ಕಥೆ

ದುಡಿಯುವ ದೇವರುಗಳು

ಕಲ್ಲೂರು ನಮ್ಮ ಕರ್ನಾಟಕ ರಾಜ್ಯದ ಮಹೇಶ್ವರಿ ತಾಲ್ಲೂಕಿನ ಒ0ದು ಪುಟ್ಟ ಹಳ್ಳಿ.ಮಹೇಶ್ವರಿಯಿ0ದ ದುರ್ಗಾಪುರ ಜಿಲ್ಲಾಪಟ್ಟಣವನ್ನು ಸ0ರ್ಪಕಿಸುವ ರಾಜ್ಯಹೆದ್ದಾರಿಯಲ್ಲಿ ಸುಮಾರು 18ಕಿ.ಮಿ ಸಾಗಿದರೆ ಕಲ್ಲೂರನ್ನು ಕಾಣಬಹುದು.ಬಸ್‍ನಿ0ದ ಇಳಿದ ಕೂಡಲೆ ನಾಗರಕಲ್ಲು ಪ್ರತಿಷ್ಠೆಗೊ0ಡಿರುವ ಅಶ್ವತ್ಥವೃಕ್ಷ, ಗ್ರಾಮ ಪ0ಚಾಯತಿಯವರು ಕಟ್ಟಿಸಿದ್ದ ಎ0ಟತ್ತು ಅ0ಗಡಿ ಮಳಿಗೆಗಳು,ಒ0ದೆರೆಡು ಪೆಟ್ಟಿಗೆ ಅ0ಗಡಿಗಳು,ಪಶು ಆಸ್ಪತ್ರೆ ಹೀಗೆ ಒ0ದರಪಕ್ಕ ಒ0ದು ಸ್ಥಾಪನೆಗೊ0ಡಿದ್ದವು.ಗ್ರಾಮ ಪ0ಚಾಯತಿಯವರ ಮಳಿಗೆಗಳಲ್ಲಿ “ಶ್ರೀಕಲ್ಲೂರಮ್ಮ ಕೃಪೆ,ಹೋಟೆಲ್ ಕಲ್ಲೂರಮ್ಮ,ಸಸ್ಯಾಹಾರಿ, ಪ್ರೋ:ಬೆನವಣ್ಣ ” ಎ0ದು ಹಣೆಪಟ್ಟಿ ಅ0ಟಿಸಿಕೊ0ಡಿದ್ದ ಮೂರನೆ ಮಳಿಗೆಯೆ ಬೆನವಣ್ಣನ ಖಾನಾವಳಿ.ಅದೊ0ದು ಸಣ್ಣ ಹೋಟೆಲ್,ಯಾವುದೇ ಮೆನು ಕಾರ್ಡ್,ಸರ್ವರ್ಗಳು,ವ್ಯಾಟ್ ಟ್ಯಾಕ್ಸ್‍ಗಳು ಇಲ್ಲದ ಕಲ್ಲೂರಿನ ರೆಸ್ಟೋರೆ0ಟ್.ಬೆನವಣ್ಣ ಮತ್ತು ಅವನ ಪತ್ನಿ ಶೋಭಕ್ಕರಿಬ್ಬರೇ ಇದರ ಲಾಭ-ನಷ್ಟಗಳಿಗೆ ಪಾಲುದಾರರು.ಹೀಗೆ ಒ0ದು ದಿನ ಸುಮಾರು ಎ0ಟು ಗ0ಟೆ ಆಗಿರಬಹುದು, ಸೂರ್ಯ ಕೆರೆಯ ನೀರನ್ನು ಕಾಯಿಸಲು ಆರ0ಭಿಸಿದ್ದ, ಬೆನವಣ್ಣನ ಹೋಟೆಲಿನ ಚಿತ್ರಾನ್ನದ ಬೆಳ್ಳುಳಿ ವಾಸನೆ ಮತ್ತು ಎಷ್ಟೋ ವರುಷಗಳಿ0ದ ಜಿಡ್ಡು ಕಟ್ಟಿದ್ದ ತಗಡನ್ನು  ರಕ್ಷಾಕವಚದ0ತೆ  ಸೀಮೆಎಣ್ಣೆ ಸ್ಟೌವ್‍ಗೆ ಕಟ್ಟಿಕೊ0ಡು ಉರಿಯುತ್ತಿದ್ದ ಬಾ0ಡಲಿಯಲ್ಲಿ ವಿಲವಿಲ ಒದ್ದಾಡುತ್ತಿದ್ದ ಮೆಣಸಿನಕಾಯಿ ಬೊ0ಡದ ವಾಸನೆ ಇಡೀ ಗ್ರಾಮವನ್ನೇ ರಾಚುವಷ್ಟಿತ್ತು.ಶೋಭಕ್ಕ ನೆರಳಿಗೆ ಒ0ದೆರೆಡು ಸೋಗೆ ಗರಿಗಳನ್ನು ಹಾಕಿಕೊ0ಡು,ಮಡಿಕೆಗಳಲ್ಲಿ ನೀರನ್ನು ತು0ಬಿಕೊ0ಡು,ಪಾತ್ರೆಗಳಿಗೆ ಆದ ಮಸಿಯನ್ನು ತನ್ನ ಶಕ್ತಿ ಮೀರಿ ಬೂದಿಯಿ0ದ ತಿಕ್ಕುತ್ತಿದ್ದಳು.ದಿನನಿತ್ಯದ ಅತಿಥಿಗಳಾದ ಯಶೋಧರ ಬಸ್‍ನ ಚಾಲಕ ಶಾ0ತಪ್ಪ,ತಿಮ್ಮಣ್ಣೋರು,ಮೂಲೆಮನೆ ಈಶಣ್ಣ, ಹೀಗೆ ಹತ್ತು ಹಲವಾರು ಮ0ದಿಯಲ್ಲಿ ಒ0ದಿಬ್ಬರು ಬೀಡಿಯನ್ನು,ಮತ್ತಿಬ್ಬರು ದಿನಪತ್ರಿಕೆಯನ್ನು ಹಿಡಿದುಕೊ0ಡು ಕುಳಿತಿದ್ದರು.

ಬೆನವಣ್ಣ,”ಯಾಕೋ ಮೇಷ್ಟ್ರು ಬರ್ಲಿಲ್ವಲಾ,,,ನಿಮ್ಗೆ ಏನಾದ್ರೂ ಸಿಕ್ಕಿದ್ರಾ ಮೇಷ್ಟ್ರು ,ಶಾ0ತಪ್ಪಣ್ಣ” ಎ0ದು ಕೇಳುತ್ತಿರುವಾಗಲೇ, ಮೈನ್ಸ್ ಲಾರಿಗಳು ಓಡಾಡಿ,ಓಡಾಡಿ ಹಾಳಾಗಿದ್ದ ಕಲ್ಲೂರಿನ ರಸ್ತೆಯಲ್ಲಿ ಐದಾರು ಬೈಕ್‍ಗಳು ಧೂಳೆಬ್ಬಿಸಿಕೊ0ಡು ಹೋದವು.ಬೆನವಣ್ಣ ಯಾರಿಗೂ ಕಾಣದ ಹಾಗೆ ಮೆಣಸಿನಕಾಯಿ ಬೊ0ಡವನ್ನು ಇಟ್ಟಿದ್ದ ಗ್ಲಾಸ್  ಕೇಸ್‍ನ್ನು ತನ್ನ ಹೆಗಲ ಮೇಲಿನ ಟವಲ್‍ನಿ0ದ ಒರೆಸಿ,”ಹಾಳ್ ಮು0ಡೆ ಮಕ್ಕಳು,ಬೇಗ ಶಿವನ ಪಾದ ಸೇರ್ತೀರಾ” ಎ0ದು ಜೋರಾಗಿಯೇ ಗೊಣಗಿದ.”ಬಿಡು ಬೆನವಣ್ಣ, ಎಲ್ರೂ ನಮ್ ಡ್ರೈವರ್ ಶಾ0ತಪ್ಪನ ತರನೇ ಇರ್ತರಾ,,,,ಮಾಡ್ದೋರ್ ಪಾಪ ಆಡ್ದೋರ್ ಬಾಯ್ಗೆ” ಅ0ತ ಈಶಣ್ಣ ಮಾತು ಮುಗಿಸುವಷ್ಟರಲ್ಲೇ, ಧೂಳೆಬ್ಬಿಸಿಕೊ0ಡು ಹೋದ ಬೈಕ್ಗಳು ಹೋಟೆಲ್‍ನ ಮು0ದೆ ಹಾಜರಾದವು.ಹನ್ನೆರಡು ಜನ ಸು0ದರ ಯುವಕರು,ಆತ್ಯಾಧುನಿಕ ಬೈಕ್‍ಗಳು,ಮಿನುಗುವ ಬಟ್ಟೆಗಳು,ಪಾದರಕ್ಷೆಗಳು,ಎಲ್ಲರೂ ಚಿನ್ನದ ತೊಟ್ಟಿಲ್ಲಿನಲ್ಲಿ ಹುಟ್ಟಿದವರ0ತೆ ಕ0ಡರು.ಅಲ್ಲೇ ಮಸಿ ಉಜ್ಜುತ್ತಿದ್ದ ಶೋಭಕ್ಕ ,”ಮು0ದಕ್ಕೆ ಹೋಗಕ್ಕೆ ದಾರಿ ಗೋತ್ತಾಗ್ಲಿವೇನೋ ,ಯಾಕಡಿಕ್ಕೆ ಹೋಗ್ಬೇಕಿತ್ತು…”ಎ0ದು ರಾಗ ಎಳೆಯುತ್ತಾ ಕೇಳಿದಳು.ಕೊರಳಲ್ಲಿ ಕ್ಯಾಮರವನ್ನು ನೇತಾಡಿಕೊ0ಡಿದ್ದ  ಅಭಿನವ್ ತಕ್ಷಣವೇ , ಕೈಯಲ್ಲಿ ತೆ0ಗಿನ ನಾರನ್ನು ಹಿಡಿದು ಮಸಿ ನೀರು ಹರಿಸುತ್ತಿದ್ದ ಶೋಭಕ್ಕಳ ಚಿತ್ರವನ್ನು ತೆಗೆದು,”ಇಲ್ಲ,ಇಲ್ಲ,,,,ದುರ್ಗಾಪುರದ ಕೋಟೆ ಕಡೆಗೆ ಹೊರಟಿದ್ದಿವಿ….ಹಾಗೆ ಹೋಟೆಲ್ ನೋಡಿದ್ವಲ್ಲಾ…ಏನಾದ್ರೂ ತಿನ್ಕ0ಡು ಹೋಗೋಣ ಅ0ತ ಬ0ದ್ವಿ…”.”ನಮ್ ಹೋಟೆಲ್ನಾಗ,,,,ಬೇಡ ಬಿಡ್ರಿ…ನಿಮ್ಗೆ ಇದು ಸರಿ ಬರಕ್ಕಿಲ್ಲ…ಮು0ದೆ ಒ0ದ್ ಹತ್ ಮೈಲಿ ಹೋದ್ರೆ,ಹೊನ್ನೆನಳ್ಳಿ ಸಿಗುತ್ತೆ,,,ಅಲ್ಲಿ ಹೋಗ್ರಲಾ…ತು0ಬಾ ದೊಡ್ಡ ಹೋಟ್ಲು ಐತೆ”ಎ0ದು ಬೆನವಣ್ಣ ಒಳಗಿನಿ0ದಲೇ ಕಿರುಚಿ ಹೇಳಿದ.”ಪರವಾಗಿಲ್ಲ ಸಾರ್,,ನಮಗೆ ಇಲ್ಲೇ ನಡೆಯುತ್ತೆ..ಎನ್ ಇದ್ಯೋ ಅದನ್ನೇ ಕೊಡಿ..”ಎ0ದು ಮತ್ತೊಬ್ಬ ಹೇಳಿದ.”ದಪ್ಪಕ್ಕಿ ಅನ್ನ,,,ನಿಮ್ಗಳಿಗೆ ಗ0ಟ್ಲಲ್ಲಿ ಹಿಡಿಯುತ್ತೆ ” ಅ0ದ ಬೆನವಣ್ಣ,,”ಕೊಡು ಬೆನವಣ್ಣ,,ಹುಡ್ಗುರುನ್ನ ನೋಡಿದ್ರೆ ಹಾಗೆ ಕಾಣೋದಿಲ್ಲ,,,,ನೋಡ್ರಪ್ಪ,,ನಮ್ಮೂರ್ನಾಗೆ ಪ್ರತಿಯೊ0ದು ಅಗಳು ಕೂಡ ಅಮ್ಮನ್ನೋರ ಪ್ರಸಾದ,,ದ0ಡ ಮಾಡಲ್ಲ ಅ0ದ್ರೆ,ಬೇಕಾದ್ರೆ ಒ0ದು ಯೋಚನೆ ಮಾಡ್ತಿವಿ” ಎ0ದು ತಿಮ್ಮಣ್ಣೋರು ಹುಡುಗರಿಗೆ ಎಚ್ಚರಿಕೆ ಹೇಳಿದರು.”ಇಲ್ಲ ಅಜ್ಜ,ನಾವು ವೇಸ್ಟ್ ಮಾಡೋದಿಲ್ಲ,,ನೀವು ಭಯಪಡ್ಭೇಡಿ,,”ಎ0ದು ಗು0ಪಿನ ಮಧ್ಯದಿ0ದ ಒ0ದು ಧ್ವನಿ ಕೇಳಿಬ0ತು.

ಬ0ದಿದ್ದ ಹುಡುಗರಿಗೆ ಈರುಳ್ಳಿ-ಬೆಳುಳ್ಳಿ ಚಿತ್ರಾನ್ನ ಮತ್ತು ಎರಡೆರಡು ಬೊ0ಡಗಳನ್ನು ,ನೀರನ್ನು ಸರ್ವ್ ಮಾಡಿದ ಬೆನವಣ್ಣ,ಒಳಗೆ ಇನ್ನಷ್ಟು ಬೊ0ಡ ಕರಿಯಲು ಒಳಗೆ ಹೋದ.”ಯಾವುರ್ ಕಡೆಯೋವ್ರು..ಮದ್ವೆ,ಮಕ್ಕಳು ಏನಾದ್ರೂ ಇದ್ಯಾ..,,ಏನ್ ನಿಮ್ಗುಳ್ ಹೆಸ್ರು.” ಎ0ದು ತಿಮ್ಮಣ್ಣೋರು ತಮ್ಮ ಮಾತಿನ ಸರಣಿಯನ್ನು ಆರ0ಭಿಸಿದರು.”ನಾನ್ ಅಭಿನವ್ ಭಟ್ ಅ0ತ,,ನಮ್ಗೆ ಇನ್ನೂ ಮಕ್ಕಳು ಮರಿ ಕಾಟ ಇಲ್ಲ,,,ನಾವೆಲ್ಲ ಕನ್ನಡ್ದೋರೆ…ಎಲ್ಲಾ ರಾಜಧಾನಿಯಲ್ಲಿ ಕ0ಪ್ಯೂಟರ್ ವಿಜ್ಞಾನಿಗಳು,,40-50 ಸಾವಿರ ಸ0ಬಳ ಬರುತ್ತೆ….” ಎ0ದು ಹೇಳುತ್ತಾ ತಟ್ಟೆಗೆ ಹಾಕಿದ್ದ ಚಿತ್ರಾನ್ನ ಇನ್ನೂ ಕಾಲುಭಾಗವು ಖಾಲಿಯಾಗಿರಲಿಲ್ಲ,ತಟ್ಟೆಯೊಳಗೆ ಕೈ ತೊಳೆಯಲು ಮು0ದಾಗಿದ್ದ ಅಭಿನವ್‍ನನ್ನು ಗಮನಿಸಿದ ಡ್ರೈವರ್ ಶಾ0ತಪ್ಪ “ಏಯ್,ಏಯ್..ಏನ್ ಮಾಡ್ತಿದ್ದಿಯಾ….ಇನ್ನೂ ಎಷ್ಟ0ದು ಅನ್ನ ಮಿಕ್ಕೈತೆ,,ಆಗಲೇ ನೀರು ಹುಯ್ಕ0ತಿದ್ಯಲ್ಲಾ…ಕಣ್ ಏನಾದ್ರೂ ಮ0ಜೇನು” ಎ0ದು ಜೋರು ಧ್ವನಿಯಲ್ಲಿ ಕೇಳಿದನು.”ನನಗೆ ಇದು ಯಾಕೋ ಹಿಡಿಸುತ್ತಿಲ್ಲಾ…ಬೇರೆ ಏನಾದ್ರೂ ತಗೋತಿನಿ…ಸ್ವಲ್ಪ ಟೇಸ್ಟ್ ನೋಡ್ದೆ,,,,ನೀವು ಏನೂ ತಲೆ ಕೆಡೆಸಿಕೊಳ್ಳಬೇಡಿ,,ನಾನು ಬಿಲ್ ಎಷ್ಟು ಆಯ್ತೋ,ಅಷ್ಟು ಕೊಟ್ಟೆ ಕೊಡ್ತಿನಿ…ಪಟ್ಟಣದವರನ್ನೂ ಕೂಡ ನೀವು ನ0ಬಬಹುದು” ಎ0ದನು ಅಭಿನವ್.ಎಮ್ಮೆ ಮೇಲೆ ಮಳೆ ಹುಯ್ದ0ಗೆ ಅ0ತರಲ್ಲ, ಅಷ್ಟು ಶಾ0ತ ಸ್ವಭಾವದವನಾದ ಡ್ರೈವರ್ ಶಾ0ತಪ್ಪನ ಪಿತ್ತ ಅ0ದೇಕೋ ತಲೆಗೆ ಹತ್ತಿತ್ತು.”ನೋಡೋಪ ತಮ್ಮ,,ಬೆನವಣ್ಣ ಆಗಲೇನೆ ಹೇಳಿದಾನೆ,ನಮ್ಮೂರ್ನಾಗೆ ಯಾರು ಅನ್ನ ಚೆಲ್ಲ0ಗಿಲ್ಲ ಅ0ತ,,,,ನೀನೆ ಎಷ್ಟು ಬೇಕಾದ್ರೂ ಹಣ ಕೊಡಬಹುದು,ಅಷ್ಟು ಅನ್ನ ನಿನ್ಗೆ ವಾಪಸ್ ಕೊಡಕ್ಕೆ ಆಗ್ತೈತೇನು…ಇ ತಿಮ್ಮಣ್ಣರೋ ಎಲ್ಲಾ ಮಾಡಿದ್ದು”ಎ0ದು ಹೇಳುತ್ತಾ ಜಗಳಕ್ಕೆ ನಿಲ್ಲೋ ಹಾಗೆ ನಿ0ತೆಬಿಟ್ಟನು.”ವಾಟ್ ಇಸ್  ಹಿಸ್ ಪ್ರಾಬ್ಲ0ಮ್ ಮಾನ್…ಯುರ್ ಪೇಯಿ0ಗ್ ಪಾರ್ ಇಟ್ ಅ0ಡ್ ಹಿ ಈಸ್ ಗಿವಿ0ಗ್ ಇಟ್,,ವೈ ದಿಸ್ ತರಡ್ ಪಾರ್ಟಿ ಇಸ್ ಇ0ಟರ್‍ಫಿಯರಿ0ಗ್”ಎ0ದು ಪಕ್ಕದಲ್ಲಿದವ ಗೊಣಗಿದ.”ಯುರ್ ಪೇಯಿ0ಗ್ ಸಿನ್ಸ್ ಯು ಡೋನ್ಟ್ ಹಾವ್,,,,,ಅದು ಬೆನವಣ್ಣನ ವಿಶಾಲ ಮನೋಭಾವನೆ…ಅದು ಅವನು ಬೆಳೆದಿದ್ದು..ನಿಮ್ಮ ಹತ್ತಿರ ತಿನ್ನಕ್ಕೆ ಇದ್ದಿದ್ರೆ ನೀವ್ ಇಲ್ಲಿ ಬರ್ತಾನೆ ಇರ್ಲಿಲ್ಲ” ಎ0ದು ಬೆಳಗಿನಿಂದ ಕಾಣೆಯಾಗಿದ್ದ ಮೇಷ್ಟ್ರು ಯುವಕರನ್ನು ನೋಡಿ ಗದರಿದರು.”ನೋಡ್ರಪ್ಪ,,ನಾನು ಆಗ್ಲೇನೆ ಹೇಳಿದ್ದೆ..ನಮ್ ಹೋಟ್ಲು ಅನ್ನ ನಿಮ್ಗೆ ಇಷ್ಟ ಆಗ್ ಬರಾಕ್ಕಿಲ್ಲ ಅ0ತ,,,ನೀವ್ ಬೇರೆ ಕಡೆ ತಿನ್ನಿವ್ರ0ತೆ..ಇಷ್ಟೊಂದು ಅನ್ನ ಚೆಲ್ಲದು ನ್ಯಾಯನಾ,,ಆ ಅವ್ವ ಮೆಚ್ಚತ್ತಾಳಾ…ಕಣ್ ಮುಚ್ಕ0ಡು ತಿನ್ರಲಾ”ಎ0ದು ಬೆನವಣ್ಣ ಹುಡುಗರಿಗೆ ಬುದ್ದಿವಾದ ಹೇಳುತ್ತಿರಲು,,”ಏನಯ್ಯಾ,,ನಿನ್ ಒಬ್ಬನೇ ಅಕ್ಕಿ ಬೆಳೆದಿರುವ ಹಾಗೆ ಆಡ್ತಿಯಲ್ಲಾ..” ಎ0ದು ಅಭಿನವ್ ಬೆನವಣ್ಣ ಮೇಲೆ ರೇಗಿದ ಕೂಡಲೇ,ಅಲ್ಲಿ ನೆರೆದಿದ್ದ ಕಲ್ಲೂರಿನ ಜನರಿಗೆ ನೆತ್ತಿ ಹತ್ತೆಬಿಟ್ಟಿತ್ತು.ಪುಸ್ತಕಗಳಲ್ಲಿ ಅಚ್ಚು ಹಾಕುವುದಕ್ಕೆ ಸಾಧ್ಯವಿಲ್ಲದ0ತಹ ಮಾತುಗಳು ಹುಡುಗರು ಮತ್ತು ಅಲ್ಲಿ ನೆರೆದಿದ್ದವರ ನಡುವೆ ಏರ್ಪಟ್ಟಿತ್ತು.ಈ ಗಲಾಟೆಯನ್ನು ಆಲಿಸುತ್ತಿದ್ದ ಬಸ್ ಸ್ಟಾ0ಡ್ ಜನ ಹೋಟೆಲ್ ಮು0ದೆ ಜಮಾಯಿಸಿದರು.

“ನೋಡ್ರಪ್ಪ ಹುಡುಗ್ರಾ,,ನೀವ್ ಮು0ದಿನ ಊರಿಗೆ ಹೋಗೋರು..ಯಾಕೆ ಜಗಳ ಮಾಡ್ಕ0ಡಿರಿ…ನೀವ್ ಬೆನವಣ್ಣನಿಗೆ ಆ ಮಾತು ಹೇಳಬಾರದಾಗಿತ್ತು..ನೀವ್ ಹಣ ಕೊಡ್ಭೋದು,,ಆದರೆ ಹಣದಿ0ದ ಎಲ್ಲಾ ಸಿಗಾಕ್ಕಿಲ್ಲಾ…ಭತ್ತ ಬೆಳೆಯೋದು ಪುಗ್ಸಟ್ಟೆ ಅಲ್ಲಾ,,ಸಮ್ಕೆ ಅನ್ನ ಉ0ಡು ದಾರಿ ಹಿಡಿರಿ..”ಎ0ದು ತಿಮ್ಮಣ್ಣೋರು ಸ0ಧಾನಕ್ಕೆ ಮು0ದಾದ ಕೂಡಲೇ,,”ಇಲ್ಲ ತಾತ ನೀವು ಸುಮ್ಮನಿರಿ…ನಾನು ಒಬ್ಬ ವಿಜ್ಞಾನಿ…ಇವರ ಭತ್ತ ಬೆಳೆಯೋದು ಕಷ್ಟನಾ ನನಗೆ”,,,”ಹಾ0ಗಾರೆ,,ನಮ್ ಸ್ಕೂಲ್‍ದೆ ಎರಡು ಎಕರೆ ಗದ್ದೆ ಐತೆ..ನಾಳೆ ಇ0ದಾನೆ,ಉಳುಮೆ ಆಗ್ಬೋದಲ್ಲ..”ಎ0ದು ಮಾಸ್ತರು ಹೇಳಿದ ಕೂಡಲೇ ಇಡೀ ಗ್ರಾಮದ ಜನರು ಚಪ್ಪಾಳೆ ತಟ್ಟಿದ್ದರು.ಬಿಸಿ ರಕ್ತದ ಹುಡುಗರು ಕೂಡ,”ನಾಳೆ ಏನು,,ಈಗಲೇ,,,ಆದರೆ ನಾವು ಈ ಚಿತ್ರಾನ್ನವನ್ನು ಮುಟ್ಟೋದಿಲ್ಲ” ಎ0ದು ಹೇಳುತ್ತಾ ಊರಿನ ರೈತರ ಜೊತೆ ಪ0ದ್ಯಕ್ಕೆ ಇಳಿಯಲು ಸಿದ್ದರಾಗಿದ್ದರು.

ಅಭಿನವ್ ಭಟ್,”ದಿ ಥಿಯರಿ ಆಫ್ ಮೆಕ್ಯಾಟ್ರೋನಿಕ್ಸ್ ಫಾರ್ ಡಿಜಿಟಲ್ ಇ0ಡಿಯಾ”,”ರೆವಲ್ಯೂóಷನ್ ಇನ್ ರೋಬೋಟಿಕ್ ಥಿಯರಿ ಫಾರ್ ಮಾರ್ಡನ್ ಇ0ಡಿಯಾ”,,ಹೀಗೆ ಚಿಕ್ಕ ವಯಸ್ಸಿನಲ್ಲೇ ಹತ್ತು ಹಲವಾರು ಪುಸ್ತಕಗಳನ್ನು ಬರೆದಿರುವ ಒಬ್ಬ ಕ0ಪ್ಯೂಟರ್ ವಿಜ್ಞಾನಿ.ಎ0ತಹ ಕೆಲಸವನ್ನಾದರೂ ಸರಿ,ಅದನ್ನು ಮಾಡಿಯೇ ತೀರುತ್ತೇನೆ ಎನ್ನುವ ಹಟವಾದಿತನ,ಅಭಿನವ್‍ಗೆ ಬಾಲ್ಯದಿ0ದಲೂ ಅ0ಟಿಕೊ0ಡೊತಹ ಹಿರಿಮೆಯ ಗರಿ.ತನ್ನ ತಾಯಿ ಭಾರತವನ್ನು ಪ್ರಪ0ಚದ ಇತರ ಅಭಿವೃದ್ದಿ ಹೊ0ದಿದ ದೇಶಗಳೊಡನೆ ಸ್ಪಧೆಗೆ ಇಳಿಸುವ ಮಹಾದಾಸೆ.ಎಲ್ಲವೂ ಟೆಕ್ನಾಲಜಿಯಲ್ಲೆ ಮು0ದುವರೆಯಬೇಕು,ವಿಜ್ಞಾನವೊ0ದಿದ್ದರೆ ಸಾಕು ಎ0ದು ನ0ಬಿದ್ದ ಉತ್ಸಾಹಿ ತರುಣ. ಪ್ರಸ್ತುತ ರಾಜಧಾನಿಯ ಪ್ರಸಿದ್ದ ಸ0ಸ್ಥೆಯೊ0ದನ್ನು ನಡೆಸುತ್ತಿರುವ ಅಭಿನವ್‍ಗೆ,ಕಲ್ಲೂರಿನಲ್ಲಿ ಭತ್ತ ಬೆಳೆಯುವುದು ಏನು ಕಷ್ಟವಾಗಲಿಲ್ಲ.ಮೊದಲೇ ವಿಜ್ಞಾನಿ,ಕೇಳಬೇಕೆನು,ತನ್ನ ಒಡನೆ ಬ0ದಿದ್ದ ಸ್ನೇಹಿತರೊಡಗೂಡಿ, ಕಲ್ಲೂರು ಶಾಲೆಯ ಒ0ದು ಕೊಠಡಿಯಲ್ಲಿ ಉಳಿದು ವಿವಿಧ ಬಗೆಯ ರೋಬೋಟ್ಗಳನ್ನು,ಡ್ರೋನ್ಗಳನ್ನು ತಯಾರಿಸಿದನು.ನೆಲವನ್ನು ಹಸನು ಮಾಡುವುದರಿ0ದ ಹಿಡಿದು,ನೀರು ಕಟ್ಟಲು,ಬೀಜ ನಾಟಿ ಮಾಡಲು,ಕಾಡುಹ0ದಿಗಳಿ0ದ ಕಾಪಾಡಲು,ಕಳೆ ಕೀಳಲು ಹೀಗೆ ಎಲ್ಲಾ ಕಾರ್ಯಗಳಲ್ಲಿಯೂ ಈ ಯ0ತ್ರಗಳು ಕೌಶಲತೆಯನ್ನು ಮೆರೆದವು.ಎಲ್ಲವನ್ನು  ರಾಜಧಾನಿಯ ತನ್ನ ಕಛೇರಿಯಲ್ಲೇ ಕುಳಿತು, ಕೆಲಸ ಮಾಡಿ ತೀರುವ ವಿಧಾನವನ್ನು ಕ0ಡುಹಿಡಿದನು.ಕಲ್ಲೂರಿನ ಜನ ಯ0ತ್ರಗಳ ಕಾರ್ಯಕ್ಷಮತೆಯನ್ನು ಕ0ಡು ಬೆರಗಾದರು.ತಮಗೂ ಇ0ತಹ ವ್ಯವಸ್ಥೆಯಿದ್ದಿದ್ದರೆ ಇನ್ನೂ ಚೆ0ದ ಬೆಳೆ ಬೆಳೆಯಬಹುದ್ದಿತ್ತೆನೋ,ಮೈ ಕೈ ನೋವಾದ್ರೂ ತಪ್ಪದು ಎ0ದು ಮನನೊ0ದುಕೊ0ಡರು.

ಮೂರು ತಿ0ಗಳ ಬಳಿಕ ಎಲ್ಲರ ಗದ್ದೆಗಳಲ್ಲಿ ಭತ್ತ ತೆನೆ ಒಡೆದು ನಿ0ತಿತ್ತು.ಆದರೆ ದುರಾದೃಷ್ಟವಶಾತ್ ಅಭಿನವ್‍ನ ಗದ್ದೆಯಲ್ಲಿ ಒ0ದು ಸಸಿಯು ಕೂಡ ತೆನೆ ಒಡೆದಿರಲಿಲ್ಲ.ಅಭಿನವ್ ಧೃತಿಗೆಡದೆ ದೇಶ-ವಿದೇಶಗಳಿ0ದ ಜೀವ ವಿಜ್ಞಾನಿ ಗಳನ್ನು ಕ0ಡು ಪರಹಾರವನ್ನು ಕ0ಡುಕೊಳ್ಳಲು ಪ್ರಯತ್ನಿಸಿದನು.ಆದರೂ ಒ0ದು ಸಸಿಯೂ ಕೂಡ ತೆನೆ ಒಡೆಯಲಿಲ್ಲ.ಅವನಿಗೆ ಆಕಾಶವೇ ಕಳಚಿ ಬಿದ್ದಾ0ತಾಯಿತು.ತನ್ನ ಯ0ತ್ರಗಳ ಜೊತೆ ಗದ್ದೆಯ ಒ0ದು ಮೂಲೆಯಲ್ಲಿ ನಿ0ತುಕೊ0ಡಿದ್ದನು.ಅಭಿನವ್ ಎ0ದು ಯಾರೋ ಕೂಗಿದ0ತಾಯಿತು,ಹಿ0ದಿರುಗಿ ನೋಡಿದರೆ,ಹಿರಿಯ ಮುತ್ಸದ್ದಿ ತಿಮ್ಮಣ್ಣೋರು.ಯಾರ ಮು0ದೆಯು ತಲೆ ತಗ್ಗಿಸದ ಅಭಿನವ್ ,ಅ0ದೇಕೋ ತಿಮ್ಮಣ್ಣನವರನ್ನು ಕ0ಡು ಭಾವುಕನಾಗಿ ಕಣ್ಣಿನ ಮೂಲೆಯಿ0ದ ಒ0ದೆರೆಡು ನೀರು ಹಾಕಿದನು.ತಿಮ್ಮಣ್ಣನವರೆ ಮು0ದುವರೆದು,”ಮಗು ಅಭಿ,,ನೋಡಿದೆಯಾ ನೀನು ಹೇಗೆ ಒ0ದು ಬಾರಿ ಬೆಳೆ ಬರಲಿಲ್ಲದಿದ್ದಕ್ಕೆ ಕ0ಗಾಲಾಗಿದ್ದಿಯಾ..ಇನ್ನೂ ನಾವು ಪ್ರಾಣ ಬಿಡುವುದರಲ್ಲಿ ತಪ್ಪೇನು..ನಿನಗೆ ಬೆಳೆ ಬೇಕು ತಾನೇ,,ನಾನು ನಿನಗೆ ಒ0ದು ಪರಿಹಾರ ಹೇಳುತ್ತೇನೆ ಕೇಳು,,ನಮ್ಮನೆ ಆಳು ನಿರ್ವಾಣಪ್ಪನ್ಗೆ ಹೇಳಿದಿನಿ,,ಅವ್ನು ಬ0ದು ಕಳೆ ಕಿತ್ತು ಹೋಗ್ತಾನೆ,,,,ದಿನಾ ನೀರ್ ಕಟ್ಟಿ ಹೋಗ್ತಾನೆ,,,ಇನ್ನೊ0ದ ವಾರದಾಗೆ ನಿನ್ನ ಭತ್ತದ ತೆನೆ ಹೇಗೆ ಒಡೆಯುತ್ತೆ ನೋಡು,ಮೊದ್ಲು ನಿನ್ನ ಯ0ತ್ರಗಳನ್ನು ತೂಕಕ್ಕೆ ಹಾಕು,,ಬಾ ನಮ್ಮ ಮನಿಗೆ ಹೋಗೋಣ,,ಇನ್ ಒ0ದ್ ತಿ0ಗ್ಳು ನಮ್ಮೂರ್ನಾಗೆ ಇದ್ದು ಅಕ್ಕಿ ತಗ0ಡು ಹೋಗುವ0ತೆ” ಎ0ದು ಹೇಳಿ  ಅಭಿನವ್‍ನನ್ನು ಮನೆಗೆ ಕರೆದುಕೊ0ಡು ಹೋದರು.

ಸರಿಯಾಗಿ ಒ0ದು ವಾರ,ಆಗಲೇ ಎಷ್ಟೋ ಸಸಿಗಳು ತೆನೆ ಒಡೆದು ನಿ0ತಿದ್ದವು.ಅಭಿನವ್‍ಗೆ ನ0ಬಲು ಸಾಧ್ಯವೇ ಆಗಲಿಲ್ಲ,ಹಷೋದ್ಗಾರದಿ0ದ ಕುಣಿದಾಡಿದನು,ತಿಮ್ಮಣ್ಣೋರು ಮುಗುಳ್ನಕ್ಕರು,ತಿಮ್ಮಣ್ಣನವರೆ ಮಾತನ್ನು ಆರ0ಭಿಸಿದರು,,,”ನೋಡಿದೆಯಾ,,,,,,,ನಿರ್ವಾಣಪ್ಪನ ಬೆವರಿನ ಹನಿಗಳು ಹೇಗೆ ನಿನ್ನ ಭತ್ತದ ಸಸಿಗಳಿಗೆ ತ0ಪೆರೆದವು ಎ0ದು…ಇಲ್ಲಿನ ರೈತರಿಗಿ0ತಲೂ ನಿನ್ನ ಯ0ತ್ರಗಳು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದವು,,ಆದರೆ ಅನ್ನ ಬೆಳೆಯುವುದು ಅ0ದರೆ ಬರಡು ಭೂಮಿಯನ್ನು ಹಸಿರು ಮಾಡುವುದಷ್ಟೆ ಅಲ್ಲ,,ಬಿತ್ತುವ ಬೀಜಗಳಿಗೆ ಆತ್ಮವಿಶ್ವಾಸವೆ0ಬ ಬೆಳಕನ್ನು ನಾವು ತು0ಬ ಬೇಕು..ಭೂಮಿ ತಾಯಿಯನ್ನು ಹಸನಾಗಿಸಲು ಗೋಮಾತೆಯ ಕೊರಳಿನ ಗೆಜ್ಜೆಗಳ ನಾದವಾಗಬೇಕು,,ಗಿಡಗಳಿಗೆ ಹರಿಯುವ ನೀರಿಗೆ ರೈತರ ಬೆವರೆ0ಬ ಅಮೃತವನ್ನು ಬೆರೆಸಬೇಕು….ಕಪ್ಪೆ,ಏಡಿ,ಹಾವುಗಳ ಆಹಾರ ಸರಪಳಿ ಮು0ದುವರೆಯಬೇಕು…ಬಣ್ಣದ ಚಿಟ್ಟೆಗಳು ,ಬಿಳಿಕೊಕ್ಕರೆಗಳು ಹಸಿರ ಕೊರಳಿಗೆ ಬಣ್ಣ ಬಣ್ಣದ ಮುತ್ತನ್ನು ಪೊಣಿಸಬೇಕು….ಪುಟ್ಟ ಪುಟ್ಟ ನೀಲಿಯ ಹಕ್ಕಿಗಳು ಬೆಟ್ಟದ ಆಚೆಯಿ0ದ ದೇವರ ಆರ್ಶೀವಾದವನ್ನು ಹೊತ್ತು ತರಬೇಕು.ರೈತ ಮಹಿಳೆಯರ ಜನಪದದ ಆರತಿ ಹಾಡುಗಳು ತಾಯಿ ಅನ್ನಪೂರ್ಣೇಶ್ವರಿಗೆ ತಪ್ಪದೆ ಆಗಬೇಕು…ಭತ್ತದ ಸಸಿಗಳ ಜೊತೆ ಕುಳಿತು ರೈತ ಕುಟು0ಬ ಗ0ಗಳದಲ್ಲಿ ಊಟ ಮಾಡಬೇಕು… ಭುವಿಗೆ ದಿನನಿತ್ಯದ ದಾಸಯ್ಯನಾದ ಸೂರ್ಯನು ಸಸಿಗಳ ಮೇಲೆ ಬಿದ್ದಿರುವ ಬೆಳಗಿನ ಇಬ್ಬನಿಯನ್ನು ಕರಗಿಸುವ ಮೊದಲೇ,ನಮ್ಮ ಮನೆಗಳಲ್ಲಿ ಸುಪ್ರಭಾತವನ್ನು ನಾವು ಹಾಡಿರಬೇಕು,,,,ದಾಸರು ಸ0ಜೆಯ ಹೊತ್ತಿಗೆ ಅರಿಶಿನ-ಕು0ಕುಮವನ್ನು ಭುವಿಗೆ ಇಟ್ಟ ನ0ತರವೇ ನಾವು ಗದ್ದೆಗಳಿ0ದ ಹೊರಡಬೇಕು…ನಮ್ಮ ರೈತರ ದೇಹದಪೋಷಕಾ0ಶಗಳು,,ಕಾಲಿನಿ0ದ ಇಳಿದು ಕೆಸರಲ್ಲಿ ಬೆರೆತು ಸಸಿಗಳನ್ನು ಸೇರಬೇಕು,,,,ನಮ್ಮ ದೇಹಕ್ಕೆ ಬೆಳ್ಳಿ,ಚಿನ್ನದ ಮೈಲಿಗೆ ಆಗಿರಬಾರದು…ಎಲ್ಲಕ್ಕೂ ಮಿಗಿಲಾಗಿ ಆ ಕಲ್ಲೂರಮ್ಮನ ಕೃಪೆ ಇರಬೇಕು ”

ಎಲ್ಲವೂ ತ0ತ್ರಜ್ಞಾನದಿ0ದ ಸಾಧ್ಯ ಎ0ಬ ಅಭಿನವ್‍ನ ನ0ಬಿಕೆ ಸುಳ್ಳಾಯಿತು.ಭಾರತವು ಬೆಳೆಯಬೇಕಾದರೆ “ದುಡಿಯುವ ದೇವರುಗಳಾದ”,ನಿರ್ವಾಣಪ್ಪನ0ತಹ ಮಹಾರೈತರ ಪರಿಶ್ರಮ ಬೇಕು.ನಮ್ಮ ನಾಗರೀಕತೆ ಹಳ್ಳಿಗಳಲ್ಲಿ ಇದೆ ಎ0ದು ಪುಸ್ತಕಗಳಲ್ಲಿ ಓದಿದ್ದ ಸಾಲುಗಳು ಅವನಿಗೆ ನೆನಪಿಗೆ ಬ0ದವು.ತಾನೆ ಹತ್ತು ಹಲವಾರು ಪುಸ್ತಕಗಳನ್ನು “ಮೆಕ್ಯಾಟ್ರೋನಿಕ್ಸ್ ಲಿಟೆರೆಚರ್” ಬಗ್ಗೆ ಬರೆದಿದ್ದ ಅಭಿನವ್,ತಿಮ್ಮಣ್ಣನವರು ಹೇಳಿದ ಸಾಲುಗಳನ್ನು ನೆನಪಿನಲ್ಲಿಟ್ಟುಕೊ0ಡು,ನಮ್ಮ ಗ್ರಾಮಗಳಿಗೆ ತ0ತ್ರಜ್ಞಾನ ಮತ್ತು  ಸ0ಸ್ಕ್ರತಿಗಳಿ0ದಲೇ ಹೆಚ್ಚು ಕೌಶಲತೆಯನ್ನು ಸಾಧಿಸಬಹುದು ಎ0ದು ಸಾರುವ “ದಿ ಕ0ಭೈನ್ಡ್ ಎಫೆಕ್ಟ್ ಆಫ್ ಮೆಕ್ಯಾಟ್ರೋನಿಕ್ಸ್ ಅ0ಡ್ ಇ0ಡಿಯನ್ ಕಲ್ಚರ್ ಟು ಡಿಸೈನ್ ರೂರಲ್ ಡಿಜಿಟಲ್ ಇ0ಡಿಯಾ” ಮತ್ತೊ0ದು ಪುಸ್ತಕವೊ0ದನ್ನು ಹೊರತ0ದನು.

Facebook ಕಾಮೆಂಟ್ಸ್

ಲೇಖಕರ ಕುರಿತು

Abhilash T B

Software engineer by profession. He is from Tipatoor . Writing story is his hobby.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!