ಬೈಕ್ ನಿಲ್ಲಿಸಿದ್ದನ್ನು ನೋಡಿ ಅವರ ಮುಖ ಪ್ರಸನ್ನವಾಗಿದ್ದು ಬೈಕಿನ ಹೆಡ್ ಲೈಟಿನ ಮಂದ ಬೆಳಕಿನಲ್ಲಿ ಸ್ಪಷ್ಟವಾಗಿ ಗೋಚರಿಸಿತು. ನಾನು ಏನನ್ನಾದರೂ ಕೇಳುವ ಮೊದಲೇ ಅವರೇ ಶುರು ಮಾಡಿದರು. “ನಮಸ್ಕಾರ, ಯಾವ್ ಕಡೆಗೆ ಹೊರ್ಟಿದ್ರಿ ನೀವು?” “ನಾನು ಬೆಳ್ಯಾಡಿ ಕಡಿಗೆ. ನಿಮ್ಗೆಲ್ಲಿ ಹೋಯ್ಕು?” ನಾನು ಉತ್ತರಿಸಿದೆ. “ನಂಗ್ ಸಮೇತ ಬೆಳ್ಯಾಡಿ ಕಡೆಗೇ ಹೋಯ್ಕು. ಇಲ್ಲಿಂದ ನಡ್ಕಂಡು...
ಕಥೆ
ಶಾಸ್ತ್ರೋಕ್ತ – ೧
ಈ ಮಳೆಗೂ ನಾನು ಹೊರಡುವ ಸಮಯಕ್ಕೂ ಏನೋಅವಿನಾಭಾವ ಸಂಬಂಧವಂತೂ ಖಂಡಿತ ಇದೆ. ಶಾಲೆಗೆ ಹೋಗುವಸಮಯದಿಂದ ಹಿಡಿದು ಇಂದಿನ ತನಕವೂ ಅದು ತಪ್ಪಿಲ್ಲ.ಮಳೆಗಾಲದಲ್ಲಿ ಇಡೀ ದಿನ ಬಿಸಿಲಿದ್ದರೂ ಶಾಲೆ ಬಿಟ್ಟು ಮನೆಗೆಹೋಗುವ ಸಮಯಕ್ಕೆ ಸರಿಯಾಗಿ ಜಡಿ ಮಳೆ ತಪ್ಪಿಲ್ಲದೇ ಹಾಜರು.ಉದ್ದನೆಯ ನಿಲುವಂಗಿ ತರದ, ಮೇಲೊಂದು ಟೊಪ್ಪಿಸಿಕ್ಕಿಸಿಕೊಂಡಿರುವ ಬಣ್ಣದ ರೈನ್ ಕೋಟ್ ಹಾಕಿಕೊಂಡುಶಾಲೆಯಿಂದ...
ಆತ್ಮ ಸಂವೇಧನಾ-34
ಆತ್ಮ ಸಂವೇಧನಾ-33 “ಆತ್ಮ”, “ಆತ್ಮ” ಕೂಗಿದಳು ಸನಾ. ಹಚ್ಚ ಹಸುರಿನ ಮನೆ ಅವರದು. ಆತ್ಮನ ಕನಸಿನರಮನೆ. ಅದರಲ್ಲಿ ಪ್ರತೀ ವಸ್ತುಗಳೂ ಜೀವದಿಂದಿರುವಂತೆ ನೋಡಿಕೊಂಡಿದ್ದ. ಬಿಳಿ, ಕಂದು ಮೊಲಗಳು, ಬಣ್ಣದ ಪಟ್ಟೆಯ ಅಳಿಲುಗಳು, ಚಂದನೆಯ ಹಕ್ಕಿಗಳು ಅವನ ಮನೆಯಲ್ಲಿ ಅತ್ತಿಂದಿತ್ತ ಓಡಾಡಿಕೊಂಡಿರುತ್ತಿದ್ದವು. ಆತ್ಮ ಎಲ್ಲರನ್ನೂ...
ದೇವರ ಹುಟ್ಟು – 1
೩೦೦೦೦೦ ವರ್ಷಗಳ ಹಿಂದೆ ಭೂಮಿಯ ಪಶ್ಚಿಮ ಭಾಗದಲ್ಲಿ ನಿರ್ಜನ ಪ್ರದೇಶ.ದೂರ ದೂರಕ್ಕೆ ಒಂದೇ ಒಂದು ಹುಲ್ಲು ಕಡ್ಡಿ ಕೂಡ ಕಾಣಿಸುತ್ತಿಲ್ಲ. ಬರಡು ಭೂಮಿ.ಬಟಾ ಬಯಲು.ಬಿಸಿಲು ನೆತ್ತಿಗೆ ಚುಚ್ಚುತ್ತಾ ಇದೆ.ಮಳೆ ಬಂದು ಅದೆಷ್ಟು ತಿಂಗಳುಗಳು ಕಳೆದು ಹೋಗಿದೆಯೋ ಲೆಕ್ಕ ಇಲ್ಲ.ಅವನು ಮಾತ್ರ ಅವನ ಸಂಚಾರ ನಿಲ್ಲಿಸಿಲ್ಲ.ತೂಕವಿದ್ದ ದೇಹ ಈಗ ಮೂಳೆಗಳ ಕಟ್ಟಡದಂತೆ ಕಾಣ್ತಿದೆ. ಬೆವರು...
ಕಾವ್ಯಕನ್ನಿಕೆಗೊಂದು ಹೆಸರು
ಬಹಳಷ್ಟು ಬರೆದೆ ನಾ ನನ್ನ ಕಾವ್ಯ ಕನ್ನಿಕೆಯ ಕುರಿತು ಶಬ್ದಗಳ ಸರ ಹೆಣೆದು ಸುಸ್ತಾದೆ, ಅವಳ ಅಂದ ವರ್ಣಿಸಲು. ಕೇಳುವ ಮನಸ್ಸಾಯಿತು ಅವಳ ನನ್ನ ವರ್ಣನೆಗಳಲ್ಲಿ ಅವಳ ಮೆಚ್ಚು ಯಾವುದೆಂದು. ಆದರೆ ಕೇಳಲಿ ಹೇಗೆ? ಅವಳನ್ನು ಕರೆಯಲೊಂದು ಹೆಸರು ಬೇಕಲ್ಲವೇ? ಏನೆಂದು ಹೆಸರಿಡಲಿ? ಕಣ್ಣು ಮುಚ್ಚಿ ಅಕ್ಷರಗಳ ಪೋಣಿಸಿದೆ, ಸಿಗಲಿಲ್ಲ ತೃಪ್ತಿ ನೀಡುವ ಹೆಸರು. ಕಣ್ತೆರೆದೊಮ್ಮೆ ಸುತ್ತ...
ಸಾಸಿವೆ ತಂದವನು …..
ನಾನು ಆಫೀಸಿನಲ್ಲಿ ಬ್ಯುಸಿ ಆಗಿದ್ದಾಗ ನನ್ನ ಫೋನ್ ರಿಂಗಣಿಸಿತು . ಮಾಡುತ್ತಿದ್ದ ಕೆಲಸವನ್ನು ಅರ್ಧಕ್ಕೇ ಬಿಟ್ಟು ತಕ್ಷಣವೇ ಆಸ್ಪತ್ರೆಗೆ ಓಡಿ ಬಂದೆ . ನೀನೆಂದೂಆಸ್ಪತ್ರೆಯ ಕಡೆಗೆ ಮುಖ ಮಾಡಿದವಳೇ ಅಲ್ಲ ಅಮ್ಮ !. ICU ಕೋಣೆಯೊಳಗೆ ಇಣುಕಿ ನೋಡಿದೆ ,ನನ್ನೆಡೆಗೆ ಒಂದು ಕ್ಷೀಣ ನಗು. ನಾನು ಮತ್ತೆ ಮಗುವಾಗಿಹೋದೆ ಅಮ್ಮ ,ಗಳ ಗಳನೆ ಅತ್ತು ಬಿಟ್ಟೆ ...
ಆತ್ಮ ಸಂವೇದನಾ. ಅಧ್ಯಾಯ 33
ಆತ್ಮ ಸಂವೇದನಾ. ಅಧ್ಯಾಯ 32 ಭೂಮಿಯಲ್ಲಿ ವಿಶೇಷವಾದ ದಿನ. ಅವೆಷ್ಟೋ ಜೋಡಿಗಳು ಒಂದಾಗಿ ಬದುಕುವ ನಿರ್ಧಾರಕ್ಕೆ ಬಂದಿದ್ದವು. ತಾಯಿಯಾಗುವ ಬಯಕೆ ಹೆಣ್ಣಿಗೆ, ತಂದೆಯ ಅಧಿಕಾರ ಮೆರೆವ ಆಸೆ ಗಂಡಿಗೆ. ಮತ್ತೆ ಬಂಧಗಳ ಪರ್ವ ಆರಂಭವಾಗಿತ್ತು. ಎರಡನೇ ಸೂರ್ಯ ಕೂಡ ಮಾಯವಾಗಿದ್ದ. ಅಂದಿನ ರಾತ್ರಿ ಸುಮಧುರ ಕತ್ತಲು. ಅವೆಷ್ಟೊ ಜೋಡಿಗಳಿಗೆ ಮೊದಲ ರಾತ್ರಿ; ಹಳೆಯದೆಲ್ಲವ ಮರೆತು ನೂತನ...
ನನ್ನ ದೇಶ ನನ್ನ ಜನ – ಅಂತ್ಯ (ಕಾಪಾಡಿ…….ಕಾಪಾಡಿ )
ನನ್ನ ದೇಶ ನನ್ನ ಜನ – 4 ನಾಗ, ಮಂಜ ಹಾಗೂ ಮಲೆನಾಡಿನ ಕಾಡು ಈ ಮೂರೂ ಸಹ ಅವನತಿಯ ಅಂಚಿನಲ್ಲಿದೆ. ನಾಗ, ಮಂಜ ಎಂದರೆ ಇಲ್ಲಿ ನಾನು ವ್ಯಕ್ತಿಯ ಬಗ್ಗೆ ಮಾತನಾಡುತ್ತಿಲ್ಲ, ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಿದ್ದೇನೆ. ನಾಗ ಗಿಡ ಮೂಲಿಕೆ ಔಷಧಿಯ ಭಂಡಾರ, ನನಗೇ ಗೊತ್ತಿಲ್ಲದ ಎಷ್ಟೋ ಗಿಡ ಮರಗಳ ಬಗ್ಗೆ ಅವನಿಗೆ ಗೊತ್ತಿತ್ತು. ಆದರೆ ಆತ ಅದನ್ನು ಯಾರಿಗೂ ಹೇಳಿ...
ವಸಂತ ರಾಗ 2
ವಸಂತ ರಾಗ 1 ತಂಗಾಳಿ ಮುಖದ ಮೇಲೆ ಬೀಸ್ತು.ಕೂದಲು ಹಾರುತ್ತಾ ಇತ್ತು.ವಾಸ್ತವದ ಅರಿವಾಗಿ ದೀಪಕ್ ಒಮ್ಮೆ ಸುತ್ತಮುತ್ತಲೂ ನೋಡಿದ.ರಾಮ ಆಂಜನೇಯ ತಬ್ಬಿರುವ ದೃಶ್ಯ ಕಾಣ್ತಿದೆ.ದೇವಸ್ಥಾನ.ಪ್ರಶಾಂತ ಜಾಗ.ಜನ ಅಲ್ಲಲ್ಲಿ ಚದುರಿದ್ದಾರೆ.ಹಕ್ಕಿಗಳು ಕಾಳು ಹುಡುಕಿ ಬಂದು ಕೂತಿವೆ. ನೆನಪುಗಳು ಮನಸ್ಸಿನಲ್ಲಿ ಆಹಾರವಾಗಿ ಹೃದಯತುಂಬಿ ಬರ್ತಿದೆ. ”ಇದೇ ರಾಮಾಂಜನೇಯ ಗುಡ್ಡ ಅಲ್ವ ಮೊದ್ಲು...
ನನ್ನ ದೇಶ ನನ್ನ ಜನ – 4 (ಇಕ಼್ಬಾಲ್ ಸಾಬಿಯ ತೋಟಾ ಕೋವಿ )
ನನ್ನ ದೇಶ ನನ್ನ ಜನ – 3 ನೀವು ಕಾಡನ್ನು, ಜೀವ-ಜಂತುಗಳನ್ನು ಇಷ್ಟಪಡದೇ ಹೋದರೆ ಮಲೆನಾಡು ಎರಡೇ ದಿನಕ್ಕೆ ಬೇಸರ ಮೂಡಿಸುತ್ತದೆ. ಆದರೂ ಈ ಕಾಡು ಪ್ರಾಣಿಗಳಿಂದ ನಾವು ಅನುಭವಿಸುವ ಕಾಟ ಅಷ್ಟಿಷ್ಟಲ್ಲ. ಮಂಗನಿಂದ ಹಿಡಿದು ಕಾಡೆಮ್ಮೆಯವರೆಗೆ ದಿನಾ ಒಂದಲ್ಲ ಒಂದು ಕಾಟ ಇದ್ದೇ ಇರುತ್ತದೆ. ಅಡಿಕೆಯನ್ನು ಮಂಗಗಳಿಂದ ಕಾಪಾಡುವುದೇ ದೊಡ್ಡ ಸಾಹಸ. ಅಡಿಕೆ ಹುಟ್ಟಿದ್ದು ಮೂಲಾ...