Author - Srinivas N Panchmukhi

ಅಂಕಣ

ಜೀವನೋತ್ಸಾಹಕ್ಕೆ ಮೂರು ಸೂತ್ರಗಳು ಈಟ್-ಪ್ರೇ ಐಂಡ್ ಲವ್

ಸುಪ್ರಸಿದ್ಧ ಲೇಖಕಿ ಎಲಿಜೆಬೆತ್ ಗಿಲ್ಬರ್ಟ್’ರ ೨೦೦೬ರಲ್ಲಿ ಬಿಡುಗಡೆಯಾದ “ಈಟ್-ಪ್ರೇ-ಲವ್” ಪುಸ್ತಕ ಅತ್ಯಂತ ಜನಪ್ರಿಯವಾಗಿತ್ತು. ಜೀವನದಲ್ಲಿ ಪತಿಯಿಂದ ವಿಚ್ಛೇಧಿತಳಾಗಿ, ನಿರಾಶಳಾಗಿ, ಹತಾಶಳಾಗಿ ತನ್ನ ಜೀವನದಲ್ಲಿ ಕಳೆದುಹೋದ ಖುಷಿಯನ್ನು ಮರಳಿ ಪಡೆಯಲು ವಿಶ್ವ ಪರ್ಯಟನ ಮಾಡಹೊರಟ ಎಲಿಜೆಬೆತ್ ಎಂಬ ಮಹಿಳೆಯೋರ್ವಳ ಕಾಲ್ಪನಿಕ ಕಥೆ ಇದು. ಎಲಿಜೆಬೆತ್ ಮೊಟ್ಟಮೊದಲು ಇಟಲಿಯತ್ತ...

ಕಥೆ

‘ಪ್ರೀತಿ’ಯೇ ನಿನ್ನ ವಿಳಾಸ ಎಲ್ಲಿ…?  

ಪ್ರೀತಿ- ಪ್ರೇಮ-ಅನುರಾಗ-ಅನುಬಂಧ: ಆಗ ತಾನೇ ಯವ್ವನದ ಹೊಸ್ತಿಲಲ್ಲಿ ಕಾಲಿಟ್ಟ ಹುಡುಗ(ಗಿ)ಯರ ಹದಿ ಹರೆಯದ ಮನದ ಕಾಮನೆಗಳು ಮೊಗ್ಗಾಗಿ ಚಿಗುರೊಡೆಯುವ ಕಾಲ. ಮಾಧ್ಯಮಿಕ ಶಾಲೆಯ ಕೊನೆಯ ಘಟ್ಟದಲ್ಲಿದ್ದಾಗ ಮೊಗ್ಗಾಗಿದ್ದ ಪ್ರೀತಿ ಪ್ರೇಮ, ಕಾಲೇಜ್’ನಲ್ಲಿ  ಸುಂದರ ಪುಷ್ಪವಾಗಿ ಅರಳುವ ಕಾಲ, ಅರಿಯದ ಆಳಕ್ಕಿಳಿಯದಿದ್ದರು ಇದರ ಸುಳಿಯ ಸೆಳೆತಕ್ಕೆ ಸಿಲುಕದವರಿಲ್ಲ!! ಮೊಬೈಲ್ ಮತ್ತು...

ಅಂಕಣ

ಅಪ್ಪ ಎಂಬ ಅಂತರ್ಮುಖಿಯ ಅಂತರಾಳ

ಪ್ರೀತಿಗೆ ಪರ್ಯಾಯ ಹೆಸರೇ ತಾಯಿ, ತಾಯಿಯ ಪ್ರೀತಿಯು ತುಲನೆಗೂ ಮೀರಿದ್ದು. ಹಾಗೆಯೇ  ಜಗತ್ತಿನಲ್ಲಿ  ಅತ್ಯಂತ ಅವ್ಯಕ್ತ ಪ್ರೀತಿಯೆಂದರೆ ಅದು ತಂದೆಯದು. ಅಪ್ಪ ಎಂಬ ಜೀವಿ ಬಹುತೇಕ ಅಂತರ್ಮುಖಿ, ಆತನ ಅಂತರಾಳವನ್ನು ಅರಿಯುವದು ಅಷ್ಟು ಸುಲಭವಲ್ಲ. ಮೇಲ್ನೋಟಕ್ಕೆ  ನಿಷ್ಠುರನಾಗಿ ಮನದಲ್ಲಿ ಹುದುಗಿದ  ಭಾವನೆಗಳನ್ನೂ  ಮುಕ್ತವಾಗಿ ಸಾರ್ವಜನಿಕವಾಗಿ  ವ್ಯಕ್ತಪಡಿಸುವ...

ಅಂಕಣ

ಪ್ರೈವಸಿ- ಖಾಸಗಿತನ ಕೊನೆಗೂ ನಮ್ಮ ಮೂಲಭೂತ ಹಕ್ಕಾಯಿತು!

ಪ್ರಾಚೀನ ಕಾಲದ ಒಂದು ವಿಚಾರದಂತೆ ನಮ್ಮ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿ ತನ್ನ ಮನೆಯಲ್ಲಿ ತಾನು ರಾಜನಂತಿರುತ್ತಾನೆ. ತನ್ನ ಮನೆಯಲ್ಲಿ ಆತನ ಅಧಿಕಾರ/ಕಾರುಬಾರು/ದರ್ಬಾರು ರಾಜನಂತಿರುತ್ತದೆ.  ಅರ್ಥಾತ್ ಯಾವುದೇ ವ್ಯಕ್ತಿ ತನ್ನ ಮನೆಯಲ್ಲಿ ಏನು ಮಾಡುತ್ತಾನೆ,ಹೇಗಿರುತ್ತಾನೆ?ಯಾವ ವಸ್ತುಗಳನ್ನು ಇಷ್ಟಪಡುತ್ತಾನೆ?ಅವನ ಜೀವನ ಶೈಲಿ/ ಬದುಕುವ ರೀತಿ ಹೇಗಿದೆ? ಇವೆಲ್ಲವೂ ಆತನ...

ಅಂಕಣ

ಭಾರತ  ಮತ್ತು ಇಸ್ರೇಲ್- ಇಟ್ ಟೇಕ್ಸ್ ಟೂ ಟು ಟ್ಯಾಂಗೋ

ಇಸ್ರೇಲ್ ಒಂದು ಸ್ವತಂತ್ರ ದೇಶವಾದದ್ದು ೧೪-೦೫-೧೯೪೮ರಂದು. ರೋಮನ್ನರು ಹೊರದಬ್ಬಿದ ತಮ್ಮ ತಾಯ್ನಾಡಿಗೆ ಮರಳಬೇಕೆಂಬ  ೨೦೦೦ ವರ್ಷಗಳ ಯಹೂದಿಗಳ ಆಶಯ ಕೈಗೂಡಿತ್ತು. ಮೊದಲನೇಯ ಮಹಾಯುದ್ಧದ ನಂತರ ಬ್ರಿಟೀಷರ ನಿಯಂತ್ರಣಕ್ಕೊಳಪಟ್ಟಿದ್ದ ಪ್ಯಾಲೆಸ್ಟೈನ್-ನಲ್ಲಿ ವಾಸಿಸುತ್ತಿದ್ದ ಅರಬ್-ರು ಮತ್ತು ಯಹೂದಿಗಳ ನಡುವಣ ವಿರಸ ಹೆಚ್ಚಾಗಿ ತಿಕ್ಕಾಟಕ್ಕೆ ಕಾರಣವಾಗಿತ್ತು. ಈ...

ಅಂಕಣ

ನಂದನವನದ ನಂದದ ನೆನಪುಗಳು

“ಗತೇ ಶೋಕೋ ನ ಕರ್ತವ್ಯೋ, ಭವಿಷ್ಯಂ ನೈವ್ ಚಿಂತಯೇತ್,ವರ್ತಮಾನೇನ ಕಾಲೇನ ವರ್ತಯಂತಿ ವಿಚಕ್ಷಣಃ” ಎಂಬ  ಸಂಸ್ಕೃತದ ಸುಭಾಷಿತದಂತೆ ಅತೀತದ ಬಗ್ಗೆ ಪಶ್ಚಾತಾಪಿಸದೇ, ಭವಿಷ್ಯದ ಬಗ್ಗೆ ಚಿಂತಿಸದೇ, ಬುದ್ಧಿವಂತರು ಯಾವಾಗಲೂ ವಾಸ್ತವದಲ್ಲಿ ಬದುಕುತ್ತಾರೆ. ಆದರೆ, ಅರಿಯದ ನಾಳೆಯ ಸುಂದರ ಕನಸಿನ ಮಾಯಾಲೋಕದಲ್ಲಿ ಭ್ರಮಿಸುತ್ತಾ, ಇಂದಿನ ವಾಸ್ತವವನ್ನು ಮರೆಯುವ ನಮಗೆ, ಸದಾ...

ಅಂಕಣ

ಧ್ವನಿ ಲೋಕದ  ನಭೋಮಂಡಲದಲ್ಲೊಂದು ಧ್ರುವತಾರೆ – ಶಮ್ಮಿ ನಾರಂಗ್

ಉತ್ತರ ಕರ್ನಾಟದ ಹಳ್ಳಿಗಳ ಆಡು ನುಡಿಯಂತೆ “ನಿದ್ದಿ, ಬುದ್ಧಿ,ಲದ್ದಿ” ನೆಟ್ಟಗಿದ್ದರೆ ಅದು ಮನುಷ್ಯ ಆರೋಗ್ಯವಾಗಿದ್ದಾನೆಂದರ್ಥ. ನನ್ನ ಪ್ರಕಾರ ಮನುಷ್ಯನ ಬುದ್ಧಿ ಚುರುಕಾಗಿರಬೇಕಾದರೆ  “ನಿದ್ದಿ, ಬುದ್ಧಿ,ಲದ್ದಿ”-ಯೊಂದಿಗೆ ಸುದ್ದಿಯು ಅತ್ಯವಶ್ಯ,  ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೊತೆಗೆ ಜಗತ್ತಿನ ಆಗು ಹೋಗುಗಳ ಕುರಿತಾದ ನಿಖರ ಮಾಹಿತಿ ತಿಳಿದುಕೊಳ್ಳುವುದೂ ಅಷ್ಟೇ...

ಅಂಕಣ

ಮದುವೆಯ ಈ ಬಂಧ – ಜನ್ಮ ಜನ್ಮದ ಅನುಬಂಧ

ಸಂಜಯ ಹಿಂದಿ ನಿಯತಕಾಲಿಕವೊ೦ದರ ವರದಿಗಾರ ಹಾಗೂ ಲೇಖಕ. ತನ್ನ ಲೇಖನವೊಂದರಲ್ಲಿ ‘ಪತಿ ಹಾಗೂ ಬೀವಿ’ ಎಂಬೆರಡು ಪದಗಳ ಪ್ರಯೋಗವನ್ನು ನೋಡಿ ಸಂಪಾದಕ ಜೋಶಿಯವರು ಕರೆಸಿ ವಿಚಾರಿಸ್ತಾರೆ. ಶೋಹರನ ಬೀವಿ ಇರ್ತಾಳೆ ಅಥವಾ ಮಿಯಾನ ಬೀವಿ ಇರ್ತಾಳೆ, ಆದರೆ ಪತಿಗೆ ಇರೋದು ಪತ್ನಿ, ಬೀವಿಯಲ್ಲ ಅಂತ ಸಮಜಾಯಿಸ್ತಾರೆ. ಭಾಷಾ ಪ್ರಯೋಗದಲ್ಲಾದ ಪ್ರಮಾದವನ್ನು ಒಪ್ಪಿಕೊಂಡು ತನ್ನ ತಪ್ಪನ್ನು...

ಅಂಕಣ

ವೃದ್ಧಾಪ್ಯದಲ್ಲೂ ಅಸಾಮಾನ್ಯ ಲವಲವಿಕೆ – ಮುಪ್ಪಿನಲ್ಲೂ ಸಾರ್ಥಕ ಜೀವನಕ್ಕೊಂದು...

ಯಾರೂ ಅನುಭವಿಸದ, ಕಂಡೂ ಕಾಣರಿಯದ ಸಾವಿನಾಚೆಯ ಅದ್ಭುತ ಲೋಕವನ್ನು ಬಲ್ಲವರಾರು? ಅಂತಹದೊಂದು ಲೋಕವೇನಾದರೂ ನಿಜವಾಗಿಯೂ ಅಸ್ಥಿತ್ವದಲ್ಲಿದೆಯಾ? ಸಕಲ ಚರಾಚರ ಜೀವರಾಶಿಗಳಿಗೆ ಸೃಷ್ಟಿಕರ್ತನು ತನ್ನದೇ ಆದ ವೈವಿಧ್ಯತೆಯನ್ನು ದಯಪಾಲಿಸಿದ್ದಾನೆ. ಅದರಲ್ಲೂ ಮಾನವ ಜನ್ಮ ಪಡೆದ ನಾವೆಲ್ಲಾ ಧನ್ಯರು. ಸುಖದಲ್ಲಿ ಹಿಗ್ಗದೇ ದುಃಖದಲ್ಲಿ ಕುಗ್ಗದೇ ಹುಟ್ಟಿನಿಂದ ಸಾವಿನವರೆಗಿನ ಪಯಣವನ್ನು...

Featured ಅಂಕಣ

ಬಾನಾಡಿಗಳ ಲೋಕದಲ್ಲೊಂದು ಬಣ್ಣದ ಚಿತ್ತಾರ -ಭಾಗ-2- ಫ್ಲೇಮಿಂಗೋ (ರಾಜಹಂಸ)

ಪಕ್ಷಿಲೋಕದ ವಿಸ್ಮಯಗಳಲ್ಲೊಂದಾದ ಬಣ್ಣ ಬಣ್ಣದ ಬಳುಕುವ ಕತ್ತಿನ, ಸೌಂದರ್ಯ ದೇವತೆಯ ಸಂತಾನವೇನೋ ಎಂದೆನಿಸುವ ಪ್ರಕಾಶಮಾನವಾದ ಗುಲಾಬಿಗರಿಗಳಿಂದ ಸಮ್ಮೋಹಿತಗಳಿಸುವ ವಿಶಿಷ್ಟ ಪಕ್ಷಿಯೇ ಫ್ಲೇಮಿಂಗೋ. ಬಾನಾಡಿಗಳ ಲೋಕದ ಹಂಸಗಳ ರಾಜನೆಂದು ಗುರುತಿಸಲ್ಪಡುವ ಈ ಹಕ್ಕಿಗೆ ಕನ್ನಡದಲ್ಲಿ ರಾಜಹಂಸವೆಂದೂ, ಹಿಂದಿಯಲ್ಲಿ ಬೋಗ್ ಹಂಸ ಅಥವಾ ಚರಾಜ್ ಬಗ್ಗೋ ಹಾಗೂ ಮರಾಠಿಯಲ್ಲಿ ರೋಹಿತ್ ಅಥವಾ...