ಕವಿತೆ

ಕವಿತೆ

ನವ್ಹೆಂಬರ್ ೯,೨೦೧೬ರ ಮೊದಲು

ಕಪ್ಪು ಕಾಂಚಾಣಾ ಕುಣಿಯುತಲಿತ್ತೊ ಕಾಲಿಗೆ ಬಿದ್ದವರ ತುಳಿಯುತಲಿತ್ತೊ ಬಡವರ ಧಮಣಿಯ ರಕುತವ ಹೀರಿತ್ತೊ ಧನಿಕರ ಬೊಜ್ಜಲ್ಲಿ ಬಚ್ಚಿಕೊಂಡಿತ್ತೊ ಮೇಜಿನ ಅಡಿಯಲ್ಲಿ ಸರಿದಾಡುತಿತ್ತೊ ವಿದೇಶಿ ಬ್ಯಾಂಕಿನ ಖಾತೆಯಲ್ಲಿತ್ತೊ   ಕಪ್ಪು ಕಾಂಚಾಣಾ….! “ಯುವರಾಜ”ನ ಗದ್ದುಗೆಲಿ ಸದ್ದು ಮಾಡಿತ್ತೊ “ಅಮ್ಮ”ನ ಸೆರಗಿನ “ಗಂಟ”ಲ್ಲಿ ಇತ್ತೊ...

ಕವಿತೆ

ಕೂಸು

ಎಷ್ಟೋ ಖುಷಿಯು,ಎಷ್ಟೋ ಕನಸೂ ಕೈಕುಲುಕಿ ಶುರುವಾಗಿದೆ ನಿನ್ನೊಂದಿಗೇ…!!! ಹನಿಯನು ಮೊಗೆದ ಹಸಿರೆಲೆಯಂತೆ,ತಾಯಿನೂ ಹುಟ್ಟುವಳು ಕೂಸೊಂದಿಗೆ…!! ತನ್ನ ಪಿಳಿ ಕಂಗಳಲ್ಲಿ ಮಗು ನೋಡಿತು ಮೊದಲ ನೋಟ..!! ಹೆಸರೊಂದನು ಜತೆಸೇರಿಸಿ ಕರೆಯಿತು ಲೋಕ..!! ಎದೆಹಾಲು.,ತಾಯ್ಮಡಿಲು.,ಕೈತುತ್ತು ಪ್ರತಿ ಇರುಳು ಚುಕ್ಕಿ ಚಂದ್ರನ ಸಹಿತ…!! ಪ್ರಕೃತಿಯ ಒತ್ತಾಳು...

ಕವಿತೆ

ಹೊಸಬೆಳಗು

ನಿಶೆಯ ಛಾದರವ ಕೊಡವಿ ಉಲಿದಿದೆ; ಜಗವು ಜಾಗರದ ಚಿಲಿಪಿಲಿ.! ಸೂರ್ಯಕಿರಣಗಳು ಮರಳಿ ತಂದಿವೆ, ನವ ಚೈತನ್ಯದ ಕಚಗುಳಿ.! ಬೆಳ್ಳಿ‌ ಇಬ್ಬನಿಯು ತೆಳ್ಳಗಾಗುತಿದೆ ಹೊನ್ನ ಕಿರಣಗಳ ಶಾಖಕೆ.! ಬಾನ ಕೆನ್ನೆಯದು ರಂಗೇರುತಿದೆ ಮೊಗದಿ ಮೂಡಿದೆ ನಾಚಿಕೆ.! ಹೂವ ದಳಗಳು ತೋಳ ಚಾಚಿವೆ, ಮಧುಗುಂಜನದಾಲಿಂಗನಕೆ! ಸಕಲ ಜೀವಗಳು ಸಜ್ಜುಗೊಂಡಿವೆ ಹೊಸಬೆಳಕಿನ ಸುಸ್ವಾಗತಕೆ! ಬೆಳ್ಳಕ್ಕಿಗಳ ಬಳಗವು...

ಕವಿತೆ

ಸಾಂತ್ವನ

ಪ್ರತಿ ಹುಣ್ಣಿಮೆಯ ಸರಿ ರಾತ್ರಿ ಬಸಿವ ಬೆಳದಿಂಗಳ ಬೊಗಸೆಯಲಿ ಹಿಡಿದಿಟ್ಟು ಇನ್ನೆರಡು ದಿನ ಬಿಸಿಲಲ್ಲೊಣಗಿಸಿ ಹೊಸ ನಕ್ಷತ್ರಗಳ ಅಂಟಿಸುತ್ತೇನೆ ಅಮಾವಾಸ್ಯೆಗೆ!.. ಒಮ್ಮೊಮ್ಮೆ ಮಿಂಚುಹುಳುಗಳು ಹುಟ್ಟಿಕೊಳ್ಳುತ್ತವೆ ನನ್ನ ಕಣ್ಣಿನಲ್ಲೂ..   ಹರಿದ ಜೋಗಿಯ ಅರಿವೆಯ ತೇಪೆ ಕೊನೆಯಲ್ಲಿ ಜೋಲುತಿಹ ತಂಬೂರಿ ಸ್ವರಗಳ ಕೊಡು ನನಗೆ.. ನೆಂದಿವೆ ಕಾಗದಗಳು ಶಾಯಿಯಲ್ಲಿ...

ಕವಿತೆ

ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ..

ದೀಪ ಹಚ್ಚುವ ವೇಳೆ ಧೂಪ ಹಾಕುವ ಸಮಯ ಹೊತ್ತಿಸು ಊದಿನಕಡ್ಡಿ ಬೆಳಗಿಸು ಮಂಗಳದಾರತಿ ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ || ಜಾಜ್ವಾಲಮಾಲಾ ಬೆಳಗಲಿ ಉಜ್ವಲ ಕಾಂತಿ ಹೊಮ್ಮಲಿ ದಿಕ್ಕುದಿಕ್ಕುಗಳೆಡೆ ಪಸರಿಸಲಿ ಕನ್ನಡ ಕಂಪ ಹೊತ್ತು ಮೆರೆಸಲಿ ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ || ಜೊಳ್ಳೆಲ್ಲ ಉರಿದು ಹೋಗಲಿ ಎಳ್ಳುಬತ್ತಿ ಹರಕೆ ತೀರಿಸಲಿ ಪುಟಕ್ಕಿಟ್ಟ ಅಪರಂಜಿ ಹೇಮ...

ಕವಿತೆ

ಮೊಳಗಿದೆ ಕನ್ನಡ ದುಂದುಭಿ

ಶ್ರೀಗಂಧದ ಸಿರಿಯಾಗಿ ಜೀವನದಿ ಕಾವೇರಿಯಾಗಿ ಸಹ್ಯಾದ್ರಿ ಗಿರಿ ಶಿಖರವಾಗಿ ಹಚ್ಚಹಸುರನೇ ಹೊದ್ದು ನಿತ್ಯ ಕಂಗೊಳಿಸುತಿಹಳು ಕನ್ನಡ ತಾಯಿ ಭುವನೇಶ್ವರಿ ಬೇಲೂರು,ಹಳೆಬೀಡು ಬಾದಾಮಿ,ಹಂಪೆ,ಐಹೊಳೆ ಪಟ್ಟದಕಲ್ಲು,ಶ್ರವಣಬೆಳಗೊಳ ಶಿಲ್ಪಕಲಾ ವೈಭವ ಶೋಭಿತ ಮುಂಚೂಣಿಯಲಿ ಮೆರೆದಿಹಳು ಕನ್ನಡ ಸಿರಿದೇವಿ ಭುವನೇಶ್ವರಿ ಪಂಪ,ರನ್ನ,ಪೊನ್ನ,ಜನ್ನ,ಹರಿಹರ ಸರ್ವಜ್ಞ,ಪುರಂದರದಾಸ,ಕನಕದಾಸ...

ಕವಿತೆ

ಮಣ್ಣ ಹಣತೆ…

ಅಲ್ಲೊಬ್ಬ ಶ್ರಮಜೀವಿ ಹಗಲಿರುಳು ತನ್ನ ಹೊಲದಲ್ಲಿ ನೆಟ್ಟ ಸಸಿಯನ್ನು ಅವನು ನಂಬಿದ್ದು ತನ್ನ ಕರುಣೆಯಿಂದ ಫಲ ನೀಡುವ ಭೂಮಿತಾಯನ್ನು ಆ ತಾಯ ಆಜ್ಞೆ ಮೀರದ ಮೋಡಗಳು ಹನಿಸಿದ್ದು, ಮಳೆಯಾಗಿ ತಲುಪಿದ್ದು ಭೂಮಿಯನ್ನು. ಸಸಿಯು ಗಿಡವಾಗಿ, ಸೂರ್ಯನ ಬೆಳಕು ಆಹಾರವಾಗಿ, ಹೂವಾಗಿ ಅರಳಿ ನೀಡಿತು ನಗುವನ್ನು ಕಾಲ ಕಾಲಕ್ಕೆ ಅರಳಿ ನಿಂತ ಇನ್ನಷ್ಟು ಹೂವುಗಳು  ಬೀಜಗಳಾಗಿ ತಲುಪಿದವು...

ಕವಿತೆ

ಸಾವು ಮತ್ತು ಸೈನಿಕ

ಕಾದು ಕುಂತಿದೆ ಕಾಲನ ಕುಣಿಕೆ ಕಾಲ ಮೇಲೆ ಕಾಲು ಹಾಕಿಕೊಂಡು ಕಟ್ಟ ಕಡೆಯ ಸರಹದ್ದಿನಲಿ ಕಾವಲು ಕಾಯುವ ಸೈನಿಕನ ನೋಡಿ ಕ್ರೂರ ನಗುವಿನ ಕರಾಳ ಮಾರ್ದನಿ ಕೂಳ ಸಮಯದ ಕುತಂತ್ರ ಅನಿ ಸುತ್ತ ಆವರಿಸಲು ಕುಲೋಚನ ಕಾಂತಿ ಬರುತಿದೆ ಹತ್ತಿರತ್ತಿರ ಸಾವಿನ ಅಡಿ ಸದ್ದು ಮಾಡುತಿರಲು ಸ್ಫೋಟದ ಆಟ ಎದ್ದು ನಿಂತಿದೆ ಕಾವಲಿನ ನೋಟ ಹೊತ್ತಿ ಉರಿಯುತಿರೆ ಹಿಮದ ಶಯನ ಯೋಧ ಬಯಸಿಹನು ಶತ್ರುವಿನ...

ಕವಿತೆ

ರೈತ ಮತ್ತು ಸೈನಿಕ

ಇಲ್ಲಿ ಹನಿಹನಿ ನೀರಿಲ್ಲದೆ ಬರದ ಹಾಹಾಕಾರ… ಅಲ್ಲಿ ಹನಿಹನಿಯಾಗಿ ಹರಿದ ರಕ್ತದ ಹಿಂಸಾಚಾರ ! ಬರಡು ನೆಲದಲ್ಲಿ, ನೀರ ಸೆಲೆ ಕಾಣದೆ ಕಂಗಾಲಾದ ರೈತನಿಲ್ಲಿ… ಕೊರೆವ ಛಳಿಯಲ್ಲಿ, ಹಿಮದ ನೆರಳಲ್ಲಿ ನಿದ್ರಿಸದ ಸೈನಿಕನಲ್ಲಿ…!   ಬರಿದೆ ಮೋಡವ ಕಂಡು ಬಾರದ ಮಳೆಯ ಶಪಿಸಿ, ಹಸಿದ ಮಕ್ಕಳ ನೆನೆದು ಬಡತನದ ಬೇಗೆಯಲಿ, ಬದುಕುವ ಬಗೆ ಕಾಣದೆ...

ಕವಿತೆ

ಆಧುನಿಕ ರೈತ

ಗರಿ ಗರಿ ಇಸ್ತ್ರಿ ಹಾಕಿದ ಅಂಗಿ ನೋಡಿ ಅವನ ಗಂಭೀರ ಭಂಗಿ   ಅವನಿನ್ನೂ ಮೀಸೆ ಮೂಡದ ಹುಡುಗ ಕೈಯಲ್ಲಿ ಮಿಂಚುವ ಚಿನ್ನದ ಖಡಗ   ಕತ್ತಿನಲ್ಲಿ ಬಲು ದಪ್ಪದ ಬಂಗಾರದ ಸರಪಳಿ ನೋಡಿದವರು ಒಮ್ಮೆಗೆ ಆಗುವರು ಪಿಳಿ ಪಿಳಿ   ಶುದ್ದ ಬಿಳಿಯ ಕಾರು, ಕಪ್ಪು ಕನ್ನಡಕ ಸುತ್ತ ಜನರಿದ್ರೆ ಅವನಿಗೇನೋ ಪುಳಕ   ಬೆಂಗಳೂರಿನ ಇವತ್ತಿನ ರೈತ ಭಾರಿ ಆಧುನಿಕ ರಿಯಲ್...