ಕವಿತೆ

ಕವಿತೆ

*ಅಪೂರ್ವ ಅಧ್ಯಾಯ*

ಅಪ್ಪನೆಂಬ ಅದ್ಭುತವ ಏನೆಂದು ಹಾಡಲಿ ಅದು ಎಂದೂ ಮರೆಯದ ಪಾತ್ರ ನನ್ನ ಬಾಳಲಿ ಅಮ್ಮನ ಕರುಳ ಬಂಧ ಅಪ್ಪನ ನೆರಳ ಅನುಬಂಧ ಆ ಎರಡು ತೀರದ ನಡುವೆ ನಾ ಹರಿವ ನೀರ ನಿನಾದ ಅಪ್ಪ ಎನ್ನಲು ಏನೋ ಬಲ ಅಪ್ಪನಿಂದಲೇ ಬದುಕೋ ಛಲ ಅಪ್ಪ ಎಂಬ ನಂಬಿಕೆಯ ಸೂರು ಅಪ್ಪನಿರಲು ನನ್ನ ಮುಟ್ಟುವರಾರು ಅಪ್ಪ ನನ್ನ ಬದುಕ ಚೌಕಟ್ಟು ಅಪ್ಪ ಇರಲು ತಲೆದೋರದು ಬಿಕ್ಕಟ್ಟು ಅಪ್ಪ ಎಂಬ ನಿಷ್ಠುರವಾದಿ ಕಳೆವರು...

ಕವಿತೆ

ಚಿತೆ

ಹುಟ್ಟಿದಾಗ ಹಚ್ಚಿಟ್ಟ ದೀಪದ ಬೆಳಕು ಹೆಚ್ಚಾಗಿ ಸುತ್ತುತಿದೆ ಕಟ್ಟಿಗೆಯ ಕಟ್ಟೆಯನು ಪಂಚಕರ್ಮಗಳ ಪಂಚೆಯನು ಬಿಚ್ಚಿ ನಟ್ಟ ನಡುವೆ ಬಚ್ಚಿಟ್ಟ ಬೆತ್ತಲೆ ದೇಹವನು..   ಸುತ್ತ ಒಂದಿಷ್ಟು ಮಂದಿ ಮಾತುಗಳನು ಕೊಂದು ನಿಂತು ಕಣ್ಣೀರಿಗೆ ಹರಿವ ದಾರಿಯ ತೋರಿ ಕೈಗಳಿಗೆ ತಡೆಯುವ ಕೆಲಸ ಕೊಟ್ಟು   ಹೆಗಲ ಮೇಲೊಂದು ಹೊಸದು ಮಡಿಕೆ...

ಕವಿತೆ

ಜಾತ್ರೆಗೊಂದಿಷ್ಟು ಹನಿಗಳು..

ಜಾತ್ರೆಗೊಂದಿಷ್ಟು ಹನಿಗಳು.. ಊರ ಜಾತ್ರೆಯಲಿ ಬಳೆಯಂಗಡಿಯಲಿ ಚೌಕಾಶಿ ಮಾಡುತ್ತಾ ನನ್ನ ನಿಲ್ಲು ಅಂದಿದ್ದು.. ನಿನ್ನ ವಾರೆನೋಟವೇ .. ಅದೊಂದು ನೋಟದಲ್ಲಿ ಬಳೆ ಕೊಂಡು ಬಿಟ್ಟು ಬರುವಷ್ಟು.. ಮರೆವಿದೆಯಾ.!! **** ನಾ ಮುಂಗುರುಳು ಸರಿಸಿ ನಕ್ಕಿದ್ದು… ಯಾಕೆಂದುಕೊಂಡೆ.. ನೀ ಸನಿಹ ನಿಂತಿದ್ದು ಕಂಡೇ..! **** ಅಷ್ಟು ಹುಡುಗರ ನಡುವೆ.. ನೀನ್ಯಾಕೋ ವಿಶೇಷ.. ಏನೋ ಜಾದೂ...

ಕವಿತೆ

ಇದಿರು

ಕಲ್ಲು ಮೂಳೆಗೆ ಮಣ್ಣ ತೊಗಲು ಗೋಡೆ ಮೇಲೆ ಕುಂತ ಪಾತ್ರೆ ಹಗುರ ದಪ್ಪ ಉದ್ದ ವಿರಳ ಒರಟು ಡೊಂಕು ಕಣ್ಣ ತಂಪು ಅರ್ಧ ಸೀಳಿದ ನಗ್ನ ಸೌದೆ.. ಗೆದ್ದಲಿಡಿವ ಮುನ್ನ ಸೇರಿಕೊಂಡ ನೀರನೊಸರದ ತೆಂಗು ತೂತು ಕೊರೆದ ಮಧ್ಯ ಕೋಟೆ.. ತಿಕ್ಕಿಕೊಂಡ ಬಣ್ಣಗಳ ಕಾವಿಗೆ ಸುಟ್ಟಿಕೊಂಡವು ತಮ್ಮ ಕೂದಲು.. ಮಧ್ಯ ಮಧ್ಯ ಉಸಿರು ಅವಳದು…   ತಳವ ಸೋಕಿ ಗಾಳಿ ಜೀಕಿ ಅಲ್ಲೇ ನಿಂತುಕೊಂತು...

ಕವಿತೆ

ನನ್ನ ನೋವು ನನ್ನ ನಲಿವು

ಹೂಬನದಲಿ ನಲಿಯಲಾಗದೆ ಮನಬಂದಲ್ಲಿ ನಿಲ್ಲಲಾರದೆ ಹಕ್ಕಿಗಳಂತೆ ಹಾರಲಾರದೆ ಎಲ್ಲರಿಂದ ತಾತ್ಸಾರಕ್ಕೊಳಗಾದೆ ನಾನು ಹೀಗೇಕೆ ನನ್ನನ್ನು ಸೃಷ್ಠಿಸಿದೆ  ನೀನು? ಹರಿವ ನೀರಲ್ಲಿ ಬಣ್ಣದ ಮೀನುಗಳು ನೀಲಿಯಾಗಸದಲಿ ಬಿಳಿಯಾದ ಮೋಡಗಳು ಬೆಳಕ ಹೊನಲಲ್ಲಿ ನಗುವ ಹೂವುಗಳು ಎಲ್ಲವೂ  ಸುಂದರ ಎಲ್ಲವು ವರ್ಣಮಯ ನಾನೇಕೆ ಹೀಗೆ? ಮೈಯೇಕೆ ಬರಿದೆ ಮುಳ್ಳುಗಳ ಹೊದಿಕೆ? ಕನ್ನಡಿಯ ಬಿಂಬವೋ . ನನಗೇ...

ಕವಿತೆ

ಸ್ತ್ರೀ ವಾದಿಯ ಕವನ

ನಾನು ಗಂಡಸರ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ ಸ್ತ್ರೀ ವಾದಿ ಲೇಖಕಿ.. ನನ್ನಪ್ಪ ನನ್ನ ಸರ್ವಸ್ವ ಒಳಗೊಳಗೆ ನೋವು ನುಂಗಿ ಸಂಸಾರದ ಬಂಡಿ ಎಳೆದ ಅಪ್ಪ ಈ ಲೇಖನಿ ಹಿಡಿದಾಗ ನೆನಪೇ ಆಗುವುದಿಲ್ಲ.‌ ಅವನ ತಂಗಿಯ ಮದುವೆ ನಿದ್ದೆಗೆಟ್ಟು ದುಡಿದು ಕೂಡಿಟ್ಟ ಹಣವ ವರದಕ್ಷಿಣೆ ಕೊಟ್ಟು ತಂಗಿ ಸುಖವಾಗಿರಲೆಂದ ಆ ಅವಳಣ್ಣನೂ ಲೇಖನಿ ಹಿಡಿದಾಗ ನೆನಪಾಗಲೇ ಇಲ್ಲ… ಇವರಂತಹ ಯಜಮಾನ...

ಕವಿತೆ

ಅಂದು.. ಬಂದಿದ್ದೆ ನಾನು…

ದ್ರವ್ಯವೊಮ್ಮೆ ಬೆರೆವಾಗ ನಾಚಿ ಕರಗಿತ್ತು ಲವಣ ಆಯಸ್ಸುಗಳ ಪೇರಿಸುತ್ತ ಆಕಾರ ಪಡೆಯಿತು ಮೌನ.. ರಕ್ತ ಸೋರುವ ಬಳ್ಳಿಗರಳಿದ ಹೂವಿಗೆ ಶಿಶುವೆಂದು ನಾಮಕರಣ.. ಅಂದು.. ಬಂದಿದ್ದೆ ನಾನು..! ತುಂಬಿಟ್ಟುಕೊಂಡ ಚೀಲದಲ್ಲಿ ತೂರಿಬರುತ್ತಿದ್ದ ಆಹಾರ.. ತುರುಬಿಗೆ ಸಿಕ್ಕಿಸಿದ ಬಣ್ಣಗಳ ಆಗಾಗ ಹೇಳುತ್ತಿದ್ದಳು ಅವಳು.. ಕಥನದಂತಿದ್ದ ನಾನು ವಾಸ್ತವದ ಚಿಹ್ನೆಯಾಗಿದ್ದು ನರಳುವಿಕೆಯ...

ಕವಿತೆ

ಮ್ವಾರೇ ಪುಸ್ಕ..

ಮ್ವಾರೇ ಪುಸ್ಕ ಮ್ವಾರೇ ಪುಸ್ಕ ಪೆನ್ನು ಬಳ್ಪಾ ಎಲ್ಲಾ ಕೈ ಚಳ್ಕಾ ಫೋನೇ ಸ್ಲೇಟು ನೀನೇ ಥೇಟು ಬರ್ಕೊಳ್ರಪ್ಪ ನಿಮ್ನಿಮ್ದೇ ಗಿಲೀಟು ! ಒತ್ತಾರೆಗೆದ್ದ ಅಲ್ವಲ್ಲ ಬುದ್ಧ ಕೈಗ್ಹಿಡ್ಕೊಂಡೋನೆ ಅಲ್ಲೆ ಆಡ್ಬಿದ್ದ ಸರಿ ಒತ್ತಿದ್ದೇನು ಬಿಟ್ಟಿದ್ದೇನು ? ಮನ್ಸಿಗ್ಬಂದಂಗೇ ಅಲ್ಲೆ ಕಾನೂನು ..! ಮ್ವಾರೇ ತೊಳ್ಯೋದಾಮೇಲಿರ್ಲಿ ಲೈಕಾಮೆಂಟು ಬಿದ್ದೈತೇನಲ್ಲಿ ಎದ್ದೆ ಬಿದ್ದೆ ಕುಡ್ದು...

ಕವಿತೆ

ಕಲಿಸಿ ಹೋದಳಾಕೆ !

ಭಾವತರಂಗವ ಬರೆಯುವದನು, ಅಂತರಂಗವ ಆಳುವದನು, ಕಲಿಸಿ ಹೋದಳಾಕೆ. ನಿಸ್ವಾರ್ತಿಯಾಗಿ ಬದುಕುವದನು, ಬದುಕುವಾ ಕಲೆಯನ್ನು, ಕಲಿಸಿ ಹೋದಳಾಕೆ.! ದೇಶವೇ ಗುರುವೆಂದು, ಗುರುವೇ ತಾಯಿಯೆಂದು, ತಾಯಿಯೇ ದೈವವೆಂದು, ಕಲಿಸಿ ಹೋದಳಾಕೆ. ಬದಕುವದನು ಕಲಿಸಿ ಹೋದಳಾಕೆ.! ಪಕೀರ ನೀನು, ಪಾಪ ಬೇಡ. ಆಸೆಗೆ ನಾನೇ ಮೂಲ, ಅತಿಯಾಸೆ ಬೇಡ ನಿನ್ನ ನೀನು ಗೆಲ್ಲೆಂದು, ಕಲಿಸಿ ಹೋದಳಾಕೆ ಅವಳಿಲ್ಲದೆ...

ಕವಿತೆ

ನಾನು

ನಮ್ಮನ್ನಾಳುವವರ, ದೊರೆ ನಾನು ನಮ್ಮ ಹೂಳುವನೆಂದು, ಬಂದವರ ಪಾಲಿಗೆ, ಊರುಗೋಲು ನಾನು. ನಮ್ಮನ್ನು, ವಂಚಿಸುವವರ, ಸ್ನೇಹ ಜೀವಿ ನಾನು ಇಂದಿಗೆ, ಈ ಬದುಕು ಮುಗಿಯುತ್ತಿದೆ ಎಂದಾಗಲೂ ಹಸನ್ಮುಖಿ ನಾನು. ನಾನು ಎನ್ನುವ ಇವ, ಶ್ರೀ ಸಾಮಾನ್ಯನು. ನಾನು ಎಂದರೆ ಬೇರೆಯಲ್ಲ ಕನ್ನಡಿಗನು. -ಪವನ ಕುಮಾರ ಕೆ ವಿ kvpkbly@gmail.com