ಕವಿತೆ

ಕವಿತೆ

ನಾನೆದ್ದಾಗ ಮೂಡಣ ಬೆಳಕಿನ ನೃತ್ಯಕ್ಕೆ…

ನಾನೆದ್ದಾಗ ಮೂಡಣ ಬೆಳಕಿನ ನೃತ್ಯಕ್ಕೆ, ಮಂಜಿನ ಗುಂಡಾಗಿ, ಸರ್ರನೆ ಗೋಚರಿಸಿ, ಝರ್ರನೆ ಕರಗಿ ಹೋದ ಆ ದಿನಕರ, ಹಿಮಮಣಿಗೆ ಕಾದ ಗುಲಾಬಿ ಮೆಲ್ಲಗೆ, ಅರಳುತ್ತಾ ನನ್ನ ಹರಸಿತು ಶುಭವಾಗಲೆಂದು, ಆ ನೀರ ಹನಿ ನನ್ನ ಬಿಂಬವ ನೋಡಿ ನಕ್ಕಿತು. ಹನಿಮುತ್ತು ಪೋಣಿಸಿ ಚಿಗುರೆಲೆ ಮಾಲೆಯಾದರೆ, ಲತೆ-ಬಳ್ಳಿಗಳು ಹೂವ ತುಂಬಿ ಹೊನ್ನಿನ ಅರಿವೆಯ ಹೊದೆದು, ಹುಲ್ಲಿನೊದೆಗಳು ನನಗೆ ಕಚಗುಳಿಯ...

ಕವಿತೆ

“ಪಾತ್ರ…”

ಜಗವ ಕಾಣುವ ಮೊದಲೇ ಹಸಿವನ್ನು ಕಳೆದವಳು.. ಇಟ್ಟ ಪುಟ್ಟ ಹೆಜ್ಜೆಗೆಲ್ಲ ಎದೆಹಾಲ ಕಸುವಿತ್ತವಳು.. ಗರ್ಭದಾ ಒಳಹೊರಗೂ ಸ್ವರ್ಗವನೇ ಹರಸಿಹಳು.. ಇಲ್ಲಿ `ಅವಳೊಬ್ಬ’ ತಾಯಿ.. ಒಂದೇ ನೂಲಿನ ಒಡಲಲಿ ಹುಟ್ಟಿದಾ ನವಿರು ಎಳೆಯು ಬಿಡಿ ದೇಹ ಹಿಡಿ ಜೀವ ತುಸುಮುನಿಸಿನಲಿ ಗುದ್ದು.. ಮರುಗಳಿಗೆ ಮುಗುಧತೆಯ ಮುದ್ದು.. ಇಲ್ಲಿ `ಅವಳೊಬ್ಬ’ ಅನುಜೆ.. ತೊದಲಿನಾ ಸೊಗಡಿಗೆ ಮೃದು...

ಕವಿತೆ

ಹೈಕು

ನರಭಕ್ಷಕ ಹುಲಿಗೂ ಅನಿವಾರ್ಯ ಹೊಟ್ಟೆ ತುಂಬೋದು   ಮಾತೃ ಹೃದಯಿ ಕವಿಯೂ ಒಬ್ಬ ತಾಯಿ ಕವಿತೆ ಮಗು.   ಹೊಂಬಿಸಿಲಲ್ಲಿ ರೆಕ್ಕೆ ಚಾಚಿದ ಭಾನು ಜೋತೆಗೆ ನೀನು.   ತಾಯಿ ತೋಳಲ್ಲಿ ಮಗು ನಕ್ಕು ಅನಾಥ ಚಂದ್ರ ಮಂಕಾದ.   ಮೌನ ಅಂಕುಶ ಮಾತೆಂಬ ಮದಗಜ ಅಡಗಿಸಲು.   Makaranda Manoj Kumar manu.kannada@gmail.com

ಕವಿತೆ

ಹೈಕು

ನನ್ನೆಲ್ಲಾ ಆಸೆ ಬರಿದಾಗಲೂ ಸಿದ್ಧ. ನಕ್ಕಾಗ ಬುದ್ಧ. ವೇಷ ಕಳಚಿ ನಿಂತೆ. ಬಯಲಸತ್ಯ ಗೋಚರಿಸಿತ್ತು ಶೀತಲತೆಗೆ ಬೆಚ್ಚಿ ಹಿಮಗಿರಿಗೂ ಕ್ಷಣ ನಡುಕ. ಮಳೆ ‘ದನಿ’ಗೆ ಕಾತುರದೀ ‘ನವಿಲು’ ಉತ್ಸಾಹದ ಬುಗ್ಗೆ. ಚಂದ್ರಕಾಣದೆ ಸಮುದ್ರ ಅಲೆಗಳಿಗೆ ಸಮೂಹ ಸನ್ನಿ. ಜೀವ ನೀಡದ ಬೇಡನ ‘ಸತ್ತ’ ಜಿಂಕೆ ಅಣಕಿಸಿತ್ತು. ಗುಟುಕು ನೀಡೋ ಹಕ್ಕಿಗೆ...

ಕವಿತೆ

ಸಮರ್ಪಣ

ನನ್ನದೆಂಬುದೇನಿಲ್ಲ ಎಲ್ಲವೂ ನಿನ್ನದಾಗಿರುವಾಗ|| ಪ್ರತಿ ಹೆಜ್ಜೆ ನಿನ್ನತ್ತ ಸುಳಿವುದು ಹೊಸ ಚೇತನ ಎನ್ನೊಳುದಿಪುದು ಈ ತನುವು ತನ್ನ ತಾ ಮರೆವುದು ತನ್ನಿದಿರು ತನ್ನಂತರಂಗವಿರಲು|| ಗಂಭೀರದಾ ಮೊಗದಲೂ ಕೂಡ ಬರವಿಲ್ಲದ ಮುಗುಳ್ನಗೆಯು ಸದಾ ಮುಖಕಮಲ ಹಿಗ್ಗಿ ಪಲ್ಲವಿಪುದು ನಿಶೆಯಲೂ, ನಿನ್ನ ನೆನಪಾಗಲು|| ಅಳುವನೆಂದಿಗೊ ಮರೆತಿಹೆನು ಕೋಪವೆನ್ನನು ತ್ಯಜಿಸುಹುದು ಭಾವಲೋಕದಿ...

ಕವಿತೆ

ನಿನ್ನೆ ಮಳೆ ಬಂದಿತ್ತೇ?

ನಿನ್ನೆ ಮಳೆ ಬಂದಿತ್ತೇನೇ, ಗೆಳತಿ ನಿನ್ನೆ ಮಳೆ ಬಂದಿತ್ತೇ? ಅಂಗಳದ ಗುಲಾಬಿ ನಿನ್ನಂತೆ ಕಂಗೊಳಿಸುತ್ತಿದೆ, ಹೂವಿನ ಎಸಳಿನ ಮೃದುಲತೆಯೂ ನಿನ್ನನೇ ಹೋಲುತಿವೆ, ಸಣ್ಣನೆ ಬೀಸುವ ತಣ್ಣನೆ ಗಾಳಿಗೆ ತೇಲುವ ರೇಶಿಮೆ ಕೂದಲ ಚೆಲುವೆ , ನಿನ್ನೆ ಮಳೆ ಬಂದಿತ್ತೇನೇ, ಗೆಳತಿ ನಿನ್ನೆ ಮಳೆ ಬಂದಿತ್ತೇ? ಎಲೆಗಳ ಮೇಗಡೆ ಕುಳಿತಿಹ ಹಕ್ಕಿಯ ಚಿಲಿಪಿಲಿ ದನಿಯನು ಕೇಳಿದೆಯಾ ? ನೀನೇ ಬಿಡಿಸಿದ...

ಕವಿತೆ

“ಮೂಕ ಹೂವಿನ ಮಾತು …”

ಅಂದು ಸಂಜೆ, ನನ್ನ ಕೊಂಡ ಅಂಗಡಿಯಲಿ ಅವನು ಮನದ ಮಾತ ಹೇಳಲು ಅಲ್ಲಿ ಕಾದಿಹಳು ನಲ್ಲೆ…ಇತ್ತ ನಲ್ಲ ನಡೆದ ಮೆಲ್ಲ ಮೆಲ್ಲಗೆ ನನ್ನ ಕೈಲಿ ಹಿಡಿದು! ಅವಳ ಕಣ್ಗಳ ನೋಡಿದ, ಪ್ರೇಮದ ಕಾರಂಜಿ ನನ್ನನು ಹಿಂದೆ ಅಡಗಿಸಿಟ್ಟು ಕೊಂಡ ಮತ್ತೆ ಮತ್ತೆ ಅವಳ ತುಟಿಗಳ ನೋಡಿದ ಸುತ್ತ ಮುತ್ತಲೆಲ್ಲ ಶಾಂತಿ, ಕೇಳುತ್ತಿತ್ತು… ನನಗೆ, ಅವನ ಹೃದಯ ಬಡಿತ … ಅವಳಿಗೆ ಏನೋ...

ಕವಿತೆ

ಹೃಸ್ವ..

ಬಿಸಿಲ ಬನದಲಿ ಹಾಯಿದೋಣಿಗೆ ಮೈದಡುವುತಿರುವ ಅಲೆಗಳಲ್ಲೇ ಸ೦ಭ್ರಮ.. ಹೆಗಲಿಗೇರಿದಾ ಮುಗಿಲ ತೊದಲಿಗೆ ಗಗನ, ನ೦ಟು ಬೆಸೆಯುವ ಮಾಧ್ಯಮ.. ಶೀತಗಾಳಿಯ ಸಲಿಗೆಗೆಲ್ಲಾ ಬರೆದು ಇಟ್ಟಿದೆ ಗಳಿಗೆಯಾ ಸಹಿಯನು; ನಾವೆಯನು ಧ್ವನಿಸುವಾ ಆ ಬಿಳಿಯ ಧ್ವಜವು… ಮಾತು ಸರಿಯದ ಕೊರಳ ತು೦ಬ ತ೦ತು ಕ೦ಪನ, ಜನ್ಯ ಶ್ರಾವಣ… ರ೦ಗು ಕುಸುರಿಯಾ ಚಿಟ್ಟೆಯ೦ತೆ ಹ್ರಸ್ವವೆ೦ದೂ ಎಲ್ಲ ಋತುಮಾನ.. ಬತ್ತಿಹುದು...

ಕವಿತೆ

ಹಣತೆ

ಮನೆಗೆ ಬೆಳಕನು ತುಂಬಿ ಬೆಳಗುತಿದೆ ಹಣತೆಗಳು ಊರಿನ ತುಂಬ , ದೇಶದಲ್ಲೆಲ್ಲ ಲಕ್ಷ ಲಕ್ಷ ದೀಪಗಳು …… ಮನೆ , ಮನದಂಗಳವನ್ನು ಗುಡಿಸಿ , ಸಾರಿಸಿ ರಂಗವಲ್ಲಿ ಇಟ್ಟು ಸುತ್ತಲಿನ ಕತ್ತಲು ದಾರಿ ತಪ್ಪಿಸದಿರಲು ಹೊಸ್ತಿಲಲ್ಲಿ ಹಣತೆಯ ದೀಪ ಹಚ್ಚಿಟ್ಟು ಕಾಯುತಿರುವೆ ಹೂಚೆಲ್ಲಿ ನಿನಗಾಗಿ ನಮ್ಮೊಳಗಿನ ಅಂಧಃಕ್ಕಾರವನ್ನು ಕಿತ್ತು ಮನದಂಗಳವ ಗುಡಿಸಿ ಕೊಳೆಯ ರಾಶಿಯ...

ಕವಿತೆ

ತಡೆಯಬೇಡ, ಮಳೆಯೆಂದರೆ…

ನೋಡುವೆ ಬೊಗಸೆಯಲ್ಲಿ ಕೂಡಿಟ್ಟು ಹನಿಯನ್ನ ಮೈಮರೆತು ಕುಣಿಯುವೆ ಬಿಚ್ಚಿ ರೆಕ್ಕೆಯನ್ನ ನೆನೆದಷ್ಟು ನೆನೆ ಅನ್ನುವ ಹೊತ್ತು ತಡೆಯಬೇಡ,ಮಳೆಯಲ್ಲಿ ಸೌಂದರ್ಯವಿದೆ ಆಗಸದಿ ಹನಿಯಾಗಿ ಮೋಡದಿ ಕೂಡಿದೆ ನನಸಾಗಿ ಮಳೆಯಾಗಿ ಭುವಿಯ ತಬ್ಬಿದೆ ಮೀಯುವೆನದರಲ್ಲಿ ನಿಂತು ತಡೆಯಬೇಡ,ಮಳೆಯಲ್ಲಿ ಪ್ರೀತಿಯಿದೆ ಗುಡುಗಿನ ಸದ್ದಿಗೆ ಮೋಡದ ನಂಟಿದೆ ಬೀಸುವ ತಂಗಾಳಿಗೆ ಮಳೆಯು ಅಂಟಿದೆ...