ಕಾರಿನ ಚಕ್ರಗಳ ಸಮತೋಲನ ತಪ್ಪಿದೆ, ಸರಿಪಡಿಸಬೇಕು, ಕೋಸ್ಟ್ಕೋಗೆ ಹೋಗಬೇಕು ಎಂದು ಮಗ ಯೋಚಿಸುತ್ತಿದ್ದ. ಆ ಬೃಹನ್ಮಳಿಗೆಯದು ಏನೆಲ್ಲಾ ವ್ಯವಹಾರ ಇರಬಹುದು? ತರಕಾರಿ, ಜೀನಸು, ಬೇಕರಿ ವಸ್ತುಗಳು, ಕಾರಿನ ಟಯರು ಕೂಡಾ. ಟಯರು ಮಾರುವುದು ಮಾತ್ರವಲ್ಲ ಚಕ್ರಕ್ಕೆ ಅದು ಹೊಂದಿಕೆಯಾಗುತ್ತದೋ ಎಂಬ ಪರೀಕ್ಷೆ ಕೂಡಾ. ಆದರೆ ಇವುಗಳೆಲ್ಲವೂ ಸರದಿ ಪ್ರಕಾರವೇ. ಸರದಿಗೆ...
ವಲಸಿಗರ ನಾಡಿನಲ್ಲಿ
ಗಗನ ಕುಸುಮಗಳು
ಹಿಂದಿನ ಭಾಗಗಳನ್ನು ಇಲ್ಲಿ ಓದಿ ಅಂದಿನ ರಶ್ಯದ ಯೂರಿ ಗ್ಯಾಗರಿನ್ ಆಕಾಶ ನೌಕೆಯಲ್ಲಿ ಬಾಹ್ಯಾಕಾಶದಲ್ಲಿ ಭೂಮಿಯನ್ನು ಸುತ್ತಿ ಮರಳಿ ಭೂಮಿಗಿಳಿದ ಘಟನೆ ಪ್ರಪಂಚದ ಗಮನವೆಲ್ಲ ಸೆಳೆದಿತ್ತು. ಹಿರಿಯ ಕಿರಿಯರೆಲ್ಲರು ಬೆರಗಿನಿಂದ ವಿವರವನ್ನು ಓದುವಂತೆ, ಕೇಳುವಂತೆ ಮಾಡಿತ್ತು. ಎಲ್ಲಾ ಪತ್ರಿಕೆಗಳು ಈ ಅದ್ಭುತವನ್ನು ವರ್ಣರಂಜಿತವಾಗಿ ಪ್ರಕಟಿಸಿದ್ದವು. ನನಗೋ ನೆನಪು ಮಾತ್ರ ಏನೋ...
ಅಮೆರಿಕದಲ್ಲಿ ಚಾತುರ್ಮಾಸ!
ಈ ಹಿಂದಿನ ಕಥನಗಳನ್ನು ಇಲ್ಲಿ ಓದಿ ನೋಡಿ, ನೀವು ಮನೆ ಬಿಟ್ಟು ಹೊರಗೆ ಹೋಗುವ ಹಾಗಿಲ್ಲ. ಎಲ್ಲ ಸ್ಟ್ರಿಕ್ಟ್ – ಸ್ವಾನುಭವನೋ ಅಥವಾ ಬೇರೆಯವರ ಉವಾಚವನ್ನು ಪುನರುಚ್ಛರಿಸಿದ್ದೊ; ಮೊದಲೇ ಅಮೇರಿಕೆಗೆ ಹೋಗಿ ಬಂದವರ ಎಚ್ಚರಿಕೆ ನನಗೆ. ಏನೋ, ಹೇಗಿದ್ದರೂ ಕೆಲವು ತಿಂಗಳು ಅಲ್ಲಿಯೇ ಇರಬೇಕಲ್ಲ. ಅದಕ್ಕೆ ತಕ್ಕಂತೆ ನನ್ನ ದಿನಚರಿಯನ್ನೂ ಹೊಂದಿಸಿಕೊಳ್ಳಬೇಕಲ್ಲ ಎಂಬ ಅಂದಾಜು...
ಅಮೆರಿಕದ ಅಗಸನ ಕಟ್ಟೆ
1ಊರಿಗೆ ಬಂದ ನಾರಿ ನೀರಿಗೆ ಬಾರದಿರುತ್ತಾಳೆಯೇ? ಬರುತ್ತಾಳೆಂದು ಖಡಾಖಂಡಿತ ಹೇಳಲಾಗದು. ಹಿತ್ತಲ ಒಳಗೆ ಬಾವಿಯೋ, ಕೊಳವೋ ಇದ್ದರೆ ಇನ್ನು ಊರ ಹಂಗೇಕೆ ಎಂದು ಬಿಮ್ಮನೆ ಮನೆಯಲ್ಲೇ ಇರಬಹುದಲ್ಲ. ನೀರಿಗಲ್ಲವಾದರೂ ಬಟ್ಟೆಯ ಕೊಳೆ ತೆಗೆಯಲಾದರೂ ಊರ ಬಾವಿಕಟ್ಟೆಗೆ, ಇಲ್ಲವಾದರೆ ಕೆರೆಯ ಕರೆಗೆ, ತಪ್ಪಿದರೆ ತೊರೆಯ ತೀರಕ್ಕಾದರೂ ಹೋಗಬೇಕೆ? ನೀರೂ ಬೇಡ, ಬಟ್ಟೆ ಒಗೆಯುವುದೂ ಬೇಡ...
ಚಕ್ಕುಲಿ ಪುರಾಣ
ಈ ಹಿಂದಿನ ಕಂತುಗಳಿಲ್ಲಿವೆ: ಓದಿ ನನ್ನಾಕೆ ಏನು ವಿಶೇಷ ತಿನ್ನುವಾಗಲೂ ಮಕ್ಕಳ ನೆನಪಾಗಿ, ಅವನಿಗೆ ಇದು ಇಷ್ಟ, ಅವಳಿಗೆ ಅದು ಇಷ್ಟ ಎನ್ನುವುದು ಸಾಮಾನ್ಯ. ಇಲ್ಲಿಯೇ ಇದ್ದಿದ್ದರೆ ಖುಶಿಯಿಂದ ತಿನ್ನುತ್ತಿದ್ದರೆಂದು. ಎಲ್ಲಾ ತಾಯಂದಿರೂ ಅಷ್ಟೆ ತಾನೇ. ಮಕ್ಕಳೆಷ್ಟು ದೂರವಿದ್ದರೂ ಸೆಳೆತ ಇನ್ನಷ್ಟು ಜಾಸ್ತಿ. ಕೆಲವರು ಆಗೊಮ್ಮೆ ಈಗೊಮ್ಮೆ ಹೇಳಿಕೊಂಡು ಎದೆಭಾರವನ್ನು ಹಗುರ...
ಬನಿಯನ್ ಕಳಚಿದೆ
ಒಂದಾಣೆ ಮಾಲೆಯ ಒಂದು ಕತೆ. ಒಮ್ಮೆ ಸೂರ್ಯನಿಗೂ ಗಾಳಿಗೂ ಜಿದ್ದು ಬಿತ್ತು; ತಮ್ಮಲ್ಲಿ ಯಾರು ಶ್ರೇಷ್ಠರೆಂದು. ಹೇಗೆ ನಿರ್ಣಯಿಸುವುದು? ಕೆಳಗೊಬ್ಬ ಪಂಚೆ ತೊಟ್ಟು, ಶಲ್ಯಹೊದೆದು, ಮುಂಡಾಸು ಬಿಗಿದು ಕೈಯಲ್ಲೊಂದು ಬೀಸುದೊಣ್ಣೆ ಹಿಡಕೊಂಡು, ಚರ್ರಚರ್ರ ಶಬ್ದ ಮಾಡುವ ಚಪ್ಪಲಿ ಮೆಟ್ಟಿಕೊಂಡು ನಡೆಯುತ್ತಿದ್ದ. ಸೂರ್ಯ ಗಾಳಿಯವರೊಳಗೆ ನಿಶ್ಚಯವಾಯಿತು – ಆ ವ್ಯಕ್ತಿಯ...
ಅಮೆರಿಕೆಯಲ್ಲಿ ಕೆಲಸ
ಈ ಹಿಂದೆ: ನಾವು ಅವರ ದೃಷ್ಟಿಗೆ ಬೀಳುತ್ತಲೇ ಓಡಿ ಬಂದು ಮುಖವಿಡೀ ನಗುತ್ತ ತಳ್ಳುಗಾಡಿಯನ್ನು ಎಳೆದುಕೊಂಡಾಗಲೆ ಸೇತುವೆಯನ್ನು ದಾಟಿದೆವು ಎಂದು ಮನಸ್ಸು ಹಗುರ. ಹಲವು ವರ್ಷಗಳ ನಂತರ ಮಕ್ಕಳ ಬಿಸಿ ಮೈ ತಡವಿ ಸುಖಿಸಿದ ಬೆಚ್ಚಗಿನ ಭಾವನೆ. ಚಳಿಗಾಳಿ ಬೀಸುತ್ತಿದ್ದರೂ ಮನಸ್ಸು ಖುಶಿಯಿಂದ ಬೆಚ್ಚಗಾಗಿತ್ತು. ತೂಗು ಸೇತುವೆಯಲ್ಲಿ ನನಗೆ, ನನ್ನಂತೆ ಹಲವರಿಗೆ ಕಲ್ಪನೆ...
ತೂಗು ಸೇತುವೆಯಲ್ಲಿ
ಏಳು ಸಮುದ್ರ ದಾಟುವುದೆಂದು ನಿಶ್ಚಯಿಸಿದಾಗ ಹೇಗೆ, ಯಾವಾಗ ಎಂದೆಲ್ಲಾ ನಿಗದಿಪಡಿಸಬೇಕಲ್ಲ. ನಿಶ್ಚಯ ಮಾಡಿದವರು ಮಕ್ಕಳು, ಕಾರ್ಯರೂಪಕ್ಕೆ ತರುವವರೂ ಮಕ್ಕಳು. ನಾವು ಕೀಲುಗೊಂಬೆಗಳು. ನಮಗೇನು ಗೊತ್ತಾಗಬೇಕು ಈ ಸಮುದ್ರ ದಾಟುವ ಪರಿ. ನಮ್ಮ ಕಲ್ಪನೆಯಲ್ಲಿ ನಾವು ಅಂದುಕೊಳ್ಳಬಹುದು, ಊರು-ಪರಊರು ಎರಡನ್ನೂ ಜೋಡಿಸುವ ಒಂದು ತೂಗು ಸೇತುವೆ ಇದ್ದರೆ ಯಾವ ಜಂಜಾಟವೂ ಇಲ್ಲದೆ ಕೈಚೀಲ...