಯಶಸ್ಸು ಕಂಡುದೊಡ್ಡದೊಂದು ಉದ್ಯಮದ ಒಡೆಯರಾಗಿದ್ದರು.ಹಣವಂತರಾಗಿದ್ದರೇನು ಬಂತು ಫಲ…ಅನಸೂಯಮ್ಮನವರನ್ನು ಉಳಿಸಿಕೊಳ್ಳಲು ಆಗಲಿಲ್ಲಅವರಿಗೆ..ಸುಶಾಂತ್ ಎರಡು ವರ್ಷದವನಾಗಿದ್ದಾಗ ಕಾರುಅಪಘಾತದಲ್ಲಿ ತೀರಿಕೊಂಡಿದ್ದರು..ಮಗನಿಗೋಸ್ಕರ ತಮ್ಮಜೀವನವನ್ನು ಮುಡಿಪಾಗಿಟ್ಟಿದ್ದರು. ಮಗನಿಗೆ ಮಲತಾಯಿತರಲು ಅವರಿಗಿಷ್ಟವಿರಲಿಲ್ಲ. ಅದಕ್ಕೆಂದೇ ಇನ್ನೊಂದುಮದುವೆಯಾಗಲಿಲ್ಲ ಅವರು. ಅಂತಹ ಮಗ ಬದುಕುವಭರವಸೆ ಇಲ್ಲವೆನ್ನುವ ಮಾತನ್ನು ಅವರ ಹೃದಯಸಹಿಸಲಾಗದೆ ಬಡಿತ ನಿಲ್ಲಿಸಿತ್ತು. ಜನಾರ್ಧನ ಮಗನಂತೆಮುಂದೆ ನಿಂತು ಅವರ ಅಂತ್ಯಕ್ರಿಯೆಮುಗಿಸಿದ್ದ….ಸುಶಾಂತ್ ಕೋಮಾ ಸ್ಥಿತಿಗೆ ಹೋದ ದಿನಜಾಹ್ನವಿಯ ಅಪ್ಪ ಅಮ್ಮನ ಅಂತ್ಯಕ್ರಿಯೆ ಮುಗಿದಿತ್ತು..ಜೊತೆಗೆ ಯಾರೂ ಇಲ್ಲದೇ ಒಂಟಿಯಾಗಿದ್ದಳು..ಅತ್ತುಅತ್ತು ಕಣ್ಣೀರು ಬತ್ತಿ ಹೋಗಿದ್ದವು..ಸುಶಾಂತ್ ಮೊಬೈಲ್’ಗೆಕರೆ ಮಾಡಿದರೆ “ನೀವು ಕರೆ ಮಾಡಿರುವ ಚಂದಾದಾರರುವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ” ಎಂದುಕೇಳುತ್ತಿತ್ತು..ಒಂದೆರಡು ದಿನ ಕಳೆಯುವ ಹೊತ್ತಿಗೆ ಜಾಹ್ನವಿಹೈರಾಣಾಗಿದ್ದಳು..ಆಗ ಅವಳ ನೆರವಿಗೆ ಬಂದಿದ್ದುರವಿ..ಜಾಹ್ನವಿ ತಂದೆಯ ತಂಗಿಯ ಮಗ…ಅವನೇಅವಳನ್ನು ಸುಶಾಂತ್ ಊರಿಗೆ ಕರೆದುಕೊಂಡು ಹೋಗಿದ್ದ.ಆದರೆ ಸುಶಾಂತ್’ಗೆ ಅಪಘಾತವಾಗಿರುವುದು ಪಾಪಜಾಹ್ನವಿಗೆ ಗೊತ್ತೇ ಆಗಲಿಲ್ಲ….ಈ ಮೊದಲು ಸುಶಾಂತ್ಕೊಟ್ಟಿದ್ದ ಅಡ್ರೆಸ್ ಹುಡುಕುತ್ತ ಹೋದಾಗ ಅವನ ಭವ್ಯಬಂಗಲೆಗೆ ಬೀಗ ಹಾಕಿತ್ತು…ಪಕ್ಕದವರನ್ನುಕೇಳಿದರೆ..”ಅವರು ಅಷ್ಟಾಗಿ ನಮ್ಮನ್ನುಮಾತನಾಡಿಸುವುದಿಲ್ಲ…ಹೀಗಾಗಿ ಎಲ್ಲಿ ಹೋಗಿದಾರೋಗೊತ್ತಿಲ್ಲ …ಮೂರು ದಿ ಆಯಿತು ಬೀಗ ಹಾಕಿ ….”ಎಂದರು.ವಿಧಿಯಿಲ್ಲದೆ ಜಾಹ್ನವಿ,ರವಿ ವಾಪಸ್ ಹೊರಟರು.ಜಾಹ್ನವಿಗೆ ಅವನು ತನಗೆ ಮೋಸ ಮಾಡಿದಅನಿಸತೊಡಗಿತ್ತು. ಆದರೂ ಎಂಟು ದಿನವಾದರೂಮೇಲೂ ಅವನು ಬರದಿದ್ದಾಗ, ಅವನ ಮೊಬೈಲ್ ಕೂಡಾರಿಂಗ್ ಆಗದಿದ್ದಾಗ…ಅವಳಿಗೆ ಸುಶಾಂತ್ಮೋಸಗಾರನೆಂದು ತಿಳಿದು ಹೋಗಿತ್ತು….

   ರವಿಯ ಸಲಹೆಯಂತೆ ಜನಾರ್ಧನನಿಗೆ ಸುಶಾಂತ್ ಎಲ್ಲಿಎಂದು ಕೇಳೋಣವೆಂದು ಕರೆ ಮಾಡಿದರೆ ಅವನು ರಿಸೀವ್ಮಾಡಲಿಲ್ಲ. ಬದಲಾಗಿ “ನಿನ್ನ ಮುಖ ನೋಡಲುಅಸಹ್ಯವಾಗುತ್ತದೆ….ನಿನ್ನ ಹಾಳು ಧ್ವನಿ ಕೇಳಲುನನಗಿಷ್ಟವಿಲ್ಲ …ದಯವಿಟ್ಟು ಕಾಲ್ ಮಾಡಬೇಡ “ಎಂದುಸಂದೇಶ ಕಳಿಸಿ ಮೊಬೈಲ್ ನಿಷ್ಕ್ರಿಯಗೊಳಿಸಿದ್ದ. ಜಾಹ್ನವಿಇನ್ನು ಬದುಕಿ ಪ್ರಯೋಜನವಿಲ್ಲವೆಂದು ಬಾಗಿಲುಹಾಕಿಕೊಂಡು ಫ್ಯಾನ್’ಗೆ ನೇಣು ಹಾಕಿಕೊಳ್ಳುವಪ್ರಯತ್ನಿಸಿದಳು. ಆದರೆ ರವಿ ರೂಮಿನ ಬಾಗಿಲು ಮುರಿದುಜಾಹ್ನವಿಯನ್ನು ಬದುಕಿಸಿದ್ದ. ತಾನೇ ಅವಳನ್ನುಮದುವೆಯಾಗುತ್ತೇನೆಂದು ಹೇಳಿದ್ದ. ಅವನು ಹೇಳಿದಂತೆಹೊಟ್ಟೆಯಲ್ಲಿದ್ದ ಕಂದಮ್ಮನ್ನು ಕೊಲ್ಲಲು ಮನಸೊಪ್ಪಲಿಲ್ಲಜಾಹ್ನವಿಗೆ..

    ಒಂದು ದೇವಸ್ಥಾನದಲ್ಲಿ ರವಿ ಜಾಹ್ನವಿಗೆ ತಾಳಿ ಕಟ್ಟಿದ್ದ.ಸಂಬಂಧಿಕರು ಛೀ…!.ಥೂ…..! ಎಂದು ರವಿಗೆ ಬೈದಿದ್ದರು.ಇದರಿಂದ ರೋಸಿ ಹೋದ ಜಾಹ್ನವಿ ದಿನವೂ ಅಳುವುದನ್ನುನೋಡಲಾರದೇ ಅವಳನ್ನು ದೂರದ ಊರಿಗೆ ಯಾರಿಗೂಹೇಳದೇ ಕರೆದುಕೊಂಡು ಹೋಗಿದ್ದ. ಆದರೆ ತನ್ನ ಪ್ರೀತಿಯತಮ್ಮ ಸೂರ್ಯನಿಗೆ ಹೇಳದಿರಲು ಮನಸ್ಸಾಗಲಿಲ್ಲಅವನಿಗೆ. ಸೂರ್ಯ ಅಣ್ಣನನ್ನು ಹಿಂಬಾಲಿಸಿದ್ದ. ಜಾಹ್ನವಿಎಂಬ ಹೆಸರನ್ನು ಭಾರತಿ ಎಂದು ಬದಲಾಯುಸಿದ್ದ ರವಿ.

ರವಿ, ಸೂರ್ಯ ತಮ್ಮದೊಂದು ಸ್ವಂತ ಉದ್ಯಮವನ್ನುಪ್ರಾರಂಭಿಸಿದ್ದರು. ಭಾರತಿ ಅಲಿಯಾಸ್ ಜಾಹ್ನವಿ ಅವಳಿಹೆಣ್ಣುಮಕ್ಕಳ ತಾಯಿಯಾಗಿದ್ದಳು. ಮಕ್ಕಳೂ ಕೂಡಾಸುಶಾಂತ್’ನಂತೆ ಕೆನ್ನೆಯ ಮೇಲೆ ಕಪ್ಪುಮಚ್ಚೆಯನ್ನಿಟ್ಟುಕೊಂಡು ಹುಟ್ಟಿದ್ದವು. ರವಿ ಮಕ್ಕಳಿಗೆವಿಭಾ-ಶುಭಾ ಎಂದು ಹೆಸರಿಟ್ಟಿದ್ದ. ಕಾಲ ಓಡುತ್ತಿತ್ತು…ಸುಶಾಂತ್ ಜಾಹ್ನವಿಯ ಮನದಿಂದ ದೂರವಾಗಿದ್ದ.ಅವಳು ಸಂಪೂರ್ಣ ಭಾರತಿಯಾಗಿ ಬದಲಾಗಿದ್ದಳು….

ಮುಂದುವರಿಯುತ್ತದೆ ….

Facebook ಕಾಮೆಂಟ್ಸ್

ಲೇಖಕರ ಕುರಿತು

Mamatha Channappa

ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!