ಕಥೆ ಕಾದಂಬರಿ

ಆತ್ಮ ಸಂವೇದನಾ ಅಧ್ಯಾಯ 13

ಬೆಳಕಿನ ಪಂಜರದಲಿ ಹಕ್ಕಿಗಳ ಇಂಚರ…

ರವಿಯ ಕುಂಚದಲಿ ಭೂಮಿಯ ಒಲವಿನ ಚಿತ್ತಾರ…

ಮುಸ್ಸಂಜೆ ಆರರ ಸಮಯ. ಬಾನಂಚುಕೆಂಪೇರುತ್ತಿತ್ತು. ಕತ್ತಲೆಯ ಅಪ್ಯಾಯತೆ ಮತ್ತೆಭೂಮಿಯನ್ನು ಚುಂಬಿಸಲು ಸಜ್ಜಾಗುತ್ತಿದೆ.ನಾಚಿಕೆಯಿಂದ ಕೆಂಪೇರಿದ ಮುಗಿಲು, ಪ್ರಾಣಿ-ಪಕ್ಷಿಗಳುತಮಗೇನು ಕೆಲಸ ಇವುಗಳ ಮಧ್ಯೆ ಎಂದು ಗೂಡುಸೇರಲು ಹಾತೊರೆಯುತ್ತಿವೆ. ಆತ್ಮಸಂಜೆಯಾಗುತ್ತಿರುವುದನ್ನು ಖುಶಿಯಿಂದನೋಡುತ್ತಿದ್ದಾನೆ, ಆಸ್ವಾದಿಸುತ್ತಿದ್ದಾನೆ. ಆದರೂವರ್ಷಿಯ ಆವಿಷ್ಕಾರ ಎಲ್ಲಿ ಸಫಲವಾಗಿಬಿಡುವುದೋಎಂಬ ಭಯ ಜೊತೆಯಲ್ಲಿಯೇ.

ದಿನದಂತೆ ಕಪ್ಪು ಕತ್ತಲು ಭೂಮಿಯನ್ನುಆವರಿಸಿಕೊಂಡಿತು. ಸಮಾಧಾನದ ನಿಟ್ಟುಸಿರು ಬಿಟ್ಟಆತ್ಮ. ಸಂವೇದನಾಲ ಯೋಚನೆ ಬಾರದೇ ಇರಲಿಲ್ಲ.ಏನು ಮಾಡುತ್ತಿರಬಹುದು ಈಗ?? ನನ್ನ ಅಸ್ತಿತ್ವದಕೊರತೆ ಕಾಡುತ್ತಿರಬಹುದು ಎಂದುಸಮಾಧಾನಿಸಿಕೊಳ್ಳಲು ಯತ್ನಿಸಿದ. ಆದರೂವಾಸ್ತವದ ಅರಿವಾಯಿತು. ಅವನ ಶ್ರಮವೆಲ್ಲವ್ಯರ್ಥವಾಗಿತ್ತು. ಎಲ್ಲವನ್ನೂ ಸರಿಯಾಗಿಯೇಮಾಡಿದ್ದೆ ಎಂದುಕೊಂಡಿದ್ದ. ಆದರೆ ಅರಿವಿಲ್ಲದೆ ತಪ್ಪುಮಾಡಿದ್ದ ಆತ್ಮ. ಬುದ್ಧಿಯನ್ನು ತುಂಬಬಾರದಿತ್ತು, ನನ್ನಸೌಕರ್ಯಕ್ಕೆ ತಕ್ಕಂತೆ ಅನಂತರದಲ್ಲೂಅವಳಿಗೆಲ್ಲವನ್ನೂ ಕಳಿಸುವುದು ಸಾಧ್ಯವಿತ್ತು, ನಾನುಅವಳಿಗೆ ಅತಿಯಾಗಿಯೇ ಜಾಣ್ಮೆಯನ್ನು ತುಂಬಿದ್ದೇನೆಎಂದು ನಿರಾಶನಾದ.

ಬದಲಾವಣೆಯೇ ಬದುಕು. ಯೋಚನೆಗಳಿಂದಲೇಬದಲಾವಣೆ. ಯೋಚನೆಗಳಿಗೆ ಪರಿಧಿ ಇರುವುದಿಲ್ಲ.ಯೋಚನೆಗಳಿಂದ ಪ್ರಯೋಜನವೆಷ್ಟೋ ಯೋಚಿಸಿನೋಡಿದರೆ ಹಾನಿಯೂ ಅಷ್ಟೆ. ಇಂಥದೇಯೋಚನೆಗಳಿಂದ ಆತ್ಮ ಅವೆಷ್ಟೋ ಬಾರಿಕಣ್ಣೀರಾದದ್ದಿದೆ, ಎಷ್ಟೋ ನಿದ್ರೆಯಿಲ್ಲದ ರಾತ್ರಿಗಳನ್ನುಕಳೆದಿದ್ದಾನೆ.

        ನನ್ನ ಜೀವನದ ಅಸ್ವಸ್ಥ ರಾತ್ರಿಗಳು. .

         ತುಂಬ ವಿಚಿತ್ರವಾಗಿ ಕಳೆದುಹೋಗುವಪರಿಧಿಯಿಲ್ಲದ ವೃತ್ತಗಳು. .

         ತುಂಬ ಸುಂದರ ಕನಸು. . ಕತ್ತಲು. .

         ಅವೇ ನಿದ್ರೆಯಿರದ ಕಂಗಳು ಸಹಕರಿಸುತ್ತವೆಮತ್ತೆ ಮರುದಿನ. .

         ಕನಸುಗಳ ಮುದ್ದಾದ ಎಸಳುಗಳನ್ನು ಯಾರೋಕೀಳುತ್ತಾರೆ. .

         ಯೋಚನೆಗಳ ಸಾಲು ಉಸಿರು ಕಟ್ಟಿಸುತ್ತವೆ. .

         ಆ ನೋವಿನಲಿ ಮತ್ತೆ ರಾತ್ರಿ. .

         ನಿದ್ರೆಯಿಲ್ಲದ ಅಸ್ವಸ್ಥ ರಾತ್ರಿ. .

ಆದರೂ ಯೋಚನೆಗಳು ಮೆದುಳನ್ನು ಓಡಿಸುತ್ತವೆ.ಜೀವಂತಿಕೆಯ ಸಂಕೇತ ಅದು. ಯೋಚನೆಗಳನ್ನೇಮಾಡದವರು ನಿಂತ ನೀರಿನಂತೆಯೇ. ಎಲ್ಲಿಸೇರಿದರೂ ಅದರ ಆಕಾರ ಪಡೆದು ಅದರಲ್ಲೇ ಹಿತಹುಡುಕಿಕೊಳ್ಳುತ್ತಾರೆ. ಹುಡುಕುವುದೆಲ್ಲಿಂದ ಬಂತು??ಇರುವುದನ್ನು ಸ್ವೀಕರಿಸಿದ್ದು, ಜೀವನ ಹೇಗಿದ್ದರೂಸರಿಯೇ ಎಂಬಂತೆ ನಿರ್ಲಿಪ್ತವಾಗಿ ಬದುಕಿಬಿಡುತ್ತಾರೆ.

ಮನೆಯೆದುರಿನ ಕೊಳಚೆಯಲ್ಲೇ ನನ್ನದೂ ಪಾಲಿರಲಿಎಂದು ಕಸ ಎಸೆಯುವ ಮನೆಯೊಡತಿ, ಬೀದಿಯಪಕ್ಕದ ಓಣಿಯಲ್ಲೇ ಮೂತ್ರ ಹೊರಹಾಕಿನಿರಾಳವಾಗುವ ಪ್ರತಿಷ್ಠಿತ ಕಂಪನಿಯ ಉದ್ಯೋಗಿ,ಅಲ್ಲೇ ಪಕ್ಕದಲ್ಲಿ ನಿಂತು ತಿಂಡಿ ತಿನ್ನುವ ಮಕ್ಕಳು, ಅವರಹೆತ್ತವರು, ಯಾರೂ ಯೋಚಿಸಲಾರರು.ಯೋಚನೆಗಳಿಗೆ ಅತೀತವೆಂಬಂತೆ ಬದುಕುಕಳೆದುಬಿಡುತ್ತಾರೆ.

ನಾನೇಕೆ ಹೀಗೆ ಹೊಲಸಾಗಿದ್ದೇನೆ?? ಇದಕ್ಕೆಲ್ಲ ಕೊನೆಎಲ್ಲಿ? ಮುಕ್ತಾಯಕ್ಕೊಂದು ಪ್ರಾರಂಭಮಾಡುವವರಾರು? ಎಂದು ಯಾರೊಬ್ಬನೂಯೋಚಿಸುವುದಿಲ್ಲ.

ತಾವು ಪಡೆದದ್ದೇ ಸುಖ; ಇರುವುದೇ ಸೌಖ್ಯ.

ಬದುಕು ಕಳೆಯುವುದಲ್ಲ, ಬದುಕಬೇಕು.ಬದಲಾಗಬೇಕು; ಬದಲಾಯಿಸುವಂತೆ ಬದುಕಬೇಕು.

ವಿಶ್ವಾತ್ಮನ ಸೃಷ್ಟಿಯ ಮಗು, ಪ್ರತಿಯೊಂದು ಹೊಸಜೀವಿಗಳು ಏನೂ ತಿಳಿಯದೇ ಭೂಮಿಗೆ ಬರುವುದುಇದೇ ಕಾರಣಕ್ಕೆ. ಸುತ್ತಲಿನ ಪ್ರಪಂಚ ಜೀವಿಗೆ ಏನುನೀಡುತ್ತದೆಯೋ ಅದನ್ನೇ ಕಲಿಯುತ್ತವೆ. ಗಮನವಿರದವಿಷಯಗಳು ಗಮನಾರ್ಹವಾಗಿಬಿಡುತ್ತವೆಕಲಿಯುವಾಗ. ಸಣ್ಣ ಸಣ್ಣ ವಿಷಯಗಳು ನೋಡುನೋಡುತ್ತಲೇ ರೂಢಿಗೆ ಬಂದುಬಿಡುತ್ತವೆ. ಎಡಗೈಲಿಬರೆಯುವವರು, ಬಲಗೈಲಿ ಬರೆಯುವವರು,ಅಪರೂಪಕ್ಕೆ ಆಶ್ಚರ್ಯವೆಂಬಂತೆ ಎರಡೂ ಕೈಗಳಲ್ಲಿಸರಾಗವಾಗಿ ಬರೆಯುವವರು ಎಲ್ಲರೂ ಕಾಣಸಿಗುತ್ತಾರೆ. ಇದು ಬರೆಯುವುದಕ್ಕೆ ಮಾತ್ರಸೀಮಿತವಲ್ಲ. ಆಡುವ ಮಾತಿನಿಂದ ಮಾಡುವಕೆಲಸದವರೆಗೆ… ಬರುವ ಯೋಚನೆಗಳಿಂದ ತರುವವಸ್ತುಗಳವರೆಗೆ… ಸುತ್ತಲಿನ ಪ್ರಪಂಚ ಕಂಡರೀತಿಯಲ್ಲಿ ಬೆಳೆದಿರುತ್ತಾರೆ, ಬದುಕುವ ನೀತಿಕಲಿಯುತ್ತಾರೆ. ಕಲಿಕೆಯೆಂಬುದು ಸುತ್ತಲಿನಪ್ರಪಂಚದಿಂದಲೇ ಬರುವುದು.ಇದರಿಂದಾಗಿಯೇಇವಳು ಕೂಡ ಸುತ್ತಲಿನಂತೆ ಭಾವನೆಗಳಿಂದಬೇರಾದಳು; ನಲಿವಿನಿಂದ ದೂರಾದಳು. ಅತೀಎನ್ನಿಸುವ ಜಗತ್ತಿಗೆ ಹತ್ತಿರವಾಗುತ್ತ.. ಹಾಗಾದರೆನಾನೇಕೆ ಇಷ್ಟು ಭಾವುಕ ಎಂದು ತನ್ನಲ್ಲೇಪ್ರಶ್ನಿಸಿಕೊಂಡ ಆತ್ಮ.

ಯೋಚನೆಗಳ ಮಹಾಪೂರಕ್ಕೆ ದಂಗಾದ.ಮಹಾಪೂರವನ್ನಾದರೂ ನಿಯಂತ್ರಿಸಬಹುದು;ಯೋಚನೆಗಳನ್ನಲ್ಲ. ಯೋಚನೆಗಳಿಗೆ ಬೇಲಿಯಿಲ್ಲ.ಬಹುತೇಕ ಜನರು ಯೋಚನೆಗಳಿಲ್ಲದೇ ಕಳೆಯುತ್ತಾರೆ.ಸ್ವಚ್ಛ ಶೂನ್ಯರಂತೆ ಅವರು ಪ್ರಪಂಚವನ್ನುಬದಲಾಯಿಸಲಾರರು. ಬದಲಾವಣೆಗಳು ಬರುವುದುಯೋಚನೆಗಳಿಂದ. ಯೋಚಿಸುವವನ ರೀರಿಯೇಬೇರೆ, ಅವನು ಬದುಕುವ ನೀತಿಯೇ ಬೇರೆ. ಅವನುಪಾದರಸದ ಗೋಲಿಯಂತೆ ಚಲಿಸುತ್ತಲೇ ಇರುತ್ತಾನೆಬದಲಾವಣೆಯ ಕಡೆಗೆ. ಆತ್ಮನೂ ಹಾಗೆಯೇ. ಆತಬದಲಾವಣೆ ಬಯಸುತ್ತಿದ್ದ, ಪ್ರಪಂಚದ ವೈಪರಿತ್ಯಗಳಎದುರು ತಾನೊಬ್ಬನೇ ನಿಂತು ಹೋರಾಡಿ ಹದಕ್ಕೆತರಬೇಕೆಂದುಕೊಂಡ.

ಹೇಗೆ? ಎಲ್ಲಿಂದ? ಯಾರನ್ನು ಸರಿ ಮಾಡಬೇಕು?ಯಾರನ್ನೋ ಸರಿ ಮಾಡುವ ಯೋಚನೆಗಿಂತಮೊದಲು ನನ್ನ ವ್ಯಕ್ತಿತ್ವ ಹೇಗಿದೆ? ಬರೀ ಪ್ರಶ್ನೆಗಳ ಕಂತೆ,ಒಂದು ತಿಳಿಯದಾಗಿತ್ತು.

ಆದರೂ ಆತ್ಮ ಬದಲಾವಣೆ ಬಯಸುತ್ತಿದ್ದ. ವರ್ಷಿಯಎರಡನೇ ಸೂರ್ಯ ಏನಾಗಿರಬಹುದು? ಎಲ್ಲಿಹೋಗುತ್ತಿರಬಹುದು? ಆತ್ಮನ ಯೋಚನೆಗಳ ದಿಕ್ಕುಒಮ್ಮಿಂದೊಮ್ಮೆಲೆ ಬದಲಾಗಿ ಹೋಯಿತು.

ಮನೆಯ ಮಾಡಿನ ಮೇಲೆ ಕುಳಿತ ಆತ್ಮ ಆಗಸವನ್ನೇದಿಟ್ಟಿಸಿ ನೋಡುತ್ತಿದ್ದ. ಮನದಲ್ಲಿ ನಸುನಗುವೊಂದುಮಿಂಚಿ ಮಾಯವಾಯಿತು. ಆಗಸಕ್ಕೆಸಿಂಗಾರವೆಂಬಂತೆ ಕತ್ತಲೆ ರಾತ್ರಿಯ ಸೆರಗು, ಅದಕ್ಕೆಮೆರುಗೆಂಬಂತೆ ಕೋಟಿ ಕೋಟಿ ನಕ್ಷತ್ರಗಳ ಮೆರುಗು.ಆದರೂ ಕತ್ತಲ ಸೆರಗೇ ಹಾಸಿದೆ ಭೂಮಿಗೆ.ಸೂರ್ಯನನ್ನೇ ನಾಚಿಸಿ ಕಡಲಾಳದಲ್ಲಿ ನಿಲ್ಲಿಸುವಕತ್ತಲನ್ನು ಎರಡನೇ ಸೂರ್ಯ ತಡೆಯಲು ಸಾಧ್ಯವೇ?ವರ್ಷಿಯ ಆವಿಷ್ಕಾರ ಅವನ ಸೋಲಿನ ಮೊದಲನೇಹಂತ ಎಂದು ಸಮಾಧಾನಗೊಂಡ.

ನಾನೇಕೆ ವರ್ಷಿಯ ವಿರುದ್ಧ ಕೂಗಾಡಿದೆ?ತಂದೆಯಂಥವನ ಜೊತೆ ಜಗಳವಾಡಿದೆನೆ? ಅದುಸಂವೇದನಾಳ ಮೇಲಿನ ಕೋಪವಿರಬಹುದೇ?ಅತಿರೇಕದ ಪ್ರೀತಿಯಿರಬಹುದೇ? ನನಗೂ ಅವಳಿಗೂಸಂಬಂಧವೇನು? ನಾನು ಸೃಷ್ಟಿಸಿದ ಜೀವಿ, ನನಗೆಂದೇಸೃಷ್ಟಿಸಿಕೊಂಡ ಜೀವಿ ನನ್ನನ್ನು… ನನ್ನನ್ನು ಮಾತ್ರಪ್ರೀತಿಸಬೇಕೆಂಬ ಸ್ವಾರ್ಥವಿರಬಹುದೇ?

ನಾನು ನೋಡಿದ ಕೇವಲ ಹತ್ತು ನಿಮಿಷಗಳಲ್ಲಿ ನನಗೆಸಂವೇದನಾಳಲ್ಲಿ ಪ್ರೀತಿ ಹುಟ್ಟಲು ಸಾಧ್ಯವೇ? ನನ್ನಪ್ರೀತಿಯನ್ನು ಅವಳಿಗೆಂಬಂತೆ ಬದುಕುವುದನ್ನುಉಲ್ಲಂಘಿಸಿದ್ದಕ್ಕಾಗಿ ನನಗವಳ ಮೇಲೆ ಸಿಟ್ಟಾ? ಪ್ರೀತಿಮತ್ತು ಸ್ವಾರ್ಥ ಎರಡು ಬೇರೆಯಾಗುವ ಬಿಂದುಅಥವಾ ಸೀಮಾರೇಖೆಯಿದ್ದಲ್ಲಿ ಯಾವುದು ಅದು?ಎಲ್ಲಿದೆ?

ಪ್ರೀತಿ ಎಂದರೆ ತನ್ನದು ಎನ್ನುವ ಭಾವ, ಸ್ವಂತದ್ದು, ತನ್ನಸ್ವಂತದ್ದು ಮಾತ್ರ. ಸ್ವಂತಿಕೆಯಿರುವಲ್ಲಿ ಸ್ವಾರ್ಥ ಸಹಜ.ನನ್ನದೆಂಬ ಭಾವ ಕೊನೆಯವರೆಗೂ ನನ್ನದಾಗಿಯೇಉಳಿಯಲಿ ಇತರರಿಗೆ ಬೇಡ ಎಂಬ ಭಾವವೇಪ್ರೀತಿಯ ಇನ್ನೊಂದು ಮುಖ. ಹಾಗಿದ್ದಲ್ಲಿ ನನ್ನದುಸ್ವಾರ್ಥ ಸೇರಿದ ಪ್ರೀತಿಯೇ? ಪ್ರೀತಿಯೆಡೆಗಿನಸ್ವಾರ್ಥವೇ? ಇವೆರಡರಲ್ಲಿ ವ್ಯತ್ಯಾಸವಿದೆಯೇ? ಉತ್ತರನೀಡುವವರು ಯಾರು? ಪ್ರಶ್ನೆಯಾಗಿಯೇ ಉಳಿಯಿತುಆತ್ಮನಿಗೆ.

ಸಂವೇದನಾಳ ಮೇಲೆ ನನಗಿರುವುದು ಪ್ರೀತಿಯಾಅಥವಾ ಅಧಿಕಾರದ ಹಂಬಲವಾ? ಅಧಿಕಾರದಲ್ಲಿಹಂಬಲವೆಲ್ಲಿ ಸಾಧ್ಯ? ಅಧಿಕಾರವೆಂದುದರ್ಪದಿಂದಲೇ ಕೂಡಿರುವುದು. ಏನೋ ಅಧಿಕಾರದಹಂಬಲ ಎಂದು ಒಪ್ಪಿಕೊಳ್ಳಲು ಹಿಂಜರಿಯಿತು ಆತ್ಮನಮನಸ್ಸು. ಪ್ರೀತಿಯೇ ಎಂದುಕೊಂಡ. ಪ್ರೀತಿಯಾ?ಅರಿಯದೇ ತಿಳಿಯದೆ ಪ್ರೀತಿಯಾಗಲು ಸಾಧ್ಯವೇಎಂದನ್ನಿಸುವ ಮೊದಲೇ ಇದೇ ಇರಬೇಕು ಪ್ರೀತಿಎಂದು ಮನಸು ನಾಚಿಕೊಂಡಿತು. ಒಳಗೊಳಗೆ ಸನಾಎಂದವು ಆತ್ಮನ ತುಟಿಯಂಚುಗಳು. ಅದೇನೋನವಿರು ಭಾವಗಳು, ಪ್ರೀತಿಯ ಕನವರಿಕೆಗಳು,ಸುಂದರ ಸುಕೋಮಲ ಕನಸುಗಳು ಆತನ ಹೃದಯಕ್ಕೆಕಚಗುಳಿ ನೀಡಿದವು. ಮನಸ್ಸು ತುಂಬಿ ಬಂತು.ಕಂಗಳು ಕನವರಿಸಿದವು. ವಾಸ್ತವಕ್ಕಿಂತ ಕಲ್ಪನೆಯೇಚಂದ ಎಂದುಕೊಂಡ.

      ಸಂವೇದನಾ. .

      ನೀ ನನ್ನ ಕನಸಿನ ಪಲ್ಲವಿಯ ಚರಣಗಳು. .

      ಮುಗ್ಧ ನಲಿವಿನ ಆಳದ ಸಂತಸಗಳು. .

      ಸಮ್ಮೋಹನವೇ ನೀ ನನಗೆ ಚೆಲುವಿನ ಸಿಹಿಬುತ್ತಿ. .

      ಕೆಂದಾವರೆಯ ಕಂಗಳಲಿ ಸಿಹಿ ತರಲು ಬಂದೆ. .

     ಭಾವಯಾನದ ಪಯಣ, ಮುಗ್ಧ ಕನಸುಗಳಮೆರವಣಿಗೆ..  ಅದೆಷ್ಟು ಹೊತ್ತು ಹೀಗೆಯೋಚಿಸುತ್ತಿದ್ದನೋ… ನಿದ್ರಾದೇವಿ ಅದ್ಯಾವಾಗಲೋತನ್ನ ತೆಕ್ಕೆಯಲಿ ಆತ್ಮನನ್ನು ಸೆಳೆದಪ್ಪಿದ್ದು ಅರಿವೇಆಗಲಿಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

Gautam Hegde

ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!