ಪ್ರಕೃತಿಯಲ್ಲಿ ಪ್ರತಿ ಜೀವಿಯೂ ಸಮನಾಗಿ ಬಾಳಲು ಹಕ್ಕಿದೆ; ಕೇವಲ ಮಾನವನಿಗೇಕೆ ಉನ್ನತ ಸ್ಥಾನ?ಮಾನವ “ಬುದ್ಧಿಜೀವಿ” ಅಂತಲೇ ? ಪ್ರಾಣಿ ಪಕ್ಷಿ,ವನ್ಯ ಜೀವಿ ಸಂಕುಲಗಳು ಮಾನವನ ಸ್ವಾರ್ಥಕ್ಕೆ ಬಲಿಯಾದರೆ ದೊಡ್ಡ ನಷ್ಟವೇನು, ಅಲ್ಲವೇ? ಈ ಬುದ್ಧಿಜೀವಿ ಮಾನವನ ನಾಗರಿಕತೆಯ,ಅಭಿವೃದ್ಧಿಯ ವೇಗಕ್ಕೆ ಬಲಿಯಾಗುತ್ತಿರುವ,ಬಲಿಯಾದ, ಇನ್ನು ಹೆಚ್ಚು ಹೆಚ್ಚು...
ಅಂಕಣ
ಬದುಕಲ್ಲಿ ಸಿಕ್ಕಿದ ಅವಕಾಶಗಳಿಗೆ ಕೃತಜ್ಞರಾಗಿರಿ……
“ನಾವು ಯಾರೂ ಕೂಡ ಜೀವಂತವಾಗಿಯೇ ಈ ಬದುಕಿನಿಂದಾಚೆ ಹೋಗುವುದಿಲ್ಲ. ಹಾಗಾಗಿ ಧೈರ್ಯಶಾಲಿಗಳಾಗಿರಿ, ವಿನಯಶೀಲರಾಗಿರಿ, ಉತ್ತಮರಾಗಿರಿ ಹಾಗೂ ಬದುಕಲ್ಲಿ ಸಿಕ್ಕಿದ ಅವಕಾಶಗಳಿಗೆ ಕೃತಜ್ಞರಾಗಿರಿ” ಹೈಸ್ಕೂಲ್ ಹುಡುಗನೊಬ್ಬ ತನ್ನ ಶಾಲೆಯ ಪ್ರೈಜ್ ಗೀವಿಂಗ್ ಸಮಾರಂಭದಲ್ಲಿ ಭಾಷಣ ಮಾಡಿದ್ದ. ಈ ಭಾಷಣವನ್ನು ಬರೆದುಕೊಂಡಾಗ ಬಹುಶಃ ಈ ಮಾತುಗಳ ಆಳ ಅತನಿಗೂ ತಿಳಿದಿರಲಿಲ್ಲವೇನೋ?! ಆದರೆ...
ಎಂದೂ ಮರೆಯಲಾಗದ ನೆನಪುಗಳು
ಪ್ರತಿಯೊಬ್ಬರ ಜೀವನದಲ್ಲಿ ಮಾಧ್ಯಮಿಕ ಶಾಲಾ ಘಟ್ಟ ಅತ್ಯಂತ ಮಹತ್ವದ್ದು. ಹಂತ ಹಂತವಾಗಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗಿ ವ್ಯಕ್ತಿತ್ವ ರೂಪಗೊಳ್ಳುವ ಸಮಯವಿದು. ಹದಿಹರೆಯದ ಎಲ್ಲ ಹುಡುಗ ಹುಡುಗಿಯರಿಗೆ ಯೌವ್ವನದ ಹೊಸ್ತಿಲಲ್ಲಿ ನಿಂತ ಹೊಸ ಅನುಭವ, ವಯೋ ಸಹಜವಾದ ಹುಚ್ಚು ಮನಸ್ಸಿನ ನೋರೆಂಟು ಆಸೆಗಳು ಮತ್ತು ತಮ್ಮದೇ ಆದ ಕಲ್ಪನಾ ಲೋಕದಲ್ಲಿ ಎಲ್ಲೆ ಇಲ್ಲದೇ ವಿಹರಿಸುವ...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೫ _______________________________ ಹಳೆಯ ಭಕ್ತಿ ಶ್ರದ್ಧೆಯಳಿಸಿಹೋಗಿವೆ ಮಾಸಿ | ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ || ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ | ತಳಮಳಿಸುತಿದೆ ಲೋಕ – ಮಂಕುತಿಮ್ಮ || ಪರಂಪರೆಯೆನ್ನುವುದು ಪೀಳಿಗೆಯಿಂದ ಪೀಳಿಗೆಗೆ ಹರಿದು ಬರಬೇಕಾದ ಅಮೃತ ರಸ – ಹಾಗೆ ಬರುವಾಗ...
ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅಷ್ಟೇ…..!
ಸಿದ್ದರಾಮಯ್ಯ ಸರಕಾರಕ್ಕೆ ಮೂರು ವರ್ಷ ತುಂಬಿದೆ. ಸರ್ಕಾರದ ಸಾಧನೆಗಳು ಒಂದಾ ಎರಡಾ ,ಲೆಕ್ಕಮಾಡಲಾಗದಷ್ಟು . ನಾವು ಸಾಧಿಸಿದ್ದೇವೆ ಅಂತಾ ಸರ್ಕಾರವೇ ಜಂಬ ಕೊಚ್ಚಿಕೊಳ್ಳಬೇಕು ಹೊರತು,ಅದೇನು ಸಾಧನೇ ಮಾಡಿದೆಯೋ ಆ ದೇವರಿಗೂ ತಿಳಿದಿದೆಯೋ ಇಲ್ಲವೋ. ಅದೇನೆ ಇರಲಿ ಒಂದಷ್ಟು ನಮಗೆ ತಿಳಿಯದಂತಾ ಸಾಧನೆಗಳನ್ನು ಮಾಡಿರಬಹುದೇನೋ. ಆದರೆ ಅಭಿವೃದ್ಧಿ ಅನ್ನೋ ಪದದ ಅರ್ಥ ಮರೆತೇ...
ಒಂದು ಗೂಡಿನ ಕಥೆ
ಸುಮಾರು ಎರಡು ವರ್ಷಗಳ ಹಿಂದೆ ಅಡುಗೆ ಮನೆಯ ಬಾಲ್ಕನಿಯಲ್ಲಿ ರಟ್ಟಿನ ಪೆಟ್ಟಿಗೆಯನ್ನು“ಗೂಡು ಪೆಟ್ಟಿಗೆ” (nest box) ಯಾಗಿ ಜೋಡಿಸಿದ್ದೆವು. ವಿರಳವಾಗಿ ಕಾಣಿಸುವ ಗುಬ್ಬಚ್ಚಿಗಳನ್ನು ಗೂಡು ಕಟ್ಟಲು ಆಕರ್ಷಿಸುವ ಉದ್ದೇಶವಾಗಿತ್ತು. ಆದರೆ ಗುಬ್ಬಚ್ಚಿಯ ಬದಲಿಗೆ ಮುನಿಯಾ ಜಾತಿಗೆ ಸೇರಿದ “ಕಪ್ಪು ಗಂಟಲಿನ ಮುನಿಯಾ” ಸಂಸಾರ ಮಾಡಲು ಶುರು ಮಾಡಿದವು. ಒಮ್ಮೆ ವಂಶಾಭಿವೃದ್ಧಿ...
ವಿರಾಟ್ ಕೊಹ್ಲಿಯವರಿಗೆ ಭಾರತರತ್ನ ಕೊಡುವ ಮುನ್ನ
ಇತ್ತೀಚೆಗೆ ಒಂದು ಸುದ್ದಿ ಹರಿದಾಡುತ್ತಿದೆ. ಅದು ವಿರಾಟ್ ಕೊಹ್ಲಿಗೆ ಭಾರತರತ್ನ ಸಿಗಬೇಕು ಎಂಬ ಬೇಡಿಕೆ. ವಿರಾಟ ಕೊಹ್ಲಿ ಭಾರತದ ಮಾತ್ರವಲ್ಲ ಇಡೀ ವಿಶ್ವದ ಅತ್ತ್ಯುತ್ತಮ ಆಟಗಾರ ಅನ್ನುವುದರಲ್ಲಿ ನನ್ನ ಯಾವುದೇ ಆಕ್ಷೇಪಣೆ ಇಲ್ಲ. ಕೊಹ್ಲಿ ಕ್ರೀಡಾ ಜಗತ್ತಿಗೆ ಬಂದ ಕೆಲವೇ ದಿನಗಳಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ಅವರೊಂದಿಗೆ ಹೋಲಿಸುವ ಮಟ್ಟಿಗೆ...
ಸಾವಿರ ಎಕರೆ ಕಾಡು ಬೆಳೆಸಿದ ‘ಅರಣ್ಯ ಕರ್ತೃ’ವಿಗೆ ಅನಂತ ಪ್ರಣಾಮಗಳು
ಕೈಲೊಂದು ಫೋನು, ಜೇಬಿನ ತುಂಬಾ ದುಡ್ಡು ವಾರಕ್ಕೆರಡು ರಜಾ ಇವಿಷ್ಟೇ ನಮ್ಮ ಬದುಕು. ವಾರದ ತುದಿಯಲ್ಲಿ ಅವನ್ಯಾರೋ ಸರ್ಕಾರಿ ಜಮೀನನ್ನೇ ನುಂಗಿ ನೀರ್ಕುಡಿದವ ಕಟ್ಟಿದ ದೊಡ್ಡ ಮಾಲ್’ನಲ್ಲಿ ಒಂದರ ಹಿಂದೆ ಒಂದರಂತೆ ಸಿನಿಮಾ ನೋಡಿ ಮನೆಗೆ ವಾಪಸ್ಸಾದರೆ ಬದುಕು ಸಾರ್ಥಕ ಅನ್ನಿಸಿ ಬಿಡುತ್ತದೆ ನಮಗೆಲ್ಲ. ನಗಲು ಒಂದು ವೀಕೆಂಡ್ ಬೇಕು,ಊರಲ್ಲಿ ಗದ್ದೆ ಕೆಲಸದಲ್ಲಿ ಸಿಕ್ಕಾಪಟ್ಟೆ...
ಗಿಲ್ಲಗಿಲ್ಲಗಿಲ್ಲ.ಗಿಲ್ಲೀ…..
“ಏಯ್ ಹೋಗೊ ನಾ ಗಿಲ್ಲಿ ಹೊಡದ್ದಿ. ಅದೂ ಮೂರ್ ಸರ್ತಿ. ನೀ ನೋಡಿದ್ದಿಲ್ಲೆ. ಅದಕೆ ಯಾ ಎಂತ ಮಾಡ್ಲಿ. ಯಂಗೊತ್ತಿಲ್ಲೆ. ಯಂಗೆ ಪಾಯಿಂಟ ಕೊಡದೇಯಾ. ಅಲ್ಲ್ದನ ರಾಮು. ನೀ ಯನ್ನ ಪಾಟಿ೯ ಹೌದ ಅಲ್ಲ್ದ. ಹೇಳು ಮತೆ. ಏ…. ಹೋಗೆ ಯಾ ಎಂತ ಹೇಳ್ತ್ನಿಲ್ಲೆ. ಆ ದಿನ ಯಂಗೆ ಒಂದು ಪೇರಲೆ ಹಣ್ಣು ಕೊಡು ಅಂದರೆ ಕೊಟ್ಯನೆ ನೀನು. ಯನ್ನ ಎದುರಿಗೆ ಚಪ್ಪರಿಸಿಕಂಡ...
ಸಜ್ಜನರ ‘ಸಂಘ’ವಿದು ಹೆಜ್ಜೇನ ಸವಿದಂತೆ…
ಅದು 2004ರ ನವೆಂಬರ್ ಹದಿನಾಲ್ಕು. ಮಕ್ಕಳ ದಿನಾಚರಣೆಯ ರಜಾ ಅಲ್ವಾ? ಅವಾಗೆಲ್ಲ ರಜೆ ಅಂದ್ರೆ ಈಗಿನ ಮಕ್ಕಳಂತೆ ಕಂಪ್ಯೂಟರ್ ಮುಂದೆ ಕುಳಿತು ರೇಸು ನೋಡಿಕೊಂಡು, ಪೋಗೋ ನೋಡುತ್ತಾ ಕಿಲ ಕಿಲ ನಗಾಡಿಕೊಂಡು ಕಾಲ ಕಳೆಯುತ್ತಿದ್ದ ಮಕ್ಕಳು ನಾವಾಗಿರಲಿಲ್ಲ. ನಮ್ಮದೇನಿದ್ದರೂ ಕ್ರಿಕೆಟ್ ಆಟ. ರಜೆ ಸಿಕ್ಕರೆ ಸಾಕು,ಅದೆಷ್ಟೇ ಮಳೆಯಿರಲಿ, ಬೆವರು ಬಿಚ್ಚಿಸುವ ಬಿಸಿಲಿರಲಿ, ಇಡೀ ದಿನ...