ರವಿವಾರ ಸೂರ್ಯಕಿರಣಗಳು ಮುತ್ತಿಟ್ಟಾಗಲೇ ಅರಿವಾದದ್ದು ನನಗೆ ಬೆಳಗಾಯಿತೆಂದು ರವಿವಾರ; ರವಿಯೇ ಬರಬೇಕಾಯ್ತು… ಸ್ವಪ್ನಸುಂದರಿಯ ಮೃದು ತೋಳಿನಿಂದ ನನ್ನ ಬಿಡಿಸುವ ಪ್ರಯತ್ನಕ್ಕಿಂದು ಅಲೆಮಾರಿ ಅಲೆಯುತಿಹೆ ನಿನ್ನೆದೆಯ ಬೀದಿಯಲಿ ಅಲೆಮಾರಿಯಂತೆ ನೀಡೆನಗೆ ಒಂದಿಷ್ಟು ಜಾಗವ ಇಳಿಸುವೆ ನನ್ನ ಕನಸುಗಳ ಕಂತೆ ಕಂಗಳಲಿ ಕಳೆದಾಗ… ನಾ ನಿನ್ನ ಕಂಗಳಲಿ ಕಳೆದುಹೋಗೋ ಆ...
ಕವಿತೆ
ಬೆಳಕಿನೆಡೆಗೆ
ಕತ್ತಲೆಯ ಒಡಲಿಂದ ರವಿಯ ಮಡಿಲಿಗೆ ಬಂದು ಕುಳಿತಿರುವಿರೇಕೆ,ನಿಮಗಾರ ನಿರೀಕ್ಷೆ? ಮೃದು ಮಂದಹಾಸ ಮೊಗದ ತುಂಬೆಲ್ಲಾ ಸೂಸೆ, ನನಗಚ್ಚರಿ ನಿಮಗಿರುವುದಾರ ಪ್ರತೀಕ್ಷೆ! ಪುರುಷ ದಬ್ಬಾಳಿಕೆಯ ಈ ಜಗದ ನಡುವಿನಲಿ ಸಂಕೋಲೆ,ಬಹುಬಂಧನಗಳ ಕಳಚಿ ಜೀವ ಜಗದ ಕಡೆ ಮುಖ ಮಾಡಿ ನಿಂತಿರುವಿರಿ ಸಂಸಾರ ತಾಪತ್ರಯಗಳಿಂದ ನುಣುಚಿ! ಜಗದ ತುಂಬೆಲ್ಲಾ ಗಾಢಾಂಧಕಾರವಿರೆ ಬೆಳಕ ಅರಸುತ ನೀವು ಬಂದಿರೇನು...
“ಹುಚ್ಚಿ”
ಸುತ್ತಮುತ್ತ ಎಲ್ಲರೂ ಚುಚ್ಚಿ “ಹುಚ್ಚಿ” “ಹುಚ್ಚಿ” ಎಂದು ಜರಿಯುತಿಹರು ಕಲ್ಲು ತೂರುತ್ತಿಹರು ಮಕ್ಕಳೊಂದಿಗೆ ಯುವಕರೂ ಥಳಿಸಿ ಅವಾಚ್ಯವಾಗಿ ನಿಂದಿಸುತಿಹರು ನನ್ನ ಮನದ ಅಳಲನ್ನು ಅರಿವರೆ ಇವರು? ಬದುಕಿನ ನೋವುಗಳ ನೆನೆಯುತ್ತ ಸೋತು ಅಳುತಿಹೆನು ದಿನ ರಾತ್ರಿ ಮುದುಡಿ ಹಳೆಯ ಗೊಣಿ ಚೀಲದಡಿಯಲ್ಲಿ ಕ್ರೂರ ನೆನಪುಗಳು ಕೆಣಕುತಿಹವು ಹರಿದು ಬತ್ತಿದ...
ನನ್ನೊಡಲ ನೋವ
ಹೆಣ್ಣು ಹಡದಿನಿ ನಾನು ಮುದ್ದಾದ ಹೆಣ್ಣು ಮಗುವ ಮುದ್ದಾದ ಹೆಣ್ಣು ಮಗುವ ತಾಯೀ ಬಾಳ ಚಲುವಿ ಐತಿ ನನ ಕೂಸವ್ವ | ಬಿದಿಗೆ ಚಂದ್ರಂಗೈತಿ ನನ ಬಂಗಾರ ಹೂವಿನಂಗ ಐತಿ ಬಾಳ ಸುಂದರ ಹೂವಿನಂಗ ಐತಿ ಬಾಳ ಸುಂದರ ತಾಯೀ ಕಣ್ಣು ಮೂಗಿಲೆ ಬಾಳ ಚಲುವಿ ನನ ಕೂಸವ್ವ | ಹೆಂಗ ತೋರಿಸಲೊ ಶಿವನ ನನ್ನ ಕರುಳ ಕುಡಿಯ ಈ ಜಗಕ ನನ್ನ ಕರುಳ ಕುಡಿಯ ಈ ಜಗಕ ತಾಯೀ ಮನ ಹೆದರ್ತೈತಿ, ಜೀವಾ ನಡುಗ್ತೈತಿ...
ಹೆಣ್ಣು
ಹೆಣ್ಣಿಗನಿಸಿತು ತಾನಾಗಬಾರದೆಂದು ಮನುಕುಲದ ಹುಣ್ಣು ತಾನಾಗಬಯಸಿದಳು ದಾರಿತೋರುವ ಕಣ್ಣು ನಾಲ್ಕುಗೋಡೆಯಿಂದಾಚೆ ಬಂದಳು ಛಲದ ಟೊಂಕಕಟ್ಟಿ! ಕೆಲಸ ಕಲಿಯುವ ಆತುರದಲಿ ಗುರುತು-ಪರಿಚಯವಿಲ್ಲದವರ ಸಮ್ಮುಖದಿ ನಂಬಿಕೆಯನು ಬಲವಾಗಿ ನಂಬಿ ಮೋಸದ ಮುಖವಾಡ ತೊಟ್ಟವರ ಬಳಿಯಲಿ! ಹೆತ್ತ ಮನೆಗೆ ಆಸರೆಯಾಗಿ ಕೊಟ್ಟ ಮನೆಗೆ ದೀವಿಗೆಯಾಗಿ ಉರಿದು ಬೆಂದು ಬೆಳಕಾದಳು ಸಹನಾಮೂರ್ತಿಯ ರೂಪವಾಗಿ...
ಮಹಾದೇವನಿಗೊಂದು ಮನವಿ !
ತಂದೆ ಮಹಾದೇವನೇ, ನೀನೆಲ್ಲಿರುವೆ ನೀನಿರುವ ಊರು,ಗಲ್ಲಿ,ಬೀದಿ ವಿಳಾಸ ನನಗೆ ಗೊತ್ತಿಲ್ಲ, ಆದರೇ ಬಲ್ಲವರು ಹೇಳುವರು ಎಲ್ಲೆಲ್ಲೂ ನೀನೇ-ಕಲ್ಲಲ್ಲೂ ನೀನೇ ತನುವಲ್ಲಿ,ಮನದಲ್ಲಿ,ಮನೆಯಲ್ಲಿ,ಭೂವಿಯಲ್ಲಿ, ಬಾನಲ್ಲಿ, ಎಲ್ಲೆಲ್ಲೂ ನೀನೇ ! ಅದಕೆ ಕಳಿಸುತಿರುವೆ ಈ ಮನವಿ ದಯವಿಟ್ಟು ಕೇಳು ಕೊಟ್ಟು ನಿನ್ನ ಕಿವಿ ! ಈ ದಿನ ಉಪವಾಸ-ಜಾಗರಣೆಯ ಶಿವರಾತ್ರಿ ಉಪ-ವಾಸ ಅಂದರೇ...
ಇವನು
ಅದೆಷ್ಟು ಹುಡುಕಿದರೂ ಸಿಗುತ್ತಿಲ್ಲ ಕುರುಹು ಎಷ್ಟು ಆಳಕ್ಕಿಳಿದರೂ ಬರೀ ಗೊಜಲು ಗೊಜಲು ತಲೆ ಬುಡ ಏನೂ ತಿಳಿಯದು ಇಷ್ಟು ವರುಷಗಳು ಕಳೆದರೂ ಜೊತೆಯಲಿ, ಅರ್ಥವಾಗುತ್ತಿಲ್ಲ ಇವನು.1 ಒಮ್ಮೊಮ್ಮೆ ಅದೇನೋ ಹುಮ್ಮಸ್ಸು, ಅದೇನೋ ಉತ್ಸಾಹ, ಲವಲವಿಕೆ ಮತ್ತೊಮ್ಮೆ ಅದೇ ಆದ್ರತೆ, ಬೇಸರಿಕೆ, ಜಿಗುಪ್ಸೆ ಮೂಲೆಯಲಿ ಚಿಗುರೊಡೆದು ಮನದ ತುಂಬ ಹಬ್ಬುವ ಆಸೆಗಳು, ಏನೇನೋ ಕನಸುಗಳು, ವಾಸ್ತವದ...
ಬಿಸಿಯೂಟ
ಹಸಿದ ಕಂಗಳ ನೋಟ ಮುಗಿಸಿ ಬೆಳಗಿನ ಪಾಠ ಕಾದು ನಿಂತಿರೆ ತನ್ನ ಸರತಿಗೆಂದು ಬಿಸಿಯ ಅಗುಳಿನ ಊಟ ಖಾರ ಪಲ್ಲೆಯ ಕೂಡಿ ಪುಟ್ಟ ಕೈಬಟ್ಟಲ ತುಂಬಿತೆ ಬೆಂದು ? || ಸಮತೆ ವಸ್ತ್ರದ ಹಂಗು ಕಾಲ ಚಪ್ಪಲಿ ಗುಂಗು ಮರೆತು ನಿಂತಿರೆ ಸಾಲು ಹೊಟ್ಟೆಗಾಗಿ ತಿನ್ನೆ ವಿಷವಾಗಿಯೋ ಬಿದ್ದು ಬೆಂದರು ಸತ್ತು ಆಸೆ ಹಬೆಯಾಡಿದೆ ಬಿಸಿಯೂಟಕಾಗಿ || ಕಾದಿರುವ...
ನಾನು ಸತ್ತು ವರ್ಷಗಳಾಯಿತು
ನಂಬಿದರೆ ನಂಬಿ.. ನಂಬದಿದ್ದರೂ ಇದುವೇ ಸತ್ಯ.. ನಾನು ಸತ್ತು ವರ್ಷಗಳಾಯಿತು ನೀವು ಮಾತನಾಡುತ್ತಿರುವುದು ಆತ್ಮವಿಲ್ಲದೆ ಸುಮ್ಮನೆ ನಡೆಯುತ್ತಿರುವ ಬರೀ ದೇಹದ ಜತೆ..! ಅವರೇನೋ ಹೇಳುತ್ತಿದ್ದಾರೆ ನಾನಿಲ್ಲಿದ್ದೇನೆ, ಅವರ ಮಾತನ್ನು ಕೇಳುತ್ತಿದ್ದೇನೆ ಅನ್ನೋದು ಅವರೆಲ್ಲರ ಭ್ರಮೆ ಆದರೇ ನಾನು ಸತ್ತು ಆಗಲೇ ವರ್ಷಗಳಾಯಿತು..! ನಗುವಲ್ಲಿ ಜೀವ ಕಳೆಯೇ ಇಲ್ಲ ಎನ್ನುತ್ತಾರೆ...
ಜಾತ್ರೆ ಮತ್ತು ಅವಳು
ಊರ ಜಾತ್ರೆಲೂ ಗುರುತಿಸುವೆ, ನಿನ್ನ ಆ ಮುದ್ದು ಕಂಗಳನು. ನನ್ನ ನೋಡಿದ್ದರೂ ನೋಡದಂತೆ ಇರೋ; ನಿನ್ನ ಹುಸಿನೋಟವ ಬಲ್ಲೆನು. ನಿನ್ನ ನೋಡೋದ ನಾ ಬಿಡೆನು… ಆಟಿಕೆಯ ಅಂಗಡಿಯಲ್ಲೆಲ್ಲೂ ಸಿಗದ, ನವಿರಾದ ಬೊಂಬೆ ನೀನು. ನೂರಾರು ಹುಡುಗಿಯರು ಬಳಿಯೇ ಸುಳಿದು ಹೋದರೂ ಕಾಣೆ ನಾನು!!! ನಿನ್ನ ಸೀರೆ ಸೆರಗು ನನ್ನ ಕಣ್ಣ ಸವರಿ ನಿನ್ನನ್ನೇ ಅಲ್ಲಿ ಬಿಟ್ಟು ಹೋಯಿತೇ…...