ನಾವ್ ಅನ್ಕೋಂಡ ಹಂಗೆ ಎಲ್ಲಾ ಅಗೊದಾಗಿದ್ರೇ, ಯಾರ್ ಜೀವನದಲ್ಲಿಯೂ ಯಾವ್ದೇ ಕಷ್ಟ-ಕಾರ್ಪಣ್ಯಗಳೇ ಇರ್ತಿರ್ಲಿಲ್ಲ, ಆ ದ್ಯಾವ್ರು ನಾವ್ಗಳು ಬೆಡ್ಕೊಂಡಿದ್ದೆಲ್ಲವನ್ನು ಕೊಟ್ಕೊಂಡೇ ಹೋಗಿದ್ರೆ, ಅವನ್ ಯಾರೂ ಇಷ್ಟೋಂದು ನೆನಿಸ್ತಾ ಇರ್ಲಿಲ್ಲ, ಹೌದದು ಜೀವನ ಅಂದ್ರೆ ಹಂಗೆ ಕಂಡ್ರಿ, ಬಡ್ಡಿ ಮಗಂದು ನಾವ್ ಅನ್ಕೋಂಡಿದ್ದೆಲ್ಲ ಆಗೋಕೆ ಇಲ್ಲಾ ಅಂತಿನಿ. ಸತ್ಯ ಹರಿಶ್ಚಂದ್ರ...
ಅಂಕಣ
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೯ ___________________________________ ಗಾಳಿ ಮಣ್ಣುಂಡೆಯೊಳಹೊಕ್ಕು ಹೊರಳಲದು | ಆಳೆನಿಪುದಂತಾಗದಿರೆ ಬರಿಯ ಹೆಂಟೆ || ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆ | ಕ್ಷ್ವೇಳವೇನಮೃತವೇಂ ? ಮಂಕುತಿಮ್ಮ || ಈ ಪದ್ಯವನ್ನು ಓದಿದಾಗೆಲ್ಲ ಮತ್ತೆ ಮತ್ತೆ ಗಹನದಿಂದ ಲೌಕಿಕ ಸಂವಹನದೆಡೆಗಿನ ಛಾಯೆ ಎದ್ದು ನಿಲ್ಲುತ್ತದೆ...
ಲಿಟ್ಲ್ ಬಾಯ್ ಹಾಗೂ ಫ್ಯಾಟ್’ಮ್ಯಾನ್ ಎಂಬ ಇಬ್ಬರು ದೈತ್ಯರು
ಇತಿಹಾಸದ ಪುಟಗಳಲ್ಲಿ ಕೆಂಪು ಅಕ್ಷರಗಳಲ್ಲಿ ಅಚ್ಚಾಗಿರುವ ಆ ಎರಡು ದಿನಗಳನ್ನು ಯಾರು ತಾನೆ ಮರೆಯಲು ಸಾಧ್ಯ ಹೇಳಿ. ಜಗತ್ತಿಗೆ ಜಗತ್ತೇ ನಿಬ್ಬೆರಗಾಗಿ ಕಣ್ಣು ಬಾಯಿ ಬಿಟ್ಟುಕೊಂಡು ಭಯಭೀತರಾಗಿ ಅಯ್ಯೋ ಇದೆಂತಾ ಅವಗಡ ಸಂಭವಿಸಿತು ಎಂದು ಬಿಸಿಯುಸಿರು ಬಿಟ್ಟ ಕ್ಷಣಗಳವು. ಅದೆಷ್ಟೋ ಮುಗ್ಧ ಜೀವಿಗಳು ಪ್ರಾಣ ಕಳೆದುಕೊಂಡವು. ದೊಡ್ಡವರ ಹೋರಾಟಕ್ಕೆ ಏನೂ ತಿಳಿಯದೆ ಬಲಿಯಾದ...
ಬಾಲ್ಯದ ಮಳೆಗಾಲ…
ಏಪ್ರಿಲ್ ಮತ್ತು ಮೇ ತಿಂಗಳ ಬೇಸಿಗೆ ರಜೆಯ ನಂತರ ಜೂನ್ ತಿಂಗಳು ಬಂತಂದರೆ ಶಾಲೆ ಪುನರಾರಂಭದ ಸಂಭ್ರಮ. ಜೂನ್ ಒಂದಕ್ಕೆ ಶಾಲೆ ಶುರುವಾದರೆ ಜೂನ್ ೬ ರಿಂದ ಮಳೆಗಾಲ ಶುರುವಾಗುವ ವಾಡಿಕೆ. ಒಮೊಮ್ಮೆ ಸ್ವಲ್ಪ ಆಚೀಚೆ ಆದರೂ ಜೂನ್ ಮೊದಲ ವಾರಕ್ಕೆ ಮಳೆರಾಯನ ಆಗಮನವಂತೂ ಖಚಿತ. ಹೊಸ ವರ್ಷದ ಹೊಸ ತರಗತಿಗೆ ಹೋಗುವ ಉತ್ಸಾಹ ಒಂದೆಡೆಯಾದರೆ ಮಳೆಯ ಕಿರಿಕಿರಿಯು ಉತ್ಸಾಹಕ್ಕೆ ಅಕ್ಷರಸಃ...
ವಯಸ್ಸು ಅರವತ್ತರ ಹತ್ತಿರ, ಹತ್ತುತ್ತಲೇ ಇರುತ್ತಾರೆ ಶಿಖರ
“ನಾನು ಹೋಗೋ ಎಲ್ಲ ಚಾರಣಗಳಲ್ಲೂ, ನನ್ನೊಂದಿಗಿನ ಉಳಿದ ಚಾರಣಿಗರ ಸರಾಸರಿ ವಯಸ್ಸು ನನ್ನ ವಯಸ್ಸಿನ ಅರ್ಧಕ್ಕಿಂತ ಕಡಿಮೆ!” – ಹೆಮ್ಮೆಯಿಂದ ಹೀಗಂತಾರೆ ಮುಂಬೈಯ ಶ್ರೀಯುತ ದೀಪಕ್ ಪೈ ಅವರು. ಮಣಿಪಾಲದಲ್ಲಿ ಇಂಜಿನಿಯರಿಂಗ್ ಕಲಿತು ಮುಂಬೈಯಲ್ಲಿ ಜೀವನ ಸಾಗಿಸುತ್ತಿರುವ ಪೈ-ಮಾಮು ಅವರ ವಯಸ್ಸು 56. ಕಳೆದ ಏಳೆಂಟು ವರ್ಷಗಳಲ್ಲಿ ಅದಾಗಲೇ 5ಕ್ಕಿಂತ ಹೆಚ್ಚು ಬಾರಿ...
ಪ್ರಶ್ನೆಗಳು ಕಾಡ್ತವೆ..
ಈಗ್ಗೆ ಸರಿ ಸುಮಾರು 20 – 25 ವರ್ಷಗಳ ಹಿಂದೆ ಶಾಲಾ ದಿನಗಳಲ್ಲಿ ಟೆಲಿವಿಷನ್ ಕಾರ್ಯಕ್ರಮ ಎಂದರೆ ಕೇವಲ ದೂರದರ್ಶನ ವಾಹಿನಿ ಮಾತ್ರ, ಅದ್ರಲ್ಲೂ ಸಂಜೆ ಸೀಮಿತ ಅವಧಿಗೆ ಮಾತ್ರ ಪ್ರಾದೇಶಿಕ ಪ್ರಸಾರಕ್ಕೆ ಅವಕಾಶ. ಭಾನುವಾರದ ಸಂಜೆ ಬರುತ್ತಿದ್ದ ಕನ್ನಡ ಸಿನೆಮಾ ವಾರದ ಬೃಹತ್ ಮನರಂಜನೆಯ ಕಾರ್ಯಕ್ರಮ, ಚಲನ ಚಿತ್ರ ಪ್ರಸಾರಕ್ಕೆ ಮುನ್ನ ಬರುತ್ತಿದ್ದ ಸಾಮಾಜಿಕ ಕಳಕಳಿಯ...
ಡೈನಾಸರ್’ಗೂ ಕ್ಯಾನ್ಸರ್ ಆಗಿತ್ತಂತೆ..
‘ಡೈನಾಸರ್’ಗೂ ಕ್ಯಾನ್ಸರ್ ಆಗಿತ್ತಂತೆ..’ ಅನ್ನೋ ವಾಕ್ಯ ಕೇಳಿದಾಗ ನಿಜಕ್ಕೂ ಆಶ್ಚರ್ಯ ಆಗಿತ್ತು. ಅಂದರೆ ಕ್ಯಾನ್ಸರ್ ಅನ್ನೋದು ಬಹಳ ಹಿಂದೆಯೇ ಇದ್ದಿದ್ದು ಅಂತಾಯಿತು. ಡೈನಾಸರ್ ಅಂತಹ ಡೈನಾಸರ್’ನ್ನೇ ಕ್ಯಾನ್ಸರ್ ನಡುಗಿಸುವಾಗ ನಮ್ಮಂತವರೆಲ್ಲ ಯಾವ ಲೆಕ್ಕ ಎಂದು ಅನಿಸಿದ್ದಂತೂ ನಿಜ. ಹಾಗಂತ ಅದರಲ್ಲಿ ವಿಶೇಷ ಏನೂ ಇಲ್ಲ. ಡೈನಾಸರ್ ಕೂಡ ಜೀವಕೋಶಗಳಿಂದಲೇ ತಾನೇ...
ಪ್ರತಾಪ್ ಸಿಂಹರಿಗೆ ಬಹಿರಂಗ ಪತ್ರ
ಮಾನ್ಯ ಪ್ರತಾಪ್ ಸಿಂಹರೇ, ಒಬ್ಬ ಸಾಮಾನ್ಯ ಪ್ರಜೆಯಾಗಿ ನನ್ನ ಕೆಲವು ಪ್ರಶ್ನೆಗಳು. ನಾನು ಕಾಂಗ್ರೆಸ್ ಏಜೆಂಟ್ ಅಲ್ಲ, ಅಥವಾ ಅವರನ್ನು ನಂಬುವ ಮೂರ್ಖ ಅಲ್ಲ. ನಿಮ್ಮ ಲೇಖನಕ್ಕಾಗಿ ಪ್ರತಿ ಶನಿವಾರ ಕಾಯುವ ಅಭಿಮಾನಿಗಳಲ್ಲಿ ನಾನು ಒಬ್ಬ. ನಿಮ್ಮ ಕೆಲವು ಲೇಖನಗಳೇ ನನಗೆ ರೋಮಾಂಚನ ಉಂಟು ಮಾಡಿವೆ. ಆದರೆ ಈ ಬಾರಿ ನಿಮ್ಮ ಲೇಖನ ಒಬ್ಬ ಬಿಜೆಪಿ ಭಟ್ಟಂಗಿಯ ಪರಮಾವಧಿಯಾ ಪರಾಕಾಷ್ಟೆ...
ಅಪ್ಪನ ಪ್ರೀತಿಯ ಆಳ ಅನಾವರಣಗೊಳ್ಳುವುದು ಅಂತಹ ಸಂದರ್ಭಗಳಲ್ಲಿ ಮಾತ್ರ
ಅರುವತ್ತು ಮೀರಿದ ಆ ತಂದೆಗೆ ಮರೆವಿನ ಆಲ್ಜೈಮರ್ ಖಾಯಿಲೆಯಿರುತ್ತದೆ. ತಾಯಿ ಅದಾಗಲೇ ಶಿವನ ಪಾದ ಸೇರಿದ್ದಾಳೆ. ಮತ್ತಿರುವುದೊಬ್ಬನೇ ಮಗ. ಆತ ತನ್ನ ಕೆಲಸ, ಪ್ರಾಜೆಕ್ಟು, ಪ್ರಮೋಶನ್’ಗಳಲ್ಲಿ ಬ್ಯುಸಿ. ಜೀವನವೆಂದರೆ ಹಣ ಮಾಡುವುದಷ್ಟೇ ಎಂದು ತಿಳಿದಿದ್ದ ಆತ ತಂದೆಯನ್ನು ಎನ್.ಜಿ.ಒ ಒಂದರಲ್ಲಿ ಸೇರಿಸಿ ಹೋಗಿರುತ್ತಾನೆ. ತಂದೆಯ ಪ್ರೀತಿ, ಅವರಿಗಿರುವ ಖಾಯಿಲೆ, ಅದರ ಚಿಕಿತ್ಸೆ...
ಅಭಿಮಾನ ಶೂನ್ಯತೆ,ಅಂಧಾಭಿಮಾನದ ಮಧ್ಯದ ಸಮಸ್ಯೆಯ ತಾಯಿಬೇರು
ಕಬಾಲಿ ಎಂಬ ಚಿತ್ರ ತೆರೆಗೆ ಅಪ್ಪಳಿಸಿತು. ಒಂದು ವಾರದಲ್ಲಿ ಅದರ ಅಸಲಿಯತ್ತನ್ನು ತೋರಿಸಿ ಹೋಯಿತು. ಏತನ್ಮಧ್ಯೆ ರಜನೀಕಾಂತ್ ಅವರ ಅಭಿಮಾನಿಗಳ ಪರಾಕುಗಳು, ತಮಿಳಿಗರ ಸಿನಿಮಾ ಮತ್ತು ಭಾಷೆಯ ಮೇಲಿನ ಅಭಿಮಾನ, ಹಬ್ಬಗಳಿಗೂ ರಜೆ ಕೊಡದ ಸಾಫ್ಟವೇರ್ ಕಂಪನಿಗಳು ದಿಢೀರ್ ಎಂದು ರಜೆ ಘೋಷಿಸಿದ್ದು, ಕನ್ನಡಿಗರ ಆಕ್ರೋಶ,ಪ್ರತಿಭಟನೆ, ಕನ್ನಡದ ಸಿನಿಮಾಗಳಿಗೆ ಜಾಗವಿಲ್ಲ ಎಂಬ...