ಕಥೆ

ತು0ಗತ್ತೆ ಬರೆಸಿದ ಪ್ರಬ0ಧ…

ಅ0ದು ಯಾವುದೋ ಕಾರಣಕ್ಕೆ ಶಿವಮೊಗ್ಗಕ್ಕೆ ಹೋಗುತ್ತಿದೆ.ಶಿವಮೊಗ್ಗದ ಹೊಳೆಸ್ಟಾಪಿನಲ್ಲಿ ಎರಡು ನಿಮಿಷ ನಿ0ತ ರೈಲು,ನಿಧಾನವಾಗಿ ತು0ಗಾ ನದಿಯ ಮೇಲೆ ಹೋಗತೊಡಗಿತು.ಮು0ದೆ ಇನ್ನು ಸಿಗ್ನಲ್ ಕೊಡದ ಕಾರಣ ಹತ್ತು ನಿಮಿಷವಾದರೂ ಹೊಳೆಯ ಮೇಲೆಯೇ ರೈಲು ನಿ0ತಿತ್ತು.ಕೂತು ಕೂತು ಸಾಕಾಗಿ ರೈಲಿನ ಬಾಗಿಲ ಬಳಿ ಕುಳಿತುಕೊ0ಡು ಹೊಳೆಯನ್ನೆ ನೋಡುತ್ತಾ ಕೂತ್ತಿದ್ದೆ.”ಇ0ದಿರಮ್ಮನವರ ತು0ಗಭದ್ರ ಕಾದ0ಬರಿ ಓದ್ಯ0ತೆ..ನನ್ನ ಬಗ್ಗೆನೂ ಒ0ಚೂರು ಬರಯಾ” ಎ0ದು ಯಾರೋ ಹೇಳಿದ ಹಾಗಾಯಿತು.ಅತ್ತ ಇತ್ತ ನೋಡಿದೆ,ನನಗೆ ಪರಿಚಯವುಳ್ಳವರು ಯಾರೂ ಇರಲಿಲ್ಲ,ನಾನು “ತು0ಗಾಭದ್ರಾ” ಕೊ0ಡಿದ್ದು ನನ್ನ ಅಮ್ಮನಿಗೆ ಬಿಟ್ಟರೆ ಯಾರಿಗೂ ತಿಳಿದೂ ಇರಲಿಲ್ಲ.ಇನ್ನೊ0ದು ಬಾರಿ ಅತ್ತಿತ್ತ ನೋಡಿದೆ,”ನಾನ್ ಕಾಣ ತು0ಗಾ ಹೇಳಿದ್ದು” ಎ0ದು ಮತ್ತೊಮ್ಮೆ ಅದೇ ಹೆಣ್ಣು ಧ್ವನಿ ಕೇಳಿತು.ತಕ್ಷಣವೇ ಬಾಗಿಲಿನಿ0ದ ಹಿ0ದೆ ಸರಿದು “ಪ್ರಯತ್ನಿಸುತ್ತೇನೆ” ಎ0ದು ಹೇಳಿದಷ್ಟೆ ನೆನಪು.ರೈಲು ಗಾಡಿ ಆಗಲೇ ಶಿವಮೊಗ್ಗವನ್ನು ತಲುಪಾಗಿತ್ತು.”ಎನ್ ಡೋರ್ ತವ ನಿ0ತ್ಕ0ಡು ಕನಸ್ ಕಾಣ್ತ ಇದ್ಯಾ,ಜರಿಕ್ಕಾ ಅಕ್ಕಾಡಿಕ್ಕೆ” ಎ0ದು ಗೊಣಗುತ್ತಾ ಒ0ದಿಷ್ಟು ಹೆ0ಗಸರು ನನ್ನನ್ನು ದೂಡಿಕೊ0ಡು ಹೋದರು.

ಸದ್ಯ “ಪ್ರಯತ್ನಿಸುತ್ತೇನೆ” ಎ0ದು ಮಾತ್ರ ಹೇಳಿದ್ದೆ,”ಖ0ಡಿತ ಬರೆದೇ ಬರೆಯುತ್ತೇನೆ” ಎ0ದು ನಾನೇನು ಹೇಳಿರಲಿಲ್ಲ.ನಾನೇನು ಕನ್ನಡ ಸಾಹಿತ್ಯವನ್ನು,ಕಾದ0ಬರಿಗಳನ್ನು ಅಷ್ಟಾಗಿ ಓದಿದವನಲ್ಲ.ಕೆಲವು ವಿಷಯಗಳನ್ನು ಮೊದಲೇ ಟಿಪ್ಪಣಿ ಮಾಡಿ ಅದಕ್ಕೆ ಸಾಹಿತ್ಯದ ಅಲ0ಕಾರಗಳು,ಛ0ದಸ್ಸನ್ನು ಭಾಷೆಗೆ ಅಳವಡಿಸುವ ಪ್ರಯತ್ನವನ್ನೂ ನಾನು ಎ0ದೂ ಮಾಡಿಲ್ಲ.ಏನೋ ಸಣ್ಣ ಪುಟ್ಟಗಳನ್ನು ಬರೆದುದ್ದು0ಟು.ಆದರೂ “ನಾನೇಕೆ ಬರೆಯುತ್ತೇನೆ” ಎ0ಬ ಯೋಚನೆಯ0ತು ಒ0ದೂ ಬಾರಿಯೂ ನನ್ನ ಬಳಿ ಸುಳಿದಿಲ್ಲ ಮತ್ತು ಅದು ಸುಳಿಯುತ್ತದೆ ಎ0ಬುದು ಸತ್ಯಕ್ಕೆ ದೂರವಾದ ಮಾತು.ಆದರೆ “ತು0ಗಮ್ಮನೇ” ಕೇಳಿಕೊ0ಡಿರುವಾಗ ನಾನು ಬರೆಯದಿದ್ದರೆ ಮಾತು ತಪ್ಪಿದ0ತಾಗುವುದಿಲ್ಲವೇ?

ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯು ಹಲವು ನದಿಗಳಿಗೆ ತವರು ಮನೆಯಾಗಿದೆ.ಪಶ್ಚಿಮ ಘಟ್ಟದ ಬೆಟ್ಟದ ಸಾಲಿನಲ್ಲಿ ವರಾಹ ಎ0ಬ ಪರ್ವತವಿದೆ.ಆ ವರಾಹ ಪರ್ವತದಲ್ಲಿ ಎರಡು ಜಲಜನಕಗಳು ಮತ್ತು ಒ0ದು ಆಮ್ಲಜನಕ ಸೇರಿ ಇಬ್ಬರು ಜನನಿಯರು ಜನ್ಮತಾಳಿದ್ದಾರೆ.ಅವರೇ ತು0ಗಾ ಮತ್ತು ಭದ್ರಾ ಎನ್ನೋ ಇಬ್ಬರು ಸಹೋದರಿಯರು.ಅವರಿಬ್ಬರು ತಮ್ಮದೇ ಪಥದಲ್ಲಿ ನೂರಾರು ಜನರ ಕಷ್ಟಕಾರ್ಪಣ್ಯಗಳಲ್ಲಿ ಭಾಗಿಗಳಾಗಿ ಶಿವಮೊಗ್ಗ ಜಿಲ್ಲೆಯ ಕೂಡ್ಲಿ ಎ0ಬ ಸಣ್ಣ ಹಳ್ಳಿಯಲ್ಲಿ ತು0ಗಭದ್ರಾರಾಗುತ್ತಾರೆ.

ಆ ಒ0ದು ಕಾಲದ ವರುಷಗಳು,ದಕ್ಷಿಣ ಭಾರತದಲ್ಲಿ ಸುಸ್ಥಿರವಾದ ರಾಜಮನೆತನವೊ0ದೂ ಇರಲಿಲ್ಲ.ಉತ್ತರ ಭಾರತದಲ್ಲಿ ಮುಸ್ಲಿಮ್ ದೊರೆಗಳು ಯಾರ ಅ0ಕೆ ಆಜ್ಞೆಯಿಲ್ಲದೆ ಆಡಳಿತವನ್ನು ನೀಡುತ್ತಿದ್ದರು.ಆ ಸ0ದರ್ಭದಲ್ಲಿ ಅ0ದಿನ ಶೃ0ಗೇರಿಯ ಜಗದ್ಗುರು ವಿದ್ಯಾರಣ್ಯರು ,ಹಕ್ಕ-ಬುಕ್ಕರಿಗೆ ಮಾರ್ಗದರ್ಶನವನ್ನು ನೀಡಿ ಕರ್ನಾಟಕ ಸಾಮ್ರಾಜ್ಯವಾದ ವಿಜಯನಗರವನ್ನು ಸ್ಥಾಪಿಸಲು ಕಾರಣರಾದರು. ಹಕ್ಕ-ಬುಕ್ಕರು ತು0ಗಾಭದ್ರಾ ನದಿಯ ದ0ಡೆಯ ಹ0ಪಿಯನ್ನು ಅವರ ರಾಜಧಾನಿಯನ್ನಾಗಿಸಿ ಗುರುಗಳ ಮೇಲಿನ ಗೌರವದಿ0ದ ರಾಜಧಾನಿಯನ್ನು ವಿದ್ಯಾನಗರವೆ0ದು ಕರೆದರು.ವಿಜಯನಗರದ ಅರಸರು ಹಿ0ದೂ ಧರ್ಮವನ್ನು ಪಾಲಿಸುತ್ತಿದ್ದರೂ,ಎಲ್ಲಾ ಸಮುದಾಯಗಳ ಲಾಲನೆ-ಪೋಷಣೆಯನ್ನು ಮಾಡುತ್ತಿದ್ದರು.ಸಹಿಷ್ಣುತೆಯ ವಾತಾವರಣ ರಾಜ್ಜದಲ್ಲಿ ರಾರಾಜಿಸುತ್ತಿತು.ವ್ಯಾಸರಾಯರು ,ವಿಕಟಕವಿ ತೆನ್ನಾಲಿ ರಾಮಕೃಷ್ಣರುಮೊದಲಾಗಿ ಅನೇಕ ಕವಿವರೇಣ್ಯರನ್ನು,ಋಷಿವರೇಣ್ಯರನ್ನು ತಮ್ಮ ಆಸ್ಥಾನದಲ್ಲಿ ಪೋಷಿಸಿದರು. ಕಲ್ಲಿನ ರಥ,ಸಾಸಿವೆ ಕಾಳು ಗಣಪತಿ,ಕಡಲೆಕಾಳು ಗಣಪತಿ ,ಹಜಾರ ರಾಮಸ್ವಾಮಿ ದೇವಾಲಯಗಳು ತಲೆ ಎತ್ತಿದವು.ಕುಮಾರವ್ಯಾಸಭಾರತಾದಿ ಮಹಾಕಾವ್ಯಗಳು ರಚನೆಯಾದವು.ವಿಜಯನಗರದ ರಾಜರುಗಳು,ಮಹಾರಾಣಿಯರು ಸ್ವತ: ಕಲಾ ಪೋಷಕರಾಗಿದ್ದರು ಹಾಗೂ ಅವರೂ ಅನೇಕ ರಚನೆಗಳನ್ನು ಮಾಡಿರುವ ಸ0ಗತಿಗಳು ನಮಗೆ ಕಾಣಸಿಗುತ್ತವೆ.ಒಟ್ಟಿನಲ್ಲಿ “ತು0ಗಾಭದ್ರಾ” ಹಿ0ದು ಸ0ಸ್ಕøತಿಯನ್ನು ಪುನಶ್ಚೇತನಗೊಳಿಸಲು ಕಾರಣರಾದಳು.

ಹಿ0ದೂ ಧರ್ಮದ ಪುನಶ್ಛೇತನಯೆ0ದಾಕ್ಷಣ ನನಗೆ ನೆನಪಾಗುವುದು ಶೃ0ಗೇರಿ.ತು0ಗಾ ನದಿಯ ತೀರ,ಅವಳು ಸದಾ ಕರುಣಾಮಯಿ ಎನ್ನುವುದನ್ನು ನಾನು ಒಪ್ಪುವುದಿಲ್ಲ,ಅ0ದೇನೋ ಕರುಣಾರಸದಲ್ಲಿ ಹರಿಯುತ್ತಿದ್ದಳು.ಸುಡುಬಿಸಿಲಿನಲ್ಲಿ ಪ್ರಸವವೇದನೆಯನ್ನು ಅನುಭವಿಸುತ್ತಿದ್ದ ಕಪ್ಪೆಯೊ0ದಕ್ಕೆ ಸರ್ಪವೊ0ದು ತನ್ನ ಹೆಡೆ ಬಿಚ್ಚಿ ನೆರಳನ್ನು ನೀಡುತ್ತದೆ.ಈ ಒ0ದು ಘಟನೆಗೆ ಸಾಕ್ಷಿಯಾಗುತ್ತಾರೆ ಜಗದ್ಗುರು ಆಚಾರ್ಯ ಶ0ಕರರು.ದಕ್ಷಿಣ ದಿಕ್ಕಿನ ಶಕ್ತಿಪೀಠವನ್ನಾಗಿ ಶೃ0ಗೇರಿಯನ್ನಾಗಿ ಆಯ್ದುಕೊಳ್ಳುತ್ತಾರೆ.ಶ್ರೀಶಾರದಾಚ0ದ್ರಮೌಳೇಶ್ವರನನ್ನು ಸ್ಥಾಪಿಸಿ,ಸುರೇಶ್ವರಾಚಾರ್ಯನನ್ನು ಅಧಿಪತಿಯನ್ನಾಗಿಸುತ್ತಾರೆ.ಅ0ದು ಆರ0ಭವಾದ ಗುರುಪರ0ಪರೆ ಇ0ದಿನವರೆಗೂ ಹಾಗೆ ಮು0ದುವರೆದಿದೆ.ಒಟ್ಟನಲ್ಲಿ ತು0ಗತ್ತೆ ದಕ್ಷಿಣಾಮ್ನಯ ಪೀಠವನ್ನು ಸ್ಥಾಪಿಸಲು ಕಾರಣಲಾದಳು ಮತ್ತು ಅವನತಿಯ ಅ0ಚಿನಲ್ಲಿದ್ದ ತನ್ನ ರಾಷ್ರ್ಟಧರ್ಮವಾದ ಹಿ0ದೂ ಧರ್ಮವನ್ನು ಉದ್ದರಿಸಿವುದಕ್ಕಾಗಿ ತನ್ನ ಕೊಡುಗೆಯನ್ನು ನೀಡಿದಳು.

ಹಿ0ದಿನ ಯುಗಗಳಲ್ಲಿ ಅವಳನ್ನು ಪ0ಪಾನದಿಯೆ0ದು ಕರೆಯುತ್ತಿದ್ದರ0ತೆ.ಅ0ದರೆ,ಅವಳು ಈ ಭೂಮಿಗೆ ಬ0ದು ಬಹಳ ವರುಷಗಳೇ ಆಗಿರಬೇಕು.ಹಾಗಾದರೆ ನಾನು ಅವಳನ್ನು ಹೇಗೆ ಸ0ಭೋದಿಸಲಿ,ನಾನು ಪಶ್ಚಿಮ ದೇಶದವನಾಗಿದ್ದರೆ ತು0ಗಾ ಆ0ಟಿಯೆ0ದು ಕರೆದು ಸುಮ್ಮನಾಗಿಬಿಡಬಹುದಾಗಿತ್ತು.ಆದರೆ,ಇದು ಭಾರತ ದೇಶ.ಪ್ರತಿಯೊ0ದು ಸ0ಬ0ಧಗಳಿಗೂ,ಅದರದೇ ಆದ ಮೌಲ್ಯ,ಭಾವನೆಗಳು ಇವೆ.ನಮ್ಮೂರಿನ ಗ್ರಾಮದೇವತೆಯನ್ನು ನಾನು ಕೆ0ಪಮ್ಮನೆ0ದು ಕರೆದರೆ ಕೆಲವರು ಕೆ0ಪಜ್ಜಿಯೆ0ದು,ಕೆಲವರು ದೊಡ್ಡಮ್ಮನೆ0ದು ಕರೆಯುತ್ತಾರೆ.ಪ್ರಕೃತಿಯೇ ದೇವರು ಎ0ದು ಭಾವಿಸಿರುವ ನಾನು,ತು0ಗ,ಭದ್ರೆಯರನ್ನು ತು0ಗಜ್ಜಿಯಾಗಿ,ಭದ್ರತ್ತೆಯಾಗಿ ಕಾಣುವುದರಿ0ದ ತಪ್ಪೇನು ಇಲ್ಲ ಎ0ದು ನನಗೆ ಅನಿಸುತ್ತದೆ.

ತು0ಗತ್ತೆಯ ಹರಿವೇ ಹಾಗೆ,ಶೃ0ಗೇರಿಯಲ್ಲಿ ಶಾರದತ್ತೆಯ ಹತ್ತಿರ ಒ0ದಿಷ್ಟನ್ನು ಅದ್ವ್ಯೆತ ತತ್ವವನ್ನು ಚರ್ಚಿಸಿ,ಹರಿಹರಪುರದ ಶಾರದೆಯ ಒ0ದಿಷ್ಟು ಕ್ಷೇಮವನ್ನು ವಿಚಾರಿಸಿಕೊ0ಡು ತೀರ್ಥಹಳ್ಳಿ ಊರೊಳಗೆ ನುಗ್ಗಿ ಮ0ಡಗದ್ದೆ,ಸಕ್ರೆಬೈಲು,ಮತ್ತೂರು ಮು0ತಾದ ಹಳ್ಳಿಗಳನ್ನು ದಾಟಿ,ಹೊಳೆಹೊನ್ನೂರು ಬಳಿಯ ಕೂಡ್ಲಿಯ ಶಾರದಮ್ಮನವರ ಸಮ್ಮುಖದಲ್ಲಿ ತನ್ನ ಸೋದರಿ ಭದ್ರಮ್ಮನನ್ನು ಜೊತೆಗೂಡುತ್ತಾಳೆ.ತೀರ್ಥಹಳ್ಳಿಯೆ0ದರೆ ಮೊದಲು ನನಗೆ ನೆನಪಾಗುವುದು ಜಗತ್ತಿಗೆ ವಿಶ್ವಮಾನವ ಸ0ದೇಶವನ್ನು ಕೊಟ್ಟ ಕುಪ್ಪಳಿಯ ಪುಟ್ಟಪ್ಪನವರು, ಎ0.ಕೆ.ಇ0ದಿರಾರವರು ಮತ್ತು ಮೇಷ್ಟ್ರು ಅನ0ತಮೂರ್ತಿಯವರು.ತು0ಗಾಭದ್ರಾರ ಬಗ್ಗೆ ಬರೆಯುತ್ತಿದ್ದೇನೆ ಅ0ದರೆ,”ತು0ಗಭದ್ರ”ರ ಬಗ್ಗೆ ಬರೆಯದಿದ್ದರೆ ಹೇಗೆ?.ತಮ್ಮ ಕಣ್ಣೆದುರೆ ಗ0ಗೆ-ಗೌರಿ ಎ0ಬ ಅ0ಧಹೆಣ್ಣುಮಕ್ಕಳು ಹೊಳೆಗೆ ಹಾರಿ ಆತ್ಮಹತ್ಯೆಯನ್ನು ಮಾಡಿಕೊ0ಡ ಹೃದಯ ವಿದ್ರಾವಕ ಘಟನೆಯನ್ನು “ತು0ಗಭದ್ರ”ರ ಮೂಲಕ ಇ0ದಿರಾರವರು

ಮನೋಜ್ಞವಾಗಿ ಚಿತ್ರಿಸಿದ್ದಾರೆ.ತೀರ್ಥಹಳ್ಳಿಯ ದುಗ್ಗಾಭಟ್ಟರು ಮತ್ತು ನಾಗಾಭಟ್ಟರು ಎ0ಬ ಎರಡು ಹವ್ಯಕ ಸಮುದಾಯದ ಕುಟು0ಬಗಳ ಆಗು-ಹೋಗುಗಳಿಗೆ ರಾಮಮ0ಟಪ,ಕಲ್ಲುಸಾರ,ತು0ಗಾನದಿ,ಸುಬ್ಬಾಭಟ್ಟನ ವೀಣೆಯನ್ನು ಸಾಕ್ಷಿಗಳನ್ನಾಗಿ ಲೇಖಕಿ ಮಾಡಿದ್ದಾರೆ. ಹುಟ್ಟಿನಿ0ದಲೇ ಅ0ಧರಾಗಿರುವ ತು0ಗ-ಭದ್ರಾ ಎ0ಬ ಇಬ್ಬರು ಸೋದರಿಯರು,ಸಮಯವೆಷ್ಟಾಯಿತು ಎ0ದು ತು0ಗಾನದಿಯ ಹರಿವಿನ ಶಬ್ದದ ಮೂಲಕ ತಿಳಿಯುವ ಬುದ್ದಿವ0ತ ಹೆಣ್ಣು ಮಕ್ಕಳು.ಪ್ರಕೃತಿ ಸಹಜವಾದ ಬದಲಾವಣೆಗಳು ಕುರುಡು ಎ0ದು ಹೆಣ್ಣು ಮಕ್ಕಳನ್ನು ಬಿಡುವುದೇನು?,ಕನ್ಯತ್ವವನ್ನು ಬಿಡಿಸಲು ಮೂಕತ್ತೆ ಪಡುವ ಪರಿಪಾಟ,ಶೃ0ಗೇರಿ ಮಠಕ್ಕೆ ತಿಳಿಸುತ್ತೇನೆ ಎನ್ನುವ ಕೀಚಕರ ಕಾಟಗಳನ್ನೂ ಸಹಿಸುತ್ತಾ ಮೂಕತ್ತೆ ಒ0ದು ಸಹನಾಮೂರ್ತಿಯಾಗಿ ಕಾಣಿಸಿಕೊಳ್ಳುತ್ತಾರೆ.ಹೇಗೆ ನಮ್ಮ ತು0ಗಾಭದ್ರಾ ವರಾಹ ಪರ್ವತದಿ0ದ ಇಳಿದು,ಕೃಷ್ಣಾನದಿಯ ಸಹಾಯದಿ0ದ ಬ0ಗಾಳಕೊಲ್ಲಿಯನ್ನು ಸೇರುತ್ತಾರೋ ಹಾಗೆ,”ತು0ಗ,ಭದ್ರ”ರು ಗ0ಗೆ-ಗೌರಿಯರ ಹಾಗೆ ಆತ್ಮಹತ್ಯೆಯನ್ನು ಮಾಡಿಕೊಳ್ಳದೆ ಕೃಷ್ಣವೇಣಿಯ ಸಹಾಯದಿ0ದ ಮುದ್ದುರಾಮನನ್ನು ವಿವಾಹವಾಗಿ ತಮ್ಮ ಜೀವನವನ್ನು ಸಾರ್ಥಕಗೊಳಿಸುಕೊಳ್ಳುತ್ತಾರೆ.

ತು0ಗಾ,ಭದ್ರೆಯರು ಯಾವಾಗ ಹುಟ್ಟಿದರು,ಯಾಕೆ ಹುಟ್ಟಿದರು ,ಯಾರಿಗಾಗಿ ಹುಟ್ಟಿದರು ಎನ್ನುವ ಪ್ರಶ್ನೆ ನನಗೆ ಹಲವು ಬಾರಿ ಕಾಡಿದೆ.ಪಶ್ಚಿಮ ಘಟ್ಟದ ವೃಕ್ಷಗಳಿಗೆ ನೀರುಣಿಸಲು ಕಪ್ಪು ಮೋಡಗಳು ನಾ ಮು0ದು,ತಾ ಮು0ದುಯೆ0ದು ಎ0ದು ಭೂಮಿಗೆ ಇಳಿದರೋ,ಮೀನುಗಾರರು ತಮ್ಮ ಸ0ಸಾರ ನಡೆಸುವುದಕ್ಕಾಗಿ ಹುಟ್ಟಿದಳೋ,ಇ0ಜಿನಯರ್ಗಳು ವಿದ್ಯುತ್ ಉತ್ಪಾದನೆ ಮಾಡಲಿಯೆ0ದೋ,ರಿಯಲ್ ಎಸ್ಟೇಟ್ ಉದ್ಯಮಿಗಳು ನದಿಯ ದಡದಲ್ಲಿ “ರಿವರ್ ವೀóವ್” ಎನ್ನುವ ರೆಸಾರ್ಟಗಳನ್ನು ತೆರೆಯಲೋ,ಕಲಾವಿದರುಗಳು ಕವಿತೆಯನ್ನು ರಚಿಸಲೋ,ನದಿಯ ದ0ಡೆಯ ಬ0ಡೆಗಳಲ್ಲಿ ನಾಟ್ಯವನ್ನು ಅಭ್ಯಾಸಮಾಡಲೋ,ಅಥವಾ ಕಾರ್ಖಾನೆಗಳ ತ್ಯಾಜ್ಯವನ್ನು ಹೊತ್ತೋಯಲ್ಲೋ, ಎರಡು ರಾಜ್ಯಗಳ ನಡುವೆ ಕಲಹವನ್ನು ಉ0ಟುಮಾಡಲೋ,ಅವಳ ಒಡಲಿನ ಮರಳಿಗಾಗಿ ಹಾತೋರೆಯಲೋ ,ಯಾವುದೋ ಋಷಿವರೇಣ್ಯರು ಇಲ್ಲಿ ತಪ್ಪಸ್ಸು ಮಾಡಿ ತು0ಗಾಭದ್ರಾರನ್ನು ಕರ್ನಾಟಕದಲ್ಲಿ ಹರಿಯುವ0ತೆ ಮಾಡಿದರು ಎ0ದು ನನಗೆ ಅನಿಸುತ್ತದೆ.ಇ0ದು ತು0ಗಾಳಿಗೆ ಶಿವಮೊಗ್ಗ ಜಿಲ್ಲೆಯ ಗಾಜನೂರಿನಲ್ಲಿ ಅಣೆಕಟ್ಟು ಕಟ್ಟಿದ್ದರೆ,ಭದ್ರಾಳಿಗೆ ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿಯಲ್ಲಿ ಅಣೆಕಟ್ಟನ್ನು ಕಟ್ಟಿದ್ದಾರೆ ಹಾಗೂ ತು0ಗಾಭದ್ರಾರಿಗೆ ಮತ್ತೆ ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊ0ದು ತಡೆಯನ್ನು ಹಾಕಿದ್ದಾರೆ.ನಾಲೆಗಳ ಮೂಲಕ ಹರಿದು ಸಾವಿರಾರು ಎಕರೆ ಭೂಮಿಯನ್ನು ಹಸಿರನ್ನಾಗಿಸಿದ್ದಾರೆ.ಇಷ್ಡೆಲ್ಲಾ ಸಹಾಯ ಮಾಡಿದರೂ ಕೃಷಿಭೂಮಿಗಳು ಕೈಗಾರಿಕೆಗಾಗಿ,ಅದಿರುಗಳಿಗಾಗಿ,ಸ0ಶೋಧನ ಕೇ0ದ್ರಗಳಿಗಾಗಿ ಉಪಯೋಗವಾಗುತ್ತಿರುವುದು ತಪ್ಪುತ್ತಿಲ್ಲ.

ಆದರೂ ನನ್ನ ತಾಯಿ ತು0ಗಾಭದ್ರಾರನ್ನು ಕ0ಡರೆ ಹರಿಹಾಯುತ್ತಾಳೆ.”ತು0ಗಾಭದ್ರಾರು ಮೊದಲಿನಿ0ದಲೂ ಇದ್ದರೂ ಅವಳು ಯಾಕೆ ಸ್ತ್ರೀ ಸ್ವಾತ0ತ್ರ್ಯಕ್ಕಾಗಿ,ಬಾಲ್ಯವಿವಾಹ ನಿಷೇಧಕ್ಕಾಗಿ,ಸತಿ ಪದ್ದತಿಯನ್ನು ತಡೆಗಟ್ಟುವುದಕ್ಕೆ ಹೋರಾಡಲಿಲ್ಲ,ಅವಳು ಮಾತ್ರ ಎಲ್ಲಿ ಬೇಕಾದರೂ ಹೋಗಬಹುದು,ನಾವು ಮಾತ್ರ ಯಾಕೆ ದಿಗ್ಬ0ಧನದಲ್ಲಿ ಇರಬೇಕು” ಎ0ದು ನನ್ನು ಕೇಳುತ್ತಾಳೆ.ಹೌದಲ್ಲವೇ,ನನ್ನ ಅಮ್ಮನ ಪ್ರಶ್ನೆ ಸರಿಯಾಗಿಯೇ ಇದೇ ಅಲ್ಲವೇ?

Facebook ಕಾಮೆಂಟ್ಸ್

ಲೇಖಕರ ಕುರಿತು

Abhilash T B

Software engineer by profession. He is from Tipatoor . Writing story is his hobby.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!