ಕಥೆ

ವಿಧಿಯಾಟ…೫

ವಿಧಿಯಾಟ...4

     ಎಲ್ಲರೂ ಬೆರಗುಗಣ್ಣುಗಳಿಂದ ನೋಡುತ್ತಿದ್ದರೆ ವಿಭಾ ಆಎಲ್ಲಾ ಚಿತ್ರಗಳನ್ನು ಆಯ್ದುಕೊಳ್ಳುತ್ತಿದ್ದಳು. ಅವಳಿಗೆಆಶ್ಚರ್ಯ…! ಆ ಚಿತ್ರಗಳು ಅಮ್ಮನ ಹಳೆಯಫೋಟೋದಂತೆಯೇ ಇವೆ. ಆದರೆ ಕೆಳಗೆ ಮಾತ್ರ ಹೆಸರು”ಜಾನೂ ಸುಶಾಂತ್ “ಎನ್ನುವಬರಹವಿದೆ…….ಏನಿದು….?…..ಎಂದು ಆ ಚಿತ್ತಗಳನ್ನೇನೋಡುತ್ತಾ  ನಿಂತಿದ್ದಳು ವಿಭಾ…ಶುಭಾಗೆ ಏನೂತಿಳಿಯದಂತಾಗಿತ್ತು..ಅಷ್ಟೊತ್ತಿಗೆ ರವಿ ಅಲ್ಲಿಗೆ ಬಂದ. ರವಿ..ಸೂರ್ಯನಿಗೆ ಮಾತ್ರ ಮುಖದಲ್ಲಿ ಬೆವರು ಬಂದಿತ್ತು.ಏಕೆಂದರೆ “ಆ ಜಾನೂ ಯಾರು “ಅಂತ ಗೊತ್ತಿತ್ತು ರವಿಸೂರ್ಯನಿಗೆ. ಇವನೇ ಭಾರತಿಗೆ ಮೋಸ ಮಾಡಿದವನುಎಂದು ಖಚಿತವಾಯಿತು ಅವರಿಬ್ಬರಿಗೆ..”ಈ ಮೊಸಗಾರನೆಭಾರತಿಗೆ ಮೋಸ ಮಾಡಿದ್ದು…ಮತ್ತೇಕೆ ಜಾನೂ….ಜಾನೂ….ಎಂದು ಕನವರಿಸುತ್ತಿದ್ದಾನೆ….?ಹೀಗೇಹುಚ್ಚನಾಗಿದ್ದಾನೆ ? “ಎನ್ನುವ ಪ್ರಶ್ನೆ ಅವರಿಗೆ ಕಾಡದಿರಲಿಲ್ಲ………

   ವಿಭಾಳತ್ತ ಬಂದ ರವಿ “ಚಿನ್ನು ಆ ಚಿತ್ರಗಳನ್ನು ಅವರದಿಂಬಿನ ಹತ್ತಿರ ಇಡು… ಬಾ ಹೊತ್ತಾಯಿತುಹೋಗೋಣ…ಅಮ್ಮ ಕಾಯ್ತಿರ್ತಾಳೆ.”ಎಂದುಅವಸರಿಸಿದ..ಅಪ್ಪ ಏನೋ ಮುಚ್ಚಿಡುತ್ತಿದ್ದಾನೆನಿಸಿತವಳಿಗೆ.ಅದಕ್ಕೆಂದೇ ಎಲ್ಲಾ ಚಿತ್ರಗಳನ್ನಿಟ್ಟು ಒಂದು ಚಿತ್ರವನ್ನು ತನ್ನಕೈಯಲ್ಲಿ ಹಿಡಿದುಕೊಂಡು ಹೊರಡಲನುವಾದಳು.ಸೂರ್ಯ “ಚಿನ್ನು ಹಾಗೆಲ್ಲಾ ಬೇರೆಯವರ ಚಿತ್ರ ಅವರಿಗೆಹೇಳದೇ ತೆಗೆದುಕೊಂಡು ಹೋಗಬಾರದು..ಇಡಮ್ಮಾ ಅಲ್ಲಿ………. “ಅಂದ. ಅವಳು ಇಡದಿದ್ದಾಗ ರವಿ ಕೋಪದಿಂದ”ನಿನಗೊಂದು ಸಾರಿ ಹೇಳಿದರೆ ಅರ್ಥ ಆಗಲ್ವಾ..ಇಟ್ಟುನಡಿ……”ಎಂದು ಕಿರುಚಿದ. ಅಪ್ಪನ ಕೋಪಕ್ಕೆ ಹೆದರಿಅದನ್ನಲ್ಲಿಟ್ಟು ಅವರೊಡನೇ ಹೊರಟಳು. ಅವಳಿಗೆಯಾರೋ ತನ್ನವರನ್ನ ಬಿಟ್ಟು ಹೋಗುತ್ತಿದ್ದೇನೆನಿಸಿತು.ಮನೆಗೆ ಬಂದ ರವಿಯ ಮನಸ್ಸು ರಾಡಿಯಾಗಿತ್ತು. ಅವತ್ತುಮೈದುನ ಬರುತ್ತಾನೆಂದು ಒಬ್ಬಟ್ಟಿನ ಅಡುಗೆ ಮಾಡಿದ್ದಳುಭಾರತಿ.ಆದರೆ ಯಾರೂ ಸರಿಯಾಗಿ ಊಟಮಾಡದಿದ್ದದ್ದು  ಮತ್ತು ಮುಖ ಸಪ್ಪಗೆ ಮಾಡಿಕೊಂಡದ್ದನ್ನುಕಂಡು ಅವಳಿಗೆ ಏನೋ ಆಗಿದೆ ಎನಿಸಿತು.”ಯಾಕೆ ಯಾರೂಸರಿಯಾಗಿ ಊಟ ಮಾಡುತ್ತಿಲ್ಲ…ಕನ್ನಡಿಯಲ್ಲಿ ನಿಮ್ಮಎಲ್ಲಾರೂ ಮುಖಗಳ್ನಾ ನೋಡ್ಕೊಳಿ..ಸುಟ್ಟ ಬದನೆಕಾಯಿತರ ಇದಾವೆ ..ಏನಾಯ್ತು? “ಎಂದು ಕೇಳಿದಳು. ರವಿಹೋಟೆಲ್’ನಲ್ಲಿ ತಿಂಡಿ ತಿಂದು ಬಂದಿರುವುದಾಗಿ ಮಾತುತೇಲಿಸಿದ.

    ರಾತ್ರಿ ಅತ್ತ ತಿರುಗಿ ಮಲಗಿದ ರವಿಯಲ್ಲಿ ಏನೋಬದಲಾವಣೆ ಕಾಣುತ್ತಿದೆ ಅನಿಸದೇ ಇರಲಿಲ್ಲಭಾರತಿಗೆ.ಇಷ್ಟು ದಿನ ಸುಶಾಂತ್ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರದ ಶುಭಾ ಕೂಡಾ ಈ ದಿನಚಡಪಡಿಸುತ್ತಿದ್ದಳು. ವಿಭಾ ಈ ವಿಚಾರದ ಬಗ್ಗೆಯೇಯೋಚಿಸುತ್ತಿದ್ದಳು..ಎದುರಿಗೆ ನೇತು ಹಾಕಿದ್ದ ಸುಮಾರುವರ್ಷಗಳ ಹಿಂದಿನ ಅಪ್ಪ ಅಮ್ಮನ ಫೋಟೋದಲ್ಲಿ ಅಮ್ಮನಚಿತ್ರ ಆ ವ್ಯಕ್ತಿ ಬರೆದ ಚಿತ್ರದಂತೆಯೇ ಇದೆ ಎನಿಸಿತುಇಬ್ಬರಿಗೂ. ಏನೋ ರಹಸ್ಯ ಇದೆ ಎನಿಸಿತು.

    “ಒಂದು ದಿನ ಅಮ್ಮ…. ಅಪ್ಪ ನನ್ನು ಹೊಗಳುವಾಗ..ನಿಮ್ಮನ್ನು ಪಡೆಯಲು ನಾನು ನನ್ನ ಮಕ್ಕಳು ಪುಣ್ಯಮಾಡಿದ್ದೇವೆ…ಇವರಿಬ್ಬರೂ ನಿಮ್ಮಮಕ್ಕಳಾಗಿದ್ದರೆ…!”ಎಂದು ನಾಲಿಗೆ ಕಚ್ಚಿಕೊಂಡಾಗ ನಾವುಆಶ್ಚರ್ಯದಿಂದ ನೋಡುತ್ತಿರುವಾಗ ಅಪ್ಪ “ನೀವಿಬ್ರೂಅಮ್ಮನ ಮಕ್ಕಳು ಅಪ್ಪನ ಮಕ್ಕಳಲ್ಲ …ನೋಡು ಕಣ್ಣುಮೂಗು, ಬಾಯಿ ಎಲ್ಲಾ ಅಮ್ಮನಂತೆಯೇ ಇದೆ…..ಅಮ್ಮಮಕ್ಕಳನ್ನು ನಿಲ್ಲಿಸಿದರೆ ಥೇಟ್ ಪಡಿಯಚ್ಚು ಹಾಕಿಸಿದ ಹಾಗೆಕಾಣಿಸುತ್ತೀರಾ……ನನ್ನ ಹಾಗೆ ನಿಮ್ಮ ಕಾಲು ಕೂಡಾಇಲ್ಲ……ಅದಕ್ಕೆ ಅಮ್ಮ ಹಾಗೆಂದಿದ್ದು….ಎಂದು ಅಮ್ಮನತ್ತತಿರುಗಿ “ಅಲ್ವಾ ಭಾರತಿ……?!” ಎಂದಾಗ ಅಮ್ಮಬಲವಂತದ ನಗು ನಕ್ಕು ಹೌದು ಎಂದಿದ್ದರು. ಇಂದು ಆವ್ಯಕ್ತಿ ಬರೆದ ಚಿತ್ರ ಕೈಯಲ್ಲಿ ಹಿಡಿದುಕೊಂಡಾಗ ಅಪ್ಪ,ಚಿಕ್ಕಪ್ಪನ ಮುಖದಲ್ಲಿ ಏನೋ ಭಯ ಎದ್ದುಕಾಣುತ್ತಿತ್ತು….ಏನೋ ಆಘಾತವಾದಂತೆ ಕಾಣುತ್ತಿತ್ತು……ಅದೂ ಅಲ್ಲದೆ ಆ ವ್ಯಕ್ತಿಯ  ಕೆನ್ನೆಯ ಮೇಲೆ ಮಚ್ಚೆ ಇರುವಂತೆ ನಮ್ಮಿಬ್ಬರಿಗೂ ಇದೆ…..ಓ …! ಗಾಡ್….! ಏನುಅಂತ ಅರ್ಥ ಆಗ್ತಿಲ್ಲಾ..ಅಮ್ಮನಿಗೆ ಅವಳಿ ಅಕ್ಕ ಅಥವಾತಂಗಿ ಇದ್ದಳಾ…? ಅದೇನಾದರೂ ಅವಳ ಚಿತ್ರವಾ…..?”ಹೀಗೇ ಯೋಚಿಸುತ್ತ ತಲೆ ಗಿರ್ ಎಂದಿತು ವಿಭಾಗೆ. ಏನೋರಹಸ್ಯ ಇದೆ ಕಂಡು ಹಿಡಿಯಲೇಬೇಕು ಎಂದು ನಿರ್ಧಾರಮಾಡಿದವಳ ಕಣ್ಣಿಗೆ ನಿದ್ರೆ ಆವರಿಸಿತು. ಶುಭಾಳ ತಲೆಯಲ್ಲಿಇವೇ ವಿಷಯಗಳು ಗಿರಕಿ ಹೊಡೆಯುತ್ತಿದ್ದವು.

     ಮರುದಿನ ಎದ್ದವಳು ಕಾಲೇಜ್ ಕಡೆ ಹೋಗುವ ಬದಲುಆಸ್ಪತ್ರೆಯ ದಾರಿ ಹಿಡಿದಳು. ಶುಭಾ ಮೌನವಾಗಿ ಅವಳನ್ನುಹಿಂಬಾಲಿಸಿದಳು. ಆಸ್ಪತ್ರೆಯಲ್ಲಿ ಅವರ ಕಡೆಯ ಪೇಷೆಂಟ್ಯಾರೂ ಇರದಿದ್ದರಿಂದ ವಾಚ್’ಮನ್ ಅವರನ್ನು ಒಳಗೆಬಿಡಲಿಲ್ಲ. ಅಷ್ಟರಲ್ಲಿ ವಿಭಾ ಶುಭಾಗೆ ಪರಿಚಯವಿರುವದಾದಿಯೊಬ್ಬಳು ಬಂದಿದ್ದರಿಂದ ಅವಳು ಹೇಳಿದ್ದರಿಂದವಾಚ್ ಮನ್ ಕೀ ತೆಗೆದು ಅವರನ್ನು ಒಳಗೆ ಬಿಟ್ಟ.ಸುಶಾಂತ್ ಬಾತ್’ರೂಮಿಗೆ ಹೋಗಿದ್ದ. ವಿಭಾ ಶುಭಾ,ದಾದಿಗೆ “ಅವರು ತಮಗೆ ಬೇಕಾದವರೆಂದು ಹತ್ತು ನಿಮಿಷಇದ್ದು ಮಾತನಾಡಿಸಿಕೊಂಡು ಹೋಗುತ್ತೇವೆಂದು” ಹೇಳಿಅವನ ಬೆಡ್’ನತ್ತ ಬಂದರು. ನಿಧಾನವಾಗಿ ಅವನು ಬರೆದಚಿತ್ರಗಳನ್ನು ಹೊರತೆಗೆದು ಪರಿಶೀಲಿಸಿದರೆ ಅದು ಖಂಡಿತಅಮ್ಮನೇ ಎನಿಸಿತವರಿಗೆ. ಅಷ್ಟೊತ್ತಿಗೆ ಬಂದ ಸುಶಾಂತ್ಅವರ ಕೈಯಲ್ಲಿದ್ದ ಚಿತ್ರ ನೋಡಿ ಕೋಪಗೊಳ್ಳಲಿಲ್ಲ.ಮುಗುಳ್ನಕ್ಕ. ಅವರ ಭಯ ಸ್ವಲ್ಪಕಡಿಮೆಯಾಯಿತು.”ಅಂಕಲ್ ಇವರು ಯಾರು?..ಇವರುನಮ್ಮ ಅಮ್ಮನಂತೆಯೇ ಇರುವುದರಿಂದ ನಾವು ಇವರುಯಾರು ಎಂದು ತಿಳಿದುಕೊಳ್ಳಲು ಮತ್ತೆ ಆಸ್ಪತ್ರೆಗೆಬರಬೇಕಾಯಿತು.”ಎಂದರು .ಅವನು ಮಾತನಾಡಲಿಲ್ಲಅವರ ಕಣ್ಣುಗಳನ್ನೇ ದಿಟ್ಟಿಸಿದ.”ಅವಳು ಇಪ್ಪತ್ತು ವರ್ಷಗಳಹಿಂದೆ ನಾನು ನನ್ನ ಪ್ರಾಣಕ್ಕಿಂತ ಹೆಚ್ಚುಪ್ರೀತಿಸಿದ್ದವಳು..ನೀವು …ನೀವು..ನನ್ನ ….ಎಂದುಬಿಕ್ಕಳಿಸಿದ.” ಇಷ್ಟು ಮಾತ್ರ ಅವನು ಬಾಯ್ಬಿಟ್ಟಿದ್ದು.ಆಮೇಲೆ ಅವರೆಷ್ಟೇ ಗೋಗರೆದರೂ ಅವನುಬಾಯ್ಬಿಡಲಿಲ್ಲ. ಹತಾಶರಾಗಿ ಹಿಂತಿರುಗಿದರು. ಅವನಿಗೆಗೊತ್ತಾಗದಂತೆ ಚಿತ್ರವೊಂದನ್ನು ತನ್ನಬ್ಯಾಗ್’ನಲ್ಲಿಟ್ಟುಕೊಂಡಳು ವಿಭಾ.

    ಮನೆಗೆ ಬಂದಾಗ ರವಿ ಇನ್ನೂ ಮನೆಗೆ ಬಂದಿರಲಿಲ್ಲ. ಸೂರ್ಯ ತನ್ನ ರೂಮಿನಲ್ಲಿ ಮಲಗಿದ್ದ. ಇದೇ ಸರಿಯಾದಸಮಯವೆಂದು ಆ ಚಿತ್ರವನ್ನು ಬ್ಯಾಗಿನಿಂದ ತೆಗೆದುಡೈನಿಂಗ್ ಟೇಬಲ್ ಮೇಲಿಟ್ಟಳು ವಿಭಾ.”ಅಮ್ಮಾ ….ಹೊಟ್ಟೆಹಸೀತಿದೆ ….ಏನಾದರೂ ಇದ್ದರೆ ತಗೋಂಬಾಮ್ಮ.  ಮುಖತೊಳೆದು ಬರ್ತಿವಿ” ಎಂದು ಬಾಗಿಲ ಮರೆಯಲ್ಲಿ ನಿಂತರು.ತಟ್ಟೆಯಲ್ಲಿ ಚಕ್ಕಲಿಯನ್ನು ಹಾಕಿಕೊಂಡು ಡೈನಿಂಗ್ ಟೇಬಲ್ಹತ್ತಿರ ಬಂದ ಭಾರತಿಗೆ ಭೂಮಿಯೇ ನಡುಗಿದಂತಾಯಿತು.ಅಲ್ಲಿರುವ ಚಿತ್ರವನ್ನು ಕೈಗೆತ್ತಿಕೊಂಡು ದಿಟ್ಟಿಸಿ ನೋಡಿದವಳಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ವಿಭಾಶುಭಾ ಮೆಲ್ಲಗೆ ಹಿಂದಿನಿಂದ ಬಂದರು. ಅಮ್ಮನ ಕಣ್ಣಲ್ಲಿನೀರು ಕಂಡು ದಿಗ್ಭ್ರಾಂತರಾದರು. ಮುಂದುವರಿದು ವಿಭಾ”ಅಮ್ಮ ಈ ಜಾನೂ …ಸುಶಾಂತ್ ಯಾರೂ ಅಂತ ನಿನಗೆಗೊತ್ತು ..ಹೇಳಮ್ಮ ಪ್ಲೀಸ್ ….ನಿನ್ನೆಯಿಂದ ತಲೆ ಕೆಟ್ಟುಹೋಗಿದೆ. ಹೇಳಮ್ಮ..”ಎಂದು ಗೋಗರೆದಳು. ಭಾರತಿಗೆಏನು ಹೇಳಬೇಕೆಂದು ತಿಳಿಯಲಿಲ್ಲ. ಭಾರತಿ ಕಲ್ಲಂತೆನಿಂತಿದ್ದಳು. ಶುಭಾ  ಸಿಟ್ಟಿನಿಂದ “ಆ ಮನುಷ್ಯ ಕೂಡಾ ನಿನ್ನಹಾಗೇ ….ಏನೂ ಹೇಳಲಿಲ್ಲ …ನೀನಾದ್ರೂ ಹೇಳಮ್ಮ…ನೀವಿಬ್ಬರೂ ಸೇರಿ ಅಪ್ಪನಿಗೇನಾದರೂ ಮೋಸಮಾಡಿದಿರಾ? ಅಪ್ಪ ನಿನ್ನೆ ನಡೆದಕೊಂಡಿದ್ದನ್ನು ನೋಡಿದರೆಅವರಿಗೆ ನಿಮ್ಮಿಬ್ಬರ ವಿಷಯ ಗೊತ್ತಿದ್ದೂಸಹಿಸಿಕೊಂಡಿದ್ದಾರೆನಿಸುತಿದೆ ನಮಗೆ…ನಿನ್ನನ್ನು ಅಮ್ಮಎನ್ನಲು ನಾಚಿಕೆಯಾಗುತ್ತದೆ ನಮಗೆ.. ನಮ್ಮ ಅಪ್ಪಚಿನ್ನದಂತವರು…ಅವರಿಗೆ ಮೋಸ ಮಾಡಲು ಹೇಗಮ್ಮಮನಸು ಬಂತು ನಿನಗೆ…..? “ಎಂದು ಭಾರತಿಯನ್ನುಬಾಯ್ಬಿಡಿಸಲು ಚುಚ್ಚಿ ಮಾತಾಡುತ್ತಾ  ದನಿಗೂಡಿಸಿದಳು.ಭಾರತಿಯ ಕೋಪ ನೆತ್ತಿಗೇರಿತ್ತು. ಶುಭಾನ ಜೋರು ಧ್ವನಿಸೂರ್ಯನನ್ನು ಎಚ್ಚರಗೊಳಿಸಿತ್ತು..ಬಂದವನೇ ಶುಭಾಕೆನ್ನೆಯ ಮೇಲೆ ಪಟೀರ್ ಎಂದು ಹೊಡೆದ..

ಭಾರತಿ “ಬೇಡ ಸೂರ್ಯ ಹೊಡೆಯಬೇಡ…ಎಷ್ಟೇ ಆದರೂ ಆ ಮೋಸಗಾರನ ಮಕ್ಕಳು ಅವರು ……ಇಂತಹಮಾತುಗಳು ಅವರ ಬಾಯಿಯಿಂದ ಬರುವುದುಸಹಜ…..”ಎಂದು ಅವರಿಬ್ಬರತ್ತ ತಿರುಗಿ……”ಹೌದುಕಣೇ..ನಿಮ್ಮ ಅಪ್ಪ ಚಿನ್ನದಂತವರು..ಅವರು ನಿಮ್ಮ ಅಪ್ಪಅಲ್ಲ ಕಣೇ….. ಆ ಮೋಸಗಾರ ನಿಮ್ಮ ಅಪ್ಪ…ನಿಮ್ಮನ್ನಹುಟ್ಟುವ ಮೊದಲೇ ಕೊಂದುಹಾಕಿದ್ದರೆ ಈಗ ನಿಮ್ಮಿಂದ ಈಮಾತು ಕೇಳುವ ಸ್ಥಿತಿ ಬರುತ್ತಿರಲಿಲ್ಲ ನನಗೆ ..ನಿಮ್ಮಿಬ್ಬರನ್ನಹೆತ್ತು ರವಿಗೆ ಮೋಸ ಮಾಡಿದ್ದೇನೆ……ಛೇ…! ಹೋಗಿ…ಅವನ ಹತ್ತಿರ ಹೋಗಿ ಸಾಯಿರಿ …..”ಎಂದುಕಿರುಚಿದಳು. ರವಿ ಬಾಗಿಲಲ್ಲಿ ನಿಂತಿದ್ದ. ಭಾರತಿ ರೂಮಿಗೆಹೋದವಳೇ ಎಲ್ಲಾ ಡೈರಿಗಳನ್ನು ಕಿತ್ತಾಡಿದಳು. ಆ ಇಪ್ಪತ್ತುವರ್ಷಗಳ ಹಿಂದಿನ ಡೈರಿಯನ್ನು ತೆಗೆದು ಅವರಿಬ್ಬರಎದುರಿಗೆ ಬಿಸಾಡಿ “ತಗೊಳ್ರೆ ಓದ್ಕೊಂಡು ಸಾಯಿರಿ…ನನಗೆಮುಖ ತೋರಿಸಬೇಡಿ. ಹೊರಟು ಹೋಗಿ …..”ಎಂದುರೂಮಿನ ಬಾಗಿಲು ಧಡಾರ್ ಎಂದು ಹಾಕಿಕೊಂಡು ಜೋರುಧ್ವನಿಯಲ್ಲಿ ಅಳತೊಡಗಿದಳು. ರವಿ ಅವರಿಬ್ಬರತ್ತ ಒಂದುತಿರಸ್ಕಾರದ ನೋಟ ಬೀರಿ ಭಾರತಿ ಏನಾದರೂಮಾಡಿಕೊಂಡಾಳು ಎಂದು ರೂಮಿನ ಬಾಗಿಲು ಜೋರಾಗಿಬಡೆದ “ಭಾರತಿ ಬಾಗಿಲು ತೆಗಿಯೇ….ಅವರಿಗೇನೋಗೊತ್ತಿಲ್ಲದೇ ಮಾತನಾಡಿದ್ದಾರೆ..ನಿನಗೆ ನಾನಿದೀನಿ..ಪ್ಲೀಸ್ಕಣೆ ಬಾಗಿಲು ತೆಗಿ……”ಎಂದು ಗೋಗರೆದಾಗ..”ರೀ ನನಗೆಸ್ವಲ್ಪ ಏಕಾಂತ ಬೇಕು..ಆ ಮೋಸಗಾರನ ಮಕ್ಕಳು ಏನೋಅಂದರು ಅಂತ ನಾನು ಸಾಯುವುದಿಲ್ಲ. ನನಗೆಬಂಗಾರದಂತ ಜೀವನ ಕೊಟ್ಟವರು ನೀವು…ನಿಮ್ಮ ಕೊನೆಕ್ಷಣದವರೆಗೂ ಬದುಕಿರ್ತಿನಿ….”ಎಂದಾಗ ರವಿಗೆಸಮಾಧಾನವಾಯಿತು.ಅವಳು ಸ್ವಲ್ಪ ಹೊತ್ತುಒಂಟಿಯಾಗಿರಲಿ ಎಂದು ಮನೆಯಿಂದ ಹೊರನಡೆದ.ಸೂರ್ಯನೂ ಅಣ್ಣನನ್ನು ಹಿಂಬಾಲಿಸಿದ. ಕುರ್ಚಿಯಲ್ಲಿಕುಳಿತ ಭಾರತಿಯ ಮನಸ್ಸು ವಿಕಾರವಾಗಿತ್ತು…..

  ಜಾಹ್ನವಿ ರಾಮಣ್ಣ ಸುಂದರಮ್ಮನವರ ಏಕೈಕ  ಮಗಳು.ಮಧ್ಯಮವರ್ಗದ ಕುಟುಂಬ. ಅವಳ ನಂತರಮಕ್ಕಳಾಗಲಿಲ್ಲ. ಅವಳನ್ನೇ ಅತೀ ಮುದ್ದಿನಿಂದ ಸಾಕಿದ್ದರು.ಗೋದಿ ಮೈ ಬಣ್ಣದ ಹುಡುಗಿ..ಉದ್ದನೆಯ ಜಡೆ, ಆಕರ್ಷಕಕಣ್ಣುಗಳು ಅವಳ ಸೌಂದರ್ಯವನ್ನುಇಮ್ಮಡಿಗೊಳಿಸಿದ್ದವು. ಅವಳು ಇಂಜೀನಿಯರಿಂಗ್ಮೊದಲ ವರ್ಷಕ್ಕೆ ಕಾಲಿಟ್ಟಾಗ ಅವರ ಮನೆ ಇರುವಬೀದಿಯಲ್ಲಿಯೇ ಇರುವ ಮನೆಯೊಂದಕ್ಕೆ ಇಬ್ಬರುಹುಡುಗರು ಬಾಡಿಗೆಗೆ ಬಂದಿದ್ದರು. ಇಬ್ಬರೂಇಂಜಿನಿಯರಿಂಗ್ ವಿದ್ಯಾರ್ಥಿಗಳು. ಒಬ್ಬ ಜನಾರ್ಧನಇನ್ನೊಬ್ಬ ಸುಶಾಂತ್ ..ಸುಶಾಂತ್ ಶ್ರೀಮಂತ ಮನೆತನದಹುಡುಗ. ಜನಾರ್ಧನ ಬಡ ಕುಟುಂಬದಿಂದ ಬಂದವನು.ಇಬ್ಬರೂ ಪಿ.ಯು.ಸಿ ಯಿಂದ ಒಳ್ಳೆಯ ಗೆಳಯರಾಗಿದ್ದರು.ಜನಾರ್ಧನ್ ಜಾಹ್ನವಿಯ ಕಾಲೇಜ್’ನಲ್ಲೇಓದುತ್ತಿದ್ದ…ಆದರೆ ಬೇರೆ ವಿಭಾಗ. ಸುಶಾಂತ್ ಬೇರೆಕಾಲೇಜ್’ನಲ್ಲಿ ಓದುತ್ತಿದ್ದ. ಜನಾರ್ಧನ ಅವಳದೇಕಾಲೇಜ್’ನಲ್ಲಿ ಓದುತ್ತಿದ್ದರಿಂದ ಸ್ವಲ್ಪ ಪರಿಚಯವಾಗಿದ್ದ.ದಾರಿಯಲ್ಲಿ ಸಿಕ್ಕಿದರೆ ಹಾಯ್ ಹೇಳುತ್ತಿದ್ದ. ಅವಳು ನಗುತ್ತಾಹಾಯ್ ಹೇಳುತ್ತಿದ್ದರೆ ಜನಾರ್ಧನ ಅವಳ ಕಣ್ಣುಗಳನ್ನೇನೋಡುತ್ತಿದ್ದ. ಅವಳ ಕಣ್ಣುಗಳಲ್ಲೇನೋ ಆಕರ್ಷಣೆ ಇತ್ತು.ಅಷ್ಟು ಸುಂದರವಾಗಿದ್ದವು ಅವಳ ಕಣ್ಣುಗಳು…..ಜೊತೆಗಿರುತ್ತಿದ್ದ ಸುಶಾಂತ್’ಗೆ ಜಾಹ್ನವಿಯನ್ನುಪರಿಚಯಿಸಿದ್ದ. ಬರಬರುತ್ತಾ  ಜಾಹ್ನವಿ ಜನಾರ್ಧನನಿಗಿಂತಸುಶಾಂತ್’ಗೆ ಹತ್ತಿರವಾಗಿದ್ದಳು. ಕಾರಣ ಅವನ ನಗುಮುಖ..ಅವನು ಪಟಪಟನೆ ಮಾತನಾಡುವ ಶೈಲಿ…ಎಲ್ಲಕ್ಕಿಂತಹೆಚ್ಚಾಗಿ ಅವನು ಚಿತ್ರಕಲೆಯ ನಿಪುಣ…….

ಮುಂದುವರಿಯುವುದು…

Facebook ಕಾಮೆಂಟ್ಸ್

ಲೇಖಕರ ಕುರಿತು

Mamatha Channappa

ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!