ಕಥೆ

ಕಥೆ

ವಸಂತ ರಾಗ  – 1

ಶನಿವಾರ ಸಂಜೆಯಾಗಿತ್ತು. ಸಿಗುವುದೇ ಎರಡು ದಿನ ರಜ.ಶನಿವಾರ ಮತ್ತು ಭಾನುವಾರ.ಇಡೀ ವಾರ ಅದೇ ಮೆಕಾನಿಕಲ್ ಜೀವನ. ಬೆಳಗೆದ್ದು ಕಣ್ಣು ದೊಡ್ಡದಾಗುವಷ್ಟರಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ ಟ್ರಾಫಿಕ್ನಲ್ಲಿ ಕಾಲ ಕಳೆಯುವುದು,ಸಮಯಕ್ಕೆ ಸರಿಯಾಗಿ ಆಫೀಸ್ ತಲುಪುವುದು.ಒಂಭತ್ತು ಘಂಟೆಗಳ ಕಾಲ ಫಿರಂಗಿಗಳ ಕರೆಗೆ ಉತ್ತರ ನೀಡಿ ಅವರಿಗೆ ಸಹಾಯ ಮಾಡುವುದು.ಮತ್ತೆ ಕೆಲಸ ಮುಗಿಸಿ ಒಂದೂವರೆ...

ಕಥೆ

ನನ್ನ ದೇಶ ನನ್ನ ಜನ -3 (ನಾಗ ನೃತ್ಯ )

ನನ್ನ ದೇಶ ನನ್ನ ಜನ – 2  ಹೇಳಿ ಕಳಿಸಿ ಹದಿನೈದು ದಿನವಾದ ನಂತರ ನಾಗ ಬಂದಿದ್ದ. ನನ್ನನು ನೋಡಿದ ಕೂಡಲೇ ಕಿವಿಯವರೆಗೆ ಹಲ್ಲು ಕಿಸಿದ. “ಅಯ್ಯೋ ನನ್ನ್ ಕಥೆ ಏನ್ ಕೇಳ್ತಿರ ಸೋಮಿ” ಎಂದು ತನ್ನ ಉದ್ದ ರಾಗ ತೆಗೆದ. ಅವನ ಕಥೆ ಕೇಳಿ ಕೇಳಿ ನನಗೆ ಸಾಕಾಗಿ ಹೋಗಿತ್ತು. ಪ್ರತಿ ಸಲವೂ ತಪ್ಪಿಸಿಕೊಳ್ಳಲು ಒಂದೊಂದು ಕಥೆ ಹೇಳುತ್ತಿದ್ದ. ಕೆಲ ದಿನಗಳ ಹಿಂದೆ ನಾಗ...

ಕಥೆ

ನನ್ನ ದೇಶ ನನ್ನ ಜನ -2 (ನಾಗ ನೃತ್ಯ ) 

ನನ್ನ ದೇಶ ನನ್ನ ಜನ -1  ಭತ್ತದ ಗದ್ದೆಯಲ್ಲಿ ತೋಟ ಮಾಡಿದ್ದರಿಂದ ದಿನಕ್ಕೊಂದು ಸಮಸ್ಯೆ ತಲೆದೋರುತಿತ್ತು. ಮಳೆ ಸ್ವಲ್ಪ ಬಿಡುವು ಕೊಟ್ಟಿತ್ತು, ತಕ್ಷಣವೇ ಅಡಿಕೆಗೆ ಔಷಧಿ ಸಿಂಪಡಿಸಬೇಕಿತ್ತು. ನಾರ್ವೆಯ ನಾಗನಿಗೆ ಹೇಳಿ ಕಳಿಸಿ ಹದಿನೈದು ದಿನವೇ ಆಗಿ ಹೋಗಿತ್ತು, ಅದ್ಯಾವ ಹುತ್ತದಲ್ಲಿ ಅವನು ಅಡಗುತ್ತಾನೋ ದೇವರೇ ಬಲ್ಲ. ಅವ ಅಡಗಿದನೆಂದರೆ ದೇವರಿಗೂ ಅವನು ಸಿಗುವ ಆಸಾಮಿಯಲ್ಲ...

ಕಥೆ

ನನ್ನ ದೇಶ ನನ್ನ ಜನ – 1  (ತಿರುಪತಿ ಕ್ಷೌರ )

“ಓಹ್ ಇವತ್ತು ಭಾನುವಾರ” ನನಗೆ ನಾನೇ ಹೇಳಿಕೊಂಡೆ. ನಮ್ಮೂರಿಗೆ ಕ್ಷೌರಿಕ ಬರುವುದು ಕೇವಲ ಭಾನುವಾರದಂದು ಮಾತ್ರ. ಜಗಳೂರು, ಗೊಂದಲಗೇರಿ, ಕೆಸರೂರು, ನಾರ್ವೆ ಇವೆಲ್ಲ ಊರುಗಳಿಗೆ ಕೇವಲ ಒಬ್ಬನೇ ಕ್ಷೌರಿಕ. ಒಂಥರಾ ಅವನು ರಾಷ್ಟ್ರಪತಿಗಿಂತಲೂ ಬ್ಯುಸಿ ಮನುಷ್ಯ. ಅವನ ಶಾಪಿನಲ್ಲಿ ಬಹಳ ಹೊತ್ತು ಕಾಯುವುದು ಅನಿವಾರ್ಯ. ಇನ್ನು ತಡ ಮಾಡುವುದು ಸರಿಯಲ್ಲ ಎಂದು ಅನಿಸಿ...

ಕಥೆ ಕಾದಂಬರಿ

ಆತ್ಮ ಸಂವೇದನಾ. ಅಧ್ಯಾಯ 32

ಆತ್ಮ ಸಂವೇದನಾ. ಅಧ್ಯಾಯ 31 ಅವೆರಡು ಜೀವಿಗಳ ಜೊತೆ ಮಾತನಾಡುತ್ತಿದ್ದ ಆತ್ಮ. ವರ್ಷಿಯ ಮನಸ್ಸನ್ನು ಮೀರುವುದು ಸಾಧ್ಯವಿರದ ಕೆಲಸ. ಎರಡನೇ ಸೂರ್ಯನ ವಿಷಯ ಪ್ರಾಮುಖ್ಯವಲ್ಲ. ಮೊದಲು ಯುದ್ಧಕ್ಕೆ ಸಿದ್ಧತೆಯಾಗಬೇಕು ಎಂದುಕೊಂಡನು. ನಕ್ಕಿತು ಕಪ್ಪು ಜೀವಿ. “ಆತ್ಮ ನಿನಗೆ ನಮ್ಮ ಶಕ್ತಿಯ ಬಗ್ಗೆ ಅರಿವಿಲ್ಲ. ಒಂದು ಜೀವಿ ಈ ಭೂಮಿಯ ಮೇಲಿರುವ ಎಲ್ಲ ಮನುಷ್ಯರನ್ನು...

ಕಥೆ

ಪ್ರೀತಿ – 3

ಪ್ರೀತಿ – 2 ಪ್ರೀತಿ ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದಳು..ಅಪಘಾತವಾದಾಗ ಅಲ್ಲಿದ್ದವರು ಅವಳನ್ನು ಆಸ್ಪತ್ರೆಗೆ ಸೇರಿಸಿದ್ದರು.ಅದೃಷ್ಟವಶಾತ್ ಅವಳ ಪ್ರಾಣ ಅಪಾಯದಿಂದ ಪಾರಾಗಿತ್ತು…ಆದರೆ ತಲೆಗೆ ಬಿದ್ದ ಏಟಿನಿಂದಾದ ನೋವಿನಿಂದ ಕಣ್ಣು ಬಿಡಲು ಆಗುತ್ತಿರಲಿಲ್ಲ…ಅವಳಿಗೆ ಮತ್ತು ಬರುವ ಇಂಜೆಕ್ಷನ್ ಕೊಟ್ಟಿದ್ದರು ವೈದ್ಯರು…ಅವಳ ಕಾಲಿನ ಮೂಳೆ...

ಕಥೆ

 ಪ್ರೀತಿ – 2 

 ಪ್ರೀತಿ – 1 ಹೀಗೆಯೇ ಮುಂದುವರೆದಿತ್ತು ಸ್ನೇಹ…ಹಾಗೆಯೇ ಪ್ರೀತಿಯ ಕಾಡಿಸುವ ಮೋಜು ಕೂಡಾ…..ಪ್ರೀತಿಯ ನಿಷ್ಕಲ್ಮಶ ಸ್ವಭಾವ ಅವನಿಗರ್ಥವಾಗಿತ್ತು …ಅವಳು “ನಾನೊಂದು ಕವನ ಬರಿಬೇಕು ಕಣೋ ಯಾವ ವಿಷಯದ ಮೇಲೆ ಬರೀಬೇಕು ತಿಳಿತಿಲ್ವೋ…ನೀ ಹೇಳೋ …ಅದೂ ನೀನೇ ಯೋಚಿಸಿ ಹೇಳ್ಬೇಕು..ಯಾರೋ ಹೇಳಿದ್ದು ಬೇಡ….”ಅಂತ ಅವನ...

ಕಥೆ

ಪ್ರೀತಿ – 1

ಅವನು ಅವಳ ಕವನಗಳ ಸ್ಪೂರ್ತಿ …ಅವಳ ಕಥೆಗಳ ಪಾತ್ರಗಳ ಸೃಷ್ಟಿ ಕರ್ತ…ಪ್ರೇಮ್ ….ಹೆಸರಿಗೆ ತಕ್ಕಂತೆ ಪ್ರೇಮಮಯಿ..ವಿಪರೀತ ಭಾವಜೀವಿ…ಹಾಗೆಯೇ ಮುಗ್ಧ ಮನದ ಹುಡುಗ … ಪ್ರೀತಿ……ಹೆಸರಂತೆ ಸಾಧ್ಯವಾದಷ್ಟು ಪ್ರೀತಿ ಹಂಚುವವಳು…..ಬಿಡುವಿದ್ದಾಗ ಅನಾಥ ಮಕ್ಕಳಿಗೋಸ್ಕರ , ವೃದ್ದಾಶ್ರಮಗಳಿಗೋಸ್ಕರ. ಪ್ರವಾಹ ಪೀಡಿತ ಪ್ರದೇಶದ...

ಕಥೆ

ಗಲ್ಲಿ ಕ್ರಿಕೆಟ್- 2

ಗಲ್ಲಿ ಕ್ರಿಕೆಟ್- 1  ಒಂದು ವರ್ಷದ ಕೆಳಗೆ ನಮ್ಮಣ್ಣ ರವಿ ಕ್ರಿಕೆಟ್ ಕೋಚಿಂಗ್ ಸೇರೋಕೆ ಹಠ ಮಾಡಿದ್ದ. ನಮ್ಮ ಸ್ಕೂಲಲ್ಲೇ ಪರಮೇಶ್ ಸಾರು ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಈ ಶಿಬಿರ ಶುರು ಮಾಡಿದ್ದ್ರು. ನಮ್ಮಣ್ಣ ಸೇರುತ್ತಾನೆ ಅಂದ್ರೆ ನಾನು ಸೇರಲೇ ಬೇಕಲ್ಲ. ಅದು ನಮ್ಮ ಮನೆಯ ನಿಯಮ, ಸರಿ ಸ್ವಲ್ಪ ದಿನ ಅತ್ತು ಕರೆದು ಮಾಡಿದ ಮೇಲೆ ನಮ್ಮ ತಾತ ಅಮ್ಮನ ಕೈಗೆ ಹಣ ಕೊಟ್ಟು...

ಕಥೆ

ಗಲ್ಲಿ ಕ್ರಿಕೆಟ್ – 1

ಶನಿವಾರ ಅರ್ಧ ದಿನ ಸ್ಕೂಲು ಮುಗಿಸಿ ಮನೆಗೆ ಬಂದಿದ್ದಾಯ್ತು. ನಾನು ನಮ್ಮಣ್ಣ ಯಾವತ್ತೂ ಸ್ಕೂಲಿಂದ ಜೊತೆಗೆ ವಾಪಸ್ ಬಂದಿರಲಿಲ್ಲ.ದಾರಿ ಪೂರ್ತಿ ನಾನು ಹಾಡ್ ಹೇಳ್ಕೊಂಡು, ಎಲ್ಲಾರ್ ಜೊತೆ ಮಾತಾಡ್ಕೊಂಡು ನಡೀತೀನಿ ಅಂತ ರವಿಯ ಕಂಪ್ಲೇಂಟ್. ರವಿ ಅವನ ಗೆಳೆಯರ ಜೊತೆ ಏನು ಮಾತಾಡ್ತಾನೆ ಅನ್ನೋದು ನನಗೆ ಕುತೂಹಲ. ಅವ್ನು ಸುಮಾರು ಎಂಟನೇ ಕ್ಲಾಸಲ್ಲಿ ಇದ್ದ. ನಾನು ಐದು. “ರಘು...