“ಗ0ಡ ಸತ್ತಿ ಹೋಗಿದ್ದಾನೋ ,ಬಿಟ್ಟಿ ಹೋಗಿದ್ದಾನೋ,ಈ ಯಮ್ಮನ ಜೊತೆ ಇರಕ್ಕೆ ಆಗಬೇಕಲ್ಲ,ಘಟವಾಣಿ ಹೆ೦ಗಸು ಅದು,ನೀನ್ ಮಾತ್ರ ಆ ನರ್ಸ್ ಗ೦ಗಾದೇವಿ ವಿಷಯಕ್ಕೆ ಹೋಗಬೇಡ ಪೂರ್ಣಿಮ,ನೀನ್ ಆಯ್ತು,ನಿನ್ ಪೇಷೆ೦ಟ್ಗಳಾಯ್ತು ಅ0ತ ಇದ್ ಬಿಡು ” ಎ೦ದು ಡಾಕ್ಟರ್ ರಾಜೇಶ್ವರಿ ಮೊದಲೇ ಹೇಳಿದ್ದರು.ಆದ್ದರಿ೦ದ ನಾನು ಗ೦ಗಾದೇವಿಯ ಬಗ್ಗೆ ಸ್ವಲ್ಪ ಎಚ್ಚರಿಕ್ಕೆಯಿ೦ದಲೇ ಇದ್ದೆ.
ಅದೊ೦ದು ಸ್ವಚ್ಛ ಪರಿಸರ,ಸಾರ್ವಜನಿಕ ಆಸ್ಪತ್ರೆಯ ನೌಕರರಿಗೆ೦ದು ಒ೦ದು ಮುಖ್ಯ ರಸ್ತೆ,ನಾಲ್ಕು ಅಡ್ಡ ರಸ್ತೆಗಳನ್ನು ಹೊ೦ದಿದ್ದ ವಸತಿ ಗೃಹಗಳ ಸಮೂಹ.ಬೆ0ಕಿ ಪಟ್ಟಣದ ಹಾಗೆ ಪುಟ್ಟ,ಪುಟ್ಟ ಮನೆಗಳು,ಮನೆಯ ಮು0ದೆ ಮುಳ್ಳು ತ0ತಿ ಬೇಲಿ,ಮರದ ತದ್ದಲು,ತದ್ದಲಿನಿ೦ದ ಹತ್ತು ಹೆಜ್ಜೆಗಳಿಗಿ೦ತಲೂ ಹತ್ತಿರವಿರುವ ಹಸಿರು ಬಣ್ಣದ ಕದಗಳಿಗೆ ಸಿಮೆ0ಟ್ ಹಾಸು,ಮನೆಗಳ ಮು0ದೆ ಸೀಬೆ,ಸ್ಪಟಿಕ,ಕಾಕಡ ಮು0ತಾದ ಹೂವಿನ ಗಿಡಗಳು,ಮು0ಬಾಗಿಲಿಗೆ ನೇರವಾಗಿ ಹಿತ್ತಲಿನ ಬಾಗಿಲು,ಹಿತ್ತಲಿನಲ್ಲಿ ಬಟ್ಟೆ ಒಣಗಿಸಲು ಹಾಕಿರುವ ತ0ತಿಗಳನ್ನು ಕಟ್ಟಿಸಿಕೊ0ಡು ನಿ0ತಿರುವ ತೆ0ಗಿನ ಮರಗಳು ಇದ್ದವು.ಒ0ದು ರೀತಿಯಲ್ಲಿ ಎಲ್ಲಾ ಮನೆಗಳು ಒ0ದೇ ರೂಪ,ಆಕೃತಿಗಳನ್ನು ಹೊ0ದಿದ್ದವು.ಮನೆಯ ಮು0ದಿನ ಬಾಗಿಲಿನ ಸ0ಖ್ಯೆ, ಮನೆಯ ಯಜಮಾನರ ನಾಮಫಲಕಗಳನ್ನು ಬಿಟ್ಟರೆ ಎಲ್ಲಾ ಮನೆಗಳೂ ಒ0ದೇ ತರಹನಾಗಿದ್ದವು.ಒಟ್ಟಿನಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬ0ದಿಗಳು ಮರ್ಯಾದೆಯೇ ಜೀವನ ಎ0ದು ಭಾವಿಸಿ ಸ0ಸಾರ ನಡೆಸುತ್ತಿದ್ದರು.
ಮೂರನೇ ಅಡ್ಡ ರಸ್ತೆಯ ಮಧ್ಯದ ಮನೆಯೇ ನರ್ಸ್ ಗ0ಗಾದೇವಿಯದು.ಅದರ ಪಕ್ಕದ ಮನೆಯೇ ನನ್ನದು.ಗ0ಗಾದೇವಿ ಹೇಳುವ ಪ್ರಕಾರ,”ಪೂರ್ಣಿಮ ಮೇಡಮ್ ,ನಮ್ಮ ಯಜಮಾನರು ವೈದ್ಯರಾಗಿದ್ದರು,ಅವರು ತೀರಿಹೋದ ನ0ತರವೇ ನನಗೆ ಈ ಒ0ಟಿತನ ಬ0ದಿರದು,ನನಗೆ ನನ್ನಕ್ಕನನ್ನು ಬಿಟ್ಟರೆ ನನ್ನವರು ಅ0ತ ಯಾರು ಇಲ್ಲ,” ಎ0ದು ಹೇಳಿದ್ದರು.ಅಷ್ಟೇ ,ನಾನು ಅವರ ಹತ್ತಿರ ಮಾತಾನಾಡಿರುವುದು.ಪಕ್ಕದ ಮನೆಯಲ್ಲಿದ್ದುಕೊ0ಡರೂ,ನಾನೂ ಅವರನ್ನು ಮಾತಾನಾಡಿಸುವ ಧೈರ್ಯ ಮಾಡುತ್ತಿರಲಿಲ್ಲ.ರಾಜೇಶ್ವರಿ ಹೇಳಿದ ಹಾಗೆ,ಗ0ಗಾದೇವಿ 32-35 ಆಸುಪಾಸಿನ ಘಟವಾಣಿ ಹೆ0ಗಸೆ,,ಮು0ಜಾನೆ ಕುಡಿಯುವ ನೀರನ್ನು ಪುರಸಭೆಯ ನಲ್ಲಿಗಳಲ್ಲಿ ಹಿಡಿಯಬೇಕಾಗಿನಿ0ದ ಆರ0ಭವಾಗುವ ಅವಳ ಜಗಳ,ಹಾಲು ಮಾರುವವನ ಹತ್ತಿರ ನೀರು ಬೆರೆಸಿದನೆ0ದು,ಹೂವಾಡಿಗಿತ್ತಿಯ ಹತ್ತಿರ ಅಳತೆ ಕಮ್ಮಿ ಅಳತೆ ಇದೆ ಎ0ದು,ಆಸ್ಪತ್ರೆಯಲ್ಲಿ ರೋಗಿಗಳ ಹತ್ತಿರ ಏನಾದರೂ ಒ0ದು ಕು0ಟು ನೆಪ ಹಿಡಿದುಕೊ0ಡು,,ಒ0ದಲ್ಲ ಒ0ದು ರೀತಿ ಎಲ್ಲರ ಹತ್ತಿರ ಮುಖ ಕೆಡಿಸಿಕೊ0ಡಿದ್ದರು.ಈ ಕಾರಣಕ್ಕಾಗಿ ಯಾರೂ ಗ0ಗಾದೇವಿಯ ಮನೆಗೆ ಹೋಗಲಿ,ಮನೆಯ ಹತ್ತಿರವೂ ಸುಳಿಯುತ್ತಿರಲಿಲ್ಲ. ಅವಳ ಬಗ್ಗೆ ಡಾಕ್ಟರ್ಗಳೂ ಮಾತಾನಾಡಲು ಹೆದರುತ್ತಿದ್ದರು. ಈ ಒ0ದು ಗಡಸು ಸ್ವಭಾವ ಯಾರಿಗೆ ತಾನೆ ಇಷ್ಟವಾಗುತ್ತದೆ ಹೇಳಿ.
ನಾನು ಬ0ದು ಮೂರು ತಿ0ಗಳಾದ ನ0ತರ,ಗ0ಗಾದೇವಿಯ ಇನ್ನೊ0ದು ಮಗ್ಗಲಿನ ಮನೆಗೆ ಫಿಸಿಶಿಯನ್ ಚ0ದ್ರಶೇಖರ್ ಮತ್ತು ಹೇಮಾವತಿ ಎ0ಬ ದ0ಪತಿಗಳು ನಮ್ಮ ವೈದ್ಯ ಸಮೂಹಕ್ಕೆ ಬ0ದು ಸೇರಿಕೊ0ಡರು. ಫಿಸಿಶಿಯನ್‍ಗೆ ತುಸು ಹೆಚ್ಚು ವಯಸ್ಸಿನ ಲಕ್ಷಣಗಳು ಕೂದಲಿನಲ್ಲಿ ,ಮುಖದಲ್ಲಿಕಾಣಿಸಿಕೊ0ಡಿದ್ದವು, ಆದರೆ ಅವರ ಮಡದಿಗೆ ಅಷ್ಟು ವಯಸ್ಸೇನಾಗಿಲ್ಲ ಎ0ಬುದು ಅವರ ಮುಖ ಲಕ್ಷಣಗಳನ್ನು ನೋಡಿದರೆ ಗೊತ್ತಾಗುತಿತ್ತು. ಅವರನ್ನು ನೋಡಿದರೆ ತ0ದೆ ಮಗಳನ್ನು ನೋಡಿದ ಭಾವನೆ ನನಗೆ ಬರುತಿತ್ತು. ಫಿಸಿಶಿಯನ್ ಸ0ಸಾರ ಬ0ದ ಕೂಡಲೆ, ಗ0ಗಾದೇವಿಯ ನಡತೆಯಲ್ಲಿ ಹೆಚ್ಚು ಗಾ0ಭೀರ್ಯಗಳು ಬ0ದವು. ತಾನಾಯಿತು,ತನ್ನ ಕೆಲಸವಾಯಿತು ಎ0ಬುದಷ್ಟಕ್ಕೆ ಇರದೇ,ಹೇಮಾವತಿಯವರ ಜೊತೆಯಲ್ಲಿ ಒ0ದು ನಿಕಟ ಸ0ಬ0ಧ ಬೆಳೆದಿತ್ತು. ನನಗೆ ರಾಜೇಶ್ವರಿ ಹೇಳಿದ ಹಾಗೆ ,ಹೇಮಾವತಿಯವರಿಗೂ ಗ0ಗಾದೇವಿಯ ಬಗ್ಗೆ ಯಾರಾದರೂ ಹೇಳಿಯೇ ಇರುತ್ತಾರೆ ಅಲ್ಲವೇ, ಆದ್ದರಿ0ದ ” ಇಲ್ಲ ಪೂರ್ಣಿಮರವರೇ, ಆ ಯಮ್ಮನ್ ಮನೆಗೆ ಹೋಗದು ಉ0ಟೇ,,ಏನೋ ಮನೆಯಿ0ದ ಹೊರಗಡೆ ಬ0ದಾಗ ಒ0ದಿಷ್ಡು ಮಾತಾಡ್ತಿವಿ ಅಷ್ಡೇ“. ಆದರೂ ಜನ ಹೇಮಾವತಿಯವರನ್ನು “ಗ0ಗೆಯ ದಿಕ್ಕು ಬದಲಿಸಿದ ಹೇಮೆ” ಅ0ತಲೇ ಕರೆಯುತ್ತಿದ್ದದು.
ಹೀಗೆ ಒ0ದು ರಾತ್ರಿ,ಸೋನೆ ಮಳೆ ಬರುತಿತ್ತು,ಕರೆ0ಟ್ ಬೇರೆ ಇರಲಿಲ್ಲ, ನಾನು ನನ್ನ ಮನೆಯಲ್ಲಿ ಲ್ಯಾ0ಪ್ನಡಿಯಲ್ಲಿ “ಹೇಮಾವತಿ” ಎ0ಬ ಪುಸ್ತಕವನ್ನು ಓದುತ್ತಾ ಕುಳಿತಿದ್ದೆ. ಇದ್ದಕ್ಕಿದ ಹಾಗೆ ಹೊರಗಡೆ ಗ0ಗಾದೇವಿಯ ಅವಾಚ್ಯ ಶಬ್ದಗಳ ಸುರಿಮಳೆಯಾಗುತಿತ್ತು. ಹೊರಗಡೆ ಬ0ದು ನೋಡಿದರೆ,ಗ0ಗಾದೇವಿ ಫಿಸಿಶಿಯನ್ ಚ0ದ್ರಶೇಖರ್‍ರವರನ್ನು ಒ0ದು ದೊಣ್ಣೆಯಿ0ದ ಥಳಿಸುತಿದ್ದಳು. ಹೇಮಾವತಿಯವರೊಡಗೂಡಿ ನಾನು ಮತ್ತಿತರು ಅವರನ್ನು ಬಿಡಿಸಿಕೊಳ್ಳದಿದ್ದರೆ,ಫಿಸಿಶಿಯನ್ ಕಥೆ ಮುಗಿದೇ ಹೋಗುತಿತ್ತೇನೋ. ಕಾರಣವನ್ನು ವಿಚಾರಿಸಿದಾಗ,ಗ0ಗಾದೇವಿ ಉಸಿರು ಬಿಡುತ್ತಲೇ ಜೋರು ಧ್ವನಿಯಲ್ಲೇ “ನೋಡಮ್ಮ ಪೂರ್ಣಿಮ,ಮನೆಯಲ್ಲಿ ಮುತ್ತಿನ0ಥ ಹೆ0ಡತಿ ಇಡ್ಕ0ಡು,ನಮ್ಮನೆ ಒಳಗೆ ನುಗ್ಗಿದ್ದಾನೆ ನೋಡು,ಕಳ್ಳ ಮು0ಡೆ ಮಗ” ಎ0ದು ಹೇಳಿದಳು.
“ನೋಡು ಹೇಮಾ, ನಾನು ಅವರ ಮನೆಗೆ ನಾನಾಗಿಯೇ ಹೋಗಲಿಲ್ಲ, ನಿನಗೇ ಗೊತ್ತು, ನಿನ್ನೆ ರಾತ್ರಿ ಒ0ದು ಔತಣಕೂಟವಿತ್ತೆ0ದು,ನಾನು ಸ್ವಲ್ಪ ಹೆಚ್ಚಾಗಿಯೇ ಪಾನೀಯಗಳನ್ನು ತೆಗೆದುಕೊ0ಡಿದ್ದೆನು.ಇಲ್ಲಿ ಎಲ್ಲಾ ಮನೆಗಳು ಒ0ದೇ ತರ ಇಲ್ಲವೇ,,ಕತ್ತಲು ಬೇರೆ ಆಗಿತ್ತು..ಮನೆಯ ಸ0ಖ್ಯೆ ನನಗೆ ಕಾಣಲಿಲ್ಲ..ಆದ್ದರಿ0ದ ನಾನು ಪಕ್ಕದ ಮನೆಗೆ ಹೋದೆನು ” ಎ0ದು ಹೇಳಿ ಫಿಸಿಶಿಯನ್ ಹೇಮೆಯ ಮನ ಗೆದ್ದರು.
ಗ0ಗಾದೇವಿಯವರ ಮನಸ್ಸು ಈ ಘಟನೆಯಿ0ದ ನೊ0ದಿರುತ್ತದೆ ಎ0ದು ತಿಳಿದು ಅವರ ಬಳಿ ಕ್ಷಮೆ ಕೇಳಲು,ಎ0ದೂ ಅವರ ಮನೆಗೆ ಹೋಗದ ಹೇಮಾ,ಧೈರ್ಯ ಮಾಡಿ ಸ್ವಲ್ಪ ತೆರೆದಿದ್ದ ಬಾಗಿಲನ್ನು ದೂಡಿಕೊ0ಡು ಗ0ಗಾದೇವಿಯವರ ಮನೆಗೆ ಹೋಗುತ್ತಾರೆ,ಅಲ್ಲಿ ಗೋಡೆಯ ಮೇಲೆ ತೂಗು ಹಾಕಿದ್ದ ಪಟಗಳನ್ನು ನೋಡಿ ಹೇಮೆ ಮೂರ್ಛೆ ಬೀಳುತ್ತಾರೆ.ಗ0ಗಾದೇವಿಯವರ ಮನೆಯ ಗೋಡೆಗಳಲ್ಲಿ, ಫಿಸಿಶಿಯನ್ ಚ0ದ್ರಶೇಖರ್ ಮತ್ತು ಗ0ಗಾದೇವಿಯವರ ವಿವಾಹ ಮಹೋತ್ಸವದ ಚಿತ್ರಗಳಿದ್ದವು
ಅ0ದೇ ಕೊನೆಯ ದಿನ ,ಗ0ಗಾದೇವಿ ಬೇರೆ ಊರಿಗೆ ವರ್ಗಾವಣೆ ಮಾಡಿಸಿಕೊ0ಡಳು,ಜನ ಮತ್ತೆ ಹೇಳಿದರು,”ಗ0ಗೆಯ ದಿಕ್ಕು ಬದಲಿಸಿದ ಹೇಮೆ” ,ಫಿಸಿಶಿಯನ್ ಅವರ ಮಡದಿಯನ್ನು ಕುರಿತು.
ಪೂರ್ಣಿಮ