ಆ ಹೊತ್ತಿಗೆ ಡಾಕ್ಟರ್ ಬಂದಿದ್ದರಿಂದ ಮಾತುಕತೆ ನಿಂತು ಬಿಟ್ಟಿತ್ತು..ಮತ್ತೇನುಮಾತನಾಡದೆ ವಾರ್ಡಿನಿಂದ ಹೊರ ಬಂದೆ..
ಪೋಲೀಸರು ಸುಕನ್ಯಳ ಹೇಳಿಕೆಯ ಮೇಲೆ ಒಬ್ಬನನ್ನು ಸಂಶಯದ ಮೇಲೆಬಂಧಿಸಿ ಸುಮ್ಮನಾಗಿದ್ದರು..ಸಂಘಟನೆಗಳ ಪ್ರತಿಭಟನೆಗಳು ಒಮ್ಮೆದೊಡ್ಡದಾಗಿ ಗುಲ್ಲೆಬ್ಬಿಸಿ ಸುಮ್ಮನಾಗಿತ್ತು..ನವೀನ ರಜೆ ಮುಗಿದಿದ್ದರಿಂದತಿರುಗಿ ಬೆಂಗಳೂರಿಗೆ ಹೋಗಿದ್ದ..ನನಗೇನಾಯ್ತೋ ಯಾರೂ ಇಲ್ಲದಸುಕನ್ಯಳನ್ನು ಈ ಸ್ಥಿತಿಯಲ್ಲಿ ಬಿಟ್ಟು ಬರಲು ಮನಸ್ಸಾಗಲಿಲ್ಲ..ಅದುಕನಿಕರವೋ…ಅಲ್ಲ ಪ್ರೀತಿನೋ..ಅಲ್ಲ..ಕಾಳಜಿಯೋ..ಗೊತ್ತಿಲ್ಲ..ಮಂಗಳೂರಲ್ಲೇ ಉಳಿದುಕೊಂಡಿದ್ದೆ..ಅಲ್ಲಿನ ಮಾಜಿ ಶಾಸಕ ಸುಂದರ್ರಾಜಾರಾಂ ಆಸ್ಪತ್ರೆಗೆ ಬಂದು ಸಮಾಧಾನ ಮಾಡಿದವರು ಶೀಘ್ರದಲ್ಲೇಎಲ್ಲವೂ ಸರಿ ಮಾಡುವುದಾಗಿ ಹೇಳಿದ್ದರು..ಆ ಮೇಲೆ ಸುದ್ದೀನೇಇಲ್ಲ..ಇದೆಲ್ಲ ರಾಜಕೀಯ ತಂತ್ರವೆಂದು ಎಲ್ಲರಿಗೂ ಗೊತ್ತು..!!ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸುಕನ್ಯ ಯಾರೂ ಇಲ್ಲದ ಕಾರಣ ಲೇಡಿಸ್ಹಾಸ್ಟೆಲ್’ಗೆ ಸೇರಿದ್ದಳು.. ಅಲ್ಲಿಂದಲೇ ಪುನಃ ಕೆಲಸಕ್ಕೆ ಹೋಗಲುಪ್ರಾರಂಭಿಸಿದ್ದಳು..ಈ ಘಟನೆಯಿಂದ ಉಂಟಾದ ನನ್ನ ಅವಳ ಪರಿಚಯಸ್ನೇಹವಾಗಿ ಆಮೇಲೆ ಪ್ರೇಮವಾಗಲು ತುಂಬ ದಿವಸಗಳೇನುಬೇಕಾಗಲಿಲ್ಲ..ಆದ್ರೆ ಇದು ವನ್ ವೇ ಲವ್!! ಅವಳೊಡನೆ ಹೇಳಲು ಧೈರ್ಯಸಾಕಾಗಲಿಲ್ಲ..ಜೀವನದ ಮೇಲೆ ಜಿಗುಪ್ಸೆ ಹೊಂದಿದ್ದ ನನಗೆ ಉತ್ಸಾಹತುಂಬಿದ್ದು ಸುಕನ್ಯಳ ಸಾಮಿಪ್ಯ..!! ಅವಳಿದ್ದರೆ ಮನಸ್ಸಿಗೇನೋಮುದ..ಅವಳ ನೇರ ನಡೆ, ನುಡಿ ಎಲ್ಲವೂ ಇಷ್ಟ!!..ಆ ದಿನ ಸಂಜೆ ಕದ್ರಿಪಾರ್ಕಿನಲ್ಲಿ ಪೇಪರ್ ಪೆನ್ನು ಹಿಡಿದು ಕುಳಿತಿದ್ದೆ..ಮುಂದಿನ ಮೂವಿಮಾಡುವ ಪ್ಲಾನ್ ತಲೆಯನ್ನು ಕೊರೆಯುತ್ತಲೇ ಇತ್ತು.!! ಸುಮಧುರಸುಹಾಸನೆ ಬೀರುವ ಹೂಗಳು, ತಮ್ಮ ಕಬಂಧ ಬಾಹುಗಳಂತಿರುವ ರೆಂಬೆಕೊಂಬೆಗಳನ್ನು ಹೊತ್ತಿರುವ ಮರಗಳು,ನಾವೇನು ನಿಮಗಿಂತ ಕಮ್ಮಿಯಿಲ್ಲಎಂದು ಎದೆಯುಬ್ಬಿಸಿ ನಿಂತಂತೆ ಕಾಣುವ ಬಣ್ಣ ಬಣ್ಣದ ಸುಂದರ ಕ್ರೋಟನ್ಗಿಡಗಳು ಸಂಜೆಯ ತಂಪಾದ ಹಿತವಾಗಿ ಬೀಸುತ್ತಿರುವ ಗಾಳಿ ತಮಗೆಇಷ್ಟವೆಂದು ತಲೆದೂಗುತ್ತಿದ್ದವು..ಹಕ್ಕಿಗಳ ಚಿಲಿಪಿಲಿಯ ಮಧುರ ನಿನಾದ..!!ಹಲವು ಜೋಡಿಗಳು ಇದಾವುದರ ಅರಿವೇ ಇಲ್ಲದಂತೆ ತಮ್ಮ ಕಲ್ಪನಾಲೋಕದಲ್ಲಿದ್ದರೆ ಇನ್ನು ಕೆಲವರು ಮಾತಿನ ಲೋಕದಲ್ಲಿದ್ದರು..ಮೊಬೈಲ್ರಾಗವಾಗಿ ಹಾಡತೊಡಗಿದಾಗ ವಾಸ್ತವಕ್ಕೆ ಬಂದೆ..ಮೊಬೈಲ್ ಡಿಸ್’ಪ್ಲೇಮೇಲೆ ಸುಕನ್ಯ ಎಂದು ಕಾಣಿಸಿತ್ತು..ಖುಷಿಯಿಂದ ಮಾತನಾಡಲುಹೊರಟರೆ ಸಿಕ್ಕಿದ್ದು ಕಹಿ ಸುದ್ದಿ!! ಸುರತ್ಕಲ್ ಸಮೀಪ ಒಂದು ಹೆಣ್ಣಿನ ಶವಕಾಣಿಸಿದೆಯಂತೆ..ಯಾರೋ ಅತ್ಯಾಚಾರ ಮಾಡಿ ಕೊಂದಿರಬೇಕೆಂಬಸಂಶಯ!! ಕೂಡಲೆ ಆ ಸ್ಥಳದತ್ತ ಧಾವಿಸಿದ್ದೆ..ಆ ಹೆಣ್ಣಿನ ಮುಖ ನೋಡಿದರೆಎಲ್ಲೋ ನೋಡಿದ್ದೇನೆಂದು ಅನಿಸಿತ್ತು..ಎಲ್ಲಿ..?? ಥಟ್ಟನೆನೆನಪಾಗಿತ್ತು..ಪಣಂಬೂರು ಬೀಚ್!!…ನವೀನನೊಡನೆ ಪಣಂಬೂರುಬೀಚ್’ಗೆ ಹೋಗಿದ್ದ ಆ ದಿನ..!!ಒಂದು ಜೋಡಿ ಬೀಚ್’ನ ತೀರದಲ್ಲಿಕುಳಿತಿದ್ದು ತಮ್ಮದೇ ಪ್ರಣಯ ಸಲ್ಲಾಪದಲ್ಲಿದ್ದರು..ಇಹದ ಪರಿವೆಯೇಇಲ್ಲದಂತಿದ್ದರು..”ನೋಡೋ ಆ ಜೋಡಿನಾ..!?” ನವೀನ ಕಣ್ಣು ಹೊಡೆದವಹೇಳಿದ..”ಅದರಲ್ಲೇನು ವಿಶೇಷ..ಈಗ ಇದೆಲ್ಲ ಕಾಮನ್ ಕಣೋ..” ಅವನಮಾತಿಗೆ ನಗುತ್ತಾ ಹೇಳಿದ್ದೆ..ಅಂಗಡಿಯ ಲೈಟ್ ಬೆಳಕು ಆ ಹುಡುಗಿಯಮುಖಕ್ಕೆ ಬೀಳುತ್ತಿದ್ದು ಸುಂದರವಾದ ಅವಳ ವದನ ಪ್ರಕಾಶಮಾನವಾಗಿಕಾಣಿಸುತ್ತಿತ್ತು..ಅದೇ ಹುಡುಗಿನಾ ಇವಳು? ಹೀಗೆ ಹೆಣವಾಗಿ..!!ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ..”ಸಾರ್..ಇವಳು ದೀಪ್ತಿ..ನಂಗೆಪರಿಚಯವಿದೆ..ಡೈಲೀ ಬಸ್ಸಲ್ಲಿ ಸಿಕ್ತಾಳೆ..ಒಳ್ಳೆಯ ಹುಡುಗಿ..” ಸುಕನ್ಯಳಮಾತಿಗೆ “ಇವಳಿಗೊಬ್ಬ ಲವ್ವರ್ ಇರ್ಬೇಕಲ್ಲಾ..” ಎಂದೆ.. “ಹೌದು..ಕಲವೊಮ್ಮೆ ಯಾರೋ ಹುಡುಗನ ಜೊತೆಯಲ್ಲಿದ್ದದ್ದುನೋಡಿದ್ದೇನೆ..ಅವನೇ ಅಂತೆ ಹೀಗೆ ಮಾಡಿದ್ದು..” “ಅಂದ್ರೆ” “ಅವನೇ ರೇಪ್ಮಾಡಿ ಕೊಂದು ಈಗ ತಪ್ಪಿಸಿಕೊಂಡಿದ್ದಾನೆ..ಎರಡು ದಿನದಿಂದ ಮನೆಗೆಬಂದಿಲ್ಲವಂತೆ..ಪೋಲೀಸರು ಹುಡುಕ್ತಾ ಇದ್ದಾರೆ..” ವಿಷಯವನ್ನುತಿಳಿಸಿದ್ದಳು ಸುಕನ್ಯ…ಆ ಮೇಲೆ ಹಲವು ಸಂಗತಿಗಳು ತಿಳಿಯಿತು..ಆಹುಡುಗನ ಹೆಸರು ಸುರೇಶ್..ತಂದೆ ತಾಯಿ ಇಲ್ಲ..ಇದ್ದ ಒಬ್ಬ ಅಕ್ಕಳನ್ನುಮದುವೆ ಮಾಡಿ ಕೊಡಲಾಗಿತ್ತು..ಮಂಗಳೂರಲ್ಲಿ ಬೇಕರಿ ಅಂಗಡಿ ಇಟ್ಟುಕೊಂಡಿದ್ದ..ಒಳ್ಳೆಯ ಹುಡುಗ..ಯಾವುದೇ ದುರಾಭ್ಯಾಸವಿಲ್ಲ..ಇತ್ತೀಚೆಗೆಒಂದು ವರ್ಷದಿಂದ ಕಾಲೇಜು ಹುಡುಗಿ ದೀಪ್ತಿಯೊಂದಿಗೆಪ್ರೀತಿಯಲ್ಲಿದ್ದ..ಅವನು ಹೀಗೆಲ್ಲಾ ಮಾಡಲು ಸಾಧ್ಯವಿಲ್ಲ..ಇದು ಅವನನ್ನುಹತ್ತಿರದಿಂದ ಬಲ್ಲವರ ಮಾತು..!!ಹಾಗಾದ್ರೆ ಈಗ ಅವನೆಲ್ಲಿ..ಯಾಕೆ ಎರಡುದಿವಸದಿಂದ ಕಾಣಿಸ್ತಿಲ್ಲ..ಅವನು ಮಾಡಿಲ್ಲಾಂದ್ರೆ ಯಾರ ಕೈವಾಡವಿದು..!?ದೊಡ್ಡ ಯಕ್ಷ ಪ್ರಶ್ನೆ!!! ಸುಕನ್ಯಳ ಘಟನೆಯಂತೆ ದೀಪ್ತಿ ಪ್ರಕರಣ ಕೂಡದೊಡ್ಡ ಇಶ್ಶೂ ಆಗಿತ್ತು..ಎಸ್.ಐ ಮಧುಕರ್ ತನಿಖೆಆರಂಭಿಸಿದ್ದರು..ಸುರೇಶನ ಮನೆಯ ಸುತ್ತಮುತ್ತ ಗಿಡಮರಗಳಿಂದಕೂಡಿದ್ದು ಅವನೊಬ್ಬ ಪರಿಸರ ಪ್ರೇಮಿಯೆಂದು ತೋರಿಸುತ್ತಿತ್ತು..ಮನೆಯಹಿಂದೆ ತುಂಬ ಮರಳಿದ್ದು ಕಾಡು ಪ್ರದೇಶದಂತಿತ್ತು.. ಸುತ್ತ ಮುತ್ತ ಬೇರೆಮನೆಗಳಿರದೆ ಒಂಟಿ ಮನೆಯಂತಿತ್ತು..ಎಸ್.ಐ ಮಧುಕರ್ಪರಿಚಯವಿದ್ದುದರಿಂದ ಅವರ ಜೊತೆ ಆ ಮನೆಯ ಬಳಿ ಬಂದಿದ್ದೆ. ಆಗಸಮಯ ಬೆಳಗ್ಗೆ 11 ಘಂಟೆ..ಮನೆಗೆ ಬೀಗ ಹಾಕಲಾಗಿತ್ತು..ಇಲ್ಲಿ ಏನಾದರುಕ್ಲೂ ಸಿಗಬಹುದೆಂಬ ಆಸೆ..ಅಲ್ಲೆಲ್ಲ ಸರ್ಚ್ ಮಾಡುವಂತೆ ಮಾಡಿತ್ತು..!!ಕೊಲೆಗಾರ ಎಷ್ಟೇ ಬುದ್ಧಿವಂತನಾದ್ರೂ ಒಂದು ಸಣ್ಣ ತಪ್ಪು ಮಾಡಿರ್ತಾನೆಎಂಬುದಕ್ಕೆ ಇದೇ ಸಾಕ್ಷಿ!! ಮನೆಯ ಹಿಂಬದಿಯ ಕಾಡಿನಲ್ಲಿನಡೆಯುತ್ತಿದ್ದೆ..ಸುತ್ತಲೂ ಬೃಹದಾಕಾರವಾಗಿ ಬೆಳೆದು ನಿಂತಿರುವ ಮಾವು,ಹಲಸು ಮುಂತಾದ ಮರಗಳು..ನಿನ್ನನ್ನು ಒಳಗೆ ಪ್ರವೇಶಿಸಲು ಬಿಡಲ್ಲವೆಂದುಸೂರ್ಯ ಕಿರಣಗಳಿಗೆ ಸವಾಲು ಹಾಕುವಂತಿರುವ ಅವುಗಳ ಕೊಂಬೆಗಳಎಲೆಗಳು..ಆದರೂ ಕೆಲವು ಕಡೆ ನಿಮ್ಮಿಂದ ತಡೆಯಲು ಸಾಧ್ಯವಿಲ್ಲವೆಂದುಗೆಲುವಿನ ನಗೆ ಬೀರುತ್ತಾ ಒಳ ಪ್ರವೇಶಿಸಿ ಬೆಳಕು ನೀಡಿತ್ತಿರುವ ಸೂರ್ಯರಶ್ಮಿ..!!ನಡೆಯುತ್ತಿರಬೇಕಾದ್ರೆ ಕೇಳಿಸುವ ಚರಕ್ ಪರಕ್ ತರೆಗೆಲೆಗಳ ಸದ್ದುಬಿಟ್ಟರೆ ಬೇರೇನು ಕೇಳಿಸುತ್ತಿಲ್ಲ…ನಿಶ್ಶಬ್ಧ ವಾತಾವರಣ ಭಯವನ್ನುಂಟುಮಾಡುತ್ತಿತ್ತು..!! ಸಡನ್ನಾಗಿ ನಿಂತು ಬಿಟ್ಟೆ..ಸೂರ್ಯ ರಶ್ಮಿಯ ಬೆಳಕಿಗೆಒಣಗಿದ ಎಲೆಗಳ ಮಧ್ಯೆ ಫಳ ಫಳನೆ ಹೊಳೆಯುತ್ತಾ ತನ್ನ ಇರುವಿಕೆಯನ್ನುತೋರಿಸುತ್ತಿತ್ತು..ಏನದು?! ಕಿಸೆಯಿಂದ ಕರ್ಚೀಫ್ ತೆಗೆದು ಅದರ ಮೂಲಕಕೈಗೆತ್ತಿಕೊಂಡು ನೋಡಿದೆ…ಪಚ್ಚೆ ಕಲ್ಲಿನ ಉಂಗುರ!!! ಇದನ್ನು ನೋಡಿದನೆನಪು…ಅದೇ ಡಿಸೈನ್, ಆಕಾರ!! ಸುಕನ್ಯಳ ಶಾಲೆಯ ಲ್ಯಾಬ್ಇನ್’ಸ್ಟ್ರಕ್ಟರ್ ಮನೋಹರ್’ನ ಕೈಲಿ!! ಸಂಶಯ ಬಲವಾಯ್ತು..ಎಸ್.ಐಮಧುಕರ್’ಗೆ ವಿಷಯ ತಿಳಿಸಿ ಉಂಗುರವನ್ನು ತೋರಿಸಿದೆ.
ಆಗ ಮನೋಹರ್ ಲ್ಯಾಬ್’ನಲ್ಲಿದ್ದು ಮೊಬೈಲ್’ನಲ್ಲಿ ಗೇಮ್ ಆಡುತ್ತಾಕುಳಿತಿದ್ದ..ಅವನ ಕೈ ಬೆರಳಲ್ಲಿ ಉಂಗುರ ಕಾಣಿಸಲಿಲ್ಲ..ಪ್ರಶ್ನಿಸಿದ್ದಕ್ಕೆಏನೇನೋ ಕಾರಣ ಹೇಳಿದ..ಕೂಡಲೆ ಸಂಶಯದ ಮೇಲೆ ಅವನನ್ನುಅರೆಸ್ಟ್ ಮಾಡಲಾಯಿತು..ಮೊದಲು ನನಗೇನು ಗೊತ್ತಿಲ್ಲವೆಂದು ಹಠಹಿಡಿದ..ಕೊನೆ ಕೊನೆಗೆ ಪೋಲೀಸರ ಟಾರ್ಚರ್ ಟ್ರೀಟ್ಮೆಂಟಿಗೆ ಬಾಯಿಬಿಟ್ಟ…ಲ್ಯಾಬ್ ರಿಪೋರ್ಟ್ ಉಂಗುರದಲ್ಲಿದ್ದ ಫಿಂಗರ್ ಗುರುತು ಅವನದ್ದೇಎಂದು ತೋರಿಸಿತ್ತು..ಬೆಚ್ಚಿ ಬೀಳುವ ವಿಷಯ ಮನೋಹರ್’ನದ್ದು!! ಹೀಗೂಮನುಷ್ಯರಿರುತ್ತಾರಾ ಎಂದನ್ನಿಸದವರೇ ಇಲ್ಲ..!! ಮನೋಹರ್’ನಒಳ್ಳೆತನದ ಹಿಂದಿನ ಇನ್ನೊಂದು ಮುಖದ ಅನಾವರಣವಾಗಿತ್ತು..ಅವನೊಬ್ಬ ವಿಕೃತ ಕಾಮಿ..!! ಈವರೆಗೆ ಹತ್ತುರೇಪ್..15ಕ್ಕೂ ಹೆಚ್ಚು ಕೊಲೆ ಮಾಡಿದ್ದ ಕಿರಾತಕ!! ಕೊಲೆನೋ,ರೇಪೋಮಾಡಿದ ಮೇಲೆ ಎಲ್ಲೂ ತನ್ನ ಹೆಸರು ಬರದಂತೆ ನೋಡಿಕೊಂಡು ಬಂದಿದ್ದಬುದ್ಧಿವಂತ ಕ್ರಿಮಿನಲ್!! ಇದ್ದ ಕಡೆಗಳಲ್ಲೆಲ್ಲ ತನ್ನ ಪರಾಕ್ರಮ ತೋರಿಸುತ್ತಾಬಂದವನಿಗೆ ಇಲ್ಲಿ ಅದೃಷ್ಟ ಕೈ ಕೊಟ್ಟಿತ್ತು..ಸುಲಭದಲ್ಲಿ ಸಿಕ್ಕಿಬಿದ್ದಿದ್ದ..ಸುಕನ್ಯಳ ಸೌಂದರ್ಯ ತನ್ನ ಕಣ್ಣು ಕುಕ್ಕುವಂತೆ ಮಾಡಿದ್ದುಅವಳನ್ನು ಅತ್ಯಾಚಾರ ಮಾಡಿದ್ದು ತಾನೆಂದು ಒಪ್ಪಿಕೊಂಡಿದ್ದ..ದೀಪ್ತಿಸುರೇಶನ ಜೊತೆ ಹೋಗುವಾಗ ನೋಡಿದ್ದವನ ಮನಸ್ಸಲ್ಲಿ ಅವಳನ್ನುಅನುಭವಿಸಲೇ ಬೇಕೆಂಬ ಆಸೆ ಗರಿಗೆದರಿತ್ತು..ಆ ಆಸೆ ನೆರವೇರುವಂತೆ ಆದಿನ ದೀಪ್ತಿ ಒಬ್ಬಳೇ ಸುರೇಶನ ಮನೆಯ ಸಮೀಪ ಬಂದಿದ್ದಳು..ಆ ಟೈಮಲ್ಲಿಸುರೇಶ ಮನೆಯಲ್ಲಿರಲಿಲ್ಲ..ಸದಾ ಅವಳ ಮೇಲೆ ಕಣ್ಣಿಟ್ಟಿದ್ದ ಮನೋಹರ್ಅಲ್ಲಿಗೆ ಬಂದವನು ರೇಪ್ ಮಾಡಿ ಕೊಂದು ಮಣ್ಣಲ್ಲಿ ಹೂತು ಹಾಕಿದ..ಈದೃಶ್ಯವನ್ನು ಹೊರಗೆ ಹೋಗಿದ್ದ ಸುರೇಶ ಬಂದವನು ನೋಡಿ ಸಿಟ್ಟಿನಿಂದಮನೋಹರನನ್ನು ಅಟ್ಯಾಕ್ ಮಾಡಿದ್ದ..ಇಬ್ಬರಿಗೂ ಮಾರಾಮಾರಿಹೊಡೆದಾಟ ನಡೆದಿತ್ತು..ಈ ಸಮಯದಲ್ಲಿ ಕೈಯಲ್ಲಿನ ಉಂಗುರ ಬಿದ್ದುಹೋಗಿದ್ದು ಮನೋಹರನಿಗೆ ಗೊತ್ತಾಗಲಿಲ್ಲ..ಹೋರಾಟದಲ್ಲಿ ಮನೋಹರಗೆದ್ದವ ಸುರೇಶನ್ನು ಉಸಿರುಗಟ್ಟಿಸಿ ಕೊಂದ..ಅವನ ದೇಹವನ್ನು ತುಂಡುತುಂಡಾಗಿ ಕತ್ತರಿಸಿ ಬೇರೆ ಬೇರೆ ಕಡೆ ಹುಗಿದಿದ್ದ..ಮನೆಗೆ ಹೋದ ಮೇಲೆಉಂಗುರ ಕಾಣದೆ ಗಾಬರಿಗೊಂಡಿದ್ದ..ಎಲ್ಲಿ ಕಳೆದು ಹೋಯ್ತೆಂದುತಿಳಿಯಲಿಲ್ಲ..ಪುನಃ ಮನೆಯ ಬಳಿ ಬಂದು ಹುಡುಕೋಣವೆಂದುಅನಿಸಿದರೂ ಹೋಗಲು ಹಿಂಜರಿಕೆ..ಎಲ್ಲಿಯಾದರೂ ಸಿಕ್ಕಿಬಿದ್ದರೆ..ಎಂಬಹೆದರಿಕೆ..!! ಯಾರಾದರೂ ನೋಡಿದರೆ..ಎಂಬ ಆತಂಕ!! ಹೋಗುವುದುಬೇಡವೆಂದು ತೀರ್ಮಾನಿಸಿದ್ದ..ಅದುವೇ ಅವನ ಪಾಲಿಗೆಮುಳುವಾಗಿತ್ತು..ಎಲ್ಲವನ್ನೂ ವಿಚಾರಣೆಯಲ್ಲಿ ಹೇಳಿದ್ದ ಮನೋಹರ್..!!ಕೋರ್ಟ್’ನಿಂದ ಕಠಿಣ ಶಿಕ್ಷೆ ಅವನ ಪಾಲಿಗೆವಿಧಿಸಲ್ಪಟ್ಟಿತ್ತು…ಮನೋಹರನಿಗೇನೋ ಶಿಕ್ಷೆಯಾಯ್ತು..ಮುಂದೆ ಗಲ್ಲುಶಿಕ್ಷೆಯ ಭಯಕ್ಕಾದರೂ ಈ ಅತ್ಯಾಚಾರಗಳು ನಿಲ್ಲಬಹುದೆಂಬ ಲೆಕ್ಕಾಚಾರನಡೆಯಲಿಲ್ಲ..!! ಸೋಶಿಯಲ್ ಮೀಡಿಯಾಗಳು ಮತ್ತು ವಿವಿಧಸಂಘಟನೆಳಿಂದ ಅನೇಕ ಜಾಗೃತಿಗಳು, ಎಚ್ಚರಿಕೆಯ ಮಾತುಗಳುಬರುತ್ತಿದ್ದರೂ ಪ್ರಯೋಜನವಾಗಿಲ್ಲ..!! ಈಗಲೂ ದಿನಾ ಕಿವಿಗೆ ಮನಕಲಕುವಂತಹ ಸುದ್ದಿ ಬೀಳುತ್ತಲೇ ಇವೆ!?
. . . . . . . . .
ಟಕ್..ಟಕ್..ಡೋರ್ ತಟ್ಟಿದ ಶಬ್ಧ ಆಲೋಚನೆಗೆ ಬ್ರೇಕ್ ಹಾಕಿತ್ತು..”ಎಸ್ಕಮಿನ್..” ಎಂದೊಡನೆ ಅಸಿಸ್ಟೆಂಟ್ ಡೈರೆಕ್ಟರ್ ಒಳಗೆ ಬಂದವ “ಮಳೆನಿಂತಿದೆ..ಶೂಟಿಂಗ್ ಸ್ಟಾರ್ಟ್ ಮಾಡೋಣ್ವಾ ಸಾರ್!!” ಎಂದ.. “ಸರಿ..ನೀವೆಲ್ಲ ಹೋಗಿ ಅರೇಂಜ್ ಮಾಡ್ತಿರಿ..ನಾನು ಈಗ ಬಂದೆ..” ಎಂದುಹೇಳಿ ಬಾತ್ ರೂಮಿನತ್ತ ಹೆಜ್ಜೆ ಹಾಕಿದೆ..ಸ್ಕ್ರಿಪ್ಟ್’ನ್ನು ತೆಗೆದುಕೊಂಡು ಅವನುಹೊರಟು ಹೋದ..ಫ್ರೆಶ್ ಆಗಿ ಬಂದು ಟಿ.ವಿ ಹಾಕಿದೆ..ಯಾವುದೋಹಳೆಯ ಸಿನೆಮಾ ಬರುತ್ತಿತ್ತು..ಚಾನೆಲ್ ಚೇಂಜ್ ಮಾಡುತ್ತಾಹೋಗುತ್ತಿದ್ದಂತೆ ಬಂದ ನ್ಯೂಸ್ ಚಾನೆಲೊಂದರಲ್ಲಿ ಬರುತ್ತಿದ್ದ ಫ್ಲಾಶ್ನ್ಯೂಸನ್ನು ನೋಡಿ ಗರ ಬಡಿದಂತೆ ನಿಂತು ಬಿಟ್ಟೆ..”ಖ್ಯಾತ ನಟ ಅವನೀಶ್ಮತ್ತು ಪ್ರೇಯಸಿ ರಜನಿಯ ನಡುವಿನ ಬಾಂಧವ್ಯ ಬ್ರೇಕಪ್’ನಲ್ಲಿ ಅಂತ್ಯ..!!ಈ ಬ್ರೇಕಪ್’ಗೆ ಕಾರಣ ಉದ್ಯಮಿ ಸತ್ಯರಾಜ್ ಜೊತೆ ರಜನಿಯಒಡನಾಟ…ಇದರಿಂದ ಅವನೀಶ್’ಗೆ ಇಪ್ಪತ್ತು ಕೋಟಿಯ ಮೇಲೆ ನಷ್ಟಉಂಟಾಗಿದೆ ಎಂದು ಹೇಳಲಾಗುತ್ತಿದೆ!!” ಇದರಲ್ಲೇನು ಅಚ್ಚರಿಪಡುವಂತದ್ದಿಲ್ಲ..!! ಅವಳ ಹಣದ ಹುಚ್ಚಿಗೆ ಇನ್ನು ಯಾರ್ಯಾರುಬಲಿಯಾಗುತ್ತಾರೋ..ರಜನಿಯ ಇನ್ನೊಂದು ಮುಖದ ಪರಿಚಯ ಈಗಸ್ಪಷ್ಟವಾಗತೊಡಗಿದೆ..”ಏನು ಡೈರೆಕ್ಟರ್ ಸಾಹೇಬ್ರು ಹೀಗೆ ನಿಂತಿದ್ದೀರಿ..”ಮಧುರವಾದ ಧ್ವನಿಗೆ ಬೆಚ್ಚಿ ಬಿದ್ದು ತಿರುಗಿ ನೋಡಿದೆ…ಸುಕನ್ಯಮೋಹಕವಾಗಿ ನಗುತ್ತಾ ನಿಂತಿದ್ದಳು..”ಅದೂ..ಸುಕನ್ಯ..ಟಿ.ವಿ!?” ಏನುಹೇಳಬೇಕೆಂದು ಗೊತ್ತಾಗಲಿಲ್ಲ.. ಅವಳು ಟಿವಿಯ ಕಡೆ ನೋಡಿ ಎಂದಳು”ಅಯ್ಯೋ! ಅವಳನ್ನು ನೆನೆಸಿಕೊಂಡು ಇನ್ನೂ ಯಾಕೆ ಕಣ್ಣೀರು ಹಾಕ್ತೀರಿ..!?”
“ನಾನಾ!! ಏಯ್ ಇಲ್ಲಪ್ಪ..ಹಾಗೇನು ಇಲ್ಲ..” ಹೇಳಿ ಬಾಯಿ ತಪ್ಪಿಮನದಾಳದ ಮಾತು ಕೂಡಾ ಹೊರ ಬಂತು..”ಅದು ನೀನು ಯಾವತ್ತೂನಂಜೊತೆ ಇದ್ರೆ ಕಣ್ಣೀರೇನು ರಕ್ತಾನೂ ಬರಲ್ಲ..” “ಏನು ಹಾಗಂದ್ರೆ..” ಅವಳಮಾತಲ್ಲಿ ಗಾಬರಿ ಕಾಣಿಸಿತ್ತು..”ಅದು..ಅದು..ಹೇಗೆ ಹೇಳ್ಬೇಕೆಂದು ತೋಚ್ತಾಇಲ್ಲ..” ನನ್ನ ಪರದಾಟ ಅರ್ಥವಾಗಿತ್ತೇನೋ ಒಮ್ಮೆ ಮುಖ ಅರಳಿದ್ದು ಪುನಃಮೊದಲಿನಂತಾದಳು..” ನಾನು ನಿಮಗೆ ಯೋಗ್ಯಳಲ್ಲ..ನಾನು..” ಮುಂದೆಹೇಳಲಾಗದೆ ಬಿಕ್ಕಿದಳು..”ಪಾಸ್ಟ್ ಈಸ್ ಪಾಸ್ಟ್ ಸುಕನ್ಯ..ಅದನ್ನು ಒಂದುಕೆಟ್ಟ ಘಳಿಗೆ ಅಂತ ಮರೆತುಬಿಡು..ಹೊಸ ಜೀವನದ ಆಸೆನಿಂಗಿಲ್ವಾ..ಕೊನೆಯವರೆಗೂ ಹೀಗೇ ಇರ್ತೀಯಾ” ಒಮ್ಮೆ ಮಾತು ನಿಲ್ಲಿಸಿಮುಂದುವರಿಸಿದೆ..”ಬದುಕು ಮುಗಿದು ಹೋಯ್ತು..ಇನ್ನು ಯಾಕೆ ಬೇಕು ಈಜೀವನ ಎಂದಿದ್ದ ನನ್ನ ಬಾಳಿಗೆ ಉಸಿರು ಕೊಟ್ಟು ಜೀವ ಕೊಟ್ಟವಳು,ಉತ್ಸಾಹ ತುಂಬಿದವಳು ನೀನು..ಹಿಂದಿನ ಕಹಿ ನೆನಪುಗಳನ್ನುಅಳಿಸಿದವಳು ನೀನು..ಈಗ ನೀನೇ ಹೀಗಾದ್ರೆ ಹೇಗೆ..ನೀನು ನನ್ನ ಪಾಲಿಗೆಯಾವತ್ತೂ ದೇವತೇನೇ” ಸುಕನ್ಯ ಕಣ್ಣೀರನ್ನು ಒರಸಿಕೊಳ್ಳುತ್ತಾ ನನ್ನ ಕಡೆಒಲವಿನ ನೋಟ ಬೀರಿದಳು..”ಇನ್ನೊಂದು ಮುಖ” ಸಿನೆಮಾ ಸ್ಕ್ರಿಪ್ಟ್’ನಕ್ಲೈಮಾಕ್ಸ್ ಊಹಿಸಿ ಬರೆದಿದ್ದು ಅದು ಈಗ ನಿಜವಾಗಿತ್ತು…