ನಿಜ ಹೇಳಿ ನೀವೆಷ್ಟು ಕೊಟ್ಟಿದ್ರಿ ಅದನ್ನು ಪಡೆಯಲು? ನಿಮ್ಮ ಪರಿಶ್ರಮದಲ್ಲಿ ಇತ್ತಾ ರಾಜಕೀಯದ ಪಾಲು? ನನಗಿನ್ನೂ ತಿಳಿಯದು, ಬಂತೇಕೆ ನಿಮಗೆ ಕೆಟ್ಟ ಬುದ್ಧಿ ಕೈಬಿಟ್ಟು, ಲೇಖನಿಯಿಂದ ಸಮಾಜದ ಅಂಕು-ಡೊಂಕು ತಿದ್ದಿ.ll ಕೇವಲ ಈಗಷ್ಟೆ ನಡೆಯುತ್ತಿಲ್ಲ ಅಮಾನವೀಯ ಹತ್ಯೆಗಳು ನಿರ್ಧಾಕ್ಷಿಣ್ಯವಾಗಿ ಉರುಳಿವೆ ಅದೆಷ್ಟೋ ಮುಗ್ದ ತಲೆಗಳು...
ಕವಿತೆ
ಮತ್ತೆ ಕಾದಳು ಶಬರಿ…
ಪುಟ್ಟ ಗುಡಿಸಲ ಪರಿಧಿಯೊಳಗೆ ನಿತ್ಯ ಮೌನದ ಗಾನದೊಳಗೆ ತನ್ನ ಅರಿವಿನ ದಿಟ್ಟಿಯೊಳಗೆ ಮತ್ತೆ ಕಾದಳು ಶಬರಿ.. ಘಂಟೆ ತಮಟೆಯ ನಾದವಿರದೆ ಯಾವ ಧರ್ಮದ ಬೋಧವಿರದೆ ಗುಡಿಯ ಹೊಸಿಲ ದಾಟಿ ಬರದೆ ಮತ್ತೆ ಕಾದಳು ಶಬರಿ… ಎಲ್ಲ ಬೆಡಗಿನ ಸೋಗ ತೊರೆದು ಜಗದ ಸೊಗಡನು ಬರೆದಳು.. ಮನದಿ ಆರದ ಹಣತೆ ಬೆಳಗಿ ಮತ್ತೆ ಕಾದಳು ಶಬರಿ.. ರಾಮನೆನುವ ರೂಪ ನೆನೆದು ದಿನವು ಒಲವಲಿ ಹೆಜ್ಜೆ ಕಾದು...
ದೌರ್ಜನ್ಯ
ಸುತ್ತತುಂಬಿದೆ ಮುಗಿಲೆತ್ತರ ಧೂಳು ಇದ್ದ ಮರಗಿಡ ಹಸುರ ಸಸ್ಯ ಶ್ಯಾಮಲೆ ಕೆಂಬಣ್ಣಕ್ಕೆತಿರುಗಿದೆ ಉರುಳಿ ಬಿದ್ದು ಇದ್ದಾನೆ-ಇಲ್ಲೇ ನೀರುಣಿಸಿದವ ಮೈ ತಡವಿದವ ಹೊತ್ತುಕೈಯತಲೆಯ ಮೇಲೆ ಪ್ರೇಕ್ಷಕನಂತೆ,ಮೂಲೆಯಲ್ಲಿ ಬತ್ತಿದಕಣ್ಣೀರು ಭಾವನೆಗಳು ಸ್ಥಬ್ಧ ಕಬ್ಬಿಣದ ಕೈ ಜರಿಯುತ್ತಿದೆ ಮನೆ-ಮಠ ಗಿಡ-ಮರಗಳ ಹೊಡೆತ ತಾಳಲಾರದೆ ನಲುಗುತ್ತಿದೆ ಜೀವ-ನಿಜರ್ೀವ ...
ಹೆಲ್ಮೆಟ್
ಕತೆಯನೊಂದ ನಾ ಹೇಳುವೆ ಗೆಳೆಯರೆ ಕೇಳಿರಿ ನೀವು ಕಿವಿಗೊಟ್ಟು.. ಹತ್ತುವ ಮೊದಲು ದ್ವಿಚಕ್ರವಾಹನ ತಲೆಯ ಮೇಲಿರಲಿ ಹೆಲ್ಮೆಟ್ಟು ! ಕಿಟ್ಟನು ಹೊರಟನು ಬುಲೆಟ್ಟು ಬೈಕಲಿ ಒಂದು ದಿನ ನಡುರಾತ್ರಿಯಲಿ.. ಗೆಳೆಯರ ಸೇರುತ ಪಾರ್ಟಿಯ ಮಾಡಲು ಎಂಜಿ ರೋಡಿನ ಪಬ್ಬಿನಲಿ.. ಪಾರ್ಟಿಯು ಮುಗಿಯಿತು ಬಾಟಲು ಉರುಳಿತು ಮತ್ತಲಿ ತಲೆಯು ಗಿರ್ರನೆ ತಿರುಗಿತು.. ಹೊಗೆಯನು ಉಗುಳುತ ಕತ್ತಲ ಸೀಳುತ...
ಶವದ ಹಾದಿ
ಸುತ್ತ ಕಟ್ಟಿದ ಕಂಪೌಂಡಿನ ನಡುವೆ ನಮ್ಮದೊಂದಿಷ್ಟು ಅಂಗ್ಯೆಯಗಲದ ಸುಡುಗಾಡು ಹೆಸರಿಗಷ್ಟೇ ಮೊಕ್ಷಧಾಮ ನಮ್ಮಲ್ಲಿ ಕೇವಲ ಹೂಳುವುದು ಮಾತ್ರ ಗೋರಿ ಕಟ್ಟಲು ಅವಕಾಶವಿಲ್ಲ. ಯಾರೋ ಮಹನೀಯರು ಒಂದು ಪ್ರಸ್ತಾವನೆಯನ್ನು ತಂದರು ಹದಿನೆಂಟು ಅಡಿ ಜಾಗದಲ್ಲಿ ಅವರಿಗೊಂದು ಗೋರಿ ಬೇಕಂತೆ ಅವರ ಮನೆಯವರು ಸತ್ತರೆ ಗೊರಿಯ ಮೇಲೆ ಗೋರಿ ಕಟ್ಟಿಸಿಕೊಳ್ಳುತ್ತಾರಂತೆ. ಕೊನೆಗೆ...
ನನ್ನೊಳಗಿನ ನಾನು
ನನ್ನೊಳಗೊಬ್ಬ ಅವನಿದ್ದಾನೆ; ಮೊಟ್ಟಮೊದಲ ಕೀಳರಿಮೆಯಲ್ಲಿ ಹುಟ್ಟಿಬಂದವನು; ನಕ್ಕು ಎಲ್ಲರೊಡನೆ ಬೆರೆಯಬಲ್ಲವನು. ದುಃಖ ಕಂಡರೆ ಅವನ ಕಂಗಳಲಿ ಒರೆಸಲು ಹಲವು ಕೈಗಳಿವೆ. ನನ್ನಂತೆ ಒಂಟಿಯಲ್ಲ ಅವನು. ನನ್ನಂತೆ ಹೆತ್ತವರ ಪಾಲಿಗವನು ಹೆಗ್ಗಣವಲ್ಲ; ದುರ್ಗುಣಗಳಿಲ್ಲ ಅನ್ನುವುದೊಂದೇ ಅವನ ಸದ್ಗುಣವಲ್ಲ. ಭಾವನೆಗಳ ಬಚ್ಚಿಟ್ಟ ಸೆರೆಮನೆಯಲ್ಲ ಅವನ ಹೃದಯ. ಸ್ವಚ್ಛಂದ ಮಾತುಗಳ ನವಿರಾದ...
ಅರ್ಥ
ಬಿಗಿದ ಬಾಹುಗಳು ಸಡಿಲವಾಗುವ ಕ್ಷಣದಿ ಕದಲಿತ್ತು ಸಾಲಿನಲಿ ಬೆವರ ಹನಿಗಳ ಪರಿಧಿ.. ಬರೆದ ಪದಗಳಾ ಅಂತರದ ನಿಲುವಿಗೆ ಕಾರಣದ ಲೇಪವಿಹುದೇ ಲೇಖನಿಯ ತುದಿಗೆ.. ಇಂದ್ರಿಯದ ಹರೆಯಕ್ಕೆ ಹಂದರದ ಹಂಬಲ ಹಬ್ಬಿಕೊಂಡೀತು ಬಳ್ಳಿ,ಬಿಸಿಲಿನಾ ತಾಸಿನಲಿ.. ಬದಲಾಗೋ ಮಾಸಗಳು ಚೆಂದಗೊಳಿಸುವವು ಹಗಲ ತುಂಬಿಬಂದೀತು ಬಾನು,ಬೆಳಕ ನೆರಳಿನಲಿ.. ಅಂಕುಡೊಂಕಿನ ಪಥದ ಕೊನೆಗೆ ಚಾಚಿಕೊಂಡಿದೆಯೇನು...
ತೊರೆಯುವ ಮುನ್ನ.
ತೊರೆದು ಹೊರಟಿಹ ನಿನ್ನ ತಡೆದು ನಿಲ್ಲಿಸಲಾರೆ ಕಡೆಯ ಮಾತನಾದರೂ ನಡೆಸಿ ಹೋಗು. ನೀನಿರದ ಕನಸನು ಕಾಣುವ ಬಗೆಯನು ಸೋತಿರುವ ಹೃದಯಕೆ ಕಲಿಸಿಹೋಗು. ನಿನ್ನದೇ ನಿರೀಕ್ಷೆಯಲಿ ಪರಿತಪಿಸುತಿಹ ಮನಕೆ ಮರಳಿಬಾರೆಯೆಂಬ ನಿಜವ ತಿಳಿಸಿಹೋಗು. ನಾ ನಡೆವ ದಾರಿಯಲಿ ಹಿಂದೊಮ್ಮೆ ಜೊತೆಯಲ್ಲಿ ನೀನಿದ್ದ ನೆನಪನ್ನು ಅಳಿಸಿಹೋಗು. ಒಲಿದ ನಿನ್ನೆಯ ಒಲವ ಕಳಕೊಂಡ ಆ ಕ್ಷಣದ ಮರೆಯಲಾಗದ ನೋವ...
ಒಲವಿಗೊಂದು ಮನವಿ…
ಮಾತನಾಡು ನನ್ನ ಒಲವೇ ಈ ದಿನ, ನಿನ್ನ ಮಾತು ಕೇಳಲೆಂದೇ ಬಂದೆ ನಾ; ಇನ್ನೇತಕೆ ಬರಿಯ ಮೌನ…? ನಿನ್ನ ಮಾತಲ್ಲಿನ ಪದಗಳ ಪೋಣಿಸಿ… ಕವಿತೆಯ ಹೆಣೆಯುವ ಒಬ್ಬ ಕವಿಯು ನಾ. ನೀ ನನ್ನ ಕಣ್ಣಲ್ಲಿ ಒಂದು ಮುಗಿಯದ ಸವಿಗನಸು!!! ನಿನ್ನ ಕನಸಿನ ಲೋಕಕ್ಕೆ ನನ್ನನ್ನೂ ಪರಿಚಯಿಸು. ನೀನು ನಗುವ ಸಮಯದಲಿ, ಅರಳೊ ಕೆನ್ನೆ ಗುಳಿಯಲ್ಲಿ ಬಿದ್ದ ಒಬ್ಬ ಆಗಂತುಕ ನಾನು!!! ಕೈಯ...
ಹೇ ತಪಸ್ವಿನಿ
ಹಿರಿಯ ಪತ್ನಿಯು ಇದಿರೊಳಿರಲು ಹೃದಯ ತನ್ನರಸಿಯ ವಶಕಿರಲು ಮರಣ ಸಮಯದಿ ಉಸುರಿದ್ದು “ಹೇ ಮಹಾ ತಪಸ್ವಿನಿ ಸುಮಿತ್ರಾ” ಮೂವರು ಹೆಂಡಿರು ದಶರಥಗೆ ಗೌರವ ಪಟ್ಟದರಸಿ ಕೌಸಲ್ಯಾ ಅರಸನೊಲುಮೆಯ ಕೈಕೇಯಿ ಪ್ರೀತಿ ಗೌರವ ಸಿಗದ ಸುಮಿತ್ರಾ ರಾಮನ ಮಾತೃದೇವತೆ ಕೌಸಲ್ಯ ಕೈಕೇಯಿಗೆ ಪ್ರೀತಿಯ ಭರತ ಸೌಮಿತ್ರೆಯರೀರ್ವರಿದ್ದರೇನು ತಾಯಿಗೂ ಮಿಗಿಲು ಭ್ರಾತೃವಾತ್ಸಲ್ಯ ಅರಮನೆಯ ಸಕಲ...